Theme: Family & Marriage
ಬಾಲ್ಯ ವಿವಾಹ
ಅಂತರ-ಧಾರ್ಮಿಕ ವಿವಾಹಗಳ ನೋಂದಣಿ ಕುರಿತು ನ್ಯಾಯಾ ಮಾರ್ಗದರ್ಶಿ
ಈ ಮಾರ್ಗದರ್ಶಿ ನಿಮಗೆ ಹೇಗೆ ಸಹಾಯ ಮಾಡುತ್ತದೆ?
ಅಂತರ–ಧಾರ್ಮಿಕ ವಿವಾಹಗಳ ಕುರಿತಾದ ನ್ಯಾಯ ಮಾರ್ಗದರ್ಶಿ ನೀವು ಅಂತರ್–ಧಾರ್ಮಿಕ ನಾಗರಿಕ ವಿವಾಹಕ್ಕೆ ಪ್ರವೇಶಿಸಲು ಬಯಸಿದರೆ ಒಳಗೊಂಡಿರುವ ಪ್ರಕ್ರಿಯೆಯನ್ನು ವಿವರಿಸುತ್ತದೆ. 1954 ರ ವಿಶೇಷ ವಿವಾಹ ಕಾಯ್ದೆಯಡಿ ಬೇರೆ ಬೇರೆ ಧರ್ಮಕ್ಕೆ ಸೇರಿದ ಇಬ್ಬರು ಬೇರೆ ಧರ್ಮಕ್ಕೆ ಮತಾಂತರಗೊಳ್ಳದೆ ಮದುವೆಯಾಗಬಹುದು. ಈ ಮಾರ್ಗದರ್ಶಿ ಅಂತರ್–ಧಾರ್ಮಿಕ (ವಿಶೇಷ) ವಿವಾಹಕ್ಕೆ ಸಂಬಂಧಿಸಿದ ಕಾನೂನು ಮತ್ತು ಕಾರ್ಯವಿಧಾನದ ಅಂಶಗಳನ್ನು (ವಿವಾಹದ ಸೂಚನೆ ನೀಡುವುದು, ಮದುವೆಯನ್ನು ನಿರ್ವಹಿಸುವುದು, ವಿವಾಹ ಪ್ರಮಾಣಪತ್ರವನ್ನು ಪಡೆಯುವುದು, ಇತ್ಯಾದಿ) ಸಂಕ್ಷಿಪ್ತವಾಗಿ ವಿವರಿಸುತ್ತದೆ.
ಈ ಮಾರ್ಗದರ್ಶಿಯಲ್ಲಿ ಚರ್ಚಿಸಲಾಗುತ್ತಿರುವ ಕಾನೂನುಗಳು ಯಾವುವು?
ಅಂತರ–ಧಾರ್ಮಿಕ ವಿವಾಹಗಳ ಕುರಿತಾದ ನ್ಯಾಯ ಮಾರ್ಗದರ್ಶಿ 1954 ರ ವಿಶೇಷ ವಿವಾಹ ಕಾಯ್ದೆಯ ಬಗ್ಗೆ ವಿವರಿಸುತ್ತದೆ. ಈ ಮಾರ್ಗದರ್ಶಿ ವಿಶೇಷ ವಿವಾಹ ಕಾಯ್ದೆಯ ಆಧಾರದ ಮೇಲೆ ಸಾಮಾನ್ಯ ಕಾನೂನನ್ನು ಮಾತ್ರ ಒಳಗೊಂಡಿದೆ, ನಿಮ್ಮ ಪರಿಸ್ಥಿತಿಗೆ ಸೂಕ್ತವಾದ ಹೆಚ್ಚು ವಿವರವಾದ ಮಾಹಿತಿಗಾಗಿ ನೀವು ರಾಜ್ಯ–ನಿರ್ದಿಷ್ಟ ವಿಶೇಷ ವಿವಾಹ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲೇಖಿಸಬೇಕಾಗಬಹುದು.
ವಿವರವಾದ ಪ್ರಕ್ರಿಯೆಗಾಗಿ ಮಾರ್ಗದರ್ಶಿಯನ್ನು ಡೌನ್‌ಲೋಡ್ ಮಾಡಿ.
ಕ್ರಿಶ್ಚಿಯನ್ ಕಾನೂನಿನಡಿ ಯಾರು ಮದುವೆಯಾಗಬಹುದು?
