ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಧಗಳು

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಭಾರತೀಯ ಕಾನೂನು ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯದ ವಿಧಗಳನ್ನು ಮಗುವಿನ ಲಿಂಗವನ್ನು ಲೆಕ್ಕಿಸದೆ ವಿವಿಧ ರೀತಿಯ ಅಪರಾಧಗಳಾಗಿ ವರ್ಗೀಕರಿಸುತ್ತದೆ. ಕೆಲವು ಶಿಕ್ಷಾರ್ಹ ಅಪರಾಧಗಳನ್ನು ಕೆಳಗೆ ನೀಡಲಾಗಿದೆ:

ಅಶಾರೀರಿಕ ನಡವಳಿಕೆ

ಸನ್ನೆಗಳು, ಮಾತು ಮತ್ತು ದೃಶ್ಯಗಳ ಮೂಲಕ ಯಾವುದೇ ಅಶಾರೀರಿಕ ಲೈಂಗಿಕ ನಡವಳಿಕೆ. ಉದಾಹರಣೆಗೆ, ಮಗುವಿನ ಜನನೇಮದ್ರಿಯದ ಭಾಗಗಳಿಗೆ ಸನ್ನೆ ಮಾಡುವುದು ಅಥವಾ ಬೆತ್ತಲೆ ಚಿತ್ರಗಳನ್ನು ತೋರಿಸುವುದು. ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಯಾವುದೇ ಕ್ರಿಯೆ, ಅದರ ರಚನೆ, ವಿತರಣೆ, ಪ್ರಸರಣ, ಪ್ರಕಟಣೆ ಇತ್ಯಾದಿ. ಮಗುವಿಗೆ ಯಾವುದೇ ಔಷಧಿ, ಹಾರ್ಮೋನ್ ಅಥವಾ ಯಾವುದೇ ರಾಸಾಯನಿಕ ಪದಾರ್ಥವನ್ನು ನೀಡುವುದು ಇದರಿಂದ ಮಗುವು ವಯಸ್ಸಾಗುವ ಮೊದಲೇ ಲೈಂಗಿಕ ಪ್ರಬುದ್ಧತೆಯನ್ನು ಪಡೆಸುವುದು.

ಶಾರೀರಿಕ ನಡವಳಿಕೆ

ಲೈಂಗಿಕವಾಗಿ ಸೂಕ್ತವಲ್ಲದ ರೀತಿಯಲ್ಲಿ ಮಗುವನ್ನು ಸ್ಪರ್ಶಿಸುವುದು. ಉದಾಹರಣೆಗೆ, ಮಗುವಿನ ಜನನೇಮದ್ರಿಯದ ಭಾಗಗಳನ್ನು ಸ್ಪರ್ಶಿಸುವುದು. ಮಗುವಿನ ಮೇಲೆ ಶಿಶ್ನ ಅಥವಾ ಇತರ ಯಾವುದೇ ವಸ್ತುವಿನ ಒಳಹೊಕ್ಕು ಮೂಲಕ ಲೈಂಗಿಕ ದೌರ್ಜನ್ಯ.

ಲೈಂಗಿಕ ದೌರ್ಜನ್ಯದ ಯತ್ನ

ಒಬ್ಬ ವ್ಯಕ್ತಿಯು ಒಂದು ಮಗುವಿನ ಮೇಲೆ ಯಾವುದೇ ಲೈಂಗಿಕ ಅಪರಾಧವನ್ನು ಮಾಡಲು ಪ್ರಯತ್ನಿಸಿದರೆ, ಇದು ಕೂಡ ಅಪರಾಧವೇ. ಅಪರಾಧಿಯು ನಿಜವಾಗಿ ಅಪರಾಧವನ್ನು ಮಾಡದಿದ್ದರೂ ಸಹ, ಕೇವಲ ಪ್ರಯತ್ನವು ಅವರನ್ನು ಹೊಣೆಗಾರರನ್ನಾಗಿ ಮಾಡುತ್ತದೆ.

