ಮದುವೆಗೆ ಸಂಬಂಧಪಟ್ಟ ಕಾನೂನುಗಳ ಬಗ್ಗೆ ಇಲ್ಲಿ ತಿಳಿಯಿರಿ.
Theme: Marriage
ಬಾಲ್ಯ ವಿವಾಹ
ಕ್ರಿಶ್ಚಿಯನ್ ಕಾನೂನಿನಡಿ ಯಾರು ಮದುವೆಯಾಗಬಹುದು?
ದಂಪತಿಗಳಲ್ಲಿ ಯಾರಾದರೂ ಒಬ್ಬರು, ಅಥವಾ ಇಬ್ಬರೂ ಕ್ರೈಸ್ತಮತಕ್ಕೆ ಸೇರಿದವರಾಗಿದ್ದರೆ, ಆ ದಂಪತಿಗಳು ಕ್ರಿಶ್ಚಿಯನ್ ಕಾನೂನಿನಡಿ ಮದುವೆಯಾಗಬಹುದು. ಕಾನೂನಿನ ದೃಷ್ಟಿಯಲ್ಲಿ, ಯಾರು ಸಂಪೂರ್ಣವಾಗಿ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಇಟ್ಟಿದ್ದಾರೋ, ಅವರು ಕ್ರೈಸ್ತರು. ಹೀಗಿರುವಾಗ, ಅವರು ಇಗರ್ಜಿಯಲ್ಲಿ ದೀಕ್ಷಾಸ್ನಾನ ಪಡೆದಿರುವರೋ ಇಲ್ಲವೋ ಎಂಬುದು ಮುಖ್ಯವಾಗುವುದಿಲ್ಲ. ಬದಲಿಗೆ, ಅವರ ಕ್ರೈಸ್ತಮತದಲ್ಲಿನ ನಂಬಿಕೆಯ ನಿಖರತೆಯನ್ನು ಕಾನೂನು ಪರಿಶೀಲಿಸುತ್ತದೆ.
ಮದುವೆಯಾಗಲು ಕನಿಷ್ಟ ವಯಸ್ಸು:
ಮದುವೆಯಾಗಲು ಕಾನೂನು ಕನಿಷ್ಠ ವಯಸ್ಸನ್ನು ಸೂಚಿಸಿಲ್ಲವಾದರೂ, ಅಲ್ಪವಯಸ್ಕರ ಮದುವೆಗೆ ವಿಶಿಷ್ಟ ಕಾರ್ಯವಿಧಾನವನ್ನು ಉಲ್ಲೇಖಿಸಿದೆ. ಕ್ರಿಶ್ಚಿಯನ್ ಮದುವೆಯ ಸಂಬಂಧ ಪಟ್ಟಂತೆ, ೨೧ರ ಕೆಳಗಿನವರು, ಮತ್ತು ವಿಧವೆ/ವಿಧುರರಲ್ಲರವರು ಅಲ್ಪವಯಸ್ಕರು ಎಂದು ಕರೆಯಲ್ಪಡುತ್ತಾರೆ. ಆದಾಗ್ಯೂ, ಬಾಲ್ಯ ವಿವಾಹ ನಿಷೇಧ ಕಾಯಿದೆಯಡಿ, ೧೮ರ ಒಳಗಿನವರ ಎಲ್ಲ ಮದುವೆಗಳು ಅಮಾನ್ಯ ಹಾಗು ಅನೂರ್ಜಿತ (ಆ ಅಲ್ಪಾಯುವಿನ ಆಯ್ಕೆಯಂತೆ) ಎಂದು ಘೋಷಿಸಲಾಗಿದೆ. ಆ ಅಲ್ಪವಯಸ್ಕ ೧೮ರಿಂದ ೨೧ರ ನಡುವೆ ಇದ್ದು, ಅವರು ಕಾನೂನುಬದ್ಧವಾಗಿ ಮದುವೆಯಾಗಬೇಕೆಂದಲ್ಲಿ, ಅವರ ತಂದೆ, ತಾಯಿ, ಅಥವಾ ಪಾಲಕರು/ಪೋಷಕರ ಒಪ್ಪಿಗೆ ಬೇಕಾಗುತ್ತದೆ.
