ಭೂಮಿ ಮತ್ತು ಸ್ಥಿರ ಆಸ್ತಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ವಿವಾದಗಳು ಯಾವುವು?

ಭೂಮಿಯನ್ನು ಪ್ರಮುಖ ಆಸ್ತಿಗಳಲ್ಲಿ ಒಂದೆಂದು ಪರಿಗಣಿಸಲಾಗಿರುವುದರಿಂದ, ಭೂಮಿಗೆ ಸಂಬಂಧಿಸಿದ ವಿವಾದಗಳ ವ್ಯಾಪ್ತಿಯು ದೊಡ್ಡದಾಗಿದೆ. ಆದಾಗ್ಯೂ, ಈ ವಿವರಣೆಯಲ್ಲಿ, ನಾವು ಹೆಚ್ಚು ಸಾಮಾನ್ಯ ರೀತಿಯ ವಿವಾದಗಳ ಮೇಲೆ ಕೇಂದ್ರೀಕರಿಸುತ್ತೇವೆ, ಅವುಗಳೆಂದರೆ:

  • ಉತ್ತರಾಧಿಕಾರ / ಪಿತ್ರಾರ್ಜಿತ ಹಕ್ಕುಗಳಿಗೆ ಸಂಬಂಧಪಟ್ಟ ವಿವಾದಗಳು  
  • ವಿಭಜನೆ ವಿವಾದಗಳು
  • ಭೂ ಮಾಪನ ವಿವಾದಗಳು
  • ಭೂ ಒತ್ತುವರಿ ಮತ್ತು ಗಡಿ ವಿವಾದಗಳು
  • ರೈಟ್ ಆಫ್ ವೇ ವಿವಾದಗಳು
  • ಭೂ ಮಾಲೀಕತ್ವದ ವಿವಾದಗಳು

 

ಯಾವ ಕಾನೂನುಗಳನ್ನು ವಿವರಿಸುತ್ತದೆ?

  • ಈ ವಿವರಣೆಯು ಭಾರತದಲ್ಲಿ ಸ್ಥಿರ ಆಸ್ತಿಯ ಖರೀದಿ ಮತ್ತು ಮಾರಾಟ ಮತ್ತು ಆಸ್ತಿಯ ಸ್ವಾಧೀನದ ವಿವಿಧ ವಿಧಾನಗಳ ಬಗ್ಗೆ   ತಿಳಿಸುತ್ತದೆ. ಇದು ಆಸ್ತಿ ವರ್ಗಾವಣೆ ಕಾಯಿದೆ, 1882 (“TP Act”) ಮೂಲಕ ನಿಯಂತ್ರಿಸಲ್ಪಡುತ್ತದೆ; ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ, 1999 (“FEMA”) ಮತ್ತು ವಿಷಯದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ FDI ಮಾಸ್ಟರ್ ಸುತ್ತೋಲೆ. ವಿವರಣೆಯು ಸ್ವತ್ತು ಮರು ಸ್ವಾಧೀನಪಡಿಸಿದ ಆಸ್ತಿಗಳ ಬಗ್ಗೆ ನಿರ್ದೇಶನ ನೀಡುವ ಗುರಿಯನ್ನು ಸಹಾ ಹೊಂದಿದೆ (ಆಸ್ತಿಯನ್ನು ಗೃಹ ಸಾಲ ಅಥವಾ ಅಡಮಾನಕ್ಕಾಗಿ ಮೇಲಾಧಾರವಾಗಿ ಇರಿಸಲಾಗಿತ್ತು ಆದರೆ ಮೂರು ಅಥವಾ ಹೆಚ್ಚಿನ ಸಮಾನ ಮಾಸಿಕ ಕಂತುಗಳನ್ನು (EMI ಗಳು) ಪಾವತಿಸದ ಕಾರಣ ಸಾಲದಾತರಿಂದ ಸ್ವಾಧೀನಪಡಿಸಿಕೊಳ್ಳಲಾಗಿತ್ತು), ಅದರ ಖರೀದಿ ಸೆಕ್ಯುರಿಟೈಸೇಶನ್ ಮತ್ತು ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಮತ್ತು ಎನ್‌ಫೋರ್ಸ್‌ಮೆಂಟ್ ಆಫ್ ಸೆಕ್ಯುರಿಟೀಸ್ ಇಂಟರೆಸ್ಟ್ ಆಕ್ಟ್, 2002 (“SARFAESI ಆಕ್ಟ್”) ನಿಂದ ನಿಯಂತ್ರಿಸಲ್ಪಡುತ್ತದೆ.

