ಪೋಷಕರು
- Legal Explainers (37)
ದತ್ತು ಸ್ವೀಕಾರ ಎಂದರೇನು?
ಭಾವೀ ದತ್ತು ತಂದೆ-ತಾಯಂದಿರು ಕಾನೂನುಬದ್ಧವಾಗಿ ಒಂದು ಮಗುವಿನ ಜವಾಬ್ದಾರಿ, ಆ ಮಗುವಿನ ಹಕ್ಕುಗಳು, ಸವಲತ್ತುಗಳು, ಮತ್ತು ಜವಾಬ್ದಾರಿಗಳ ಸಹಿತ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ದತ್ತು ಸ್ವೀಕಾರ ಎನ್ನುತ್ತಾರೆ
ಮಕ್ಕಳು ತಂದೆ-ತಾಯಂದಿರನ್ನು ನೋಡಿಕೊಳ್ಳುವುದು
ಭಾರತೀಯ ಕಾನೂನಿನ ಪ್ರಕಾರ ಎಲ್ಲ ವ್ಯಕ್ತಿಗಳು ತಮ್ಮ ತಂದೆ-ತಾಯಂದಿರನ್ನು ನೋಡಿಕೊಳ್ಳಬೇಕು ಮತ್ತು ಅವರ ಆಸರೆಯಾಗಬೇಕು ಎಂದಿದೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣ
ಈ ವಿವರಣೆಯು ಶಿಕ್ಷಣದ ಹಕ್ಕನ್ನು ಚರ್ಚಿಸುತ್ತದೆ, ಇದು ಆರ್ಟಿಕಲ್ 21A, ಭಾರತದ ಸಂವಿಧಾನ, 1950 ರ ಅಡಿಯಲ್ಲಿ ಖಾತ್ರಿಪಡಿಸಲಾದ ಮೂಲಭೂತ ಹಕ್ಕು. ಈ ವಿವರಣೆ ಪ್ರಾಥಮಿಕವಾಗಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ, 2009 ರಲ್ಲಿ ರೂಪಿಸಲಾದ ಕಾನೂನಿನ ಬಗ್ಗೆ ಚರ್ಚಿಸುತ್ತದೆ.
ಹಿರಿಯ ನಾಗರಿಕರನ್ನು ತ್ಯಜಿಸಿದರೆ ಅಥವಾ ನಿರ್ಲಕ್ಷಿಸಿದರೆ ಶಿಕ್ಷೆ
ನೀವು ಒಬ್ಬ ಹಿರಿಯ ನಾಗರಿಕರನ್ನು ಯಾವುದೇ ಜಾಗದಲ್ಲಿ ಅವರನ್ನು ತ್ಯಜಿಸುವುದಕ್ಕಾಗಲಿ ಅಥವಾ ಅವರ ಕಾಳಜಿ ತೆಗೆದುಕೊಳ್ಳಬಾರದು ಎಂಬ ಉದ್ದೇಶದಿಂದ ಬಿಟ್ಟು ಹೋದಲ್ಲಿ, ನಿಮಗೆ ೩ ತಿಂಗಳ ಸೆರೆಮನೆ ವಾಸ ಮತ್ತು/ಅಥವಾ ೫೦೦೦ ರೂಪಾಯಿಗಳ ದಂಡ ವಿಧಿಸಲಾಗುವುದು.
ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ
6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳು 1ನೇ ತರಗತಿಯಿಂದ 8ನೇ ತರಗತಿವರೆಗೆ ಉಚಿತವಾಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಬಹುದು. ನೆರೆಹೊರೆ ಶಾಲೆಗಳನ್ನು ಸಮೀಪಿಸಿ ಮಕ್ಕಳು ನೆರೆಹೊರೆ ಶಾಲೆಗಳಲ್ಲಿ ತರಗತಿಗಳಿಗೆ ಹಾಜರಾಗಬಹುದು. ಈ ನೆರೆಹೊರೆ ಶಾಲೆಗಳು ಕೆಳಕಂಡ ನಡೆಯಬಹುದಾದ ದೂರದಲ್ಲಿ ಸ್ಥಾಪಿಸಿರಬೇಕು: ಮಗುವಿನ ನೆರೆಹೊರೆಯಿಂದ ಒಂದು ಕಿಲೋಮೀಟರ್ (ಮಗು I ರಿಂದ V ನೇ ತರಗತಿಯಲ್ಲಿದ್ದರೆ) ಮತ್ತು ಮಗುವಿನ ನೆರೆಹೊರೆಯಿಂದ ಮೂರು ಕಿಲೋಮೀಟರ್ (ಮಗು VI ರಿಂದ VIII ನೇ ತರಗತಿಯಲ್ಲಿದ್ದರೆ). ಆದಾಗ್ಯೂ, ಕಾನೂನು ಮಕ್ಕಳ ಶಿಕ್ಷಣವನ್ನು ನೆರೆಹೊರೆ […]
ಜೀವನಾಂಶದ ಮೊತ್ತ
ತಂದೆ-ತಾಯಿಗೆ ಕೊಡಬೇಕಾದ ಜೀವನಾಂಶದ ಮೊತ್ತ ಎಲ್ಲರಿಗೂ ಸಮನಾಗಿರುವಂತೆ ಕಾನೂನು ನಿಗದಿಪಡಿಸಿಲ್ಲ. ಆಯಾ ಪ್ರಕರಣಗಳ ಸಂದರ್ಭಾನುಸಾರ ಈ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಈ ಕೆಳಗಿನ ಅಂಶಗಳ ಮೇಲೆ ನ್ಯಾಯಾಲಯವು ಜೀವನಾಂಶದ ಮೊತ್ತವನ್ನು ನಿಗದಿಪಡಿಸುತ್ತದೆ:
ಶಾಲೆಗಳ ವಿವಿಧ ವರ್ಗಗಳು
ಈ ಕೆಳಕಂಡ ಶಾಲೆಗಳು ಮಕ್ಕಳ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣಕ್ಕಾಗಿ ನಿಬಂಧನೆಗಳನ್ನು ಮಾಡುವ ಜವಾಬ್ದಾರಿಯನ್ನು ಹೊಂದಿವೆ.
ಮಗುವನ್ನು ಯಾರು ದತ್ತು ನೀಡಬಹುದು?
ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನ ಪ್ರಕಾರ, ನಿಮ್ಮ ಮಗುವನ್ನು ನೀವು ದತ್ತು ನೀಡುವಂತಿಲ್ಲ, ಆದರೆ ಆ ಮಗುವಿನ ತಂದೆ/ತಾಯಿ/ಪೋಷಕರ ಅಧಿಕಾರದಲ್ಲಿ ಮಗುವನ್ನು ಬಿಟ್ಟುಕೊಡಬಹುದಾಗಿದೆ.
ಹಿಂದೂ ಕಾನೂನಿನಡಿ ಜೀವನಾಂಶ
ಹಿಂದೂ ದತ್ತು ಮತ್ತು ಜೀವನಾಂಶ ಕಾಯಿದೆಯಡಿ ಯಾವುದೇ ಹಿಂದೂ, ಬೌಧ್ಧ, ಜೈನ, ಅಥವಾ ಸಿಖ್ ಧರ್ಮಕ್ಕೆ ಸೇರಿದ, ವಯಸ್ಸಾದ/ಅಶಕ್ತ, ಜೈವಿಕ ಅಥವಾ ದತ್ತು ತಂದೆ-ತಾಯಂದಿರು, ಅವರ ಗಳಿಕೆ ಮತ್ತು ಆಸ್ತಿಯಿಂದ ಜೀವನ ನಡೆಸಲು ಅಸಾಧ್ಯವಾದಾಗ ತಮ್ಮ ವಯಸ್ಕ ಮಕ್ಕಳಿಂದ ಜೀವನಾಂಶ ಪಡೆಯಬಹುದು.
ಪೋಷಕರ ಜವಾಬ್ದಾರಿ
ಬಹಳಷ್ಟು ಅಪರಾಧಗಳಲ್ಲಿ, ಆರೋಪಿಗಳ ಅಪರಾಧವನ್ನು ಸಾಬೀತುಪಡಿಸುವ ಜವಾಬ್ದಾರಿ ಸರ್ಕಾರಿ ಅಭಿಯೋಜಕರದ್ದಾಗಿರುತ್ತದೆ.
ಶಾಲೆಗಳಿಗೆ ಪ್ರವೇಶ ನಿರಾಕರಣೆ
ಯಾವುದೇ ಶೈಕ್ಷಣಿಕ ವರ್ಷದಲ್ಲಿ ಪ್ರವೇಶವನ್ನು ಕೋರಿದ ಸಮಯ ಏನೇ ಆದರೂ, ಯಾವುದೇ ಮಗುವಿಗೆ ಶಾಲೆಗೆ ಪ್ರವೇಶವನ್ನು ನಿರಾಕರಿಸಲಾಗುವುದಿಲ್ಲ.
