ನಿಮ್ಮ ಮಗು ಕೌಟುಂಬಿಕ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರೂ ಕೂಡ, ಶಾಲೆಯನ್ನು ಬಿಡತಕ್ಕದ್ದಲ್ಲ. ಕಾನೂನು ಮಕ್ಕಳ ಶಿಕ್ಷಣಕ್ಕೆ ಅತ್ಯಂತ ಮಹತ್ವ ನೀಡಿದ್ದು, ಶಾಲಾ ವೇಳೆಯಲ್ಲಿ ಕೆಲಸ ಮಾಡಬಾರದೆಂದು, ಮತ್ತು ರಾತ್ರಿ ೭ರಿಂದ ಬೆಳಿಗ್ಗೆ ೮ರ ಮಧ್ಯೆಯೂ ಕೆಲಸ ಮಾಡಬಾರದೆಂಬ ನಿಯಮಗಳನ್ನು ಜಾರಿಗೆ ತಂದಿದೆ.

ಕೌಟುಂಬಿಕ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳು

ಕೊನೆಯ ಅಪ್ಡೇಟ್ Oct 29, 2022

೧೪ ವರ್ಷಗಳ ಕೆಳಗಿನ ಮಕ್ಕಳು ಮತ್ತು ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳಿಗೆ ಕೌಟುಂಬಿಕ ಉದ್ಯಮದಲ್ಲಿ ಕೆಲಸ ಮಾಡುವ ಅನುಮತಿ ಇದೆ.

ಕೌಟುಂಬಿಕ ಉದ್ಯಮ:

ಕುಟುಂಬದ ಸದಸ್ಯರಿಂದ ನಡೆಸಲಾದ/ನಿರ್ವಹಿಸಲಾದ ಯಾವುದೇ ಕೆಲಸ/ಉದ್ಯಮಕ್ಕೆ ಕೌಟುಂಬಿಕ ಉದ್ಯಮ ಎನ್ನುತ್ತಾರೆ. ಈ ಉದ್ಯಮ ಕುಟುಂಬದ ನಿಕಟ ಸದಸ್ಯರಿಂದ (ಅಮ್ಮ, ಅಪ್ಪ, ಅಕ್ಕ, ಅಣ್ಣ), ಅಥವಾ ದೂರದ ಸದಸ್ಯರಿಂದ (ಅಪ್ಪನ ಅಕ್ಕ/ಅಣ್ಣ, ಅಮ್ಮನ ಅಕ್ಕ/ಅಣ್ಣ) ನಡೆಸುತ್ತಿರಬಹುದು, ಅಥವಾ ಅವರಿಗೆ ಸೇರಿರಬಹುದು.

ಕೆಲಸದ ತರಹಗಳು:

  • ಅಪಾಯಕಾರಿ ಪದಾರ್ಥಗಳು ಅಥವಾ ಪ್ರಕ್ರಿಯೆಗಳು
  • ಗಣಿಗಳು, ದಹಿಸಬಲ್ಲ ಪದಾರ್ಥಗಳು ಮತ್ತು ಸ್ಫೋಟಕ ವಸ್ತುಗಳು

ಮಕ್ಕಳಿಗೆ ಕೌಟುಂಬಿಕ ಉದ್ಯಮದಲ್ಲಿ ಕೆಲಸ ಮಾಡುವ ಹಕ್ಕಿದೆ, ಆದರೆ ಅವರ ಶಿಕ್ಷಣಕ್ಕೆ ಇದರಿಂದ ಕುತ್ತು ಬರಬಾರದು. ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:

  • ಮಕ್ಕಳಿಗೆ ಶಿಕ್ಷಣದ ಹಕ್ಕಿದೆ
  • ಕೇವಲ ಶಾಲಾ ವೇಳೆಯ ನಂತರ ಅಥವಾ ರಾಜಾ ದಿನಗಳಲ್ಲಿ ಅವರನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಕು
  • ಕಾನೂನಿನಡಿಯಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವುದು ತಂದೆ-ತಾಯಿಯರ ಕರ್ತವ್ಯ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.