
ಮಹಿಳೆಯರು
- Legal Explainers (17)
- Resources (2)
ಅಂತರ್ಜಾಲದಲ್ಲಿ ನಿಮ್ಮನ್ನು ಹಿಂಬಾಲಿಸುವುದು
https://anchor.fm/nyaaya-india/episodes/Cyber-Stalking-en2rn8/a-a3vibq7 ಮಹಿಳೆಯೊಬ್ಬರು ಬಳಸುತ್ತಿರುವ ಅಂತರ್ಜಾಲ ಇ-ಮೇಲ್ ಮತ್ತಾವುದೇ ರೀತಿಯ ವಿದ್ಯುನ್ಮಾನ ಸಂವಹನ ಸಾಮಾಜಿಕ ಜಾಲತಾಣಗಳು ಇವುಗಳ ಮೇಲೆ ಯಾವುದೇ ವ್ಯಕ್ತಿಯು ನಿಗಾ ವಹಿಸಿದ್ದಲ್ಲಿ, ಅದನ್ನು “ಅಂತರ್ಜಾಲ ಹಿಂಬಾಲಿಕೆ” (ಸೈಬರ್ ಸ್ಟಾಕಿಂಗ್) ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ವ್ಯಕ್ತಿಯೊಬ್ಬನು ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಿಮ್ಮನ್ನು ಸಂಪರ್ಕಿಸುತ್ತಿದ್ದಲ್ಲಿ, ಆತ ನಿಮ್ಮನ್ನು ಅಂತರ್ಜಾಲದಲ್ಲಿ ಹಿಂಬಾಲಿಸುತಿದ್ದಾನೆ ಎಂದರ್ಥ. ಈ ಅಪರಾಧಕ್ಕಾಗಿ ಮೊದಲ ಬಾರಿ ತಪ್ಪಿತಸ್ಥನೆಂದು ಕಂಡುಬಂದಾಗ ಅಪರಾದಿಯು ಮೂರು ವರ್ಷಗಳ ಕಾರಾಗೃಹ ವಾಸ ಮತ್ತು […]


ಕೌಟುಂಬಿಕ ಹಿಂಸೆಗೆ ಬಲಿಯಾದವರಿಗೆ ಯಾವ ಹಕ್ಕುಗಳಿವೆ ಮತ್ತು ಇಂತಹ ಪರಿಹಾರಗಳು ಲಭ್ಯವಿವೆ?
ಹಿಂಸೆಗೆ ಬಲಿಯಾದ ಮಹಿಳೆಗೆ ಅಪಾಯದ ಬೆದರಿಕೆ ಇದ್ದಲ್ಲಿ, ತಕ್ಷಣವಾಗಿ ರಕ್ಷಣೆ ಬೇಕಾದಲ್ಲಿ, ನ್ಯಾಯಾಧೀಶರು ತಾತ್ಕಾಲಿಕ ಆದೇಶಗಳನ್ನು ಅಥವಾ ಅಪರಾಧಿಯ ಅನುಪಸ್ಥಿತಿಯಲ್ಲಿ ಕೂಡ ಆದೇಶಗಳನ್ನು ಹೊರಡಿಸಬಹುದು.


ಕೌಟುಂಬಿಕ ಹಿಂಸೆಯ ವಿರುದ್ಧ ಯಾರು ರಕ್ಷಣೆ ಪಡೆಯಬಹುದು?
ಯಾವುದೇ ಮಹಿಳೆ, ತನಗೋಸ್ಕರ ಅಥವಾ ತನ್ನ ಮಕ್ಕಳಿಗೋಸ್ಕರ, ದೂರು ದಾಖಲಿಸಿ, ಕೌಟುಂಬಿಕ ಹಿಂಸೆ ಕಾನೂನಿನಡಿ ರಕ್ಷಣೆ ಪಡೆಯಬಹುದು. ಆ ಮಹಿಳೆ ಯಾವ ಧರ್ಮಕ್ಕೆ ಸೇರಿರುವರು ಎಂಬುದು ಅಪ್ರಸ್ತುತ.


ಕೌಟುಂಬಿಕ ಹಿಂಸೆಯ ಸಹಾಯವಾಣಿಗಲ್ಯಾವುವು?
ನಿಮಗೆ ಸಂಬಂಧಪಟ್ಟ ರಕ್ಷಣಾಧಿಕಾರಿಗಳನ್ನು ಗುರುತಿಸಲು, ಹೆಚ್ಚುವರಿ ಸಹಾಯ ಮತ್ತು ಬೆಂಬಲ ನೀಡಲು, ದೂರು ದಾಖಲಿಸಲು ಸಹಾಯ ಮಾಡಲು ಕೆಲವು ಸಹಾಯವಾಣಿಗಳ ನೆರವು ಪಡೆಯಬಹುದು. ಸಂಬಂಧಪಟ್ಟ ಸರ್ಕಾರಿ ಸಹಾಯವಾಣಿಗಳ ಪಟ್ಟಿ ಕೆಳಗಿದೆ


