ಭೂಅತಿಕ್ರಮಣ- ಕಾನೂನು ಕ್ರಮ

ಭೂಅತಿಕ್ರಮಣ ಆದಾಗ ನಾವು ಕಾನೂನಿನಡಿಯಲ್ಲಿ ಏನು ಮಾಡಬಹುದು ಎಂದು ಇಲ್ಲಿ ತಿಳಿಯಿರಿ.

Learn here what we can do under the law when land encroachment occurs.

ಭೂಮಿ ಮತ್ತು ಸ್ಥಿರ ಆಸ್ತಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ವಿವಾದಗಳು ಯಾವುವು?

ಭೂಮಿಯನ್ನು ಪ್ರಮುಖ ಆಸ್ತಿಗಳಲ್ಲಿ ಒಂದೆಂದು ಪರಿಗಣಿಸಲಾಗಿರುವುದರಿಂದ, ಭೂಮಿಗೆ ಸಂಬಂಧಿಸಿದ ವಿವಾದಗಳ ವ್ಯಾಪ್ತಿಯು ದೊಡ್ಡದಾಗಿದೆ. ಆದಾಗ್ಯೂ, ಈ ವಿವರಣೆಯಲ್ಲಿ, ನಾವು ಹೆಚ್ಚು ಸಾಮಾನ್ಯ ರೀತಿಯ ವಿವಾದಗಳ ಮೇಲೆ ಕೇಂದ್ರೀಕರಿಸುತ್ತೇವೆ, ಅವುಗಳೆಂದರೆ:

  • ಉತ್ತರಾಧಿಕಾರ / ಪಿತ್ರಾರ್ಜಿತ ಹಕ್ಕುಗಳಿಗೆ ಸಂಬಂಧಪಟ್ಟ ವಿವಾದಗಳು  
  • ವಿಭಜನೆ ವಿವಾದಗಳು
  • ಭೂ ಮಾಪನ ವಿವಾದಗಳು
  • ಭೂ ಒತ್ತುವರಿ ಮತ್ತು ಗಡಿ ವಿವಾದಗಳು
  • ರೈಟ್ ಆಫ್ ವೇ ವಿವಾದಗಳು
  • ಭೂ ಮಾಲೀಕತ್ವದ ವಿವಾದಗಳು

 

ಯಾವ ಕಾನೂನುಗಳನ್ನು ವಿವರಿಸುತ್ತದೆ?

  • ಈ ವಿವರಣೆಯು ಭಾರತದಲ್ಲಿ ಸ್ಥಿರ ಆಸ್ತಿಯ ಖರೀದಿ ಮತ್ತು ಮಾರಾಟ ಮತ್ತು ಆಸ್ತಿಯ ಸ್ವಾಧೀನದ ವಿವಿಧ ವಿಧಾನಗಳ ಬಗ್ಗೆ   ತಿಳಿಸುತ್ತದೆ. ಇದು ಆಸ್ತಿ ವರ್ಗಾವಣೆ ಕಾಯಿದೆ, 1882 (“TP Act”) ಮೂಲಕ ನಿಯಂತ್ರಿಸಲ್ಪಡುತ್ತದೆ; ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ, 1999 (“FEMA”) ಮತ್ತು ವಿಷಯದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ FDI ಮಾಸ್ಟರ್ ಸುತ್ತೋಲೆ. ವಿವರಣೆಯು ಸ್ವತ್ತು ಮರು ಸ್ವಾಧೀನಪಡಿಸಿದ ಆಸ್ತಿಗಳ ಬಗ್ಗೆ ನಿರ್ದೇಶನ ನೀಡುವ ಗುರಿಯನ್ನು ಸಹಾ ಹೊಂದಿದೆ (ಆಸ್ತಿಯನ್ನು ಗೃಹ ಸಾಲ ಅಥವಾ ಅಡಮಾನಕ್ಕಾಗಿ ಮೇಲಾಧಾರವಾಗಿ ಇರಿಸಲಾಗಿತ್ತು ಆದರೆ ಮೂರು ಅಥವಾ ಹೆಚ್ಚಿನ ಸಮಾನ ಮಾಸಿಕ ಕಂತುಗಳನ್ನು (EMI ಗಳು) ಪಾವತಿಸದ ಕಾರಣ ಸಾಲದಾತರಿಂದ ಸ್ವಾಧೀನಪಡಿಸಿಕೊಳ್ಳಲಾಗಿತ್ತು), ಅದರ ಖರೀದಿ ಸೆಕ್ಯುರಿಟೈಸೇಶನ್ ಮತ್ತು ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಮತ್ತು ಎನ್‌ಫೋರ್ಸ್‌ಮೆಂಟ್ ಆಫ್ ಸೆಕ್ಯುರಿಟೀಸ್ ಇಂಟರೆಸ್ಟ್ ಆಕ್ಟ್, 2002 (“SARFAESI ಆಕ್ಟ್”) ನಿಂದ ನಿಯಂತ್ರಿಸಲ್ಪಡುತ್ತದೆ.

ಉಯಿಲು ಮಾಡುವುದು

ನೀವು ನಿಮ್ಮ ಜೀವಿತಾವಧಿಯ ಯಾವುದೇ ಸಮಯದಲ್ಲಿಯೂ ಉಯಿಲು ಮಾಡಬಹುದು. ಅದಕ್ಕೆ :

ಸ್ವಸ್ಥ ಮಾನಸಿಕ ಆರೋಗ್ಯ ಹೊಂದಿರುವ ವ್ಯಕ್ತಿಯಾಗಿರಬೇಕು , ಮತ್ತು
18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು .
ಉಯಿಲು ಮಾಡುವ ವ್ಯಕ್ತಿಗೆ ತಾನು ಏನು ಮಾಡುತ್ತಿದ್ದೇನೆಂಬ ಅರಿವಿರಬೇಕು.

ದೃಷ್ಟಾಂತವಾಗಿ, ಮಾನಸಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಯು ತಾನು ಏನು ಮಾಡುತ್ತಿದ್ದಾನೆ ಎಂಬ ಅರಿವು ಇದ್ದಾಗ ಸಹ ವಿಲ್ ಮಾಡಬಹುದು. ಒಬ್ಬ ವ್ಯಕ್ತಿಯು ಮದ್ಯದ ಪ್ರಭಾವಕ್ಕೆ ಒಳಗಾಗಿದ್ದರೆ ಮತ್ತು ಅವರು ಏನು ಮಾಡುತ್ತಿದ್ದಾರೆಂದು ತಿಳಿದಿಲ್ಲದಿದ್ದರೆ, ಅವರು ಉಯಿಲು ಮಾಡಲು ಸಾಧ್ಯವಿಲ್ಲ.

ಆನ್ ