ಇಸ್ಲಾಮಿನಡಿ ಮದುವೆಯು ಒಂದು ಒಪ್ಪಂದವಾಗಿರುವುದರಿಂದ ಮುಸ್ಲಿಮರಲ್ಲಿ ವಿಚ್ಛೇದನವು, ಇನ್ನಿತರ ಧರ್ಮಗಳಿಗೆ ಹೋಲಿಸಿದರೆ, ತುಂಬಾ ಸರಳ. ನೀವು ಮುಸ್ಲಿಮರಾಗಿದ್ದರೆ, ಹಾಗು ನಿಮಗೆ ವಿಚ್ಛೇದನ ಬೇಕಾಗಿದ್ದಲ್ಲಿ, ನಿಮ್ಮ ಸಂಗಾತಿಯಿಂದ ಯಾವುದೇ ರೀತಿಯ ಅನ್ಯಾಯ (ಉದಾಹರಣೆಗೆ, ಕ್ರೌರ್ಯ) ಆಗಿರಬೇಕು ಎಂದೇನಿಲ್ಲ. ನೀವು ಕೋರ್ಟಿಗೆ ಅರ್ಜಿ ಸಲ್ಲಿಸಿ ವಿಚ್ಛೇದನ ಪಡೆಯಬಹುದು, ಅಥವಾ ನೇರವಾಗಿ ನಿಮ್ಮ ಸಂಗಾತಿಯ ಜೊತೆ ಸೇರಿ ವಿವಾಹ ಒಪ್ಪಂದವನ್ನು ಮುರಿಯಬಹುದು.

ಮುಸ್ಲಿಂ ವಿವಾಹಗಳ ವಿಚ್ಛೇದನ

ಇಸ್ಲಾಮ್ ಧರ್ಮದಲ್ಲಿ ವಿಚ್ಛೇದನ ಕುರಾನ್ ಮತ್ತು ಸಂಬಂಧಿತ ರೂಢಿಗತ ಪದ್ಧತಿಗಳ ಪ್ರಕಾರ ನಡೆಯುತ್ತದೆ. ಈ ತತ್ವಗಳನ್ನು ಕಾನೂನು ಗುರುತಿಸಿದೆ, ಹಾಗು ಮುಸ್ಲಿಮರ ಮೇಲೆ ಇವುಗಳು ಕಡ್ಡಾಯವಾಗಿ ಅನ್ವಯಿಸುತ್ತವೆ. ಈ ಎಲ್ಲ ಕಾನೂನುಗಳ ಮೂಲ ಕುರಾನ್ ಆಗಿದ್ದರಿಂದ, ಮತ್ತು ಮುಸ್ಲಿಮರು ಹಲವಾರು ಕ್ರೋಡೀಕರಿಸಲಾರದ ಸಂಪ್ರದಾಯಗಳನ್ನು ಆಚರಿಸುತ್ತಿರುವುದರಿಂದ ಮುಸ್ಲಿಮರ ಮದುವೆ ಹಾಗು ವಿಚ್ಛೇದನಗಳ ಕಾನೂನು ಸರಳವೂ ಇಲ್ಲ, ಸ್ಪಷ್ಟವೂ ಇಲ್ಲ. ಆದರೆ, ಮುಸ್ಲಿಮರ ಎಲ್ಲ ಪಂಗಡಗಳ ಮೇಲೆ ಅನ್ವಯವಾಗುವ ಕೆಲವು ಮೂಲಭೂತ ತತ್ವಗಳಿವೆ. ಈ ಲೇಖನ ನಿಮಗೆ, ನಮ್ಮ ಸಂವಿಧಾನ, ನ್ಯಾಯಾಲಯಗಳು, ಹಾಗು ಶಾಸನಗಳು ಒಪ್ಪಿಕೊಂಡಿರುವಂತಹ, ಮಹಮದೀಯ ಧರ್ಮದ ವಿಚ್ಛೇದನಕ್ಕೆ ಸಂಬಂಧಪಟ್ಟ ಸಾರ್ವತ್ರಿಕ ಕಾನೂನುಗಳ ಪರಿಚಯ ನೀಡುತ್ತದೆ.

ಆಧಾರಗಳು