ಕಾನೂನುಬದ್ಧವಾಗಿ ದತ್ತು ಸ್ವೀಕಾರಕ್ಕೆ ಕೊಡಲು ಯೋಗ್ಯವಾದ ಮಕ್ಕಳು
ಧಾರ್ಮಿಕೇತರ ಕಾನೂನಿನಡಿ ಮಕ್ಕಳನ್ನು ದತ್ತು ಕೊಡಲು ಯೋಗ್ಯವೆಂದು ಘೋಷಿಸಿದಮೇಲೆ ಅವರ ಜೈವಿಕ ತಂದೆ-ತಾಯಿಯರ ಜೊತೆಗಿನ ಕಾನೂನಾತ್ಮಕ ಸಂಬಂಧ ಅಂತ್ಯಗೊಳ್ಳುತ್ತದೆ.
ದಂಡ ಪ್ರಕ್ರಿಯಾ ಸಂಹಿತೆಯಡಿ ಜೀವನಾಂಶ
ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ ೧೨೫ರ ಪ್ರಕಾರ ಸಾಕಾದಷ್ಟು ಸಂಪನ್ಮೂಲವಿರುವ ಯಾವುದೇ ವ್ಯಕ್ತಿಯು ತನ್ನ ಅವಲಂಬಿತ ತಂದೆ-ತಾಯಿಯನ್ನು ನಿರ್ಲಕ್ಷಿಸಿದರೆ, ಅಥವಾ ಅವರ ಪೋಷಣೆ ಮಾಡಲು ನಿರಾಕರಿಸಿದರೆ, ಪ್ರಥಮ ಶ್ರೇಣಿಯ ಹಿರಿಯ ನ್ಯಾಯಾಧೀಶರು ಅವರಿಗೆ ಜೀವನಾಂಶದ ರೂಪದಲ್ಲಿ ಮಾಸಿಕ ಭತ್ಯೆ ಕೊಡಬೇಕೆಂದು ಆದೇಶಿಸಬಹುದು.
ಶಾಲೆಗಳಲ್ಲಿ ಪಠ್ಯಕ್ರಮ ಮತ್ತು ಮೌಲ್ಯಮಾಪನ ವಿಧಾನಗಳು
ಪ್ರತಿ ರಾಜ್ಯ ಸರ್ಕಾರವು ಪಠ್ಯಕ್ರಮ ಮತ್ತು ಮೌಲ್ಯಮಾಪನ ಕಾರ್ಯವಿಧಾನಗಳನ್ನು ನಿಗದಿಪಡಿಸಿದ ವಿವಿಧ ಶೈಕ್ಷಣಿಕ ಪ್ರಾಧಿಕಾರಗಳನ್ನು ನಿರ್ದಿಷ್ಟಪಡಿಸಿದೆ
ದತ್ತು ಸ್ವೀಕಾರದ ರೀತಿಗಳು
ಧಾರ್ಮಿಕೇತರ ದತ್ತು ಸ್ವೀಕಾರಗಳ ಹಲವಾರು ರೀತಿಗಳು ಕೆಳಗಿನಂತಿವೆ. ಇನ್ನು ನೀವು ಹಿಂದೂ ದತ್ತು ಸ್ವೀಕಾರ ಕಾನೂನನ್ನು ಪಾಲಿಸಿದರೆ, ದತ್ತು ಪಡೆಯುವ ಹಲವಾರು ರೀತಿಗಳು ಅದರಲ್ಲಿಲ್ಲ.
ಡಿಟೆನ್ಶನ್ ನೀತಿ
ಪ್ರತಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಐದನೇ ತರಗತಿ ಮತ್ತು ಎಂಟನೇ ತರಗತಿಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.
ತಾತ್ಕಾಲಿಕ ಜೀವನಾಂಶ
ಮಾಸಿಕವಾಗಿ, ನಿಮ್ಮ ಮಕ್ಕಳು/ ನೆಂಟರು ನಿಮಗೆ ತಾತ್ಕಾಲಿಕ ಜೀವನಾಂಶ ಕೊಡಬೇಕೆಂದು ನೀವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು.
