ಮುಸ್ಲಿಂ ವಿವಾಹ ಕಾನೂನಿನ ಪ್ರಕಾರ, ವಿಚ್ಛೇದನದ ನಂತರ ಹೆಂಡತಿ ಹಾಗು ಮಕ್ಕಳಿಗೆ ಗಂಡ ಜೀವನಾಂಶ ಕೊಡಬೇಕಾಗುತ್ತದೆ. ಹಾಗು, ಮುಸ್ಲಿಂ ಕಾನೂನಿನ ಪ್ರಕಾರ, ವಿಚ್ಛೇದನದ ನಂತರ ಗಂಡನಷ್ಟೇ ಹೆಂಡತಿಗೆ ಜೀವನಾಂಶ ಕೊಡಬೇಕಾಗುತ್ತದೆ, ಹೆಂಡತಿಯು ಗಂಡನಿಗೆ ಕೊಡಬೇಕಾಗಿಲ್ಲ. ನೀವು ನಿಮ್ಮ ಗಂಡನಿಂದ ಜೀವನಾಂಶ ಪಡೆಯಲು ಕೋರ್ಟಿಗೆ ಹೋಗಬಹುದು. ನಿಮ್ಮ ಗಂಡನ ಆರ್ಥಿಕ ಸಾಮರ್ಥ್ಯದ ಮೇಲೆ ನ್ಯಾಯಾಲಯವು ಜೀವನಾಂಶದ ಮೊತ್ತವನ್ನು ನಿರ್ಧರಿಸುತ್ತದೆ.
ಹೆಂಡತಿಗೆ ಜೀವನಾಂಶ:
ಮುಸ್ಲಿಂ ಕಾನೂನಿನಡಿ, ಕೆಳಗಿನ ಸಮಯಾವಧಿಗಳವರೆಗೂ ನಿಮಗೆ ನಿಮ್ಮ ಗಂಡನಿಂದ ಜೀವನಾಂಶ ಪಡೆಯುವ ಹಕ್ಕಿದೆ:
- ವಿಚ್ಛೇದನದ ನಂತರ ನಿಮ್ಮ ಇದ್ದತ್ ಕಾಲ ಮುಗಿಯುವ ತನಕ
- ನಿಮ್ಮ ಇದ್ದತ್ ಕಾಲ ಮುಗಿದು ನೀವು ಪುನರ್ವಿವಾಹವಾಗುವ ತನಕ
ನಿಮಗೆ ಸಿಗುತ್ತಿರುವ ಜೀವನಾಂಶದ ಮೊತ್ತ ನಿಮಗೆ ಕಡಿಮೆ ಬೀಳುತ್ತಿದ್ದರೆ ನೀವು ಅದನ್ನು ಸಂದರ್ಭಾನುಸಾರ ಹೆಚ್ಚಿಸಲು ಮನವಿ ಮಾಡಬಹುದು.
ನಿಮ್ಮ ಗಂಡ ಸತ್ತು ಹೋಗಿದ್ದರೆ, ನಿಮಗೆ ಜೀವನಾಂಶದ ಮೊತ್ತ ಸಿಗುವುದಿಲ್ಲ. ಆದಾಗ್ಯೂ, ಕೆಳಗಿನವರಿಂದ ನಿಮಗೆ ಜೀವನಾಂಶ ಪಡೆಯುವ ಆಯ್ಕೆ ಇದೆ:
- ನಿಮ್ಮ ಸಂಪತ್ತು ಮತ್ತು ಆಸ್ತಿಯ ಉತ್ತರಾಧಿಕಾರಿಗಳಾದ ನಿಮ್ಮ ಸಂಬಂಧಿಕರಿಂದ
- ನಿಮ್ಮ ಮಕ್ಕಳಿಂದ
- ನಿಮ್ಮ ತಂದೆ-ತಾಯಂದಿರಿಂದ
- ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ
ಜೀವನಾಂಶದ ಜೊತೆಗೆ, ನಿಮ್ಮ ನಿಕಾಹ್-ನಾಮಾದಲ್ಲಿ ನಮೂದಿಸಲಾದ ಮೆಹೆರ್ ಮೊತ್ತವನ್ನೂ ಕೂಡ ನೀವು ಪಡೆಯಲು ಅರ್ಹರಿದ್ದೀರಿ. ಈ ಮೆಹೆರ್ ಮೊತ್ತವನ್ನು ವಿಚ್ಛೇದನದ ಸಂದರ್ಭದಲ್ಲಿ, ಅಥವಾ ನಿಮ್ಮ ಗಂಡನ ನಿಧನದ ಸಂದರ್ಭದಲ್ಲಿ ನೀವು ಪಡೆಯಬಹುದು.
