ಸಹಿ ಮಾಡುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು
ನೀವು ಮನೆಯೊಂದನ್ನು ಬಾಡಿಗೆಗೆ ನೀಡಲು ಅಥವಾ ಪಡೆದುಕೊಳ್ಳಲು ತೀರ್ಮಾನಿಸಿದ್ದಲ್ಲಿ, ಈ ನಿಟ್ಟಿನಲ್ಲಿ ಲಿಖಿತ ಒಪ್ಪಂದಕ್ಕೆ ಸಹಿ ಮಾಡುವ ಮುನ್ನ ಈ ಕೆಳಕಂಡ ಅಂಶಗಳಿಗೆ ಗಮನವೀಯುವುದು ಅತ್ಯವಶ್ಯ.
ಒಪ್ಪಂದವನ್ನು ಕಡ್ಡಾಯವಾಗಿ ಓದಿರಿ
ಸಹಿ ಮಾಡುವ ಮೊದಲು, ನೀವು ಅಥವಾ ನಿಮ್ಮ ವಕೀಲರು ಒಪ್ಪಂದದಲ್ಲಿ ನಮೂದಿಸಲಾಗಿರುವ ಎಲ್ಲ ಷರತ್ತುಗಳನ್ನು ಕೂಲಂಕಷವಾಗಿ ಓದಿ ಅರ್ಥೈಸಿಕೊಳ್ಳಿ. ದಾಖಲೆಯಲ್ಲಿರುವ ವಿಷಯವನ್ನು ತಿಳಿಯದೇ ಸಹಿ ಮಾಡಬೇಡಿ. ಸಹಿ ಮಾಡಿದ ನಂತರ ನೀವು ದಾಖಲೆಯಲ್ಲಿರುವ ಮಾಹಿತಿ ಬಗ್ಗೆ ನಿಮಗೆ ತಿಳಿದಿಲ್ಲವೆಂದಾಗಲೀ ನೀವು ಅದನ್ನು ಓದದೆಯೇ ಸಹಿ ಮಾಡಿದಿರಿ ಎಂದಾಗಲೀ ವಾದ ಮಾಡಲು ಅವಕಾಶವಿರುವುದಿಲ್ಲ.
ಸಾಕ್ಷಿಗಳ ಸಮಕ್ಷಮ
ಒಪ್ಪಂದವನ್ನು ಸವಿವರವಾಗಿ ಓದಿದ ನಂತರ ನೀವು ಮತ್ತು ಮಾಲೀಕ/ಪರವಾನಗಿ ನೀಡುವವರು/ಬಾಡಿಗೆದಾರರು/ಪರವಾನಗಿ ಪಡೆಯುವವರು ದಾಖಲೆಗೆ ಸಹಿ ಮಾಡತಕ್ಕದ್ದು. ಈ ಸಮಯದಲ್ಲಿ ಕನಿಷ್ಟ ಇಬ್ಬರು ಸಾಕ್ಷಿಗಳು ಹಾಜರಿರಲೇಬೇಕು. ಈ ನಿಯಮ ಐಚ್ಛಿಕವಲ್ಲ, ಕಡ್ಡಾಯ. ಸಾಕ್ಷಿಗಳ ಸಮ್ಮುಖದಲ್ಲಿ ಸಹಿ ಮಾಡದ ಒಪ್ಪಂದವನ್ನು ಕಾನೂನಿನಲ್ಲಿ ಮಾನ್ಯ ಮಾಡುವುದಿಲ್ಲ.
ಸಹಿ ಮಾಡಿದ ನಂತರ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು
ಲಿಖಿತ ರೂಪದಲ್ಲಿರುವ ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ ನೀವು ಈ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.
ಒಪ್ಪಂದವನ್ನು ನೋಟರೀಕರಿಸುವುದು ಮತ್ತು ನೋಂದಣಿ ಮಾಡುವುದು
ನೀವು ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದಲ್ಲಿ ಅಥವಾ ಕೊಡುತ್ತಿದ್ದಲ್ಲಿ ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ ಅದನ್ನು ನೋಟರೀಕರಣ ಅಥವಾ ನೋಂದಣಿ ಮಾಡಲು ತಪ್ಪದೇ ಕ್ರಮ ತೆಗೆದುಕೊಳ್ಳಿ.
ಹನ್ನೊಂದು ತಿಂಗಳ ಅವಧಿಯ ಬಾಡಿಗೆ ಒಪ್ಪಂದವನ್ನು ನೋಂದಣಿ ಮಾಡುವುದು ಕಡ್ಡಾಯವಲ್ಲ. ಆದರೆ ನೋಟರೀಕರಣ ಮಾಡುವುದು ಕಡ್ಡಾಯ.
