ದೀಕ್ಷಾಸ್ನಾನ: ಒಬ್ಬ ವ್ಯಕ್ತಿಯ ಕ್ರಿಶ್ಚಿಯನ್ ಧರ್ಮಕ್ಕೆ ಸಾಂಪ್ರದಾಯಿಕವಾಗಿ ಪ್ರವೇಶವನ್ನು ಸೂಚಿಸುವ ಆಚರಣೆಗೆ ದೀಕ್ಷಾಸ್ನಾನ ಎನ್ನುತ್ತಾರೆ.
ಅಲ್ಪವಯಸ್ಕ: ಈ ಸಂದರ್ಭದಲ್ಲಿ, ಯಾರು ೨೧ರ ಕೆಳಗಿದ್ದು, ವಿಧವೆ/ವಿಧುರರಲ್ಲವೋ, ಅವರಿಗೆ ಕಾನೂನು ಅಲ್ಪಾವಯಸ್ಕರೆಂದು ಪರಿಗಣಿಸುತ್ತದೆ.
ಕಾನೂನು ಕ್ರಮ: ಆರೋಪಿಯ ವಿರುದ್ಧ, ಅವರು ತಪ್ಪಿತಸ್ಥರೋ ಅಲ್ಲವೋ ಎಂದು ಕಂಡುಹಿಡಿಯಲು ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದಕ್ಕೆ ಕಾನೂನು ಕ್ರಮ ಕೈಗೊಳ್ಳುವುದು ಎಂದರ್ಥ.
ಭಾರತೀಯ ಕ್ರಿಶ್ಚಿಯನ್: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಸ್ಥಳೀಯ ಭಾರತೀಯರ ಕ್ರಿಶ್ಚಿಯನ್ ವಂಶಸ್ಥ, ಮತ್ತು ಇಂತಹ ಮತಾಂತರಗೊಂಡ ವ್ಯಕ್ತಿಗಳಿಗೆ ಭಾರತೀಯ ಕ್ರಿಶ್ಚಿಯನ್ನರು ಎನ್ನುತ್ತಾರೆ.
ಜೀವನಾಂಶವನ್ನು ನಿರ್ಧರಿಸುವ ಮಾನದಂಡದಗಳ ಬಗ್ಗೆ ತಿಳಿಯೋಣ ಬನ್ನಿ.
Let’s learn about the criteria for determining alimony.
ವಿಚ್ಛೇದನಕ್ಕೆ ಕಾಲಾವಧಿ ಎಷ್ಟು ಎಂದು ತಿಳಿಯೋಣ ಬನ್ನಿ.
Let’s find out how long it takes to get a divorce.
ಹಿರಿಯ ನಾಗರಿಕರನ್ನು ಕಾಳಜಿ ಮಾಡದ ಮಕ್ಕಳ ಆಸ್ತಿ ಹಕ್ಕುಗಳ ಕುರಿತು ತಿಳಿಯಿರಿ.
Learn about the property rights of children who do not care for senior citizens.
ಮದುವೆಗೆ ಸಂಬಂಧಪಟ್ಟ ಕಾನೂನುಗಳ ಬಗ್ಗೆ ಇಲ್ಲಿ ತಿಳಿಯಿರಿ.
ಈ ಮಾರ್ಗದರ್ಶಿ ನಿಮಗೆ ಹೇಗೆ ಸಹಾಯ ಮಾಡುತ್ತದೆ?
