ಪರವಾನಗಿ ಇಲ್ಲದೆ ವಾಹನವನ್ನು ಚಲಾಯಿಸುವುದು

ವಾಹನವನ್ನು ಚಲಾಯಿಸುವಾಗ ವಾಹನ ಪರವಾನಗಿಯ ಪ್ರತಿಯೊಂದನ್ನು ನಿಮ್ಮ ಬಳಿ ಸದಾ ಇಟ್ಟುಕೊಳ್ಳುವುದು ಮತ್ತು ಪೋಲೀಸ್ ಅಧಿಕಾರಿಯು ಕೇಳಿದಾಗ ಆ ದಾಖಲೆಯನ್ನು ಅವರಿಗೆ ತೋರಿಸುವುದು ಕಾನೂನು ಪ್ರಕಾರ ಕಡ್ಡಾಯವಾಗಿರುತ್ತದೆ. ಇಂದಿನ ದಿನಗಳಲ್ಲಿ ನಿಮ್ಮ ವಾಹನ ಚಾಲನಾ ಪರವಾನಗಿಯ ಎಲೆಕ್ಟ್ರಾನಿಕ್ ಪ್ರತಿಯನ್ನು ಡಿಜಿಲಾಕರ್ ನಲ್ಲಿ ಅಥವಾ ಎಂ-ಪರಿವಹನ್ ಆಪ್ ನಲ್ಲಿ ಕೂಡ ಇಟ್ಟುಕೊಳ್ಳಬಹುದಾಗಿದೆ. ನೀವು ಚಾಲ್ತಿಯಲ್ಲಿರುವ ಚಾಲನಾ ಪರವಾನಗಿಯನ್ನು ಹೊಂದಿದ್ದು, ಆದರೆ ಅಧಿಕಾರಿಯೊಬ್ಬರು ಕೇಳಿದಾಗ ಅದು ನಿಮ್ಮ ಬಳಿ ಇರದಿದ್ದಲ್ಲಿ, ನೀವು ರೂ. 500/- ರಿಂದ ರೂ. 1,000/- ದ ವರೆಗಿನ ಜುಲ್ಮಾನೆಯನ್ನು ತೆರಬೇಕಾಗಬಹುದು. ಬದಲಿಯಾಗಿ, ಪರವಾನಗಿಯನ್ನು ತೋರಿಸುವಂತೆ ನಿಮ್ಮನ್ನು ಕೇಳಿದ ಅಧಿಕಾರಿಯ/ಪ್ರಾಧಿಕಾರದ ಮುಂದೆ ನೀವು ಆ ದಾಖಲೆಯನ್ನು ನಿರ್ದಿಷ್ಟಪಡಿಸಿದ ಅವಧಿಯೊಳಗೆ ಹಾಜರುಪಡಿಸಬಹುದು. ಈ ಅವಧಿಯು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರುತ್ತದೆ.

ನೀವು ಪರವಾನಗಿಯನ್ನು ಯಾವುದೇ ಸರ್ಕಾರಿ ಪ್ರಾಧಿಕಾರಕ್ಕೆ ಅಥವಾ ಅಧಿಕಾರಿಗೆ ಸಲ್ಲಿಸಿದ್ದಲ್ಲಿ ಅಥವಾ ನಿಮ್ಮ ಪರವಾನಗಿಯನ್ನು ಯಾವುದೇ ಸರ್ಕಾರಿ ಪ್ರಾಧಿಕಾರ ಅಥವಾ ಅಧಿಕಾರಿಯು ವಶಪಡಿಸಿಕೊಂಡಿದ್ದಲ್ಲಿ, ನೀವು ಈ ಸಂಬಂಧದಲ್ಲಿ ಯಾವುದೇ ರೀತಿಯ ರಸೀದಿ ಅಥವಾ ಸ್ವೀಕೃತಿಯನ್ನು ಹಾಜರುಮಾಡತಕ್ಕದ್ದು. ಮತ್ತು ನಿಮ್ಮ ಪರವಾನಗಿಯನ್ನು ನಿರ್ದಿಷ್ಟ ಅವಧಿಯೊಳಗೆ ಹಾಜರುಮಾಡತಕ್ಕದ್ದು. ಈಗಾಗಲೇ ತಿಳಿಸಿದಂತೆ ಈ ನಿರ್ದಿಷ್ಟ ಅವಧಿಯು ಪ್ರತಿ ರಾಜ್ಯಕ್ಕೂ ಬೇರೆಯಾಗಿರುತ್ತದೆ.

ನೀವು ವಾಹನವನ್ನು ಚಲಾವಣೆ ಮಾಡುವಾಗ ಚಾಲನಾ ಪರವಾನಗಿ ಹೊಂದಿಲ್ಲದಿದ್ದಲ್ಲಿ ಅಥವಾ ವಾಹನವನ್ನು ಚಲಾಯಿಸಲು ನೀವು ಅಪ್ರಾಪ್ತ ವಯಸ್ಕರಾಗಿದ್ದ ಸಂದರ್ಭದಲ್ಲಿ ಪೋಲೀಸ್ ಅಧಿಕಾರಿಯು ನಿಮ್ಮ ವಾಹನವನ್ನು ತಡೆಹಿಡಿಯಬಹುದು ಮತ್ತು ವಶಪಡಿಸಿಕೊಳ್ಳಬಹುದು. ಮೇಲಾಗಿ ನಿಮಗೆ ರೂ. 5,000/- ಜುಲ್ಮಾನೆ ಅಥವಾ ಮೂರು ತಿಂಗಳವರೆಗೆ ಕಾರಾವಾಸ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದಾಗಿದೆ.