ಇದಲ್ಲದೆ, ಕಾನೂನು ಅಪರಾಧ ಮಾಡುವ ವ್ಯಕ್ತಿಯ ಆಧಾರದ ಮೇಲೆ ಕೂಡ ವ್ಯತ್ಯಾಸವನ್ನು ಮಾಡುತ್ತದೆ. ಉದಾಹರಣೆಗೆ, ಶಿಕ್ಷಕ ಅಥವಾ ಪೊಲೀಸ್ ಅಧಿಕಾರಿಯಂತಹ ಮಗುವಿಗೆ ನಂಬಿಕೆ ಅಥವಾ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಯು ಯಾವುದೇ ಲೈಂಗಿಕ ದೌರ್ಜನ್ಯವನ್ನು ಮಾಡಿದರೆ, ಶಿಕ್ಷೆಯು ಹೆಚ್ಚು. ಕಿರುಕುಳ ನೀಡುವವರು ಮತ್ತು ಮಗುವಿನ ನಡುವಿನ ವಿಶ್ವಾಸಾರ್ಹ ಸಂಬಂಧವನ್ನು ಎತ್ತಿ ತೋರಿಸಲು ಕಾನೂನು ಈ ರೀತಿಯ ದೌರ್ಜನ್ಯವನ್ನು “ಉಲ್ಭಣಗೊಂಡ” ಎಂದು ವ್ಯಾಖ್ಯಾನಿಸುತ್ತದೆ. ನಮ್ಮ ಈ ವಿವರಣೆಯಲ್ಲಿ ಇನ್ನಷ್ಟು ಓದಿ “ಅಧಿಕಾರದಲ್ಲಿರುವ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯದ ಉಲ್ಬಣಗೊಂಡ ಅಪರಾಧ ಅಂದರೆ ಯಾವುದು?”.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಧಗಳು

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಭಾರತೀಯ ಕಾನೂನು ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯದ ವಿಧಗಳನ್ನು ಮಗುವಿನ ಲಿಂಗವನ್ನು ಲೆಕ್ಕಿಸದೆ ವಿವಿಧ ರೀತಿಯ ಅಪರಾಧಗಳಾಗಿ ವರ್ಗೀಕರಿಸುತ್ತದೆ. ಕೆಲವು ಶಿಕ್ಷಾರ್ಹ ಅಪರಾಧಗಳನ್ನು ಕೆಳಗೆ ನೀಡಲಾಗಿದೆ: ಅಶಾರೀರಿಕ ನಡವಳಿಕೆ ಸನ್ನೆಗಳು, ಮಾತು ಮತ್ತು ದೃಶ್ಯಗಳ ಮೂಲಕ ಯಾವುದೇ ಅಶಾರೀರಿಕ ಲೈಂಗಿಕ ನಡವಳಿಕೆ. ಉದಾಹರಣೆಗೆ, ಮಗುವಿನ ಜನನೇಮದ್ರಿಯದ ಭಾಗಗಳಿಗೆ ಸನ್ನೆ ಮಾಡುವುದು ಅಥವಾ ಬೆತ್ತಲೆ ಚಿತ್ರಗಳನ್ನು ತೋರಿಸುವುದು. ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಯಾವುದೇ ಕ್ರಿಯೆ, ಅದರ ರಚನೆ, ವಿತರಣೆ, ಪ್ರಸರಣ, ಪ್ರಕಟಣೆ ಇತ್ಯಾದಿ. ಮಗುವಿಗೆ ಯಾವುದೇ ಔಷಧಿ, ಹಾರ್ಮೋನ್ ಅಥವಾ ಯಾವುದೇ ರಾಸಾಯನಿಕ ಪದಾರ್ಥವನ್ನು ನೀಡುವುದು ಇದರಿಂದ ಮಗುವು ವಯಸ್ಸಾಗುವ ಮೊದಲೇ ಲೈಂಗಿಕ ಪ್ರಬುದ್ಧತೆಯನ್ನು ಪಡೆಸುವುದು. ಶಾರೀರಿಕ ನಡವಳಿಕೆ ಲೈಂಗಿಕವಾಗಿ ಸೂಕ್ತವಲ್ಲದ ರೀತಿಯಲ್ಲಿ ಮಗುವನ್ನು ಸ್ಪರ್ಶಿಸುವುದು. ಉದಾಹರಣೆಗೆ, ಮಗುವಿನ ಜನನೇಮದ್ರಿಯದ ಭಾಗಗಳನ್ನು ಸ್ಪರ್ಶಿಸುವುದು. ಮಗುವಿನ ಮೇಲೆ ಶಿಶ್ನ ಅಥವಾ ಇತರ ಯಾವುದೇ ವಸ್ತುವಿನ ಒಳಹೊಕ್ಕು ಮೂಲಕ ಲೈಂಗಿಕ ದೌರ್ಜನ್ಯ. ಲೈಂಗಿಕ ದೌರ್ಜನ್ಯದ ಯತ್ನ ಒಬ್ಬ ವ್ಯಕ್ತಿಯು ಒಂದು ಮಗುವಿನ ಮೇಲೆ ಯಾವುದೇ ಲೈಂಗಿಕ ಅಪರಾಧವನ್ನು ಮಾಡಲು ಪ್ರಯತ್ನಿಸಿದರೆ, ಇದು ಕೂಡ ಅಪರಾಧವೇ. ಅಪರಾಧಿಯು ನಿಜವಾಗಿ ಅಪರಾಧವನ್ನು ಮಾಡದಿದ್ದರೂ ಸಹ, ಕೇವಲ ಪ್ರಯತ್ನವು ಅವರನ್ನು ಹೊಣೆಗಾರರನ್ನಾಗಿ ಮಾಡುತ್ತದೆ. ಇದಲ್ಲದೆ, ಕಾನೂನು ಅಪರಾಧ ಮಾಡುವ ವ್ಯಕ್ತಿಯ ಆಧಾರದ ಮೇಲೆ ಕೂಡ ವ್ಯತ್ಯಾಸವನ್ನು ಮಾಡುತ್ತದೆ. ಉದಾಹರಣೆಗೆ, ಶಿಕ್ಷಕ ಅಥವಾ ಪೊಲೀಸ್ ಅಧಿಕಾರಿಯಂತಹ ಮಗುವಿಗೆ ನಂಬಿಕೆ ಅಥವಾ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಯು ಯಾವುದೇ ಲೈಂಗಿಕ ದೌರ್ಜನ್ಯವನ್ನು ಮಾಡಿದರೆ, ಶಿಕ್ಷೆಯು ಹೆಚ್ಚು. ಕಿರುಕುಳ ನೀಡುವವರು ಮತ್ತು ಮಗುವಿನ ನಡುವಿನ ವಿಶ್ವಾಸಾರ್ಹ ಸಂಬಂಧವನ್ನು ಎತ್ತಿ ತೋರಿಸಲು ಕಾನೂನು ಈ ರೀತಿಯ ದೌರ್ಜನ್ಯವನ್ನು “ಉಲ್ಭಣಗೊಂಡ” ಎಂದು ವ್ಯಾಖ್ಯಾನಿಸುತ್ತದೆ. ನಮ್ಮ ಈ ವಿವರಣೆಯಲ್ಲಿ ಇನ್ನಷ್ಟು ಓದಿ “ಅಧಿಕಾರದಲ್ಲಿರುವ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯದ ಉಲ್ಬಣಗೊಂಡ ಅಪರಾಧ ಅಂದರೆ ಯಾವುದು?”.

