ಮಕ್ಕಳು
- Legal Explainers (68)
- Resources (7)
ದತ್ತು ಸ್ವೀಕಾರ ಎಂದರೇನು?
ಭಾವೀ ದತ್ತು ತಂದೆ-ತಾಯಂದಿರು ಕಾನೂನುಬದ್ಧವಾಗಿ ಒಂದು ಮಗುವಿನ ಜವಾಬ್ದಾರಿ, ಆ ಮಗುವಿನ ಹಕ್ಕುಗಳು, ಸವಲತ್ತುಗಳು, ಮತ್ತು ಜವಾಬ್ದಾರಿಗಳ ಸಹಿತ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ದತ್ತು ಸ್ವೀಕಾರ ಎನ್ನುತ್ತಾರೆ
೧೪ರಿಂದ ೧೮ ವರ್ಷಗಳೊಳಗಿನ ಕಿಶೋರರನ್ನು ಕೆಲಸಕ್ಕಿಟ್ಟುಕೊಳ್ಳುವುದು
ದುಡ್ಡಿಗೋಸ್ಕರ ರಸ್ತೆ ಬದಿಗಳಲ್ಲಿ ಮಕ್ಕಳು ಪ್ರದರ್ಶನ ನೀಡುವುದು ಬಾಲ ಕಾರ್ಮಿಕ ಪದ್ಧತಿ ಎಂದು ಪರಿಗಣಿಸಲಾಗುತ್ತದೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣ
ಈ ವಿವರಣೆಯು ಶಿಕ್ಷಣದ ಹಕ್ಕನ್ನು ಚರ್ಚಿಸುತ್ತದೆ, ಇದು ಆರ್ಟಿಕಲ್ 21A, ಭಾರತದ ಸಂವಿಧಾನ, 1950 ರ ಅಡಿಯಲ್ಲಿ ಖಾತ್ರಿಪಡಿಸಲಾದ ಮೂಲಭೂತ ಹಕ್ಕು. ಈ ವಿವರಣೆ ಪ್ರಾಥಮಿಕವಾಗಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ, 2009 ರಲ್ಲಿ ರೂಪಿಸಲಾದ ಕಾನೂನಿನ ಬಗ್ಗೆ ಚರ್ಚಿಸುತ್ತದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಧಗಳು
ಭಾರತೀಯ ಕಾನೂನು ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯದ ವಿಧಗಳನ್ನು ಮಗುವಿನ ಲಿಂಗವನ್ನು ಲೆಕ್ಕಿಸದೆ ವಿವಿಧ ರೀತಿಯ ಅಪರಾಧಗಳಾಗಿ ವರ್ಗೀಕರಿಸುತ್ತದೆ. ಕೆಲವು ಶಿಕ್ಷಾರ್ಹ ಅಪರಾಧಗಳನ್ನು ಕೆಳಗೆ ನೀಡಲಾಗಿದೆ:
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಧಗಳು
ಭಾರತೀಯ ಕಾನೂನು ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯದ ವಿಧಗಳನ್ನು ಮಗುವಿನ ಲಿಂಗವನ್ನು ಲೆಕ್ಕಿಸದೆ ವಿವಿಧ ರೀತಿಯ ಅಪರಾಧಗಳಾಗಿ ವರ್ಗೀಕರಿಸುತ್ತದೆ.
೧೪ರ ಒಳಗಿನ ಮಕ್ಕಳನ್ನು ಕೆಲಸಕ್ಕಿಟ್ಟುಕೊಳ್ಳುವುದು
೧೪ರ ಕೆಳಗಿನ ಮಕ್ಕಳನ್ನು ಯಾವುದೇ ರೀತಿಯ ಉದ್ಯೋಗದಲ್ಲಿ ಕೆಲಸಕ್ಕಿಟ್ಟುಕೊಳ್ಳುವುದು, ಅಥವಾ ಅವರಿಗೆ ಕೆಲಸ ಮಾಡಲು ಅನುಮತಿ ಕೊಡುವುದು ಕಾನೂನು ಬಾಹಿರವಾಗಿದೆ. ಉದ್ಯೋಗದಾತರು, ತಂದೆ-ತಾಯಿಯರು, ಅಥವಾ ಮಗುವಿನ ಪೋಷಕರು ಮಗುವನ್ನು ಯಾವುದೇ ರೀತಿಯ ಉದ್ಯೋಗದಲ್ಲಿ ತೊಡಗುವ ಅನುಮತಿ ನೀಡಿದಲ್ಲಿ ಅವರಿಗೆ ದಂಡ ವಿಧಿಸಲಾಗುತ್ತದೆ.