ಈ ಅಪರಾಧಕ್ಕಾಗಿ ವಿಧಿಸುವ ದಂಡ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಬಹುದು. ಎರಡು ರಾಜ್ಯಗಳಲ್ಲಿ ವಿಧಿಸುವ ಬೇರೆ ಬೇರೆ ಮೊತ್ತದ ದಂಡವನ್ನು ಈ ಕೆಳಗೆ ನೀಡಲಾಗಿದೆ.

ರಾಜ್ಯ ವಾಹನದ ಮಾದರಿ ಜುಲ್ಮಾನೆಯ ಮೊತ್ತ(ರೂ)
ದೆಹಲಿ ಅನ್ವಯವಾಗುವುದಿಲ್ಲ 5,000
ದ್ವಿಚಕ್ರ/ತ್ರಿಚಕ್ರ ವಾಹನಗಳು 1,000
ಕರ್ನಾಟಕ ಲಘು ಮೋಟಾರು ವಾಹನ 2,000
ಇತರೆ ವಾಹನಗಳು 5,000

ನೋಂದಣಿ ಮಾಡಿಲ್ಲದ ವಾಹನವನ್ನು ಚಲಾಯಿಸುವುದು

ಯಾವುದೇ ವಾಹನವನ್ನು ಚಾಲನೆ ಮಾಡುವ ಮೊದಲು ಅದನ್ನು ನೋಂದಣಿ ಮಾಡಿಸತಕ್ಕದ್ದು. ವಾಹನವನ್ನು ನೋಂದಾಯಿಸಿದಾಗ ನಿಮಗೆ ನೋಂದಣಿ ಪ್ರಮಾಣ ಪತ್ರ (ಆರ್ ಸಿ) ನೀಡಲಾಗುತ್ತದೆ. ಈ ದಾಖಲೆಯ ಮೂಲ ಪ್ರತಿಯನ್ನು ಅಥವಾ ಎಲೆಕ್ಟ್ರಾನಿಕ್ ಪ್ರತಿಯನ್ನು ನೀವು ಸದಾ ನಿಮ್ಮೊಂದಿಗೆ ಹೊಂದಿರತಕ್ಕದ್ದು ಮತ್ತು ನಿಮ್ಮ ವಾಹನದ ಮೇಲೆ ಕಡ್ಡಾಯವಾಗಿ ನೋಂದಣಿ ಸಂಖ್ಯೆಯನ್ನು ಪ್ರದರ್ಶಿಸತಕ್ಕದ್ದು.

ನೋಂದಣಿಯಾಗಿರದ ವಾಹನವನ್ನು ನೀವು ಚಾಲನೆ ಮಾಡಿದಲ್ಲಿ ಅಥವಾ ಚಾಲನೆ ಮಾಡಲು ಅವಕಾಶ ನೀಡಿದಲ್ಲಿ, ಮೊದಲ ಬಾರಿಯ ಅಂತಹ ಅಪರಾಧಕ್ಕಾಗಿ ನೀವು ರೂ.2,000/- ದಿಂದ ರೂ.5,000/-ರ ವರೆಗೆ ಜುಲ್ಮಾನೆ ತೆರಬೇಕಾಗುತ್ತದೆ ಮತ್ತು ಅಂತಹ ಪುನರಾವರ್ತಿತ ಅಪರಾಧಕ್ಕಾಗಿ ರೂ. 5,000/- ದಿಂದ ರೂ. 10,000/- ದ ವರೆಗೆ ದಂಡ ಅಥವಾ ಒಂದು ವರ್ಷ ಅವಧಿಯವರೆಗಿನ ಕಾರಾವಾಸವನ್ನು ಅಥವಾ ಎರಡೂ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಜುಲ್ಮಾನೆಯ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ.

ನೋಂದಣಿ ಪ್ರಮಾಣಪತ್ರ ಇಲ್ಲದೆಯೇ ವಾಹನ ಚಲಾಯಿಸಿದಾಗ ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಮಗೆ
ಜುಲ್ಮಾನೆ ವಿಧಿಸುವಂತಿಲ್ಲ:

 ಗಾಯಗೊಂಡ ಅಥವಾ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳನ್ನು ವಾಹನದಲ್ಲಿ ಕರೆದೊಯ್ಯುತ್ತಿರುವಾಗ.
 ಪರಿಹಾರ ಕಾರ್ಯಕ್ಕಾಗಿ ಆಹಾರ ಅಥವಾ ಸಾಮಗ್ರಿಗಳನ್ನು ಅಥವಾ ಔಷಧಿಗಳನ್ನು ಸಾಗಾಣಿಕೆ ಮಾಡಲು ವಾಹನವನ್ನು ಉಪಯೋಗಿಸುತ್ತಿದ್ದಲ್ಲಿ.

ಆದರೆ, ಮೇಲ್ಕಂಡ ಉದ್ದೇಶಗಳಿಗಾಗಿ ವಾಹನವನ್ನು ಬಳಸಲಾಗುತ್ತಿದೆ ಎಂದು ನೀವು ಏಳು ದಿನಗಳ ಅವಧಿಯೊಳಗಾಗಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಮಾಹಿತಿ ನೀಡತಕ್ಕದ್ದು. ಇಲ್ಲವಾದಲ್ಲಿ ನೀವ ಜುಲ್ಮಾನೆ ತೆರಬೇಕಾಗುತ್ತದೆ.