ದಂಪತಿಗಳಲ್ಲಿ ಯಾರಾದರೂ ಒಬ್ಬರು, ಅಥವಾ ಇಬ್ಬರೂ ಕ್ರೈಸ್ತಮತಕ್ಕೆ ಸೇರಿದವರಾಗಿದ್ದರೆ, ಆ ದಂಪತಿಗಳು ಕ್ರಿಶ್ಚಿಯನ್ ಕಾನೂನಿನಡಿ ಮದುವೆಯಾಗಬಹುದು. ಕಾನೂನಿನ ದೃಷ್ಟಿಯಲ್ಲಿ, ಯಾರು ಸಂಪೂರ್ಣವಾಗಿ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಇಟ್ಟಿದ್ದಾರೋ, ಅವರು ಕ್ರೈಸ್ತರು. ಹೀಗಿರುವಾಗ, ಅವರು ಇಗರ್ಜಿಯಲ್ಲಿ ದೀಕ್ಷಾಸ್ನಾನ ಪಡೆದಿರುವರೋ ಇಲ್ಲವೋ ಎಂಬುದು ಮುಖ್ಯವಾಗುವುದಿಲ್ಲ. ಬದಲಿಗೆ, ಅವರ ಕ್ರೈಸ್ತಮತದಲ್ಲಿನ ನಂಬಿಕೆಯ ನಿಖರತೆಯನ್ನು ಕಾನೂನು ಪರಿಶೀಲಿಸುತ್ತದೆ.
ಮದುವೆಯಾಗಲು ಕನಿಷ್ಟ ವಯಸ್ಸು:
ಮದುವೆಯಾಗಲು ಕಾನೂನು ಕನಿಷ್ಠ ವಯಸ್ಸನ್ನು ಸೂಚಿಸಿಲ್ಲವಾದರೂ, ಅಲ್ಪವಯಸ್ಕರ ಮದುವೆಗೆ ವಿಶಿಷ್ಟ ಕಾರ್ಯವಿಧಾನವನ್ನು ಉಲ್ಲೇಖಿಸಿದೆ. ಕ್ರಿಶ್ಚಿಯನ್ ಮದುವೆಯ ಸಂಬಂಧ ಪಟ್ಟಂತೆ, ೨೧ರ ಕೆಳಗಿನವರು, ಮತ್ತು ವಿಧವೆ/ವಿಧುರರಲ್ಲರವರು ಅಲ್ಪವಯಸ್ಕರು ಎಂದು ಕರೆಯಲ್ಪಡುತ್ತಾರೆ. ಆದಾಗ್ಯೂ, ಬಾಲ್ಯ ವಿವಾಹ ನಿಷೇಧ ಕಾಯಿದೆಯಡಿ, ೧೮ರ ಒಳಗಿನವರ ಎಲ್ಲ ಮದುವೆಗಳು ಅಮಾನ್ಯ ಹಾಗು ಅನೂರ್ಜಿತ (ಆ ಅಲ್ಪಾಯುವಿನ ಆಯ್ಕೆಯಂತೆ) ಎಂದು ಘೋಷಿಸಲಾಗಿದೆ. ಆ ಅಲ್ಪವಯಸ್ಕ ೧೮ರಿಂದ ೨೧ರ ನಡುವೆ ಇದ್ದು, ಅವರು ಕಾನೂನುಬದ್ಧವಾಗಿ ಮದುವೆಯಾಗಬೇಕೆಂದಲ್ಲಿ, ಅವರ ತಂದೆ, ತಾಯಿ, ಅಥವಾ ಪಾಲಕರು/ಪೋಷಕರ ಒಪ್ಪಿಗೆ ಬೇಕಾಗುತ್ತದೆ.
ಕ್ರಿಶ್ಚಿಯನ್ ಕಾನೂನಿನಡಿ ನಿಷೇಧಿಸಲಾದ ಮದುವೆಗಳು:
ಕೆಲವು ವೈಯಕ್ತಿಕ ಕಾನೂನುಗಳು ಯಾವ ವ್ಯಕ್ತಿ ಯಾರನ್ನು ಮದುವೆಯಾಗಬಹುದು ಎಂಬುದರ ಬಗ್ಗೆ ಕಟ್ಟಳೆಗಳನ್ನು ಹಾಕುತ್ತವೆ. ಉದಾಹರಣೆಗೆ, ಸಹೋದರ/ರಿಯರ ನಡುವೆ. ಕ್ರಿಶ್ಚಿಯನ್ ಕಾನೂನು ಕೂಡ ಇಂತಹ ಮದುವೆಗಳನ್ನು ಒಪ್ಪುವುದಿಲ್ಲ, ಮತ್ತು ಇವುಗಳನ್ನು ಅಮಾನ್ಯ ಎಂದು ಪರಿಗಣಿಸುತ್ತದೆ. ಆದರೆ, ವೈಯಕ್ತಿಕ ಕಾನೂನುಗಳ ಕಟ್ಟಳೆಗಳ ಹೊರಗೆ, ಯಾವುದೇ ವ್ಯಕ್ತಿಯು ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾಗಬಹುದು.
