ಸ್ಥಾನ ಅಥವಾ ಅಧಿಕಾರದ ದುರುಪಯೋಗ

ಎಚ್ಚರಿಕೆ: ಈ ವಿವರಣೆಯು ದೈಹಿಕ ಹಿಂಸೆ ಮತ್ತು ಲೈಂಗಿಕ ಹಿಂಸಾಚಾರದ ಮಾಹಿತಿಯನ್ನು ಒಳಗೊಂಡಿರುವುದರಿಂದ, ಕೆಲವು ಓದುಗರು ಇದರಿಂದ ತೊಂದರೆಯಾಗಬಹುದು.

 

ಒಬ್ಬ ಪುರುಷನು ತನ್ನ ಅಧಿಕಾರ  ಅಥವಾ ಸ್ಥಾನದ ಕಾರಣದಿಂದ ಮಹಿಳೆಯ ಮೇಲೆ ನಿಯಂತ್ರಣವನ್ನು ಹೊಂದಿದ್ದರೆ ಮತ್ತು ಈ ನಿಯಂತ್ರಣವನ್ನು ಬಳಸಿಕೊಂಡು ಮಹಿಳೆ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಪ್ರಚೋದಿಸಿದರೆ, ಅದು ಅಪರಾಧವಾಗಿದೆ.12 ಯಾವುದೇ ಮಹಿಳೆ ತನ್ನೊಂದಿಗೆ ಲೈಂಗಿಕ ಸಂಭೋಗವನ್ನು ಹೊಂದಲು ಮನವೊಲಿಸಲು ಅಥವಾ ಮೋಹಿಸಲು ತನ್ನ ಸ್ಥಾನ ಅಥವಾ ವಿಶ್ವಾಸಾರ್ಹ ಸಂಬಂಧವನ್ನು  ನಂಬಿಕೆಯಾದಾರಿತ ಸಂಬಂಧಗಳು) ದುರುಪಯೋಗಪಡಿಸಿಕೊಳ್ಳುವ ಯಾವುದೇ ವ್ಯಕ್ತಿಗೆ ಕಾನೂನು ಶಿಕ್ಷೆಯನ್ನು ನೀಡುತ್ತದೆ. ಮಹಿಳೆ ಅವನ ವಶದಲ್ಲಿರಬಹುದು, ಅವನ ಉಸ್ತುವಾರಿಯಲ್ಲಿರಬಹುದು ಅಥವಾ ಆವರಣದಲ್ಲಿ ಹಾಜರಿರಬಹುದು. ಇಲ್ಲಿ, ಲೈಂಗಿಕ ಸಂಭೋಗವು ಅತ್ಯಾಚಾರವನ್ನು ಉಲ್ಲೇಖಿಸುವುದಿಲ್ಲ, ಇದನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 63 ರ ಅಡಿಯಲ್ಲಿ ಪ್ರತ್ಯೇಕ ಅಪರಾಧವೆಂದು ಪರಿಗಣಿಸಲಾಗಿದೆ.

 

ಲೈಂಗಿಕ ಸಂಭೋಗವನ್ನು ಹೊಂದಲು ಮಹಿಳೆಯನ್ನು ಮನವೊಲಿಸುವ ವ್ಯಕ್ತಿ ಹೀಗಿರಬಹುದು:

ಎ) ಅಧಿಕಾರದ ಸ್ಥಾನದಲ್ಲಿ ಅಥವಾ ವಿಶ್ವಾಸಾರ್ಹ ಸಂಬಂಧದಲ್ಲಿ; ಅಥವಾ

ಬಿ) ಸಾರ್ವಜನಿಕ ಸೇವಕ; ಅಥವಾ

ಸಿ) ಜೈಲು, ರಿಮಾಂಡ್ ಹೋಮ್, ಇತರ ಕಸ್ಟಡಿ ಸ್ಥಳ, ಅಥವಾ ಮಹಿಳಾ ಅಥವಾ ಮಕ್ಕಳ ಸಂಸ್ಥೆಯ ಸೂಪರಿಂಟೆಂಡೆಂಟ್ ಅಥವಾ ಮ್ಯಾನೇಜರ್; ಅಥವಾ

ಡಿ) ಆಸ್ಪತ್ರೆಯ ನಿರ್ವಹಣೆ ಅಥವಾ ಸಿಬ್ಬಂದಿ.

ಇ) ಸಂಬಂಧಿ, ರಕ್ಷಕ ಅಥವಾ ಶಿಕ್ಷಕ.

ಈ ಪ್ರಕರಣಗಳಲ್ಲಿ, ಅಧಿಕಾರದಲ್ಲಿರುವ ವ್ಯಕ್ತಿಗೆ ದಂಡದ ಜೊತೆಗೆ ಐದರಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

 

ಉದಾಹರಣೆಗೆ, ಪುರುಷ ಜೈಲು ಸೂಪರಿಂಟೆಂಡೆಂಟ್ ಒಬ್ಬ ಮಹಿಳಾ ಖೈದಿಯನ್ನು ತನ್ನ ಬಿಡುಗಡೆಗೆ ಬೆಂಬಲಿಸುವುದರ ಪ್ರತಿಯಾಗಿ ತನ್ನೊಂದಿಗೆ ಸಂಭೋಗಿಸಲು ಕೇಳಿದರೆ ಮತ್ತು ತನ್ನೊಂದಿಗೆ ಸಂಭೋಗಿಸಲು ಅವಳ ಮನವೊಲಿಸಿದರೆ, ಅವನು ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಂತಾಗುತ್ತದೆ. ಈ ಸಂದರ್ಭದಲ್ಲಿ, ಅವನು ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿಲ್ಲ ಆದರೆ ತನ್ನ ಅಧಿಕಾರದ ಸ್ಥಾನವನ್ನು ಬಳಸಿಕೊಂಡು ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಮನವೊಲಿಸಿದ್ದಾನೆ.

 

ಕೌಟುಂಬಿಕ ಹಿಂಸೆಯ ವಿರುದ್ಧ ಯಾರು ರಕ್ಷಣೆ ಪಡೆಯಬಹುದು?