ಎರಡು ರಾಜ್ಯಗಳಲ್ಲಿ ಜುಲ್ಮಾನೆಯ ಮೊತ್ತ ಈ ಕೆಳಕಂಡಂತಿದೆ:

ರಾಜ್ಯ ಅಪರಾಧದ ಪುನರಾವರ್ತನೆ ಜುಲ್ಮಾನೆಯ ಮೊತ್ತ (ರೂ.)
ದೆಹಲಿ ಮೊದಲ ಬಾರಿಯ ಅಪರಾಧ 2,000-5,000
ಪುನರಾವರ್ತಿತ ಅಪರಾಧ 5,000-10,000
ಕರ್ನಾಟಕ ದ್ವಿಚಕ್ರ / ತ್ರಿಚಕ್ರ ವಾಹನ 2,000
ಲಘು ಮೋಟಾರು ವಾಹನ 3,000
ಮಧ್ಯಮ/ಭಾರೀ ವಾಹನ ಮತ್ತು ಇತರೆ 5,000

ವಿಮಾ ಪ್ರಮಾಣಪತ್ರವಿಲ್ಲದೆ ವಾಹನವನ್ನು ಚಲಾಯಿಸುವುದು

ಯಾವುದೇ ಸಮಯದಲ್ಲಿ ಸಾಮಾನ್ಯವಾಗಿ ಅಥವಾ ಅಪಘಾತದ ಸಂದರ್ಭದಲ್ಲಿ ಸಂಚಾರ/ಇತರೆ ಪೋಲೀಸ್ ಅಧಿಕಾರಿಯು ವಾಹನದ ವಿಮಾ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ನಿಮ್ಮನ್ನು ಕೇಳಿದಾಗ ನೀವು ಕಡ್ಡಾಯವಾಗಿ ಆ ಪ್ರಮಾಣಪತ್ರವನ್ನು ಹಾಜರುಮಾಡತಕ್ಕದ್ದು. ಭೌತಿಕ ರೂಪದಲ್ಲಿನ ಪ್ರತಿಯ ಬದಲಾಗಿ ಈಗ ನೀವು ನಿಮ್ಮ ವಿಮಾ ದಾಖಲೆಗಳನ್ನು ಡಿಜಿ ಲಾಕರ್ ಅಥವಾ ಎಂ- ಎಂ-ಪರಿವಹನ್ ನಲ್ಲಿ ಎಲೆಕ್ಟ್ರಾನಿಕ್ ಪ್ರತಿಗಳನ್ನೂ ಇಟ್ಟುಕೊಳ್ಳಬಹುದು.ನಿಮ್ಮ ಬಳಿ ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ವಿಮಾ ದಾಖಲೆ ಇಲ್ಲವಾದಲ್ಲಿ, ನೀವು ಅದನ್ನು ಸಂಬಂಧಿಸಿದ ಪೋಲೀಸ್ ಠಾಣೆಯಲ್ಲಿ ಅಪಘಾತವಾದ 7 ದಿನಗಳ ಒಳಗೆ ಅಥವಾ ನಿಮಗೆ ತಿಳಿಸಿದ ಸಮಯದೊಳಗೆ ಹಾಜರು ಪಡಿಸತಕ್ಕದ್ದು.

ವಾಹನ ಚಾಲನೆ ಮಾಡುವ ಸಮಯದಲ್ಲಿ ನಿಮ್ಮ ಬಳಿ ವಿಮೆ ದಾಖಲೆಗಳು ಇಲ್ಲದಿದ್ದಲ್ಲಿ ಮೊದಲ ಅಪರಾಧಕ್ಕೆ ನೀವು ಕನಿಷ್ಟ ರೂ.500/-ನ್ನು ಜುಲ್ಮಾನೆಯಾಗಿಯೂ ನಂತರದ ಪುನರಾವರ್ತಿತ ಅಪರಾಧಗಳಿಗೆ ಕನಿಷ್ಟ ರೂ. 1,500/- ನ್ನು ಜುಲ್ಮಾನೆಯಾಗಿ ತೆರಬೇಕಾಗುವುದು. ಈ ಜುಲ್ಮಾನೆಯ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಬಹುದು.

ಎರಡು ರಾಜ್ಯಗಳಿಗೆ ಸಂಬಂಧಿಸಿದಂತೆ ಜುಲ್ಮಾನೆಯ ಮೊತ್ತವನ್ನು ಕೆಳಗೆ ನೀಡಲಾಗಿದೆ:

ರಾಜ್ಯ ಅಪರಾಧದ ಪುನರಾವರ್ತನೆ ಜುಲ್ಮಾನೆಯ ಮೊತ್ತ(ರೂ.ಗಳಲ್ಲಿ)
ದೆಹಲಿ ಮೊದಲನೇ ಅಪರಾಧ 500
ಪುನರಾವರ್ತಿತ ಅಪರಾಧ 1,500
ಕರ್ನಾಟಕ ಮೊದಲನೇ ಅಪರಾಧ 500
ಪುನರಾವರ್ತಿತ ಅಪರಾಧ 1,500

ಅಪ್ರಾಪ್ತ ವಯಸ್ಕರಿಂದ ವಾಹನ ಚಾಲನೆ

ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಚಲಾಯಿಸಲು ನೀವು ನಿರ್ದಿಷ್ಟ ವಯೋಮಾನದವರಾಗಿರತಕ್ಕದ್ದು. ವಿವಿಧ ಮಾದರಿಯ ವಾಹನಗಳನ್ನು ಚಲಾಯಿಸಲು ಕಾನೂನು ಪ್ರಕಾರ ಈ ಕೆಳಕಂಡ ವಯೋಮಿತಿಯನ್ನು ಹೊಂದಿರತಕ್ಕದ್ದು.

