ಪತಿಯನ್ನು ಬಾಧಿಸುವ ಮಾನಸಿಕ ಅಸ್ವಸ್ಥತೆಯು ಗುಣಪಡಿಸಲಾಗದು ಅಥವಾ ಇಲ್ಲವೇ ಎಂಬುದನ್ನು ಮುಸ್ಲಿಂ ಕಾನೂನು ನಿರ್ದಿಷ್ಟಪಡಿಸುವುದಿಲ್ಲ.

ವಿವಾಹ ವಿಚ್ಛೇದನಕ್ಕೆ ಹೆಂಡತಿ ಕೋರ್ಟಿಗೆ ಹೋದಾಗ

ಕೊನೆಯ ಅಪ್ಡೇಟ್ Oct 16, 2022

ವಿಚ್ಛೇದನ ಪಡೆಯಲು ಕೋರ್ಟಿಗೆ ಹೋಗುವ ಆಯ್ಕೆ ಕೇವಲ ಮಹಿಳೆಯರಿಗೆ ಇದೆ. ಕೆಳಗಿನ ಕಾರಣಗಳಿಗೆ, ನೀವು ಕೋರ್ಟಿನ ಮೂಲಕ ವಿಚ್ಛೇದನ ಪಡೆಯಬಹುದು:

ಗಂಡನ ಅನುಪಸ್ಥಿತಿ:

  • ನಿಮ್ಮ ಗಂಡ ಕನಿಷ್ಠ ೪ ವರ್ಷಗಳಿಂದ ಕಾಣೆಯಾಗಿದ್ದರೆ
  • ನಿಮ್ಮ ಗಂಡ ಕನಿಷ್ಠ ೭ ವರ್ಷಗಳಿಂದ ಜೈಲಿನಲ್ಲಿದ್ದರೆ
  • ನಿಮ್ಮ ಗಂಡ ನಿಮಗೆ ೨ ವರ್ಷಗಳಿಂದ ಜೀವನಾಂಶ ಕೊಡದಿದ್ದಾಗ

ಅನಾರೋಗ್ಯ ಅಥವಾ ಅಶಕ್ತತೆ:

  • ನಿಮ್ಮ ಗಂಡನಿಗೆ ನಿಮಿರು ದೌರ್ಬಲ್ಯವಿದ್ದರೆ
  • ನಿಮ್ಮ ಗಂಡನಿಗೆ ಬುದ್ಧಿಭ್ರಮಣೆ ಅಥವಾ ಗುಣಪಡಿಸಲಾಗದ ಲೈಂಗಿಕ ರೋಗ ಇದ್ದಲ್ಲಿ
  • ನಿಮ್ಮ ಮದುವೆ ನೀವು ೧೫ ವರ್ಷದ ಒಳಗಿದ್ದಾಗ ಆಗಿದ್ದರೆ

ಕೆಟ್ಟ ವರ್ತನೆ:

  • ನಿಮ್ಮ ಗಂಡ ನಿಮ್ಮ ಜೊತೆ ಕ್ರೂರವಾಗಿ ವರ್ತಿಸಿದರೆ
  • ನಿಮ್ಮ ಗಂಡ ಲೈಂಗಿಕ ಸಂಭೋಗ ಮಾಡುವುದು, ಜೊತೆಗೆ ವಾಸಿಸುವುದು ಎಂಬಂತಹ ವೈವಾಹಿಕ ಜವಾಬ್ದಾರಿಗಳನ್ನು ಈಡೇರಿಸದಿದ್ದರೆ

ಈ ಆಧಾರಗಳ ಅನ್ವಯಿಸುವಿಕೆ ಕೆಲ ಷರತ್ತುಗಳ ಮೇಲೆ ನಿರ್ಭರಿಸಿವೆ. ಇವುಗಳ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ನಿಮ್ಮ ವಕೀಲರನ್ನು ಸಂಪರ್ಕಿಸಿ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.