ಉಯಿಲು ಮಾಡುವುದು

ನೀವು ನಿಮ್ಮ ಜೀವಿತಾವಧಿಯ ಯಾವುದೇ ಸಮಯದಲ್ಲಿಯೂ ಉಯಿಲು ಮಾಡಬಹುದು. ಅದಕ್ಕೆ :

ಸ್ವಸ್ಥ ಮಾನಸಿಕ ಆರೋಗ್ಯ ಹೊಂದಿರುವ ವ್ಯಕ್ತಿಯಾಗಿರಬೇಕು , ಮತ್ತು
18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು .
ಉಯಿಲು ಮಾಡುವ ವ್ಯಕ್ತಿಗೆ ತಾನು ಏನು ಮಾಡುತ್ತಿದ್ದೇನೆಂಬ ಅರಿವಿರಬೇಕು.

ದೃಷ್ಟಾಂತವಾಗಿ, ಮಾನಸಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಯು ತಾನು ಏನು ಮಾಡುತ್ತಿದ್ದಾನೆ ಎಂಬ ಅರಿವು ಇದ್ದಾಗ ಸಹ ವಿಲ್ ಮಾಡಬಹುದು. ಒಬ್ಬ ವ್ಯಕ್ತಿಯು ಮದ್ಯದ ಪ್ರಭಾವಕ್ಕೆ ಒಳಗಾಗಿದ್ದರೆ ಮತ್ತು ಅವರು ಏನು ಮಾಡುತ್ತಿದ್ದಾರೆಂದು ತಿಳಿದಿಲ್ಲದಿದ್ದರೆ, ಅವರು ಉಯಿಲು ಮಾಡಲು ಸಾಧ್ಯವಿಲ್ಲ.

ಆನ್ ಲೈನ್ ಬ್ಯಾಂಕ್ ವಂಚನೆಯಿಂದ ಸುರಕ್ಷಿತವಾಗಿರಲು ಗ್ರಾಹಕರು ಹೊಂದಿರುವ ಹಕ್ಕು

ಆನ್ ಲೈನ್ ಬ್ಯಾಂಕ್ ವಂಚನೆಯಿಂದ ರಕ್ಷಿಸಿಕೊಳ್ಳಲು ಯಾವುದೇ ಬ್ಯಾಂಕಿನ ಗ್ರಾಹಕರು ಈ ಕೆಳಕಂಡ ಹಕ್ಕುಗಳನ್ನು ಹೊಂದಿರುತ್ತಾರೆ.

  • ನಿಮ್ಮ ಬ್ಯಾಂಕ್ ಖಾತೆ ಮೂಲಕ ಜರುಗುವ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಎಸ್ಎಂಎಸ್ ಪಡೆಯಲು ಮತ್ತು ಈ ಉದ್ದೇಶಕ್ಕಾಗಿ ರಿಜಿಸ್ಟರ್ ಮಾಡಿಕೊಳ್ಳುವ ಹಕ್ಕು.

 

  • ನಿಮ್ಮ ಬ್ಯಾಂಕ್ ಖಾತೆ ಮೂಲಕ ಜರುಗುವ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಇ-ಮೇಲ್ ಅಲರ್ಟ್ ಪಡೆಯಲು ಮತ್ತು ಈ ಉದ್ದೇಶಕ್ಕಾಗಿ ರಿಜಿಸ್ಟರ್ ಮಾಡಿಕೊಳ್ಳುವ ಹಕ್ಕು.

ಉಯಿಲು ಮಾಡುವುದು

ನೀವು ನಿಮ್ಮ ಜೀವಿತಾವಧಿಯ ಯಾವುದೇ ಸಮಯದಲ್ಲಿಯೂ ಉಯಿಲು ಮಾಡಬಹುದು. ಅದಕ್ಕೆ : ಸ್ವಸ್ಥ ಮಾನಸಿಕ ಆರೋಗ್ಯ ಹೊಂದಿರುವ ವ್ಯಕ್ತಿಯಾಗಿರಬೇಕು , ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು . ಉಯಿಲು ಮಾಡುವ ವ್ಯಕ್ತಿಗೆ ತಾನು ಏನು ಮಾಡುತ್ತಿದ್ದೇನೆಂಬ ಅರಿವಿರಬೇಕು. ದೃಷ್ಟಾಂತವಾಗಿ, ಮಾನಸಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಯು ತಾನು ಏನು ಮಾಡುತ್ತಿದ್ದಾನೆ ಎಂಬ ಅರಿವು ಇದ್ದಾಗ ಸಹ ವಿಲ್ ಮಾಡಬಹುದು. ಒಬ್ಬ ವ್ಯಕ್ತಿಯು ಮದ್ಯದ ಪ್ರಭಾವಕ್ಕೆ ಒಳಗಾಗಿದ್ದರೆ ಮತ್ತು ಅವರು ಏನು ಮಾಡುತ್ತಿದ್ದಾರೆಂದು ತಿಳಿದಿಲ್ಲದಿದ್ದರೆ, ಅವರು ಉಯಿಲು ಮಾಡಲು ಸಾಧ್ಯವಿಲ್ಲ.