 ಯಾವುದೇ ಮೋಟಾರು ವಾಹನ ಚಲಾಯಿಸಲು (50 ಸಿಸಿ ಗಿಂತ ಕಡಿಮೆ ಇಂಜಿನ್ ಸಾಮರ್ಥ್ಯ ಹೊಂದಿರುವ ಮೋಟಾರು ಸೈಕಲ್ ಹೊರತುಪಡಿಸಿ): 18 ವರ್ಷ
 50 ಸಿಸಿ ಗಿಂತ ಕಡಿಮೆ ಇಂಜಿನ್ ಸಾಮರ್ಥ್ಯ ಹೊಂದಿರುವ ಮೋಟಾರ್ ಸೈಕಲ್: 16 ವರ್ಷ
 ಸಾರಿಗೆ ವಾಹನವನ್ನು ಚಲಾಯಿಸಲು (ಉದಾಹರಣೆಗೆ, ಟ್ರಕ್): 20 ವರ್ಷ

ಯಾವುದೇ ಮಾದರಿಯ ವಾಹನವನ್ನು ಚಲಾಯಿಸಲು ನೀವು ಅಪ್ರಾಪ್ತ ವಯಸ್ಕರಾಗಿದ್ದರೂ ಕೂಡ ಅಂತಹ ವಾಹನವನ್ನು ನೀವು ಚಲಾಯಿಸಿದಲ್ಲಿ, ನಿಮಗೆ ರೂ. 5,000/- ಜುಲ್ಮಾನೆ ಅಥವಾ ಮೂರು ತಿಂಗಳವರೆಗೆ ಕಾರಾವಾಸ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದಾಗಿದೆ. ಈ ಅಪರಾಧಕ್ಕಾಗಿ ವಿಧಿಸುವ ದಂಡದ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಬಹುದು.

ಎರಡು ರಾಜ್ಯಗಳಲ್ಲಿ ವಿಧಿಸುವ ಜುಲ್ಮಾನೆಯ ಮೊತ್ತ ಈ ಕೆಳಕಂಡಂತಿದೆ:

ರಾಜ್ಯ ವಾಹನದ ಮಾದರಿ ಜುಲ್ಮಾನೆಯ ಮೊತ್ತ(ರೂ)
ದೆಹಲಿ ಅನ್ವಯವಾಗುವುದಿಲ್ಲ 5,000
ದ್ವಿಚಕ್ರ/ತ್ರಿಚಕ್ರ ವಾಹನಗಳು 1,000
ಕರ್ನಾಟಕ ಲಘು ಮೋಟಾರು ವಾಹನ 2,000
ಇತರೆ ಮಾದರಿಯ ವಾಹನಗಳು 5,000

ಅಪಾಯಕಾರಿಯಾಗಿ ವಾಹನ ಚಾಲನೆ

ಮೋಟಾರು ವಾಹನವೊಂದನ್ನು ಸಾರ್ವಜನಿಕರಿಗೆ ಅಪಾಯವಾಗುವ ವೇಗ ಅಥವಾ ಮಾದರಿಯಲ್ಲಿ ಚಲಾಯಿಸಿದರೆ ಅಥವಾ ಅಂತಹ ಚಾಲನೆಯಿಂದ ವಾಹನದಲ್ಲಿ ಪ್ರಯಾಣಿಸುತ್ತಿರುವವರಿಗೆ, ರಸ್ತೆಯನ್ನು ಬಳಸುತ್ತಿರುವ ಇನ್ನಿತರ ಸಾರ್ವಜನಿಕರಿಗೆ ಮತ್ತು ರಸ್ತೆ ಹತ್ತಿರವಿರುವ ಇನ್ನಿತರ ವ್ಯಕ್ತಿಗಳಿಗೆ ಗಾಬರಿ ಅಥವಾ ಕಳವಳಕ್ಕೆ ಕಾರಣವಾದಲ್ಲಿ, ಅಂತಹ ರೀತಿಯ ವಾಹನ ಚಾಲನೆಯನ್ನು ಅಪಾಯಕಾರೀ ವಾಹನ ಚಾಲನೆ ಎಂದು ಕರೆಯಲಾಗುತ್ತದೆ. ಅಪಾಯಕಾರೀ ವಾಹನ ಚಾಲನೆಯ ಕೆಲವು ಉದಾಹರಣೆಗಳು ಈ ಕೆಳಕಂಡಂತಿವೆ:

 ಕೆಂಪು ಸಂಚಾರ ದೀಪವನ್ನು ಉಲ್ಲಂಘಿಸುವುದು.
 “ಸ್ಟಾಪ್” ಸಂಚಾರ ಸೂಚನೆಯನ್ನು ಉಲ್ಲಂಘಿಸಿ ವಾಹನ ಚಲಾಯಿಸುವುದು.
 ವಾಹನ ಚಾಲನೆ ಮಾಡುವ ಸಮಯದಲ್ಲಿ ಮೊಬೈಲ್ ಅಥವಾ ಕೈನಿಂದ ನಿಯಂತ್ರಿಸುವ ಮತ್ತಾವುದೇ ಉಪಕರಣಗಳ ಬಳಕೆ.
 ಕಾನೂನುಬಾಹಿರವಾಗಿ ಇತರೆ ವಾಹನಗಳನ್ನು ಹಿಂದಿಕ್ಕುವುದು.
 ವಾಹನ ದಟ್ಟಣೆಯ ವಿರುದ್ಧ ದಿಕ್ಕಿನಲ್ಲಿ – ಉದಾಹರಣೆಗೆ – ರಾಂಗ್ ಸೈಡಿನಲ್ಲಿ ಚಲಿಸುವುದು.

ಅಪಾಯಕಾರಿಯಾದ ವಾಹನ ಚಾಲನೆಯ ಮೊದಲ ಬಾರಿಯ ಅಪರಾಧಕ್ಕಾಗಿ ಆರು ತಿಂಗಳುಗಳಿಂದ ಒಂದು ವರ್ಷ ಅವಧಿಯ ಕಾರಾವಾಸ ಅಥವಾ ರೂ.1,000 ದಿಂದ ರೂ.5,000 ದ ವರೆಗೆ ಜುಲ್ಮಾನೆ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದು. ಪ್ರತಿ ಪುನರಾವರ್ತಿತ ಈ ಅಪರಾಧಕ್ಕೆ ಎರಡು ವರ್ಷಗಳ ಅವಧಿಯವರೆಗೆ ಕಾರಾವಾಸ ಅಥವಾ ರೂ.10,000 ಜುಲ್ಮಾನೆ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದು. . ಈ ಜುಲ್ಮಾನೆಯ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಬಹುದು.