ಕೌಟುಂಬಿಕ ಹಿಂಸೆಯ ವಿರುದ್ಧ ನೀವು ಸಹಾಯ ಮತ್ತು ಬೆಂಬಲ ಹೇಗೆ ಪಡೆಯಬಹುದು?
ಕೌಟುಂಬಿಕ ಹಿಂಸೆಯ ದೂರು ನೀಡುವಾಗ ನಿಮಗೆ ಹೆಚ್ಚುವರಿ ಸಹಾಯ ಮತ್ತು ಬೆಂಬಲ ಬೇಕಾಗಬಹುದು. ಕೆಳಗಿನ ಅಧಿಕಾರಿಗಳ ನೆರವಿನಿಂದ ನೀವು ಈ ಸಹಾಯ ಮತ್ತು ಬೆಂಬಲ ಪಡೆಯಬಹುದು.


ಕೌಟುಂಬಿಕ ಹಿಂಸೆಯ ವಿರುದ್ಧ ತಕ್ಷಣದ ರಕ್ಷಣೆ ಹೇಗೆ ಪಡೆಯಬಹುದು?
ಕೌಟುಂಬಿಕ ಹಿಂಸೆಯ ವಿರುದ್ಧ ತಕ್ಷಣ ರಕ್ಷಣೆ ಬೇಕೆಂದಲ್ಲಿ ನೀವು ವಕೀಲರು ಅಥವಾ ರಕ್ಷಾಧಿಕಾರಿಗಳ ನೆರವಿನಿಂದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು.


ವೈದ್ಯಕೀಯ ಸೌಲಭ್ಯಗಳು ಮತ್ತು ಆಶ್ರಯ ಮನೆಗಳು ಎಂದರೇನು?
ನಿಮಗೆ ಕೌಟುಂಬಿಕ ಹಿಂಸೆ ಆಗಿದ್ದಲ್ಲಿ, ವೈದ್ಯಕೀಯ ಸಹಾಯ ಪಡೆಯುವುದು ನಿಮ್ಮ ಹಕ್ಕಾಗಿದೆ.


ಅಶ್ಲೀಲ ಮಾಹಿತಿ ಮತ್ತು ಲೈಂಗಿಕ ದೌರ್ಜನ್ಯ
ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು ಮತ್ತು ಲೈಂಗಿಕ ದೌರ್ಜನ್ಯವನ್ನು ಕಾನೂನು ವಿವಿಧ ರೀತಿಯ ಅಪರಾಧಗಳನ್ನಾಗಿ ಪರಿಗಣಿಸಿ ದಂಡನೆ ವಿಧಿಸುತ್ತದೆ. ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು: ಅಂತರ್ಜಾಲದಲ್ಲಿ ಅಶ್ಲೀಲ ಮಾಹಿತಿಯನ್ನು ಹರಡುವುದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಯಾವುದೇ ಮಹಿಳೆಯ ನಗ್ನಚಿತ್ರವನ್ನು ಯಾರಾದರೂ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದಲ್ಲಿ ಅಂತಹ ಕೃತ್ಯ ಅಪರಾಧ. ಮೊದಲನೇ ಬಾರಿಯ ಇಂತಹ ಅಪರಾಧಕ್ಕೆ ಮೂರು ವರ್ಷಗಳವರೆಗೆ ಸೆರೆವಾಸ ಮತ್ತು ಐದು ಲಕ್ಷ ರೂಪಾಯಿಗಳ ದಂಡ ವಿಧಿಸಬಹುದಾಗಿದೆ. ಪುನ: ಈ ರೀತಿಯ ಅಪರಾಧ ಎಸಗಿದಲ್ಲಿ, […]


ಕೌಟುಂಬಿಕ ಹಿಂಸೆ ಕಾನೂನಿನಡಿ ಸಮಾಲೋಚನೆ (counseling) ಎಂದರೇನು?
ಸಮಾಲೋಚನೆಯ ಪ್ರಕ್ರಿಯೆಯಿಂದ ಕೌಟುಂಬಿಕ ಹಿಂಸೆ ನಡೆದ ಘಟನೆ ಪುನರಾವರ್ತಿಸುವುದಿಲ್ಲ ಎಂಬ ಆಶ್ವಾಸನೆ ಹುಟ್ಟುತ್ತದೆ.