ಬಾಲ್ಯ ವಿವಾಹದ ನಿಷೇಧ
ಬಾಲ್ಯ ವಿವಾಹಗಳು ಭಾರತದಲ್ಲಿ ಸಾವಿರಾರು ವರ್ಷಗಳಿಂದ ನಡೆಯುತ್ತಾ ಬಂದಿವೆ. ಈ ಸಾಮಾಜಿಕ ಸಮಸ್ಯೆಯನ್ನು ಪರಿಹರಿಸಲು ನಮ್ಮ ಕಾನೂನು ಬಾಲ್ಯ ವಿವಾಹ ನೆರವೇರಿಸುವುದನ್ನು
ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ
6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳು 1ನೇ ತರಗತಿಯಿಂದ 8ನೇ ತರಗತಿವರೆಗೆ ಉಚಿತವಾಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಬಹುದು. ನೆರೆಹೊರೆ ಶಾಲೆಗಳನ್ನು ಸಮೀಪಿಸಿ ಮಕ್ಕಳು ನೆರೆಹೊರೆ ಶಾಲೆಗಳಲ್ಲಿ ತರಗತಿಗಳಿಗೆ ಹಾಜರಾಗಬಹುದು. ಈ ನೆರೆಹೊರೆ ಶಾಲೆಗಳು ಕೆಳಕಂಡ ನಡೆಯಬಹುದಾದ ದೂರದಲ್ಲಿ ಸ್ಥಾಪಿಸಿರಬೇಕು: ಮಗುವಿನ ನೆರೆಹೊರೆಯಿಂದ ಒಂದು ಕಿಲೋಮೀಟರ್ (ಮಗು I ರಿಂದ V ನೇ ತರಗತಿಯಲ್ಲಿದ್ದರೆ) ಮತ್ತು ಮಗುವಿನ ನೆರೆಹೊರೆಯಿಂದ ಮೂರು ಕಿಲೋಮೀಟರ್ (ಮಗು VI ರಿಂದ VIII ನೇ ತರಗತಿಯಲ್ಲಿದ್ದರೆ). ಆದಾಗ್ಯೂ, ಕಾನೂನು ಮಕ್ಕಳ ಶಿಕ್ಷಣವನ್ನು ನೆರೆಹೊರೆ […]
ಮಗುವು ಯಾರೊಂದಿಗಾದರೂ ಲೈಂಗಿಕ ಸಂಬಂಧ ಹೊಂದಲು ಸಮ್ಮತಿ ನೀಡಬಹುದೇ?
ಇಲ್ಲ. ಲೈಂಗಿಕ ಸಂಬಂಧ ಹೊಂದಲು ಸಮ್ಮತಿ ನೀಡುವ ಮಗುವಿನ ಸಾಮರ್ಥ್ಯವನ್ನು ಕಾನೂನು ಗುರುತಿಸುವುದಿಲ್ಲ.
ಮಗುವಿನ ವಯಸ್ಸು ನಿರ್ಧರಿಸುವುದು
ನೀವು ಉದ್ಯೋಗದಾತರಾಗಿದ್ದು, ಮಗುವಿನ ವಯಸ್ಸು ೧೪ರ ಮೇಲಿದೆಯೋ ಅಥವಾ ಕೆಳಗಿದೆಯೋ ಎಂಬುದು ನಿಮಗೆ ಖಾತರಿ ಇಲ್ಲದಿದ್ದರೆ, ಕೆಳಗಿನ ೩ ದಾಖಲೆಗಳ ಆಧಾರದ ಮೇಲೆ ವೈದ್ಯಕೀಯ ಅಧಿಕಾರಿಗಳು ಮಗುವಿನ ವಯಸ್ಸನ್ನು ನಿಗದಿ ಪಡಿಸುತ್ತಾರೆ:
ಶಾಲೆಗಳ ವಿವಿಧ ವರ್ಗಗಳು
ಈ ಕೆಳಕಂಡ ಶಾಲೆಗಳು ಮಕ್ಕಳ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣಕ್ಕಾಗಿ ನಿಬಂಧನೆಗಳನ್ನು ಮಾಡುವ ಜವಾಬ್ದಾರಿಯನ್ನು ಹೊಂದಿವೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಂದರೇನು?
ಲೈಂಗಿಕ ಉದ್ದೇಶದಿಂದ ಒಂದು ಮಗುವನ್ನು ಸ್ಪರ್ಶಿಸಿದರೆ. ಇದು ಮಗುವಿನ ಯೋನಿ, ಶಿಶ್ನ, ಗುದದ್ವಾರ, ಸ್ತನ ಇತ್ಯಾದಿಗಳನ್ನು ಮುಟ್ಟುವುದನ್ನು ಒಳಗೊಂಡಿರುತ್ತದೆ. ಮಗುವನ್ನು ಅವರ ಸ್ವಂತ ಅಥವಾ ಬೇರೆಯವರ ಯೋನಿ, ಶಿಶ್ನ, ಗುದದ್ವಾರ, ಸ್ತನ ಇತ್ಯಾದಿಗಳನ್ನು ಸ್ಪರ್ಶಿಸಲು ಒತ್ತಾಯಿಸಿದರೆ.
ಮಗುವನ್ನು ಯಾರು ದತ್ತು ನೀಡಬಹುದು?
ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನ ಪ್ರಕಾರ, ನಿಮ್ಮ ಮಗುವನ್ನು ನೀವು ದತ್ತು ನೀಡುವಂತಿಲ್ಲ, ಆದರೆ ಆ ಮಗುವಿನ ತಂದೆ/ತಾಯಿ/ಪೋಷಕರ ಅಧಿಕಾರದಲ್ಲಿ ಮಗುವನ್ನು ಬಿಟ್ಟುಕೊಡಬಹುದಾಗಿದೆ.
ಬಾಲ ಕಲಾವಿದರ ಪ್ರತಿ ಉದ್ಯೋಗದಾತರ ಕರ್ತವ್ಯಗಳು
ನೀವು ಬಾಲ ಕಲಾವಿದರಿಗೆ ಉದ್ಯೋಗ ನೀಡಿದ್ದಲ್ಲಿ, ಬಾಲ ಕಾರ್ಮಿಕ ಪದ್ಧತಿ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, ೧೯೮೬ರ ಅಡಿಯಲ್ಲಿನ ಫಾರಂ ಸೀ ಅನ್ನು ತುಂಬಿ ಅಧಿಕಾರಿಗಳಿಗೆ ನೀಡುವ ಕರ್ತವ್ಯ ನಿಮ್ಮದಾಗಿದೆ.
