ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ, 2007, ಮಕ್ಕಳಿಲ್ಲದ ಹಿರಿಯ ನಾಗರಿಕರು ಸಹ ಇತರ ಸಂಬಂಧಿಕರಿಂದ ನಿರ್ವಹಣೆ ಪಡೆಯಲು ಅನುಮತಿಸುತ್ತದೆ, ಆದರೆ ಸೆಕ್ಷನ್ 125 CRPC ಮಕ್ಕಳಿಲ್ಲದ ಹಿರಿಯ ನಾಗರಿಕರಿಗೆ ಅಂತಹ ಹಕ್ಕುಗಳನ್ನು ನೀಡುವುದಿಲ್ಲ.

ಮರಣದ ನಂತರ ಜೀವನಾಂಶ

ಕೊನೆಯ ಅಪ್ಡೇಟ್ Sep 27, 2022

ನಿಮ್ಮ ಮಕ್ಕಳು/ಉತ್ತರಾಧಿಕಾರಿಗಳು ಸತ್ತ ಮೇಲೂ ಸಹ ನಿಮಗೆ ಜೀವನಾಂಶದ ಹಕ್ಕಿದೆ. ನೀವು ಅಶಕ್ತ ಅಥವಾ ಇಳಿ ವಯಸ್ಸಿನಲ್ಲಿದ್ದಲ್ಲಿ, ನಿಮ್ಮ ಅರ್ಜಿಯ ಮೇರೆಗೆ ನಿಮ್ಮ ಮಕ್ಕಳ/ಉತ್ತರಾಧಿಕಾರಿಗಳ ಸಂಪತ್ತು ಮತ್ತು ಆಸ್ತಿಯ ಒಂದು ಭಾಗ ನಿಮಗೆ ಕೊಡಬೇಕೆಂದು ನ್ಯಾಯಾಲಯವು ಆದೇಶಿಸಬಹುದು. ಇಂತಹ ಸಂದರ್ಭಗಳಲ್ಲಿ ನಿಮ್ಮ ಮಕ್ಕಳು/ಉತ್ತರಾಧಿಕಾರಿಗಳು ಸತ್ತ ನಂತರ ಅನ್ವಯವಾಗುವ ಉತ್ತರಾಧಿಕಾರದ ನಿಯಮಗಳನುಸಾರ ನಿಮ್ಮ ಜೀವನಾಂಶದ ಮೊತ್ತವನ್ನು ನಿರ್ಧರಿಸಲಾಗುತ್ತದೆ. ನಿಮಗೆ ದಕ್ಕುವ ಜೀವನಾಂಶದ ಮೊತ್ತವನ್ನು ಕೆಳಗಿನ ಅಂಶಗಳ ಮೇಲೆ ನ್ಯಾಯಾಲಯವು ನಿರ್ಧರಿಸುತ್ತದೆ:

  • ತಮ್ಮ ಸಾಲಗಳನ್ನು ತೀರಿಸಿದ ನಂತರ, ನಿಮ್ಮ ಮಕ್ಕಳು/ಉತ್ತರಾಧಿಕಾರಿಗಳ ಆಸ್ತಿಯ ಸಂಪೂರ್ಣ ಮೌಲ್ಯ (ಆಸ್ತಿಯಿಂದ ಬರುವ ಆದಾಯ ಸೇರಿದಂತೆ)
  • ಅವರ ಉಯಿಲಿನ (will) ನಿಬಂಧನೆಗಳು
  • ನಿಮ್ಮ ಜೊತೆಗಿನ ಅವರ ಸಂಬಂಧದ ಸ್ವರೂಪ ಮತ್ತು ನಿಕಟತೆ
  • ನಿಮ್ಮ ಅವಶ್ಯಕತೆಗಳು (ಸಮಂಜಸವಾಗಿ ಲೆಕ್ಕ ಹಾಕಲಾಗುತ್ತದೆ)
  • ಜೀವನಾಂಶಕ್ಕಾಗಿ ಅವರ ಮೇಲೆ ಅವಲಂಬಿಸಿರುವ ವ್ಯಕತಿಗಳ ಸಂಖ್ಯೆ

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.