ಪತಿ ಯಾ ಪತ್ನಿಗೆ ಮಾತ್ರ ಹಿಂದೂ ವೈವಾಹಿಕ ಕಾನೂನಿನಡಿ ವಿಚ್ಛೇದನ ಬೇಕಾದಾಗ

ಹಲವು ಸಂದರ್ಭಗಳಲ್ಲಿ, ಕೇವಲ ಪತಿ ಯಾ ಪತ್ನಿಗೆ ಮಾತ್ರ ವಿಚ್ಛೇದನ ಬೇಕು ಎಂದು ಎನಿಸುವುದುಂಟು. ಕಾನೂನಿನಡಿ, ಕೇವಲ ಕೆಲವು ಸಂದರ್ಭಗಳಲ್ಲಿ ಮಾತ್ರ ಇಂತಹ ಏಕಪಕ್ಷೀಯ ವಿಚ್ಛೇದನ ಲಭಿಸುತ್ತದೆ. ಉದಾಹರಣೆಗೆ, ವಿವಾಹದಲ್ಲಿ ದೌರ್ಜನ್ಯ/ಕ್ರೌರ್ಯ ಇದ್ದಾಗ, ಅಥವಾ ನಿಮ್ಮ ಸಂಗಾತಿಗೆ ಮಾನಸಿಕ ರೋಗವಿದ್ದಾಗ. ಇಂತಹ ಸಂದರ್ಭಗಳಲ್ಲಿ, ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ, ನಿಮ್ಮ ಸಂಗಾತಿ ಈ ಆರೋಪಗಳನ್ನು ನಿರಾಕರಿಸಿ, ಅವರಿಗೆ ಯಾಕೆ ಈ ವಿಚ್ಛೇದನಕ್ಕೆ ಒಪ್ಪಿಗೆ ಇಲ್ಲ ಎಂದು ಕೋರ್ಟಿಗೆ ಹೇಳಬಹುದಾಗಿದೆ.

ಕಾನೂನಿನಡಿಯಲ್ಲಿ, ಮದುವೆಯಾಗಿ ಒಂದು ವರ್ಷವಾದ ನಂತರ ಮಾತ್ರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಒಂದು ವರ್ಷದ ಸಮಯ:

ನಿಮಗೆ ವಿಚ್ಛೇದನದ ಅರ್ಜಿ ಸಲ್ಲಿಸುವುದಿದ್ದಲ್ಲಿ, ನಿಮ್ಮ ಮದುವೆಯಾದ ದಿನಾಂಕದಿಂದ ಹಿಡಿದು ಒಂದು ವರ್ಷದ ವರೆಗೆ ನೀವು ಕಾಯಬೇಕಾಗುತ್ತದೆ. ಉದಾಹರಣೆಗೆ, ಜಿತೇಂದ್ರ ಹಾಗು ವಹೀದಾ ಜನೆವರಿ ೯, ೨೦೧೮ರಂದು ಮದುವೆಯಾದರು. ಜಿತೇಂದ್ರ ಕಡೆ ಪಕ್ಷ ಜನೆವರಿ ೯, ೨೦೧೯ರ ವರೆಗೆ ವಿಚ್ಛೇದನದ ಅರ್ಜಿ ಸಲ್ಲಿಸಲು ಕಾಯಬೇಕಾಗುತ್ತದೆ.

ಒಂದು ವರ್ಷದ ನಿಯಮಕ್ಕೆ ಅಪವಾದಗಳು:

ಕಾನೂನಿನಡಿಯಲ್ಲಿ ಮದುವೆಯ ನಂತರ ಒಂದು ವರ್ಷದ ಬಳಿಕ ಮಾತ್ರವೇ ವಿಚ್ಛೇದನ ಸಿಗುವುದಾದರೂ, ಈ ನಿಯಮಕ್ಕೆ ಕೆಲವು ಅಪವಾದಗಳಿವೆ. ಉದಾಹರಣೆಗೆ:

  • ಅಸಾಧಾರಣ ಕಷ್ಟ ಅನುಭವಿಸುತ್ತಿದ್ದಲ್ಲಿ: ಉದಾಹರಣೆಗೆ, ನಿಮ್ಮ ಪತಿ ಯಾ ಪತ್ನಿ ದಿನವೂ ನಿಮಗೆ ಶಾರೀರಿಕವಾಗಿ ಕಿರುಕುಳ ಕೊಡುತ್ತಿದ್ದಲ್ಲಿ, ನೀವು ಕೋರ್ಟಿನ ಮೊರೆ ಹೋಗಬಹುದಾಗಿದೆ.
  • ಅಸಾಧಾರಣ ನೈತಿಕ ಭ್ರಷ್ಟತೆ: ಉದಾಹರಣೆಗೆ, ನಿಮ್ಮ ಪತಿ ಯಾ ಪತ್ನಿ ಅವಮಾನಕರ ಲೈಂಗಿಕ ಕ್ರಿಯೆಗಳನ್ನು ಮಾಡುವುದಾಗಿ ನಿಮ್ಮನ್ನು ಪೀಡಿಸುತ್ತಿದ್ದಲ್ಲಿ , ನೀವು ಕೋರ್ಟಿನ ಮೊರೆ ಹೋಗಬಹುದಾಗಿದೆ.