ಪೋಷಕರ ಜವಾಬ್ದಾರಿ
ಬಹಳಷ್ಟು ಅಪರಾಧಗಳಲ್ಲಿ, ಆರೋಪಿಗಳ ಅಪರಾಧವನ್ನು ಸಾಬೀತುಪಡಿಸುವ ಜವಾಬ್ದಾರಿ ಸರ್ಕಾರಿ ಅಭಿಯೋಜಕರದ್ದಾಗಿರುತ್ತದೆ.
ಶಾಲೆಗಳಿಗೆ ಪ್ರವೇಶ ನಿರಾಕರಣೆ
ಯಾವುದೇ ಶೈಕ್ಷಣಿಕ ವರ್ಷದಲ್ಲಿ ಪ್ರವೇಶವನ್ನು ಕೋರಿದ ಸಮಯ ಏನೇ ಆದರೂ, ಯಾವುದೇ ಮಗುವಿಗೆ ಶಾಲೆಗೆ ಪ್ರವೇಶವನ್ನು ನಿರಾಕರಿಸಲಾಗುವುದಿಲ್ಲ.
ಅಶಾರೀರಿಕ ಲೈಂಗಿಕ ನಡವಳಿಕೆ ಅಥವಾ ಲೈಂಗಿಕ ಕಿರುಕುಳ ಎಂದರೇನು?
ಲೈಂಗಿಕ ಕಿರುಕುಳ ಎಂದರೆ ಮಗುವಿಗೆ ಇಷ್ಟವಿಲ್ಲದ ಅಶಾರೀರಿಕ ಲೈಂಗಿಕ ನಡವಳಿಕೆ, ಉದಾಹರಣೆಗೆ:
ಕಾನೂನುಬದ್ಧವಾಗಿ ದತ್ತು ಸ್ವೀಕಾರಕ್ಕೆ ಕೊಡಲು ಯೋಗ್ಯವಾದ ಮಕ್ಕಳು
ಧಾರ್ಮಿಕೇತರ ಕಾನೂನಿನಡಿ ಮಕ್ಕಳನ್ನು ದತ್ತು ಕೊಡಲು ಯೋಗ್ಯವೆಂದು ಘೋಷಿಸಿದಮೇಲೆ ಅವರ ಜೈವಿಕ ತಂದೆ-ತಾಯಿಯರ ಜೊತೆಗಿನ ಕಾನೂನಾತ್ಮಕ ಸಂಬಂಧ ಅಂತ್ಯಗೊಳ್ಳುತ್ತದೆ.
ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ಶಾಲೆಗಳ ಪಾತ್ರ
ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ಶಾಲೆಗಳದ್ದು ಮಹತ್ತರ ಪಾತ್ರವಿದೆ. ಮಕ್ಕಳ ಶಿಕ್ಷಣದ ಹಕ್ಕು ಅವರು ಬಾಲ ಕಲಾವಿದರಾಗಿ, ಅಥವಾ ಕೌಟುಂಬಿಕ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಅವರಿಗೆ ಅನ್ವಯಿಸುತ್ತದೆ.
ಬಾಲ್ಯ ವಿವಾಹವನ್ನು ರದ್ದುಗೊಳಿಸುವುದು
ಬಾಲ್ಯ ವಿವಾಹ ನೆರವೇರಿದ್ದಲ್ಲಿ, ವಿವಾಹದ ಸಮಯದಲ್ಲಿ ಯಾರು ಅಪ್ರಾಪ್ತ ವಯಸ್ಸಿನವರಾಗಿದ್ದರೋ, ಅವರಿಗೆ ಆ ವಿವಾಹವನ್ನು ರದ್ದುಗೊಳಿಸುವ ಆಯ್ಕೆ ಇರುತ್ತದೆ. ಆ ಬಾಲ್ಯ ವಿವಾಹವನ್ನು ಈ ಕೆಳಕಂಡ ರೀತಿಗಳಲ್ಲಿ ರದ್ದುಗೊಳಿಸಬಹುದು:
ಶಾಲೆಗಳಲ್ಲಿ ಪಠ್ಯಕ್ರಮ ಮತ್ತು ಮೌಲ್ಯಮಾಪನ ವಿಧಾನಗಳು
ಪ್ರತಿ ರಾಜ್ಯ ಸರ್ಕಾರವು ಪಠ್ಯಕ್ರಮ ಮತ್ತು ಮೌಲ್ಯಮಾಪನ ಕಾರ್ಯವಿಧಾನಗಳನ್ನು ನಿಗದಿಪಡಿಸಿದ ವಿವಿಧ ಶೈಕ್ಷಣಿಕ ಪ್ರಾಧಿಕಾರಗಳನ್ನು ನಿರ್ದಿಷ್ಟಪಡಿಸಿದೆ
ಒಳಹೊಕ್ಕುವ / ಪೆನೆಟ್ರೇಟಿವ್ ಲೈಂಗಿಕ ದೌರ್ಜನ್ಯ ಎಂದರೇನು?