ಯಾವುದೇ ಮಹಿಳೆ, ತನಗೋಸ್ಕರ ಅಥವಾ ತನ್ನ ಮಕ್ಕಳಿಗೋಸ್ಕರ, ದೂರು ದಾಖಲಿಸಿ, ಕೌಟುಂಬಿಕ ಹಿಂಸೆ ಕಾನೂನಿನಡಿ ರಕ್ಷಣೆ ಪಡೆಯಬಹುದು. ಆ ಮಹಿಳೆ ಯಾವ ಧರ್ಮಕ್ಕೆ ಸೇರಿರುವರು ಎಂಬುದು ಅಪ್ರಸ್ತುತ. ಅಂದರೆ, ಯಾವುದೇ ಜಾತಿ ಅಥವಾ ಮತಕ್ಕೆ ಸೇರಿದ ಮಹಿಳೆ ಕೌಟುಂಬಿಕ ಹಿಂಸೆಯ ವಿರುದ್ಧ ರಕ್ಷಣೆ ಪಡೆಯಬಹುದು.

ಗಮನಿಸಬೇಕಾದ ಅಂಶಗಳು: ನೀವು ನ್ಯಾಯಾಲಯಕ್ಕೆ ಹೋಗಬೇಕು ಎಂದು ನಿರ್ಧರಿಸಿದ್ದಲ್ಲಿ, ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿತ್ತು, ಮತ್ತು ನೀವು ಅವರೊಡನೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಿರಿ, ಎಂಬುದನ್ನು ಖಾತರಿ ಮಾಡಬೇಕು. ಕೆಳಗಿನ ಸಂದರ್ಭಗಳಲ್ಲಿ ನೀವು ದೂರು ನೀಡಿ ರಕ್ಷಣೆ ಪಡೆಯಬಹುದು:

೧. ನೀವು ವಿವಾಹಿತರಾಗಿದ್ದಲ್ಲಿ:

ನೀವು ಮದುವೆಯಾಗಿದ್ದಲ್ಲಿ, ಮತ್ತು ನಿಮ್ಮ ಗಂಡನಿಂದ ಅಥವಾ ಅತ್ತೆ-ಮಾವಂದಿರಿಂದ ಹಿಂಸೆಗೆ ಒಳಗಾಗಿದ್ದಲ್ಲಿ, ಅವರ ವಿರುದ್ಧ ದೂರು ನೀಡಬಹುದು.

೨. ನೀವು ವಿಚ್ಛೇದಿತರಾಗಿದ್ದಲ್ಲಿ:

ನೀವು ವಿಚ್ಛೇದಿತರಾಗಿದ್ದಲ್ಲಿ, ನಿಮ್ಮ ಪ್ರಕರಣದ ಸಂದರ್ಭಾನುಸಾರ, ನಿಮಗೆ ರಕ್ಷಣೆ ಹಾಗು ಪರಿಹಾರ, ಸಿಗಬಹುದು, ಸಿಗದಿರಬಹುದು. ರಕ್ಷಣೆ ಹಾಗು ಪರಿಹಾರ ಸಿಗಬಹುದಾದ ಕೆಲವು ಸಂದರ್ಭಗಳು ಕೆಳಗಿನಂತಿವೆ: – ನಿಮ್ಮ ವಿಚ್ಛೇದನೆಯ ಪೂರ್ವ ಹಿಂಸೆಗೆ ಬಲಿಯಾಗಿದ್ದಲ್ಲಿ, ನಿಮ್ಮ ಗಂಡ ಮತ್ತು ಅತ್ತೆ-ಮಾವಂದಿರ ಜೊತೆ ಹಿಂಸೆ ನಡೆದ ಸಮಯದಲ್ಲಿ ಕೌಟುಂಬಿಕ ಸಂಬಧವಿದ್ದ ಕಾರಣ ನೀವು ದೂರು ನೀಡಬಹುದು.

ನಿಮ್ಮ ವಿಚ್ಛೇದನೆಯ ನಂತರ ಹಿಂಸೆಗೆ ಬಲಿಯಾದರೆ, ನಿಮ್ಮ ಮತ್ತು ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಜೊತೆ, ಹಿಂಸೆಯ ಸಮಯದಲ್ಲಿ ಕೌಟುಂಬಿಕ ಸಂಬಂಧ ಇತ್ತು ಎಂದು ನೀವು ಸಾಬೀತುಪಡಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ನಿಮ್ಮ ನಡುವೆ ಕೌಟುಂಬಿಕ ಸಂಬಂಧವಿಲ್ಲದಿದ್ದರೂ ಸಹ ನ್ಯಾಯಾಲಯವು ನಿಮ್ಮ ಕೋರಿಕೆಯನ್ನು ಮನ್ನಿಸುತ್ತದೆ. ಉದಾಹರಣೆಗೆ, ವಿಚ್ಛೇದನದ ನಂತರ, ನೀವು ಮತ್ತು ನಿಮ್ಮ ಗಂಡ ಜೊತೆಯಾಗಿ ನಿಮ್ಮ ಮಗುವಿನ ಪೋಷಣೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ನೀವು ಹಿಂಸೆಗೆ ಬಲಿಯಾದಾಗ.

ನೀವು ಹಿಂದೆಂದೋ ವಿಚ್ಛೇದನಾ ಪ್ರಕ್ರಿಯೆಯನ್ನು ಶುರು ಮಾಡಿದ್ದಿರಿ, ಆದರೆ ವಿಚ್ಚೇನದ ಪಡೆಯಲಿಲ್ಲ. ಹೀಗಿರುವಾಗ ಕೌಟುಂಬಿಕ ಹಿಂಸೆಗೆ ಒಳಗಾದಲ್ಲಿ ದೂರು ಸಲ್ಲಿಸಬಹುದು.

೩. ನೀವು ನಿಮ್ಮ ಗಂಡನನ್ನು ಬಿಟ್ಟು ಬಂದಿದ್ದಲ್ಲಿ:

ನಿಮ್ಮ ಗಂಡ ನಿಮ್ಮನ್ನು ಹೊಡೆಯುವುದು, ಮೌಖಿಕವಾಗಿ ನಿಂದಿಸುವುದು, ಇತ್ಯಾದಿ ರೀತಿಗಳಿಂದ ನಿಮ್ಮ ಮೇಲೆ ಕೌಟುಂಬಿಕ ಹಿಂಸೆ ಮಾಡಿದ್ದ ಕಾರಣ, ನೀವು ಅವರನ್ನು ಬಿಟ್ಟು ಬಂದಿದ್ದಲ್ಲಿ, ಅವರ ವಿರುದ್ಧ ದೂರು ನೀಡಬಹುದು. ಇನ್ನಿತರೇ ಕಾರಣಗಳಿಂದಾಗಿ ನೀವು ನಿಮ್ಮ ಗಂಡನನ್ನು ಬಿಟ್ಟು ಬಂದಿದ್ದಲ್ಲಿ, ಅವರ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸಲು ಬರುವುದಿಲ್ಲ. ಉದಾಹರಣೆಗೆ, ಬೇರೆ ಪುರುಷನ ಜೊತೆಗೆ ವಾಸಿಸಲು ನಿಮ್ಮ ಗಂಡನನ್ನು ಬಿಟ್ಟು ಬಂದಿದ್ದಲ್ಲಿ, ಅಥವಾ ಒಬ್ಬರೇ ವಾಸಿಸಲು ನಿಮ್ಮ ಗಂಡನನ್ನು ಬಿಟ್ಟು ಬಂದಿದ್ದಲ್ಲಿ, ಅವರ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸಲು ಸಾಧ್ಯವಿಲ್ಲ.