ಕ್ರಿಶ್ಚಿಯನ್ ಕಾನೂನಿನ ಪ್ರಕಾರ ಮದುವೆಯಾಗುವ ಬೇರೆ-ಬೇರೆ ಕಾರ್ಯವಿಧಾನಗಳಾವುವು?

ವಿವಾಹ ಕಾರ್ಯವಿಧಾನವು ಯಾರು ಸಮಾರಂಭವನ್ನು ನೆರವೇರಿಸುತ್ತಿದ್ದಾರೆ ಎಂಬುದರ ಮೇಲೆ ನಿರ್ಭರಿಸುತ್ತದೆ. ಮದುವೆಯು ಯಾವುದೇ ಒಂದು ಪಂಗಡದ ಚರ್ಚಿನ ನಿಯಮಗಳನುಸಾರ ನಡೆಯುತ್ತಿದ್ದರೆ, ಕಾನೂನು ವಿವಾಹ ಕಾರ್ಯವಿಧಾನಗಳ ವಿವರಗಳನ್ನು ನೀಡುವುದಿಲ್ಲ. ಆದರೆ, ಕ್ರಿಶ್ಚಿಯನ್ ವಿವಾಹ ಕಾನೂನಿನಡಿ ನೇಮಕಗೊಂಡ ವಿವಾಹ ಕುಲಸಚಿವರು, ಅಥವಾ ಇನ್ನಿತರ ಪ್ರಮಾಣೀಕೃತ ಧರ್ಮ ಸಚಿವರು ಮದುವೆಯನ್ನು ನೆರವೇರಿಸುತ್ತಿದ್ದಲ್ಲಿ, ಆ ಕಾಯಿದೆಯಡಿಯ ಕಾರ್ಯವಿಧಾನವನ್ನು ಪಾಲಿಸಬೇಕಾಗುತ್ತದೆ.

ಮಗುವನ್ನು ಯಾರು ದತ್ತು ನೀಡಬಹುದು?

ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನ ಪ್ರಕಾರ, ನಿಮ್ಮ ಮಗುವನ್ನು ನೀವು ದತ್ತು ನೀಡುವಂತಿಲ್ಲ, ಆದರೆ ಆ ಮಗುವಿನ ತಂದೆ/ತಾಯಿ/ಪೋಷಕರ ಅಧಿಕಾರದಲ್ಲಿ ಮಗುವನ್ನು ಬಿಟ್ಟುಕೊಡಬಹುದಾಗಿದೆ. ಮಗುವನ್ನು ಬಿಟ್ಟುಕೊಡುವುದು ಎಂದರೆ, ನಿಮ್ಮ ನಿಯಂತ್ರಣದಲ್ಲಿ ಇಲ್ಲದಿರದ ಯಾವುದೇ ದೈಹಿಕ, ಭಾವನಾತ್ಮಕ, ಅಥವಾ ಸಾಮಾಜಿಕ ಕಾರಣಗಳಿಂದಾಗಿ ನಿಮ್ಮ ಮಗುವನ್ನು ತ್ಯಜಿಸುವುದು. ಒಮ್ಮೆ ಮಕ್ಕಳ ಕಲ್ಯಾಣ ಸಮಿತಿ ನೀವು ನಿಮ್ಮ ಮಗುವನ್ನು ಬಿಟ್ಟುಕೊಟ್ಟಿದ್ದೀರಿ ಎಂದು ಖಾತರಿ ಪಡಿಸಿದ ಮೇಲೆ, ನಿಮ್ಮ ಮಗುವಿನ ಜೊತೆಗಿನ ನಿಮ್ಮ ಕಾನೂನಾತ್ಮಕ ಸಂಬಂಧ ಅಂತ್ಯಗೊಳ್ಳುತ್ತದೆ, ಮತ್ತು ಆ ಮಗುವಿನ ಸಂಬಂಧಿತ ಯಾವುದೇ ಜವಾಬ್ದಾರಿಗಳನ್ನು, ಅಥವಾ ಸವಲತ್ತುಗಳನ್ನು ನೀವು ಪೂರ್ಣಗೊಳಿಸುವಂತಿಲ್ಲ. ತದನಂತರ, ಮಕ್ಕಳ ಕಲ್ಯಾಣ ಇಲಾಖೆಯು ಆ ಬಿಟ್ಟು ಕೊಟ್ಟ ಮಗುವಿನ ಜೊತೆ ಏನು ಮಾಡಬೇಕು ಎಂದು ನಿರ್ಧರಿಸುತ್ತದೆ. ಆ ಮಗುವನ್ನುಕಾನೂನುಬದ್ಧವಾಗಿ ದತ್ತಕ್ಕೆ ಕೊಡಲು ಯೋಗ್ಯವೆಂದು ಸಮಿತಿಯು ಘೋಷಿಸಬಹುದು.

