ನಿಮ್ಮ ಜಮೀನುದಾರರು ನಿಮ್ಮ ಗುತ್ತಿಗೆಯ ಕೊನೆಯಲ್ಲಿ ನಿಮ್ಮ ಬಾಡಿಗೆಯನ್ನು ಹೆಚ್ಚಿಸಬಹುದು, ಆದರೆ ನಡುವೆ ಅಲ್ಲ. ಆದಾಗ್ಯೂ, ಇದು ತಿಂಗಳಿನಿಂದ ತಿಂಗಳ ಗುತ್ತಿಗೆಯಾಗಿದ್ದರೆ, ಮಾಲೀಕರು ಯಾವುದೇ ಹಂತದಲ್ಲಿ ನಿಮಗೆ ಸೂಚನೆಯನ್ನು ನೀಡಬಹುದು ಮತ್ತು ಮುಂದಿನ ತಿಂಗಳಿನಿಂದ ಬಾಡಿಗೆಯನ್ನು ಹೆಚ್ಚಿಸಬಹುದು.

ಬಾಡಿಗೆ ಪಾವತಿ

ಕೊನೆಯ ಅಪ್ಡೇಟ್ Jul 22, 2022

ಬಾಡಿಗೆ ಪಾವತಿಸುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಡಿ.

ಬಾಡಿಗೆ ಜಮಾ ಮಾಡುವುದು
ಭೋಗ್ಯದ ಒಪ್ಪಂದಗಳಲ್ಲಿ ಕಾನೂನು ಪ್ರಕಾರ ನೀವು ಪ್ರತಿತಿಂಗಳ 15 ನೇ ತಾರೀಖಿನೊಳಗೆ ಬಾಡಿಗೆಯನ್ನು ಸಂದಾಯ ಮಾಡತಕ್ಕದ್ದು. ಆದರೆ, ಈ ನಿಯಮ ಅನುಮತಿ ಮತ್ತು ಪರವಾನಗಿ ಒಪ್ಪಂದಗಳಲ್ಲಿ ಅನ್ವಯಿಸುವುದಿಲ್ಲ.

ನೀವು ಸಾಮಾನ್ಯವಾಗಿ ಮುಂದಿನ ತಿಂಗಳಿನ ಅವಧಿಗೆ ಬಾಡಿಗೆ ಸಂದಾಯ ಮಾಡುತ್ತೀರಿ. ಉದಾಹರಣೆಗೆ, ನೀವು ಜೂನ್ 15 ರಂದು ಬಾಡಿಗೆ ಸಂದಾಯ ಮಾಡಿದಲ್ಲಿ ಈ ಮೊತ್ತವು ಜೂನ್ 15 ರಿಂದ ಜುಲೈ 15ರ ಅವಧಿಗೆ ಬಾಡಿಗೆ ಎಂದು ಪರಿಗಣಿಸಲ್ಪಡುತ್ತದೆ. ಬಾಡಿಗೆ ನೀಡಬೇಕಾದ ದಿನಾಂಕವನ್ನು ಬಾಡಿಗೆ/ಪರವಾನಗಿ ಒಪ್ಪಂದದಲ್ಲಿ ನಮೂದಿಸಲಾಗಿರುತ್ತದೆ. ಬಾಡಿಗೆ ಪಾವತಿ ಮಾಡಿದ ಸಲುವಾಗಿ ದಾಖಲೆಗಳನ್ನು ಹೊಂದುವ ಸಲುವಾಗಿ ನೀವು ಬಾಡಿಗೆಯನ್ನು ಚೆಕ್ ಮೂಲಕ ಅಥವಾ ಆನ್ ಲೈನ್ ಮೂಲಕ ಪಾವತಿ ಮಾಡುವುದು ಸೂಕ್ತ. ನಗದು ರೂಪದಲ್ಲಿ ಬಾಡಿಗೆ ನೀಡಿದ ಪಕ್ಷದಲ್ಲಿ ರಸೀದಿಯನ್ನು ನೀಡುವಂತೆ ಮಾಲೀಕರನ್ನು ಒತ್ತಾಯಿಸಿ. ಚೆಕ್ ಮೂಲಕ ಅಥವಾ ಆನ್ ಲೈನ್ ವರ್ಗಾವಣೆ ಮೂಲಕ ಬಾಡಿಗೆ ಪಾವತಿಸಿದಾಗ ನಿಮಗೆ ದೊರೆಯುವ ದಾಖಲೆ ಮತ್ತು ಮಾಲೀಕರ ಖುದ್ದಾಗಿ ನೀಡುವ ರಸೀದಿಗೂ ವ್ಯತ್ಯಾಸವಿದೆ. ಮಾಲೀಕ ನೀಡಿದ ರಸೀದಿಯನ್ನು ನೀವು ತೆರಿಗೆ ಪಾವತಿಸಲು ಮತ್ತು ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರವಾಗಿ ಬಳಸಲು ಸಾಧ್ಯ.

ಬಾಡಿಗೆ ಹೆಚ್ಚು ಮಾಡುವುದು
ಬಾಡಿಗೆ ಒಪ್ಪಂದದ ಅವಧಿ ಮುಗಿದ ನಂತರ ಬಾಡಿಗೆಯನ್ನು ಹೆಚ್ಚುಮಾಡುವ ಕುರಿತು – ಶೇಕಡಾವಾರು ಹೆಚ್ಚಳ – ಸಂಬಂಧಿಸಿದಂತೆ ನಿಮ್ಮ ಒಪ್ಪಂದದಲ್ಲಿ ನಮೂದು ಮಾಡಲಾಗಿರುತ್ತದೆ. ನಿಮ್ಮ ನಗರದಲ್ಲಿ ಈ ಸಂಬಂಧ ಜಾರಿ ಇರುವ ಪದ್ದತಿ ಶೇಕಡಾವಾರು ಹೆಚ್ಚಳ ಕುರಿತು ಮಾಹಿತಿ ಪಡೆದುಕೊಳ್ಳಿ. ಇದರಿಂದ ನೀವು ತೆರುವ ಹೆಚ್ಚುವರಿ ಬಾಡಿಗೆ ಸೂಕ್ತವೇ ಎಂದು ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಮಾಲೀಕರು ಒಪ್ಪಂದದ ಅವಧಿ ಮುಗಿದ ನಂತರ ಮಾತ್ರ ಬಾಡಿಗೆಯನ್ನು ಹೆಚ್ಚಿಸಬಹುದಾಗಿದೆ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.