ಸಾಗರೋತ್ತರ ಭಾರತೀಯ ನಾಗರಿಕರು, ಅಥವಾ ಭಾರತದಲ್ಲಿ ನೆಲೆಸಿದ ವಿದೇಶಿಯರು ದತ್ತು ಸ್ವೀಕಾರ ಮಾಡುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)
ನೀವು ಸಾಗರೋತ್ತರ ಭಾರತೀಯ ನಾಗರೀಕರಾಗಿದ್ದಲ್ಲಿ, ಅಥವಾ ರೋಢಿಗತವಾಗಿ ಭಾರತದಲ್ಲಿ ನೆಲೆಸಿದ್ದ ವಿದೇಶೀಯರಾಗಿದ್ದು, ಮಗುವನ್ನು ದತ್ತು ಪಡೆಯಬೇಕೆಂದರೆ ಕೆಳಕಂಡ ಪ್ರಕ್ರಿಯೆಯನ್ನು ಪಾಲಿಸಿ
ಟ್ರಿಬ್ಯೂನಲ್ ನಿಂದ ಜೀವನಾಂಶ ಪಡೆದುಕೊಳ್ಳುವುದು
ತಂದೆ-ತಾಯಿ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯಿದೆ, ೨೦೦೭ರ ಅಡಿಯಲ್ಲಿನ ಜೀವನಾಂಶ ಟ್ರಿಬ್ಯೂನಲ್ ಗೆ ನೀವು ಜೀವನಾಂಶದ ಅರ್ಜಿ ಸಲ್ಲಿಸಬಹುದು. ಕೆಳಕಂಡ ಪ್ರದೇಶಗಳ ಟ್ರಿಬ್ಯೂನಲ್ ಗೆ ನೀವು ಅರ್ಜಿ ಸಲ್ಲಿಸಬಹುದು:
ಶಾಲೆಗಳ ಜವಾಬ್ದಾರಿಗಳು
ಒಂದನೇ ತರಗತಿಯಿಂದ ಐದನೇ ತರಗತಿಗೆ 30:1 ಮತ್ತು ಆರನೇ ತರಗತಿಯಿಂದ ಎಂಟನೇ ತರಗತಿಗೆ 35:1 ಅನುಪಾತದಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತವನ್ನು ಶಿಕ್ಷಣ ಹಕ್ಕು ಕಾನೂನು ಸೂಚಿಸುತ್ತದೆ.
ಸಾಗರೋತ್ತರ ಭಾರತೀಯ ನಾಗರಿಕರು, ಅಥವಾ ಭಾರತದಲ್ಲಿ ನೆಲೆಸಿದ ವಿದೇಶಿಯರು ದತ್ತು ಸ್ವೀಕಾರ ಮಾಡುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)
ನೀವು ಸಾಗರೋತ್ತರ ಭಾರತೀಯ ನಾಗರೀಕರಾಗಿದ್ದಲ್ಲಿ, ಅಥವಾ ರೋಢಿಗತವಾಗಿ ಭಾರತದಲ್ಲಿ ನೆಲೆಸಿದ್ದ ವಿದೇಶೀಯರಾಗಿದ್ದು, ಮಗುವನ್ನು ದತ್ತು ಪಡೆಯಬೇಕೆಂದರೆ ಕೆಳಕಂಡ ಪ್ರಕ್ರಿಯೆಯನ್ನು ಪಾಲಿಸಿ
ಮಗುವಿನ ಶಿಕ್ಷಣದ ಬಗ್ಗೆ ದೂರು/ ಕುಂದುಕೊರತೆಗಳು
ನೀವು ಯಾವುದೇ ಕುಂದುಕೊರತೆಗಳನ್ನು ಎದುರಿಸಿದರೆ ಅಥವಾ ಮಗುವಿನ ಶಿಕ್ಷಣದ ಬಗ್ಗೆ ನೀವು ದೂರು ಹೊಂದಿದ್ದರೆ, ನೀವು ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು:
ನಿವಾಸಿ ಭಾರತೀಯರಿಂದ ದತ್ತು ಪಡೆಯುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)
ನಿವಾಸಿ ಭಾರತೀಯರಾಗಿ ನೀವು ಭಾರತದೊಳಗೇ ದತ್ತು ಪಡೆಯಲು ಅರ್ಜಿ ಸಲ್ಲಿಸುವುದು ಸಾಮಾನ್ಯ. ನಿಮ್ಮ ದತ್ತು ಸ್ವೀಕೃತಿ ಅರ್ಜಿ ಕೆಳಗಿನ ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ
ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಊಟ (ಮಿಡ್-ಡೇ ಮೀಲ್ ಯೋಜನೆ)
I ರಿಂದ VIII ತರಗತಿಗಳಲ್ಲಿ ಓದುತ್ತಿರುವ ಆರರಿಂದ ಹದಿನಾಲ್ಕು ವರ್ಷದೊಳಗಿನ ಎಲ್ಲಾ ವಿದ್ಯಾರ್ಥಿಗಳು ಯಾವುದೇ ವೆಚ್ಚವಿಲ್ಲದೆ ಪೌಷ್ಟಿಕಾಂಶದ ಊಟಕ್ಕೆ ಅರ್ಹರಾಗಿರುತ್ತಾರೆ ಎಂದು ಕಾನೂನು ಹೇಳುತ್ತದೆ.