ಚೆಕ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಚೆಕ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ. ಚೆಕ್ ಎನ್ನುವುದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಲಿಖಿತವಾಗಿ ನಿಗದಿತ ಮೊತ್ತದ ಹಣವನ್ನು ಯಾವುದೇ ಷರತ್ತುಗಳಿಲ್ಲದೆ ಪಾವತಿಸುವ ಭರವಸೆಯಾಗಿದೆ. ಆದರೂ, ನೀವೇ ಚೆಕ್ ಅನ್ನು ಸ್ವಂತಕ್ಕೆ ಕೂಡಾ ಬರೆದುಕೊಳ್ಳಬಹುದು. ಉದಾಹರಣೆಗೆ, ಅಮಿತ್ ಆಶಾಗೆ ರೂ. 10,000 ಕೊಡಬೇಕಾದಲ್ಲಿ, ಅವರು ಆಶಾಗೆ ರೂ. 10000 ಚೆಕ್ ನೀಡಬಹುದು. ಆಶಾ ಈ ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದಾಗ, ಅವರಿಗೆ ರೂ. 10,000 ನಗದಿನ ರೂಪದಲ್ಲಿ ಕೊಡಲಾಗುತ್ತದೆ ಅಥವಾ ಆಕೆಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಅಮಿತ್ ಖಾತೆಯಿಂದ ರೂ. 10,000 ಕಡಿತಗೊಳಿಸಲಾಗುತ್ತದೆ.

ತಾಂತ್ರಿಕ ಪರಿಭಾಷೆಯಲ್ಲಿ, ಬ್ಯಾಂಕರ್‌ಗಳು ಮತ್ತು ವಕೀಲರು ಬಳಸುವಂತೆ, ಚೆಕ್ ಅನ್ನು ‘ನೆಗೋಷಿಯೇಬಲ್ ಉಪಕರಣ’ ಅಥವಾ ಅದರ ಒಂದು ಬಗೆ ಎಂದು ಉಲ್ಲೇಖಿಸಲಾಗುತ್ತದೆ.

ಚೆಕ್‌ನೊಂದಿಗೆ ವ್ಯವಹರಿಸುವಾಗ ಒಳಗೊಂಡಿರುವ ವಿವಿಧ ವ್ಯಕ್ತಿಗಳು:

  • ಚೆಕ್ ನೀಡುವವರು (ಡ್ರಾಯರ್)
  • ಚೆಕ್‌ನ ಪಾವತಿದಾರ/ ಹೊಂದಿರುವವರು ಮತ್ತು
  • ಬ್ಯಾಂಕ್ (ಡ್ರಾಯೀ)

ಗ್ರಾಹಕರು ಎಂದರೆ ಯಾರು?

ಗ್ರಾಹಕರು ಸರಕು ಅಥವಾ ಸೇವೆಗಳನ್ನು ಖರೀದಿಸುವ ಮತ್ತು ಬಳಸುವ ಜನರು. ಗ್ರಾಹಕರು ಅವರು ಬಳಸುವ ಯಾವುದೇ ಸೇವೆಗಳು ಅಥವಾ ಸರಕುಗಳಿಗೆ ದೂರು ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ:

ಸರಕು ಮತ್ತು ಸೇವೆಗಳನ್ನು ಖರೀದಿಸುವ ಮತ್ತು ಬಳಸುವ ವ್ಯಕ್ತಿ

ಗ್ರಾಹಕರು ಎಂದರೆ ಸರಕು ಮತ್ತು ಸೇವೆಗಳನ್ನು ಖರೀದಿಸುವ ಮತ್ತು ಅವುಗಳನ್ನು ಬಳಸುವ ಯಾವುದೇ ವ್ಯಕ್ತಿ. ಉದಾಹರಣೆಗೆ, ಚಲನಚಿತ್ರ ಟಿಕೆಟ್ ಖರೀದಿಸಿದ ನಂತರ ಚಲನಚಿತ್ರವನ್ನು ವೀಕ್ಷಿಸುವ ವ್ಯಕ್ತಿಯು ಗ್ರಾಹಕನಾಗಿರುತ್ತಾರೆ ಮತ್ತು ಅದೇ ರೀತಿ, ಬೇರೆಯವರಿಂದ ಉಡುಗೊರೆಯಾಗಿ ನೀಡಿದ ಉಡುಗೊರೆ ಚೀಟಿ (gift voucher) ಯನ್ನು ಬಳಸುವ ವ್ಯಕ್ತಿಯು ಸಹ ಗ್ರಾಹಕನಾಗಿರುತ್ತಾರೆ.