೪. ನೀವು ನ್ಯಾಯಿಕವಾಗಿ ಅಗಲಿದ್ದಲ್ಲಿ:

ನೀವು ನಿಮ್ಮ ಗಂಡನಿಂದ ನ್ಯಾಯಿಕವಾಗಿ ಅಗಲಿದ್ದಲ್ಲಿ, ಅಗಲುವಿಕೆಯ ಆದೇಶದ ಮೊದಲು ಅಥವಾ ನಂತರ, ನಿಮ್ಮ ಗಂಡನಿಂದ ಅಥವಾ ಅತ್ತೆ-ಮಾವಂದಿರಿಂದ ಹಿಂಸೆಗೆ ಬಲಿಯಾದಲ್ಲಿ, ಅವರ ವಿರುದ್ಧ ದೂರು ಸಲ್ಲಿಸಬಹುದು.

೫. ನೀವು ಲಿವ್-ಇನ್ ಸಂಬಂಧದಲ್ಲಿ ಇದ್ದಲ್ಲಿ:

ನೀವು ಲಿವ್-ಇನ್ ಸಂಬಂಧದಲ್ಲಿ ಇದ್ದು, ನಿಮ್ಮ ಸಂಗಾತಿಯಿಂದ ಕೌಟುಂಬಿಕ ಹಿಂಸೆಗೆ ಒಳಗಾದಲ್ಲಿ, ಅವರ ವಿರುದ್ಧ ದೂರು ಸಲ್ಲಿಸಬಹುದು. ಕೆಲವು ಸಂದರ್ಭಗಳಲ್ಲಿ, ನೀವು ಲಿವ್-ಇನ್ ಸಂಬಂಧದಿಂದ ಹೊರ ಬಂದಮೇಲೂ ಕೂಡ, ಸಂಬಂಧದಲ್ಲಿರುವಾಗ ನಿಮ್ಮ ಸಂಗಾತಿಯಿಂದ ಹಿಂಸೆಗೆ ಒಳಗಾಗಿದ್ದರೆ, ಅವರ ವಿರುದ್ಧ ದೂರು ಸಲ್ಲಿಸಬಹುದು.

೬. ನೀವು ವಿಧವೆಯಾಗಿದ್ದಲ್ಲಿ:

ನಿಮ್ಮ ಗಂಡ ಸತ್ತ ಮೇಲೂ ಸಹ ನೀವು ನಿಮ್ಮ ಅತ್ತೆ-ಮಾವಂದಿರ ಜೊತೆ ವಾಸ ಮಾಡುತ್ತಿದ್ದಲ್ಲಿ, ಅವರ ಜೊತೆ ನಿಮಗಿರುವ ಸಂಬಂಧ ಮುರಿದುಹೋಗದ ಕಾರಣ, ಅದು ಕೌಟುಂಬಿಕ ಸಂಬಂಧ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ಅತ್ತೆ-ಮಾವಂದಿರಿಂದ ನೀವು ಹಿಂಸೆಗೆ ಒಳಗಾದಲ್ಲಿ, ಅವರ ವಿರುದ್ಧ ನೀವು ದೂರು ಸಲ್ಲಿಸಬಹುದು. ಉದಾಹರಣೆಗೆ, ನೀವು ವಿಧವೆಯಾಗಿದ್ದು, ನಿಮ್ಮ ಅತ್ತೆ ನಿಮಗೆ ಕಿರುಕುಳ ಕೊಡುತ್ತಿದ್ದಲ್ಲಿ, ಅವರ ವಿರುದ್ಧ ದೂರು ಸಲ್ಲಿಸಬಹುದು.

ಒಂದು ಮಗುವಿನ ಮೇಲೆ ಲೈಂಗಿಕವಾಗಿ ದೌರ್ಜನ್ಯ ಮಾಡಲು ಸಹಾಯ ಮಾಡಿದರೆ ಶಿಕ್ಷೆ ಏನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಒಬ್ಬ ವ್ಯಕ್ತಿಯು ಒಂದು ಮಗುವನ್ನು ಲೈಂಗಿಕವಾಗಿ ದೌರ್ಜನ್ಯ ಮಾಡಲು ಯಾರಿಗಾದರೂ ಸಹಾಯ ಮಾಡಿದಾಗ ಅಥವಾ ಉದ್ದೇಶಪೂರ್ವಕವಾಗಿ ಪ್ರೋತ್ಸಾಹಿಸಿದಾಗ, ಅವರು ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದಕರಾಗುತ್ತಾರೆ.

ಉದಾಹರಣೆಗೆ, ಒಬ್ಬ ವ್ಯಕ್ತಿಯು ಒಂದು ಮಗುವಿನ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಬಯಸಿದರೆ ಮತ್ತು ಹಾಗೆ ಮಾಡಲು ಯಾರಾದರೂ ಅವರನ್ನು ಉದ್ದೇಶಪೂರ್ವಕವಾಗಿ ಪ್ರೋತ್ಸಾಹಿಸಿದರೆ, ಆ ವ್ಯಕ್ತಿಗೆ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದನೆಗಾಗಿ ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ.

ಹೀಗೆ ಪ್ರಚೋದನೆ ನೀಡುವವನಿಗೆ ಈ ಅಪರಾಧಕ್ಕಾಗಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.

ಅತ್ಯಾಚಾರವನ್ನು ವರದಿ ಮಾಡುವುದು

ಪೋಲೀಸ್

  1. ಅತ್ಯಾಚಾರದ ಅಪರಾಧ ಜರುಗಿದ್ದರೆ, ಪ್ರಥಮ ಮಾಹಿತಿ ವರದಿಯನ್ನು (FIR) ದಾಖಲಿಸುವ ಮೂಲಕ ಪೊಲೀಸರಿಗೆ ವರದಿ ಮಾಡುವುದು ಮೊದಲ ಮತ್ತು ಪ್ರಮುಖ ಕರ್ತವ್ಯವಾಗಿದೆ.13 ಇಲ್ಲವಾದರೆ, 1091 (ಮಹಿಳಾ ಸಹಾಯವಾಣಿ ಸಂಖ್ಯೆ) ಗೆ ಕರೆ ಮಾಡಿ ಮತ್ತು ಅತ್ಯಾಚಾರದ ಕುರಿತು ವರದಿ ಮಾಡಿ.