ಕ್ರಿಶ್ಚಿಯನ್ ಕಾನೂನಿನಡಿ ನಿಷೇಧಿಸಲಾದ ಮದುವೆಗಳು:
ಕೆಲವು ವೈಯಕ್ತಿಕ ಕಾನೂನುಗಳು ಯಾವ ವ್ಯಕ್ತಿ ಯಾರನ್ನು ಮದುವೆಯಾಗಬಹುದು ಎಂಬುದರ ಬಗ್ಗೆ ಕಟ್ಟಳೆಗಳನ್ನು ಹಾಕುತ್ತವೆ. ಉದಾಹರಣೆಗೆ, ಸಹೋದರ/ರಿಯರ ನಡುವೆ. ಕ್ರಿಶ್ಚಿಯನ್ ಕಾನೂನು ಕೂಡ ಇಂತಹ ಮದುವೆಗಳನ್ನು ಒಪ್ಪುವುದಿಲ್ಲ, ಮತ್ತು ಇವುಗಳನ್ನು ಅಮಾನ್ಯ ಎಂದು ಪರಿಗಣಿಸುತ್ತದೆ. ಆದರೆ, ವೈಯಕ್ತಿಕ ಕಾನೂನುಗಳ ಕಟ್ಟಳೆಗಳ ಹೊರಗೆ, ಯಾವುದೇ ವ್ಯಕ್ತಿಯು ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾಗಬಹುದು.
ಬಾಲ್ಯ ವಿವಾಹ
ಯಾವುದೇ ವಿವಾಹವು ಕಾನೂನಿನಡಿ ಬಾಲ್ಯ ವಿವಾಹವೆಂದು ಪರಿಗಣಿಸಬೇಕಾದಲ್ಲಿ:
- ಮದುವೆಯಾಗುವ ಇಬ್ಬರೂ ಅಪ್ರಾಪ್ತ ವಯಸ್ಸಿನವರಾಗಿರಬೇಕು, ಅಥವಾ
- ಮದುವೆಯಾಗುವ ಕನಿಷ್ಠ ಒಬ್ಬರು ಅಪ್ರಾಪ್ತ ವಯಸ್ಸಿನವರಾಗಿರಬೇಕು.
ಕಾನೂನಿನಡಿ ಮಹಿಳೆಯರ ಮದುವೆಯ ವಯಸ್ಸು ೧೮, ಹಾಗು ಪುರುಷರದು ೨೧ ಆಗಿದೆ.
ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಪ್ರೌಢಾವಸ್ಥೆಯೇ (೧೫ ವರ್ಷಗಳು) ಮದುವೆಯ ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ನೀವು ೧೮/೨೧ ವರ್ಷಗಳ ಕೆಳಗಿದ್ದು, ಮದುವೆಯಾದರೆ, ನಿಮ್ಮ ಮದುವೆ ಅಕ್ರಮವಲ್ಲ. ಆದಾಗ್ಯೂ, ಬಾಲ್ಯ ವಿವಾಹ ಕಾನೂನಿನಡಿ, ಬೇಕಾದಲ್ಲಿ ನೀವು ನಿಮ್ಮ ಮದುವೆಯನ್ನು ರದ್ದುಗೊಳಿಸಬಹುದು.
ಕ್ರಿಶ್ಚಿಯನ್ ಮದುವೆಯನ್ನು ಯಾರು ನೆರವೇರಿಸಬಹುದು?