ಕೋರ್ಟಿನ ಆದೇಶದ ಮೇರೆಗೆ ನಿಮಗೆ ಒಂದು ನಿರ್ದಿಷ್ಟವಾದ ಹಣದ ಮೊತ್ತ ನಿಮ್ಮ ಸಂಗಾತಿಯಿಂದ ದೊರಕಬಲ್ಲದು. ಇದು ನಿಮ್ಮ ಅಥವಾ ನಿಮ್ಮ ಮಕ್ಕಳ ಜೀವನೋಪಾಯಕ್ಕೆ ಯಾವ ಆದಾಯದ ಮೂಲವೂ ಇಲ್ಲದಿದ್ದಾಗ ಮಾತ್ರ ನಿಮಗೆ ದೊರೆಯಬಲ್ಲದು. ಈ ಹಣದ ಮೊತ್ತಕ್ಕೆ ಜೀವನಾಂಶ ಎಂದು ಕರೆಯುತ್ತಾರೆ. ಹಿಂದೂ ವಿಚ್ಛೇದನ ಕಾಯಿದೆ ಅಡಿಯಲ್ಲಿ ಜೀವನಾಂಶ ಲಿಂಗ-ತಟಸ್ಥವಾಗಿದೆ. ಅಂದರೆ, ತಾತ್ಕಾಲಿಕ ಅಥವಾ ಶಾಶ್ವತ ಜೀವನಾಂಶದ ಅರ್ಜಿ ಗಂಡ ಅಥವಾ ಹೆಂಡತಿ ಇಬ್ಬರೂ ಸಲ್ಲಿಸಬಹುದು.
ತಾತ್ಕಾಲಿಕ ಜೀವನಾಂಶ:
ನಿಮ್ಮ ವಿಚ್ಛೇದನದ ಪ್ರಕರಣ ಕೋರ್ಟಿನಲ್ಲಿ ನಡೆಯಬೇಕಾದರೆ ನಿಮ್ಮ ಸ್ವಂತಕ್ಕೆ ಹಾಗು/ಅಥವಾ ಮಕ್ಕಳ ಪಾಲನೆ ಪೋಷಣೆಗೆ, ಅಥವಾ ಪ್ರಕರಣದ ಖರ್ಚು-ವೆಚ್ಚಕ್ಕೆ ನಿಮ್ಮ ಹತ್ತಿರ ಆದಾಯವಿಲ್ಲವಾದಲ್ಲಿ ನಿಮ್ಮ ಸಂಗಾತಿ ನಿಮಗೆ ಜೀವನಾಂಶ ನೀಡಬೇಕೆಂದು ಕೋರ್ಟಿಗೆ ನೀವು ಅರ್ಜಿ ಸಲ್ಲಿಸಬಹುದು. ಹೀಗಿದ್ದಾಗ ನ್ಯಾಯಾಲಯವು, ನಿಮ್ಮ ಸಂಗಾತಿಯ ಆದಾಯ ಮತ್ತು ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ಒಂದು ಸಮಂಜಸವಾದ ಮೊತ್ತವನ್ನು ನಿರ್ಧರಿಸುತ್ತದೆ. ಈ ಮೊತ್ತವನ್ನು ನಿಮಗೆ ಮಾಸಿಕ ಜೀವನಾಂಶವೆಂದು ತಾತ್ಕಾಲಿಕವಾಗಿ ನೀಡುವುದಾಗಿ ನ್ಯಾಯಾಲಯವು ನಿರ್ದೇಶಿಸುತ್ತದೆ.
ಶಾಶ್ವತವಾದ ಜೀವನಾಂಶ:
ವಿಚ್ಛೇದನದ ಅರ್ಜಿಯ ಜೊತೆಗೆ ನಿಮಗೆ ಮಾಸಿಕವಾಗಿ, ನಿಯತಕಾಲಿಕವಾಗಿ, ಅಥವಾ ಒಮ್ಮೆಲೇ ಭಾರಿ ಮೊತ್ತವಾಗಿ ನಿಮ್ಮ ಸಂಗಾತಿಯಿಂದ ಜೀವನಾಂಶ ಬೇಕು ಎಂದು ನೀವು ಕೋರ್ಟಿಗೆ ಅರ್ಜಿ ಸಲ್ಲಿಸಬಹುದು.
ನ್ಯಾಯಾಲಯವು ನಿಮ್ಮ ವೈವಾಹಿಕ ಜೀವನದ ಜೀವನಶೈಲಿ ಹಾಗು ನಿಮ್ಮ ಸಂಗಾತಿಯ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಇಂತಹ ಶಾಶ್ವತವಾದ ಜೀವನಾಂಶದ ಮೊತ್ತವನ್ನು ನಿರ್ಧರಿಸುತ್ತದೆ. ಭವಿಷ್ಯದಲ್ಲಿ ನಿಮ್ಮ ಜೀವನಶೈಲಿ ಅಥವಾ ನಿಮ್ಮ ಸಂಗಾತಿಯ ಆರ್ಥಿಕ ಪರಿಸ್ಥಿತಿ ಬದಲಾದರೆ, ಈ ಜೀವಾಂಶದ ಮೊತ್ತವು ಕೂಡ ಬದಲಾಗಬಲ್ಲದು. ಉದಾಹರಣೆಗೆ, ನಿಮ್ಮ ಮಕ್ಕಳ ಶೈಕ್ಷಣಿಕ ಖರ್ಚು ಹೆಚ್ಚಾದಲ್ಲಿ, ನಿಮ್ಮ ಸಂಗಾತಿಯ ಆದಾಯ ಹೆಚ್ಚಾದಲ್ಲಿ ಅಥವಾ ಜೀವನಶೈಲಿ ಸುಧಾರಿಸಿದಲ್ಲಿ, ಅವರು ನಿಮಗೆ ಕೊಡತಕ್ಕದ್ದ ಜೀವನಾಂಶದ ಮೊತ್ತವೂ ಕೂಡ ಹೆಚ್ಚಾಗುತ್ತದೆ.
ನಿಮಗೆ ಮಾಸಿಕವಾಗಿ ಅಥವಾ ನಿಯತಕಾಲಿಕವಾಗಿ ಜೀವನಾಂಶ ಸಿಗುತ್ತಿದ್ದಲ್ಲಿ, ಅದು ನೀವು ಪುನರ್ವಿವಾಹವಾಗುವ ತನಕ ಮಾತ್ರ ನಿಮಗೆ ಸಿಗುತ್ತದೆ. ವಿಚ್ಛೇದನದ ನಂತರ ನೀವು ಇನ್ನೋರ್ವ ವ್ಯಕ್ತಿಯ ಸಂಗಡ ಲೈಂಗಿಕ ಸಂಬಂಧ ಬೆಳೆಸಿಕೊಂಡರೆ ಈ ಜೀವನಾಂಶವನ್ನು ರದ್ದು ಪಡಿಸಲೂಬಹುದು.
ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ನಿಮ್ಮ ಮುಖ್ಯ ಮನವಿಯಾದ ವಿಚ್ಛೇದನ/ ನ್ಯಾಯಿಕ ಬೇರ್ಪಡೆಯನ್ನು ನ್ಯಾಯಾಲಯವು ವಜಾಮಾಡಿದ್ದಲ್ಲಿ, ಅಥವಾ ನೀವೇ ಹಿಂತೆಗೆದುಕೊಂಡಿದ್ದಲ್ಲಿ, ನಿಮಗೆ ಶಾಶ್ವತವಾದ ಜೀವನಾಂಶ ಸಿಗಲಾರದು.
ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಜರುಗುವ ವಿವಾಹಗಳಿಗೆ ಯಾವುದೇ ನಿರ್ದಿಷ್ಟ ವಿಧಿ-ವಿಧಾನಗಳ ಅಗತ್ಯವಿಲ್ಲ. ಆದರೆ, ಇಲ್ಲಿ ಎರಡು ಸಾಧ್ಯತೆಗಳಿವೆ:
ನೀವು ಮತ್ತು ನಿಮ್ಮ ಜೊತೆಗಾರ/ಜೊತೆಗಾರ್ತಿ ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ಇಚ್ಛಿಸದಿದ್ದಲ್ಲಿ: ಉಭಯ ಪಕ್ಷಗಾರರು ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸದೆ, ವಿವಾಹ ಅಧಿಕಾರಿಯ ಸಮ್ಮುಖದಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಬಹುದು. ವಿವಾಹ ಹೇಗೆ ನೆರವೇರಬೇಕೆಂಬುದನ್ನು ತೀರ್ಮಾನಿಸುವ ಹಕ್ಕು ನಿಮಗಿದೆಯಾದರೂ, ನೀವು ಮತ್ತು ನಿಮ್ಮ ಜೊತೆಗಾರ/ಜೊತೆಗಾರ್ತಿ ವಿವಾಹ ಅಧಿಕಾರಿ ಮತ್ತು ಮೂವರು ಸಾಕ್ಷಿಗಳ
ಸಮ್ಮುಖದಲ್ಲಿ ಈ ಕೆಳಕಂಡ ವಾಕ್ಯಗಳನ್ನು ಪರಸ್ಪರ ಹೇಳತಕ್ಕದ್ದು. “ನಾನು (ನಿಮ್ಮ ಹೆಸರು) ನಿಮ್ಮನ್ನು (ನಿಮ್ಮ ಜೊತೆಗಾರ/ಜೊತೆಗಾರ್ತಿಯ ಹೆಸರು) ನನ್ನ ಶಾಸನಬದ್ಧ ಗಂಡ/ಹೆಂಡತಿ ಎಂದು ಸ್ವೀಕರಿಸುತ್ತೇನೆ”.
ನೀವು ಮತ್ತು ನಿಮ್ಮ ಜೊತೆಗಾರ/ಜೊತೆಗಾರ್ತಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿವಾಹ ನೆರವೇರಬೇಕೆಂದು ಇಚ್ಛಿಸಿದಲ್ಲಿ: ನೀವು ಯಾವುದೇ ಧಾರ್ಮಿಕ ವಿಧಿವಿಧಾನವನ್ನು (ನಿಮ್ಮ ವೈಯುಕ್ತಿಕ ಕಾನೂನಿನ ಪ್ರಕಾರ) ನೆರವೇರಿಸಬಹುದು ಮತ್ತು ನಂತರ ನಿಮ್ಮ ವಿವಾಹವನ್ನು ವಿಶೇಷ ವಿವಾಹ ಕಾಯ್ದೆ ಅಡಿ ನೋಂದಾಯಿಸಬಹುದು. ಆದರೆ ಹೀಗೆ ಮಾಡಲು ನೀವು ಮತ್ತು ನಿಮ್ಮ
ಜೊತೆಗಾರ/ಜೊತೆಗಾರ್ತಿ ಮೇಲ್ಕಂಡಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ದಿನಾಂಕದಿಂದ ನಿಮ್ಮ ವಿವಾಹವನ್ನು ನೋಂದಾಯಿಸುವ ದಿನಾಂಕವರೆಗೆ ಪತಿ-ಪತ್ನಿಯರಂತೆ ವಾಸಮಾಡುತ್ತಿರಬೇಕು.