 

ಯಾರಾದರೂ ಅಪರಾಧವನ್ನು ತಕ್ಷಣವೇ ವರದಿ ಮಾಡದಿದ್ದರೂ, ವಿಳಂಬವಾದ FIR ಪ್ರಕರಣಕ್ಕೆ ಹಾನಿ ಮಾಡುತ್ತದೆ ಎಂದು ಇದರ ಅರ್ಥವಲ್ಲ. ತನಿಖೆ ನಡೆಸಲು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರಿಗೆ ಕಷ್ಟವಾಗಬಹುದು, ಆದರೆ ನಂತರದ ದಿನಾಂಕದಲ್ಲೂ FIR  ದಾಖಲಿಸಲು ಸಾಧ್ಯವಿದೆ.

 

  1. FIR ದಾಖಲಿಸಲು, ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ. ಪೊಲೀಸ್ ಠಾಣೆ ಅಪರಾಧ ನಡೆದ ಜಾಗದಲ್ಲೇ ಇರಬೇಕೆಂದೇನೂ ಇಲ್ಲ. ಪೊಲೀಸ್ ಠಾಣೆಯನ್ನು ಪತ್ತೆಹಚ್ಚಲು, ‘ಇಂಡಿಯನ್ ಪೊಲೀಸ್ ಅಟ್ ಯುವರ್ ಕಾಲ್’ ಆ್ಯಪ್ ಡೌನ್‌ಲೋಡ್ ಮಾಡಿ ಮತ್ತು ಹತ್ತಿರದ ಪೊಲೀಸ್ ಠಾಣೆಯನ್ನು ಪತ್ತೆ ಮಾಡಿ. ಇಲ್ಲದಿದ್ದರೆ, 100 ಗೆ ಕರೆ ಮಾಡಿ.

 

  1. ಹಲ್ಲೆಗೊಳಗಾದ ತಕ್ಷಣ ಪೊಲೀಸರನ್ನು ಸಂಪರ್ಕಿಸುವುದು, ಈಗಾಗಲೇ ಎದೆಗುಂದಿರುವ ಸಂತ್ರಸ್ತರಿಗೆ ತುಂಬಾ ಕಷ್ಟವಾಗಬಹುದು. ಆದಾಗ್ಯೂ,ಸಂತ್ರಸ್ತರು  ಇನ್ನು ಹೆದರಬೇಕಾಗಿಲ್ಲ. ಮಹಿಳೆಯು ಸ್ನೇಹಿತರ ಸಹಾಯವನ್ನು ಪಡೆಯಬಹುದು  ಅಥವಾ ದೂರು ಸಲ್ಲಿಸಲು ಸಹಾಯ ಮಾಡಲು ವಕೀಲರನ್ನು ಸಂಪರ್ಕಿಸಬಹುದು. ವಾಸ್ತವವಾಗಿ, ಮಹಿಳೆ ಸ್ವತಃ ಪೊಲೀಸರನ್ನು ಸಂಪರ್ಕಿಸಲು ಬಯಸದಿದ್ದರೆ ಇನ್ನೊಬ್ಬ ವ್ಯಕ್ತಿಯ ಮುಖಾಂತರ  ದೂರು ದಾಖಲಿಸಬಹುದು.14 ಸಂತ್ರಸ್ತರು  ತನ್ನ ದೂರಿನೊಂದಿಗೆ ಪೊಲೀಸರನ್ನು ಸಂಪರ್ಕಿಸಿದರೆ, ಮಾಹಿತಿಯನ್ನು ಮಹಿಳಾ ಅಧಿಕಾರಿ ಮಾತ್ರ ದಾಖಲಿಸಿಕೊಳ್ಳುತ್ತಾರೆ.

 

  1. ಸಂತ್ರಸ್ತೆಯು ದೈಹಿಕವಾಗಿ ಅಥವಾ ಮಾನಸಿಕವಾಗಿ ಅಶಕ್ತರಾಗಿದ್ದರೆ, ಪೋಲೀಸರು ಬಂದು ಆಕೆಯ ನಿವಾಸದಿಂದ ಅಥವಾ ಆಕೆಗೆ ಆರಾಮದಾಯಕವಾದ ಯಾವುದೇ ಸ್ಥಳದಿಂದ ದೂರನ್ನು ತೆಗೆದುಕೊಳ್ಳುತ್ತಾರೆ.15 ಸಂತ್ರಸ್ತೆಯ ಹೇಳಿಕೆಯನ್ನು ಆಕೆಯ ನಿವಾಸದಲ್ಲಿ ಅಥವಾ ಆಕೆಯ ಆಯ್ಕೆಯ ಯಾವುದೇ ಸ್ಥಳದಲ್ಲಿ ದಾಖಲಿಸಲಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ, ಮಹಿಳಾ  ಪೋಲೀಸ್ ಅಧಿಕಾರಿಯೊಬ್ಬರು ಸಂತ್ರಸ್ತೆಯ ಪಾಲಕರ/ಪೋಷಕರ/ಹತ್ತಿರದ ಸಂಬಂಧಿಕರ/ಪ್ರದೇಶದ ಸಾಮಾಜಿಕ ಕಾರ್ಯಕರ್ತರ ಸಮ್ಮುಖದಲ್ಲಿ ಹೇಳಿಕೆಯನ್ನು ದಾಖಲಿಸುತ್ತಾರೆ.16

 

  1. ಸಂತ್ರಸ್ತೆಯು ದಾಳಿಯ ಅಥವಾ ಒಂದೊಮ್ಮೆ ಆಕ್ರಮಣಕಾರರ ನಿರ್ದಿಷ್ಟ ವಿವರಗಳನ್ನೂ ಸಹಾ ಸಂಪೂರ್ಣವಾಗಿ ನೆನಪಿಟ್ಟುಕೊಳ್ಳದಿದ್ದರೆ, ತನಗೆ ನೆನಪಿರುವಷ್ಟು ವಿವರಗಳನ್ನು ಪೊಲೀಸರಿಗೆ ಹೇಳಿದರೆ ಸಾಕು.