ಎರಡು ರಾಜ್ಯಗಳಿಗೆ ಸಂಬಂಧಿಸಿದಂತೆ ಜುಲ್ಮಾನೆಯ ಮೊತ್ತವನ್ನು ಕೆಳಗೆ ನೀಡಲಾಗಿದೆ:

ರಾಜ್ಯ ಅಪರಾಧದ ಪುನರಾವರ್ತನೆ ಜುಲ್ಮಾನೆಯ ಮೊತ್ತ (ರೂ.ಗಳಲ್ಲಿ)
ದೆಹಲಿ ಮೊದಲನೇ ಅಪರಾಧ 1,000-5,000
ಪುನರಾವರ್ತಿತ ಅಪರಾಧ 10,000
ಕರ್ನಾಟಕ ಮೊದಲನೇ ಅಪರಾಧ 1,000-5,000

(ವಾಹನ ಚಲಾಯಿಸುವಾಗ

ಕೈಯಿಂದ ನಿಯಂತ್ರಿಸುವ

ಉಪಕರಣಗಳ ಬಳಕೆಗಾಗಿ

ವಿಧಿಸುವ ಜುಲ್ಮಾನೆ

ಹೊರತುಪಡಿಸಿ)

ಪುನರಾವರ್ತಿತ ಅಪರಾಧ 10,000

ದ್ವಿಚಕ್ರ ವಾಹನದಲ್ಲಿ ಮೂರು ಮಂದಿ ಸವಾರಿ ಮಾಡುವುದು

ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ನೀವು ಈ ಕೆಳಕಂಡ ಷರತ್ತುಗಳಿಗೆ ಬದ್ಧರಾಗಿರತಕ್ಕದ್ದು:
 ಮೋಟಾರ್ ಸೈಕಲ್ ಚಲಿಸುವವರೂ ಸೇರಿದಂತೆ ಕೇವಲ ಇಬ್ಬರು ಮಾತ್ರ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡತಕ್ಕದ್ದು.
 ಎರಡನೇ ವ್ಯಕ್ತಿಯು ಮೋಟಾರ್ ಸೈಕಲ್ಲಿಗೆ ಬಿಗಿಯಾಗಿ ಅಳವಡಿಸಲಾಗಿರುವ ಸೂಕ್ತ ಸೀಟಿನ ಮೇಲೆ ಕುಳಿತಿರತಕ್ಕದ್ದು.

ಈ ಮೇಲ್ಕಂಡ ಎರಡು ಷರತ್ತುಗಳನ್ನು ನೀವು ಉಲ್ಲಂಘಿಸಿದಲ್ಲಿ,
 ನೀವು ಕನಿಷ್ಟ ರೂ. 1,000/- ಜುಲ್ಮಾನೆ ತೆರಬೇಕಾಗುವುದು. ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ಮೊತ್ತವನ್ನು ಜುಲ್ಮಾನೆಯಾಗಿ ನಿಗದಿಪಡಿಸಿರಬಹುದು.
 ಮೂರು ತಿಂಗಳ ಅವಧಿಗೆ ನೀವು ಚಾಲನಾ ಪರವಾನಗಿ ಹೊಂದದಂತೆ ನಿಮ್ಮನ್ನು ಅನರ್ಹಗೊಳಿಸಬಹುದು.

ರಾಜ್ಯ ಜುಲ್ಮಾನೆಯ ಮೊತ್ತ (ರೂ.ಗಳಲ್ಲಿ)
ದೆಹಲಿ 1,000/-
ಕರ್ನಾಟಕ 500/-

ವಾಹನ ಚಾಲನೆ ಮಾಡುವಾಗ ಮೊಬೈಲ್ ಪೋನ್ ಬಳಕೆ

ಯಾವುದೇ ಮೋಟಾರು ವಾಹನವನ್ನು ಚಾಲನೆ ಮಾಡುವಾಗ ನೀವು ಮೊಬೈಲ್ ಫೋನ್ ಬಳಸುವಂತಿಲ್ಲ. ಹಾಗೆ ಮಾಡುವುದು ವಾಹನದ ಚಾಲಕ ಮತ್ತು ಸಾರ್ವಜನಿಕರಿಗೆ ಅಪಾಯಕಾರಿ. ಈ ಕೃತ್ಯವನ್ನು ಅಪಾಯಕಾರವಾಗಿ ವಾಹನ ಚಾಲನೆ ಎಂದು ಪರಿಗಣಿಸಿ, ನಿಮಗೆ ಈ ಕೆಳಕಂಡ ಶಿಕ್ಷೆಯನ್ನು ನೀಡಬಹುದು:

 ಮೊದಲ ಬಾರಿ (ಮೊದಲ ಬಾರಿಯ ಅಪರಾಧ): ಆರು ತಿಂಗಳಿನಿಂದ ಒಂದು ವರ್ಷ ಅವಧಿಯವರೆಗಿನ ಜೈಲು ವಾಸ ಅಥವಾ ರೂ.1,000/- ದಿಂದ ರೂ 5,000/-ದ ವರೆಗೆ ಜುಲ್ಮಾನೆ ಅಥವಾ ಎರಡೂ ಶಿಕ್ಷೆಗಳು. ಜುಲ್ಮಾನೆಯ ಮೊತ್ತ ಪ್ರತಿ ರಾಜ್ಯದಲ್ಲಿ ಬೇರೆಯಾಗಿರಬಹುದು.