ದತ್ತು ಸ್ವೀಕಾರ ಎಂದರೇನು?
ಭಾವೀ ದತ್ತು ತಂದೆ-ತಾಯಂದಿರು ಕಾನೂನುಬದ್ಧವಾಗಿ ಒಂದು ಮಗುವಿನ ಜವಾಬ್ದಾರಿ, ಆ ಮಗುವಿನ ಹಕ್ಕುಗಳು, ಸವಲತ್ತುಗಳು, ಮತ್ತು ಜವಾಬ್ದಾರಿಗಳ ಸಹಿತ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ದತ್ತು ಸ್ವೀಕಾರ ಎನ್ನುತ್ತಾರೆ. ಕಾನೂನಿನ ಔಪಚಾರಿಕತೆಗಳು ಮುಗಿದ ಮೇಲೆ ಆ ಮಗು ಶಾಶ್ವತವಾಗಿ ತನ್ನ ಜೈವಿಕ ತಂದೆ-ತಾಯಂದಿರಿಂದ ಬೇರೆಗೊಂಡು, ತನ್ನ ದತ್ತು ತಂದೆ-ತಾಯಂದಿರ ಮಗು ಎಂದು ಕರೆಯಲ್ಪಡುತ್ತದೆ.
ಭಾರತದಲ್ಲಿ ದತ್ತು ಸ್ವೀಕಾರದ ಕಾನೂನು ತಂದೆ-ತಾಯಿ ಮತ್ತು ಮಗುವಿನ ಧರ್ಮವನ್ನು ಆಧರಿಸಿದೆ. ಕೆಳಗಿನ ಆಯ್ಕೆಗಳಲ್ಲಿ ನಿಮಗೆ ಯಾವ ಕಾನೂನು ಅನ್ವಯಿಸಬಹುದು ಎಂದು ನೀವು ಸಂದರ್ಭಾನುಸಾರ ನಿರ್ಧರಿಸಕೊಳ್ಳಬಹುದು.
ನೀವು ಹಿಂದೂ, ಬೌದ್ಧ, ಜೈನ ಅಥವಾ ಸಿಖ್ ಆಗಿದ್ದಲ್ಲಿ:
ನೀವು ಹಿಂದೂ, ಬೌದ್ಧ, ಜೈನ, ಅಥವಾ ಸಿಖ್ ಆಗಿದ್ದಲ್ಲಿ (ಸಾಮೂಹಿಕವಾಗಿ ಈ ಸಮುದಾಯಗಳನ್ನು ಕಾನೂನು “ಹಿಂದೂ” ಎಂದು ಪರಿಗಣಿಸುತ್ತದೆ), ಹಿಂದೂ ದತ್ತು ಸ್ವೀಕಾರ ಕಾನೂನು ಎಂದು ಕರೆಯಲ್ಪಡುವ “ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯಿದೆ, ೧೯೫೬” ನಿಮಗೆ ಅನ್ವಯಿಸುತ್ತದೆ. ಈ ಕಾಯಿದೆ, ಹಿಂದೂ ಮಕ್ಕಳ ದತ್ತು ಸ್ವೀಕಾರವನ್ನು ನಿರ್ವಹಿಸುತ್ತದೆ. ನೀವು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಯಹೂದಿ, ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ್ದಲ್ಲಿ, ಈ ಕಾನೂನಿನಡಿ ದತ್ತು ಸ್ವೀಕಾರ ಮಾಡುವಂತಿಲ್ಲ.
ಇನ್ನಿತರ ಧರ್ಮಗಳು:
ನೀವು ಧಾರ್ಮಿಕ ಕಾನೂನಿನಡಿ ದತ್ತು ಸ್ವೀಕಾರ ಮಾಡಲು ಇಚ್ಛಿಸದಿದ್ದಲ್ಲಿ/ಆಗದಿದ್ದಲ್ಲಿ, ಸಾರ್ವತ್ರಿಕ ದತ್ತು ಸ್ವೀಕಾರ ಕಾನೂನಾದ “ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ೨೦೧೫” ರ ಅಡಿಯಲ್ಲಿ ದತ್ತು ಸ್ವೀಕಾರ ಮಾಡಬಹುದು. ಈ ಕಾನೂನಿನಡಿ ಯಾವುದೇ ಧರ್ಮಕ್ಕೆ ಸೇರಿದ ವ್ಯಕ್ತಿ (ಹಿಂದೂ, ಪರಿಶಿಷ್ಟ ಪಂಗಡಗಳು, ಇತ್ಯಾದಿ ಸೇರಿದಂತೆ) ದತ್ತು ಸ್ವೀಕಾರ ಮಾಡಬಹುದು.