ಪೋಲೀಸ್ ದೃಢೀಕರಣ
ನೀವು ಮನೆಯನ್ನು ಬಾಡಿಗೆಗೆ ಕೊಡುತ್ತಿದ್ದಲ್ಲಿ, ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡಿದ ನಂತರ ನಿಮ್ಮ ಬಾಡಿಗೆದಾರರ ಪೋಲೀಸ್ ದೃಢೀಕರಣವನ್ನು ತಪ್ಪದೇ ಮಾಡಿಸತಕ್ಕದ್ದು. ಪೋಲೀಸ್ ದೃಢೀಕರಣ ಪಡೆಯುವುದು ಬಾಡಿಗೆದಾರರ ಜವಾಬ್ದಾರಿಯಲ್ಲ. ಆದರೆ, ಈ ಪ್ರಕ್ರಿಯೆಗಾಗಿ ಬಾಡಿಗೆದಾರ ತನ್ನ ಕುರಿತು ಸಂಪೂರ್ಣ ಮಾಹಿತಿಯನ್ನು ಮಾಲೀಕರಿಗೆ ಒದಗಿಸುವುದರ ಮೂಲಕ ಅವಶ್ಯಕ ಸಹಕಾರ ನೀಡಲು ಬದ್ಧರಾಗಿರುತ್ತಾರೆ.
NRI ಗಳು ಮತ್ತು PIO ಗಳು ಭಾರತದಲ್ಲಿನ ಆಸ್ತಿಯನ್ನು ಪ್ರೌಢ ಸುತ್ತೋಲೆಗೆ ಅನುಗುಣವಾಗಿ ಮಾರಾಟ ಮಾಡಬಹುದು.(( NRIಗಳು/PIOಗಳು/ಭಾರತೀಯೇತರ ಮೂಲದ ವಿದೇಶಿ ಪ್ರಜೆಗಳು, ಭಾರತದಲ್ಲಿನ ಸ್ಥಿರಾಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ವರ್ಗಾಯಿಸುವುದರ ಕುರಿತು RBI ಯ ಮಾಸ್ಟರ್ ಸುತ್ತೋಲೆ, 2013)) ಭಾರತದಲ್ಲಿ ವಾಸಿಸುವ ವ್ಯಕ್ತಿ ಅಥವಾ NRI ಅಥವಾ PIO ಗೆ ಭಾರತದಲ್ಲಿ ಒಬ್ಬ NRI ಆಸ್ತಿಯನ್ನು ಮಾರಾಟ ಮಾಡಬಹುದು. RBI ಯ ಪೂರ್ವಾನುಮತಿಯೊಂದಿಗೆ PIO ಭಾರತದಲ್ಲಿ ವಾಸಿಸುವ ವ್ಯಕ್ತಿಗೆ, NRI ಅಥವಾ PIO ಗೆ ಭಾರತದಲ್ಲಿ ಆಸ್ತಿಯನ್ನು ಮಾರಾಟ ಮಾಡಬಹುದು. NRI ಗಳು ಮತ್ತು PIO ಗಳು ಭಾರತದ ನಾಗರಿಕರಾಗಿರುವ ಭಾರತದಲ್ಲಿ ವಾಸಿಸುವ ವ್ಯಕ್ತಿಗೆ ಮಾತ್ರ ಕೃಷಿ ಭೂಮಿ / ತೋಟದ ಆಸ್ತಿ / ತೋಟದ ಮನೆಗಳನ್ನು ಮಾರಾಟ ಮಾಡಲು ಅನುಮತಿಸಲಾಗಿದೆ.
ಬಾಡಿಗೆ/ಭೋಗ್ಯದ ಒಪ್ಪಂದವನ್ನು ನೋಂದಣಿ ಮಾಡುವುದು
ನಿಮ್ಮ ಭೋಗ್ಯದ ಒಪ್ಪಂದವು ಒಂದು ವರ್ಷ ಅಥವಾ ಹೆಚ್ಚಿನ ಅವಧಿಯದಾಗಿದ್ದಲ್ಲಿ ಅದನ್ನು ನೀವು ವಾಸ ಮಾಡುತ್ತಿರುವ ನಗರದ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸತಕ್ಕದ್ದು. ಒಪ್ಪಂದ ಮಾಡಿಕೊಂಡ ನಾಲ್ಕು ತಿಂಗಳ ಅವಧಿಯೊಳಗೆ ಒಪ್ಪಂದವನ್ನು ನೋಂದಣಿ ಮಾಡತಕ್ಕದ್ದು. ಹೀಗೆ ನೋಂದಣಿ ಮಾಡದಿರುವ ಒಪ್ಪಂದವನ್ನು ಬಾಡಿಗೆ ನೀಡಿದ ಕಟ್ಟಡಕ್ಕೆ ಸಂಬಂಧಿಸಿದ ವಿವಾದದಲ್ಲಿ (ವಿವಾದ ಉದ್ಭವಿಸಿದಲ್ಲಿ) ಸಾಕ್ಷಾಧಾರವಾಗಿ ನ್ಯಾಯಾಲಯವು ಪರಿಗಣಿಸುವುದಿಲ್ಲ.
ಒಪ್ಪಂದವನ್ನು ನೋಂದಣಿ ಮಾಡುವುದರಿಂದ ಮಾಲೀಕರು ಪರಸ್ಪರ ಒಪ್ಪಿದ ಮೊತ್ತವನ್ನು ಹೊರತು ಪಡಿಸಿ, ಮತ್ತಾವುದೇ ಹೆಚ್ಚುವರಿ ಮೊತ್ತವನ್ನು ತೆರುವಂತೆ ಅಥವಾ ಯಾವುದೇ ಕಾನೂನು ವಿರುದ್ಧವಾದ ವ್ಯವಹಾರ ನಡೆಸುವಂತೆ ನಿಮ್ಮನ್ನು ಒತ್ತಾಯಿಸುವಂತಿಲ್ಲ.
