ಮುಸ್ಲಿಂ ಮದುವೆಯಲ್ಲಿ ಹೆಂಡತಿಗೆ ವಿಚ್ಛೇದನ ಬೇಕಾದಾಗ

ಕೊನೆಯ ಅಪ್ಡೇಟ್ Oct 16, 2022

ಹೆಂಡತಿಯು ಈ ಕೆಳಗಿನ ರೀತಿಗಳಲ್ಲಿ ವಿಚ್ಛೇದನವನ್ನು ಪಡೆದುಕೊಳ್ಳಬಹುದು:

ಖುಲಾ:

“ಖುಲಾ” ಹೆಂಡತಿ ವಿಚ್ಛೇದನ ತೆಗೆದುಕೊಳ್ಳುವ ಒಂದು ವಿಧಾನವಾಗಿದೆ. ನಿಮಗೆ ವಿಚ್ಛೇದನ ಬೇಕಾದಲ್ಲಿ ನೀವು ನ್ಯಾಯಾಲಯಕ್ಕೆ ಹೋಗಬಹುದು ಅಥವಾ ಮುಫ್ತಿಯರ ಬಳಿ ಹೋಗಬಹುದು. ನ್ಯಾಯಾಲಯ ಅಥವಾ ಮುಫ್ತಿಯರು ಗಂಡನಿಗೆ ಹಾಜರಿರಲು ಆದೇಶಿಸುತ್ತಾರೆ. ಗಂಡನ ಹಾಜರಿಯಲ್ಲಿ ಅವನಿಗೆ ಈ ವಿಚ್ಛೇದನ ಒಪ್ಪಿಗೆ ಇದೆಯೇ ಎಂದು ಕೇಳುತ್ತಾರೆ. ಒಪ್ಪಿಗೆಯಾದ ತಕ್ಷಣ ವಿಚ್ಛೇದನ ಪೂರ್ಣಗೊಳ್ಳುತ್ತದೆ.

ತಲಾಕ್-ಎ-ತಫ್ವೀದ್:

ನಿಮ್ಮ ಗಂಡನು ವಿವಾಹ ಒಪ್ಪಂದದ (ಕಾಬಿನಾಮ) ಮೇರೆಗೆ ವಿಚ್ಛೇದನದ ಹಕ್ಕನ್ನು ನಿಮಗೆ ನಿಯೋಗಿಸಿದ್ದಲ್ಲಿ, ನೀವು ಅವರನ್ನು ವಿಚ್ಛೇದಿಸಬಹುದು.

ಮದುವೆಯ ಸಮಯದಲ್ಲಿ, ವಿಚ್ಛೇದನಾ ಹಕ್ಕನ್ನು ನಿಮಗೆ ಅಥವಾ ಇನ್ನೋರ್ವ ವ್ಯಕ್ತಿಗೆ, ಮದುವೆಯ ಒಪ್ಪಂದದ (ಕಾಬಿನಾಮ) ಮೂಲಕ, ನಿಯೋಗಿಸುವ ಹಕ್ಕು ನಿಮ್ಮ ಗಂಡನಿಗಿದೆ. ಈ ವಿವಾಹದ ಒಪ್ಪಂದವು ಈ ಹಕ್ಕಿನ ವರ್ಗಾವಣೆಯ ಸಂಬಂಧಪಟ್ಟ ಎಲ್ಲ ವಿಷಯಗಳ ವಿವರವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ, ಈ ವಿಚ್ಛೇದನಾ ಹಕ್ಕನ್ನು ನೀವು ಬಳಸಬೇಕಾದಲ್ಲಿ, ನಿಮಗೆ ಸಿಗಲಿರುವ/ಸಿಕ್ಕಿರುವ ಮೆಹೆರ್ ಹಣದ ಎಷ್ಟು ಪಾಲು ನೀವು ಬಿಟ್ಟುಕೊಡಬೇಕು ಎಂಬುದನ್ನು ಈ ಒಪ್ಪಂದದಲ್ಲಿ ಕ್ರೋಡೀಕರಿಸಲಾಗಿರುತ್ತದೆ.

 

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.