ಭಾರತೀಯರ ಸಬಲೀಕರಣ

ನಗರ ಮತ್ತು ಗ್ರಾಮೀಣ ಭಾರತದಾದ್ಯಂತ ನ್ಯಾಯ ವಿತರಣಾ ಕಾರ್ಯವಿಧಾನಗಳನ್ನು ನ್ಯಾವಿಗೇಟ್ ಮಾಡಲು ಭಾರತೀಯರಿಗೆ ಸಹಾಯ ಮಾಡಲು ಕ್ರಮಬದ್ಧವಾದ ಕಾನೂನು ಮಾಹಿತಿಯ ಹಂಚಿಕೆ

ಬದಲಾವಣೆಗಾಗಿ ನಮ್ಮ ಮ್ಯಾನ್ಡೇಟ್

ಕಾನೂನುಗಳನ್ನು ಸರಳಗೊಳಿಸುವುದು ನಮ್ಮ ಗುರಿಯಾಗಿದೆ. ಕಾನೂನು ಮಾಹಿತಿಯನ್ನು ಗ್ರಹಿಸಲು, ತಲುಪಲು ಮತ್ತು ಕಾರ್ಯಗತಗೊಳಿಸಲು ಹಲವಾರು ಅಡೆತಡೆಗಳಿವೆ. ಉದಾಹರಣೆಗೆ, ಕಾನೂನು ಅರಿವಿನ ಕೊರತೆ, ಇಂಗ್ಲಿಷ್‌ನಲ್ಲಿ ಜಟಿಲವಾದ ವಿವರಣೆಗಳು – ಕೇವಲ 10% ಭಾರತೀಯರು ಮಾತ್ರ ಇದನ್ನು ಓದಬಹುದು. ಪ್ರಸ್ತುತ ವ್ಯವಸ್ಥೆ ಮತ್ತು ಹಣಕಾಸಿನ ಹೊರೆಗಳಿಂದ ನ್ಯಾಯವನ್ನು ಪಡೆಯಲು ಅಥವಾ ಹಕ್ಕುಗಳು ಮತ್ತು ಅರ್ಹತೆಗಳನ್ನು ಜಾರಿಗೊಳಿಸಲು ಇನ್ನಷ್ಟು ಕಷ್ಟವಾಗುತ್ತದೆ.

ಕಾನೂನು ಅಡೆತಡೆಗಳನ್ನು ನಿವಾರಿಸಲು ತಂತ್ರಜ್ಞಾನವನ್ನು ಬಳಕೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ, ಮತ್ತು ವಿಶ್ವಾಸಾರ್ಹ ಕಾನೂನು ಜ್ಞಾನವನ್ನು ಇಂಗ್ಲಿಷ್, ಹಿಂದಿ ಮತ್ತು ಕನ್ನಡದಲ್ಲಿ ಉಚಿತವಾಗಿ ಪ್ರದರ್ಶಿಸುತ್ತೇವೆ. ಶೀಘ್ರದಲ್ಲೇ ಇತರ ಭಾರತೀಯ ಭಾಷೆಗಳಲ್ಲೂ ಸಹ ಮಾಹಿತಿಯನ್ನು ರಚಿಸಲು ನಾವು ಪ್ರಯತ್ನಿಸುತ್ತಿದ್ದೇವೆ.

ನಮ್ಮ ವೈವಿಧ್ಯಮಯ ಪ್ರೇಕ್ಷಕರ ಅಗತ್ಯಗಳನ್ನು ಪೂರೈಸಲು ಕಾನೂನು ಮಾಹಿತಿಯನ್ನು ಸರಳ ಭಾಷೆಯಲ್ಲಿ ಪ್ರಸಾರ ಮಾಡಲಾಗುತ್ತದೆ. ಸವಾಲು ಮತ್ತು ಪ್ರೇಕ್ಷಕರ ಪ್ರೊಫೈಲ್‌ಗೆ ಅನುಗುಣವಾಗಿ, ಮಾಹಿತಿಯನ್ನು ವಿವರಣೆಗಳು ಅಥವಾ ಮಾರ್ಗದರ್ಶಿಗಳು ಅಥವಾ ವೀಡಿಯೊ/ಆಡಿಯೋ ಫಾರ್ಮ್ಯಾಟ್‌ಗಳ ರೂಪದಲ್ಲಿ ಕಾನೂನು ಅಡೆತಡೆಗಳನ್ನು ಪರಿಹರಿಸಲು ಅಗತ್ಯವಾದ ಕ್ರಮಗಳ ಸ್ಪಷ್ಟ ಸೂಚಕಗಳೊಂದಿಗೆ ಒದಗಿಸಲಾಗುತ್ತದೆ. ವೆಬ್‌ಸೈಟ್‌ನ ‘ಆಸ್ಕ್ ನ್ಯಾಯ’ ವಿಭಾಗದ ಮೂಲಕ ಯಾವುದೇ ಫಾಲೋ-ಅಪ್ ಪ್ರಶ್ನೆಗಳಿಗೆ ನಾವು ಅವಕಾಶವನ್ನು ಒದಗಿಸುತ್ತೇವೆ. ನಮ್ಮ ಜಿಲ್ಲಾ ವಕೀಲರ ಮತ್ತು ಕಾನೂನು ವಿದ್ಯಾರ್ಥಿಗಳ ‘ಆಕ್ಸೆಸ್ ಟು ಜಸ್ಟಿಸ್’ ನೆಟ್‌ವರ್ಕ್, ಬಳಕೆದಾರರು ಸಿಸ್ಟಮ್ ಅನ್ನು ನ್ಯಾವಿಗೇಟ್ ಮಾಡಿ, ತಮ್ಮ ಹಕ್ಕುಗಳನ್ನು ಜಾರಿಗೊಳಿಸಲು ಸಾಧ್ಯವಾಗುವವರೆಗೂ ಸಹಾಯ ಮಾಡುತ್ತದೆ.