ನೋಂದಣಿ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದಲೇ ಸಾಮಾನ್ಯವಾಗಿ ಎಲ್ಲಾ ಬಾಡಿಗೆ ಒಪ್ಪಂದಗಳು 11 ತಿಂಗಳ ಅವಧಿಯದಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಒಪ್ಪಂದವನ್ನು ನೋಂದಾಯಿಸುವುದರ ಬದಲಾಗಿ ನೋಟರೀಕರಣ ಮಾಡತಕ್ಕದ್ದು.
ಆದರೆ, ಮುಂಬೈನಂತಹ ಕೆಲವು ನಗರಗಳಲ್ಲಿ ಯಾವುದೇ ಅವಧಿಯ ಅನುಮತಿ ಮತ್ತು ಪರವಾನಗಿ ಒಪ್ಪಂದಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಲಾಗುತ್ತದೆ. ಮಹಾರಾಷ್ಟ್ರದಲ್ಲಿ ಬಾಡಿಗೆಯ ಯಾವುದೇ ಒಪ್ಪಂದಗಳನ್ನು – ಅನುಮತಿ ಮತ್ತು ಪರವಾನಗಿ ಒಪ್ಪಂದ ಸೇರಿದಂತೆ – ನೋಂದಣಿ ಮಾಡುವುದು ಕಾನೂನು ಪ್ರಕಾರ ಕಡ್ಡಾಯ.
ಒಪ್ಪಂದವನ್ನು ನೋಟರೀಕರಣ ಮಾಡುವುದು
ಯಾವುದೇ ಬಾಡಿಗೆ ಒಪ್ಪಂದವನ್ನು ನೋಂದಣಿ ಮಾಡದಿದ್ದ ಪಕ್ಷದಲ್ಲಿ, ಅದನ್ನು ನೋಟರೀಕರಣ ಮಾಡುವುದು ಕಡ್ಡಾಯ. ನಿಮ್ಮ ಮತ್ತು ಮಾಲೀಕರ ನಡುವಣ ಒಪ್ಪಂದವು ಕರಾರಿನ ಸ್ವರೂಪದಲ್ಲಿದ್ದು, ಎಲ್ಲ ಕರಾರುಗಳನ್ನು ಸಾಮಾನ್ಯವಾಗಿ ನೋಟರಿ ದೃಢೀಕರಿಸುತ್ತಾರೆ. ನೋಟರೀಕರಣ ಮಾಡುವುದರಿಂದ ನಿಮ್ಮ ಒಪ್ಪಂದದ ದಾಖಲೆಗೆ ಮಾನ್ಯತೆ ನೀಡಿದಂತಾಗುತ್ತದೆ ಮತ್ತು ಅದಕ್ಕೆ ಸಹಿ ಮಾಡುವ ಪಕ್ಷಗಾರರ ಗುರ್ತನ್ನು ಬಹಿರಂಗಪಡಿಸಿದಂತಾಗುತ್ತದೆ. ಇದರಿಂದ ನಿಮ್ಮ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸ್ಪಷ್ಟ ಚಿತ್ರಣ ದೊರೆಯುತ್ತದೆ. ಮೇಲಾಗಿ ಬಾಡಿಗೆಗೆ ಸಂಬಂಧಿಸಿದ ವಿವಾದ ನ್ಯಾಯಾಲಯದ ಮೆಟ್ಟಿಲು ಹತ್ತಿದಲ್ಲಿ ನೋಟರೀಕರಣ ಮಾಡಿದ ಒಪ್ಪಂದವನ್ನು ಯಾರೂ ಅಲ್ಲಗಳೆಯಲಾರರು.
ನಿಮ್ಮ ಬಾಡಿಗೆ ಒಪ್ಪಂದ/ಕರಾರನ್ನು ನೋಂದಾಯಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು. ಬಹುತೇಕ ಸಂದರ್ಭಗಳಲ್ಲಿ ನಿಮ್ಮ ಬ್ರೋಕರ್ ಈ ನಿಟ್ಟಿನಲ್ಲಿ ನಿಮಗೆ ಮಾರ್ಗದರ್ಶನ ಮಾಡುತ್ತಾರೆ.
1. ಒಪ್ಪಂದ ತಯಾರಾದ ನಂತರ, ಅದಕ್ಕೆ ಅನ್ವಯವಾಗುವ ಸೂಕ್ತ ಮುದ್ರಾಂಕ ಶುಲ್ಕವನ್ನು ಪಾವತಿ ಮಾಡಿ.
2. ಸ್ಥಳೀಯ ಉಪನೋಂದಣಾಧಿಕಾರಿಗಳನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಿಕೊಳ್ಳಿ. ಬಹುತೇಕ ರಾಜ್ಯಗಳು ಆನ್ ಲೈನ್ ಮುಖಾಂತರ ಈ ಸೌಲಭ್ಯವನ್ನು ಒದಗಿಸುತ್ತಿವೆ.
3. ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಮಾಲೀಕರು/ಪರವಾನಗಿ ನೀಡುವವರು, ಬಾಡಿಗೆದಾರರು/ಪರವಾನಗಿ ಪಡೆಯುವವರು ಈ ಕೆಳಕಂಡ ದಾಖಲೆಗಳು ಮತ್ತು ಸಾಕ್ಷಿಗಳೊಂದಿಗೆ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಹಾಜರಾಗತಕ್ಕದ್ದು.
ಸೂಕ್ತ ಮುದ್ರಾಂಕ ಶುಲ್ಕ ಪಾವತಿಸಿದ ಒಪ್ಪಂದ
ಬಾಡಿಗೆದಾರರ, ಮಾಲೀಕರ ಮತ್ತು ಸಾಕ್ಷಿಗಳ ಇತ್ತೀಚಿನ ಎರಡು ಪಾಸ್ ಪೋರ್ಟ್ ಭಾವಚಿತ್ರಗಳು
ಬಾಡಿಗೆದಾರರ, ಮಾಲೀಕರ ಮತ್ತು ಸಾಕ್ಷಿಗಳ ಗುರ್ತಿನ ದಾಖಲೆ (ಆಧಾರ್ ಕಾರ್ಡ್, ಚುನಾವಣಾ ಗುರ್ತಿನ ಚೀಟಿ, ಪಾಸ್ ಪೋರ್ಟ್, ಸರ್ಕಾರ ನೀಡಿರುವ ಗುರ್ತಿನ ಚೀಟಿ, ಗೆಜೆಟೆಡ್ ಅಧಿಕಾರಿಗಳು ದೃಢೀಕರಿಸಿರುವ ಗುರ್ತಿನ ದಾಖಲೆ)
4. ಕೊನೆಯದಾಗಿ, ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಮೇಲ್ಕಂಡ ದಾಖಲೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಅವಶ್ಯಕ ನೋಂದಣಿ ಶುಲ್ಕವನ್ನು ಪಾವತಿಸಿರಿ.
ಒಂದು ಭೂಮಿ ಅಥವಾ ಮನೆಯನ್ನು ಖರೀದಿಸುವಾಗ ಪರಿಗಣಿಸಬೇಕಾದ ಅತ್ಯಂತ ನಿರ್ಣಾಯಕ ಅಂಶಗಳನ್ನು, ಇವುಗಳನ್ನು ತಿಳಿಯುವುದು:
ಆಸ್ತಿಯ ಬೆಲೆ ನ್ಯಾಯಯುತವಾಗಿದೆಯೇ
ಭಾರತದ ಸಂವಿಧಾನದ ಪ್ರಕಾರ ಭೂಮಿ ಮತ್ತು ಆಸ್ತಿ ರಾಜ್ಯದ ವಿಷಯಗಳ ಅಡಿಯಲ್ಲಿ ಬರುವುದರಿಂದ, ಆಸ್ತಿ ಇರುವ ರಾಜ್ಯವನ್ನು ಅವಲಂಬಿಸಿ ಕಾನೂನುಗಳು ಮತ್ತು ವಹಿವಾಟಿನ ನಿಯಮಗಳು ಬದಲಾಗುತ್ತವೆ.
ಆಸ್ತಿ ಇರುವ ಸ್ಥಳ ಮತ್ತು ನಿರ್ಮಾಣದ ಸ್ವರೂಪವನ್ನು ಅವಲಂಬಿಸಿ (ಅನ್ವಯಿಸಿದರೆ), ವಿವಿಧ ರಾಜ್ಯಗಳು ಆಸ್ತಿಗೆ ಕನಿಷ್ಠ ಮೂಲ ಬೆಲೆಯನ್ನು ನಿರ್ಧರಿಸುವ ವ್ಯವಸ್ಥೆಯನ್ನು ಪರಿಚಯಿಸಿವೆ, ಇದನ್ನು ‘ಸರ್ಕಲ್ ದರ’ ಅಥವಾ ‘ಸಿದ್ಧ ರೆಕನರ್ ದರ’ ಎಂದು ಕರೆಯಲಾಗುತ್ತದೆ. ಈ ಸರ್ಕಲ್ ದರಗಳು ಊಹಾತ್ಮಕವಾಗಿವೆ ಮತ್ತು ಒಂದೇ ನಗರದೊಳಗೆ- ಒಂದು ಪ್ರದೇಶದಿಂದ ಇನ್ನೊಂದಕ್ಕೆ- ಮತ್ತು ಆಗಾಗ್ಗೆ ನವೀಕರಿಸಲಾಗುತ್ತದೆ ಮತ್ತು ಸೂಚಿಸಲ್ಪಡುತ್ತವೆ. ಸ್ಥಳ-ಆಧಾರಿತ ಸರ್ಕಲ್ ದರಗಳ ಜೊತೆಗೆ, ಆಸ್ತಿಯ ಮೌಲ್ಯವು ಅದು ಹೊಂದಿರುವ ಸೇವೆಗಳು ಮತ್ತು ಬಿಲ್ಡರ್/ಹೌಸಿಂಗ್ ಸೊಸೈಟಿಯಿಂದ ಪ್ರಭಾವಿತವಾಗಿರುತ್ತದೆ. ಆದಾಗ್ಯೂ, ಈ ಸರ್ಕಲ್ ದರಗಳು ಕೇವಲ ಸೂಚಕವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ಆಧರಿಸಿ ನಿಜವಾದ ಬೆಲೆ ಬದಲಾಗಬಹುದು, ಇದನ್ನು ನ್ಯಾಯೋಚಿತ ಮಾರುಕಟ್ಟೆ ಮೌಲ್ಯ ಎಂದು ಕರೆಯಲಾಗುವುದು
