ಅತ್ಯಾಚಾರಕ್ಕೆ ಶಿಕ್ಷೆ

ಎಚ್ಚರಿಕೆ: ಈ ವಿವರಣೆಯು ದೈಹಿಕ ಹಿಂಸೆ ಮತ್ತು ಲೈಂಗಿಕ ಹಿಂಸಾಚಾರದ ಮಾಹಿತಿಯನ್ನು ಒಳಗೊಂಡಿರುವುದರಿಂದ, ಕೆಲವು ಓದುಗರು ಇದರಿಂದ ತೊಂದರೆಯಾಗಬಹುದು.

 

ಅತ್ಯಾಚಾರಕ್ಕೆ ಹತ್ತು ವರ್ಷಗಳ ಜೈಲು ಶಿಕ್ಷೆಯಿಂದ ಹಿಡಿದು ಜೀವಾವಧಿ ಶಿಕ್ಷೆ, ಜೊತೆಗೆ ದಂಡ ವಿಧಿಸಬಹುದು.2 ಭಾರತೀಯ ನ್ಯಾಯ ಸಂಹಿತೆ (BNS) ಎರಡು ರೀತಿಯ ಸೆರೆವಾಸವನ್ನು ವಿಧಿಸುತ್ತದೆ: ಸರಳ ಸೆರೆವಾಸ ಮತ್ತು ಕಠಿಣ ಸೆರೆವಾಸ. ಕಠಿಣವಾದ ಸೆರೆವಾಸವು ಸರಳ ಸೆರೆವಾಸಕ್ಕಿಂತ ಕಠಿಣವಾದ ಶಿಕ್ಷೆಯಾಗಿದೆ, ಇದು ಕಠಿಣ ಪರಿಶ್ರಮವನ್ನು ಒಳಗೊಂಡಿರುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಗಂಭೀರ ಅಪರಾಧಗಳಿಗೆ ಕಾಯ್ದಿರಿಸಲಾಗಿದೆ.

 

ಕೆಳಗಿನ ಸಂದರ್ಭಗಳಲ್ಲಿ ಶಿಕ್ಷೆಯು ಹೆಚ್ಚು ತೀವ್ರವಾಗಿರುತ್ತದೆ:

 

ಸಂತ್ರಸ್ತರು ಹದಿನಾರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಲ್ಲಿ 

 

ಸಂತ್ರಸ್ತರು ಹದಿನಾರು ವರ್ಷಕ್ಕಿಂತ ಕಡಿಮೆಯಿರುವಾಗ, ಶಿಕ್ಷೆಯು ದಂಡದೊಂದಿಗೆ, ಇಪ್ಪತ್ತು ವರ್ಷಗಳವರೆಗೆ ಜೈಲುವಾಸದಿಂದ ಜೀವಾವಧಿ ಶಿಕ್ಷೆಯಾಗಬಹುದು (ವ್ಯಕ್ತಿಯ ಉಳಿದ ನೈಸರ್ಗಿಕ ಜೀವನಕ್ಕೆ ಸೆರೆವಾಸ).3 ಸಂತ್ರಸ್ತರು ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಅಪರಾಧಿಗೆ ಮರಣದಂಡನೆಯನ್ನು ಸಹ ನೀಡಬಹುದು.4 ಸಂತ್ರಸ್ತರ ವೈದ್ಯಕೀಯ ವೆಚ್ಚಗಳು ಮತ್ತು ಪುನರ್ವಸತಿಯನ್ನು ಪೂರೈಸಲು ದಂಡವು ನ್ಯಾಯಯುತ ಮತ್ತು ಸಮಂಜಸವಾಗಿರಬೇಕು ಮತ್ತು ಇದನ್ನು ಸಂತ್ರಸ್ತರಿಗೆ ಪಾವತಿಸಲಾಗುತ್ತದೆ.

 

ಅತ್ಯಾಚಾರವು ಮಹಿಳೆಯ ಸಾವು ಅಥವಾ ನಿಷ್ಕ್ರಿಯ ಸ್ಥಿತಿಗೆ ಕಾರಣವಾದಾಗ

ಅತ್ಯಾಚಾರವು ಮಹಿಳೆಗೆ ತೀವ್ರ ಗಾಯವನ್ನು ಉಂಟುಮಾಡಿ ಅವಳ  ಸಾವಿಗೆ ಕಾರಣವಾದರೆ ಅಥವಾ ಅವಳನ್ನು ಶಾಶ್ವತವಾಗಿ ನಿಷ್ಕ್ರಿಯ ಸ್ಥಿತಿಯಲ್ಲಿ ಇರಿಸಿದರೆ, ಅಪರಾಧಿಗೆ ಇಪ್ಪತ್ತು ವರ್ಷಗಳವರೆಗೆ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ (ವ್ಯಕ್ತಿಯ ಉಳಿದ ಜೀವಿತಾವಧಿಯವರೆಗೆ ಜೈಲು), ಜೊತೆಗೆ ದಂಡ ಅಥವಾ ಮರಣ ದಂಡನೆ ವಿಧಿಸಬಹುದು.5

