ಅಂತರ್ಜಾಲದಲ್ಲಿ ನಿಮ್ಮನ್ನು ಹಿಂಬಾಲಿಸುವುದು

ಕೊನೆಯ ಅಪ್ಡೇಟ್ Jul 22, 2022

ಮಹಿಳೆಯೊಬ್ಬರು ಬಳಸುತ್ತಿರುವ  ಅಂತರ್ಜಾಲ  ಇ-ಮೇಲ್  ಮತ್ತಾವುದೇ ರೀತಿಯ ವಿದ್ಯುನ್ಮಾನ ಸಂವಹನ  ಸಾಮಾಜಿಕ ಜಾಲತಾಣಗಳು ಇವುಗಳ ಮೇಲೆ ಯಾವುದೇ ವ್ಯಕ್ತಿಯು ನಿಗಾ ವಹಿಸಿದ್ದಲ್ಲಿ, ಅದನ್ನು “ಅಂತರ್ಜಾಲ ಹಿಂಬಾಲಿಕೆ” (ಸೈಬರ್ ಸ್ಟಾಕಿಂಗ್) ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ವ್ಯಕ್ತಿಯೊಬ್ಬನು ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಿಮ್ಮನ್ನು ಸಂಪರ್ಕಿಸುತ್ತಿದ್ದಲ್ಲಿ, ಆತ ನಿಮ್ಮನ್ನು ಅಂತರ್ಜಾಲದಲ್ಲಿ ಹಿಂಬಾಲಿಸುತಿದ್ದಾನೆ ಎಂದರ್ಥ. ಈ ಅಪರಾಧಕ್ಕಾಗಿ ಮೊದಲ ಬಾರಿ ತಪ್ಪಿತಸ್ಥನೆಂದು ಕಂಡುಬಂದಾಗ ಅಪರಾದಿಯು ಮೂರು ವರ್ಷಗಳ ಕಾರಾಗೃಹ ವಾಸ ಮತ್ತು ಜುಲ್ಮಾನೆ ತೆರುವ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಎರಡನೇ ಬಾರಿ ತಪ್ಪಿತಸ್ಥನೆಂದು ತೀರ್ಮಾನಿಸಿದಾಗ, ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ ಮತ್ತು ದಂಡವನ್ನು ತೆರಬೇಕಾಗುತ್ತದೆ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.