ಆಸ್ತಿಯ ಮಾಲೀಕತ್ವವು ವಿವಾದಗಳಿಂದ ಮುಕ್ತವಾಗಿದೆಯೇ
ನೀವು ಖರೀದಿಸಲು ಬಯಸುವ ಆಸ್ತಿಯ ಮಾಲೀಕತ್ವವು ವಿವಾದಾಸ್ಪದವಾಗಿದೆಯೇ ಎಂದು ನೀವು ಕಂಡುಹಿಡಿಯುವ ವಿವಿಧ ವಿಧಾನಗಳಿವೆ. ಪ್ರಶ್ನೆಯಲ್ಲಿರುವ ಆಸ್ತಿಯ ಹಕ್ಕು ಪತ್ರಗಳನ್ನು ಪರಿಶೀಲಿಸುವುದು ಸರಳವಾದ ಮಾರ್ಗವಾಗಿದೆ. ನೀವು ಸ್ಥಳೀಯ ತಹಸೀಲ್ದಾರ್ ಕಚೇರಿ ಅಥವಾ ಆಸ್ತಿ ಇರುವ ಗ್ರಾಮ ಅಧಿಕಾರಿಯೊಂದಿಗೆ ಸಹ ವಿಚಾರಿಸಬಹುದು. ಹಕ್ಕುಗಳ ಇ-ದಾಖಲೆ, ಆಸ್ತಿ ತೆರಿಗೆ ರಸೀದಿಗಳು ಮತ್ತು ಸಮೀಕ್ಷೆ ದಾಖಲೆಗಳಂತಹ ಇತರ ದಾಖಲೆಗಳನ್ನು ಸಹ ಮಾಲೀಕತ್ವವನ್ನು ಸ್ಥಾಪಿಸಲು ಬಳಸಲಾಗುತ್ತದೆ.
ಬಾಡಿಗೆ ಪಾವತಿಸುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಡಿ.
ಬಾಡಿಗೆ ಜಮಾ ಮಾಡುವುದು
ಭೋಗ್ಯದ ಒಪ್ಪಂದಗಳಲ್ಲಿ ಕಾನೂನು ಪ್ರಕಾರ ನೀವು ಪ್ರತಿತಿಂಗಳ 15 ನೇ ತಾರೀಖಿನೊಳಗೆ ಬಾಡಿಗೆಯನ್ನು ಸಂದಾಯ ಮಾಡತಕ್ಕದ್ದು. ಆದರೆ, ಈ ನಿಯಮ ಅನುಮತಿ ಮತ್ತು ಪರವಾನಗಿ ಒಪ್ಪಂದಗಳಲ್ಲಿ ಅನ್ವಯಿಸುವುದಿಲ್ಲ.
ನೀವು ಸಾಮಾನ್ಯವಾಗಿ ಮುಂದಿನ ತಿಂಗಳಿನ ಅವಧಿಗೆ ಬಾಡಿಗೆ ಸಂದಾಯ ಮಾಡುತ್ತೀರಿ. ಉದಾಹರಣೆಗೆ, ನೀವು ಜೂನ್ 15 ರಂದು ಬಾಡಿಗೆ ಸಂದಾಯ ಮಾಡಿದಲ್ಲಿ ಈ ಮೊತ್ತವು ಜೂನ್ 15 ರಿಂದ ಜುಲೈ 15ರ ಅವಧಿಗೆ ಬಾಡಿಗೆ ಎಂದು ಪರಿಗಣಿಸಲ್ಪಡುತ್ತದೆ. ಬಾಡಿಗೆ ನೀಡಬೇಕಾದ ದಿನಾಂಕವನ್ನು ಬಾಡಿಗೆ/ಪರವಾನಗಿ ಒಪ್ಪಂದದಲ್ಲಿ ನಮೂದಿಸಲಾಗಿರುತ್ತದೆ. ಬಾಡಿಗೆ ಪಾವತಿ ಮಾಡಿದ ಸಲುವಾಗಿ ದಾಖಲೆಗಳನ್ನು ಹೊಂದುವ ಸಲುವಾಗಿ ನೀವು ಬಾಡಿಗೆಯನ್ನು ಚೆಕ್ ಮೂಲಕ ಅಥವಾ ಆನ್ ಲೈನ್ ಮೂಲಕ ಪಾವತಿ ಮಾಡುವುದು ಸೂಕ್ತ. ನಗದು ರೂಪದಲ್ಲಿ ಬಾಡಿಗೆ ನೀಡಿದ ಪಕ್ಷದಲ್ಲಿ ರಸೀದಿಯನ್ನು ನೀಡುವಂತೆ ಮಾಲೀಕರನ್ನು ಒತ್ತಾಯಿಸಿ. ಚೆಕ್ ಮೂಲಕ ಅಥವಾ ಆನ್ ಲೈನ್ ವರ್ಗಾವಣೆ ಮೂಲಕ ಬಾಡಿಗೆ ಪಾವತಿಸಿದಾಗ ನಿಮಗೆ ದೊರೆಯುವ ದಾಖಲೆ ಮತ್ತು ಮಾಲೀಕರ ಖುದ್ದಾಗಿ ನೀಡುವ ರಸೀದಿಗೂ ವ್ಯತ್ಯಾಸವಿದೆ. ಮಾಲೀಕ ನೀಡಿದ ರಸೀದಿಯನ್ನು ನೀವು ತೆರಿಗೆ ಪಾವತಿಸಲು ಮತ್ತು ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರವಾಗಿ ಬಳಸಲು ಸಾಧ್ಯ.