ಅಂತರ–ಧಾರ್ಮಿಕ ವಿವಾಹಗಳ ಕುರಿತಾದ ನ್ಯಾಯ ಮಾರ್ಗದರ್ಶಿ ನೀವು ಅಂತರ್–ಧಾರ್ಮಿಕ ನಾಗರಿಕ ವಿವಾಹಕ್ಕೆ ಪ್ರವೇಶಿಸಲು ಬಯಸಿದರೆ ಒಳಗೊಂಡಿರುವ ಪ್ರಕ್ರಿಯೆಯನ್ನು ವಿವರಿಸುತ್ತದೆ. 1954 ರ ವಿಶೇಷ ವಿವಾಹ ಕಾಯ್ದೆಯಡಿ ಬೇರೆ ಬೇರೆ ಧರ್ಮಕ್ಕೆ ಸೇರಿದ ಇಬ್ಬರು ಬೇರೆ ಧರ್ಮಕ್ಕೆ ಮತಾಂತರಗೊಳ್ಳದೆ ಮದುವೆಯಾಗಬಹುದು. ಈ ಮಾರ್ಗದರ್ಶಿ ಅಂತರ್–ಧಾರ್ಮಿಕ (ವಿಶೇಷ) ವಿವಾಹಕ್ಕೆ ಸಂಬಂಧಿಸಿದ ಕಾನೂನು ಮತ್ತು ಕಾರ್ಯವಿಧಾನದ ಅಂಶಗಳನ್ನು (ವಿವಾಹದ ಸೂಚನೆ ನೀಡುವುದು, ಮದುವೆಯನ್ನು ನಿರ್ವಹಿಸುವುದು, ವಿವಾಹ ಪ್ರಮಾಣಪತ್ರವನ್ನು ಪಡೆಯುವುದು, ಇತ್ಯಾದಿ) ಸಂಕ್ಷಿಪ್ತವಾಗಿ ವಿವರಿಸುತ್ತದೆ.
ಈ ಮಾರ್ಗದರ್ಶಿಯಲ್ಲಿ ಚರ್ಚಿಸಲಾಗುತ್ತಿರುವ ಕಾನೂನುಗಳು ಯಾವುವು?
ಅಂತರ–ಧಾರ್ಮಿಕ ವಿವಾಹಗಳ ಕುರಿತಾದ ನ್ಯಾಯ ಮಾರ್ಗದರ್ಶಿ 1954 ರ ವಿಶೇಷ ವಿವಾಹ ಕಾಯ್ದೆಯ ಬಗ್ಗೆ ವಿವರಿಸುತ್ತದೆ. ಈ ಮಾರ್ಗದರ್ಶಿ ವಿಶೇಷ ವಿವಾಹ ಕಾಯ್ದೆಯ ಆಧಾರದ ಮೇಲೆ ಸಾಮಾನ್ಯ ಕಾನೂನನ್ನು ಮಾತ್ರ ಒಳಗೊಂಡಿದೆ, ನಿಮ್ಮ ಪರಿಸ್ಥಿತಿಗೆ ಸೂಕ್ತವಾದ ಹೆಚ್ಚು ವಿವರವಾದ ಮಾಹಿತಿಗಾಗಿ ನೀವು ರಾಜ್ಯ–ನಿರ್ದಿಷ್ಟ ವಿಶೇಷ ವಿವಾಹ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲೇಖಿಸಬೇಕಾಗಬಹುದು.
ವಿವರವಾದ ಪ್ರಕ್ರಿಯೆಗಾಗಿ ಮಾರ್ಗದರ್ಶಿಯನ್ನು ಡೌನ್‌ಲೋಡ್ ಮಾಡಿ.
ದಂಪತಿಗಳಲ್ಲಿ ಯಾರಾದರೂ ಒಬ್ಬರು, ಅಥವಾ ಇಬ್ಬರೂ ಕ್ರೈಸ್ತಮತಕ್ಕೆ ಸೇರಿದವರಾಗಿದ್ದರೆ, ಆ ದಂಪತಿಗಳು ಕ್ರಿಶ್ಚಿಯನ್ ಕಾನೂನಿನಡಿ ಮದುವೆಯಾಗಬಹುದು. ಕಾನೂನಿನ ದೃಷ್ಟಿಯಲ್ಲಿ, ಯಾರು ಸಂಪೂರ್ಣವಾಗಿ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಇಟ್ಟಿದ್ದಾರೋ, ಅವರು ಕ್ರೈಸ್ತರು. ಹೀಗಿರುವಾಗ, ಅವರು ಇಗರ್ಜಿಯಲ್ಲಿ ದೀಕ್ಷಾಸ್ನಾನ ಪಡೆದಿರುವರೋ ಇಲ್ಲವೋ ಎಂಬುದು ಮುಖ್ಯವಾಗುವುದಿಲ್ಲ. ಬದಲಿಗೆ, ಅವರ ಕ್ರೈಸ್ತಮತದಲ್ಲಿನ ನಂಬಿಕೆಯ ನಿಖರತೆಯನ್ನು ಕಾನೂನು ಪರಿಶೀಲಿಸುತ್ತದೆ.
