ಕೌನ್ಸಿಲಿಂಗ್ ಪ್ರಕ್ರಿಯೆಯು ಕೌಟುಂಬಿಕ ಹಿಂಸೆಯ ಘಟನೆಯು ಪುನರಾವರ್ತನೆಯಾಗುವುದಿಲ್ಲ ಎಂಬ ಭರವಸೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಸಮಾಲೋಚನೆಯ ಸಮಯದಲ್ಲಿ ಅಪರಾಧಿಯು ನಿಮಗೆ ಕಿರುಕುಳ ನೀಡುವುದನ್ನು ಮುಂದುವರಿಸಿದರೆ, ಹೆಚ್ಚಿನ ಹಿಂಸಾಚಾರವನ್ನು ತಡೆಗಟ್ಟಲು ಮ್ಯಾಜಿಸ್ಟ್ರೇಟ್ ಅನ್ನು ಸಂಪರ್ಕಿಸುವುದು ಸೇರಿದಂತೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವ ಸಲಹೆಗಾರರಿಗೆ ನೀವು ತಿಳಿಸಬಹುದು.

ಕೌಟುಂಬಿಕ ಹಿಂಸೆ ಕಾನೂನಿನಡಿ ಸಮಾಲೋಚನೆ (counseling) ಎಂದರೇನು?

ಕೊನೆಯ ಅಪ್ಡೇಟ್ Nov 19, 2022

ಸಮಾಲೋಚನೆಯ ಪ್ರಕ್ರಿಯೆಯಿಂದ ಕೌಟುಂಬಿಕ ಹಿಂಸೆ ನಡೆದ ಘಟನೆ ಪುನರಾವರ್ತಿಸುವುದಿಲ್ಲ ಎಂಬ ಆಶ್ವಾಸನೆ ಹುಟ್ಟುತ್ತದೆ. ಸಮಾಲೋಚನೆಯ ಸಂದರ್ಭದಲ್ಲಿ ಮತ್ತೆ ನಿಮಗೆ ಕಿರುಕುಳ ಉಂಟು ಮಾಡಿದಲ್ಲಿ, ಸಲಹೆಗಾರರಿಗೆ ನೀವು ಇದರ ಬಗ್ಗೆ ಹೇಳಿದರೆ, ಅವರು ನ್ಯಾಯಾಧೀಶರಿಂದ ಹಿಂಸೆಯನ್ನು ತಡೆಯುವಂತೆ ಸೂಕ್ತ ಆದೇಶವನ್ನು ಹೊರಡಿಸಬಲ್ಲರು.

ನಿಮ್ಮ ಮತ್ತು ನಿಮಗೆ ಕಿರುಕುಳ ಕೊಟ್ಟ ವ್ಯಕ್ತಿಯ ನಡುವೆ ನಡೆದ ಕೌಟುಂಬಿಕ ಹಿಂಸೆಯ ಸಮಸ್ಯೆಯನ್ನು ಪರಿಹರಿಸಲು, ಇನ್ನು ಮುಂದೆ ಯಾವುದೇ ರೀತಿಯ ಹಿಂಸೆ ನಡೆಯುವುದಿಲ್ಲ ಎಂದು ಲಿಖಿತವಾಗಿ ಖಾತರಿ ಪಡೆದುಕೊಳ್ಳಲು, ಮತ್ತು ಕೌಟುಂಬಿಕ ಹಿಂಸೆಯನ್ನು ತಡೆಯಲು ಸಾಧ್ಯವಾದಷ್ಟು ಅತ್ತ್ಯುತ್ತಮವಾದ ಪರಿಹಾರವನ್ನು ಕಂಡುಕೊಳ್ಳಲು, ಸಲಹೆಗಾರರು ನಿಮಗೆ ನೀಡುವ ವೃತ್ತಿಪರ ಮಾರ್ಗದರ್ಶನಕ್ಕೆ ಸಮಾಲೋಚನೆ ಎನ್ನುತ್ತಾರೆ.

ನಿಮ್ಮನ್ನುದ್ದೇಶಿಸಿ ಅಥವಾ ನಿಮಗೆ ಕಿರುಕುಳ ನೀಡಿದ ವ್ಯಕ್ತಿಯನ್ನುದ್ದೇಶಿಸಿ, ಒಬ್ಬೊಬ್ಬರಾಗಿ ಅಥವಾ ಜೊತೆಯಾಗಿ ನೀವು ನ್ಯಾಯಾಲಯ ನೇಮಿಸಿದ ಸಲಹೆಗಾರರೊಡನೆ ಸಮಾಲೋಚನೆ ಮಾಡಬೇಕು ಎಂದು ನ್ಯಾಯಾಧೀಶರು ಆದೇಶ ಹೊರಡಿಸುತ್ತಾರೆ.

ಕೆಳಗಿನವರು ನಿಮ್ಮ ಪ್ರಕರಣದಲ್ಲಿ ಸಲಹೆಗಾರರಾಗಲು ಬರುವುದಿಲ್ಲ:

  • ೧. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ, ಅಥವಾ ನಿಮ್ಮಿಬರ ಒಪ್ಪಿಗೆಯಿಲ್ಲದೆ, ನಿಮ್ಮ/ನಿಮಗೆ ಕಿರುಕುಳ ನೀಡಿದ ವ್ಯಕ್ತಿಗೆ ಸಂಬಂಧಿಸಿದವರು.
  • ೨. ನಿಮಗೆ ಕಿರುಕುಳ ನೀಡಿದ ವ್ಯಕ್ತಿಯ ಪರ ವಾದಿಸಿದ ವಕೀಲರು

ಯಾವುದೇ ಕಾರಣಕ್ಕೆ ನಿಮಗೆ ನೇಮಕಗೊಂಡ ಸಲಹೆಗಾರರು ಹಿಡಿಸಲಿಲ್ಲವೆಂದಲ್ಲಿ, ಈ ಮಾಹಿತಿಯನ್ನು ನಿಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಬೇಕು. ಹೀಗೆ ಮಾಡಿದಾಗ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು.