ನೆಂಟರಿಂದ ದತ್ತು ಪಡೆಯುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)
ನೀವು ಮಗುವಿನ ನೆಂಟರಾಗಿ, ಮಗುವನ್ನು ದತ್ತು ಪಡೆಯಬೇಕೆಂದಲ್ಲಿ, ಭಾರತದಲ್ಲಿಯೇ ಅಥವಾ ಅಂತರ್-ದೇಶಿಯ ದತ್ತು ಕೂಡ ಪಡೆಯಬಹುದಾಗಿದೆ.
ಮಲ ತಂದೆ-ತಾಯಂದಿರಿಂದ ದತ್ತು ಸ್ವೀಕೃತಿಯ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)
ನೀವು ಮಗುವಿನ ಮಲ ತಂದೆ/ತಾಯಿಯಾಗಿ ದತ್ತು ಪಡೆಯಬೇಕಾದಲ್ಲಿ ಕೆಳಗಿನ ಪ್ರಕ್ರಿಯೆಯನ್ನು ಪಾಲಿಸಿ:
ಹಿಂದುಳಿದ ಗುಂಪುಗಳಿಗೆ ಸೇರಿದ ಮಕ್ಕಳಿಗೆ ಶಿಕ್ಷಣ
ಹಿಂದುಳಿದ ಗುಂಪುಗಳ ಮಕ್ಕಳು ತಾರತಮ್ಯಕ್ಕೆ ಒಳಗಾಗದಂತೆ ಮತ್ತು ಅವರ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗುವಂತೆ ನೋಡಿಕೊಳ್ಳುವುದು ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳ ಕರ್ತವ್ಯವಾಗಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ಮಕ್ಕಳ ಪೋಷಕರು ಶಾಲಾ ಆಡಳಿತ ಸಮಿತಿಗಳಲ್ಲಿ, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯ ಅನುಪಾತದಲ್ಲಿ, ಪ್ರಾತಿನಿಧ್ಯವನ್ನು ಪಡೆಯಬೇಕು.
ಸಾಗರೋತ್ತರ ಭಾರತೀಯ ನಾಗರಿಕರು, ಅನಿವಾಸಿ ಭಾರತೀಯರು, ಮತ್ತು ಪರದೇಶದಲ್ಲಿ ನೆಲೆಸಿದ ವಿದೇಶಿಯರಿಂದ ದತ್ತು ಸ್ವೀಕೃತಿ (ಧಾರ್ಮಿಕೇತರ ಕಾನೂನು)
ನೀವು ಸಾಗರೋತ್ತರ ಭಾರತೀಯ ನಾಗರಾಯಿಕರು, ಅನಿವಾಸಿ ಭಾರತೀಯರು, ಅಥವಾ ಪರದೇಶದಲ್ಲಿ ನೆಲೆಸಿದ ವಿದೇಶಿಯರು ಆಗಿದ್ದು ಭಾರತೀಯ ಮಗುವನ್ನು ದತ್ತು ಸ್ವೀಕೃತಿ ಮಾಡಬೇಕೆಂದಲ್ಲಿ ಕೆಳಗಿನ ಪ್ರಕ್ರಿಯೆಯನ್ನು ಪಾಲಿಸಿ
ಹಿಂದೂ ದತ್ತು ಸ್ವೀಕೃತಿಯ ಪ್ರಕ್ರಿಯೆ
ಹಿಂದೂ ದತ್ತು ಸ್ವೀಕೃತಿ ಕಾನೂನಿನಡಿಯಲ್ಲಿ ದತ್ತು ಪಡೆದುಕೊಳ್ಳಲು ನಿಗದಿತ ಪ್ರಕ್ರಿಯೆ ಇಲ್ಲ. ನೀವು ಯಾವುದೇ ನಿರ್ದೇಶನಗಳನ್ನು ಪಾಲಿಸುವಂತಿಲ್ಲ, ಆದರೆ ದತ್ತು ಪತ್ರವನ್ನು ಕಾರ್ಯಗತಗೊಳಿಸಬೇಕಾಗುತ್ತದೆ.
ದತ್ತು ಸ್ವೀಕೃತಿ ಕಾನೂನಿನಡಿಯಲ್ಲಿ ಶಿಕ್ಷೆಗಳು
ನೀವು ಯಾವುದೇ ಕಾನೂನಿನಡಿಯಲ್ಲಿ ದತ್ತು ತೆಗೆದುಕೊಂಡಿರಲಿ, ಕೆಳಗಿನವುಗಳನ್ನು ಮಾಡಿದರೆ ನಿಮಗೆ ಶಿಕ್ಷೆಯಾಗುತ್ತದೆ