ನೀವು ಯಾವ ಕಾನೂನನ್ನು ಅಳವಡಿಸಬೇಕು ಎಂದು ತೀರ್ಮಾನಿಸಲು ಕೆಳಗಿನ ಟೇಬಲ್ ನೋಡಿ:
ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯಿದೆ, ೧೯೫೬ (ಹಿಂದೂ ಕಾನೂನು) | ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ೨೦೧೫ (ಧಾರ್ಮಿಕೇತರ ಕಾನೂನು) |
ದತ್ತು ಪಡೆಯುವ ತಂದೆ–ತಾಯಿ ಕೇವಲ ಹಿಂದೂ, ಬೌದ್ಧ, ಜೈನ, ಅಥವಾ ಸಿಖ್ ಧರ್ಮಕ್ಕೆ ಸೇರಿರಬಹುದು. ನೀವು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಯಹೂದಿ, ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ್ದಲ್ಲಿ ಈ ಕಾನೂನಿನಡಿ ದತ್ತು ಸ್ವೀಕಾರ ಮಾಡುವಂತಿಲ್ಲ. | ದತ್ತು ಪಡೆಯುವ ತಂದೆ–ತಾಯಿ ಯಾವುದೇ ಧರ್ಮ, ಜಾತಿ, ಅಥವಾ ಪಂಗಡಕ್ಕೆ ಸೇರಿರಬಹುದು. |
ಕೇವಲ ಹಿಂದೂ ಮಕ್ಕಳನ್ನು ದತ್ತು ಪಡೆಯಬಹುದು. | ಯಾವುದೇ ಧರ್ಮಕ್ಕೆ ಸೇರಿದ ಮಗುವನ್ನು ದತ್ತು ಪಡೆಯಬಹುದು. |
೧೫ ವರ್ಷದವರೆಗಿನ ಮಕ್ಕಳನ್ನು ದತ್ತು ಪಡೆಯಬಹುದು. | ೧೮ ವರ್ಷದವರೆಗಿನ ಮಕ್ಕಳನ್ನು ದತ್ತು ಪಡೆಯಬಹುದು. |
ಕಾಯಿದೆಯಲ್ಲಿ ದತ್ತು ಸ್ವೀಕಾರದ ಪ್ರಕ್ರಿಯೆ ವಿವರವಾಗಿ ಕೊಟ್ಟಿಲ್ಲವಾದ ಕಾರಣ, ಸಾಮಾನ್ಯವಾಗಿ ಒಂದು ಕರಾರುಪತ್ರವನ್ನು ಕಾರ್ಯಗತಗೊಳಿಸಲಾಗುತ್ತದೆ. | ಬೇರೆ–ಬೇರೆ ವ್ಯಕ್ತಿಗಳಿಗೆ ಅನ್ವಯಿಸುವ ದತ್ತು ಸ್ವೀಕಾರದ ವಿಭಿನ್ನ ಪ್ರಕ್ರಿಯೆಗಳಿವೆ:
೧. ನಿವಾಸಿ ಭಾರತೀಯರಿಂದ ದತ್ತು ಸ್ವೀಕಾರ ೨. ಭಾರತೀಯ ನಾಗರಿಕರಿಂದ ವಿದೇಶಿ ಮಗುವಿನ ದತ್ತು ಸ್ವೀಕಾರ ೩. ಭಾರತದ ಸಾಗರೋತ್ತರ ನಾಗರಿಕರು, ಅಥವಾ ಭಾರತದಲ್ಲಿ ನೆಲೆಸಿದ ವಿದೇಶಿಯರು ದತ್ತು ಸ್ವೀಕಾರ ಮಾಡುವುದು ೪. ಭಾರತದ ಸಾಗರೋತ್ತರ ನಾಗರಿಕರು, ಅನಿವಾಸಿ ಭಾರತೀಯರು, ಅಥವಾ ಪರದೇಶದಲ್ಲಿ ವಾಸಿಸುವ ವಿದೇಶಿಯರು ದತ್ತು ಸ್ವೀಕಾರ ಮಾಡುವುದು ೫. ಮಲ ತಂದೆ–ತಾಯಂದಿರಿಂದ ದತ್ತು ಸ್ವೀಕಾರ ೬. ನೆಂಟರಿಂದ ದತ್ತು ಸ್ವೀಕಾರ |
ಮುಸ್ಲಿಂ ಮದುವೆಯನ್ನು ರದ್ದು ಮಾಡುವುದು
ಮುಸ್ಲಿಂ ಕಾನೂನಿನಡಿ, ಮದುವೆಯು ಮೌಖಿಕ ಅಥವಾ ಲಿಖಿತ ಒಪ್ಪಂದವಾಗಿದೆ. ಮದುವೆಯಾದ ಮುಸ್ಲಿಂ ದಂಪತಿಗಳು ಜೊತೆಗೆ ವಾಸಮಾಡುವುದು, ಮತ್ತು ಲೈಂಗಿಕ ಸಂಬಂಧವನ್ನು ಬೆಳೆಸುವುದು, ಎಂಬಂತಹ ಕೆಲವು ವೈವಾಹಿಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ವೈವಾಹಿಕ ಜವಾಬ್ದಾರಿಗಳಲ್ಲದೆ, ಈ ಕೆಳಕಂಡಂತಹ ಕಾನೂನಾತ್ಮಕ ಜವಾಬ್ದಾರಿಗಳನ್ನೂ ಸಹ ಅವರು ನೆರವೇರಿಸಬೇಕಾಗುತ್ತದೆ:
- ಗಂಡ-ಹೆಂಡತಿಯರ ಆಸ್ತಿ ವಿಭಜನೆ (ಭೂಮಿ, ಅಪಾರ್ಟ್ಮೆಂಟ್, ಹೂಡಿಕೆ, ವಿಮೆ)
- ಹೆಂಡತಿಗೆ ಜೀವನಾಂಶ ಕೊಡುವುದು
- ಹೆಂಡತಿಯ ಡೊವರ್ / ಮೆಹೆರ್ ನ ಹಕ್ಕು
ಮುಸ್ಲಿಂ ಮದುವೆ ರದ್ದುಗೊಂಡಾಗ, ನಿಮ್ಮ ಗಂಡ/ಹೆಂಡತಿಯ ಜೊತೆಗಿನ ಒಪ್ಪಂದವೂ ಮುಗಿದ ಹಾಗೆ. ಆದ್ದರಿಂದ, ನಿಮ್ಮಿಬ್ಬರ ನಡುವಿನ ವೈವಾಹಿಕ ಜವಾಬ್ದಾರಿಗಳು ಮುಗಿಯುತ್ತವೆ, ಆದರೆ ಕಾನೂನಾತ್ಮಕ ಜವಾಬ್ದಾರಿಗಳು ಮುಗಿಯಲಿಕ್ಕಿಲ್ಲ.
ಮದುವೆಯು ಕೆಳಕಂಡಂತೆ ರದ್ದುಗೊಳ್ಳಬಹುದು:
ಸಂಗಾತಿಯ ನಿಧನ:
ನಿಮ್ಮ ಗಂಡ/ಹೆಂಡತಿಯ ನಿಧನವಾದಲ್ಲಿ ನಿಮ್ಮ ಮದುವೆ ರದ್ದುಗೊಳ್ಳುತ್ತದೆ. ಮುಸ್ಲಿಂ ಮದುವೆ ಒಂದು ಒಪ್ಪಂದವಾಗಿರುವುದರಿಂದ, ಸಂಗಾತಿಯ ನಿಧನದ ಅರ್ಥ, ಅವರು ಆ ಒಪ್ಪಂದದಿಂದ ಹೊರಗೆ ಬಂದಿದ್ದಾರೆ ಎಂದಾಗುತ್ತದೆ.