ಒಬ್ಬ ವ್ಯಕ್ತಿಯು ಮಗುವಿನ ಯಾವುದೇ ದೇಹದ ಭಾಗಕ್ಕೆ ಯಾವುದೇ ವಸ್ತು ಅಥವಾ ಯಾವುದೇ ದೇಹದ ಭಾಗವನ್ನು ಒಳಸೇರಿಸಿದಾಗ ಅಥವಾ ಮಗುವನ್ನು ಯಾರೊಂದಿಗಾದರೂ ಇದನ್ನು ಮಾಡಲು ಒತ್ತಾಯಿಸಿದಾಗ, ಅದು ಒಳಹೊಕ್ಕುವ / ಪೆನೆಟ್ರೇಟಿವ್ ಲೈಂಗಿಕ ದೌರ್ಜನ್ಯದ ಅಪರಾಧವಾಗಿದೆ.
ದತ್ತು ಸ್ವೀಕಾರದ ರೀತಿಗಳು
ಧಾರ್ಮಿಕೇತರ ದತ್ತು ಸ್ವೀಕಾರಗಳ ಹಲವಾರು ರೀತಿಗಳು ಕೆಳಗಿನಂತಿವೆ. ಇನ್ನು ನೀವು ಹಿಂದೂ ದತ್ತು ಸ್ವೀಕಾರ ಕಾನೂನನ್ನು ಪಾಲಿಸಿದರೆ, ದತ್ತು ಪಡೆಯುವ ಹಲವಾರು ರೀತಿಗಳು ಅದರಲ್ಲಿಲ್ಲ.
ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ತನಿಖಾಧಿಕಾರಿಗಳ ಕರ್ತವ್ಯಗಳು
ಮಕ್ಕಳ ಅಕ್ರಮ ಉದ್ಯೋಗವನ್ನು ತಡೆಗಟ್ಟಲು, ಮತ್ತು ಕಿಶೋರರ ಅನುಮತಿಸಲಾದ ಉದ್ಯೋಗ ಕಾನೂನುಬದ್ಧವಾಗಿ ನಡೆಯುತ್ತಿದೆ ಎಂದು ನೋಡಿಕೊಳ್ಳಲು ಸರ್ಕಾರ ತನಿಖಾಧಿಕಾರಿಗಳನ್ನು ನೇಮಿಸುತ್ತದೆ.
ಅಮಾನ್ಯ ಬಾಲ್ಯ ವಿವಾಹಗಳು
ಬಾಲ್ಯ ವಿವಾಹ ಕೆಲವು ಸಂದರ್ಭಗಳಲ್ಲಿ ಸಂಪೂರ್ಣವಾಗಿ ಅಮಾನ್ಯವಾಗಿರುತ್ತವೆ. ಅಂದರೆ, ಕಾನೂನಿನ ದೃಷ್ಟಿಯಲ್ಲಿ ಈ ವಿವಾಹಗಳು ಆಗೇ ಇಲ್ಲ ಎಂದರ್ಥ. ಇಂತಹ ಅಮಾನ್ಯ ವಿವಾಹಗಳು ಈ ಕೆಳಕಂಡಂತಿವೆ:
ಡಿಟೆನ್ಶನ್ ನೀತಿ
ಪ್ರತಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಐದನೇ ತರಗತಿ ಮತ್ತು ಎಂಟನೇ ತರಗತಿಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಒಂದು ಮಗುವನ್ನು ಬ್ಲ್ಯಾಕ್ಮೇಲ್ ಮಾಡಿದರೆ ಶಿಕ್ಷೆ ಏನು?
ಯಾರಾದರೂ ಮಗುವಿಗೆ ಬೆದರಿಕೆ ಹಾಕಿದರೆ ಅಥವಾ ಮಗುವಿಗೆ ಮಾಡಿದ ಯಾವುದೇ ಲೈಂಗಿಕ ಕ್ರಿಯೆಯನ್ನು ರೆಕಾರ್ಡ್ ಮಾಡಿದರೆ, ಯಾರಾದರೂ ಅವರ ವಿರುದ್ಧ ದೂರು ನೀಡಬಹುದು
ಬಾಲ ಕಲಾವಿದರನ್ನು ಕೆಲಸಕ್ಕಿಟ್ಟುಕೊಳ್ಳುವ ಸಮಯದಲ್ಲಿನ ಕರ್ತವ್ಯಗಳು
ಬಾಲ ಕಲಾವಿದರನ್ನು ಕೆಲಸಕ್ಕಿಟ್ಟುಕೊಳ್ಳುವ ಸಮಯದಲ್ಲಿ, ಉದ್ಯೋಗದಾತರ ಕರ್ತವ್ಯಗಳು ಕೆಳಗಿನಂತಿವೆ:
ಬಾಲ್ಯ ವಿವಾಹದಿಂದ ಹುಟ್ಟಿದ ಮಕ್ಕಳು
ಬಾಲ್ಯ ವಿವಾಹವು ರದ್ದುಗೊಂಡಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಕಾನೂನು, ಬಾಲ್ಯ ವಿವಾಹದಿಂದಾಗಿ ಹುಟ್ಟಿದ ಎಲ್ಲ ಮಕ್ಕಳನ್ನು ಧರ್ಮಜ ಮಕ್ಕಳನ್ನಾಗಿ ಪರಿಗಣಿಸುತ್ತದೆ.
ಮಕ್ಕಳ ಪೋರ್ನೋಗ್ರಫಿ (ಅಶ್ಲೀಲತೆ) ಎಂದರೇನು?
ಲೈಂಗಿಕ ತೃಪ್ತಿಗಾಗಿ ಯಾವುದೇ ರೀತಿಯ ಮಾಧ್ಯಮಗಳಲ್ಲಿ (ಜಾಹೀರಾತುಗಳು, ಇಂಟರ್ನೆಟ್, ಮುದ್ರಿತ ರೂಪ, ಇತ್ಯಾದಿ) ಮಕ್ಕಳನ್ನು ಬಳಸಿಕೊಳ್ಳುವವರನ್ನು ಕಾನೂನು ಶಿಕ್ಷಿಸಬಹುದು.