ಬಾಡಿಗೆ ಹೆಚ್ಚು ಮಾಡುವುದು
ಬಾಡಿಗೆ ಒಪ್ಪಂದದ ಅವಧಿ ಮುಗಿದ ನಂತರ ಬಾಡಿಗೆಯನ್ನು ಹೆಚ್ಚುಮಾಡುವ ಕುರಿತು – ಶೇಕಡಾವಾರು ಹೆಚ್ಚಳ – ಸಂಬಂಧಿಸಿದಂತೆ ನಿಮ್ಮ ಒಪ್ಪಂದದಲ್ಲಿ ನಮೂದು ಮಾಡಲಾಗಿರುತ್ತದೆ. ನಿಮ್ಮ ನಗರದಲ್ಲಿ ಈ ಸಂಬಂಧ ಜಾರಿ ಇರುವ ಪದ್ದತಿ ಶೇಕಡಾವಾರು ಹೆಚ್ಚಳ ಕುರಿತು ಮಾಹಿತಿ ಪಡೆದುಕೊಳ್ಳಿ. ಇದರಿಂದ ನೀವು ತೆರುವ ಹೆಚ್ಚುವರಿ ಬಾಡಿಗೆ ಸೂಕ್ತವೇ ಎಂದು ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಮಾಲೀಕರು ಒಪ್ಪಂದದ ಅವಧಿ ಮುಗಿದ ನಂತರ ಮಾತ್ರ ಬಾಡಿಗೆಯನ್ನು ಹೆಚ್ಚಿಸಬಹುದಾಗಿದೆ.
18+ ವಯಸ್ಸಿನ ಭಾರತದ ಯಾವುದೇ ನಾಗರಿಕರು ದೇಶದಲ್ಲಿ ಆಸ್ತಿಯನ್ನು ಖರೀದಿಸಲು ಅರ್ಹರಾಗಿರುತ್ತಾರೆ. ಆದಾಗ್ಯೂ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಈಶಾನ್ಯ ರಾಜ್ಯಗಳಾದ ಅಸ್ಸಾಂ, ನಾಗಾಲ್ಯಾಂಡ್, ಸಿಕ್ಕಿಂ ಮುಂತಾದ ಕೆಲವು ರಾಜ್ಯಗಳು ರೈತರಲ್ಲದವರು ಕೃಷಿ ಭೂಮಿಯನ್ನು ಖರೀದಿಸುವುದನ್ನು ನಿರ್ಬಂಧಿಸುತ್ತವೆ. ಭಾರತೀಯ ಕಾನೂನಿನ ಅಡಿಯಲ್ಲಿ, ಹುಟ್ಟಲಿರುವ ವ್ಯಕ್ತಿಯು ಸ್ಥಿರ ಆಸ್ತಿಯನ್ನು ಸಹ ಪಡೆಯಬಹುದು.ನೀವು ಅನಿವಾಸಿ ಭಾರತೀಯರಾಗಿದ್ದರೆ (NRI) ಅಥವಾ ಭಾರತೀಯ ಮೂಲದ ವ್ಯಕ್ತಿ (PIO), ನೀವು
ಭಾರತದಲ್ಲಿ ಎಲ್ಲಿಯೂ ಕೃಷಿ ಭೂಮಿ/ತೋಟದ ಆಸ್ತಿ ಅಥವಾ ಫಾರ್ಮ್‌ಹೌಸ್ ಅನ್ನು ಖರೀದಿಸಲು ಸಾಧ್ಯವಿಲ್ಲ, ಆದರೆ ವಸತಿ ಆಸ್ತಿಗಳಿಗೆ ಬಂದಾಗ ಅಂತಹ ಯಾವುದೇ ನಿರ್ಬಂಧವಿಲ್ಲ. ಆದಾಗ್ಯೂ, ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ವಿಶೇಷ ಅನುಮತಿಯನ್ನು ಪಡೆದ ನಂತರ ನೀವು ನಿವಾಸಿ ಭಾರತೀಯ ಅಥವಾ ಇತರ NRIs/PIOs ಗಳಿಂದ ಅಂತಹ ಭೂಮಿಯನ್ನು ಆನುವಂಶಿಕವಾಗಿ ಪಡೆಯಬಹುದು.