ಕೆಳಗಿನವರು ಕಾನೂನುಬದ್ಧವಾಗಿ ಕ್ರೈಸ್ತಮತೀಯ ಮದುವೆಗಳನ್ನು ನೆರವೇರಿಸಬಹುದು:
- ಚರ್ಚಿನಿಂದ ಪಾದ್ರಿ/ ಧಾರ್ಮ ಸಚಿವರಾಗುವ ದೀಕ್ಷೆ ಪಡೆದವರು
- ಸ್ಕಾಟ್ಲೆಂಡಿನ ಇಗರ್ಜಿಯ ಪಾದ್ರಿಗಳು
- ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ಮದುವೆ ನೆರವೇರಿಸಲು ಪರವಾನಗಿ ಪಡೆದ ಧರ್ಮ ಸಚಿವರು
- ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ನೇಮಕಗೊಂಡ ವಿವಾಹ ಕುಲಸಚಿವರು. ಈ ಕುಲಸಚಿವರ ಉಪಸ್ಥಿತಿಯಲ್ಲಿ, ಅಥವಾ ಅವರ ನಾಯಕತ್ವದಲ್ಲಿ ಮದುವೆ ನೆರವೇರಬೇಕು.
- ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ವಿವಾಹ ಪ್ರಮಾಣಪತ್ರ ಅನುದಾನಿಸುವ ಪರವಾನಗಿ ಪಡೆದ ಯಾವುದೇ ವ್ಯಕ್ತಿ.
ಸ್ಕಾಟ್ಲೆಂಡಿನ ಚರ್ಚಿನ ಧರ್ಮ ಸಚಿವರು, ಅಥವಾ ಪಾದ್ರಿಯವರಿಂದ ನೆರವೇರಿಸಲಾಗುವ ಎಲ್ಲ ಮದುವೆಗಳು, ಆ ಪಂಗಡದ ಚರ್ಚಿನ ನಿಯಮಗಳು, ವಿಧಿಗಳು, ಸಮಾರಂಭಗಳು, ಮತ್ತು ಸಂಪ್ರದಾಯಗಳ ಅನುಸಾರ ನಡೆಯಬೇಕಾಗುತ್ತವೆ. ಆದರೆ, ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ಪರವಾನಗಿ ಪಡೆದ ಧಾರ್ಮ ಸಚಿವರು, ವಿವಾಹ ಪ್ರಮಾಣಪತ್ರ ಅನುದಾನಿಸುವ ಪರವಾನಗಿ ಪಡೆದ ಯಾವುದೇ ವ್ಯಕ್ತಿ, ಅಥವಾ ಈ ಕಾಯಿದೆಯಡಿ ನೇಮಕಗೊಂಡ ವಿವಾಹ ಕುಲಸಚಿವರು ಮದುವೆ ನೆರವೇರಿಸುವುದಿದ್ದಲ್ಲಿ, ಈ ಕಾಯಿದೆಯಲ್ಲಿ ಉಲ್ಲೇಖಿಸಿರುವ ಕಾರ್ಯವಿಧಾನಾನುಸಾರ ಮದುವೆಯನ್ನು ನೆರವೇರಿಸಬೇಕಾಗುತ್ತದೆ. ಈ ಕಾರ್ಯವಿಧಾನಗಳು ಯಾರು ಮದುವೆಯನ್ನು ನೆರವೇರಿಸುತ್ತಿದ್ದಾರೆ ಎಂಬುದರ ಮೇಲೆ ಬದಲಾಗುವುದುಂಟು.
ಬಾಲ್ಯ ವಿವಾಹದ ನಿಷೇಧ
ಬಾಲ್ಯ ವಿವಾಹಗಳು ಭಾರತದಲ್ಲಿ ಸಾವಿರಾರು ವರ್ಷಗಳಿಂದ ನಡೆಯುತ್ತಾ ಬಂದಿವೆ. ಈ ಸಾಮಾಜಿಕ ಸಮಸ್ಯೆಯನ್ನು ಪರಿಹರಿಸಲು ನಮ್ಮ ಕಾನೂನು ಬಾಲ್ಯ ವಿವಾಹ ನೆರವೇರಿಸುವುದನ್ನು
ನಿಷೇಧಿಸಿದೆ ಹಾಗು ಇಂತಹ ವಿವಾಹಗಳ ನಿರ್ವಹಣೆಯಲ್ಲಿ ತೊಡಗಿದವರಿಗೆ ಶಿಕ್ಷೆಯನ್ನು ವಿಧಿಸುತ್ತದೆ.