ನೀವು ಯಾವುದೇ ಕಾನೂನಿನಡಿಯಲ್ಲಿ ದತ್ತು ತೆಗೆದುಕೊಂಡಿರಲಿ, ಕೆಳಗಿನವುಗಳನ್ನು ಮಾಡಿದರೆ ನಿಮಗೆ ಶಿಕ್ಷೆಯಾಗುತ್ತದೆ:
೧. ಅಕ್ರಮವಾಗಿ ಮಗುವನ್ನು ಹೊರದೇಶಕ್ಕೆ ಕರೆದೊಯ್ಯುವುದು:
ನ್ಯಾಯಾಲಯದ ಮಾನ್ಯ ಆದೇಶವಿಲ್ಲದೆ ನೀವು ಮಗುವನ್ನು ನಿಮ್ಮ ಜೊತೆ ಅಥವಾ ಬೇರೆಯವರ ಜೊತೆ ಪರದೇಶಕ್ಕೆ ಕರೆದೊಯ್ದರೆ, ಅಥವಾ ಮಗುವನ್ನು ಬೇರೆ ದೇಶಕ್ಕೆ ಕಲಿಸಲು ವ್ಯವಸ್ಥೆಗಳನ್ನು ಮಾಡಿದರೆ, ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು.
೨. ಮಗುವನ್ನು ತ್ಯಜಿಸುವುದು/ ನಿರ್ಲಕ್ಷಿಸುವುದು/ ದೌರ್ಜನ್ಯಕ್ಕೆ ಬಲಿಮಾಡುವುದು:
- -೧೨ ವರ್ಷಗಳೊಳಗಿನ ಮಗುವನ್ನು ನೀವು ಅದರ ಪೋಷಕರು/ಪಾಲಕರು/ತಂದೆ-ತಾಯಿಯಾಗಿ, ಉದ್ದೇಶಪೂರ್ವಕವಾಗಿ ನೀವು ತ್ಯಜಿಸಿದರೆ, ಗರಿಷ್ಟ ೭ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ದಂಡ ವಿಧಿಸಲಾಗುವುದು.
- -ನೀವು ಮಗುವಿನ ತಂದೆ-ತಾಯಿ/ಪಾಲಕರು/ಪೋಷಕರಾಗಿ, ಆ ಮಗುವಿಗೆ ಅನಗತ್ಯವಾದ ಮಾನಸಿಕ ಅಥವಾ ದೈಹಿಕ ನೋವು ಉಂಟಾಗುವಂತೆ, ದಾಳಿ ಮಾಡುವುದು, ತ್ಯಜಿಸುವುದು, ದೌರ್ಜನ್ಯ ಎಸಗುವುದು, ಉದ್ದೇಶಪೂರ್ವಕವಾಗಿ ಮಗುವನ್ನು ನಿರ್ಲಕ್ಷಿಸುವುದು, ಇತ್ಯಾದಿ ಮಾಡಿದರೆ, ೩ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು. ಇಂತಹ ಕ್ರೌರ್ಯದಿಂದ ಆ ಮಗು ದೈಹಿಕವಾಗಿ ಅಶಕ್ತಗೊಂಡಲ್ಲಿ, ಅಥವಾ ಮಾನಸಿಕ ರೋಗದಿಂದ ಬಳಲುತ್ತಿದ್ದಲ್ಲಿ, ಅಥವಾ ಜೀವನದ ಸಾಮಾನ್ಯ ಕಾರ್ಯಗಳನ್ನು ಮಾಡಲು ಆಗಲಾರದಂತೆ ಆದರೆ ನಿಮಗೆ ೩-೧೦ ವರ್ಷಗಳ ಸೆರೆಮನೆ ವಾಸ ಮತ್ತು ೫ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು.
ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನಡಿಯಲ್ಲಿ ಕೆಳಗಿನ ದುಷ್ಕೃತ್ಯಗಳನ್ನು ಮಾಡಿದರೆ ಉಲ್ಲೇಖಿಸಲಾದ ದಂಡ ವಿಧಿಸಲಾಗುವುದು:
-ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿ ನೀವು ಯಾವುದೇ ಅನಾಥ/ತ್ಯಜಿಸಲಾದ/ಬಿಟ್ಟುಕೊಟ್ಟ ಮಗುವನ್ನು ದತ್ತಕ್ಕೆ ತೆಗೆದುಕೊಂಡರೆ/ಕೊಟ್ಟರೆ, ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು. ಪ್ರಮಾಣೀಕೃತ ದತ್ತು ಸ್ವೀಕೃತಿ ಸಂಸ್ಥೆಯು ಈ ಅಪರಾಧವನ್ನು ಮಾಡಿದರೆ, ಮೇಲೆ ಉಲ್ಲೇಖಿಸಿದ ದಂಡಗಳನ್ನು ಸೇರಿದಂತೆ, ಆ ಸಂಸ್ಥೆಯ ನೋಂದಣಿ ಮತ್ತು ಮಾನ್ಯತೆಯನ್ನು ಕನಿಷ್ಟ ೧ ವರ್ಷದ ವರೆಗೆ ಹಿಂತೆಗೆದುಕೊಳ್ಳಲಾಗುತ್ತದೆ.
