ಮಗುವನ್ನು ಯಾರು ದತ್ತು ನೀಡಬಹುದು?

ಕೊನೆಯ ಅಪ್ಡೇಟ್ Nov 28, 2022

ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನ ಪ್ರಕಾರ, ನಿಮ್ಮ ಮಗುವನ್ನು ನೀವು ದತ್ತು ನೀಡುವಂತಿಲ್ಲ, ಆದರೆ ಆ ಮಗುವಿನ ತಂದೆ/ತಾಯಿ/ಪೋಷಕರ ಅಧಿಕಾರದಲ್ಲಿ ಮಗುವನ್ನು ಬಿಟ್ಟುಕೊಡಬಹುದಾಗಿದೆ. ಮಗುವನ್ನು ಬಿಟ್ಟುಕೊಡುವುದು ಎಂದರೆ, ನಿಮ್ಮ ನಿಯಂತ್ರಣದಲ್ಲಿ ಇಲ್ಲದಿರದ ಯಾವುದೇ ದೈಹಿಕ, ಭಾವನಾತ್ಮಕ, ಅಥವಾ ಸಾಮಾಜಿಕ ಕಾರಣಗಳಿಂದಾಗಿ ನಿಮ್ಮ ಮಗುವನ್ನು ತ್ಯಜಿಸುವುದು. ಒಮ್ಮೆ ಮಕ್ಕಳ ಕಲ್ಯಾಣ ಸಮಿತಿ ನೀವು ನಿಮ್ಮ ಮಗುವನ್ನು ಬಿಟ್ಟುಕೊಟ್ಟಿದ್ದೀರಿ ಎಂದು ಖಾತರಿ ಪಡಿಸಿದ ಮೇಲೆ, ನಿಮ್ಮ ಮಗುವಿನ ಜೊತೆಗಿನ ನಿಮ್ಮ ಕಾನೂನಾತ್ಮಕ ಸಂಬಂಧ ಅಂತ್ಯಗೊಳ್ಳುತ್ತದೆ, ಮತ್ತು ಆ ಮಗುವಿನ ಸಂಬಂಧಿತ ಯಾವುದೇ ಜವಾಬ್ದಾರಿಗಳನ್ನು, ಅಥವಾ ಸವಲತ್ತುಗಳನ್ನು ನೀವು ಪೂರ್ಣಗೊಳಿಸುವಂತಿಲ್ಲ. ತದನಂತರ, ಮಕ್ಕಳ ಕಲ್ಯಾಣ ಇಲಾಖೆಯು ಆ ಬಿಟ್ಟು ಕೊಟ್ಟ ಮಗುವಿನ ಜೊತೆ ಏನು ಮಾಡಬೇಕು ಎಂದು ನಿರ್ಧರಿಸುತ್ತದೆ. ಆ ಮಗುವನ್ನುಕಾನೂನುಬದ್ಧವಾಗಿ ದತ್ತಕ್ಕೆ ಕೊಡಲು ಯೋಗ್ಯವೆಂದು ಸಮಿತಿಯು ಘೋಷಿಸಬಹುದು.

ಹಿಂದೂ ದತ್ತು ಸ್ವೀಕಾರ ಕಾನೂನಿನ ಪ್ರಕಾರ ಕೆಳಗಿನ ವ್ಯಕ್ತಿಗಳು ತಮ್ಮ ಮಗುವನ್ನು ದತ್ತು ಬಿಟ್ಟುಕೊಡಬಹುದು:

  • ಮಗುವಿನ ಜೈವಿಕ ತಂದೆ/ತಾಯಿ: ಮಗುವನ್ನು ಬಿಟ್ಟುಕೊಡಲು ಇಚ್ಛಿಸುವ ತಂದೆ/ತಾಯಿಗೆ ಅವರ ಸಂಗಾತಿಯಿಂದ ಒಪ್ಪಿಗೆ ಇದ್ದರೆ ಮಾತ್ರ. ಉದಾಹರಣೆಗೆ, ನೀವು ರಮ್ಯಾಳ ಜೈವಿಕ ತಾಯಿಯಾಗಿ ಅವಳನ್ನು ದತ್ತು ಬಿಟ್ಟುಕೊಡಬೇಕೆಂದಲ್ಲಿ, ರಮ್ಯಾಳ ಜೈವಿಕ ತಂದೆಯ ಒಪ್ಪಿಗೆ ನಿಮ್ಮಲ್ಲಿರಬೇಕು. ಆದರೆ ನಿಮ್ಮ ಸಂಗಾತಿ ಮಾನಸಿಕವಾಗಿ ಅಸ್ವಸ್ಥವಾಗಿದ್ದರೆ, ಲೋಕವನ್ನು ತ್ಯಜಿಸಿದ್ದರೆ, ಅಥವಾ ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದರೆ, ಈ ಒಪ್ಪಿಗೆ ಬೇಕಾಗಿಲ್ಲ.
  • ಮಗುವಿನ ಆರೈಕೆ ಮಾಡುತ್ತಿರುವ ಪಾಲಕ/ಪೋಷಕ, ನ್ಯಾಯಾಲಯದ ಅನುಮತಿಯಿಂದ, ಕೆಲ ಸಂದರ್ಭಗಳಲ್ಲಿ ಆ ಮಗುವನ್ನು ದತ್ತು ಬಿಟ್ಟುಕೊಡಬಹುದು.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.