ಮಗುವು ಯಾರೊಂದಿಗಾದರೂ ಲೈಂಗಿಕ ಸಂಬಂಧ ಹೊಂದಲು ಸಮ್ಮತಿ ನೀಡಬಹುದೇ?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

ಇಲ್ಲ. ಲೈಂಗಿಕ ಸಂಬಂಧ ಹೊಂದಲು ಸಮ್ಮತಿ ನೀಡುವ ಮಗುವಿನ ಸಾಮರ್ಥ್ಯವನ್ನು ಕಾನೂನು ಗುರುತಿಸುವುದಿಲ್ಲ. ಇದರರ್ಥ ವಯಸ್ಕರು (18 ವರ್ಷಕ್ಕಿಂತ ಮೇಲ್ಪಟ್ಟವರು) ಯಾವುದೇ ರೀತಿಯ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮಗುವನ್ನು (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಕೇಳಿದರೆ, ಮತ್ತು ಮಗು ಸ್ಪಷ್ಟವಾಗಿ ಹೌದು ಎಂದು ಹೇಳಿದರೂ ಅಥವಾ ಅವರು ಸಮ್ಮತಿ ಸೂಚಿಸಿದರೂ, ಈ ಚಟುವಟಿಕೆಯನ್ನು ಕಾನೂನಿನ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ.

ಮಕ್ಕಳ ನಡುವೆ ಸಮ್ಮತಿ

ಇಬ್ಬರು ಮಕ್ಕಳು ಸ್ವಇಚ್ಛೆಯಿಂದ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿದರೆ, ಅದನ್ನು ಸಹ ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಹುಡುಗಿಯರು ಮತ್ತು ಹುಡುಗರಿಗೆ ಸಮ್ಮತಿಯ ವಯಸ್ಸು 18 ವರ್ಷಗಳು. ನಮ್ಮ ವಿವರಣೆ “ಅಪರಾಧಗಳ ಆರೋಪ ಹೊತ್ತಿರುವ ಮಕ್ಕಳು” ನಲ್ಲಿ ಹೆಚ್ಚಿನ ಮಾಹಿತಿಯನ್ನು ಓದಿ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಂದರೇನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಒಬ್ಬ ವ್ಯಕ್ತಿಯು ಒಂದು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವನ್ನು ಮಾಡಿರುವುದು ಯಾವಾಗ ಎಂದರೆ:

ಲೈಂಗಿಕ ಉದ್ದೇಶದಿಂದ ಒಂದು ಮಗುವನ್ನು ಸ್ಪರ್ಶಿಸಿದರೆ. ಇದು ಮಗುವಿನ ಯೋನಿ, ಶಿಶ್ನ, ಗುದದ್ವಾರ, ಸ್ತನ ಇತ್ಯಾದಿಗಳನ್ನು ಮುಟ್ಟುವುದನ್ನು ಒಳಗೊಂಡಿರುತ್ತದೆ. ಮಗುವನ್ನು ಅವರ ಸ್ವಂತ ಅಥವಾ ಬೇರೆಯವರ ಯೋನಿ, ಶಿಶ್ನ, ಗುದದ್ವಾರ, ಸ್ತನ ಇತ್ಯಾದಿಗಳನ್ನು ಸ್ಪರ್ಶಿಸಲು ಒತ್ತಾಯಿಸಿದರೆ. ಇದಕ್ಕೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಯ ಜೊತೆಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಅಪರಾಧಿಯು ನಂಬಿಕೆ ಅಥವಾ ಅಧಿಕಾರದ ಸ್ಥಾನದಲ್ಲಿದ್ದರೆ, ಇದು ಹೆಚ್ಚಿನ ಮಟ್ಟದ ಶಿಕ್ಷೆಯನ್ನು ಹೊಂದಿರುವ ಉಲ್ಬಣಗೊಂಡ ಲೈಂಗಿಕ ದೌರ್ಜನ್ಯ ಎಂದು ಕರೆಯಲ್ಪಡುವ ಹೆಚ್ಚಿನ ಅಪರಾಧವಾಗಿದೆ. ನಮ್ಮಈ ವಿವರಣೆಯಲ್ಲಿ ಇನ್ನಷ್ಟು ಓದಿ “ಅಧಿಕಾರದಲ್ಲಿರುವ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯದ ಉಲ್ಬಣಗೊಂಡ ಅಪರಾಧ ಅಂದರೆ ಯಾವುದು?”.