ವಿಚ್ಛೇದನ:
ಮುಸ್ಲಿಮರಲ್ಲಿ ವಿಚ್ಛೇದನವನ್ನು ನ್ಯಾಯಾಲಯಗಳ ಒಳಗೊಳ್ಳುವಿಕೆಯಿಲ್ಲದೆ ನೀಡಬಹುದು. ಆದರೆ, ವಿಚ್ಛೇದನದ ಸಮಯದಲ್ಲಿ ಏನಾದರೂ ವಿವಾದ ಹುಟ್ಟಿಕೊಂಡರೆ, ಬೇಕೆಂದರೆ ನ್ಯಾಯಾಲಯಗಳ ಮೊರೆ ಹೋಗಬಹುದು. ವಿಚ್ಛೇದನವನ್ನು ನೀವು ಅಥವಾ ನಿಮ್ಮ ಸಂಗಾತಿ ನೀಡಬಹುದು. ನಿಮ್ಮ ಮದುವೆಯು ಕೆಳಕಂಡ ರೀತಿಗಳಂತೆ ಅಂತ್ಯಗೊಳ್ಳಬಹುದು:
- ಗಂಡ ಮದುವೆಯನ್ನು ಮುರಿಯಲು ಇಚ್ಛಿಸಿದಾಗ
- ಹೆಂಡತಿ ಮದುವೆಯನ್ನು ಮುರಿಯಲು ಇಚ್ಛಿಸಿದಾಗ
- ಗಂಡ ಹಾಗು ಹೆಂಡತಿ ಇಬ್ಬರೂ ಸೇರಿ ಮದುವೆಯನ್ನು ಮುರಿದಾಗ
ಬಹಳಷ್ಟು ಸಂದರ್ಭಗಳಲ್ಲಿ, ನ್ಯಾಯಾಲಯಕ್ಕೆ ಹೋಗದೆ, “ನನಗೆ ಇನ್ನು ಮದುವೆಯಲ್ಲಿರಲು ಇಷ್ಟವಿಲ್ಲ” ಎಂದು ಅದನ್ನು ಮುರಿಯಲು ಹೆಂಗಸರಿಗಿಂತ ಗಂಡಸರಿಗೆ ಹೆಚ್ಚುಆಯ್ಕೆಗಳಿವೆ. ಹೆಂಗಸರಿಗೆ ಹೀಗೆ ಮಾಡಲು ಕೇವಲ ಒಂದೇ ರೀತಿ ಇದೆ. ಆದಾಗ್ಯೂ, ಹೆಂಗಸರು ನ್ಯಾಯಾಲಯಕ್ಕೆ ಹೋದರೆ, ಅಲ್ಲಿ ಅವರಿಗೆ ಇನ್ನೂ ಹೆಚ್ಚು ಬಗೆಯ ಆಯ್ಕೆಗಳು ಸಿಗುತ್ತವೆ.
ಮಕ್ಕಳು ತಂದೆ-ತಾಯಂದಿರನ್ನು ನೋಡಿಕೊಳ್ಳುವುದು
ಭಾರತೀಯ ಕಾನೂನಿನ ಪ್ರಕಾರ ಎಲ್ಲ ವ್ಯಕ್ತಿಗಳು ತಮ್ಮ ತಂದೆ-ತಾಯಂದಿರನ್ನು ನೋಡಿಕೊಳ್ಳಬೇಕು ಮತ್ತು ಅವರ ಆಸರೆಯಾಗಬೇಕು ಎಂದಿದೆ. ಇಂತಹ ತಂದೆ-ತಾಯಂದಿರು ಜೈವಿಕವಾಗಿರಬಹುದು, ಮಲ ತಂದೆ-ತಾಯಿ ಆಗಿರಬಹುದು, ಅಥವಾ ದತ್ತು ತಂದೆ-ತಾಯಿ ಆಗಿರಬಹುದು. ತಂದೆ-ತಾಯಿ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯಿದೆ, ೨೦೦೭ರ ಅಡಿಯಲ್ಲಿ ಹಿರಿಯ ನಾಗರಿಕರು (೬೦ರ ಮೇಲಿರುವವರು) ಅವರ ವಯಸ್ಕ ಮಕ್ಕಳು ಅಥವಾ ಕಾನೂನಾತ್ಮಕ ಉತ್ತರಾಧಿಕಾರಿಗಳಿಂದ ಜೀವನಾಂಶ ಪಡೆಯಲು ಟ್ರಿಬ್ಯೂನಲ್ ಗೆ ಅರ್ಜಿ ಸಲ್ಲಿಸಬಹುದು. ಅವರು ತಮ್ಮನು ತಾವೇ ನೋಡಿಕೊಳ್ಳಲು ಆಗದಿದ್ದಲ್ಲಿ ಇಂತಹ ಅರ್ಜಿ ಸಲ್ಲಿಸಬಹುದಾಗಿದೆ.
