ಮೋಟಾರು ವಾಹನದ ಚಾಲಕನು ನೋಂದಣಿ ಪ್ರಮಾಣಪತ್ರ (ಆರ್‌ಸಿ), ವಿಮೆಯ ಪ್ರಮಾಣಪತ್ರ, ಚಾಲನಾ ಪರವಾನಗಿ ಮತ್ತು ಮಾಲಿನ್ಯದ ಪ್ರಮಾಣಪತ್ರ (ಪಿಯುಸಿ ಪ್ರಮಾಣಪತ್ರ) ಸಹ ಕೊಂಡೊಯ್ಯಬೇಕಾಗುತ್ತದೆ

ನೋಂದಣಿ ಮಾಡಿಲ್ಲದ ವಾಹನವನ್ನು ಚಲಾಯಿಸುವುದು

ಕೊನೆಯ ಅಪ್ಡೇಟ್ Jul 22, 2022

ಯಾವುದೇ ವಾಹನವನ್ನು ಚಾಲನೆ ಮಾಡುವ ಮೊದಲು ಅದನ್ನು ನೋಂದಣಿ ಮಾಡಿಸತಕ್ಕದ್ದು. ವಾಹನವನ್ನು ನೋಂದಾಯಿಸಿದಾಗ ನಿಮಗೆ ನೋಂದಣಿ ಪ್ರಮಾಣ ಪತ್ರ (ಆರ್ ಸಿ) ನೀಡಲಾಗುತ್ತದೆ. ಈ ದಾಖಲೆಯ ಮೂಲ ಪ್ರತಿಯನ್ನು ಅಥವಾ ಎಲೆಕ್ಟ್ರಾನಿಕ್ ಪ್ರತಿಯನ್ನು ನೀವು ಸದಾ ನಿಮ್ಮೊಂದಿಗೆ ಹೊಂದಿರತಕ್ಕದ್ದು ಮತ್ತು ನಿಮ್ಮ ವಾಹನದ ಮೇಲೆ ಕಡ್ಡಾಯವಾಗಿ ನೋಂದಣಿ ಸಂಖ್ಯೆಯನ್ನು ಪ್ರದರ್ಶಿಸತಕ್ಕದ್ದು.

ನೋಂದಣಿಯಾಗಿರದ ವಾಹನವನ್ನು ನೀವು ಚಾಲನೆ ಮಾಡಿದಲ್ಲಿ ಅಥವಾ ಚಾಲನೆ ಮಾಡಲು ಅವಕಾಶ ನೀಡಿದಲ್ಲಿ, ಮೊದಲ ಬಾರಿಯ ಅಂತಹ ಅಪರಾಧಕ್ಕಾಗಿ ನೀವು ರೂ.2,000/- ದಿಂದ ರೂ.5,000/-ರ ವರೆಗೆ ಜುಲ್ಮಾನೆ ತೆರಬೇಕಾಗುತ್ತದೆ ಮತ್ತು ಅಂತಹ ಪುನರಾವರ್ತಿತ ಅಪರಾಧಕ್ಕಾಗಿ ರೂ. 5,000/- ದಿಂದ ರೂ. 10,000/- ದ ವರೆಗೆ ದಂಡ ಅಥವಾ ಒಂದು ವರ್ಷ ಅವಧಿಯವರೆಗಿನ ಕಾರಾವಾಸವನ್ನು ಅಥವಾ ಎರಡೂ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಜುಲ್ಮಾನೆಯ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ.

ನೋಂದಣಿ ಪ್ರಮಾಣಪತ್ರ ಇಲ್ಲದೆಯೇ ವಾಹನ ಚಲಾಯಿಸಿದಾಗ ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಮಗೆ
ಜುಲ್ಮಾನೆ ವಿಧಿಸುವಂತಿಲ್ಲ:

 ಗಾಯಗೊಂಡ ಅಥವಾ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳನ್ನು ವಾಹನದಲ್ಲಿ ಕರೆದೊಯ್ಯುತ್ತಿರುವಾಗ.
 ಪರಿಹಾರ ಕಾರ್ಯಕ್ಕಾಗಿ ಆಹಾರ ಅಥವಾ ಸಾಮಗ್ರಿಗಳನ್ನು ಅಥವಾ ಔಷಧಿಗಳನ್ನು ಸಾಗಾಣಿಕೆ ಮಾಡಲು ವಾಹನವನ್ನು ಉಪಯೋಗಿಸುತ್ತಿದ್ದಲ್ಲಿ.

ಆದರೆ, ಮೇಲ್ಕಂಡ ಉದ್ದೇಶಗಳಿಗಾಗಿ ವಾಹನವನ್ನು ಬಳಸಲಾಗುತ್ತಿದೆ ಎಂದು ನೀವು ಏಳು ದಿನಗಳ ಅವಧಿಯೊಳಗಾಗಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಮಾಹಿತಿ ನೀಡತಕ್ಕದ್ದು. ಇಲ್ಲವಾದಲ್ಲಿ ನೀವ ಜುಲ್ಮಾನೆ ತೆರಬೇಕಾಗುತ್ತದೆ.

ಎರಡು ರಾಜ್ಯಗಳಲ್ಲಿ ಜುಲ್ಮಾನೆಯ ಮೊತ್ತ ಈ ಕೆಳಕಂಡಂತಿದೆ:

ರಾಜ್ಯ ಅಪರಾಧದ ಪುನರಾವರ್ತನೆ ಜುಲ್ಮಾನೆಯ ಮೊತ್ತ (ರೂ.)
ದೆಹಲಿ ಮೊದಲ ಬಾರಿಯ ಅಪರಾಧ 2,000-5,000
ಪುನರಾವರ್ತಿತ ಅಪರಾಧ 5,000-10,000
ಕರ್ನಾಟಕ ದ್ವಿಚಕ್ರ / ತ್ರಿಚಕ್ರ ವಾಹನ 2,000
ಲಘು ಮೋಟಾರು ವಾಹನ 3,000
ಮಧ್ಯಮ/ಭಾರೀ ವಾಹನ ಮತ್ತು ಇತರೆ 5,000

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.