ಆದಾಗ್ಯೂ, ಅಪ್ರಾಪ್ತವಯಸ್ಕರು ಮದುವೆಯಾದಲ್ಲಿ ಕಾನೂನಿನಡಿ ಅದು ಅಮಾನ್ಯವಲ್ಲ. ಆದ ಮದುವೆಯನ್ನು ಮುಂದುವರಿಸಬೇಕೋ ಅಥವಾ ರದ್ದುಪಡಿಸಬೇಕೋ ಎಂಬ ನಿರ್ಧಾರ ಆ ಸಂಬಂಧಪಟ್ಟ ಮಕ್ಕಳದ್ದು.
ಭಾರತದ ಕೆಲವು ವೈಯಕ್ತಿಕ ಕಾನೂನುಗಳಡಿ (ಬೇರೆ ಬೇರೆ ಧರ್ಮಗಳ ಮದುವೆ, ವಿಚ್ಛೇದನ, ಇತ್ಯಾದಿ ವಿಷಯಗಳನ್ನು ನಿರ್ವಹಿಸುವ ಧಾರ್ಮಿಕ ಕಾನೂನುಗಳು), ಮಕ್ಕಳು ಪ್ರೌಢಾವಸ್ಥೆ ಮುಟ್ಟಿದ ಮೇಲೆ ವಿವಾಹದ ಅವಕಾಶವಿದೆ. ಇದು ಹೆಣ್ಣು ಮಕ್ಕಳು ೧೮ ಮುಟ್ಟುವ ಮುನ್ನ ಹಾಗು ಗಂಡು ಮಕ್ಕಳು ೨೧ ಮುಟ್ಟುವ ಮುನ್ನ ಸಂಭವವಿದೆ. ಹಲವಾರು ಪ್ರಕರಣಗಳಲ್ಲಿ ನಮ್ಮ ನ್ಯಾಯಾಲಯಗಳು ಇಂತಹ ಮದುವೆಗಳು ಅಮಾನ್ಯವಲ್ಲ ಎಂದು ತೀರ್ಪುಗಳನ್ನು ನೀಡಿವೆ. ಆದಾಗ್ಯೂ, ಸಂಬಂಧಪಟ್ಟ ಮಕ್ಕಳು ತಮ್ಮ ಮದುವೆಗಳನ್ನು ಬಾಲ್ಯ ವಿವಾಹ ಕಾನೂನಿನಡಿ ರದ್ದುಗೊಳಿಸುವ ಹಕ್ಕನ್ನು ಹೊಂದಿರುತ್ತಾರೆ.
ಹೀಗಿದ್ದರೂ ಕೂಡ, ಕೆಲವು ಸಂದರ್ಭಗಳಲ್ಲಿ, ಕೆಲವು ಬಾಲ್ಯ ವಿವಾಹಗಳು ಸಂಪೂರ್ಣವಾಗಿ ಅಮಾನ್ಯ ಎಂದು ನಮ್ಮ ಕಾನೂನು ಪರಿಗಣಿಸುತ್ತದೆ.
ಅಕ್ರಮವಾದ ಕ್ರಿಶ್ಚಿಯನ್ ಮದುವೆಗಳು ಯಾವುವು?
