ನಿಮ್ಮ ಡ್ರೈವಿಂಗ್ ಲೈಸೆನ್ಸ್‌ನ ಭೌತಿಕ ನಕಲನ್ನು ನಿಮ್ಮೊಂದಿಗೆ ಕೊಂಡೊಯ್ಯುವ ಅಗತ್ಯವಿಲ್ಲ. ಚಾಲನಾ ಪರವಾನಗಿಯ ಎಲೆಕ್ಟ್ರಾನಿಕ್ ರೂಪವು ಈಗ ಕಾನೂನುಬದ್ಧವಾಗಿ ಸ್ವೀಕಾರಾರ್ಹವಾಗಿದೆ. ನೀವು ಅದನ್ನು ಡಿಜಿಲಾಕರ್ ಅಪ್ಲಿಕೇಶನ್ ಅಥವಾ ಎಂ ಪರಿವಾಹನ್ ಅಪ್ಲಿಕೇಶನ್‌ನಲ್ಲಿ ಹೊಂದಿರಬೇಕು.

ಪರವಾನಗಿ ಇಲ್ಲದೆ ವಾಹನವನ್ನು ಚಲಾಯಿಸುವುದು

ಕೊನೆಯ ಅಪ್ಡೇಟ್ Jul 22, 2022

ವಾಹನವನ್ನು ಚಲಾಯಿಸುವಾಗ ವಾಹನ ಪರವಾನಗಿಯ ಪ್ರತಿಯೊಂದನ್ನು ನಿಮ್ಮ ಬಳಿ ಸದಾ ಇಟ್ಟುಕೊಳ್ಳುವುದು ಮತ್ತು ಪೋಲೀಸ್ ಅಧಿಕಾರಿಯು ಕೇಳಿದಾಗ ಆ ದಾಖಲೆಯನ್ನು ಅವರಿಗೆ ತೋರಿಸುವುದು ಕಾನೂನು ಪ್ರಕಾರ ಕಡ್ಡಾಯವಾಗಿರುತ್ತದೆ. ಇಂದಿನ ದಿನಗಳಲ್ಲಿ ನಿಮ್ಮ ವಾಹನ ಚಾಲನಾ ಪರವಾನಗಿಯ ಎಲೆಕ್ಟ್ರಾನಿಕ್ ಪ್ರತಿಯನ್ನು ಡಿಜಿಲಾಕರ್ ನಲ್ಲಿ ಅಥವಾ ಎಂ-ಪರಿವಹನ್ ಆಪ್ ನಲ್ಲಿ ಕೂಡ ಇಟ್ಟುಕೊಳ್ಳಬಹುದಾಗಿದೆ. ನೀವು ಚಾಲ್ತಿಯಲ್ಲಿರುವ ಚಾಲನಾ ಪರವಾನಗಿಯನ್ನು ಹೊಂದಿದ್ದು, ಆದರೆ ಅಧಿಕಾರಿಯೊಬ್ಬರು ಕೇಳಿದಾಗ ಅದು ನಿಮ್ಮ ಬಳಿ ಇರದಿದ್ದಲ್ಲಿ, ನೀವು ರೂ. 500/- ರಿಂದ ರೂ. 1,000/- ದ ವರೆಗಿನ ಜುಲ್ಮಾನೆಯನ್ನು ತೆರಬೇಕಾಗಬಹುದು. ಬದಲಿಯಾಗಿ, ಪರವಾನಗಿಯನ್ನು ತೋರಿಸುವಂತೆ ನಿಮ್ಮನ್ನು ಕೇಳಿದ ಅಧಿಕಾರಿಯ/ಪ್ರಾಧಿಕಾರದ ಮುಂದೆ ನೀವು ಆ ದಾಖಲೆಯನ್ನು ನಿರ್ದಿಷ್ಟಪಡಿಸಿದ ಅವಧಿಯೊಳಗೆ ಹಾಜರುಪಡಿಸಬಹುದು. ಈ ಅವಧಿಯು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರುತ್ತದೆ.