ಅಶಾರೀರಿಕ ಲೈಂಗಿಕ ನಡವಳಿಕೆ ಅಥವಾ ಲೈಂಗಿಕ ಕಿರುಕುಳ ಎಂದರೇನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಲೈಂಗಿಕ ಕಿರುಕುಳ ಎಂದರೆ ಮಗುವಿಗೆ ಇಷ್ಟವಿಲ್ಲದ ಅಶಾರೀರಿಕ ಲೈಂಗಿಕ ನಡವಳಿಕೆ, ಉದಾಹರಣೆಗೆ:

ಲೈಂಗಿಕವಾಗಿ ಮಾತನಾಡುವುದು ಮತ್ತು ಸನ್ನೆ ಮಾಡುವುದು

  • ಮಗುವಿಗೆ ಲೈಂಗಿಕವಾಗಿ ಮಾತನಾಡುವುದು, ಲೈಂಗಿಕವಾಗಿ ಸನ್ನೆ ಮಾಡುವುದು ಅಥವಾ ಲೈಂಗಿಕ ಅಂಗಗಳನ್ನು ತೋರಿಸುವುದು.
  • ಮಗುವಿಗೆ ಲೈಂಗಿಕ ವಸ್ತು ಅಥವಾ ಯಾವುದೇ ದೇಹದ ಲೈಂಗಿಕ ಭಾಗಗಳನ್ನು ತೋರಿಸುವುದು.
  • ಮಗುವಿನ ದೇಹದ ಭಾಗಗಳನ್ನು ಬೇರೆಯವರಿಗೆ ತೋರಿಸಲು ಒತ್ತಾಯಿಸುವುದು ಅಥವಾ ಕೇಳುವುದು.

ಹಿಂಬಾಲಿಸುವುದು ಮತ್ತು ಬೆದರಿಸುವುದು

  • ನೇರವಾಗಿ ಅಥವಾ ಪರೋಕ್ಷವಾಗಿ ಫೋನ್, ಎಸ್‌ಎಂಎಸ್, ಇಂಟರ್ನೆಟ್ ಅಥವಾ ಇನ್ನಾವುದೇ ರೀತಿಯಲ್ಲಿ ಮಗುವನ್ನು ಪದೇ ಪದೇ ಅಥವಾ ನಿರಂತರವಾಗಿ ವೀಕ್ಷಿಸುವುದು, ಅನುಸರಿಸುವುದು ಅಥವಾ ಸಂಪರ್ಕಿಸುವುದು.

ಯಾವುದೇ ರೀತಿಯ ಮಾಧ್ಯಮದಲ್ಲಿ ಮಗುವನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಬೆದರಿಕೆ ಹಾಕುವುದು ಅಥವಾ ಸುಳ್ಳು ಹೇಳುವುದು.

ಅಶ್ಲೀಲತೆಗೆ ಸಂಬಂಧಿತ

  • ಮಗುವಿಗೆ ಅಶ್ಲೀಲರಚನೆಗಳನ್ನು ತೋರಿಸುವುದು.
  • ಅಶ್ಲೀಲ ಕೃತ್ಯಗಳಲ್ಲಿ ಭಾಗವಹಿಸಲು ಮಗುವನ್ನು ಪ್ರಚೋದಿಸುವುದು ಅಥವಾ ಮನವೊಲಿಸುವುದು.

ಮಗುವಿಗೆ ಲೈಂಗಿಕ ಕಿರುಕುಳ ನೀಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯೊಂದಿಗೆ ದಂಡ ವಿಧಿಸಲಾಗುತ್ತದೆ.

ಸಾಮೂಹಿಕ ಅತ್ಯಾಚಾರ ಎಂದರೇನು?

