ಬಾಲ್ಯ ವಿವಾಹದಿಂದ ಹುಟ್ಟಿದ ಮಕ್ಕಳು

ಕೊನೆಯ ಅಪ್ಡೇಟ್ Sep 27, 2022

ಬಾಲ್ಯ ವಿವಾಹವು ರದ್ದುಗೊಂಡಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಕಾನೂನು, ಬಾಲ್ಯ ವಿವಾಹದಿಂದಾಗಿ ಹುಟ್ಟಿದ ಎಲ್ಲ ಮಕ್ಕಳನ್ನು ಧರ್ಮಜ ಮಕ್ಕಳನ್ನಾಗಿ ಪರಿಗಣಿಸುತ್ತದೆ.

ಮಕ್ಕಳ ಪಾಲನೆ-ಪೋಷಣೆ:

ಮಕ್ಕಳ ಪಾಲನೆ-ಪೋಷಣೆಯ ಹೊಣೆ ಯಾರದ್ದಾಗಿರಬೇಕು ಎಂಬುದನ್ನು ಜಿಲ್ಲಾ ನ್ಯಾಯಾಲಯವು ಮದುವೆ ರದ್ದು ಮಾಡುವ ಮನವಿಯನ್ನು ಕೇಳುವ ಸಮಯದಲ್ಲಿ ತೀರ್ಮಾನಿಸುತ್ತದೆ. ಈ ನಿರ್ಣಯವನ್ನು ಮಾಡುವ ಹೊತ್ತಿನಲ್ಲಿ ನ್ಯಾಯಾಲಯವು ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬಹುದು:

  • ನ್ಯಾಯಾಲಯವು ಪಾಲನೆ-ಪೋಷಣೆಯ ನಿರ್ಣಯವನ್ನು ಮಾಡುತ್ತಿರುವಾಗ ಅತಿಮುಖ್ಯವಾಗಿ ಮಗುವಿನ ಕಲ್ಯಾಣ ಮತ್ತು ಯೋಗಕ್ಷೇಮಕ್ಕೆ ಒತ್ತು ನೀಡುತ್ತದೆ.
  • ಮಗುವಿನ ಯೋಗಕ್ಷೇಮಕ್ಕೆ ಸರಿ ಎನಿಸಿದರೆ ವಿರುದ್ಧ ಪಕ್ಷದವರಿಗೆ ಮಗುವನ್ನುಆಗಾಗ್ಗೆ ಭೇಟಿಯಾಗಲು ಅನುಮತಿ ನೀಡುತ್ತದೆ.
  • ಜಿಲ್ಲಾ ನ್ಯಾಯಾಲಯವು ಗಂಡನಿಗೆ, ಅಥವಾ ಅವನ ತಂದೆ-ತಾಯಿ/ಪೋಷಕರಿಗೆ (ಗಂಡ ಅಪ್ರಾಪ್ತ ವಯಸ್ಕನಿದ್ದಾಗ), ಅವನ ಹೆಂಡತಿಯಾದ ಹುಡುಗಿಗೆ ಜೀವನಾಂಶ ಕೊಡುವುದಾಗಿ ಆದೇಶಿಸಬಹುದು.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.