ಸ್ವಯಂ ಉದ್ಯೋಗಕ್ಕಾಗಿ ಸರಕುಗಳ ಬಳಕೆ, ವಾಣಿಜ್ಯ ಉದ್ದೇಶಗಳಿಗಾಗಿ ಅಲ್ಲ

ವಾಣಿಜ್ಯ ಉದ್ದೇಶಗಳಿಗಾಗಿ ಸರಕು ಮತ್ತು ಸೇವೆಗಳನ್ನು ಬಳಸುವ ಜನರಿಗೆ ಗ್ರಾಹಕ ಸಂರಕ್ಷಣಾ ಕಾನೂನು ಅನ್ವಯಿಸುವುದಿಲ್ಲ. ಆದಾಗ್ಯೂ, ಇದಕ್ಕೆ ಕೆಲವು ಅಪವಾದಗಳಿವೆ. ಉದಾಹರಣೆಗೆ, ತಮ್ಮ ವ್ಯಾಪಾರದಲ್ಲಿ ಬಳಸುವುದಕ್ಕಾಗಿ ದೊಡ್ಡ ಯಂತ್ರಗಳನ್ನು ಖರೀದಿಸುವ ವ್ಯಕ್ತಿಯು ‘ಗ್ರಾಹಕ’ ಅಲ್ಲ. ಆದಾಗ್ಯೂ, ಸ್ವಯಂ ಉದ್ಯೋಗಕ್ಕಾಗಿ ಸರಕುಗಳನ್ನು ಬಳಸುವ ಜನರನ್ನು ಗ್ರಾಹಕರು ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ತಮ್ಮ ಕೆಲಸಕ್ಕಾಗಿ ಕಲಾ ಸಾಮಗ್ರಿಗಳನ್ನು ಖರೀದಿಸುವ ಕಲಾವಿದರು ಅಥವಾ ಸೌಂದರ್ಯವರ್ಧಕ ಉತ್ಪನ್ನಗಳನ್ನು ಖರೀದಿಸುವ ಸೌಂದರ್ಯವರ್ಧಕರು (beauticians) ಗ್ರಾಹಕರು.

ಆನ್‌ಲೈನ್ ಸೌಲಭ್ಯಗಳನ್ನು ಬಳಸುವ ವ್ಯಕ್ತಿ

‘ಗ್ರಾಹಕ’ ಎಂದರೆ ಆನ್‌ಲೈನ್‌ನಲ್ಲಿ ಸರಕುಗಳು ಅಥವಾ ಸೇವೆಗಳನ್ನು ಖರೀದಿಸುವ ಅಥವಾ ಬಾಡಿಗೆಗೆ ಪಡೆಯುವ ಯಾವುದೇ ವ್ಯಕ್ತಿಯನ್ನು ಸಹ ಒಳಗೊಂಡಿರುತ್ತದೆ. ಉದಾಹರಣೆಗೆ, ನೀವು ಆನ್‌ಲೈನ್ ಬಟ್ಟೆ ವೆಬ್‌ಸೈಟ್‌ನಿಂದ ಆರ್ಡರ್ ಮಾಡಿದರೆ, ನೀವು ಗ್ರಾಹಕರು.

ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು

ಕಲಬೆರಕೆ, ಕಳಪೆ ಗುಣಮಟ್ಟ, ಸೇವೆಯ ಕೊರತೆ ಇತ್ಯಾದಿಗಳಂತಹ ಆಹಾರ ಪದಾರ್ಥಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರನ್ನು ಸಹ ಗ್ರಾಹಕರು ಒಳಗೊಂಡಿರುತ್ತಾರೆ. ಉದಾಹರಣೆಗೆ, ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಜ್ಯೂಸ್‌ಗಳಂತಹ ವಸ್ತುಗಳ ಉತ್ಪಾದನೆಗೆ ಹೋಗುವ ನೀರಿನಿಂದ ಪ್ರಾರಂಭವಾಗುವ ಜೊತೆಗೆ ಮಾನವನ ಬಳಕೆಗಾಗಿ ಸ್ಪಷ್ಟವಾಗಿ ಉದ್ದೇಶಿಸಿರುವ ಕೋಳಿ, ಕುರಿಮರಿ ಇತ್ಯಾದಿ ಪ್ರಾಣಿಗಳ ಮಾರಾಟದಿಂದ ಪ್ರಾರಂಭವಾಗುವ ಉತ್ಪನ್ನಗಳಾದ್ಯಂತ ಸಮಸ್ಯೆಗಳನ್ನು ಒಳಗೊಳ್ಳಬಹುದು.