 ಪುನರಾವರ್ತಿತ ಅಪರಾಧ: ಮೊದಲ ಬಾರಿ ಅಪರಾಧವನ್ನು ಎಸಗಿದ ಮೂರು ವರ್ಷಗಳ ಅವಧಿಯೊಳಗೆ ಪುನ: ಅದೇ ಅಪರಾಧವನ್ನು ಎಸಗಿದಲ್ಲಿ, ನಿಮಗೆ ಎರಡು ವರ್ಷಗಳವರೆಗಿನ ಕಾರಾವಾಸ ಅಥವಾ ರೂ.10,000 ದಂಡ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಲಾಗುವುದು. ಜುಲ್ಮಾನೆಯ ಮೊತ್ತ ಪ್ರತಿ ರಾಜ್ಯದಲ್ಲಿ ಬೇರೆಯಾಗಿರಬಹುದು.

ಎರಡು ರಾಜ್ಯಗಳಲ್ಲಿ ಜುಲ್ಮಾನೆಯ ಮೊತ್ತ ಈ ಕೆಳಕಂಡಂತಿದೆ.

ರಾಜ್ಯ ಅಪರಾಧದ ಪುನರಾವರ್ತನೆ ಜುಲ್ಮಾನೆಯ ಮೊತ್ತ (ರೂ.ಗಳಲ್ಲಿ)
ದೆಹಲಿ ಮೊದಲನೇ ಅಪರಾಧ 1,000-5,000
ಪುನರಾವರ್ತಿತ ಅಪರಾಧ 10,000
ಕರ್ನಾಟಕ ಮೊದಲನೇ ಅಪರಾಧ ದ್ವಿಚಕ್ರ/ತ್ರಿಚಕ್ರ ವಾಹನ: 1,500

ಲಘು ಮೋಟಾರು ವಾಹನ: 3,000

ಇತರೆ ವಾಹನಗಳು: 5,000

ಯಾವುದೇ ಪುನರಾವರ್ತಿತ

ಅಪರಾಧ

10,000

ಡ್ರೈವಿಂಗ್ ಮಾಡುವಾಗ ಹೆಲ್ಮೆಟ್ ಧರಿಸಿಲ್ಲ

ಎರಡು ಚಕ್ರವರ್ತಿ ಮೋಟಾರ್ಸೈಕಲ್ ಓಡಿಸುವ ಯಾರಾದರೂ ಹೆಲ್ಮೆಟ್ ಅಥವಾ ರಕ್ಷಣಾತ್ಮಕ ಹೆಡ್ಜರ್ ಧರಿಸಬೇಕಾಗುತ್ತದೆ. ಇದಲ್ಲದೆ, ದ್ವಿಚಕ್ರ ಮೋಟಾರ್ಸೈಕಲ್ ಸವಾರಿ ಮಾಡುವ 4 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯು ಸಹ ಹೆಲ್ಮೆಟ್ ಧರಿಸಬೇಕು.

ಈ ತಲೆಗೆರ್ ಎರಡು ವೈಶಿಷ್ಟ್ಯಗಳನ್ನು ಹೊಂದಿರಬೇಕು:

  • ಅಪಘಾತದ ಸಂದರ್ಭದಲ್ಲಿ ಗಾಯದಿಂದ ಸ್ವಲ್ಪ ಮಟ್ಟಿಗೆ ರಕ್ಷಣೆ ನೀಡುತ್ತದೆ ಎಂದು ಸಮಂಜಸವಾಗಿ ನಿರೀಕ್ಷಿಸಬಹುದು.
  • ಇದನ್ನು ಧರಿಕರ ತಲೆಗೆ ಸುರಕ್ಷಿತವಾಗಿ ಜೋಡಿಸಲಾಗುತ್ತದೆ.

ಮರದ ಮತ್ತು ಮಹಿಳೆಯರನ್ನು ಧರಿಸಿರುವ ಸಿಖ್ ಜನರು ಮಾತ್ರ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಾಗಿಲ್ಲ. ಆದಾಗ್ಯೂ, ಈ ವಿನಾಯಿತಿ ರಾಜ್ಯಗಳಾದ್ಯಂತ ಬದಲಾಗುತ್ತದೆ.

ಚಾಲನೆ ಮಾಡುವಾಗ ನೀವು ಹೆಲ್ಮೆಟ್ ಧರಿಸದಿದ್ದರೆ, ನಿಮಗೆ ಕನಿಷ್ಠ ರೂ. 1,000 ಮತ್ತು ನಿಮ್ಮ ಪರವಾನಗಿಯನ್ನು 3 ತಿಂಗಳವರೆಗೆ ಹಿಡಿದಿಡಲು ನಿಮ್ಮನ್ನು ಅನರ್ಹಗೊಳಿಸಲಾಗುತ್ತದೆ. ಅನ್ವಯವಾಗುವ ದಂಡ ಮೊತ್ತವು ರಾಜ್ಯಗಳಾದ್ಯಂತ ಬದಲಾಗಬಹುದು.

