ಕ್ರೈಸ್ತ ವಿವಾಹ

ಈ ವಿವರಣೆಯು ಭಾರತದಲ್ಲಿನ ಕ್ರೈಸ್ತಮತೀಯ ವಿವಾಹಗಳ ಸಂಬಂಧಪಟ್ಟ ಕಾನೂನುಗಳು ಹಾಗು ಕ್ರೈಸ್ತಮತೀಯ ವಿವಾಹಗಳನ್ನು ನೆರವೇರಿಸುವ ಕಾರ್ಯವಿಧಾನಗಳನ್ನು ಉಲ್ಲೇಖಿಸುತ್ತದೆ. ಇಷ್ಟಲ್ಲದೆ, ವಿವಾಹದಲ್ಲಿ ಏನಾದರೂ ಅಡೆತಡೆಗಳು ಬಂದರೆ ಅವುಗಳನ್ನು ನಿರ್ವಹಿಸಲು ಸಹಾಯವಾಗುವ ಕಾನೂನು ಕ್ರಮಗಳನ್ನೂ ಸಹ ವಿವರಿಸುತ್ತದೆ.

ಭಾರತೀಯ ಕ್ರೈಸ್ತಮತೀಯ ವಿವಾಹ ಕಾಯಿದೆ, ೧೮೭೨ ವನ್ನು ಇಲ್ಲಿ ವಿವರಿಸಲಾಗಿದೆ. ಇದಲ್ಲದೆ, ಕಾನೂನಿನ ಜಟಿಲತೆಗಳನ್ನು ಸರಳ ಮಾಡಿರುವ  ನ್ಯಾಯಾಲಯಗಳ ತೀರ್ಪುಗಳನ್ನೂ, ಹಾಗು ಬಾಲ್ಯ ವಿವಾಹ ನಿಷೇಧ ಕಾಯಿದೆ, ೨೦೦೬ ಮತ್ತು ವಿಶೇಷ ವಿವಾಹ ಕಾಯಿದೆ, ೧೯೫೪ ಗಳಂತಹ ಕಾಯಿದೆಗಳ ಉಲ್ಲೇಖವೂ ಈ ವಿವರಣೆಯಲ್ಲಿದೆ.