ಅಕ್ರಮ ಮದುವೆಗಳು ಕೆಲವು ಷರತ್ತುಗಳನ್ನು ಪಾಲಿಸದೆ ನಡೆದಿರುತ್ತವೆ. ಸಾಮಾನ್ಯವಾಗಿ, ಇಂತಹ ಮದುವೆಗಳು, ಶುರುವಿನಿಂದ ಅಮಾನ್ಯವೆಂದು ಪರಿಗಣಿಸಲಾಗುತ್ತವೆ. ಆದರೆ, ಕಾನೂನಿನ ಪ್ರಕಾರ ಮದುವೆಗಳಲ್ಲಿ ಅಕ್ರಮಗಳಿದ್ದಲ್ಲಿ ಅವುಗಳನ್ನು ಸುಧಾರಿಸಬಹುದಾಗಿದೆಯೋ ವಿನಃ, ಇಂತಹ ಮದುವೆಗಳು ಅಮಾನ್ಯವಾಗುವುದಿಲ್ಲ. ಮದುವೆಗಳು ಅಕ್ರಮವಾಗುವ ಕೆಲವು ಕಾರಣಗಳನ್ನು ಕೆಳಗೆ ಕೊಡಲಾಗಿವೆ. ದೋಷಗಳು ಇವುಗಳಲ್ಲಿ ಇರಬಹುದು:
- ಮದುವೆಯಾಗ ಬಯಸುವ ವ್ಯಕ್ತಿಗಳ ನಿವಾಸ ಸ್ಥಾನದ ಕುರಿತ ಹೇಳಿಕೆಯಲ್ಲಿ
- ಕಾನೂನಿನ ಪ್ರಕಾರ ಮದುವೆಗೆ ಯಾರ ಒಪ್ಪಿಗೆ ಬೇಕಾಗಿದೆಯೋ, ಆ ವ್ಯಕ್ತಿಯು ಒಪ್ಪಿಗೆ ಕೊಟ್ಟ ರೀತಿಯಲ್ಲಿ
- ಮದುವೆಯ ಸೂಚನೆಯಲ್ಲಿ
- ಮದುವೆಯ ಪ್ರಮಾಣಪತ್ರದಲ್ಲಿ
- ಮಾಡುವೆ ನಡೆದ ಸ್ಥಳ ಮತ್ತು ಸಮಯದಲ್ಲಿ
- ಮದುವೆಯ ನೋಂದಣಿಯಲ್ಲಿ
ಬಾಲ್ಯ ವಿವಾಹವನ್ನು ನೆರವೇರಿಸುವುದು
ಬಾಲ್ಯ ವಿವಾಹವನ್ನು ನೆರವೇರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.
ವಿವಾಹವನ್ನು ನೆರವೇರಿಸುವುದು: ಯಾರಾದರೂ ಬಾಲ್ಯ ವಿವಾಹವನ್ನು ನೆರವೇರಿಸಿದಲ್ಲಿ, ಅಥವಾ ನೆರವೇರಿಸುವುದಕ್ಕೆ ಸಹಾಯ ಮಾಡಿದಲ್ಲಿ, ಅವರುಗಳು ಅಪರಾಧಿಗಳಾಗುತ್ತಾರೆ.
ಪಾಲಕರು/ಪೋಷಕರು ಬಾಲ್ಯ ವಿವಾಹ ನೆರವೇರಿಸಿದಾಗ: ಯಾವ ತಂದೆ-ತಾಯಿ/ಪಾಲಕರು/ಪೋಷಕರು/ಮಗುವಿನ ರಕ್ಷಣೆಯ ಜವಾಬ್ದಾರರು ಬಾಲ್ಯ ವಿವಾಹದಲ್ಲಿ ಭಾಗವಹಿಸುವುದಾಗಲಿ, ಅಥವಾ ಬಾಲ್ಯ ವಿವಾಹದ ಪ್ರಚಾರದಲ್ಲಾಗಲಿ ತೊಡಗುತ್ತಾರೋ, ಅವರು ಅಪರಾಧಿಗಳಾಗುತ್ತಾರೆ. ಬಾಲ್ಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಹಾಗು ಭಾಗವಹಿಸುವುದೂ ಕೂಡ ಅಪರಾಧ.
ಯಾರಾದರೂ ಈ ಅಪರಾಧಗಳಿಗೆ ಹೊಣೆ ಎಂದು ಸಾಬೀತಾದಲ್ಲಿ ಅವರಿಗೆ ೨ ವರ್ಷಗಳ ಕಠಿಣ ಸೆರೆವಾಸದ ಜೊತೆಗೆ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುತ್ತದೆ.