ಸಾಗರೋತ್ತರ ಭಾರತೀಯ ನಾಗರಿಕರು, ಅಥವಾ ಭಾರತದಲ್ಲಿ ನೆಲೆಸಿದ ವಿದೇಶಿಯರು ದತ್ತು ಸ್ವೀಕಾರ ಮಾಡುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)
ನೀವು ಸಾಗರೋತ್ತರ ಭಾರತೀಯ ನಾಗರೀಕರಾಗಿದ್ದಲ್ಲಿ, ಅಥವಾ ರೋಢಿಗತವಾಗಿ ಭಾರತದಲ್ಲಿ ನೆಲೆಸಿದ್ದ ವಿದೇಶೀಯರಾಗಿದ್ದು, ಮಗುವನ್ನು ದತ್ತು ಪಡೆಯಬೇಕೆಂದರೆ ಕೆಳಕಂಡ ಪ್ರಕ್ರಿಯೆಯನ್ನು ಪಾಲಿಸಿ
ಚಲನಚಿತ್ರಗಳು/ದೂರದರ್ಶನ/ಕ್ರೀಡೆಗಳಲ್ಲಿ ಮಕ್ಕಳು
ಮಕ್ಕಳು ನಾಟಕೀಯ ಧಾರಾವಾಹಿಗಳು, ಚಲನಚಿತ್ರಗಳು, ದೂರದರ್ಶನದಲ್ಲಿ ಬರುವ ಸಾಕ್ಷ್ಯಚಿತ್ರಗಳು, ಪ್ರದರ್ಶನದ ಮುಖ್ಯ ಸಂಚಾಲಕರಾಗಿ, ಅಥವಾ ಆಯಾ ಸಂದರ್ಭಗಳಲ್ಲಿ ಕೇಂದ್ರೀಯ ಸರ್ಕಾರ ಅನುಮತಿ ಮಾಡಿಕೊಟ್ಟ ಇನ್ನಿತರ ಕಲಾತ್ಮಕ ಪ್ರದರ್ಶನಗಳಲ್ಲಿ ಭಾಗವಹಿಸಬಹುದು.
ಬಾಲ್ಯ ವಿವಾಹವಾದ ಹೆಣ್ಣು ಮಕ್ಕಳಿಗೆ ರಕ್ಷಣೆ
೧೮ರ ಕೆಳಗಿನ ಹೆಣ್ಣು ಮಕ್ಕಳು ಮದುವೆಯಾದಲ್ಲಿ, ಹಾಗು ಅವರು ಮದುವೆಯನ್ನು ರದ್ದು ಮಾಡುವುದಾಗಿ ಮನವಿ ಸಲ್ಲಿಸಿದಲ್ಲಿ, ಅವರಿಗೆ ಕಾನೂನು ರಕ್ಷಣೆ ನೀಡುತ್ತದೆ.
ಶಾಲೆಗಳ ಜವಾಬ್ದಾರಿಗಳು
ಒಂದನೇ ತರಗತಿಯಿಂದ ಐದನೇ ತರಗತಿಗೆ 30:1 ಮತ್ತು ಆರನೇ ತರಗತಿಯಿಂದ ಎಂಟನೇ ತರಗತಿಗೆ 35:1 ಅನುಪಾತದಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತವನ್ನು ಶಿಕ್ಷಣ ಹಕ್ಕು ಕಾನೂನು ಸೂಚಿಸುತ್ತದೆ.
ಒಂದು ಮಗುವಿನ ಮೇಲೆ ಲೈಂಗಿಕವಾಗಿ ದೌರ್ಜನ್ಯ ಮಾಡಲು ಸಹಾಯ ಮಾಡಿದರೆ ಶಿಕ್ಷೆ ಏನು?
ಒಬ್ಬ ವ್ಯಕ್ತಿಯು ಒಂದು ಮಗುವನ್ನು ಲೈಂಗಿಕವಾಗಿ ದೌರ್ಜನ್ಯ ಮಾಡಲು ಯಾರಿಗಾದರೂ ಸಹಾಯ ಮಾಡಿದಾಗ ಅಥವಾ ಉದ್ದೇಶಪೂರ್ವಕವಾಗಿ ಪ್ರೋತ್ಸಾಹಿಸಿದಾಗ, ಅವರು ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದಕರಾಗುತ್ತಾರೆ.
ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಸರ್ಕಾರದ ಕರ್ತವ್ಯಗಳು
ಬಾಲ ಕಾರ್ಮಿಕ ಪದ್ಧತಿ ಆಚರಣೆಯಲ್ಲಿಲ್ಲ ಮತ್ತು ಕಾನೂನಿನ ನಿಬಂಧನೆಗಳ ಪಾಲನೆ ಆಗುತ್ತಿದೆ ಎಂಬುದನ್ನು ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ.
ಮಗುವಿನ ಶಿಕ್ಷಣದ ಬಗ್ಗೆ ದೂರು/ ಕುಂದುಕೊರತೆಗಳು
ನೀವು ಯಾವುದೇ ಕುಂದುಕೊರತೆಗಳನ್ನು ಎದುರಿಸಿದರೆ ಅಥವಾ ಮಗುವಿನ ಶಿಕ್ಷಣದ ಬಗ್ಗೆ ನೀವು ದೂರು ಹೊಂದಿದ್ದರೆ, ನೀವು ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು:
ಒಂದು ಮಗು ಮತ್ತೊಂದು ಮಗುವಿಗೆ ಲೈಂಗಿಕ ದೌರ್ಜನ್ಯ ಮಾಡಿದರೆ ಏನಾಗುತ್ತದೆ?