ನಿಮ್ಮ ವೈಯುಕ್ತಿಕ ಭಾವಚಿತ್ರಗಳು ಮತ್ತು ವಿಡಿಯೋಗಳು
ನಿಮ್ಮ ವೈಯುಕ್ತಿಕ ಭಾವಚಿತ್ರಗಳ ಮತ್ತು ವಿಡಿಯೋಗಳನ್ನು ನಿಮ್ಮ ಅನುಮತಿ ಇಲ್ಲದೆಯೇ ಯಾರಾದರೂ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದಲ್ಲಿ ಅದು ಅಪರಾಧವಾಗುತ್ತದೆ. ಉದಾಹರಣೆಗೆ ವ್ಯಕ್ತಿಯೊಬ್ಬನ ಗುಪ್ತಾಂಗದ ಫೋಟೋವನ್ನು ಫೇಸ್ ಬುಕ್ಕಿನಲ್ಲಿ ಮತ್ತೊಬ್ಬ ವ್ಯಕ್ತಿ ಹಾಕಿದಲ್ಲಿ ಅದು ಆತನ ಖಾಸಗಿತನವನ್ನು ಉಲ್ಲಂಘಿಸಿದ ಅಪರಾಧವೆನಿಸಿಕೊಳ್ಳುತ್ತದೆ. ಈ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಅಥವಾ ಎರಡು ಲಕ್ಷ ರೂಪಾಯಿಗಳ ಜುಲ್ಮಾನೆ ಅಥವಾ ಎರಡೂ ದಂಡನೆಗಳನ್ನು ಅನುಭವಿಸಬೇಕಾಗುತ್ತದೆ. ಮಹಿಳೆಯೊಬ್ಬಳು ಖಾಸಗಿ ಕ್ರಿಯೆಗಳಲ್ಲಿ ತೊಡಗಿರುವ ಭಾವಚಿತ್ರಗಳನ್ನು ತೆಗೆಯುವುದು, ನೋಡುವುದು ಅಥವಾ ಹರಡುವುದು ಕೂಡ ಅಪರಾಧ. ಈ […]


ಕೌಟುಂಬಿಕ ಹಿಂಸೆಯ ವಿರುದ್ಧ ದೂರು ಹೇಗೆ ದಾಖಲಿಸಬಹುದು?
ಯಾವುದೇ ರೀತಿಯ ಕೌಟುಂಬಿಕ ಹಿಂಸೆಯ ವಿರುದ್ಧ ದೂರು ದಾಖಲಿಸಲು, ನೀವು ಅಥವಾ ನಿಮ್ಮ ಪ್ರತಿ ಬೇರೆ ಯಾರಾದರೂ, ಕೆಳಗೆ ಪಟ್ಟಿ ಮಾಡಿರುವ ಅಧಿಕಾರಿಗಳನ್ನು ಭೇಟಿ ಮಾಡಬಹುದು


ಕೌಟುಂಬಿಕ ಹಿಂಸೆಯ ನಿಮಿತ್ತ ಯಾರ ವಿರುದ್ಧ ದೂರು ದಾಖಲಿಸಬಹುದು?
ಕೌಟುಂಬಿಕ ಹಿಂಸೆಯ ನಿಮಿತ್ತ ನೀವು ಪುರುಷರು ಮತ್ತು ಮಹಿಳೆಯರ ವಿರುದ್ಧ ದೂರು ದಾಖಲಿಸಬಹುದು. ಕೆಳಗಿನವರ ವಿರುದ್ಧ ನೀವು ದೂರು ದಾಖಲಿಸಬಹುದು


ಕೌಟುಂಬಿಕ ಹಿಂಸೆಯ ವಿರುದ್ಧ ದೂರು ನೀಡುವ ಸಮಯದ ಮಿತಿ
ಕೌಟುಂಬಿಕ ಹಿಂಸೆಯ ವಿರುದ್ಧ ದೂರು ನೀಡಲು ಯಾವುದೇ ನಿರ್ದಿಷ್ಟ ಸಮಯದ ಮಿತಿ ಇಲ್ಲ. ಆದರೆ, ಹಿಂಸೆ ನಡೆದ ಕಾಲಾವಧಿಯಲ್ಲಿ ನೀವು ಕಿರುಕುಳ ನೀಡಿದ ವ್ಯಕ್ತಿಯ ಜೊತೆ ಕೌಟುಂಬಿಕ ಸಂಬಂಧದಲ್ಲಿದ್ದೀರಿ ಎಂದು ನೀವು ಸಾಬೀತುಪಡಿಸಬೇಕಾಗುತ್ತದೆ.


ಡಿ.ಐ.ಆರ್. ಎಂದರೇನು?
ಒಬ್ಬ ಮಹಿಳೆಯಿಂದ ಕೌಟುಂಬಿಕ ಹಿಂಸೆಯ ದೂರು ಸಿಕ್ಕ ತಕ್ಷಣ ದಾಖಲಿಸುವ ವರದಿಯನ್ನು ಡಿ.ಐ.ಆರ್. ಎನ್ನುತ್ತಾರೆ. ಈ ವರದಿಯನ್ನು ರಕ್ಷಣಾಧಿಕಾರಿಗಳು ಅಥವಾ ಸೇವಾ ಕಾರ್ಯಕರ್ತರು ದಾಖಲಿಸುತ್ತಾರೆ


ರಕ್ಷಣಾಧಿಕಾರಿಗಳ ಪಾತ್ರವೇನು?
ನೀವು ಕೌಟುಂಬಿಕ ಹಿಂಸೆಯ ದೂರನ್ನು ದಾಖಲಿಸುವುದಾಗಿ ನಿರ್ಧರಿಸಿದ್ದಲ್ಲಿ, ರಕ್ಷಣಾಧಿಕಾರಿಗಳು ನಿಮ್ಮ ಮೊದಲ ಸಂಪರ್ಕ ಬಿಂದು ಆಗಿರುತ್ತಾರೆ.