ಮದುವೆಯಾಗಲು ಕನಿಷ್ಟ ವಯಸ್ಸು:
ಮದುವೆಯಾಗಲು ಕಾನೂನು ಕನಿಷ್ಠ ವಯಸ್ಸನ್ನು ಸೂಚಿಸಿಲ್ಲವಾದರೂ, ಅಲ್ಪವಯಸ್ಕರ ಮದುವೆಗೆ ವಿಶಿಷ್ಟ ಕಾರ್ಯವಿಧಾನವನ್ನು ಉಲ್ಲೇಖಿಸಿದೆ. ಕ್ರಿಶ್ಚಿಯನ್ ಮದುವೆಯ ಸಂಬಂಧ ಪಟ್ಟಂತೆ, ೨೧ರ ಕೆಳಗಿನವರು, ಮತ್ತು ವಿಧವೆ/ವಿಧುರರಲ್ಲರವರು ಅಲ್ಪವಯಸ್ಕರು ಎಂದು ಕರೆಯಲ್ಪಡುತ್ತಾರೆ. ಆದಾಗ್ಯೂ, ಬಾಲ್ಯ ವಿವಾಹ ನಿಷೇಧ ಕಾಯಿದೆಯಡಿ, ೧೮ರ ಒಳಗಿನವರ ಎಲ್ಲ ಮದುವೆಗಳು ಅಮಾನ್ಯ ಹಾಗು ಅನೂರ್ಜಿತ (ಆ ಅಲ್ಪಾಯುವಿನ ಆಯ್ಕೆಯಂತೆ) ಎಂದು ಘೋಷಿಸಲಾಗಿದೆ. ಆ ಅಲ್ಪವಯಸ್ಕ ೧೮ರಿಂದ ೨೧ರ ನಡುವೆ ಇದ್ದು, ಅವರು ಕಾನೂನುಬದ್ಧವಾಗಿ ಮದುವೆಯಾಗಬೇಕೆಂದಲ್ಲಿ, ಅವರ ತಂದೆ, ತಾಯಿ, ಅಥವಾ ಪಾಲಕರು/ಪೋಷಕರ ಒಪ್ಪಿಗೆ ಬೇಕಾಗುತ್ತದೆ.
ಕ್ರಿಶ್ಚಿಯನ್ ಕಾನೂನಿನಡಿ ನಿಷೇಧಿಸಲಾದ ಮದುವೆಗಳು:
ಕೆಲವು ವೈಯಕ್ತಿಕ ಕಾನೂನುಗಳು ಯಾವ ವ್ಯಕ್ತಿ ಯಾರನ್ನು ಮದುವೆಯಾಗಬಹುದು ಎಂಬುದರ ಬಗ್ಗೆ ಕಟ್ಟಳೆಗಳನ್ನು ಹಾಕುತ್ತವೆ. ಉದಾಹರಣೆಗೆ, ಸಹೋದರ/ರಿಯರ ನಡುವೆ. ಕ್ರಿಶ್ಚಿಯನ್ ಕಾನೂನು ಕೂಡ ಇಂತಹ ಮದುವೆಗಳನ್ನು ಒಪ್ಪುವುದಿಲ್ಲ, ಮತ್ತು ಇವುಗಳನ್ನು ಅಮಾನ್ಯ ಎಂದು ಪರಿಗಣಿಸುತ್ತದೆ. ಆದರೆ, ವೈಯಕ್ತಿಕ ಕಾನೂನುಗಳ ಕಟ್ಟಳೆಗಳ ಹೊರಗೆ, ಯಾವುದೇ ವ್ಯಕ್ತಿಯು ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾಗಬಹುದು.