7 ವರ್ಷಕ್ಕಿಂತ ಮೇಲ್ಪಟ್ಟಒಂದು ಮಗು ಮತ್ತೊಂದು ಮಗುವಿಗೆ ಲೈಂಗಿಕ ಕಿರುಕುಳ ನೀಡಿದರೆ ಅಥವಾ ಲೈಂಗಿಕ ಅತ್ಯಾಚಾರ ಮಾಡಿದರೆ, ಅವರನ್ನು ದೌರ್ಜನ್ಯ ಮಾಡುವವರೆಂದು ಪರಿಗಣಿಸಿ, ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ರ ಅಡಿಯಲ್ಲಿ ಶಿಕ್ಷಿಸಬಹುದು.
ನಿವಾಸಿ ಭಾರತೀಯರಿಂದ ದತ್ತು ಪಡೆಯುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)
ನಿವಾಸಿ ಭಾರತೀಯರಾಗಿ ನೀವು ಭಾರತದೊಳಗೇ ದತ್ತು ಪಡೆಯಲು ಅರ್ಜಿ ಸಲ್ಲಿಸುವುದು ಸಾಮಾನ್ಯ. ನಿಮ್ಮ ದತ್ತು ಸ್ವೀಕೃತಿ ಅರ್ಜಿ ಕೆಳಗಿನ ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ
ಬಾಲ ಕಾರ್ಮಿಕ ಪದ್ಧತಿ ಅಪರಾಧದಲ್ಲಿ ರಾಜಿ
ನೀವು ಬಾಲ ಕಾರ್ಮಿಕ ಪದ್ಧತಿಯ ಕಾನೂನಿನ ಯಾವುದೇ ನಿಬಂಧನೆಗಳನ್ನು ಅಥವಾ ನಿಯಮಗಳನ್ನು ಪಾಲಿಸದಿದ್ದರೆ, ಕ್ರಿಮಿನಲ್ ಅಭಿಯೋಜನೆಯ ಬದಲು ಕಾನೂನು ನಿಮಗೆ ಆಯ್ಕೆಗಳನ್ನು ನೀಡುತ್ತದೆ.
ಬಾಲ್ಯ ವಿವಾಹ ತಡೆಗಟ್ಟಲು ನ್ಯಾಯಾಲಯದ ಅಧಿಕಾರ
ಬಾಲ್ಯ ವಿವಾಹ ನೆರವೇರಲಿದೆ, ಅಥವಾ ನೆರವೇರಿಸಲು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ನಂಬಲರ್ಹ ಮಾಹಿತಿ ನ್ಯಾಯಾಲಯಕ್ಕೆ ಸಿಕ್ಕರೆ, ಕೂಡಲೇ ಸಂಬಂಧಪಟ್ಟ ವ್ಯಕ್ತಿಗಳ ವಿರುಧ್ಧ ಅದು ನಿಷೇಧಾಜ್ಞೆಯನ್ನು ಹೊರಡಿಸಬಲ್ಲದು.
ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಊಟ (ಮಿಡ್-ಡೇ ಮೀಲ್ ಯೋಜನೆ)
I ರಿಂದ VIII ತರಗತಿಗಳಲ್ಲಿ ಓದುತ್ತಿರುವ ಆರರಿಂದ ಹದಿನಾಲ್ಕು ವರ್ಷದೊಳಗಿನ ಎಲ್ಲಾ ವಿದ್ಯಾರ್ಥಿಗಳು ಯಾವುದೇ ವೆಚ್ಚವಿಲ್ಲದೆ ಪೌಷ್ಟಿಕಾಂಶದ ಊಟಕ್ಕೆ ಅರ್ಹರಾಗಿರುತ್ತಾರೆ ಎಂದು ಕಾನೂನು ಹೇಳುತ್ತದೆ.
ಕುಟುಂಬ ಸದಸ್ಯರಿಂದ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ ಏನು?
ಒಂದು ಮಗುವಿಗೆ ಕುಟುಂಬದ ಸದಸ್ಯರಿಂದ ಲೈಂಗಿಕ ದೌರ್ಜನ್ಯ ಆದಾಗ, ಅವರು ಕುಟುಂಬದ ಸದಸ್ಯರಲ್ಲದವರಿಗಿಂತ ಹೆಚ್ಚು ಕಠಿಣ ಶಿಕ್ಷೆಯನ್ನು ಎದುರಿಸುತ್ತಾರೆ ಏಕೆಂದರೆ ಅವರು ಅಧಿಕಾರ ಮತ್ತು ನಂಬಿಕೆಯ ಸ್ಥಾನದಲ್ಲಿರುತ್ತಾರೆ. ಮಗುವಿನ ಕುಟುಂಬದ ಸದಸ್ಯರು ಕೆಳಕಂಡ ಯಾರನ್ನಾದರೂ ಒಳಗೊಂಡಿರಬಹುದು:
ನೆಂಟರಿಂದ ದತ್ತು ಪಡೆಯುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)
ನೀವು ಮಗುವಿನ ನೆಂಟರಾಗಿ, ಮಗುವನ್ನು ದತ್ತು ಪಡೆಯಬೇಕೆಂದಲ್ಲಿ, ಭಾರತದಲ್ಲಿಯೇ ಅಥವಾ ಅಂತರ್-ದೇಶಿಯ ದತ್ತು ಕೂಡ ಪಡೆಯಬಹುದಾಗಿದೆ.