ಎಚ್ಚರಿಕೆ: ಈ ವಿವರಣೆಯು ದೈಹಿಕ ಹಿಂಸೆ ಮತ್ತು ಲೈಂಗಿಕ ಹಿಂಸಾಚಾರದ ಮಾಹಿತಿಯನ್ನು ಒಳಗೊಂಡಿರುವುದರಿಂದ, ಕೆಲವು ಓದುಗರು ಇದರಿಂದ ತೊಂದರೆಯಾಗಬಹುದು.
ಸಾಮೂಹಿಕ ಅತ್ಯಾಚಾರವು ಅತ್ಯಾಚಾರ ಮಾಡುವ ಉದ್ದೇಶದಿಂದ ಅನೇಕ ಜನರು/ ಜನರ ಗುಂಪಿನಿಂದ ಮಹಿಳೆಯ ಮೇಲೆ ಮಾಡುವ ಅತ್ಯಾಚಾರವನ್ನು ಸೂಚಿಸುತ್ತದೆ. ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ, ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಅಪರಾಧಿ.6
ಸಾಮೂಹಿಕ ಅತ್ಯಾಚಾರಕ್ಕೆ7 ಇಪ್ಪತ್ತು ವರ್ಷಗಳ ಕಠಿಣ ಸೆರೆವಾಸದಿಂದ ಅಪರಾಧಿಯ ಉಳಿದ ಸಹಜ ಜೀವಿತಾವಧಿಯ ವರೆಗೆ ಜೈಲು ಶಿಕ್ಷೆ ಮತ್ತು ದಂಡವಾಗಿದೆ.
ಸಂತ್ರಸ್ತರು ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಶಿಕ್ಷೆಯು ದಂಡದ ಜೊತೆಗೆ ಅಪರಾಧಿಯ ಉಳಿದ ಜೀವಿತಾವಧಿಯ ವರೆಗಿನ ಜೀವಾವಧಿ ಶಿಕ್ಷೆಯಾಗಿದೆ ಅಥವಾ ಮರಣದಂಡನೆ.
ಇದಲ್ಲದೆ, ಸಂತ್ರಸ್ತರ ವೈದ್ಯಕೀಯ ವೆಚ್ಚಗಳು ಮತ್ತು ಪುನರ್ವಸತಿಯ ಪೂರೈಕೆಗಾಗಿ ಅಪರಾಧಿಗಳು ನ್ಯಾಯಯುತ ಮತ್ತು ಪೂರಕವಾದ ದಂಡವನ್ನು ಪಾವತಿಸಬೇಕು.ಪಡೆದ ದಂಡವನ್ನು ಸಂತ್ರಸ್ತರಿಗೆ ಪಾವತಿಸಲಾಗುತ್ತದೆ.
ಅಪರಾಧವನ್ನು ಪುನರಾವರ್ತಿಸಿದರೆ ಶಿಕ್ಷೆ
ಅಪರಾಧವನ್ನು ಪುನರಾವರ್ತಿಸಿದರೆ ಶಿಕ್ಷೆ
ಅತ್ಯಾಚಾರ/ಸಾಮೂಹಿಕ ಅತ್ಯಾಚಾರದ ಅಪರಾಧಕ್ಕಾಗಿ ಈ ಹಿಂದೆ ಯಾರಾದರೂ ತಪ್ಪಿತಸ್ಥರಾಗಿದ್ದರೆ ಮತ್ತು ನಂತರ ಅವರು ಮತ್ತೆ ಅತ್ಯಾಚಾರ/ಸಾಮೂಹಿಕ ಅತ್ಯಾಚಾರಕ್ಕಾಗಿ ತಪ್ಪಿತಸ್ಥರೆಂದು ಸಾಬೀತಾದರೆ, ಅವರಿಗೆ ಜೀವಾವಧಿ ಶಿಕ್ಷೆ (ಆ ವ್ಯಕ್ತಿಯ ನೈಸರ್ಗಿಕ ಜೀವನದ ಉಳಿದ ಅವಧಿಗೆ ಸೆರೆವಾಸ) ಅಥವಾ ಮರಣದಂಡನೆ ವಿಧಿಸಬಹುದು.8

 

ಒಳಹೊಕ್ಕುವ / ಪೆನೆಟ್ರೇಟಿವ್ ಲೈಂಗಿಕ ದೌರ್ಜನ್ಯ ಎಂದರೇನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

ಒಬ್ಬ ವ್ಯಕ್ತಿಯು ಮಗುವಿನ ಯಾವುದೇ ದೇಹದ ಭಾಗಕ್ಕೆ ಯಾವುದೇ ವಸ್ತು ಅಥವಾ ಯಾವುದೇ ದೇಹದ ಭಾಗವನ್ನು ಒಳಸೇರಿಸಿದಾಗ ಅಥವಾ ಮಗುವನ್ನು ಯಾರೊಂದಿಗಾದರೂ ಇದನ್ನು ಮಾಡಲು ಒತ್ತಾಯಿಸಿದಾಗ, ಅದು ಒಳಹೊಕ್ಕುವ / ಪೆನೆಟ್ರೇಟಿವ್ ಲೈಂಗಿಕ ದೌರ್ಜನ್ಯದ ಅಪರಾಧವಾಗಿದೆ. ಇದು ಇವನ್ನು ಒಳಗೊಂಡಿದೆ:

  • ಯಾವುದೇ ಮಗುವಿನ ಯೋನಿ, ಬಾಯಿ, ಮೂತ್ರನಾಳ ಅಥವಾ ಗುದದ್ವಾರವನ್ನು ಶಿಶ್ನ, ಮತ್ತೊಂದು ದೇಹದ ಭಾಗ ಅಥವಾ ವಸ್ತುವಿನೊಂದಿಗೆ ಒಳಹೊಕ್ಕುವುದು.
  • ಮಗುವನ್ನು ಇನ್ನೊಬ್ಬ ವ್ಯಕ್ತಿ ಅಥವಾ ವಸ್ತುವನ್ನು ಒಳಹೊಕ್ಕಲು ತನ್ನ ಶಿಶ್ನವನ್ನು ಬಳಸಲು ಒತ್ತಾಯಿಸುವುದು.
  • ಮಗುವಿನ ಮೇಲೆ ಮೌಖಿಕ ಸಂಭೋಗವನ್ನು ನಡೆಸುವುದು ಅಥವಾ ಬೇರೊಬ್ಬರ ಮೇಲೆ ಮೌಖಿಕ ಸಂಭೋಗವನ್ನು ನಡೆಸುವಂತೆ ಮಗುವನ್ನು ಒತ್ತಾಯಿಸುವುದು.

ಇದಕ್ಕೆ ಶಿಕ್ಷೆ ದಂಡ; ಜೊತೆಗೆ ಹತ್ತು ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ.

ಮಗು 16 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ಶಿಕ್ಷೆ ಹೆಚ್ಚು. ಅತ್ಯಾಚಾರದ ಅಪರಾಧಕ್ಕಾಗಿ ಮಗು ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಅಪರಾಧಿಯು ನಂಬಿಕೆ ಅಥವಾ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಯಾಗಿದ್ದರೆ, ಅಪರಾಧವನ್ನು ಉಲ್ಬಣಗೊಂಡ ಒಳಹೊಕ್ಕುವ ಲೈಂಗಿಕ ದೌರ್ಜನ್ಯ ಎಂದು ಕರೆಯಲಾಗುತ್ತದೆ, ಇದು ಹೆಚ್ಚಿನ ಪ್ರಮಾಣದ ಶಿಕ್ಷೆಯನ್ನು ಹೊಂದಿರುತ್ತದೆ.

ಅಪರಾಧವನ್ನು ಪುನರಾವರ್ತಿಸಿದರೆ ಶಿಕ್ಷೆ

ಅತ್ಯಾಚಾರ/ಸಾಮೂಹಿಕ ಅತ್ಯಾಚಾರದ ಅಪರಾಧಕ್ಕಾಗಿ ಈ ಹಿಂದೆ ಯಾರಾದರೂ ತಪ್ಪಿತಸ್ಥರಾಗಿದ್ದರೆ ಮತ್ತು ನಂತರ ಅವರು ಮತ್ತೆ ಅತ್ಯಾಚಾರ/ಸಾಮೂಹಿಕ ಅತ್ಯಾಚಾರಕ್ಕಾಗಿ ತಪ್ಪಿತಸ್ಥರೆಂದು ಸಾಬೀತಾದರೆ, ಅವರಿಗೆ ಜೀವಾವಧಿ ಶಿಕ್ಷೆ (ಆ ವ್ಯಕ್ತಿಯ ನೈಸರ್ಗಿಕ ಜೀವನದ ಉಳಿದ ಅವಧಿಗೆ ಸೆರೆವಾಸ) ಅಥವಾ ಮರಣದಂಡನೆ ವಿಧಿಸಬಹುದು.8

ಒಂದು ಮಗುವನ್ನು ಬ್ಲ್ಯಾಕ್‌ಮೇಲ್ ಮಾಡಿದರೆ ಶಿಕ್ಷೆ ಏನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

ಯಾರಾದರೂ ಮಗುವಿಗೆ ಬೆದರಿಕೆ ಹಾಕಿದರೆ ಅಥವಾ ಮಗುವಿಗೆ ಮಾಡಿದ ಯಾವುದೇ ಲೈಂಗಿಕ ಕ್ರಿಯೆಯನ್ನು ರೆಕಾರ್ಡ್ ಮಾಡಿದರೆ, ಪೋಷಕರು ಸೇರಿದಂತೆ ಯಾರಾದರೂ ಅವರ ವಿರುದ್ಧ ದೂರು ನೀಡಬಹುದು. ಮಗುವನ್ನು ಬ್ಲ್ಯಾಕ್‌ಮೇಲ್ ಮಾಡುವುದು ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು/ಅಥವಾ ದಂಡದೊಂದಿಗೆ ಕಾನೂನಿನಡಿಯಲ್ಲಿ ಶಿಕ್ಷಾರ್ಹ ಅಪರಾಧ.