ಹಿಂದೂ ದತ್ತು ಸ್ವೀಕಾರ ಕಾನೂನಿನ ಪ್ರಕಾರ ಕೆಳಗಿನ ವ್ಯಕ್ತಿಗಳು ತಮ್ಮ ಮಗುವನ್ನು ದತ್ತು ಬಿಟ್ಟುಕೊಡಬಹುದು:

  • ಮಗುವಿನ ಜೈವಿಕ ತಂದೆ/ತಾಯಿ: ಮಗುವನ್ನು ಬಿಟ್ಟುಕೊಡಲು ಇಚ್ಛಿಸುವ ತಂದೆ/ತಾಯಿಗೆ ಅವರ ಸಂಗಾತಿಯಿಂದ ಒಪ್ಪಿಗೆ ಇದ್ದರೆ ಮಾತ್ರ. ಉದಾಹರಣೆಗೆ, ನೀವು ರಮ್ಯಾಳ ಜೈವಿಕ ತಾಯಿಯಾಗಿ ಅವಳನ್ನು ದತ್ತು ಬಿಟ್ಟುಕೊಡಬೇಕೆಂದಲ್ಲಿ, ರಮ್ಯಾಳ ಜೈವಿಕ ತಂದೆಯ ಒಪ್ಪಿಗೆ ನಿಮ್ಮಲ್ಲಿರಬೇಕು. ಆದರೆ ನಿಮ್ಮ ಸಂಗಾತಿ ಮಾನಸಿಕವಾಗಿ ಅಸ್ವಸ್ಥವಾಗಿದ್ದರೆ, ಲೋಕವನ್ನು ತ್ಯಜಿಸಿದ್ದರೆ, ಅಥವಾ ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದರೆ, ಈ ಒಪ್ಪಿಗೆ ಬೇಕಾಗಿಲ್ಲ.
  • ಮಗುವಿನ ಆರೈಕೆ ಮಾಡುತ್ತಿರುವ ಪಾಲಕ/ಪೋಷಕ, ನ್ಯಾಯಾಲಯದ ಅನುಮತಿಯಿಂದ, ಕೆಲ ಸಂದರ್ಭಗಳಲ್ಲಿ ಆ ಮಗುವನ್ನು ದತ್ತು ಬಿಟ್ಟುಕೊಡಬಹುದು.

ವಿವಾಹ ವಿಚ್ಛೇದನಕ್ಕೆ ಹೆಂಡತಿ ಕೋರ್ಟಿಗೆ ಹೋದಾಗ

ವಿಚ್ಛೇದನ ಪಡೆಯಲು ಕೋರ್ಟಿಗೆ ಹೋಗುವ ಆಯ್ಕೆ ಕೇವಲ ಮಹಿಳೆಯರಿಗೆ ಇದೆ. ಕೆಳಗಿನ ಕಾರಣಗಳಿಗೆ, ನೀವು ಕೋರ್ಟಿನ ಮೂಲಕ ವಿಚ್ಛೇದನ ಪಡೆಯಬಹುದು:

ಗಂಡನ ಅನುಪಸ್ಥಿತಿ:

  • ನಿಮ್ಮ ಗಂಡ ಕನಿಷ್ಠ ೪ ವರ್ಷಗಳಿಂದ ಕಾಣೆಯಾಗಿದ್ದರೆ
  • ನಿಮ್ಮ ಗಂಡ ಕನಿಷ್ಠ ೭ ವರ್ಷಗಳಿಂದ ಜೈಲಿನಲ್ಲಿದ್ದರೆ
  • ನಿಮ್ಮ ಗಂಡ ನಿಮಗೆ ೨ ವರ್ಷಗಳಿಂದ ಜೀವನಾಂಶ ಕೊಡದಿದ್ದಾಗ

ಅನಾರೋಗ್ಯ ಅಥವಾ ಅಶಕ್ತತೆ:

  • ನಿಮ್ಮ ಗಂಡನಿಗೆ ನಿಮಿರು ದೌರ್ಬಲ್ಯವಿದ್ದರೆ
  • ನಿಮ್ಮ ಗಂಡನಿಗೆ ಬುದ್ಧಿಭ್ರಮಣೆ ಅಥವಾ ಗುಣಪಡಿಸಲಾಗದ ಲೈಂಗಿಕ ರೋಗ ಇದ್ದಲ್ಲಿ
  • ನಿಮ್ಮ ಮದುವೆ ನೀವು ೧೫ ವರ್ಷದ ಒಳಗಿದ್ದಾಗ ಆಗಿದ್ದರೆ

ಕೆಟ್ಟ ವರ್ತನೆ:

  • ನಿಮ್ಮ ಗಂಡ ನಿಮ್ಮ ಜೊತೆ ಕ್ರೂರವಾಗಿ ವರ್ತಿಸಿದರೆ
  • ನಿಮ್ಮ ಗಂಡ ಲೈಂಗಿಕ ಸಂಭೋಗ ಮಾಡುವುದು, ಜೊತೆಗೆ ವಾಸಿಸುವುದು ಎಂಬಂತಹ ವೈವಾಹಿಕ ಜವಾಬ್ದಾರಿಗಳನ್ನು ಈಡೇರಿಸದಿದ್ದರೆ

ಈ ಆಧಾರಗಳ ಅನ್ವಯಿಸುವಿಕೆ ಕೆಲ ಷರತ್ತುಗಳ ಮೇಲೆ ನಿರ್ಭರಿಸಿವೆ. ಇವುಗಳ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ನಿಮ್ಮ ವಕೀಲರನ್ನು ಸಂಪರ್ಕಿಸಿ.

