ಅಮಾನ್ಯವಾದ ದತ್ತು ಸ್ವೀಕಾರದ ಸಂದರ್ಭದಲ್ಲಿ, ದತ್ತು ಪಡೆದ ಮಗುವು ದತ್ತು ಪಡೆದ ಕುಟುಂಬದಲ್ಲಿ ಯಾವುದೇ ಹಕ್ಕನ್ನು ಪಡೆಯುವುದಿಲ್ಲ ಮತ್ತು ಜೈವಿಕ ಕುಟುಂಬದಲ್ಲಿ ಮಗುವಿಗೆ ಅರ್ಹವಾದ ಯಾವುದೇ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ.

ದತ್ತು ಸ್ವೀಕೃತಿಯ ಪರಿಣಾಮಗಳು

ಕೊನೆಯ ಅಪ್ಡೇಟ್ Nov 28, 2022

ನೀವು ಯಾವುದೇ ಕಾನೂನಿನಡಿಯಲ್ಲಿ ದತ್ತು ಪಡೆದಿರಲಿ, ಅದರ ಪರಿಣಾಮಗಳು ಹೀಗಿವೆ:

  • ದತ್ತು ತಂದೆ-ತಾಯಿಯ ಮಗು: ಎಲ್ಲ ಉದ್ದೇಶಗಳಿಗೆ, ಮಗು ದತ್ತು ತಂದೆ-ತಾಯಿಯರದ್ದು, ಹಾಗು ದತ್ತು ತಂದೆ-ತಾಯಿಯರು ಮಗುವಿನ ಜೈವಿಕ ತಂದೆ-ತಾಯಿಯರಂತೆ ಕಾನೂನು ಪರಿಗಣಿಸುತ್ತದೆ.
  • ಮಗುವಿನ ಕೌಟುಂಬಿಕ ಸಂಪರ್ಕಗಳು: ಮಗುವಿನ ಹುಟ್ಟು ಕುಟುಂಬದ ನೆಂಟರ ಜೊತೆಗಿನ ಸಂಪರ್ಕಗಳು ಮುರಿದು, ದತ್ತು ಕುಟುಂಬದ ಸದಸ್ಯರೊಡನೆ ಸಂಪರ್ಕಗಳು ಗುರುತಿಸಲಾಗುತ್ತವೆ. ಆದರೆ, ಹಿಂದೂ ಕಾನೂನಿನ ಪ್ರಕಾರ, ದತ್ತು ಕೊಟ್ಟ ವ್ಯಕಿ, ತನ್ನ ಹುಟ್ಟು ಕುಟುಂಬದ ಯಾವುದೇ ನಿಷೇಧಿತ ಸದಸ್ಯರನ್ನು ಮದುವೆಯಾಗಲಾರರು.
  • ಮಗುವಿನ ಆಸ್ತಿ ಹಕ್ಕು: ದತ್ತು ಕೊಡುವುದಕ್ಕೆ ಮುನ್ನ ಆ ವ್ಯಕ್ತಿಯ ಹೆಸರಿನ ಮೇಲಿದ್ದ ಎಲ್ಲ ಆಸ್ತಿ ಅವರದ್ದೇ ಆಗಿರುತ್ತದೆ, ಆ ಆಸ್ತಿಯ ಜೊತೆಗಿದ್ದ ಕಟ್ಟುಪಾಡುಗಳ ಸಹಿತ (ಜೈವಿಕ ಕುಟುಂಬದ ಸದಸ್ಯರ ಆರೈಕೆಯ ಕರ್ತವ್ಯ ಸೇರಿದಂತೆ).

ಆದಾಗ್ಯೂ, ಹಿಂದೂ ದತ್ತು ಸ್ವೀಕಾರ ಕಾನೂನಿನ ಪ್ರಕಾರ, ಮಗುವಿನ ದತ್ತು ಸ್ವೀಕೃತಿ ಆದೇಶ ಹೊರಡಿಸಿದ ದಿನದಿಂದ:

  • ಮಗುವಿನ ಆಸ್ತಿ ಹಕ್ಕು: ಮಗುವಿನ ದತ್ತು ತೆಗೆದುಕೊಳ್ಳುವ ಮುಂಚೆ ಯಾರಿಗೆ ಆಸ್ತಿ ಹಾಕು ಇತ್ತೋ, ಅವರಿಂದ ಆ ದತ್ತುಕ ವ್ಯಕ್ತಿ ಆಸ್ತಿ ಪಾಲು ಕೇಳಲಾರರು. ಹಾಗು, ದತ್ತು ತಂದೆ-ತಾಯಿಯರು ತಮ್ಮ ಉಯಿಲಿನ ಮುಖಾಂತರ ಅಥವಾ ಇನ್ನಿತರ ಕಾನೂನುಗಳ ಸಹಾಯದಿಂದ ತಮ್ಮ ಆಸ್ತಿಯ ಒಡೆತನ ಬೇರೆಯವರ ಹೆಸರಲ್ಲಿ ಕೂಡ ವರ್ಗಾವಣೆ ಮಾಡಬಹುದು.
  • ಮಾನ್ಯ ದತ್ತು ಸ್ವೀಕೃತಿಯನ್ನು ರದ್ದುಪಡಿಸುವುದು: ದತ್ತು ತಂದೆ-ತಾಯಿ ಅಥವಾ ಬೇರೋರ್ವ ವ್ಯಕ್ತಿ ಮಾನ್ಯ ದತ್ತು ಸ್ವೀಕೃತಿಯನ್ನು ರದ್ದು ಪಡಿಸಲು ಸಾಧ್ಯವಿಲ್ಲ. ಒಮ್ಮೆ ದತ್ತು ಪಡೆದ ಮೇಲೆ ಆ ಮಗು ದತ್ತುಕ ಕುಟುಂಬವನ್ನು ತಿರಸ್ಕರಿಸಿ, ಜೈವಿಕ ಕುಟುಂಬಕ್ಕೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.