ಉದಾಹರಣೆಗೆ, ಸೀಮಾಳ ಟ್ಯೂಷನ್ ಟೀಚರ್ ಅವಳಿಗೆ ಲೈಂಗಿಕ ದೌರ್ಜನ್ಯ ಮಾಡಿದ್ದರೆ, ಅದರ ವೀಡಿಯೊವನ್ನು ರೆಕಾರ್ಡ್ ಮಾಡಿದ್ದರೆ ಮತ್ತು ಅವಳ ಪೋಷಕರಿಗೆ ಸಹಾಯ ಅಥವಾ ಹಣ ಪಡೆಯಲು ಬ್ಲ್ಯಾಕ್‌ಮೇಲ್ ಮಾಡಿದ್ದರೆ, ಪೋಷಕರು ತಕ್ಷಣ ಪೊಲೀಸ್ ಮತ್ತು ಇತರ ಅಧಿಕಾರಿಗಳಿಗೆ ದೂರು ನೀಡಬೇಕು, ಅವರು ಕ್ರಮ ತೆಗೆದುಕೊಳ್ಳುತ್ತಾರೆ.

ಬ್ಲ್ಯಾಕ್‌ಮೇಲ್ ಮತ್ತು ಲೈಂಗಿಕ ದೌರ್ಜನ್ಯವನ್ನು ವರದಿ ಮಾಡಲು ಯಾರಾದರೂ ಪೊಲೀಸರಿಗೆ ಕರೆ ಮಾಡಬಹುದು. ಕಾನೂನಿನ ಅಡಿಯಲ್ಲಿ, ಬ್ಲ್ಯಾಕ್‌ಮೇಲ್ ಅನ್ನು ಲೈಂಗಿಕ ಕಿರುಕುಳದ ಅಪರಾಧಗಳಾಗಿ ವರ್ಗೀಕರಿಸಲಾಗಿದೆ. ಶಿಕ್ಷೆಯು ಎರಡು ವರ್ಷಗಳ ಜೈಲು ಸಮಯ ಮತ್ತು/ಅಥವಾ ದಂಡ. ಅಂತಹ ಅಶ್ಲೀಲ ಸಾಮಗ್ರಿಗಳ ಬಗ್ಗೆ ಯಾವುದೇ ವ್ಯಕ್ತಿಗೆ ತಿಳಿದಿದ್ದರೆ ಅವರು ಅದನ್ನು ಸ್ಥಳೀಯ ಪೊಲೀಸ್ ಅಥವಾ ವಿಶೇಷ ಜುವೆನೈಲ್ ಪೊಲೀಸ್ ಘಟಕ ಅಥವಾ ಸೈಬರ್ ಕ್ರೈಮ್ ಪೋರ್ಟಲ್ (cybercrime.gov.in) ಗೆ ವರದಿ ಮಾಡಬೇಕು.

ವೈವಾಹಿಕ ಅತ್ಯಾಚಾರ

ಎಚ್ಚರಿಕೆ: ಈ ವಿವರಣೆಯು ದೈಹಿಕ ಹಿಂಸೆ ಮತ್ತು ಲೈಂಗಿಕ ಹಿಂಸಾಚಾರದ ಮಾಹಿತಿಯನ್ನು ಒಳಗೊಂಡಿರುವುದರಿಂದ, ಕೆಲವು ಓದುಗರು ಇದರಿಂದ ತೊಂದರೆಯಾಗಬಹುದು.

 

ಭಾರತೀಯ ಕಾನೂನಿನ ಪ್ರಕಾರ ವೈವಾಹಿಕ ಅತ್ಯಾಚಾರವು ಅಪರಾಧವಲ್ಲ. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ (ಅಪ್ರಾಪ್ತ ವಯಸ್ಕ) ಹೆಂಡತಿಯ ಹೊರತು ಪಡಿಸಿ, ಆಕೆಯ ಒಪ್ಪಿಗೆಯಿಲ್ಲದೆ ತನ್ನ ಹೆಂಡತಿಯೊಂದಿಗೆ ಬಲವಂತದ ಲೈಂಗಿಕ ಸಂಭೋಗಕ್ಕಾಗಿ ಪತಿಯನ್ನು ಕಾನೂನು ಶಿಕ್ಷಿಸುವುದಿಲ್ಲ.9

 

ಆದ್ದರಿಂದ, ಪುರುಷನು ತನ್ನ ವಯಸ್ಕ ಹೆಂಡತಿಯೊಂದಿಗೆ ನಡೆಸುವ ಯಾವುದೇ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳು ಅತ್ಯಾಚಾರವಲ್ಲ. ಆದಾಗ್ಯೂ, ಮಹಿಳೆ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಇದು ಅನ್ವಯಿಸುವುದಿಲ್ಲ. ದಂಪತಿಗಳು ವಿವಾಹಿತರಾಗಿದ್ದು, ಆದರೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಪತ್ನಿ ಲೈಂಗಿಕ ಸಂಭೋಗಕ್ಕೆ ಒಪ್ಪಿಗೆ ನೀಡದಿದ್ದರೆ ಪತಿ ಅತ್ಯಾಚಾರದ ಅಪರಾಧಿ. ಈ ಪ್ರಕರಣದಲ್ಲಿ ಪತಿಗೆ ಎರಡರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ, ಜೊತೆಗೆ ದಂಡ ವಿಧಿಸಬಹುದು.10