ಹಿಂದೂ ಕಾನೂನಿನಡಿ ಜೀವನಾಂಶ

ಹಿಂದೂ ದತ್ತು ಮತ್ತು ಜೀವನಾಂಶ ಕಾಯಿದೆಯಡಿ ಯಾವುದೇ ಹಿಂದೂ, ಬೌಧ್ಧ, ಜೈನ, ಅಥವಾ ಸಿಖ್ ಧರ್ಮಕ್ಕೆ ಸೇರಿದ, ವಯಸ್ಸಾದ/ಅಶಕ್ತ, ಜೈವಿಕ ಅಥವಾ ದತ್ತು ತಂದೆ-ತಾಯಂದಿರು, ಅವರ ಗಳಿಕೆ ಮತ್ತು ಆಸ್ತಿಯಿಂದ ಜೀವನ ನಡೆಸಲು ಅಸಾಧ್ಯವಾದಾಗ ತಮ್ಮ ವಯಸ್ಕ ಮಕ್ಕಳಿಂದ ಜೀವನಾಂಶ ಪಡೆಯಬಹುದು. ಇದಲ್ಲದೆ, ಅವರ ಮಗ ಅಥವಾ ಮಗಳು ತೀರಿಹೋದಲ್ಲೂ ಕೂಡ, ಅವರ ಬಿಟ್ಟು ಹೋದ ಆಸ್ತಿ ಮತ್ತು ಸಂಪತ್ತಿನಲ್ಲಿ ಜೀವನಾಂಶದ ಹಕ್ಕು ತಂದೆ-ತಾಯಂದಿರಿಗೆ ಇರುತ್ತದೆ.

ಪೋಷಕರ ಜವಾಬ್ದಾರಿ

ಬಹಳಷ್ಟು ಅಪರಾಧಗಳಲ್ಲಿ, ಆರೋಪಿಗಳ ಅಪರಾಧವನ್ನು ಸಾಬೀತುಪಡಿಸುವ ಜವಾಬ್ದಾರಿ ಸರ್ಕಾರಿ ಅಭಿಯೋಜಕರದ್ದಾಗಿರುತ್ತದೆ. ಆದರೆ, ಈ ಕಾನೂನು, ಬಾಲ್ಯ ವಿವಾಹ ನೆರವೇರಿದ್ದರೆ, ಆ ಮಕ್ಕಳ ಪಾಲಕ-ಪೋಷಕರೇ ಈ ವಿವಾಹವನ್ನು ತಡೆಯಲು ವಿಫಲರಾಗಿದ್ದಾರೆ ಎಂದು ಊಹಿಸುತ್ತದೆ.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಈ ಕಾನೂನಿನಡಿ ಮಹಿಳೆಯರಿಗೆ ಕೇವಲ ದಂಡ ವಿಧಿಸಬಹುದೇ ವಿನಃ ಅವರನ್ನು ಜೈಲಿನಲ್ಲಿ ಬಂಧಿಸಲು ಅನುಮತಿ ಇಲ್ಲ.

ಹಿಂದೂ ವಿವಾಹ ಕಾನೂನಿನಡಿ ಪರಸ್ಪರ ಒಪ್ಪಿಗೆಯ ವಿಚ್ಛೇದನ

ನೀವು ಮತ್ತು ನಿಮ್ಮ ಸಂಗಾತಿ, ಇಬ್ಬರಿಗೂ ವಿಚ್ಛೇದನ ಬೇಕೆನಿಸಿದ್ದಲ್ಲಿ, ಪರಸ್ಪರ ಒಪ್ಪಿಗೆಯ ಅರ್ಜಿಯನ್ನು ಕೋರ್ಟಿನಲ್ಲಿ ಸಲ್ಲಿಸಬಹುದು.

ನೀವು ಮತ್ತು ನಿಮ್ಮ ಸಂಗಾತಿ ಈ ಕೆಳಕಂಡ ಪರಿಸ್ಥಿತಿಗಳಲ್ಲಿ ಕೋರ್ಟಿನ ಮೊರೆ ಹೋಗಬಹುದು:

  • ನೀವು ಒಂದು ವರ್ಷ ಬೇರೆ-ಬೇರೆಯಾಗಿ ವಾಸ ಮಾಡುತ್ತಿದ್ದರೆ
  • ನೀವಿಬ್ಬರೂ ಜೊತೆಯಲ್ಲಿ ಇರಲಾರದಂತಿದ್ದರೆ
  • ನೀವಿಬ್ಬರೂ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ್ದಲ್ಲಿ

