18-21 ವರ್ಷ ವಯಸ್ಸಿನ ಹುಡುಗಿಗೆ ಕ್ರಿಶ್ಚಿಯನ್ ಕಾನೂನಿನ ಅಡಿಯಲ್ಲಿ ಮದುವೆಯಾಗಲು ಅವಳ ತಂದೆ ಅಥವಾ ಪೋಷಕರ ಅನುಮತಿ ಬೇಕಿದ್ದರೂ, ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮದುವೆಯಾಗಲು ಯಾರ ಅನುಮತಿಯೂ ಅಗತ್ಯವಿಲ್ಲ.

ಕ್ರಿಶ್ಚಿಯನ್ ಕಾನೂನಿನಡಿ ಯಾರು ಮದುವೆಯಾಗಬಹುದು?

ಕೊನೆಯ ಅಪ್ಡೇಟ್ Dec 6, 2022

ದಂಪತಿಗಳಲ್ಲಿ ಯಾರಾದರೂ ಒಬ್ಬರು, ಅಥವಾ ಇಬ್ಬರೂ ಕ್ರೈಸ್ತಮತಕ್ಕೆ ಸೇರಿದವರಾಗಿದ್ದರೆ, ಆ ದಂಪತಿಗಳು ಕ್ರಿಶ್ಚಿಯನ್ ಕಾನೂನಿನಡಿ ಮದುವೆಯಾಗಬಹುದು. ಕಾನೂನಿನ ದೃಷ್ಟಿಯಲ್ಲಿ, ಯಾರು ಸಂಪೂರ್ಣವಾಗಿ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಇಟ್ಟಿದ್ದಾರೋ, ಅವರು ಕ್ರೈಸ್ತರು. ಹೀಗಿರುವಾಗ, ಅವರು ಇಗರ್ಜಿಯಲ್ಲಿ ದೀಕ್ಷಾಸ್ನಾನ ಪಡೆದಿರುವರೋ ಇಲ್ಲವೋ ಎಂಬುದು ಮುಖ್ಯವಾಗುವುದಿಲ್ಲ. ಬದಲಿಗೆ, ಅವರ ಕ್ರೈಸ್ತಮತದಲ್ಲಿನ ನಂಬಿಕೆಯ ನಿಖರತೆಯನ್ನು ಕಾನೂನು ಪರಿಶೀಲಿಸುತ್ತದೆ.

ಮದುವೆಯಾಗಲು ಕನಿಷ್ಟ ವಯಸ್ಸು:

ಮದುವೆಯಾಗಲು ಕಾನೂನು ಕನಿಷ್ಠ ವಯಸ್ಸನ್ನು ಸೂಚಿಸಿಲ್ಲವಾದರೂ, ಅಲ್ಪವಯಸ್ಕರ ಮದುವೆಗೆ ವಿಶಿಷ್ಟ ಕಾರ್ಯವಿಧಾನವನ್ನು ಉಲ್ಲೇಖಿಸಿದೆ. ಕ್ರಿಶ್ಚಿಯನ್ ಮದುವೆಯ ಸಂಬಂಧ ಪಟ್ಟಂತೆ, ೨೧ರ ಕೆಳಗಿನವರು, ಮತ್ತು ವಿಧವೆ/ವಿಧುರರಲ್ಲರವರು ಅಲ್ಪವಯಸ್ಕರು ಎಂದು ಕರೆಯಲ್ಪಡುತ್ತಾರೆ. ಆದಾಗ್ಯೂ, ಬಾಲ್ಯ ವಿವಾಹ ನಿಷೇಧ ಕಾಯಿದೆಯಡಿ, ೧೮ರ ಒಳಗಿನವರ ಎಲ್ಲ ಮದುವೆಗಳು ಅಮಾನ್ಯ ಹಾಗು ಅನೂರ್ಜಿತ (ಆ ಅಲ್ಪಾಯುವಿನ ಆಯ್ಕೆಯಂತೆ) ಎಂದು ಘೋಷಿಸಲಾಗಿದೆ. ಆ ಅಲ್ಪವಯಸ್ಕ ೧೮ರಿಂದ ೨೧ರ ನಡುವೆ ಇದ್ದು, ಅವರು ಕಾನೂನುಬದ್ಧವಾಗಿ ಮದುವೆಯಾಗಬೇಕೆಂದಲ್ಲಿ, ಅವರ ತಂದೆ, ತಾಯಿ, ಅಥವಾ ಪಾಲಕರು/ಪೋಷಕರ ಒಪ್ಪಿಗೆ ಬೇಕಾಗುತ್ತದೆ.

ಕ್ರಿಶ್ಚಿಯನ್ ಕಾನೂನಿನಡಿ ನಿಷೇಧಿಸಲಾದ ಮದುವೆಗಳು:

ಕೆಲವು ವೈಯಕ್ತಿಕ ಕಾನೂನುಗಳು ಯಾವ ವ್ಯಕ್ತಿ ಯಾರನ್ನು ಮದುವೆಯಾಗಬಹುದು ಎಂಬುದರ ಬಗ್ಗೆ ಕಟ್ಟಳೆಗಳನ್ನು ಹಾಕುತ್ತವೆ. ಉದಾಹರಣೆಗೆ, ಸಹೋದರ/ರಿಯರ ನಡುವೆ. ಕ್ರಿಶ್ಚಿಯನ್ ಕಾನೂನು ಕೂಡ ಇಂತಹ ಮದುವೆಗಳನ್ನು ಒಪ್ಪುವುದಿಲ್ಲ, ಮತ್ತು ಇವುಗಳನ್ನು ಅಮಾನ್ಯ ಎಂದು ಪರಿಗಣಿಸುತ್ತದೆ. ಆದರೆ, ವೈಯಕ್ತಿಕ ಕಾನೂನುಗಳ ಕಟ್ಟಳೆಗಳ ಹೊರಗೆ, ಯಾವುದೇ ವ್ಯಕ್ತಿಯು ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾಗಬಹುದು.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.