ಅಶಾರೀರಿಕ ಲೈಂಗಿಕ ನಡವಳಿಕೆ ಅಥವಾ ಲೈಂಗಿಕ ಕಿರುಕುಳ ಎಂದರೇನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಲೈಂಗಿಕ ಕಿರುಕುಳ ಎಂದರೆ ಮಗುವಿಗೆ ಇಷ್ಟವಿಲ್ಲದ ಅಶಾರೀರಿಕ ಲೈಂಗಿಕ ನಡವಳಿಕೆ, ಉದಾಹರಣೆಗೆ:

ಲೈಂಗಿಕವಾಗಿ ಮಾತನಾಡುವುದು ಮತ್ತು ಸನ್ನೆ ಮಾಡುವುದು

  • ಮಗುವಿಗೆ ಲೈಂಗಿಕವಾಗಿ ಮಾತನಾಡುವುದು, ಲೈಂಗಿಕವಾಗಿ ಸನ್ನೆ ಮಾಡುವುದು ಅಥವಾ ಲೈಂಗಿಕ ಅಂಗಗಳನ್ನು ತೋರಿಸುವುದು.
  • ಮಗುವಿಗೆ ಲೈಂಗಿಕ ವಸ್ತು ಅಥವಾ ಯಾವುದೇ ದೇಹದ ಲೈಂಗಿಕ ಭಾಗಗಳನ್ನು ತೋರಿಸುವುದು.
  • ಮಗುವಿನ ದೇಹದ ಭಾಗಗಳನ್ನು ಬೇರೆಯವರಿಗೆ ತೋರಿಸಲು ಒತ್ತಾಯಿಸುವುದು ಅಥವಾ ಕೇಳುವುದು.

ಹಿಂಬಾಲಿಸುವುದು ಮತ್ತು ಬೆದರಿಸುವುದು

  • ನೇರವಾಗಿ ಅಥವಾ ಪರೋಕ್ಷವಾಗಿ ಫೋನ್, ಎಸ್‌ಎಂಎಸ್, ಇಂಟರ್ನೆಟ್ ಅಥವಾ ಇನ್ನಾವುದೇ ರೀತಿಯಲ್ಲಿ ಮಗುವನ್ನು ಪದೇ ಪದೇ ಅಥವಾ ನಿರಂತರವಾಗಿ ವೀಕ್ಷಿಸುವುದು, ಅನುಸರಿಸುವುದು ಅಥವಾ ಸಂಪರ್ಕಿಸುವುದು.

ಯಾವುದೇ ರೀತಿಯ ಮಾಧ್ಯಮದಲ್ಲಿ ಮಗುವನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಬೆದರಿಕೆ ಹಾಕುವುದು ಅಥವಾ ಸುಳ್ಳು ಹೇಳುವುದು.

ಅಶ್ಲೀಲತೆಗೆ ಸಂಬಂಧಿತ

  • ಮಗುವಿಗೆ ಅಶ್ಲೀಲರಚನೆಗಳನ್ನು ತೋರಿಸುವುದು.
  • ಅಶ್ಲೀಲ ಕೃತ್ಯಗಳಲ್ಲಿ ಭಾಗವಹಿಸಲು ಮಗುವನ್ನು ಪ್ರಚೋದಿಸುವುದು ಅಥವಾ ಮನವೊಲಿಸುವುದು.

ಮಗುವಿಗೆ ಲೈಂಗಿಕ ಕಿರುಕುಳ ನೀಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯೊಂದಿಗೆ ದಂಡ ವಿಧಿಸಲಾಗುತ್ತದೆ.

ಒಳಹೊಕ್ಕುವ / ಪೆನೆಟ್ರೇಟಿವ್ ಲೈಂಗಿಕ ದೌರ್ಜನ್ಯ ಎಂದರೇನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