ಕಾನೂನಿನಡಿಯಲ್ಲಿ ಇಂತಹ ವಿಚ್ಛೇದನ ಕೇವಲ ಮದುವೆಯಾಗಿ ಒಂದು ವರ್ಷದ ನಂತರವೇ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಿದ ಮೇಲೆಯೂ ಸಹ, ಕೋರ್ಟು ನಿಮಗೆ ಕನಿಷ್ಠ ೬ ತಿಂಗಳಿಂದ ಗರಿಷ್ಟ ೧೮ ತಿಂಗಳುಗಳ ಕಾಲ ಪರಸ್ಪರ ರಾಜಿಯಾಗಲು ಕೊಡುತ್ತದೆ – ಇದು ನಿಜವಾಗಿಯೂ ನಿಮಗೆ ವಿಚ್ಛೇದನ ಬೇಕಿದೆಯೋ ಇಲ್ಲವೋ ಎಂದು ಪರೀಕ್ಷಿಸುವುದಕ್ಕಾಗಿ.

ಹೀಗಿದ್ದರೂ ಸಹ, ವಿಚ್ಛೇದನಕ್ಕೆ ಕಾಯಬೇಕಾದ ಕನಿಷ್ಠ ೬ ತಿಂಗಳ ಕಾಲವನ್ನೂ ಸಹ ಕೋರ್ಟುಗಳು ಎಷ್ಟೋ ಸಲ ಈ ಕೆಳಗಿನ ಸಂದರ್ಭಗಳಲ್ಲಿ ಮನ್ನಾ ಮಾಡಿವೆ:

  • ನೀವು ಹಾಗು ನಿಮ್ಮ ಸಂಗಾತಿ ಮರಳಿ ಒಂದಾಗಲು ಸಾಧ್ಯವೇ ಇಲ್ಲದಿದ್ದಾಗ
  • ಎಲ್ಲ ಮಧ್ಯಸ್ಥಿಕೆ ಹಾಗು ಸಂಧಾನದ ಪ್ರಯತ್ನಗಳು ವಿಫಲವಾದಾಗ
  • ವಿಚ್ಛೇದನದ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹುಟ್ಟುವ ಸಮಸ್ಯೆಗಳನ್ನು ನೀವು ಮತ್ತು ನಿಮ್ಮ ಸಂಗಾತಿ ಪರಸ್ಪರ ಪರಿಹರಿಸಿದಾಗ. ಉದಾಹರಣೆ: ಜೀವನಾಂಶ ಕೊಡುವುದು, ಮಕ್ಕಳ ಹೊಣೆಗಾರಿಕೆ
  • ೬ರಿಂದ ೧೮ ತಿಂಗಳುಗಳವರೆಗೆ ಕಾಯುವುದು ನಿಮಗೆ ಇನ್ನೂ ಹೆಚ್ಚು ಸಂಕಟ ಹಾಗು ದುಃಖ ಕೊಡುವಂತಿದ್ದರೆ
  • ನೀವು ನಿಮ್ಮ ಸಂಗಾತಿಯಿಂದ ವಿಚ್ಛೇದನ ಬೇಕೆಂದು ಅರ್ಜಿ ಸಲ್ಲಿಸಿದ್ದಲ್ಲಿ, ನಂತರ ನೀವಿಬ್ಬರೂ ಪರಸ್ಪರ ಒಪ್ಪಿಗೆಯ ವಿಚ್ಛೇದನ ಪಡೆಯುವುದಾಗಿ ನಿರ್ಧರಿಸಿದ್ದಲ್ಲಿ.

ಪರವಾನಗಿ ಪಡೆದ ಧರ್ಮ ಸಚಿವರು ನೆರವೇರಿಸುವ ಮದುವೆಯ ಕಾರ್ಯವಿಧಾನವೇನು?

ಪರವಾನಗಿ ಪಡೆದ ಧರ್ಮ ಸಚಿವರು ನೆರವೇರಿಸುವ ಕ್ರಿಶ್ಚಿಯನ್ ವಿವಾಹವನ್ನು ಕೆಳಗಿನ ನಾಲ್ಕು ಹಂತಗಳಲ್ಲಿ ವಿಭಜಿಸಲಾಗಿದೆ:

ಹಂತ ೧: ಪೂರ್ವಭಾವಿ ಸೂಚನೆಯನ್ನು ಹೊರಡಿಸುವುದು:

ಪರವಾನಗಿ ಪಡೆದ ಧರ್ಮ ಸಚಿವರು ವಿವಾಹವನ್ನು ನೆರವೇರಿಸಬೇಕು ಎಂದಲ್ಲಿ, ದಂಪತಿಗಳಲ್ಲಿ ಒಬ್ಬರು ಖುದ್ದಾಗಿ ಆ ಸಚಿವರಿಗೆ ವಿವಾಹ ಉದ್ದೇಶದ ಸೂಚನೆ ನೀಡಬೇಕು. ಆ ಸೂಚನೆಯಲ್ಲಿ ಕೆಳಕಂಡ ಮಾಹಿತಿ ಇರಬೇಕು:

  • ದಂಪತಿಗಳಿಬ್ಬರ ಹೆಸರು, ಅಡ್ಡ ಹೆಸರು, ವೃತ್ತಿ, ಅಥವಾ ಆರ್ಥಿಕ ಸ್ಥಿತಿ
  • ಇಬ್ಬರ ಪ್ರಸ್ತುತ ವಿಳಾಸ
  • ಈ ವಿಳಾಸದಲ್ಲಿ ವಾಸ ಮಾಡುತ್ತಿರುವ ಅವಧಿ. ಒಂದು ತಿಂಗಳಿಗಿಂತ ಹೆಚ್ಚು ಈ ವಿಳಾಸದಲ್ಲಿ ವಾಸಿಸಿದ್ದರೆ, ಅದನ್ನು ಸೂಚನೆಯಲ್ಲಿ ತಿಳಿಸಬೇಕಾಗುತ್ತದೆ.
  • ಮದುವೆಯ ಸ್ಥಳ – ಚರ್ಚು ಅಥವಾ ವೈಯಕ್ತಿಕ ನಿವಾಸ

 

Notice Marriage Registrar

ಇದಾದಮೇಲೆ ಧರ್ಮ ಸಚಿವರು ಈ ಸೂಚನೆಯನ್ನು ಚರ್ಚಿನ ಆವರಣದ, ಎಲ್ಲರಿಗೂ ಕಾಣುವಂತಹ/ಸಾರ್ವಜನಿಕ ಭಾಗದಲ್ಲಿ ಲಗತ್ತಿಸುತ್ತಾರೆ. ಒಂದು ವೇಳೆ ಮದುವೆಯು ವೈಯಕ್ತಿಕ ನಿವಾಸದಲ್ಲಿ ಜರುಗಲಿದ್ದರೆ, ಸಂಬಂಧಪಟ್ಟ ಜಿಲ್ಲಾ ವಿವಾಹ ಕುಲಪತಿಗಳಿಗೆ ಆ ಸೂಚನೆಯನ್ನು ಕಳುಹಿಸಲಾಗುತ್ತದೆ, ಹಾಗು ವಿವಾಹ ಕುಲಪತಿಗಳ ಕಚೇರಿಯ ಆವರಣದಲ್ಲಿ, ಎಲ್ಲರಿಗೂ ಕಾಣುವಂತಹ ಸಾರ್ವಜನಿಕ ಸ್ಥಳದಲ್ಲಿ ಆ ಸೂಚನೆಯನ್ನು ಪ್ರದರ್ಶಿಸಲಾಗುತ್ತದೆ. ಒಂದು ವೇಳೆ ಧರ್ಮ ಸಚಿವರು ಮದುವೆಯನ್ನು ನೆರವೇರಿಸಲು ನಿರಾಕರಿಸಿದರೆ, ಬೇರೋರ್ವ ಸಚಿವರಿಗೆ ವಿವಾಹ ಸೂಚನೆಯನ್ನು ಕಳಿಸಲಾಗುತ್ತದೆ, ಅಥವಾ, ವಿವಾಹ ಆಗಬಯಸುವ ದಂಪತಿಗಳಿಗೆ ಮರಳಿ ಕಳಿಸಲಾಗುತ್ತದೆ.

ಹಂತ ೨: ಸೂಚನಾ ರಶೀದಿ ಪಡೆದ ಪ್ರಮಾಣಪತ್ರ ನೀಡುವುದು:

ವಿವಾಹ ಸೂಚನೆ ಕೊಟ್ಟು ಕನಿಷ್ಟ ೪ ದಿನಗಳ ಬಳಿಕ, ಮದುವೆಯಾಗ ಬಯಸುವ ದಂಪತಿಗಳಲ್ಲಿ ಒಬ್ಬರು, ವಿವಾಹದಲ್ಲಿ ಯಾವ ರೀತಿಯ ಕಾನೂನಾತ್ಮಕ ಸಮಸ್ಯೆಗಳೂ ಇಲ್ಲವೆಂದು, ಧರ್ಮ ಸಚಿವರಲ್ಲಿ ಧೃಢೀಕರಣ ಪತ್ರ ಸಲ್ಲಿಸಬೇಕು. ದಂಪತಿಗಳಲ್ಲಿ ಒಬ್ಬರು ಅಲ್ಪವಯಸ್ಕರಾಗಿದ್ದರೆ, ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡಾಗಿದೆ ಎಂದು ಸಚಿವರಲ್ಲಿ ಧೃಢೀಕರಣ ಪತ್ರ ಸಲ್ಲಿಸಬೇಕು.

ಹಂತ ೩: ಮದುವೆಯ ಆಚರಣೆ:

ಇಂತಹ ಧೃಢೀಕರಣ ಪತ್ರಗಳನ್ನು ಸಲ್ಲಿಸಿದ ಬಳಿಕ, ಧರ್ಮ ಸಚಿವರು ಒಂದು ಪ್ರಮಾಣ ಪತ್ರವನ್ನು ನೀಡುತ್ತಾರೆ. ಇದಾದ ಎರಡು ತಿಂಗಳೊಳಗೆ ಸಚಿವರು ದಂಪತಿಗಳ ಮದುವೆ ನೆರವೇರಿಸಬೇಕು. ಧರ್ಮ ಸಚಿವರಲ್ಲದೆ, ಇಬ್ಬರು ಸಾಕ್ಷಿದಾರರು ಮಾಡುವೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು. ಒಂದು ವೇಳೆ ಪ್ರಮಾಣ ಪತ್ರ ಪಡೆದು ಎರಡು ತಿಂಗಳುಗಳಾಗಿಹೋಗಿದ್ದರೆ, ಈ ಸಂಪೂರ್ಣ ಪ್ರಕ್ರಿಯೆ ಮೊದಲಿನಿಂದ ಪುನಃ ಆರಂಭಿಸಬೇಕಾಗುತ್ತದೆ.

