ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಧಗಳು

ಕೊನೆಯ ಅಪ್ಡೇಟ್ Sep 1, 2022

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಭಾರತೀಯ ಕಾನೂನು ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯದ ವಿಧಗಳನ್ನು ಮಗುವಿನ ಲಿಂಗವನ್ನು ಲೆಕ್ಕಿಸದೆ ವಿವಿಧ ರೀತಿಯ ಅಪರಾಧಗಳಾಗಿ ವರ್ಗೀಕರಿಸುತ್ತದೆ. ಕೆಲವು ಶಿಕ್ಷಾರ್ಹ ಅಪರಾಧಗಳನ್ನು ಕೆಳಗೆ ನೀಡಲಾಗಿದೆ:

ಅಶಾರೀರಿಕ ನಡವಳಿಕೆ

ಸನ್ನೆಗಳು, ಮಾತು ಮತ್ತು ದೃಶ್ಯಗಳ ಮೂಲಕ ಯಾವುದೇ ಅಶಾರೀರಿಕ ಲೈಂಗಿಕ ನಡವಳಿಕೆ. ಉದಾಹರಣೆಗೆ, ಮಗುವಿನ ಜನನೇಮದ್ರಿಯದ ಭಾಗಗಳಿಗೆ ಸನ್ನೆ ಮಾಡುವುದು ಅಥವಾ ಬೆತ್ತಲೆ ಚಿತ್ರಗಳನ್ನು ತೋರಿಸುವುದು. ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಯಾವುದೇ ಕ್ರಿಯೆ, ಅದರ ರಚನೆ, ವಿತರಣೆ, ಪ್ರಸರಣ, ಪ್ರಕಟಣೆ ಇತ್ಯಾದಿ. ಮಗುವಿಗೆ ಯಾವುದೇ ಔಷಧಿ, ಹಾರ್ಮೋನ್ ಅಥವಾ ಯಾವುದೇ ರಾಸಾಯನಿಕ ಪದಾರ್ಥವನ್ನು ನೀಡುವುದು ಇದರಿಂದ ಮಗುವು ವಯಸ್ಸಾಗುವ ಮೊದಲೇ ಲೈಂಗಿಕ ಪ್ರಬುದ್ಧತೆಯನ್ನು ಪಡೆಸುವುದು.

ಶಾರೀರಿಕ ನಡವಳಿಕೆ

ಲೈಂಗಿಕವಾಗಿ ಸೂಕ್ತವಲ್ಲದ ರೀತಿಯಲ್ಲಿ ಮಗುವನ್ನು ಸ್ಪರ್ಶಿಸುವುದು. ಉದಾಹರಣೆಗೆ, ಮಗುವಿನ ಜನನೇಮದ್ರಿಯದ ಭಾಗಗಳನ್ನು ಸ್ಪರ್ಶಿಸುವುದು. ಮಗುವಿನ ಮೇಲೆ ಶಿಶ್ನ ಅಥವಾ ಇತರ ಯಾವುದೇ ವಸ್ತುವಿನ ಒಳಹೊಕ್ಕು ಮೂಲಕ ಲೈಂಗಿಕ ದೌರ್ಜನ್ಯ.

ಲೈಂಗಿಕ ದೌರ್ಜನ್ಯದ ಯತ್ನ

ಒಬ್ಬ ವ್ಯಕ್ತಿಯು ಒಂದು ಮಗುವಿನ ಮೇಲೆ ಯಾವುದೇ ಲೈಂಗಿಕ ಅಪರಾಧವನ್ನು ಮಾಡಲು ಪ್ರಯತ್ನಿಸಿದರೆ, ಇದು ಕೂಡ ಅಪರಾಧವೇ. ಅಪರಾಧಿಯು ನಿಜವಾಗಿ ಅಪರಾಧವನ್ನು ಮಾಡದಿದ್ದರೂ ಸಹ, ಕೇವಲ ಪ್ರಯತ್ನವು ಅವರನ್ನು ಹೊಣೆಗಾರರನ್ನಾಗಿ ಮಾಡುತ್ತದೆ.

ಇದಲ್ಲದೆ, ಕಾನೂನು ಅಪರಾಧ ಮಾಡುವ ವ್ಯಕ್ತಿಯ ಆಧಾರದ ಮೇಲೆ ಕೂಡ ವ್ಯತ್ಯಾಸವನ್ನು ಮಾಡುತ್ತದೆ. ಉದಾಹರಣೆಗೆ, ಶಿಕ್ಷಕ ಅಥವಾ ಪೊಲೀಸ್ ಅಧಿಕಾರಿಯಂತಹ ಮಗುವಿಗೆ ನಂಬಿಕೆ ಅಥವಾ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಯು ಯಾವುದೇ ಲೈಂಗಿಕ ದೌರ್ಜನ್ಯವನ್ನು ಮಾಡಿದರೆ, ಶಿಕ್ಷೆಯು ಹೆಚ್ಚು. ಕಿರುಕುಳ ನೀಡುವವರು ಮತ್ತು ಮಗುವಿನ ನಡುವಿನ ವಿಶ್ವಾಸಾರ್ಹ ಸಂಬಂಧವನ್ನು ಎತ್ತಿ ತೋರಿಸಲು ಕಾನೂನು ಈ ರೀತಿಯ ದೌರ್ಜನ್ಯವನ್ನು “ಉಲ್ಭಣಗೊಂಡ” ಎಂದು ವ್ಯಾಖ್ಯಾನಿಸುತ್ತದೆ. ನಮ್ಮ ಈ ವಿವರಣೆಯಲ್ಲಿ ಇನ್ನಷ್ಟು ಓದಿ “ಅಧಿಕಾರದಲ್ಲಿರುವ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯದ ಉಲ್ಬಣಗೊಂಡ ಅಪರಾಧ ಅಂದರೆ ಯಾವುದು?”.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.