 

  1. ಪೊಲೀಸರು ದೂರನ್ನು ಓದಿದ ನಂತರ, ಎಲ್ಲಾ ವಿವರಗಳೂ ಸರಿಯಾಗಿದ್ದರೆ, ದೂರುದಾರರು FIR ಗೆ ಸಹಿ ಮಾಡುತ್ತಾರೆ.17 ಯಾವುದೇ ಪೊಲೀಸ್ ಅಧಿಕಾರಿ FIR  ದಾಖಲಿಸಲು ನಿರಾಕರಿಸಿದರೆ ಅಥವಾ ಅಪರಾಧದ ಮಾಹಿತಿಯನ್ನು ಲಿಖಿತವಾಗಿ ಮತ್ತು ಅಂಚೆ ಮೂಲಕ ದಾಖಲಿಸಲು ವಿಫಲವಾದರೆ ಪೊಲೀಸ್ ಅಧೀಕ್ಷಕರೊಂದಿಗೆ ಹಂಚಿಕೊಳ್ಳಲಾಗುವುದು, ಅವರು ಪ್ರಕರಣವನ್ನು ಮತ್ತಷ್ಟು ತನಿಖೆ ಮಾಡಬಹುದು ಅಥವಾ ತನಿಖೆಯನ್ನು ಮಾಡುವಂತೆ ನಿರ್ದೇಶಿಸಬಹುದು, ಅವರು ಹಾಗೆ ಮಾಡಲು ವಿಫಲರಾದರೆ, ನೊಂದ ವ್ಯಕ್ತಿ ಮ್ಯಾಜಿಸ್ಟ್ರೇಟ್‌ಗೆ ಅರ್ಜಿಯನ್ನು ಸಲ್ಲಿಸಬಹುದು.18

 

  1. ದೂರುದಾರರು FIR ನ ಪ್ರತಿಯನ್ನು ಉಚಿತವಾಗಿ ಪಡೆಯಬಹುದು.19 FIR ಸಂಖ್ಯೆ, FIR  ದಿನಾಂಕ ಮತ್ತು ಪೊಲೀಸ್ ಠಾಣೆಯ ಹೆಸರನ್ನು ಬಳಸಿಕೊಂಡು FIR ಅನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು..

 

  1. FIR ದಾಖಲಾದ ನಂತರ, ಅದರ ವಿಷಯಗಳನ್ನು ಬದಲಾಯಿಸಲಾಗುವುದಿಲ್ಲ. ಆದಾಗ್ಯೂ, ಹೆಚ್ಚುವರಿ ಮಾಹಿತಿಯನ್ನು ನಂತರ ಯಾವುದೇ ಹಂತದಲ್ಲಿ ಪೊಲೀಸರಿಗೆ ನೀಡಬಹುದು.

 

ಏಕ ನಿರ್ಮಿತಿ ಕೇಂದ್ರಗಳು/ ಒನ್ ಸ್ಟಾಪ್ ಸೆಂಟರ್

 

ಸಂತ್ರಸ್ತರು ಏಕ ನಿರ್ಮಿತಿ ಕೇಂದ್ರಗಳನ್ನು ಸಹ ಸಂಪರ್ಕಿಸಬಹುದು, ಇದು ಹಿಂಸೆಗೊಳಗಾದ ಮಹಿಳೆಯರಿಗೆ ಉನ್ನತ ಶ್ರೇಣಿಯ ಸೇವೆಗಳನ್ನು ಒದಗಿಸುತ್ತವೆ. ಈ ಸೇವೆಗಳಲ್ಲಿ ವೈದ್ಯಕೀಯ ನೆರವು, ಪೊಲೀಸ್ ನೆರವು, ಕಾನೂನು ನೆರವು / ಪ್ರಕರಣ ನಿರ್ವಹಣೆ, ಮಾನಸಿಕ ಸಮಾಲೋಚನೆ ಮತ್ತು ತಾತ್ಕಾಲಿಕ  ಆರೈಕೆಗಳು ಒಳಗೊಂಡಿರುತ್ತವೆ.

ಕೌಟುಂಬಿಕ ಹಿಂಸೆಯ ಸಹಾಯವಾಣಿಗಲ್ಯಾವುವು?

ನಿಮಗೆ ಸಂಬಂಧಪಟ್ಟ ರಕ್ಷಣಾಧಿಕಾರಿಗಳನ್ನು ಗುರುತಿಸಲು, ಹೆಚ್ಚುವರಿ ಸಹಾಯ ಮತ್ತು ಬೆಂಬಲ ನೀಡಲು, ದೂರು ದಾಖಲಿಸಲು ಸಹಾಯ ಮಾಡಲು ಕೆಲವು ಸಹಾಯವಾಣಿಗಳ ನೆರವು ಪಡೆಯಬಹುದು. ಸಂಬಂಧಪಟ್ಟ ಸರ್ಕಾರಿ ಸಹಾಯವಾಣಿಗಳ ಪಟ್ಟಿ ಕೆಳಗಿದೆ:

ಹಿಂಸೆ ಮತ್ತು ಅಪರಾಧಗಳು

೧. ಪೊಲೀಸ್:

ನಿಮ್ಮ ಮೇಲೆ ಹಿಂಸೆ ಆಗುತ್ತಿದ್ದಲ್ಲಿ ೧೦೦ಕ್ಕೆ ಕರೆ ಮಾಡಿ ಪೊಲೀಸರಿಂದ ತಕ್ಷಣದ ಸಹಾಯ ಪಡೆಯಬಹುದು. ನೀವಿರುವ ಸ್ಥಳ ಗೊತ್ತಾದ ನಂತರ ನಿಮ್ಮ ಸಹಾಯಕ್ಕೆ ಪೊಲೀಸರು ಅವರ ಒಂದು ಪಡೆ ಕಳಿಸುತ್ತಾರೆ.

೨. ರಾಷ್ಟ್ರೀಯ ಮಹಿಳಾ ಆಯೋಗ, ಪೊಲೀಸ್ ವಿಭಾಗ:

ನೀವು ಹಿಂಸೆಗೆ ಒಳಗಾದಲ್ಲಿ, ಕರೆ ಮಾಡಿ ದೂರು ನೀಡಬಹುದು. ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ:

ಹಂತ ೧: ೧೦೯೧ಕ್ಕೆ ಕರೆ ಮಾಡಿ ಹಂತ ೨: ಅಪರಾಧವನ್ನು ವಿವರವಾಗಿ ವರ್ಣಿಸಿ

ಹಂತ ೩: ನಿಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನೀಡಿ ಪೊಲೀಸರನ್ನು ನಿಮ್ಮ ರಕ್ಷಣೆಗಾಗಿ ಕೊಟ್ಟ ವಿಲ್ಲಾಸಕ್ಕೆ ಕಳಿಸುತ್ತಾರೆ.