 

ಆದ್ದರಿಂದ, ಪುರುಷನು ತನ್ನ ವಯಸ್ಕ ಹೆಂಡತಿಯೊಂದಿಗೆ ನಡೆಸುವ ಯಾವುದೇ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳು ಅತ್ಯಾಚಾರವಲ್ಲ. ಆದಾಗ್ಯೂ, ಮಹಿಳೆ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಇದು ಅನ್ವಯಿಸುವುದಿಲ್ಲ. ದಂಪತಿಗಳು ವಿವಾಹಿತರಾಗಿದ್ದರೆ, ಆದರೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಪತ್ನಿ ಲೈಂಗಿಕ ಸಂಭೋಗಕ್ಕೆ ಒಪ್ಪಿಗೆ ನೀಡದಿದ್ದರೆ ಪತಿ ಅತ್ಯಾಚಾರದ ಅಪರಾಧಿ. ಈ ಪ್ರಕರಣದಲ್ಲಿ ಪತಿಗೆ ಎರಡರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ, ಜೊತೆಗೆ ದಂಡ.10

 

ಕಾನೂನು ವೈವಾಹಿಕ ಅತ್ಯಾಚಾರವನ್ನು ಶಿಕ್ಷಿಸದಿದ್ದರೂ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣಾಕಾಯಿದೆ, 2005 ರ ಅಡಿಯಲ್ಲಿ ಮಹಿಳೆಯು ಪರಿಹಾರವನ್ನು ಪಡೆಯಬಹುದು. ಈ ಕಾನೂನು ಮಹಿಳೆಯ ಘನತೆಗೆ ಧಕ್ಕೆತರುವ, ಅವಮಾನಿಸುವ, ಕುಗ್ಗಿಸುವ ಅಥವಾ ಉಲ್ಲಂಘಿಸುವ ಲೈಂಗಿಕ ಸ್ವರೂಪದ  ಯಾವುದೇ ನಡವಳಿಕೆಯನ್ನು ಒಳಗೊಂಡ ಲೈಂಗಿಕ ದೌರ್ಜನ್ಯವನ್ನು ಅಪರಾಧವೆಂದು ಹೇಳುತ್ತದೆ.11 ಕೌಟುಂಬಿಕ ದೌರ್ಜನ್ಯದ ವಿರುದ್ಧ ಮಹಿಳೆಯ ಹಕ್ಕುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಓದಿ.

 

ವೈವಾಹಿಕ ಅತ್ಯಾಚಾರಕ್ಕೆ ಆಸರೆ.. ಹೆಂಡತಿ ಅಪ್ರಾಪ್ತ ವಯಸ್ಕಳಾಗಿದ್ದರೆ 

————————-

ದಂಪತಿಗಳು ಬೇರ್ಪಟ್ಟರೆ 

————————-

ಕೌಟುಂಬಿಕ ಹಿಂಸೆ ಕಾನೂನಿನ ಅಡಿಯಲ್ಲಿ

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು

 20 ವರ್ಷ ಶಿಕ್ಷೆ ಇಂದ ಜೀವಾವಧಿ + ದಂಡ

—————————-

ಹೆಂಡತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ

2 ರಿಂದ 7 ವರ್ಷಗಳು + ದಂಡ

—————————-

ಲೈಂಗಿಕ ದೌರ್ಜನ್ಯವನ್ನು ಒಳಗೊಳ್ಳುತ್ತದೆ

ಮಕ್ಕಳ ಪೋರ್ನೋಗ್ರಫಿ (ಅಶ್ಲೀಲತೆ) ಎಂದರೇನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

ಲೈಂಗಿಕ ತೃಪ್ತಿಗಾಗಿ ಯಾವುದೇ ರೀತಿಯ ಮಾಧ್ಯಮಗಳಲ್ಲಿ (ಜಾಹೀರಾತುಗಳು, ಇಂಟರ್ನೆಟ್, ಮುದ್ರಿತ ರೂಪ, ಇತ್ಯಾದಿ) ಮಕ್ಕಳನ್ನು ಬಳಸಿಕೊಳ್ಳುವ ಯಾವುದೇ ವ್ಯಕ್ತಿಯನ್ನು ಕಾನೂನು ಶಿಕ್ಷಿಸಬಹುದು. ಇದು ಕೆಳಕಂಡ ವಿಷಯಗಳನ್ನು ಒಳಗೊಂಡಿದೆ:

  • ಮಗುವಿನ ಲೈಂಗಿಕ ಅಂಗಗಳನ್ನು ಚಿತ್ರಿಸುವುದು
  • ನೈಜ ಅಥವಾ ಸಿಮ್ಯುಲೇಟೆಡ್ ಲೈಂಗಿಕ ಕ್ರಿಯೆಗಳಲ್ಲಿ ಮಕ್ಕಳನ್ನು ಬಳಸುವುದು
  • ಮಕ್ಕಳ ಅಸಭ್ಯ ಅಥವಾ ಅಶ್ಲೀಲ ಚಿತ್ರಣೆ