ಬಾಲ ಕಾರ್ಮಿಕರ ಪುನರ್ವಸತಿ ಮತ್ತು ಕಲ್ಯಾಣ ನಿಧಿ
ಪ್ರತಿ ಒಂದು ಅಥವಾ ಎರಡು ಜಿಲ್ಲೆಗಳಿಗೆ ಬಾಲ ಕಾರ್ಮಿಕರ ಪುನರ್ವಸತಿ ಮತ್ತು ಕಲ್ಯಾಣ ನಿಧಿ ಎಂಬ ನಿಧಿಯನ್ನು ಸರ್ಕಾರ ರಚಿಸಿದೆ. ಬಾಲ ಕಾರ್ಮಿಕರನ್ನು ಕೆಲಸಕ್ಕಿಟ್ಟುಕೊಂಡಿರುವ ಉದ್ಯೋಗದಾತರು ಕೊಟ್ಟ ಜುಲ್ಮಾನೆಯನ್ನು ಈ ನಿಧಿಗೆ ಪಾವತಿಸಲಾಗುತ್ತದೆ.
ಬಾಲ್ಯ ವಿವಾಹ ನಿಷೇಧಾಧಿಕಾರಿಗಳು
ಭಾರತದಲ್ಲಿ ರಾಜ್ಯ ಸರ್ಕಾರಗಳು ಬಾಲ್ಯ ವಿವಾಹ ನಿಷೇಧಾಧಿಕಾರಿಗಳನ್ನು ಬಾಲ್ಯ ವಿವಾಹಗಳನ್ನು ತಡೆಗಟ್ಟಲು ನೇಮಿಸಿವೆ.
ಅಧಿಕಾರದ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯದ ಉಲ್ಬಣಗೊಂಡ ಅಪರಾಧ ಯಾವುದು?
ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಕಾನೂನಿನ ಅಡಿಯಲ್ಲಿ ಕೆಳಗೆ ಉಲ್ಲೇಖಿಸಲಾಗಿದ ವ್ಯಕ್ತಿಗಳನ್ನು ಕಠಿಣವಾಗಿ ಶಿಕ್ಷಿಸಲಾಗುತ್ತದೆ.
ಮಲ ತಂದೆ-ತಾಯಂದಿರಿಂದ ದತ್ತು ಸ್ವೀಕೃತಿಯ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)
ನೀವು ಮಗುವಿನ ಮಲ ತಂದೆ/ತಾಯಿಯಾಗಿ ದತ್ತು ಪಡೆಯಬೇಕಾದಲ್ಲಿ ಕೆಳಗಿನ ಪ್ರಕ್ರಿಯೆಯನ್ನು ಪಾಲಿಸಿ:
ಬಾಲ ಕಾರ್ಮಿಕರ ಪುನರ್ವಸತಿ
ಯಾವುದೇ ಮಗು/ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿ ಬಾಲ ಕಾರ್ಮಿಕರಾಗಿದ್ದರೆ, ಮಕ್ಕಳ ಪುನರ್ವಸತಿಗೆ ಸಂಬಂಧಿಸಿದ ಕಾನೂನಾದ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ೨೦೧೫ರ ಪ್ರಕಾರ ಅವರಿಗೆ ಪುನರ್ವಸತಿ ನೀಡಲಾಗುತ್ತದೆ.
ಹಿಂದುಳಿದ ಗುಂಪುಗಳಿಗೆ ಸೇರಿದ ಮಕ್ಕಳಿಗೆ ಶಿಕ್ಷಣ
ಹಿಂದುಳಿದ ಗುಂಪುಗಳ ಮಕ್ಕಳು ತಾರತಮ್ಯಕ್ಕೆ ಒಳಗಾಗದಂತೆ ಮತ್ತು ಅವರ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗುವಂತೆ ನೋಡಿಕೊಳ್ಳುವುದು ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳ ಕರ್ತವ್ಯವಾಗಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ಮಕ್ಕಳ ಪೋಷಕರು ಶಾಲಾ ಆಡಳಿತ ಸಮಿತಿಗಳಲ್ಲಿ, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯ ಅನುಪಾತದಲ್ಲಿ, ಪ್ರಾತಿನಿಧ್ಯವನ್ನು ಪಡೆಯಬೇಕು.
ನನಗೆ ತಿಳಿದಿರುವ ಮಕ್ಕಳ ಲೈಂಗಿಕ ದೌರ್ಜನ್ಯದ ಘಟನೆಯನ್ನು ವರದಿ ಮಾಡದಿದ್ದಕ್ಕಾಗಿ ನನಗೆ ಶಿಕ್ಷೆಯಾಗಬಹುದೇ?
ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು ಹೌದು, ಮಗುವಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಒಬ್ಬ ವ್ಯಕ್ತಿಗೆ ತಿಳಿದಿದ್ದರೆ, ಅದನ್ನು ವರದಿ ಮಾಡುವುದು ಅವರ ಕರ್ತವ್ಯ. ದೌರ್ಜನ್ಯವನ್ನು ಮೊದಲೇ ವರದಿ ಮಾಡದಿದ್ದಕ್ಕಾಗಿ ಅವರನ್ನು ಹೊಣೆಗಾರರನ್ನಾಗಿ ಮಾಡಬಹುದು ಮತ್ತು ಈ ಕಾನೂನಿನ ಅಡಿಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ಅಥವಾ ದಂಡವನ್ನು ವಿಧಿಸಬಹುದು. ಲೈಂಗಿಕ ದೌರ್ಜನ್ಯ ಮಗುವನ್ನು ಅವಮಾನಿಸುವಂತೆ ಮಾಡುತ್ತದೆ. ಮಗುವಿಗೆ ಸ್ವತಃ ದೌರ್ಜನ್ಯದ ಬಗ್ಗೆ […]
ಕೌಟುಂಬಿಕ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳು
೧೪ ವರ್ಷಗಳ ಕೆಳಗಿನ ಮಕ್ಕಳು ಮತ್ತು ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳಿಗೆ ಕೌಟುಂಬಿಕ ಉದ್ಯಮದಲ್ಲಿ ಕೆಲಸ ಮಾಡುವ ಅನುಮತಿ ಇದೆ.
ಲೈಂಗಿಕ ದೌರ್ಜನ್ಯದ ಕುರಿತು ಪೋಲೀಸ್ / ನ್ಯಾಯಾಂಗ ಅಧಿಕಾರಿಗಳು ಒಂದು ಮಗುವಿನ ಹೇಳಿಕೆಯನ್ನು ಹೇಗೆ ದಾಖಲಿಸುತ್ತಾರೆ?
ದೌರ್ಜನ್ಯದ ಕುರಿತು ಒಂದು ಮಗುವಿನ ಹೇಳಿಕೆಯನ್ನು ದಾಖಲಿಸುವಾಗ, ಪೊಲೀಸರು ಈ ಕೆಳಗಿನವುಗಳನ್ನು ಮಾಡಬೇಕು:
ಕೆಲಸ ಮಾಡುತ್ತಿರುವ ಮಕ್ಕಳ ಆರೋಗ್ಯ ಮತ್ತು ಸುರಕ್ಷೆ
ಕೆಲಸ ಮಾಡುತ್ತಿರುವ ಮಕ್ಕಳ ಆರೋಗ್ಯ ಮತ್ತು ಸುರಕ್ಷೆಯನ್ನು ಕಾಪಾಡುವುದು ಮುಖ್ಯ.
ಮಕ್ಕಳ ಲೈಂಗಿಕ ದೌರ್ಜನ್ಯದ ವಿರುದ್ಧ ಯಾರಾದರೂ ಹೇಗೆ ಪೊಲೀಸ್ ದೂರು ದಾಖಲಿಸಬಹುದು?
ಮಕ್ಕಳ ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ನೀಡಲು ಒಬ್ಬ ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿದಾಗ, ಈ ಕೆಳಗಿನ ಪ್ರಕ್ರಿಯೆಯು ನಡೆಯುತ್ತದೆ:
ಕೆಲಸ ಮಾಡುತ್ತಿರುವ ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳ ಕೆಲಸದ ಗಂಟೆಗಳು ಮತ್ತು ದಿನಗಳು
ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳನ್ನು ಕೆಲಸಕ್ಕಿಟ್ಟುಕೊಂಡಾಗ ಪಾಲಿಸಬೇಕಾದ ನಿಯಮಗಳು (ಅವರು ಕೌಟುಂಬಿಕ ಉದ್ಯಮ ಅಥವಾ ಸರ್ಕಾರದ ಬಂಡವಾಳ/ಮಾನ್ಯತೆ ಪಡೆದ ಶಾಲೆಗಳಲ್ಲಿ ಕೆಲಸ ಮಾಡುವುದನ್ನು ಹೊರತುಪಡಿಸಿ):
ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳನ್ನು ಕೆಲಸಕ್ಕಿಟ್ಟುಕೊಳ್ಳಬೇಕಾದರೆ ಉದ್ಯೋಗದಾತರು ಪಾಲಿಸಬೇಕಾದ ಕರ್ತವ್ಯಗಳು
ಉದ್ಯೋಗದಾತರಾಗಿ ನೀವು ಕೆಳಗಿನ ವಿವರಗಳುಳ್ಳ ದಾಖಲಾ ಪುಸ್ತಕವನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕಾಗಿರುತ್ತದೆ:
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಸುಳ್ಳು ವರದಿಗಳು ಅಥವಾ ದೂರುಗಳು ಯಾವುವು?
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಸುಳ್ಳು ದೂರು ನೀಡುವುದು ಅಥವಾ ಅವರು ಹಾಗೆ ಮಾಡದಿದ್ದಲ್ಲಿ ಅವರು ಒಂದು ಮಗುವನ್ನು ಲೈಂಗಿಕವಾಗಿ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಸುಳ್ಳು ಮಾಹಿತಿಯನ್ನು ಒದಗಿಸುವುದು ಕಾನೂನುಬಾಹಿರ. ಹೀಗೆ ಮಾಡಿದರೆ, ಶಿಕ್ಷೆಯು ಒಂದು ವರ್ಷ ಜೈಲು ಮತ್ತು/ಅಥವಾ ದಂಡ.
ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ತಂದೆ-ತಾಯಿ
ಕೌಟುಂಬಿಕ ಉದ್ಯೋಗಸ್ಥರು ಮತ್ತು ಬಾಲ ಕಲಾವಿದರನ್ನು ಹೊರತುಪಡಿಸಿ, ಇನ್ನಿತರ ಕೆಲಸಕ್ಕೆ ೧೪ ವರ್ಷಗಳ ಕೆಳಗಿನ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ತಂದೆ-ತಾಯಂದಿರಿಗೆ ದಂಡ ವಿಧಿಸಲಾಗುವುದು.