ಬಾಲ್ಯ ವಿವಾಹ
ಯಾವುದೇ ವಿವಾಹವು ಕಾನೂನಿನಡಿ ಬಾಲ್ಯ ವಿವಾಹವೆಂದು ಪರಿಗಣಿಸಬೇಕಾದಲ್ಲಿ:
- ಮದುವೆಯಾಗುವ ಇಬ್ಬರೂ ಅಪ್ರಾಪ್ತ ವಯಸ್ಸಿನವರಾಗಿರಬೇಕು, ಅಥವಾ
- ಮದುವೆಯಾಗುವ ಕನಿಷ್ಠ ಒಬ್ಬರು ಅಪ್ರಾಪ್ತ ವಯಸ್ಸಿನವರಾಗಿರಬೇಕು.
ಕಾನೂನಿನಡಿ ಮಹಿಳೆಯರ ಮದುವೆಯ ವಯಸ್ಸು ೧೮, ಹಾಗು ಪುರುಷರದು ೨೧ ಆಗಿದೆ.
ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಪ್ರೌಢಾವಸ್ಥೆಯೇ (೧೫ ವರ್ಷಗಳು) ಮದುವೆಯ ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ನೀವು ೧೮/೨೧ ವರ್ಷಗಳ ಕೆಳಗಿದ್ದು, ಮದುವೆಯಾದರೆ, ನಿಮ್ಮ ಮದುವೆ ಅಕ್ರಮವಲ್ಲ. ಆದಾಗ್ಯೂ, ಬಾಲ್ಯ ವಿವಾಹ ಕಾನೂನಿನಡಿ, ಬೇಕಾದಲ್ಲಿ ನೀವು ನಿಮ್ಮ ಮದುವೆಯನ್ನು ರದ್ದುಗೊಳಿಸಬಹುದು.
ಹಿಂದೂ ವಿವಾಹ ಕಾನೂನಿನಡಿ ವಿಚ್ಛೇದನ
ವಿವಾಹ ಸಂಬಂಧಿತ ಕಾನೂನುಗಳು, ಹಲವಾರು ವೈವಾಹಿಕ ಹಾಗು ಭಾವನಾತ್ಮಕ ಹಕ್ಕುಗಳನ್ನು ಗುರುತಿಸುತ್ತವೆ. ಇವುಗಳಲ್ಲಿ ಕೆಲವು ವಿಷಯಗಳು: ಆಸ್ತಿ ವಿಭಜನೆ, ಮಕ್ಕಳ ಜವಾಬ್ದಾರಿ, ಇತ್ಯಾದಿ. ವಿಚ್ಛೇದನ ಪಡೆದಲ್ಲಿ ವೈವಾಹಿಕ ಸಂಬಂಧ ಅಂತ್ಯಗೊಂಡರೂ ಕೆಲವು ಕಾನೂನಾತ್ಮಕ ಬಾಧ್ಯತೆಗಳು ಮುಂದುವರೆಯಬಹುದು.
ವೈವಾಹಿಕ ಸಂಬಂಧ:
ಕಾನೂನಿನ ಪ್ರಕಾರ ಮದುವೆಯೆಂದರೆ:
- ಭಾವನಾತ್ಮಕ ಆಸರೆ
- ಲೈಂಗಿಕ ಸಂಬಂಧ
- ಮಕ್ಕಳ ಹಾಗು ಸಾಂಸಾರಿಕ ಜವಾಬ್ದಾರಿ, ಹಾಗು
- ಆರ್ಥಿಕ ಬೆಂಬಲ
- ಇವೆಲ್ಲ ಅಂಶಗಳ ಇರುವಿಕೆ.
ಕಾನೂನಾತ್ಮಕ ಬಾಧ್ಯತೆಗಳು:
ನೀವು ಮತ್ತು ನಿಮ್ಮ ಸಂಗಾತಿಯ ನಡುವೆ, ವಿವಾಹದ ಅಂತರ್ಗತವಾಗಿ, ಹಲವಾರು ನ್ಯಾಯಿಕ ಬಾಧ್ಯತೆಗಳಿರುವುದುಂಟು. ಇವುಗಳಲ್ಲಿ ಕೆಲವು ವಿಚ್ಛೇದನ ಆದಮೇಲೂ ಸಹ ಮುಂದುವರೆಯುತ್ತವೆ. ಅವೇನೆಂದರೆ:
ಜೀವನಾಂಶ:
ನ್ಯಾಯಾಲಯವು ವಿಚ್ಛೇದನದ ವೇಳೆ, ನೀವು ನಿಮ್ಮ ಸಂಗಾತಿಗೆ ಹಣ ಕೊಡುವುದಾಗಿ ಆದೇಶಿಸಬಹುದು. ಈ ಹಣಕ್ಕೆ ಜೀವನಾಂಶ ಎಂದು ಕರೆಯುತ್ತಾರೆ.