ಹಿಂದೂ ದತ್ತು ಸ್ವೀಕಾರ ಕಾನೂನಿನಡಿ ಕೆಳಗಿನ ಅಪರಾಧಗಳನ್ನು ಮಾಡಿದರೆ ನಿಮಗೆ ದಂಡ ವಿಧಿಸಲಾಗುವುದು:
-ದತ್ತು ಸ್ವೀಕೃತಿಯ ಸಲುವಾಗಿ ಹಣದ ಪಾವತಿ, ಅಥವಾ ಇನ್ನಿತರ ಬಹುಮಾನವನ್ನು ಕೊಡುವುದು/ತೆಗೆದುಕೊಳ್ಳುವುದು ಮಾಡಿದರೆ, ರಾಜ್ಯ ಸರ್ಕಾರದ ಅನುಮತಿಯ ಮೇರೆಗೆ, ಗರಿಷ್ಟ ೬ ತಿಂಗಳುಗಳ ಸೆರೆಮನೆ ವಾಸ ಮತ್ತು/ಅಥವಾ ದಂಡ ವಿಧಿಸಲಾಗುವುದು.
ನಿಮ್ಮ ಗಂಡ ವಿಚ್ಛೇದನವಾದ ಮೇಲೆ ನಿಮ್ಮನ್ನು ಪುನರ್ವಿವಾಹವಾಗಲು ಬಯಸಿದರೆ, ನೀವು ಆಗ ಕೂಡ ಇದ್ದತ್ ಸಮಯಾವಧಿಯನ್ನು ಆಚರಿಸಬೇಕಾಗುತ್ತದೆ. ಆದರೆ ಇಂತಹ ಇದ್ದತ್ ನಿಮ್ಮ ಗಂಡ ಸತ್ತುಹೋದಾಗ ಆಚರಿಸುವ ಇದ್ದತ್ ಕಿಂತ ಬೇರೆಯಾಗಿದೆ. ನಿಮ್ಮ ಗಂಡ ನಿಮ್ಮನ್ನು ವಿಚ್ಛೇದಿಸಿದ ನಂತರ ನಿಮ್ಮನ್ನು ಪುನರ್ವಿವಾಹವಾಗಬೇಕೆಂದು ಇಚ್ಛಿಸಿದರೆ, ಕೆಳಗಿನ ಕಾರ್ಯವಿಧಾನಗಳು ಆಗುವ ತನಕ ಅವರು ಕಾಯಬೇಕಾಗುತ್ತದೆ:
- ನೀವು ಇದ್ದತ್ ಸಮಯಾವಧಿಯನ್ನು ಆಚರಿಸಬೇಕು
- ಇದ್ದತ್ ಸಮಯಾವಧಿಯ ನಂತರ ನೀವು ಇನ್ನೋರ್ವ ಪುರುಷನನ್ನು ಮದುವೆಯಾಗಬೇಕು
- ನೀವು ಮತ್ತು ಈ ಇನ್ನೋರ್ವ ಪುರುಷನು ಜೊತೆಗೆ ವಾಸ ಮಾಡಿ ಮದುವೆಯನ್ನು ಸಾಂಗಗೊಳಿಸಬೇಕು. ಕಾನೂನಿನ ಪ್ರಕಾರ ನೀವು ನಿಮ್ಮ ಗಂಡನ ಜೊತೆ ಲೈಂಗಿಕ ಸಂಭೋಗ ಮಾಡಿದ ನಂತರ ನಿಮ್ಮ ಮಾಡುವೆ ಸಾಂಗಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.
- ಈ ಪುರುಷನು ನಿಮಗೆ ವಿಚ್ಛೇದನ ನೀಡಬೇಕು.
- ಈ ವಿಚ್ಛೇದನದ ನಂತರ ನೀವು ಮತ್ತೆ ಇದ್ದತ್ ಸಮಯಾವಧಿಯ ಪಾಲನೆ ಮಾಡಬೇಕು.
- ಈ ಸಮಯಾವಧಿಯ ನಂತರ ನೀವು ಪುನಃ ನಿಮ್ಮ ಮಾಜಿ ಗಂಡನನ್ನು ಮದುವೆಯಾಗಬಹುದು.
ಮದುವೆಯ ಅಂತ್ಯವನ್ನು ಸೂಚಿಸುವ ವಿಚ್ಛೇದನವನ್ನು ಹೊರತುಪಡಿಸಿ ನೀವು ಮತ್ತು ನಿಮ್ಮ ಸಂಗಾತಿಗೆ ನಿಮಗೆ ನಿಜವಾಗಿಯೂ ವಿಚ್ಛೇದನ ಬೇಕಾಗಿದೆಯೋ ಇಲ್ಲವೋ ಎಂದು ಯೋಚಿಸಲು ಸಮಯ ಬೇಕಾದಲ್ಲಿ ಕೋರ್ಟಿನಲ್ಲಿ ನೀವು ತಾತ್ಕಾಲಿಕ ಬೇರ್ಪಡೆಯ ಅರ್ಜಿ ಸಲ್ಲಿಸಬಹುದಾಗಿದೆ.
ಈ ಆದೇಶದ ಮೂಲಕ ನೀವು ತಾತ್ಕಾಲಿಕವಾಗಿ ನಿಮ್ಮ ಸಂಗಾತಿಯಿಂದ ಬೇರೆಯಾಗಿದ್ದೀರಿ ಎಂದು ನ್ಯಾಯಾಲಯವು ಅಧಿಕೃತಗೊಳಿಸುತ್ತದೆ.
ನಿಮ್ಮ ಸಂಗಾತಿಯಿಂದ ತಾತ್ಕಾಲಿಕವಾಗಿ ಬೇರೆಯಾಗುವುದು ವಿಚ್ಛೇದನ ಪಡೆಯುವುದರಿಂದ ಕಾನೂನಾತ್ಮಕವಾಗಿ ಭಿನ್ನವಾಗಿದೆ. ಏಕೆಂದರೆ, ತಾತ್ಕಾಲಿಕ ಬೇರ್ಪಡೆಯಲ್ಲಿ ನಿಮ್ಮ ಮದುವೆ ಇನ್ನೂ ಅಸ್ತಿತ್ವದಲ್ಲಿರುತ್ತದೆ. ಆದ್ದರಿಂದ ತಾತ್ಕಾಲಿಕ ಬೇರ್ಪಡೆಯ ಸಮಯದಲ್ಲಿ ನೀವು ಕಾನೂನಾತ್ಮಕವಾಗಿ ಪುನರ್ವಿವಾಹವಾಗುವಂತಿಲ್ಲ.
ವಿಚ್ಛೇದನದ ಆಧಾರಗಳು ಹಾಗು ತಾತ್ಕಾಲಿಕ ಬೇರ್ಪಡೆಯ ಆಧಾರಗಳು ಒಂದೇ. ಆದರೆ ಈ ಎರಡರ ಕಾನೂನಾತ್ಮಕ ಪರಿಣಾಮಗಳು ಬೇರೆ ಬೇರೆ. ತಾತ್ಕಾಲಿಕ ಬೇರ್ಪಡೆಯಲ್ಲಿ ನೀವು ಹಾಗು ನಿಮ್ಮ ಸಂಗಾತಿ ಬೇರೆ ಬೇರೆ ವಾಸಿಸತೊಡಗಿದರೂ ಮದುವೆಯಾದ ದಂಪತಿಗಳೆಂದೇ ಕಾನೂನು ಪರಿಗಣಿಸುತ್ತದೆ.
ತಾತ್ಕಾಲಿಕ ಬೇರ್ಪಡೆಯ ಆದೇಶ ಕೋರ್ಟಿನಿಂದ ಬಂದ ಮೇಲೆ, ನೀವು ಮತ್ತು ನಿಮ್ಮ ಸಂಗಾತಿ ಈ ಕೆಳಕಂಡ ಎರಡು ಆಯ್ಕೆಗಳ ಮಧ್ಯೆ ಆರಿಸಿಕೊಳ್ಳಬಹುದು:
ಆಯ್ಕೆ ೧. ತಾತ್ಕಾಲಿಕ ಬೇರ್ಪಡೆಯ ನಿರ್ದೇಶವನ್ನು ರದ್ದುಪಡಿಸುವುದು: ನೀವು ತಾತ್ಕಾಲಿಕ ಬೇರ್ಪಡೆಯ ನಿರ್ದೇಶವನ್ನು ರದ್ದುಪಡಿಸಲು ಕೋರ್ಟಿನಲ್ಲಿ ಮನವಿ ಸಲ್ಲಿಸಬಹುದು. ಈ ನಿರ್ದೇಶ ರದ್ದುಗೊಂಡ ನಂತರ ನೀವು ಮತ್ತು ನಿಮ್ಮ ಸಂಗಾತಿ ರಾಜಿಯಾಗಿ ಮದುವೆಯಾದ ದಂಪತಿಗಳೆಂದು ಒಟ್ಟಿಗೆ ವಾಸಿಸಬಹುದು.
ಆಯ್ಕೆ ೨: ವಿಚ್ಛೇದನ ಪಡೆಯುವುದು: ನೀವು ಮತ್ತು ನಿಮ್ಮ ಸಂಗಾತಿ ರಾಜಿಯಾಗುವ ಪರಿಸ್ಥಿತಿಯಲ್ಲಿ ಇಲ್ಲವೆಂದರೆ ತಾತ್ಕಾಲಿಕ ಬೇರ್ಪಡೆಯ ನಿರ್ದೇಶದ ಒಂದು ವರ್ಷದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಈ ಒಂದು ವರ್ಷದ ಅವಧಿಯಲ್ಲಿ ನಿಮಗೆ ನಿಮ್ಮ ಸಂಗಾತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ. ಹಾಗೆಯೂ, ಈ ವೇಳೆಯಲ್ಲಿ ಮಕ್ಕಳ ಪಾಲನೆಯ ನಿರ್ಣಯವನ್ನು ನ್ಯಾಯಾಲಯವು ತೀರ್ಪಿಸುತ್ತದೆ.