ವ್ಯಕ್ತಿಗಳು ಮತ್ತು ಕಂಪನಿಗಳು ಸಹ ಸ್ಥಿರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು ಮತ್ತು ಇದನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ, 1999 ಮತ್ತು ಕಾಲಕಾಲಕ್ಕೆ RBI ಸೂಚಿಸುವ ವಿವಿಧ ಸುತ್ತೋಲೆಗಳಿಂದ ನಿಯಂತ್ರಿಸಲಾಗುತ್ತದೆ.
ಮಾಲೀಕರಾಗಲೀ ಅಥವಾ ಬಾಡಿಗೆದಾರರಾಗಲೀ ಅಥವಾ ಇಬ್ಬರೂ ಜೊತೆಯಾಗಿ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮನೆ ಅಥವಾ ಫ್ಲಾಟನ್ನು ಬಾಡಿಗೆಗೆ ಪಡೆಯುವಾಗ ಮಾಡಿಕೊಳ್ಳುವ ಒಪ್ಪಂದದ ಮೇಲೆ ವಿಧಿಸುವ ತೆರಿಗೆಯನ್ನು ಮುದ್ರಾಂಕ ಶುಲ್ಕ ಎಂದು ಕರೆಯಲಾಗುತ್ತದೆ. ಒಪ್ಪಂದವನ್ನು ನೋಂದಣಿ ಮಾಡುವ ಸಮಯದಲ್ಲಿ ಮುದ್ರಾಂಕ ಶುಲ್ಕವನ್ನು ತೆರಬೇಕಾಗುತ್ತದೆ.
ಆಸ್ತಿಯ ಸರ್ಕಲ್ ದರಗಳನ್ನು ಕಂಡುಹಿಡಿಯಲು, ನೀವು ಆಯಾ ರಾಜ್ಯ ಸರ್ಕಾರದ ವೆಬ್‌ಸೈಟ್‌ಗೆ ಹೋಗಬಹುದು (ಸಾಮಾನ್ಯವಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ). ಉದಾಹರಣೆಗೆ, ಕರ್ನಾಟಕದಲ್ಲಿ ಸರ್ಕಲ್ ದರಗಳನ್ನು ಹುಡುಕಲು, ನೀವು https://kaveri.karnataka.gov.in/landing-page ಗೆ ಭೇಟಿ ನೀಡಬಹುದು ಅಲ್ಲಿ ನಿಮ್ಮ ಆಸ್ತಿ ಇರುವ ಪ್ರದೇಶ, ಪತ್ರದ ಪ್ರಕಾರ, ಆಸ್ತಿಯ ಪ್ರಕಾರವನ್ನು ನೀವು ಆಯ್ಕೆ ಮಾಡಬೇಕು ಮತ್ತು ನಂತರ ವೃತ್ತದ ದರಗಳನ್ನು ಲೆಕ್ಕಾಚಾರ ಮಾಡಿ.
ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ಕಂಡುಹಿಡಿಯಲು, ಸರ್ಕಾರಿ ನೋಂದಾಯಿತ ಆಸ್ತಿ ಮೌಲ್ಯಮಾಪಕ ಅಥವಾ ಚಾರ್ಟರ್ಡ್ ಆಸ್ತಿ ಮೌಲ್ಯಮಾಪಕರನ್ನು ಸಂಪರ್ಕಿಸುವುದು ಒಂದು ವಿಧಾನವಾಗಿದೆ. ರಿಯಲ್ ಎಸ್ಟೇಟ್ ಮಾರುಕಟ್ಟೆಯ ಬದಲಾಗುತ್ತಿರುವ ಸ್ವಭಾವದಿಂದಾಗಿ ಆಸ್ತಿ ದರಗಳು ಹೆಚ್ಚು ಬದಲಾಗುತ್ತವೆ. ಸರ್ಕಲ್ ದರಗಳು ಮತ್ತು ನ್ಯಾಯೋಚಿತ ಮಾರುಕಟ್ಟೆ ಮೌಲ್ಯದಂತಹ ನಿಯತಾಂಕಗಳು ಆಸ್ತಿಯ ನ್ಯಾಯಯುತ ಬೆಲೆಯನ್ನು ನಿರ್ಧರಿಸಲು ವಿಶ್ವಾಸಾರ್ಹ ಮಾರ್ಗವಾಗಿದೆ.
ಮಾಲೀಕರ ಆಸ್ತಿಯನ್ನು ನೀವು ಬಾಡಿಗೆದಾರರಾಗಿ/ಪರವಾನಗಿ ಪಡೆದವರಾಗಿ ಅನುಭವಿಸುವ ಅವಧಿಗಾಗಿ ಮಾಲೀಕರು/ಪರವಾನಗಿ ನೀಡುವವರು ನಿಮ್ಮಿಂದ ಮುಂಗಡ ಠೇವಣಿಯನ್ನು ಪಡೆಯುತ್ತಾರೆ. ನೀವು ಫ್ಲಾಟನ್ನು ಖಾಲಿ ಮಾಡಿ ಮಾಲೀಕರಿಗೆ/ಪರವಾನಗಿ ನೀಡುವವರಿಗೆ ಬೀಗದ ಕೈಗಳನ್ನು ಹಿಂದಿರುಗಿಸುವ ಸಂದರ್ಭದಲ್ಲಿ ಈ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಮಾಲೀಕರು/ಪರವಾನಗಿ ನೀಡುವವರು ಮನೆಗೆ ಏನಾದರೂ ಹಾನಿಯಾಗಿದೆಯೇ ಎಂದು ಪರೀಕ್ಷಿಸುತ್ತಾರೆ.