ಮಕ್ಕಳನ್ನು ಪೋಷಿಸುವ ಜವಾಬ್ದಾರಿ:
ನ್ಯಾಯಾಲಯವು ನಿಮ್ಮ ಮಕ್ಕಳು ಯಾರ ಜೊತೆ ಇರಬಹುದು, ಹಾಗು ಅವರ ಆರ್ಥಿಕ ಹೊಣೆಗಾರಿಕೆ ಯಾರು ವಹಿಸುತ್ತಾರೆ ಎಂಬುದನ್ನು ವಿಚ್ಛೇದನದ ಸಮಯದಲ್ಲಿ ನಿರ್ಧರಿಸುತ್ತದೆ.
ಕ್ರಿಶ್ಚಿಯನ್ ಮದುವೆಯನ್ನು ಯಾರು ನೆರವೇರಿಸಬಹುದು?
ಕೆಳಗಿನವರು ಕಾನೂನುಬದ್ಧವಾಗಿ ಕ್ರೈಸ್ತಮತೀಯ ಮದುವೆಗಳನ್ನು ನೆರವೇರಿಸಬಹುದು:
- ಚರ್ಚಿನಿಂದ ಪಾದ್ರಿ/ ಧಾರ್ಮ ಸಚಿವರಾಗುವ ದೀಕ್ಷೆ ಪಡೆದವರು
- ಸ್ಕಾಟ್ಲೆಂಡಿನ ಇಗರ್ಜಿಯ ಪಾದ್ರಿಗಳು
- ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ಮದುವೆ ನೆರವೇರಿಸಲು ಪರವಾನಗಿ ಪಡೆದ ಧರ್ಮ ಸಚಿವರು
- ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ನೇಮಕಗೊಂಡ ವಿವಾಹ ಕುಲಸಚಿವರು. ಈ ಕುಲಸಚಿವರ ಉಪಸ್ಥಿತಿಯಲ್ಲಿ, ಅಥವಾ ಅವರ ನಾಯಕತ್ವದಲ್ಲಿ ಮದುವೆ ನೆರವೇರಬೇಕು.
- ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ವಿವಾಹ ಪ್ರಮಾಣಪತ್ರ ಅನುದಾನಿಸುವ ಪರವಾನಗಿ ಪಡೆದ ಯಾವುದೇ ವ್ಯಕ್ತಿ.
ಸ್ಕಾಟ್ಲೆಂಡಿನ ಚರ್ಚಿನ ಧರ್ಮ ಸಚಿವರು, ಅಥವಾ ಪಾದ್ರಿಯವರಿಂದ ನೆರವೇರಿಸಲಾಗುವ ಎಲ್ಲ ಮದುವೆಗಳು, ಆ ಪಂಗಡದ ಚರ್ಚಿನ ನಿಯಮಗಳು, ವಿಧಿಗಳು, ಸಮಾರಂಭಗಳು, ಮತ್ತು ಸಂಪ್ರದಾಯಗಳ ಅನುಸಾರ ನಡೆಯಬೇಕಾಗುತ್ತವೆ. ಆದರೆ, ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿ ಪರವಾನಗಿ ಪಡೆದ ಧಾರ್ಮ ಸಚಿವರು, ವಿವಾಹ ಪ್ರಮಾಣಪತ್ರ ಅನುದಾನಿಸುವ ಪರವಾನಗಿ ಪಡೆದ ಯಾವುದೇ ವ್ಯಕ್ತಿ, ಅಥವಾ ಈ ಕಾಯಿದೆಯಡಿ ನೇಮಕಗೊಂಡ ವಿವಾಹ ಕುಲಸಚಿವರು ಮದುವೆ ನೆರವೇರಿಸುವುದಿದ್ದಲ್ಲಿ, ಈ ಕಾಯಿದೆಯಲ್ಲಿ ಉಲ್ಲೇಖಿಸಿರುವ ಕಾರ್ಯವಿಧಾನಾನುಸಾರ ಮದುವೆಯನ್ನು ನೆರವೇರಿಸಬೇಕಾಗುತ್ತದೆ. ಈ ಕಾರ್ಯವಿಧಾನಗಳು ಯಾರು ಮದುವೆಯನ್ನು ನೆರವೇರಿಸುತ್ತಿದ್ದಾರೆ ಎಂಬುದರ ಮೇಲೆ ಬದಲಾಗುವುದುಂಟು.