ಭಾವೀ ದತ್ತು ತಂದೆ-ತಾಯಂದಿರು ಕಾನೂನುಬದ್ಧವಾಗಿ ಒಂದು ಮಗುವಿನ ಜವಾಬ್ದಾರಿ, ಆ ಮಗುವಿನ ಹಕ್ಕುಗಳು, ಸವಲತ್ತುಗಳು, ಮತ್ತು ಜವಾಬ್ದಾರಿಗಳ ಸಹಿತ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ದತ್ತು ಸ್ವೀಕಾರ ಎನ್ನುತ್ತಾರೆ. ಕಾನೂನಿನ ಔಪಚಾರಿಕತೆಗಳು ಮುಗಿದ ಮೇಲೆ ಆ ಮಗು ಶಾಶ್ವತವಾಗಿ ತನ್ನ ಜೈವಿಕ ತಂದೆ-ತಾಯಂದಿರಿಂದ ಬೇರೆಗೊಂಡು, ತನ್ನ ದತ್ತು ತಂದೆ-ತಾಯಂದಿರ ಮಗು ಎಂದು ಕರೆಯಲ್ಪಡುತ್ತದೆ.
ಭಾರತದಲ್ಲಿ ದತ್ತು ಸ್ವೀಕಾರದ ಕಾನೂನು ತಂದೆ-ತಾಯಿ ಮತ್ತು ಮಗುವಿನ ಧರ್ಮವನ್ನು ಆಧರಿಸಿದೆ. ಕೆಳಗಿನ ಆಯ್ಕೆಗಳಲ್ಲಿ ನಿಮಗೆ ಯಾವ ಕಾನೂನು ಅನ್ವಯಿಸಬಹುದು ಎಂದು ನೀವು ಸಂದರ್ಭಾನುಸಾರ ನಿರ್ಧರಿಸಕೊಳ್ಳಬಹುದು.
ನೀವು ಹಿಂದೂ, ಬೌದ್ಧ, ಜೈನ ಅಥವಾ ಸಿಖ್ ಆಗಿದ್ದಲ್ಲಿ:
ನೀವು ಹಿಂದೂ, ಬೌದ್ಧ, ಜೈನ, ಅಥವಾ ಸಿಖ್ ಆಗಿದ್ದಲ್ಲಿ (ಸಾಮೂಹಿಕವಾಗಿ ಈ ಸಮುದಾಯಗಳನ್ನು ಕಾನೂನು “ಹಿಂದೂ” ಎಂದು ಪರಿಗಣಿಸುತ್ತದೆ), ಹಿಂದೂ ದತ್ತು ಸ್ವೀಕಾರ ಕಾನೂನು ಎಂದು ಕರೆಯಲ್ಪಡುವ “ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯಿದೆ, ೧೯೫೬” ನಿಮಗೆ ಅನ್ವಯಿಸುತ್ತದೆ. ಈ ಕಾಯಿದೆ, ಹಿಂದೂ ಮಕ್ಕಳ ದತ್ತು ಸ್ವೀಕಾರವನ್ನು ನಿರ್ವಹಿಸುತ್ತದೆ. ನೀವು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಯಹೂದಿ, ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ್ದಲ್ಲಿ, ಈ ಕಾನೂನಿನಡಿ ದತ್ತು ಸ್ವೀಕಾರ ಮಾಡುವಂತಿಲ್ಲ.
ಇನ್ನಿತರ ಧರ್ಮಗಳು:
ನೀವು ಧಾರ್ಮಿಕ ಕಾನೂನಿನಡಿ ದತ್ತು ಸ್ವೀಕಾರ ಮಾಡಲು ಇಚ್ಛಿಸದಿದ್ದಲ್ಲಿ/ಆಗದಿದ್ದಲ್ಲಿ, ಸಾರ್ವತ್ರಿಕ ದತ್ತು ಸ್ವೀಕಾರ ಕಾನೂನಾದ “ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ೨೦೧೫” ರ ಅಡಿಯಲ್ಲಿ ದತ್ತು ಸ್ವೀಕಾರ ಮಾಡಬಹುದು. ಈ ಕಾನೂನಿನಡಿ ಯಾವುದೇ ಧರ್ಮಕ್ಕೆ ಸೇರಿದ ವ್ಯಕ್ತಿ (ಹಿಂದೂ, ಪರಿಶಿಷ್ಟ ಪಂಗಡಗಳು, ಇತ್ಯಾದಿ ಸೇರಿದಂತೆ) ದತ್ತು ಸ್ವೀಕಾರ ಮಾಡಬಹುದು.