ಸಲಹೆಗಾರರ ಪಾತ್ರ:

ಸಲಹೆಗಾರರ ಪಾತ್ರ ಕೆಳಗಿನಂತಿವೆ:

  • ೧. ನಿಮಗೆ ಮತ್ತು ನಿಮಗೆ ಕಿರುಕುಳ ಕೊಟ್ಟ ವ್ಯಕ್ತಿಗೆ ಸಮಂಜಸವಾದ ಜಾಗದಲ್ಲಿ, ನಿಮ್ಮೊಬರೊಡನೆ ಅಥವಾ ನಿಮ್ಮಿಬರೊಡನೆ ಸಂಧಾನ ನಡೆಸುವುದು.
  • ೨. ಕೌಟುಂಬಿಕ ಹಿಂಸೆಯ ಘಟನೆ ಮರುಕಳಿಸಬಾರದು ಎಂಬ ಗುರಿಯನ್ನು ಮುಂದಿಟ್ಟುಕೊಂಡು ಸಲಹೆಗಾರರು ಸಮಾಲೋಚನೆಯ ಪ್ರಕ್ರಿಯೆಯನ್ನು ನಡೆಸಬೇಕು. ಈ ನಿಟ್ಟಿನಲ್ಲಿ, ಕೆಳಗಿನ ಭರವಸೆಗಳುಳ್ಳ ದಾಖಲಾ ಪಾತ್ರವನ್ನು ನಿಮಗೆ ಕಿರುಕುಳ ನೀಡಿದ ವ್ಯಕ್ತಿಯಿಂದ

ಅವರು ತೆಗೆದುಕೊಳ್ಳಬಹುದು:

  • – ಮತ್ತೆ ಎಂದೂ ಕೌಟುಂಬಿಕ ಹಿಂಸೆಯನ್ನು ಪುನರಾವರ್ತಿಸುವುದಿಲ್ಲ
  • – ನಿಮ್ಮನ್ನು ಪತ್ರಗಳು, ದೂರವಾಣಿ, ಈ-ಮೇಲ್, ಅಥವಾ ಇನ್ನ್ಯಾವುದೋ ಮಾಧ್ಯಮದ ಮುಖಾಂತರ ಭೇಟಿಯಾಗಲು, ಅಥವಾ ಸಂಪರ್ಕಿಸಲು ಪ್ರಯತ್ನಿಸುವುದಿಲ್ಲ (ನ್ಯಾಯಾಧೀಶರು ಅನುವು ಮಾಡಿಕೊಟ್ಟ ಮಾಧ್ಯಮಗಳು, ಅಥವಾ ಸಲಹೆಗಾರರ ಉಪಸ್ಥಿತಿಯಲ್ಲಿ ಭೇಟಿಯಾಗುವುದನ್ನು ಹೊರತುಪಡಿಸಿ)
  • – ನ್ಯಾಯಾಲಯದ ಹೊರಗೆ ಒಪ್ಪಂದದ ಮೇರೆಗೆ ನಿಮ್ಮ ಸಮಸ್ಯೆಯನ್ನು ಬಗೆಹರಿಸಿ, ಪ್ರಕರಣವನ್ನು ಅಂತ್ಯಗೊಳಿಸುವುದಾಗಿ ನೀವು ನಿಶ್ಚಯಿಸಿದಲ್ಲಿ, ಸಲಹೆಗಾರರಿಗೆ ಇದನ್ನು ತಿಳಿಸಬೇಕು. ಆಗ ಅವರು ಎಲ್ಲರಿಗೂ ಸಮಂಜಸವೆನಿಸುವ ಪರಿಹಾರವನ್ನು ಸೂಚಿಸುತ್ತಾರೆ.

ಸಮಾಲೋಚನೆಯ ಸಂದರ್ಭದಲ್ಲಿ, ನಿಮಗೆ ಹಿಂಸೆ ನೀಡಿದ ವ್ಯಕ್ತಿ, ಯಾಕೆ ಹಾಗೆ ಮಾಡಿದರು ಎಂದು ಸಮರ್ಥನೆ ನೀಡಲು ಅವಕಾಶವಿರುವುದಿಲ್ಲ. ಸಮಾಲೋಚನೆಯ ನಂತರ, ಸಲಹೆಗಾರರು ನಡೆದ ಪ್ರಕ್ರಿಯೆಯ ವರದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ. ಹಾಗು, ಸಮಾಲೋಚನೆ ಮುಗಿದ ೨ ತಿಂಗಳುಗಳೊಳಗೆ, ನ್ಯಾಯಾಲಯವು ಪ್ರಕರಣದ ಮುಂದಿನ ದಿನಾಂಕವನ್ನು ನಿಶ್ಚಯಿಸುತ್ತದೆ. ಒಂದು ವೇಳೆ ಸಮಾಲೋಚನೆಯ ಮುಖಾಂತರ ಒಪ್ಪಂದ ಆಗಲಿಲ್ಲವೆಂದರೆ, ಕಾರಣಗಳನ್ನು ಸಲಹೆಗಾರರು ನ್ಯಾಯಾಲಯಕ್ಕೆ ಹೇಳಬೇಕಾಗುತ್ತದೆ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.