ರಾಜ್ಯ ಸರ್ಕಾರವು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಣೆ ಹೊರಡಿಸುವುದರ ಮೂಲಕ ವಿವಾಹ ಅಧಿಕಾರಿಯನ್ನುನೇಮಿಸುತ್ತದೆ. ಸಂಬಂಧಿಸಿದ ಅರ್ಜಿದಾರರಿಗೆ ವಿವಾಹ ಪ್ರಮಾಣಪತ್ರವನ್ನು ನೀಡುವುದು ವಿವಾಹ ಅಧಿಕಾರಿಯ ಪ್ರಮುಖ ಕರ್ತವ್ಯ.
ನಿಮಗೆ ದತ್ತು ಸ್ವೀಕೃತಿಯ ಸಂಬಂಧಪಟ್ಟಂತೆ ಯಾವುದೇ ಸಹಾಯ, ಸಹಕಾರ ಬೇಕಾಗಿದ್ದಲ್ಲಿ, ಅಥವಾ ಯಾವುದೇ ಸಮಸ್ಯೆಗೆ ಪರಿಹಾರ ಬೇಕಿದ್ದಲ್ಲಿ, ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಿ:
ಮಕ್ಕಳ ದತ್ತು ಸ್ವೀಕಾರ ಸಂಪನ್ಮೂಲ ಅಧಿಕಾರ: ಈ ಸಂಸ್ಥೆಯು ಅದರ ಸಂಬಂಧಿಸಿದ ಮತ್ತು ಅಧಿಕೃತ ದತ್ತು ಸ್ವೀಕೃತಿ ಸಂಸ್ಥೆಗಳ ತರಫಿನಿಂದ ಅನಾಥ, ತ್ಯಜಿಸಲಾದ, ಮತ್ತು ಬಿಟ್ಟುಕೊಡಲಾದ ಮಕ್ಕಳ ಧಾರ್ಮಿಕೇತರ ದತ್ತು ಸ್ವೀಕಾರವನ್ನು ನಿರ್ವಹಿಸುತ್ತದೆ.
- ಸಂಸ್ಥೆಯ ಸಹಾಯವಾಣಿ ೧೮೦೦-೧೧-೧೩೧೧ಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ೯ರಿಂದ ಸಂಜೆ ೫.೩೦ರವರೆಗೆ ನೀವು ಕರೆ ಮಾಡಬಹುದು.
- ಸಂಸ್ಥೆಯ ಇಮೇಲ್ ವಿಳಾಸ: carahdesk.wdc@nic.in
ಗಂಡಸರಿಗೆ:
- ನಿಮ್ಮ ಹೆಂಡತಿ ಸತ್ತಿದ್ದಲ್ಲಿ, ಅಥವಾ, ನೀವು ಅವರನ್ನು ಕಾನೂನುಬದ್ಧವಾಗಿ ವಿಚ್ಛೇದಿಸಿದ್ದಲ್ಲಿ, ನೀವು ತಕ್ಷಣ ಇನ್ನೋರ್ವ ಸ್ತ್ರೀಯನ್ನು ಮದುವೆಯಾಗಬಹುದು.
- ನೀವು ನಿಮ್ಮ ಹೆಂಡತಿಯನ್ನು ವಿಚ್ಛೇದನದ ನಂತರ ಪುನರ್ವಿವಾಹವಾಗಬೇಕೆಂದಲ್ಲಿ ಮೇಲೆ ಕಂಡ ಕಾರ್ಯವಿಧಾನಗಳನ್ನು ಪಾಲಿಸಬೇಕು.
ಹೆಂಗಸರಿಗೆ:
ನಿಮ್ಮ ಗಂಡ ಸತ್ತಾಗ, ಅಥವಾ ನೀವು ಕಾನೂನುಬದ್ಧವಾಗಿ ಅವರಿಂದ ವಿಚ್ಛೇದನ ಪಡೆದಾಗ, ನಿಮಗೆ ಬೇರೆ ಪುರುಷನ ಜೊತೆ ಮದುವೆಯಾಗಬೇಕೆಂದಲ್ಲಿ ಈ ಕೆಳಗಿನ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ:
ಇದ್ದತ್:
- ಹೆಂಡತಿಯು ತಕ್ಷಣ ಮದುವೆಯಾಗದೆ, “ಇದ್ದತ್” ಎಂಬ ಸಮಯಾವಧಿ ಮುಗಿಯುವ ತನಕ ಕಾಯಬೇಕಾಗುತ್ತದೆ.
- ಇದ್ದತ್ ಸಮಯಾವಧಿಯಲ್ಲಿ ಮುಸ್ಲಿಂ ಮಹಿಳೆಯು ಪುನರ್ವಿವಾಹವಾಗುವಂತಿಲ್ಲ, ಮತ್ತು ಬೇರೆ ಪುರುಷನ ಜೊತೆ ಲೈಂಗಿಕ ಸಂಭೋಗ ಮಾಡುವಂತಿಲ್ಲ.