ನೀವು ಯಾವ ಕಾನೂನನ್ನು ಅಳವಡಿಸಬೇಕು ಎಂದು ತೀರ್ಮಾನಿಸಲು ಕೆಳಗಿನ ಟೇಬಲ್ ನೋಡಿ:
ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯಿದೆ, ೧೯೫೬ (ಹಿಂದೂ ಕಾನೂನು) |
ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ೨೦೧೫ (ಧಾರ್ಮಿಕೇತರ ಕಾನೂನು) |
ದತ್ತು ಪಡೆಯುವ ತಂದೆ–ತಾಯಿ ಕೇವಲ ಹಿಂದೂ, ಬೌದ್ಧ, ಜೈನ, ಅಥವಾ ಸಿಖ್ ಧರ್ಮಕ್ಕೆ ಸೇರಿರಬಹುದು. ನೀವು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಯಹೂದಿ, ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ್ದಲ್ಲಿ ಈ ಕಾನೂನಿನಡಿ ದತ್ತು ಸ್ವೀಕಾರ ಮಾಡುವಂತಿಲ್ಲ. |
ದತ್ತು ಪಡೆಯುವ ತಂದೆ–ತಾಯಿ ಯಾವುದೇ ಧರ್ಮ, ಜಾತಿ, ಅಥವಾ ಪಂಗಡಕ್ಕೆ ಸೇರಿರಬಹುದು. |
ಕೇವಲ ಹಿಂದೂ ಮಕ್ಕಳನ್ನು ದತ್ತು ಪಡೆಯಬಹುದು. |
ಯಾವುದೇ ಧರ್ಮಕ್ಕೆ ಸೇರಿದ ಮಗುವನ್ನು ದತ್ತು ಪಡೆಯಬಹುದು. |
೧೫ ವರ್ಷದವರೆಗಿನ ಮಕ್ಕಳನ್ನು ದತ್ತು ಪಡೆಯಬಹುದು. |
೧೮ ವರ್ಷದವರೆಗಿನ ಮಕ್ಕಳನ್ನು ದತ್ತು ಪಡೆಯಬಹುದು. |
ಕಾಯಿದೆಯಲ್ಲಿ ದತ್ತು ಸ್ವೀಕಾರದ ಪ್ರಕ್ರಿಯೆ ವಿವರವಾಗಿ ಕೊಟ್ಟಿಲ್ಲವಾದ ಕಾರಣ, ಸಾಮಾನ್ಯವಾಗಿ ಒಂದು ಕರಾರುಪತ್ರವನ್ನು ಕಾರ್ಯಗತಗೊಳಿಸಲಾಗುತ್ತದೆ. |
ಬೇರೆ–ಬೇರೆ ವ್ಯಕ್ತಿಗಳಿಗೆ ಅನ್ವಯಿಸುವ ದತ್ತು ಸ್ವೀಕಾರದ ವಿಭಿನ್ನ ಪ್ರಕ್ರಿಯೆಗಳಿವೆ:
೧. ನಿವಾಸಿ ಭಾರತೀಯರಿಂದ ದತ್ತು ಸ್ವೀಕಾರ
೨. ಭಾರತೀಯ ನಾಗರಿಕರಿಂದ ವಿದೇಶಿ ಮಗುವಿನ ದತ್ತು ಸ್ವೀಕಾರ
೩. ಭಾರತದ ಸಾಗರೋತ್ತರ ನಾಗರಿಕರು, ಅಥವಾ ಭಾರತದಲ್ಲಿ ನೆಲೆಸಿದ ವಿದೇಶಿಯರು ದತ್ತು ಸ್ವೀಕಾರ ಮಾಡುವುದು
೪. ಭಾರತದ ಸಾಗರೋತ್ತರ ನಾಗರಿಕರು, ಅನಿವಾಸಿ ಭಾರತೀಯರು, ಅಥವಾ ಪರದೇಶದಲ್ಲಿ ವಾಸಿಸುವ ವಿದೇಶಿಯರು ದತ್ತು ಸ್ವೀಕಾರ ಮಾಡುವುದು
೫. ಮಲ ತಂದೆ–ತಾಯಂದಿರಿಂದ ದತ್ತು ಸ್ವೀಕಾರ
೬. ನೆಂಟರಿಂದ ದತ್ತು ಸ್ವೀಕಾರ |