ಒಬ್ಬ ವ್ಯಕ್ತಿಯು ಮಗುವಿನ ಯಾವುದೇ ದೇಹದ ಭಾಗಕ್ಕೆ ಯಾವುದೇ ವಸ್ತು ಅಥವಾ ಯಾವುದೇ ದೇಹದ ಭಾಗವನ್ನು ಒಳಸೇರಿಸಿದಾಗ ಅಥವಾ ಮಗುವನ್ನು ಯಾರೊಂದಿಗಾದರೂ ಇದನ್ನು ಮಾಡಲು ಒತ್ತಾಯಿಸಿದಾಗ, ಅದು ಒಳಹೊಕ್ಕುವ / ಪೆನೆಟ್ರೇಟಿವ್ ಲೈಂಗಿಕ ದೌರ್ಜನ್ಯದ ಅಪರಾಧವಾಗಿದೆ. ಇದು ಇವನ್ನು ಒಳಗೊಂಡಿದೆ:

  • ಯಾವುದೇ ಮಗುವಿನ ಯೋನಿ, ಬಾಯಿ, ಮೂತ್ರನಾಳ ಅಥವಾ ಗುದದ್ವಾರವನ್ನು ಶಿಶ್ನ, ಮತ್ತೊಂದು ದೇಹದ ಭಾಗ ಅಥವಾ ವಸ್ತುವಿನೊಂದಿಗೆ ಒಳಹೊಕ್ಕುವುದು.
  • ಮಗುವನ್ನು ಇನ್ನೊಬ್ಬ ವ್ಯಕ್ತಿ ಅಥವಾ ವಸ್ತುವನ್ನು ಒಳಹೊಕ್ಕಲು ತನ್ನ ಶಿಶ್ನವನ್ನು ಬಳಸಲು ಒತ್ತಾಯಿಸುವುದು.
  • ಮಗುವಿನ ಮೇಲೆ ಮೌಖಿಕ ಸಂಭೋಗವನ್ನು ನಡೆಸುವುದು ಅಥವಾ ಬೇರೊಬ್ಬರ ಮೇಲೆ ಮೌಖಿಕ ಸಂಭೋಗವನ್ನು ನಡೆಸುವಂತೆ ಮಗುವನ್ನು ಒತ್ತಾಯಿಸುವುದು.

ಇದಕ್ಕೆ ಶಿಕ್ಷೆ ದಂಡ; ಜೊತೆಗೆ ಹತ್ತು ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ.

ಮಗು 16 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ಶಿಕ್ಷೆ ಹೆಚ್ಚು. ಅತ್ಯಾಚಾರದ ಅಪರಾಧಕ್ಕಾಗಿ ಮಗು ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಅಪರಾಧಿಯು ನಂಬಿಕೆ ಅಥವಾ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಯಾಗಿದ್ದರೆ, ಅಪರಾಧವನ್ನು ಉಲ್ಬಣಗೊಂಡ ಒಳಹೊಕ್ಕುವ ಲೈಂಗಿಕ ದೌರ್ಜನ್ಯ ಎಂದು ಕರೆಯಲಾಗುತ್ತದೆ, ಇದು ಹೆಚ್ಚಿನ ಪ್ರಮಾಣದ ಶಿಕ್ಷೆಯನ್ನು ಹೊಂದಿರುತ್ತದೆ.

ಒಂದು ಮಗುವನ್ನು ಬ್ಲ್ಯಾಕ್‌ಮೇಲ್ ಮಾಡಿದರೆ ಶಿಕ್ಷೆ ಏನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

ಯಾರಾದರೂ ಮಗುವಿಗೆ ಬೆದರಿಕೆ ಹಾಕಿದರೆ ಅಥವಾ ಮಗುವಿಗೆ ಮಾಡಿದ ಯಾವುದೇ ಲೈಂಗಿಕ ಕ್ರಿಯೆಯನ್ನು ರೆಕಾರ್ಡ್ ಮಾಡಿದರೆ, ಪೋಷಕರು ಸೇರಿದಂತೆ ಯಾರಾದರೂ ಅವರ ವಿರುದ್ಧ ದೂರು ನೀಡಬಹುದು. ಮಗುವನ್ನು ಬ್ಲ್ಯಾಕ್‌ಮೇಲ್ ಮಾಡುವುದು ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು/ಅಥವಾ ದಂಡದೊಂದಿಗೆ ಕಾನೂನಿನಡಿಯಲ್ಲಿ ಶಿಕ್ಷಾರ್ಹ ಅಪರಾಧ.