- ನಿಮ್ಮ ಗಂಡ ಸತ್ತರೆ, ಅವರು ಸತ್ತ ದಿನಾಂಕದಿಂದ ೪ ತಿಂಗಳು ಮತ್ತು ೧೦ ದಿನಗಳ ವರೆಗೆ ನೀವು ಇದ್ದತ್ ಅವಧಿಯ ಪಾಲನೆ ಮಾಡಬೇಕಾಗುತ್ತದೆ.
- ನೀವು ನಿಮ್ಮ ಗಂಡನನ್ನು ವಿಚ್ಛೇದಿಸಿದರೆ, ಅವರು “ತಲಾಕ್” ಎಂಬ ಹೇಳಿಕೆಯನ್ನು ಹೇಳಿದ ದಿನದಿಂದ ೩ ತಿಂಗಳುಗಳವರೆಗೆ ಇದ್ದತ್ ಅವಧಿಯನ್ನು ಪಾಲಿಸಬೇಕಾಗುತ್ತದೆ.
- ನೀವು ಇದ್ದತ್ ಅವಧಿಯಲ್ಲಿ ಗರ್ಭಿಣಿಯಾಗಿದ್ದರೆ , ನಿಮ್ಮ ಹೆರಿಗೆಯ ದಿನದ ತನಕ ಇದ್ದತ್ ನ ಪಾಲನೆ ಮಾಡಬೇಕಾಗುತ್ತದೆ.
ಹಿಂದೂ ವೈವಾಹಕ ಕಾನೂನಿನಡಿ ಗುರುತಿಸಲಾದ ಆಧಾರಗಳ ಮೇಲಷ್ಟೇ ನೀವು ವಿಚ್ಛೇದನವನ್ನು ಪಡೆಯಬಹುದು. ಈ ಕಾನೂನಾತ್ಮಕ ಆಧಾರಗಳ ವ್ಯಾಪ್ತಿ ನಿಮ್ಮ ಸಂಗಾತಿಯ ಕಿರುಕುಳದಿಂದ ಹಿಡಿದು ಅವರ ಮಾನಸಿಕ ರೋಗದ ವರೆಗೆ ಹಬ್ಬಿದೆ.
ಭಾರತದಲ್ಲಿ, ವಿಚ್ಛೇದನ ಪಡೆಯಲು ಕಾನೂನು ನಿರ್ದಿಷ್ಟವಾದ ಆಧಾರಗಳನ್ನು ನೀಡಿದೆ:
ಕಿರುಕುಳ:
- ನಿಮ್ಮ ಸಂಗಾತಿ ನಿಮ್ಮೊಡನೆ ಕ್ರೂರವಾಗಿ ವರ್ತಿಸಿದಾಗ
- ನಿಮ್ಮ ಸಂಗಾತಿ ಬೇರೆಯವರ ಜೊತೆ ಲೈಂಗಿಕ ಸಂಭೋಗ ಮಾಡಿದಾಗ
- ನಿಮ್ಮ ಸಂಗಾತಿ ನಿಮ್ಮನ್ನು ತೊರೆದಾಗ
ಅನಾರೋಗ್ಯ:
- ನಿಮ್ಮ ಸಂಗಾತಿ ನಿಮಗೆ ಹಬ್ಬಬಹುದಾದ ಲೈಂಗಿಕ ರೋಗದಿಂದ ಬಳಲುತ್ತಿದ್ದಾಗ
- ನಿಮ್ಮ ಸಂಗಾತಿಗೆ ಮಾನಸಿಕ ರೋಗವಿದ್ದಾಗ
ನಿಮ್ಮ ಸಂಗಾತಿಯ ಗೈರುಹಾಜರಿ:
- ನಿಮ್ಮ ಸಂಗಾತಿಯು ನಿಮ್ಮಿಂದ ದೂರವಾದಾಗ
- ನಿಮ್ಮ ಸಂಗಾತಿಯು ಕನಿಷ್ಠ ೭ ವರ್ಷದ ಹಿಂದೆ ಸತ್ತು ಹೋಗಿದ್ದಾರೆ ಎಂದು ನೀವು ಭಾವಿಸಿದ್ದಾಗ
- ನಿಮ್ಮ ಸಂಗಾತಿಯು ವಸ್ತು ಪ್ರಪಂಚವನ್ನು ತ್ಯಜಿಸಿ ಯಾವುದೇ ಒಂದು ಧಾರ್ಮಿಕ ಸಂಪ್ರದಾಯವನ್ನು ಸೇರಿದಾಗ
- ತಾತ್ಕಾಲಿಕ ಬೇರ್ಪಡೆಯ ನಿರ್ಣಯವಾದ ಒಂದು ವರ್ಷವಾದ ಮೇಲೆಯೂ ನೀವು ಹಾಗು ನಿಮ್ಮ ಸಂಗಾತಿ ಒಂದುಗೂಡದಿದ್ದಾಗ
- ನಿಮ್ಮ ವೈವಾಹಿಕ ಬಾಧ್ಯತೆಗಳನ್ನು ಪುನರಾರಂಭಿಸಿ ಎಂದು ನ್ಯಾಯಾಲಯವು ಆದೇಶಿಸಿದ ಒಂದು ವರ್ಷದ ನಂತರವೂ ನೀವು ಈ ಆದೇಶವನ್ನು ಪಾಲಿಸದಿದ್ದಾಗ