ಎರಡು ರಾಜ್ಯಗಳಿಗೆ ದಂಡದ ಮೊತ್ತ ಕೆಳಗೆ ನೀಡಲಾಗಿದೆ:

ರಾಜ್ಯ ಜುಲ್ಮಾನೆಯ ಮೊತ್ತ (ರೂ.)
ದೆಹಲಿ 1,000
ಕರ್ನಾಟಕ 500

ಹಾರ್ನ್ ಇಲ್ಲದೆ ವಾಹನವನ್ನು ಪಡೆದುಕೊಳ್ಳುವುದು

ನಿಮ್ಮ ವಾಹನವನ್ನು ವಿದ್ಯುತ್ ಹಾರ್ನ್ನೊಂದಿಗೆ ಕಡ್ಡಾಯವಾಗಿ ಅಳವಡಿಸಬೇಕು, ಅದು ವಾಹನವನ್ನು ಸಮೀಪಿಸುತ್ತಿದೆ ಎಂದು ಸಾಕಷ್ಟು ಮತ್ತು ಆಡಿಬಲ್ ಎಚ್ಚರಿಕೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ನೀವು ಹರಿದ ಮೋಟಾರು ವಾಹನವನ್ನು ಹೊಂದಿದ್ದರೆ, ನಿಮಗೆ ಕನಿಷ್ಠ ರೂ. ಮೊದಲ ಅಪರಾಧಕ್ಕೆ 500, ಮತ್ತು ರೂ. ನಂತರದ ಪ್ರತಿಯೊಂದು ಅಪರಾಧಕ್ಕೂ 1,500 ರೂ. ಅನ್ವಯವಾಗುವ ದಂಡದ ಮೊತ್ತವು ರಾಜ್ಯಗಳಾದ್ಯಂತ ಬದಲಾಗಬಹುದು.

ಎರಡು ರಾಜ್ಯಗಳಿಗೆ ದಂಡದ ಮೊತ್ತ ಕೆಳಗೆ ನೀಡಲಾಗಿದೆ:

ರಾಜ್ಯ ಅಪರಾಧದ ಪುನರಾವರ್ತನೆ

ಜುಲ್ಮಾನೆಯ ಮೊತ್ತ

(ರೂ.ಗಳಲ್ಲಿ)

ದೆಹಲಿ ಮೊದಲನೇ ಅಪರಾಧ 500
ಪುನರಾವರ್ತಿತ ಅಪರಾಧ 1,500
ಕರ್ನಾಟಕ ಮೊದಲನೇ ಅಪರಾಧ 500
ಪುನರಾವರ್ತಿತ ಅಪರಾಧ 1,500

ಟ್ರಾಫಿಕ್ ಸಿಗ್ನಲ್ ಗಳು ಮತ್ತು ಚಿಹ್ನೆಗಳನ್ನು ಪಾಲಿಸದಿರುವುದು

ಟ್ರಾಫಿಕ್ ಸಿಗ್ನಲ್ ಗಳು

ವಾಹನವನ್ನು ಚಾಲನೆ ಮಾಡಲು ಅನುಮತಿ ಇದೆ ಅಥವಾ ಇಲ್ಲ ಎಂಬುದನ್ನು ಸೂಚಿಸುವ ಉದ್ದೇಶಕ್ಕಾಗಿ ರಸ್ತೆ ಬದಿಯಲ್ಲಿ ಸ್ಥಾಪಿಸಲಾಗಿರುವ ಉಪಕರಣವನ್ನು, ಕಾನೂನಿನ ಪರಿಭಾಷೆಯಲ್ಲಿ ಟ್ರಾಫಿಕ್ ಲೈಟ್, ಟ್ರಾಫಿಕ್ ಸಿಗ್ನಲ್ ಅಥವಾ ಸ್ಟಾಪ್ ಲೈಟ್ ಎಂದು ಕರೆಯಲಾಗುತ್ತದೆ. ವಿಶ್ವದ ಎಲ್ಲೆಡೆ ಮಾನ್ಯವಾಗಿರುವ ಬಣ್ಣಗಳ ಸಂಕೇತದಲ್ಲಿ ಟ್ರಾಫಿಕ್ ಸಿಗ್ನಲ್ ಗಳು ಮಾಹಿತಿ ನೀಡುತ್ತವೆ.

 ಕೆಂಪು ದೀಪ: ವಾಹನವನ್ನು ನಿಲ್ಲಿಸಿರಿ
 ಹಳದಿ ದೀಪ: ವಾಹನದ ವೇಗವನ್ನು ಕಡಿಮೆ ಮಾಡಿರಿ/ವಾಹನ ಚಾಲನೆ ಮಾಡಲು ಸನ್ನದ್ಧರಾಗಿರಿ
 ಹಸಿರು ದೀಪ: ವಾಹನವನ್ನು ಚಲಾಯಿಸಿ.

ಟ್ರಾಫಿಕ್ ಸಿಗ್ನಲ್ ಗಳನ್ನು ಪಾಲನೆ ಮಾಡುವುದು ಮೋಟಾರು ವಾಹನವನ್ನು ಚಾಲನೆ ಮಾಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯ. ಟ್ರಾಫಿಕ್ ಸಿಗ್ನಲ್ ಗಳನ್ನು ನೀವು ಉಲ್ಲಂಘಿಸಿದಲ್ಲಿ ನಿಮಗೆ ದಂಡ ವಿಧಿಸಲಾಗುತ್ತದೆ. ಉದಾಹರಣೆಗೆ, ಕೂಡುರಸ್ತೆಯೊಂದರಲ್ಲಿ ಟ್ರಾಫಿಕ್ ಸಿಗ್ನಲ್ ಕೆಂಪು ದೀಪ ಇದ್ದರೂ ಸಹ ನೀವು ನಿಮ್ಮ ವಾಹನವನ್ನು ಚಲಾಯಿಸಲು ಪ್ರಾರಂಭಿಸಿದಲ್ಲಿ ಅಥವಾ ನಿಮ್ಮ ವಾಹನವನ್ನು ನಿಲ್ಲಿಸದಿದ್ದ ಪಕ್ಷದಲ್ಲಿ, ನಿಮಗೆ ದಂಡ ವಿಧಿಸಲಾಗುತ್ತದೆ.