ಕಾಣೆಯಾದ ವ್ಯಕ್ತಿಗಳು ಮತ್ತು ಅಪಹರಣಗಳು:

ಕಾಣೆಯಾದ ಮಹಿಳೆಯರು ಮತ್ತು ಮಕ್ಕಳು: ಈ ಸಹಾಯವಾಣಿ ಕಾಣೆಯಾದ ವ್ಯಕ್ತಿಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ:

ಹಂತ ೧: ೧೦೯೪ಕ್ಕೆ ಕರೆ ಮಾಡಿ.

ಹಂತ ೨: ಕಾಣೆಯಾದ ವ್ಯಕ್ತಿಯ ದೂರವಾಣಿ ಸಂಖ್ಯೆಯನ್ನು ನೀಡಿ

ಹಂತ ೩: ಜಿಪ್ನೆಟ್/ZIPNET (Zonal Integrated Police Network) ನಲ್ಲಿ ದೂರವಾಣಿ ಸಂಖ್ಯೆಯ ಹುಡುಕಾಟ ನಡೆಸಿ, ಕಾಣೆಯಾದ ವ್ಯಕ್ತಿ ಎಲ್ಲಿದ್ದಾರೆ ಎಂದು ಕಂಡು ಹಿಡಿದು, ಪೊಲೀಸರನ್ನು ಸಂಪರ್ಕಿಸುತ್ತಾರೆ.

ಹಂತ ೪: ಅವರಿಂದ ಕಾಣೆಯಾದ ವ್ಯಕ್ತಿಯನ್ನು ಹುಡುಕಲು ಆಗಲಿಲ್ಲವಾದಲ್ಲಿ, ತಳಮಟ್ಟದಲ್ಲಿ ಹುಡುಕಾಟವನ್ನು ಮುಂದುವರೆಸಲು ಪೊಲೀಸರನ್ನು ಸಂಪರ್ಕಿಸುತ್ತಾರೆ.

ಒಂದು ಮಗು ಮತ್ತೊಂದು ಮಗುವಿಗೆ ಲೈಂಗಿಕ ದೌರ್ಜನ್ಯ ಮಾಡಿದರೆ ಏನಾಗುತ್ತದೆ?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

7 ವರ್ಷಕ್ಕಿಂತ ಮೇಲ್ಪಟ್ಟಒಂದು ಮಗು ಮತ್ತೊಂದು ಮಗುವಿಗೆ ಲೈಂಗಿಕ ಕಿರುಕುಳ ನೀಡಿದರೆ ಅಥವಾ ಲೈಂಗಿಕ ಅತ್ಯಾಚಾರ ಮಾಡಿದರೆ, ಅವರನ್ನು ದೌರ್ಜನ್ಯ ಮಾಡುವವರೆಂದು ಪರಿಗಣಿಸಿ, ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ರ ಅಡಿಯಲ್ಲಿ ಶಿಕ್ಷಿಸಬಹುದು. ಮಗುವು 16 ರಿಂದ 18 ವರ್ಷ ವಯಸ್ಸಿನವರಾಗಿದ್ದರೆ, ಅವರನ್ನು ವಯಸ್ಕರಂತೆ ವಿಚಾರಣೆಗೆ ಒಳಪಡಿಸಬಹುದು ಮತ್ತು ಭಾರತೀಯ ದಂಡ ಸಂಹಿತೆ, 1860 ರ ಅಡಿಯಲ್ಲಿ ಅಪರಾಧಗಳಿಗಾಗಿ ಶಿಕ್ಷಿಸಬಹುದು.

7 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗುವಿಗೆ ಅಪರಾಧ ಮಾಡುವ ಮಾನಸಿಕ ಸಾಮರ್ಥ್ಯವಿಲ್ಲ ಎಂದು ಕಾನೂನು ಭಾವಿಸುತ್ತದೆ, ಏಕೆಂದರೆ ಮಗುವಿಗೆ ಅವರ ಕ್ರಿಯೆಗಳ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಾಮರ್ಥ್ಯವಿಲ್ಲ. ನಮ್ಮ “ಅಪರಾಧಗಳ ಆರೋಪ ಹೊತ್ತಿರುವ ಮಕ್ಕಳು” ವಿವರಣೆಯಲ್ಲಿ ಇನ್ನಷ್ಟು ಓದಿ.

ವೈದ್ಯಕೀಯ ಸೇವೆಗಾಗಿ ಬೇಡಿಕೆ

ಸಂತ್ರಸ್ತರು ವೈದ್ಯಕೀಯ ಸಂಸ್ಥೆಗಳಿಂದ (ಸಾರ್ವಜನಿಕ ಮತ್ತು ಖಾಸಗಿ ಎರಡೂ) ತಕ್ಷಣದ ಮತ್ತು ಉಚಿತ ಪ್ರಥಮ ಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಸಂಸ್ಥೆಯು ಅಪರಾಧ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಬೇಕು.20 ಸಂಸ್ಥೆಯು ಚಿಕಿತ್ಸೆ ನೀಡಲು ಮತ್ತು ಪೊಲೀಸರಿಗೆ ತಿಳಿಸಲು ನಿರಾಕರಿಸಿದರೆ, ಸಂಸ್ಥೆಯ ಮೇಲ್ವಿಚಾರಕರಿಗೆ  ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು/ಅಥವಾ  ದಂಡ ವಿಧಿಸಬಹುದು.21