ನೀವು ಪರವಾನಗಿಯನ್ನು ಯಾವುದೇ ಸರ್ಕಾರಿ ಪ್ರಾಧಿಕಾರಕ್ಕೆ ಅಥವಾ ಅಧಿಕಾರಿಗೆ ಸಲ್ಲಿಸಿದ್ದಲ್ಲಿ ಅಥವಾ ನಿಮ್ಮ ಪರವಾನಗಿಯನ್ನು ಯಾವುದೇ ಸರ್ಕಾರಿ ಪ್ರಾಧಿಕಾರ ಅಥವಾ ಅಧಿಕಾರಿಯು ವಶಪಡಿಸಿಕೊಂಡಿದ್ದಲ್ಲಿ, ನೀವು ಈ ಸಂಬಂಧದಲ್ಲಿ ಯಾವುದೇ ರೀತಿಯ ರಸೀದಿ ಅಥವಾ ಸ್ವೀಕೃತಿಯನ್ನು ಹಾಜರುಮಾಡತಕ್ಕದ್ದು. ಮತ್ತು ನಿಮ್ಮ ಪರವಾನಗಿಯನ್ನು ನಿರ್ದಿಷ್ಟ ಅವಧಿಯೊಳಗೆ ಹಾಜರುಮಾಡತಕ್ಕದ್ದು. ಈಗಾಗಲೇ ತಿಳಿಸಿದಂತೆ ಈ ನಿರ್ದಿಷ್ಟ ಅವಧಿಯು ಪ್ರತಿ ರಾಜ್ಯಕ್ಕೂ ಬೇರೆಯಾಗಿರುತ್ತದೆ.

ನೀವು ವಾಹನವನ್ನು ಚಲಾವಣೆ ಮಾಡುವಾಗ ಚಾಲನಾ ಪರವಾನಗಿ ಹೊಂದಿಲ್ಲದಿದ್ದಲ್ಲಿ ಅಥವಾ ವಾಹನವನ್ನು ಚಲಾಯಿಸಲು ನೀವು ಅಪ್ರಾಪ್ತ ವಯಸ್ಕರಾಗಿದ್ದ ಸಂದರ್ಭದಲ್ಲಿ ಪೋಲೀಸ್ ಅಧಿಕಾರಿಯು ನಿಮ್ಮ ವಾಹನವನ್ನು ತಡೆಹಿಡಿಯಬಹುದು ಮತ್ತು ವಶಪಡಿಸಿಕೊಳ್ಳಬಹುದು. ಮೇಲಾಗಿ ನಿಮಗೆ ರೂ. 5,000/- ಜುಲ್ಮಾನೆ ಅಥವಾ ಮೂರು ತಿಂಗಳವರೆಗೆ ಕಾರಾವಾಸ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದಾಗಿದೆ.

ಈ ಅಪರಾಧಕ್ಕಾಗಿ ವಿಧಿಸುವ ದಂಡ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಬಹುದು. ಎರಡು ರಾಜ್ಯಗಳಲ್ಲಿ ವಿಧಿಸುವ ಬೇರೆ ಬೇರೆ ಮೊತ್ತದ ದಂಡವನ್ನು ಈ ಕೆಳಗೆ ನೀಡಲಾಗಿದೆ.

ರಾಜ್ಯ ವಾಹನದ ಮಾದರಿ ಜುಲ್ಮಾನೆಯ ಮೊತ್ತ(ರೂ)
ದೆಹಲಿ ಅನ್ವಯವಾಗುವುದಿಲ್ಲ 5,000
ದ್ವಿಚಕ್ರ/ತ್ರಿಚಕ್ರ ವಾಹನಗಳು 1,000
ಕರ್ನಾಟಕ ಲಘು ಮೋಟಾರು ವಾಹನ 2,000
ಇತರೆ ವಾಹನಗಳು 5,000

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.