ನೀವು ತೆತ್ತಬೇಕಾಗಿರುವ ಜುಲ್ಮಾನೆಯ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರುತ್ತದೆ. ಆದರೂ ಸಹ ನೀವು ಕನಿಷ್ಟ ರೂ.500 ರಿಂದ ರೂ.1,000 ದ ವರೆಗೆ ಜುಲ್ಮಾನೆ ತೆರಬೇಕಾಗುವುದು.

ಎರಡು ರಾಜ್ಯಗಳಲ್ಲಿ ವಿಧಿಸಲಾಗುವ ಜುಲ್ಮಾನೆಯ ಮೊತ್ತವನ್ನು ಈ ಕೆಳಗೆ ನೀಡಲಾಗಿದೆ.

ರಾಜ್ಯ ಜುಲ್ಮಾನೆಯ ಮೊತ್ತ (ರೂ.)
ದೆಹಲಿ 500-1,000
ಕರ್ನಾಟಕ 500-1,000

ಟ್ರಾಫಿಕ್ ಚಿಹ್ನೆಗಳು ಮತ್ತು ನಿರ್ದೇಶನಗಳು

ಟ್ರಾಫಿಕ್ ಚಿಹ್ನೆಗಳನ್ನು, ವಾಹನ ಚಾಲನೆಯ ನಿಬಂಧನೆಗಳನ್ನು ಮತ್ತು ಟ್ರಾಫಿಕ್ ಅಥವಾ ಪೋಲೀಸ್ ಅಧಿಕಾರಿಗಳು ನೀಡುವ ನಿರ್ದೇಶನಗಳನ್ನು ಪಾಲಿಸುವುದು ಮೋಟಾರು ವಾಹನವನ್ನು ಚಾಲನೆ ಮಾಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ.

ಟ್ರಾಫಿಕ್ ಚಿಹ್ನೆಗಳನ್ನು, ವಾಹನ ಚಾಲನೆಯ ನಿಬಂಧನೆಗಳನ್ನು ಅಥವಾ ಟ್ರಾಫಿಕ್ ಅಧಿಕಾರಿಯು ನೀಡಿದ ನಿರ್ದೇಶನಗಳನ್ನು ಉಲ್ಲಂಘಿಸಿದಲ್ಲಿ, ನೀವು ಜುಲ್ಮಾನೆ ತೆರಬೇಕಾಗುತ್ತದೆ. ಉದಾಹರಣೆಗೆ, ಯು-ಟರ್ನ್ ನಿರ್ಭಂಧಿಸಿರುವ ಕೂಡುರಸ್ತೆಯಲ್ಲಿ ನೀವು ಯು-ಟರ್ನ್ ಮಾಡಿದಲ್ಲಿ, ನಿಮಗೆ ಜುಲ್ಮಾನೆ ವಿಧಿಸಬಹುದು.

ಟ್ರಾಫಿಕ್ ಚಿಹ್ನೆಗಳ ಸಂಪೂರ್ಣ ಪಟ್ಟಿ ಮತ್ತು ಅವುಗಳ ವಿವರಣೆಯನ್ನು ಮೋಟಾರು ವಾಹನ ಕಾಯ್ದೆ, 1988 ರ ಮೊದಲನೇ ಪರಿಚ್ಛೇದದಲ್ಲಿ ನೀಡಲಾಗಿದೆ. ಈ ಮಾಹಿತಿಯನ್ನು ಇಲ್ಲಿ ಕ್ಲಿಕ್ ಮಾಡುವುದರ ಮೂಲಕ ಪಡೆಯಬಹುದಾಗಿದೆ.

ನೀವು ತೆರಬೇಕಾಗುವ ಜುಲ್ಮಾನೆಯ ಮೊತ್ತ ಪ್ರತಿ ರಾಜ್ಯದಲ್ಲೂ ಬೇರೆಯಾಗಿರಬಹುದು. ಆದರೆ. ಮೊದಲನೆಯ ಬಾರಿಯ ಅಪರಾಧಕ್ಕಾಗಿ ನೀವು ಕನಿಷ್ಟ ರೂ.500/- ದಂಡ ತೆರಬೇಕಾಗುವುದು ಮತ್ತು ನಂತರದ ಪುನರಾವರ್ತಿತ ಅಪರಾಧಗಳಿಗೆ ರೂ. 1,500/- ಜುಲ್ಮಾನೆ ತೆರಬೇಕಾಗುತ್ತದೆ. ಪ್ರತಿ ರಾಜ್ಯವೂ ಪ್ರತ್ಯೇಕ ಜುಲ್ಮಾನೆಯ ಮೊತ್ತವನ್ನು ನಿಗದಿಪಡಿಸಿರಬಹುದು.

ಎರಡು ರಾಜ್ಯಗಳಲ್ಲಿ ವಿಧಿಸುವ ಜುಲ್ಮಾನೆಯ ಮೊತ್ತವನ್ನು ಕೆಳಗೆ ನೀಡಲಾಗಿದೆ.

ರಾಜ್ಯ ಅಪರಾಧ ಅಪರಾಧದ ಪುನರಾವರ್ತನೆ ಜುಲ್ಮಾನೆಯ ಮೊತ್ತ (ರೂ.)
ದೆಹಲಿ ಟ್ರಾಫಿಕ್ ಚಿಹ್ನೆಗಳ

ಉಲ್ಲಂಘನೆ

ಮೊದಲ ಬಾರಿ 500
ಪುನರಾವರ್ತಿತ ಅಪರಾಧ 1,500
ಕರ್ನಾಟಕ ಟ್ರಾಫಿಕ್ ಚಿಹ್ನೆಗಳ

ಉಲ್ಲಂಘನೆ

ಮೊದಲ ಬಾರಿ 500
ಪುನರಾವರ್ತಿತ ಅಪರಾಧ 1,000