ಕ್ರಿಮಿನಲ್ ಘಟನೆಯ ಬಗ್ಗೆ ಮಾಹಿತಿ ಪಡೆದ 24 ಗಂಟೆಗಳ ಒಳಗೆ, ಸಂತ್ರಸ್ತರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಅಧಿಕೃತ ವೈದ್ಯರ ಬಳಿಗೆ ಕಳುಹಿಸುತ್ತಾರೆ. ವೈದ್ಯಕೀಯ ಪರೀಕ್ಷೆಯು ಸಂತ್ರಸ್ತರ ಒಪ್ಪಿಗೆಯೊಂದಿಗೆ ಅಥವಾ ಅವಳ ಪರವಾಗಿ ಒಪ್ಪಿಗೆ ನೀಡುವ ಯಾರೊಬ್ಬರ ಒಪ್ಪಿಗೆಯೊಂದಿಗೆ ಮಾತ್ರ ನಡೆಸಬಹುದು. ಒಪ್ಪಿಗೆಯನ್ನು ಪಡೆದ ನಂತರ, ವೈದ್ಯರು ತಕ್ಷಣವ ಸಂತ್ರಸ್ತರನ್ನು   ಪರೀಕ್ಷಿಸುತ್ತಾರೆ ಮತ್ತು ಸಂತ್ರಸ್ತರ ಗಾಯಗಳು, ಮಾನಸಿಕ ಸ್ಥಿತಿ ಇತ್ಯಾದಿಗಳ ಬಗ್ಗೆ ವಿವರವಾದ ವರದಿಯನ್ನು ಸಿದ್ಧಪಡಿಸುತ್ತಾರೆ.23 ವರದಿಯಲ್ಲಿ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದು ದಾಖಲಿಸಲಾಗುತ್ತದೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಪ್ರಾರಂಭಿಸಿದ ಮತ್ತು ಪೂರ್ಣಗೊಳಿಸಿದ ನಿಖರವಾದ ಸಮಯವನ್ನು ನಮೂದಿಸಲಾಗುತ್ತದೆ.24 ನೋಂದಾಯಿತ ವೈದ್ಯರು ಏಳು ದಿನಗಳ ಅವಧಿಯೊಳಗೆ ವರದಿಯನ್ನು ತನಿಖಾಧಿಕಾರಿಗೆ ರವಾನಿಸಬೇಕು ಮತ್ತು ಅವರು ಅದನ್ನು ಮ್ಯಾಜಿಸ್ಟ್ರೇಟ್‌ ಅವರಿಗೆ ರವಾನಿಸಬೇಕು.25

ಕೌಟುಂಬಿಕ ಹಿಂಸೆಯ ವಿರುದ್ಧ ನೀವು ಸಹಾಯ ಮತ್ತು ಬೆಂಬಲ ಹೇಗೆ ಪಡೆಯಬಹುದು?

ಕೌಟುಂಬಿಕ ಹಿಂಸೆಯ ದೂರು ನೀಡುವಾಗ ನಿಮಗೆ ಹೆಚ್ಚುವರಿ ಸಹಾಯ ಮತ್ತು ಬೆಂಬಲ ಬೇಕಾಗಬಹುದು. ಕೆಳಗಿನ ಅಧಿಕಾರಿಗಳ ನೆರವಿನಿಂದ ನೀವು ಈ ಸಹಾಯ ಮತ್ತು ಬೆಂಬಲ ಪಡೆಯಬಹುದು.

ಬೆಂಬಲ ಮತ್ತು ನೆರವು

ರಕ್ಷಣಾಧಿಕಾರಿಗಳು:

ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳನ್ನು ನೀವು ಸಂಪರ್ಕಿಸಿದರೆ ಅವರು ನಿಮಗೆ ಉಚಿತ ಕಾನೂನು ನೆರವು, ಸರ್ಕಾರಿ ಆಶ್ರಯದ ನೆರವು, ಬೇಕಾದಲ್ಲಿ ಸೂಕ್ತ ಸೇವಾ ಕಾರ್ಯಕರ್ತರ ಸಂಪರ್ಕವನ್ನು ಕಲ್ಪಿಸಿಕೊಡುತ್ತಾರೆ.

ಸರ್ಕಾರೇತರ ಸಂಸ್ಥೆಗಳು ಮತ್ತು ಸೇವಾ ಕಾರ್ಯಕರ್ತರು:

ನಿಮಗೆ ಕಾನೂನು ನೆರವು, ಹಕ್ಕುಗಳ ಬಗ್ಗೆ ಮಾಹಿತಿ, ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಸಂಪರ್ಕ, ಇತರೆ ಸಹಾಯ ಅಥವಾ ಬೆಂಬಲ ಬೇಕಾದಲ್ಲಿ, ಸರ್ಕಾರೇತರ ಸಂಸ್ಥೆಗಳನ್ನು ಅಥವಾ ಸೇವಾ ಕಾರ್ಯಕರ್ತರನ್ನು ಸಂಪರ್ಕಿಸಬಹುದು. ಆಯಾ ಸಂಸ್ಥೆಗೆ ಸಂಬಂಧಪಟ್ಟಂತೆ ಅವರು ನಿಮಗೆ ಆಶ್ರಯ, ಉದ್ಯೋಗಾವಕಾಶಗಳು, ವೃತ್ತಿಪರ ತರಬೇತಿ, ಸಮಾಲೋಚನೆ, ಇತ್ಯಾದಿ ಬೆಂಬಲ/ಅವಕಾಶಗಳನ್ನೂ ಒದಗಿಸಿ ಕೊಡಬಹುದು. ಬಹುತೇಕ ಈ ಸೇವೆಗಳು ಉಚಿತವಾಗಿ ಲಭ್ಯವಿದ್ದು, ಇದು ನೀವು ಸಂಪರ್ಕಿಸಿದ ಸಂಸ್ಥೆಯನ್ನವಲಂಬಿಸಿದೆ.

ಸೇವಾ ಕಾರ್ಯಕರ್ತರಿಗೆ ಡಿ.ಐ.ಆರ್.ಅನ್ನು ದಾಖಲಿಸಿ ಸಂಬಂಧಪಟ್ಟ ನ್ಯಾಯಾಲಯ ಅಥವಾ ರಕ್ಷಣಾಧಿಕಾರಿಗಳಿಗೆ ಕಲಿಸುವ ಅಧಿಕಾರ ಇರುತ್ತದೆ. ನಿಮಗೆ ಶಾರೀರಿಕವಾಗಿ ಪೆಟ್ಟು ಬಿದ್ದಿದ್ದಲ್ಲಿ, ನಿಮ್ಮ ವೈದ್ಯಕೀಯ ತಪಾಸಣೆ ನಡೆಸಿ, ನಿಮ್ಮ ವೈದ್ಯಕೀಯ ವರದಿಯನ್ನು ಸಂಬಂಧಪಟ್ಟ ರಕ್ಷಣಾಧಿಕಾರಿಗಳು ಅಥವಾ ಪೊಲೀಸ್ ಠಾಣೆಗೆ ಕಳುಹಿಸಲೂ ಸಹ ಅವರು ಸಹಾಯ ಮಾಡಬಲ್ಲರು.