ಮುಂಗಡ ಠೇವಣಿಯನ್ನು ನಿಗದಿಪಡಿಸುವುದು
ಮಾಲೀಕರು/ಪರವಾನಗಿ ನೀಡುವವರು ನಿಗದಿಪಡಿಸಬಹುದಾದ ಮುಂಗಡ ಠೇವಣಿ ಮೊತ್ತವನ್ನು ನಿರ್ಧರಿಸಲು/ನಿಯಂತ್ರಿಸಲು ಯಾವುದೇ ನಿರ್ದಿಷ್ಟ ಕಾನೂನು-ನಿಯಮಗಳು ಇಲ್ಲ. ರೂಢಿಯಲ್ಲಿ, ಬಾಡಿಗೆ ಒಪ್ಪಂದ ತಯಾರಿಸುವ ಸಂದರ್ಭದಲ್ಲಿ ಈ ಮೊತ್ತವನ್ನು ನಿಷ್ಕರ್ಷೆ ಮಾಡಲಾಗುತ್ತದೆ. ಮಾಲೀಕರು/ಪರವಾನಗಿ ನೀಡುವವರು ಈ ಕೆಳಕಂಡ ಉದ್ದೇಶಗಳಿಗಾಗಿ ಮುಂಗಡ ಠೇವಣಿಯನ್ನು ಪಡೆಯುತ್ತಾರೆ.
ನೀವು ಬಾಡಿಗೆಗೆ ಇರುವ ಅವಧಿಯಲ್ಲಿ ಮನೆಗೆ ಯಾವುದಾದರೂ ಹಾನಿಯಾಗಿದ್ದಲ್ಲಿ, ಅದರ ಸಂಬಂಧದ ವೆಚ್ಚವನ್ನು ವಸೂಲಿ ಮಾಡಿಕೊಳ್ಳಲು;
ನೀವು ಬಾಡಿಗೆ/ವಿದ್ಯುತ್/ನೀರು ಇತರೆ ಬಿಲ್ ಗಳನ್ನು ಪಾವತಿ ಮಾಡದಿದ್ದ ಪಕ್ಷದಲ್ಲಿ, ಆ ಮೊತ್ತವನ್ನು ವಸೂಲಿ ಮಾಡಿಕೊಳ್ಳಲು;
ಬಾಡಿಗೆದಾರರು/ಪರವಾನಗಿದಾರರು ಮನೆ ಖಾಲಿ ಮಾಡಲು ಒತ್ತಡ ಹೇರಲು.
ಮುಂಗಡ ಠೇವಣಿಯ ಮೊತ್ತ
ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಒಂದು ಅಥವಾ ಎರಡು ತಿಂಗಳುಗಳ ಬಾಡಿಗೆಯನ್ನು ಮುಂಗಡ ಠೇವಣಿಯಾಗಿ ಸ್ವೀಕರಿಸುವ ಪದ್ಧತಿಯಿದೆ. ಬೆಂಗಳೂರು ನಗರದಲ್ಲಿ 10 ತಿಂಗಳ ಬಾಡಿಗೆಯನ್ನು ಮುಂಗಡ ಠೇವಣಿಯಾಗಿ ಪಡೆಯಲಾಗುತ್ತದೆ.
ಕೆಲವು ಮಾಲೀಕರು/ಪರವಾನಗಿ ನೀಡುವವರು 11 ತಿಂಗಳ ಒಪ್ಪಂದ ಮುಗಿದ ನಂತರ ಬಾಡಿಗೆ ಹೆಚ್ಚಾಗುವ ಸಮಯದಲ್ಲಿ, ಹೆಚ್ಚಿನ ಮುಂಗಡ ಠೇವಣಿಯ ಮೊತ್ತಕ್ಕೆ ಬೇಡಿಕೆ ಇಡುತ್ತಾರೆ.
ಈ ಮೊತ್ತವನ್ನು ನಿಯಂತ್ರಿಸುವ ಯಾವುದೇ ಕಾನೂನು ಜಾರಿಯಲ್ಲಿ ಇರದ ಕಾರಣ, ಮುಂಗಡ ಠೇವಣಿಯು ನಿಷ್ಕರ್ಷೆ ಮಾಡಲು ನಿಮ್ಮ ಸಾಮರ್ಥ್ಯ ಮತ್ತು ನಿಮ್ಮ ಹಾಗೂ ಮಾಲೀಕರು/ಪರವಾನಗಿ ನೀಡುವವರ ನಡುವಣ ಪರಸ್ಪರ ನಂಬಿಕೆಯನ್ನು ಅವಲಂಬಿಸಿದೆ.