ಮಕ್ಕಳು ನಾಟಕೀಯ ಧಾರಾವಾಹಿಗಳು, ಚಲನಚಿತ್ರಗಳು, ದೂರದರ್ಶನದಲ್ಲಿ ಬರುವ ಸಾಕ್ಷ್ಯಚಿತ್ರಗಳು, ಪ್ರದರ್ಶನದ ಮುಖ್ಯ ಸಂಚಾಲಕರಾಗಿ, ಅಥವಾ ಆಯಾ ಸಂದರ್ಭಗಳಲ್ಲಿ ಕೇಂದ್ರೀಯ ಸರ್ಕಾರ ಅನುಮತಿ ಮಾಡಿಕೊಟ್ಟ ಇನ್ನಿತರ ಕಲಾತ್ಮಕ ಪ್ರದರ್ಶನಗಳಲ್ಲಿ ಭಾಗವಹಿಸಬಹುದು. ಆದರೆ, ಬೀದಿ ಬದಿಗಳಲ್ಲಿ ದುಡ್ಡಿಗೋಸ್ಕರ ಪ್ರದರ್ಶನಗಳನ್ನು ಮಾಡುವುದು ಈ ಅನುಮತಿಸಲಾದ ಚಟುವಟಿಕೆಗಳಲ್ಲಿ ಬರುವುದಿಲ್ಲ.
ಮಕ್ಕಳು ಚಲನಚಿತ್ರಗಳಲ್ಲಿ/ದೂರದರ್ಶನದಲ್ಲಿ/ಕ್ರೀಡೆಗಳಲ್ಲಿ ಭಾಗವಹಿಸಿ ದುಡ್ಡು ಗಳಿಸಬಹುದು. ಇಂತಹ ಮಕ್ಕಳಿಗೆ ಬಾಲ ಕಲಾವಿದರು ಎನ್ನುತ್ತಾರೆ. ಚಲನಚಿತ್ರಗಳು/ದೂರದರ್ಶನ/ಕ್ರೀಡೆಗೆ ಸಂಬಂಧಿಸಿದಂತೆ, ಅನುಮತಿಸಲಾದ ಮನೋರಂಜನಾ ಮತ್ತು ಕ್ರೀಡಾ ಚಟುವಟಿಕೆಗಳ ಪಟ್ಟಿ ಇಲ್ಲಿದೆ:
- ಚಲನಚಿತ್ರಗಳು
- ದೂರದರ್ಶನದಲ್ಲಿನ ಕಾರ್ಯಕ್ರಮಗಳು/ರಿಯಾಲಿಟಿ ಶೋ/ರಸಪ್ರಶ್ನೆ ಕಾರ್ಯಕ್ರಮಗಳು/ಪ್ರತಿಭಾ ಕಾರ್ಯಕ್ರಮಗಳು
- ಕ್ರೀಡೆಗಳಿಗೆ ಸಂಬಂಧಿಸಿದ ಸ್ಪರ್ಧೆಗಳು, ಒಕ್ಕೂಟಗಳು, ತರಬೇತಿ ಶಿಬಿರಗಳು
- ಜಾಹಿರಾತುಗಳು
- ಸಿನಿಮಾ/ಸಾಕ್ಷ್ಯಚಿತ್ರಗಳು
- ಆಕಾಶವಾಣಿ
- ಸಮಾರಂಭಗಳ ಮುಖ್ಯ ಸಂಚಾಲಕರಾಗಿ ಭಾಗವಹಿಸುವುದು ಮೇಲೆ ಉಲ್ಲೇಖಿಸಲಾಗದ ಕೆಲವು ಕಲಾತ್ಮಕ ಪ್ರದರ್ಶನಗಳನ್ನು ಕೇಂದ್ರೀಯ ಸರ್ಕಾರ ಅನುಮತಿಸಬಹುದು.
ಕಾನೂನು ನಿಶ್ಚಿತವಾಗಿ ಕೆಳಗಿನ ಚಟುವಟಿಕೆಗಲ್ಲಿ ಮಕ್ಕಳ ಭಾಗವಹಿಸುವಿಕೆಯನ್ನು ನಿಷೇಧಿಸಿದೆ:
- ಸರ್ಕಸ್ ನಲ್ಲಿ ಪ್ರದರ್ಶನ ನೀಡುವುದು
- ಬೀದಿ ಬದಿಯಲ್ಲಿ ದುಡ್ಡಿಗೋಸ್ಕರ ಪ್ರದರ್ಶನ ನೀಡುವುದು