ವಿವಾಹ ಪ್ರಮಾಣಪತ್ರಗಳನ್ನು ನೀಡುವ ಅಧಿಕೃತ ವ್ಯಕ್ತಿಯಿಂದ ಮದುವೆ ನೆರವೇರಿಸುವ ಕಾರ್ಯವಿಧಾನ

ಕೊನೆಯ ಅಪ್ಡೇಟ್ Dec 6, 2022

ಕಾನೂನಿನ ಪ್ರಕಾರ, ವಿವಾಹ ಪ್ರಮಾಣಪತ್ರವನ್ನು ನೀಡುವ ಅಧಿಕಾರವುಳ್ಳ ವ್ಯಕ್ತಿಯು ರೋಮನ್ ಕ್ಯಾಥೋಲಿಕ್ ಧರ್ಮದವರಲ್ಲದ ಭಾರತೀಯ ಕ್ರಿಶ್ಚಿಯನ್ನರ ಮದುವೆಯನ್ನು ಮಾತ್ರ ಪ್ರಮಾಣೀಕರಿಸಬಹುದು. ಈ ನಿಬಂಧನೆಗಳ ಪ್ರಕಾರ, ಯಾವುದೇ ಇಬ್ಬರು ಭಾರತೀಯ ಕ್ರಿಶ್ಚಿಯನ್ನರು, ಪೂರ್ವಾಭಾವಿ ಸೂಚನೆಯನ್ನು ನೀಡದೆ, ಕೆಳಗಿನ ಷರತ್ತುಗಳನ್ನು ಪೂರೈಸಿ ಮದುವೆಯಾಗಬಹುದು:

  • ೧. ವರ ೨೧ರ ಮೇಲಿದ್ದು, ವಧು ೧೮ರ ಮೇಲಿರಬೇಕು.
  • ೨. ಇವರಿಬ್ಬರಿಗೂ ಜೀವಂತ ಗಂಡ/ಹೆಂಡತಿ ಇರಬಾರದು.
  • ೩. ಕಾನೂನು ನಿಗದಿಪಡಿಸಿದ ಪ್ರಮಾಣವಚನವನ್ನು ಇವರಿಬ್ಬರೂ, ವಿವಾಹ ಪ್ರಮಾಣಪತ್ರಗಳನ್ನು ನೀಡುವ ಅಧಿಕೃತ ವ್ಯಕ್ತಿ ಹಾಗು ಇಬ್ಬರು ಸಾಕ್ಷಿದಾರರ ಸಮಕ್ಷಮ ಸ್ವೀಕರಿಸಬೇಕು.

ಒಂದು ಪಕ್ಷದಿಂದ ಅರ್ಜಿಯನ್ನು ಸ್ವೀಕರಿಸಿದ್ದಲ್ಲಿ, ಪರವನಾಗಿ ಪಡೆದ ವ್ಯಕ್ತಿಯು ಮೇಲಿನ ಷರತ್ತುಗಳು ಈಡೇರಿವೆಯೋ ಇಲ್ಲವೋ ಎಂದು ಪರಿಶೀಲಿಸಿ, ಮದುವೆಯಾಗಲು ಪ್ರಮಾಣಪತ್ರವನ್ನು ನೀಡುತ್ತಾರೆ. ಇಂತಹ ಪ್ರಮಾಣಪತ್ರವನ್ನು ಪಡೆಯಲು ನೀಡಬೇಕಾದ ಶುಲ್ಕ ೨೫ ಪೈಸೆಯಾಗಿದೆ. ಈ ಪ್ರಮಾಣಪತ್ರವು ಮದುವೆಯ ನಿರ್ಣಾಯಕ ಪುರಾವೆಯಾಗಿದೆ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.