ಕಾನೂನು ನೆರವು:

ವಕೀಲರ ನೆರವು ಪಡೆಯುವುದು:

ನೀವು ವಕೀಲರ ನೆರವಿನಿಂದ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹೋಗಬಹುದು. ವಕೀಲರ ಬಳಿ ಹೋಗುವುದು ನಿಮಗೆ ದುಬಾರಿ ಎನಿಸಿದ್ದಲ್ಲಿ, ನಿಮ್ಮ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರವನ್ನು ಸಂಪರ್ಕಿಸಿ ಉಚಿತ ಕಾನೂನು ನೆರವು ಪಡೆಯಬಹುದು. ಉಚಿತ ಕಾನೂನು ನೆರವು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ನೀವು ರಕ್ಷಣಾಧಿಕಾರಿಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ, ಅಥವಾ ಸೇವಾ ಕಾರ್ಯಕರ್ತರಿಗೆ ಕೇಳಬಹುದು.

ಕುಟುಂಬ ಸದಸ್ಯರಿಂದ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ ಏನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

ಒಂದು ಮಗುವಿಗೆ ಕುಟುಂಬದ ಸದಸ್ಯರಿಂದ ಲೈಂಗಿಕ ದೌರ್ಜನ್ಯ ಆದಾಗ, ಅವರು ಕುಟುಂಬದ ಸದಸ್ಯರಲ್ಲದವರಿಗಿಂತ ಹೆಚ್ಚು ಕಠಿಣ ಶಿಕ್ಷೆಯನ್ನು ಎದುರಿಸುತ್ತಾರೆ ಏಕೆಂದರೆ ಅವರು ಅಧಿಕಾರ ಮತ್ತು ನಂಬಿಕೆಯ ಸ್ಥಾನದಲ್ಲಿರುತ್ತಾರೆ. ಮಗುವಿನ ಕುಟುಂಬದ ಸದಸ್ಯರು ಕೆಳಕಂಡ ಯಾರನ್ನಾದರೂ ಒಳಗೊಂಡಿರಬಹುದು:

  • ರಕ್ತ, ದತ್ತು, ಮದುವೆ, ಪಾಲನೆ ಅಥವಾ ಪೋಷಣೆಯ ಮೂಲಕ ಅವರಿಗೆ ಸಂಬಂಧಿಸಿದವರು; ಅಥವಾ
  • ಪೋಷಕರು ಅಥವಾ ಮಗುವಿನೊಂದಿಗೆ ಗೃಹಾಸಕ್ತ ಸಂಬಂಧವನ್ನು ಹೊಂದಿರುವ ಯಾರಾದರೂ; ಅಥವಾ ಮಗುವಿನಂತೆ ಒಂದೇ ಮನೆಯಲ್ಲಿ ವಾಸಿಸುವ ಕುಟುಂಬ ಸದಸ್ಯರು.

ಮಾಡಿದ ಅಪರಾಧಕ್ಕೆ ಅನುಗುಣವಾಗಿ ಕುಟುಂಬದ ಸದಸ್ಯರಿಗೆ ಶಿಕ್ಷೆಯು ಬದಲಾಗುತ್ತದೆ.

ಒಂದು ಮಗುವು ಕುಟುಂಬದ ಸದಸ್ಯರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರೆ ಅಥವಾ ಕುಟುಂಬದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಗುವಿನ ಬಗ್ಗೆ ಯಾರಿಗಾದರೂ ತಿಳಿದಿದ್ದರೆ, ಅಪರಾಧವನ್ನು ಪೊಲೀಸರಿಗೆ ವರದಿ ಮಾಡಿ.

ಸಂತ್ರಸ್ತರ ಗುರುತನ್ನು ರಕ್ಷಿಸುವುದು

ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವ ಹೆಸರು ಅಥವಾ ಯಾವುದೇ ವಿಷಯವನ್ನು ಮುದ್ರಿಸಲು ಅಥವಾ ಪ್ರಕಟಿಸಲು ಯಾರಿಗೂ ಅನುಮತಿ ಇಲ್ಲ. ಹಾಗೆ ಮಾಡಿದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.26 ನ್ಯಾಯಾಲಯದಿಂದ ಅನುಮತಿ ಪಡೆಯದೆ, ಪ್ರಸ್ತುತ ನ್ಯಾಯಾಲಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣದ ಕುರಿತು ಯಾವುದೇ ವಿಷಯವನ್ನು ಮುದ್ರಿಸಿದರೆ ಅಥವಾ ಪ್ರಕಟಿಸಿದರೆ, ಅವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ.27

 

ಸಂತ್ರಸ್ತರ ಗುರುತನ್ನು ಈ ಸಂಧರ್ಬಗಳಲ್ಲಿ ಮಾತ್ರ ಬಹಿರಂಗಪಡಿಸಬಹುದು:28

  • ತನಿಖೆಯ ಉದ್ದೇಶಗಳಿಗಾಗಿ – ಈ ಸಂದರ್ಭದಲ್ಲಿ, ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಥವಾ ಪ್ರಕರಣವನ್ನು ತನಿಖೆ ಮಾಡುವ ಪೊಲೀಸ್ ಅಧಿಕಾರಿ ಮಾತ್ರ ಗುರುತನ್ನು ಬಹಿರಂಗಪಡಿಸಬಹುದು.
  • ಸಂತ್ರಸ್ತರಿಂದ, ಅಥವಾ ಅವಳ ಲಿಖಿತ ಅನುಮತಿಯೊಂದಿಗೆ.
  • ಸಂತ್ರಸ್ತರ ನಿಕಟವರ್ತಿಗಳಿಂದ, ಅಥವಾ ಅವರ ಅನುಮತಿಯೊಂದಿಗೆ – ಮಹಿಳೆ ಮರಣ ಹೊಂದಿದ್ದರೆ, ಅಥವಾ ಅಪ್ರಾಪ್ತರಾಗಿದ್ದರೆ ಅಥವಾ ಅಸ್ವಸ್ಥ ಮನಸ್ಸಿನವರಾಗಿದ್ದರೆ, ಇದನ್ನು ಅನುಮತಿಸಲಾಗುತ್ತದೆ. ಈ ಸಂದರ್ಭದಲ್ಲಿ, ಕುಟುಂಬವು ಯಾವುದೇ ಮಾನ್ಯತೆ ಪಡೆದ ಕಲ್ಯಾಣ ಸಂಸ್ಥೆ ಅಥವಾ ಸಂಸ್ಥೆಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಗೆ ಮಾತ್ರ ಅಂತಹ ಅನುಮತಿಯನ್ನು ನೀಡಬಹುದು.