ಅಶ್ಲೀಲ ವಸ್ತುಗಳ ರೆಕಾರ್ಡಿಂಗ್, ತಯಾರಿಕೆ, ನೀಡಿಕೆ, ಪ್ರಕಟಣೆ ಅಥವಾ ವಿತರಣೆಯಲ್ಲಿ ಒಂದು ಮಗುವನ್ನು ತೊಡಗಿಸಿಕೊಳ್ಳುವುದು ಅಪರಾಧ. ಮೇಲಿನ ಚಟುವಟಿಕೆಗಳಿಗೆ ಮಾತ್ರ ಮಗುವನ್ನು ಬಳಸಬೇಕು ಎಂದು ಅಗತ್ಯವಲ್ಲ.

ಬೇರೆ ಯಾವುದೇ ರೀತಿಯಲ್ಲಿ ಪೋರ್ನ್ ತಯಾರಿಕೆಯಲ್ಲಿ ಯಾರಾದರೂ ಮಗುವನ್ನು ಬಳಸಿಕೊಂಡರೂ ಅದು ಮಕ್ಕಳ ಅಶ್ಲೀಲತೆಯಾಗಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಮಕ್ಕಳ ಅಶ್ಲೀಲತೆಯನ್ನು ಮಾರಾಟ ಮಾಡುವುದು ಅಥವಾ ವಿತರಿಸುವುದು ಅಥವಾ ಇತರ ಯಾವುದೇ ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿದ್ದರೆ ಅದು ಮಕ್ಕಳ ಅಶ್ಲೀಲತೆಗೆ ಸಮಾನವಾಗಿರುತ್ತದೆ.

ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಶಿಕ್ಷೆಗಳು ಮಗುವಿನ ಒಳಗೊಳ್ಳುವಿಕೆಯ ಪ್ರಮಾಣ ಮತ್ತು ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಬದಲಾಗಬಹುದು.

ಸ್ಥಾನ ಅಥವಾ ಅಧಿಕಾರದ ದುರುಪಯೋಗ

ಎಚ್ಚರಿಕೆ: ಈ ವಿವರಣೆಯು ದೈಹಿಕ ಹಿಂಸೆ ಮತ್ತು ಲೈಂಗಿಕ ಹಿಂಸಾಚಾರದ ಮಾಹಿತಿಯನ್ನು ಒಳಗೊಂಡಿರುವುದರಿಂದ, ಕೆಲವು ಓದುಗರು ಇದರಿಂದ ತೊಂದರೆಯಾಗಬಹುದು.

 

ಒಬ್ಬ ಪುರುಷನು ತನ್ನ ಅಧಿಕಾರ  ಅಥವಾ ಸ್ಥಾನದ ಕಾರಣದಿಂದ ಮಹಿಳೆಯ ಮೇಲೆ ನಿಯಂತ್ರಣವನ್ನು ಹೊಂದಿದ್ದರೆ ಮತ್ತು ಈ ನಿಯಂತ್ರಣವನ್ನು ಬಳಸಿಕೊಂಡು ಮಹಿಳೆ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಪ್ರಚೋದಿಸಿದರೆ, ಅದು ಅಪರಾಧವಾಗಿದೆ.12 ಯಾವುದೇ ಮಹಿಳೆ ತನ್ನೊಂದಿಗೆ ಲೈಂಗಿಕ ಸಂಭೋಗವನ್ನು ಹೊಂದಲು ಮನವೊಲಿಸಲು ಅಥವಾ ಮೋಹಿಸಲು ತನ್ನ ಸ್ಥಾನ ಅಥವಾ ವಿಶ್ವಾಸಾರ್ಹ ಸಂಬಂಧವನ್ನು  ನಂಬಿಕೆಯಾದಾರಿತ ಸಂಬಂಧಗಳು) ದುರುಪಯೋಗಪಡಿಸಿಕೊಳ್ಳುವ ಯಾವುದೇ ವ್ಯಕ್ತಿಗೆ ಕಾನೂನು ಶಿಕ್ಷೆಯನ್ನು ನೀಡುತ್ತದೆ. ಮಹಿಳೆ ಅವನ ವಶದಲ್ಲಿರಬಹುದು, ಅವನ ಉಸ್ತುವಾರಿಯಲ್ಲಿರಬಹುದು ಅಥವಾ ಆವರಣದಲ್ಲಿ ಹಾಜರಿರಬಹುದು. ಇಲ್ಲಿ, ಲೈಂಗಿಕ ಸಂಭೋಗವು ಅತ್ಯಾಚಾರವನ್ನು ಉಲ್ಲೇಖಿಸುವುದಿಲ್ಲ, ಇದನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 63 ರ ಅಡಿಯಲ್ಲಿ ಪ್ರತ್ಯೇಕ ಅಪರಾಧವೆಂದು ಪರಿಗಣಿಸಲಾಗಿದೆ.