ನಮ್ಮ ಧ್ಯೇಯವನ್ನು ಸಾಧಿಸುವ ಸಲುವಾಗಿ, ನಾವು ತಳಮಟ್ಟದ ಸಂಸ್ಥೆಗಳು ಮತ್ತು ಸಮುದಾಯದ ಮುಖಂಡರನ್ನು ಕಾನೂನು ಚಾಂಪಿಯನ್‌ಗಳಾಗಿ ತಯಾರಿಸಲು ಪ್ರಯತ್ನಿಸುತ್ತಿದ್ದೇವೆ. ಅವರು ಕಾನೂನು ಮಾಹಿತಿಯ ಪ್ರಸಾರಕ್ಕಾಗಿ ಸಂದೇಶವಾಹಕರಾಗಿ ಕಾರ್ಯನಿರ್ವಹಿಸಬಹುದು.

ನಮ್ಮ ಸಹಯೋಗಗಳು ಹೆಚ್ಚಾಗಿ ಹಲವಾರು ಸರ್ಕಾರೇತರ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ ಇವೆ. ವಿವಿಧ ಕಾನೂನು ವಿಷಯಗಳ ಕುರಿತು ಆಳವಾದ ಮಾಹಿತಿಯನ್ನು ಒದಗಿಸುವ ವಿವಿಧ ಕ್ಷೇತ್ರಗಳಲ್ಲಿನ ವೃತ್ತಿಪರರೊಂದಿಗೂ ನಾವು ಕೆಲಸ ಮಾಡುತ್ತೇವೆ.

ಅವರ ವಿಮರ್ಶೆ ಮತ್ತು ಬೆಂಬಲದಿಂದ, ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳುವಳಿಕೆಯುಳ್ಳ ವ್ಯಕ್ತಿಗಳ ಬಲವಾದ ಸಮುದಾಯವನ್ನು ನಾವು ನಿರ್ಮಿಸುತ್ತಿದ್ದೇವೆ.

1,50,00,000

ಬಳಕೆದಾರರು

100,000

ಆನ್‌ಲೈನ್ ಸಮುದಾಯಗಳು

2,500

ಬಳಕೆದಾರ ಪ್ರಶ್ನೆಗಳಿಗೆ ಉತ್ತರಗಳು

300

‘ಆಕ್ಸೆಸ್ ಟು ಜಸ್ಟಿಸ್’ ನೆಟ್‌ವರ್ಕ್‌ ಸದಸ್ಯರು

68

ಕಾನೂನು ವಿಷಯಗಳು

50

ಸಹಯೋಗ ಸಂಸ್ಥೆಗಳು

25

ಭಾರತೀಯ ನಗರಗಳ ವ್ಯಾಪ್ತಿ

6

ಪ್ರಾದೇಶಿಕ ಭಾಷೆಗಳ ಬೆಂಬಲ

ಮೀಡಿಯಾ ಉಲ್ಲೇಖಗಳು

ನ್ಯಾಯದ ಪ್ರಚಾರಗಳು ಮತ್ತು ಯೋಜನೆಗಳು ಹಲವಾರು ರಾಷ್ಟ್ರೀಯ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಂಡಿವೆ. ಇನ್ನಷ್ಟು ತಿಳಿಯಲು ಕೆಳಗೆ ಓದಿ.

ಮತ್ತಷ್ಟು ಓದಿ