ಹಂತ ೪: ಮದುವೆಯ ನೋಂದಣಿ:

ಮದುವೆ ನಡೆದ ಮೇಲೆ ಅದರ ವಿವರಗಳನ್ನು ಧರ್ಮ ಸಚಿವರು ದಾಖಲಾ ಪುಸ್ತಕದಲ್ಲಿ ನಮೂದಿಸಬೇಕಾಗುತ್ತದೆ. ಈ ದಾಖಲೆಗೆ ಆ ಸಚಿವರು, ನವ ದಂಪತಿಗಳು, ಹಾಗು ಮದುವೆ ಸಮಾರಂಭದಲ್ಲಿ ಹಾಜರಿರುವ ಇಬ್ಬರು ಸಾಕ್ಷಿದಾರರು ಸಹಿ ಹಾಕಬೇಕು.

ವಿವಾಹ ದಾಖಲಾ ಪುಸ್ತಕದಲ್ಲಿನ ಈ ನೋಂದಣಿಯ ಪ್ರಮಾಣೀಕೃತ ಪ್ರತಿಯ ಮೇಲೆ, ಯಾವ ಅಧಿಕಾರಿಗಳ ಅಧೀನದಲ್ಲಿ ಈ ದಾಖಲಾ ಪುಸ್ತಕ ಇರುತ್ತದೆಯೋ, ಅವರ ಸಹಿ ಬೇಕಾಗುತ್ತದೆ. ಆ ಸಹಿಯಾದ ಬಳಿಕ, ದಂಪತಿಗಳು ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ ಎಂಬ ಪುರಾವೆಯಾಗುತ್ತದೆ ಈ ಪ್ರಮಾಣೀಕೃತ ಪತ್ರ.

 

ಕಾನೂನುಬದ್ಧವಾಗಿ ದತ್ತು ಸ್ವೀಕಾರಕ್ಕೆ ಕೊಡಲು ಯೋಗ್ಯವಾದ ಮಕ್ಕಳು

ಧಾರ್ಮಿಕೇತರ ಕಾನೂನಿನಡಿ ಮಕ್ಕಳನ್ನು ದತ್ತು ಕೊಡಲು ಯೋಗ್ಯವೆಂದು ಘೋಷಿಸಿದಮೇಲೆ ಅವರ ಜೈವಿಕ ತಂದೆ-ತಾಯಿಯರ ಜೊತೆಗಿನ ಕಾನೂನಾತ್ಮಕ ಸಂಬಂಧ ಅಂತ್ಯಗೊಳ್ಳುತ್ತದೆ. ಮಕ್ಕಳ ಕಲ್ಯಾಣ ಸಮಿತಿಯು, ಕೆಳಗಿನ ವಿಚಾರಣೆ ನಡೆಸಿ, ಮಕ್ಕಳನ್ನು ದತ್ತು ಕೊಡಲು ಯೋಗ್ಯವೆಂದು ಘೋಷಿಸುತ್ತದೆ:

  • ಪ್ರೊಬೇಷನರಿ ಅಧಿಕಾರಿ ಅಥವಾ ಸಾಮಾಜಿಕ ಕಾರ್ಯಕರ್ತರು ತಯಾರಿಸಿದ ವರದಿಯ ಆಧಾರದ ಮೇಲೆ
  • ಮಗುವಿನ ಒಪ್ಪಿಗೆಯಿದ್ದಲ್ಲಿ (ಸಮಂಜಸ ವಯಸ್ಸನ್ನು ಹೊಂದಿದ್ದರೆ)
  • ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಆರೈಕೆ ಸಂಸ್ಥೆ, ಅಥವಾ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಕೊಟ್ಟಿರುವ ಹೇಳಿಕೆಯ ಆಧಾರದ ಮೇಲೆ

ಕೆಳಗಿನ ತರಹಗಳ ಮಕ್ಕಳನ್ನು ದತ್ತು ಕೊಡುವುದಕ್ಕೆ ಯೋಗ್ಯವೆಂದು ಘೋಷಿಸಬಹುದು:

  • ಅನಾಥರು: ಜೈವಿಕ/ದತ್ತು ತಂದೆ-ತಾಯಿ, ಅಥವಾ ಪಾಲಕರು/ಪೋಷಕರು ಇಲ್ಲದ ಮಕ್ಕಳು; ಅಥವಾ ಅವರ ಪಾಲಕರು/ಪೋಷಕರು ಮಕ್ಕಳನ್ನು ಆರೈಕೆ ಮಾಡುವ ಇಚ್ಛೆ ಅಥವಾ ಸಾಮರ್ಥ್ಯ ಹೊಂದಿಲ್ಲದಿದ್ದಾಗ
  • ತ್ಯಜಿಸಿದ ಮಕ್ಕಳು: ಜೈವಿಕ/ದತ್ತು ತಂದೆ-ತಾಯಿ, ಅಥವಾ ಪಾಲಕರು/ಪೋಷಕರಿಂದ ತ್ಯಜಿಸಲಾದ ಮಕ್ಕಳು
  • ಬಿಟ್ಟುಕೊಟ್ಟ ಮಕ್ಕಳು: ತಂದೆ-ತಾಯಿ ಅಥವಾ ಪೋಷಕರಿಂದ ಬಿಟ್ಟುಕೊಟ್ಟ ಮಕ್ಕಳು
  • ಬುದ್ಧಿಮಾಂದ್ಯ ತಂದೆ-ತಾಯಿಯರ ಮಕ್ಕಳು
  • ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದ ಮಹಿಳೆಗೆ ಬೇಡವಾದ ಮಗು

ಮುಸ್ಲಿಂ ವಿವಾಹದಲ್ಲಿ ಪರಸ್ಪರ ಒಪ್ಪಿಗೆಯ ವಿಚ್ಛೇದನ

ಮುಬಾರಾತ್:

ನೀವು ಮತ್ತು ನಿಮ್ಮ ಸಂಗಾತಿ, ಇಬ್ಬರಿಗೂ ನಿಮ್ಮ ಮದುವೆ ಮುರಿಯುವುದಿದ್ದಲ್ಲಿ, ವಿವಾಹದ ಎಲ್ಲ ಜವಾಬ್ದಾರಿಗಳನ್ನು ಅಂತ್ಯಗೊಳಿಸಬಹುದು. ಇಂತಹ ವಿಚ್ಛೇದನದಲ್ಲಿ ಇಬ್ಬರ ಒಪ್ಪಿಗೆಯೂ ಇರುವುದು ಅತ್ಯಗತ್ಯವಾಗುತ್ತದೆ. ಇಂತಹ ವಿಚ್ಛೇದನಕ್ಕೆ ಮುಬಾರಾತ್ ಎನ್ನುತ್ತಾರೆ. “ಮುಬಾರಾತ್” ಎಂಬ ಪದದ ಅರ್ಥ “ಪರಸ್ಪರ ವಿಮುಕ್ತಗೊಳಿಸುವುದು”. ಮುಬಾರಾತ್ ನ ಮುಖಾಂತರ ಪರಸ್ಪರ ಒಪ್ಪಿಗೆಯ ವಿಚ್ಛೇದನ ಕೆಳಗಿನಂತೆ ಜರುಗುವುದು:

  • ಗಂಡ ಹಾಗು ಹೆಂಡತಿ ಇಬ್ಬರೂ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದಾಗ
  • ನೀವು ಮತ್ತು ನಿಮ್ಮ ಸಂಗಾತಿ “ತಲಾಕ್” ಎಂದು ಒಮ್ಮೆ ಹೇಳಿದಾಗ

ಇಂತಹ ವಿಚ್ಛೇದನ ಹಿಂತೆಗೆದುಕೊಳ್ಳುವಂತಿಲ್ಲ.ಏಕೆಂದರೆ ಪರಸ್ಪರ ಒಪ್ಪಿಗೆಯ ನಂತರವೇ ವಿಚ್ಛೇದನದ ನಿರ್ಣಯಕ್ಕೆ ಬಂದಿರಲಾಗುತ್ತದೆ.

ನೀವು ಮತ್ತು ನಿಮ್ಮ ಸಂಗಾತಿ ನಿಮ್ಮ ಮದುವೆಯನ್ನು ಮುರಿಯಲು ಒಪ್ಪಿದ್ದಲ್ಲಿ, ಕೆಳಗಿನ ಕೆಲವು ಜವಾಬ್ದಾರಿಗಳನ್ನು ನೆರವೇರಿಸಬೇಕಾಗುತ್ತದೆ:

  • ವಿಚ್ಛೇದನದ ನಂತರ ಹೆಂಡತಿಯು ಇದ್ದತ್ ಅವಧಿಯನ್ನು ಆಚರಿಸಬೇಕು.
  • ಈ ಇದ್ದತ್ ಅವಧಿಯಲ್ಲಿ ಹೆಂಡತಿ ಹಾಗು ಮಕ್ಕಳಿಗೆ ಜೀವನಾಂಶದ ಹಕ್ಕಿದೆ.

ನೀವು ಈ ರೀತಿಯಲ್ಲಿ ನಿಮ್ಮ ಹೆಂಡತಿಯನ್ನು ವಿಚ್ಛೇದಿಸಿದರೆ, ಕೆಲವು ಷರತ್ತುಗಳನ್ನು ಅನುಸರಿಸದೆ ನೀವು ಅವರನ್ನು ಪುನರ್ವಿವಾಹವಾಗಲು ಸಾಧ್ಯವಿಲ್ಲ.