 

ಲೈಂಗಿಕ ಸಂಭೋಗವನ್ನು ಹೊಂದಲು ಮಹಿಳೆಯನ್ನು ಮನವೊಲಿಸುವ ವ್ಯಕ್ತಿ ಹೀಗಿರಬಹುದು:

ಎ) ಅಧಿಕಾರದ ಸ್ಥಾನದಲ್ಲಿ ಅಥವಾ ವಿಶ್ವಾಸಾರ್ಹ ಸಂಬಂಧದಲ್ಲಿ; ಅಥವಾ

ಬಿ) ಸಾರ್ವಜನಿಕ ಸೇವಕ; ಅಥವಾ

ಸಿ) ಜೈಲು, ರಿಮಾಂಡ್ ಹೋಮ್, ಇತರ ಕಸ್ಟಡಿ ಸ್ಥಳ, ಅಥವಾ ಮಹಿಳಾ ಅಥವಾ ಮಕ್ಕಳ ಸಂಸ್ಥೆಯ ಸೂಪರಿಂಟೆಂಡೆಂಟ್ ಅಥವಾ ಮ್ಯಾನೇಜರ್; ಅಥವಾ

ಡಿ) ಆಸ್ಪತ್ರೆಯ ನಿರ್ವಹಣೆ ಅಥವಾ ಸಿಬ್ಬಂದಿ.

ಇ) ಸಂಬಂಧಿ, ರಕ್ಷಕ ಅಥವಾ ಶಿಕ್ಷಕ.

ಈ ಪ್ರಕರಣಗಳಲ್ಲಿ, ಅಧಿಕಾರದಲ್ಲಿರುವ ವ್ಯಕ್ತಿಗೆ ದಂಡದ ಜೊತೆಗೆ ಐದರಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

 

ಉದಾಹರಣೆಗೆ, ಪುರುಷ ಜೈಲು ಸೂಪರಿಂಟೆಂಡೆಂಟ್ ಒಬ್ಬ ಮಹಿಳಾ ಖೈದಿಯನ್ನು ತನ್ನ ಬಿಡುಗಡೆಗೆ ಬೆಂಬಲಿಸುವುದರ ಪ್ರತಿಯಾಗಿ ತನ್ನೊಂದಿಗೆ ಸಂಭೋಗಿಸಲು ಕೇಳಿದರೆ ಮತ್ತು ತನ್ನೊಂದಿಗೆ ಸಂಭೋಗಿಸಲು ಅವಳ ಮನವೊಲಿಸಿದರೆ, ಅವನು ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಂತಾಗುತ್ತದೆ. ಈ ಸಂದರ್ಭದಲ್ಲಿ, ಅವನು ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿಲ್ಲ ಆದರೆ ತನ್ನ ಅಧಿಕಾರದ ಸ್ಥಾನವನ್ನು ಬಳಸಿಕೊಂಡು ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಮನವೊಲಿಸಿದ್ದಾನೆ.

 

ಒಂದು ಮಗುವಿನ ಮೇಲೆ ಲೈಂಗಿಕವಾಗಿ ದೌರ್ಜನ್ಯ ಮಾಡಲು ಸಹಾಯ ಮಾಡಿದರೆ ಶಿಕ್ಷೆ ಏನು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಒಬ್ಬ ವ್ಯಕ್ತಿಯು ಒಂದು ಮಗುವನ್ನು ಲೈಂಗಿಕವಾಗಿ ದೌರ್ಜನ್ಯ ಮಾಡಲು ಯಾರಿಗಾದರೂ ಸಹಾಯ ಮಾಡಿದಾಗ ಅಥವಾ ಉದ್ದೇಶಪೂರ್ವಕವಾಗಿ ಪ್ರೋತ್ಸಾಹಿಸಿದಾಗ, ಅವರು ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದಕರಾಗುತ್ತಾರೆ.

ಉದಾಹರಣೆಗೆ, ಒಬ್ಬ ವ್ಯಕ್ತಿಯು ಒಂದು ಮಗುವಿನ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಬಯಸಿದರೆ ಮತ್ತು ಹಾಗೆ ಮಾಡಲು ಯಾರಾದರೂ ಅವರನ್ನು ಉದ್ದೇಶಪೂರ್ವಕವಾಗಿ ಪ್ರೋತ್ಸಾಹಿಸಿದರೆ, ಆ ವ್ಯಕ್ತಿಗೆ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದನೆಗಾಗಿ ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ.

ಹೀಗೆ ಪ್ರಚೋದನೆ ನೀಡುವವನಿಗೆ ಈ ಅಪರಾಧಕ್ಕಾಗಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.