ಈ ಕಾನೂನಿನಡಿಯ ಎಲ್ಲ ಅಪರಾಧಗಳು ಸಂಜ್ನ್ಯೆಯ (cognisable) ಹಾಗು ಜಾಮೀನು-ರಹಿತ (non-bailable) ವಾಗಿವೆ. ಅಂದರೆ, ಪೊಲೀಸರು ನಿಮ್ಮನ್ನು ವಾರೆಂಟ್ ಇಲ್ಲದೆ ಬಂಧಿಸಬಹುದು, ಮತ್ತು ಬಂಧನದ ನಂತರ ಜಾಮೀನು ಸಿಗುವುದು ನಿಮ್ಮ ಹಕ್ಕಾಗಿರುವುದಿಲ್ಲ.
ಕ್ರಿಶ್ಚಿಯನ್ ಕಾನೂನಿನ ಪ್ರಕಾರ ಮದುವೆಯಾಗುವ ಬೇರೆ-ಬೇರೆ ಕಾರ್ಯವಿಧಾನಗಳಾವುವು?
ವಿವಾಹ ಕಾರ್ಯವಿಧಾನವು ಯಾರು ಸಮಾರಂಭವನ್ನು ನೆರವೇರಿಸುತ್ತಿದ್ದಾರೆ ಎಂಬುದರ ಮೇಲೆ ನಿರ್ಭರಿಸುತ್ತದೆ. ಮದುವೆಯು ಯಾವುದೇ ಒಂದು ಪಂಗಡದ ಚರ್ಚಿನ ನಿಯಮಗಳನುಸಾರ ನಡೆಯುತ್ತಿದ್ದರೆ, ಕಾನೂನು ವಿವಾಹ ಕಾರ್ಯವಿಧಾನಗಳ ವಿವರಗಳನ್ನು ನೀಡುವುದಿಲ್ಲ. ಆದರೆ, ಕ್ರಿಶ್ಚಿಯನ್ ವಿವಾಹ ಕಾನೂನಿನಡಿ ನೇಮಕಗೊಂಡ ವಿವಾಹ ಕುಲಸಚಿವರು, ಅಥವಾ ಇನ್ನಿತರ ಪ್ರಮಾಣೀಕೃತ ಧರ್ಮ ಸಚಿವರು ಮದುವೆಯನ್ನು ನೆರವೇರಿಸುತ್ತಿದ್ದಲ್ಲಿ, ಆ ಕಾಯಿದೆಯಡಿಯ ಕಾರ್ಯವಿಧಾನವನ್ನು ಪಾಲಿಸಬೇಕಾಗುತ್ತದೆ.
ಪೋಷಕರ ಜವಾಬ್ದಾರಿ
ಬಹಳಷ್ಟು ಅಪರಾಧಗಳಲ್ಲಿ, ಆರೋಪಿಗಳ ಅಪರಾಧವನ್ನು ಸಾಬೀತುಪಡಿಸುವ ಜವಾಬ್ದಾರಿ ಸರ್ಕಾರಿ ಅಭಿಯೋಜಕರದ್ದಾಗಿರುತ್ತದೆ. ಆದರೆ, ಈ ಕಾನೂನು, ಬಾಲ್ಯ ವಿವಾಹ ನೆರವೇರಿದ್ದರೆ, ಆ ಮಕ್ಕಳ ಪಾಲಕ-ಪೋಷಕರೇ ಈ ವಿವಾಹವನ್ನು ತಡೆಯಲು ವಿಫಲರಾಗಿದ್ದಾರೆ ಎಂದು ಊಹಿಸುತ್ತದೆ.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಈ ಕಾನೂನಿನಡಿ ಮಹಿಳೆಯರಿಗೆ ಕೇವಲ ದಂಡ ವಿಧಿಸಬಹುದೇ ವಿನಃ ಅವರನ್ನು ಜೈಲಿನಲ್ಲಿ ಬಂಧಿಸಲು ಅನುಮತಿ ಇಲ್ಲ.