ಅಕ್ರಮವಾದ ಕ್ರಿಶ್ಚಿಯನ್ ಮದುವೆಗಳು ಯಾವುವು?

ಕೊನೆಯ ಅಪ್ಡೇಟ್ Dec 6, 2022

ಅಕ್ರಮ ಮದುವೆಗಳು ಕೆಲವು ಷರತ್ತುಗಳನ್ನು ಪಾಲಿಸದೆ ನಡೆದಿರುತ್ತವೆ. ಸಾಮಾನ್ಯವಾಗಿ, ಇಂತಹ ಮದುವೆಗಳು, ಶುರುವಿನಿಂದ ಅಮಾನ್ಯವೆಂದು ಪರಿಗಣಿಸಲಾಗುತ್ತವೆ. ಆದರೆ, ಕಾನೂನಿನ ಪ್ರಕಾರ ಮದುವೆಗಳಲ್ಲಿ ಅಕ್ರಮಗಳಿದ್ದಲ್ಲಿ ಅವುಗಳನ್ನು ಸುಧಾರಿಸಬಹುದಾಗಿದೆಯೋ ವಿನಃ, ಇಂತಹ ಮದುವೆಗಳು ಅಮಾನ್ಯವಾಗುವುದಿಲ್ಲ. ಮದುವೆಗಳು ಅಕ್ರಮವಾಗುವ ಕೆಲವು ಕಾರಣಗಳನ್ನು ಕೆಳಗೆ ಕೊಡಲಾಗಿವೆ. ದೋಷಗಳು ಇವುಗಳಲ್ಲಿ ಇರಬಹುದು:

  • ಮದುವೆಯಾಗ ಬಯಸುವ ವ್ಯಕ್ತಿಗಳ ನಿವಾಸ ಸ್ಥಾನದ ಕುರಿತ ಹೇಳಿಕೆಯಲ್ಲಿ
  • ಕಾನೂನಿನ ಪ್ರಕಾರ ಮದುವೆಗೆ ಯಾರ ಒಪ್ಪಿಗೆ ಬೇಕಾಗಿದೆಯೋ, ಆ ವ್ಯಕ್ತಿಯು ಒಪ್ಪಿಗೆ ಕೊಟ್ಟ ರೀತಿಯಲ್ಲಿ
  • ಮದುವೆಯ ಸೂಚನೆಯಲ್ಲಿ
  • ಮದುವೆಯ ಪ್ರಮಾಣಪತ್ರದಲ್ಲಿ
  • ಮಾಡುವೆ ನಡೆದ ಸ್ಥಳ ಮತ್ತು ಸಮಯದಲ್ಲಿ
  • ಮದುವೆಯ ನೋಂದಣಿಯಲ್ಲಿ

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.