ಉದಾಹರಣೆಗೆ, ಸೀಮಾಳ ಟ್ಯೂಷನ್ ಟೀಚರ್ ಅವಳಿಗೆ ಲೈಂಗಿಕ ದೌರ್ಜನ್ಯ ಮಾಡಿದ್ದರೆ, ಅದರ ವೀಡಿಯೊವನ್ನು ರೆಕಾರ್ಡ್ ಮಾಡಿದ್ದರೆ ಮತ್ತು ಅವಳ ಪೋಷಕರಿಗೆ ಸಹಾಯ ಅಥವಾ ಹಣ ಪಡೆಯಲು ಬ್ಲ್ಯಾಕ್‌ಮೇಲ್ ಮಾಡಿದ್ದರೆ, ಪೋಷಕರು ತಕ್ಷಣ ಪೊಲೀಸ್ ಮತ್ತು ಇತರ ಅಧಿಕಾರಿಗಳಿಗೆ ದೂರು ನೀಡಬೇಕು, ಅವರು ಕ್ರಮ ತೆಗೆದುಕೊಳ್ಳುತ್ತಾರೆ.

ಬ್ಲ್ಯಾಕ್‌ಮೇಲ್ ಮತ್ತು ಲೈಂಗಿಕ ದೌರ್ಜನ್ಯವನ್ನು ವರದಿ ಮಾಡಲು ಯಾರಾದರೂ ಪೊಲೀಸರಿಗೆ ಕರೆ ಮಾಡಬಹುದು. ಕಾನೂನಿನ ಅಡಿಯಲ್ಲಿ, ಬ್ಲ್ಯಾಕ್‌ಮೇಲ್ ಅನ್ನು ಲೈಂಗಿಕ ಕಿರುಕುಳದ ಅಪರಾಧಗಳಾಗಿ ವರ್ಗೀಕರಿಸಲಾಗಿದೆ. ಶಿಕ್ಷೆಯು ಎರಡು ವರ್ಷಗಳ ಜೈಲು ಸಮಯ ಮತ್ತು/ಅಥವಾ ದಂಡ. ಅಂತಹ ಅಶ್ಲೀಲ ಸಾಮಗ್ರಿಗಳ ಬಗ್ಗೆ ಯಾವುದೇ ವ್ಯಕ್ತಿಗೆ ತಿಳಿದಿದ್ದರೆ ಅವರು ಅದನ್ನು ಸ್ಥಳೀಯ ಪೊಲೀಸ್ ಅಥವಾ ವಿಶೇಷ ಜುವೆನೈಲ್ ಪೊಲೀಸ್ ಘಟಕ ಅಥವಾ ಸೈಬರ್ ಕ್ರೈಮ್ ಪೋರ್ಟಲ್ (cybercrime.gov.in) ಗೆ ವರದಿ ಮಾಡಬೇಕು.

ಮಕ್ಕಳ ಪೋರ್ನೋಗ್ರಫಿ (ಅಶ್ಲೀಲತೆ) ಎಂದರೇನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

ಲೈಂಗಿಕ ತೃಪ್ತಿಗಾಗಿ ಯಾವುದೇ ರೀತಿಯ ಮಾಧ್ಯಮಗಳಲ್ಲಿ (ಜಾಹೀರಾತುಗಳು, ಇಂಟರ್ನೆಟ್, ಮುದ್ರಿತ ರೂಪ, ಇತ್ಯಾದಿ) ಮಕ್ಕಳನ್ನು ಬಳಸಿಕೊಳ್ಳುವ ಯಾವುದೇ ವ್ಯಕ್ತಿಯನ್ನು ಕಾನೂನು ಶಿಕ್ಷಿಸಬಹುದು. ಇದು ಕೆಳಕಂಡ ವಿಷಯಗಳನ್ನು ಒಳಗೊಂಡಿದೆ:

  • ಮಗುವಿನ ಲೈಂಗಿಕ ಅಂಗಗಳನ್ನು ಚಿತ್ರಿಸುವುದು
  • ನೈಜ ಅಥವಾ ಸಿಮ್ಯುಲೇಟೆಡ್ ಲೈಂಗಿಕ ಕ್ರಿಯೆಗಳಲ್ಲಿ ಮಕ್ಕಳನ್ನು ಬಳಸುವುದು
  • ಮಕ್ಕಳ ಅಸಭ್ಯ ಅಥವಾ ಅಶ್ಲೀಲ ಚಿತ್ರಣೆ

ಅಶ್ಲೀಲ ವಸ್ತುಗಳ ರೆಕಾರ್ಡಿಂಗ್, ತಯಾರಿಕೆ, ನೀಡಿಕೆ, ಪ್ರಕಟಣೆ ಅಥವಾ ವಿತರಣೆಯಲ್ಲಿ ಒಂದು ಮಗುವನ್ನು ತೊಡಗಿಸಿಕೊಳ್ಳುವುದು ಅಪರಾಧ. ಮೇಲಿನ ಚಟುವಟಿಕೆಗಳಿಗೆ ಮಾತ್ರ ಮಗುವನ್ನು ಬಳಸಬೇಕು ಎಂದು ಅಗತ್ಯವಲ್ಲ.

ಬೇರೆ ಯಾವುದೇ ರೀತಿಯಲ್ಲಿ ಪೋರ್ನ್ ತಯಾರಿಕೆಯಲ್ಲಿ ಯಾರಾದರೂ ಮಗುವನ್ನು ಬಳಸಿಕೊಂಡರೂ ಅದು ಮಕ್ಕಳ ಅಶ್ಲೀಲತೆಯಾಗಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಮಕ್ಕಳ ಅಶ್ಲೀಲತೆಯನ್ನು ಮಾರಾಟ ಮಾಡುವುದು ಅಥವಾ ವಿತರಿಸುವುದು ಅಥವಾ ಇತರ ಯಾವುದೇ ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿದ್ದರೆ ಅದು ಮಕ್ಕಳ ಅಶ್ಲೀಲತೆಗೆ ಸಮಾನವಾಗಿರುತ್ತದೆ.

ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಶಿಕ್ಷೆಗಳು ಮಗುವಿನ ಒಳಗೊಳ್ಳುವಿಕೆಯ ಪ್ರಮಾಣ ಮತ್ತು ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಬದಲಾಗಬಹುದು.

ಒಂದು ಮಗುವಿನ ಮೇಲೆ ಲೈಂಗಿಕವಾಗಿ ದೌರ್ಜನ್ಯ ಮಾಡಲು ಸಹಾಯ ಮಾಡಿದರೆ ಶಿಕ್ಷೆ ಏನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಒಬ್ಬ ವ್ಯಕ್ತಿಯು ಒಂದು ಮಗುವನ್ನು ಲೈಂಗಿಕವಾಗಿ ದೌರ್ಜನ್ಯ ಮಾಡಲು ಯಾರಿಗಾದರೂ ಸಹಾಯ ಮಾಡಿದಾಗ ಅಥವಾ ಉದ್ದೇಶಪೂರ್ವಕವಾಗಿ ಪ್ರೋತ್ಸಾಹಿಸಿದಾಗ, ಅವರು ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದಕರಾಗುತ್ತಾರೆ.

ಉದಾಹರಣೆಗೆ, ಒಬ್ಬ ವ್ಯಕ್ತಿಯು ಒಂದು ಮಗುವಿನ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಬಯಸಿದರೆ ಮತ್ತು ಹಾಗೆ ಮಾಡಲು ಯಾರಾದರೂ ಅವರನ್ನು ಉದ್ದೇಶಪೂರ್ವಕವಾಗಿ ಪ್ರೋತ್ಸಾಹಿಸಿದರೆ, ಆ ವ್ಯಕ್ತಿಗೆ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದನೆಗಾಗಿ ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ.

ಹೀಗೆ ಪ್ರಚೋದನೆ ನೀಡುವವನಿಗೆ ಈ ಅಪರಾಧಕ್ಕಾಗಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.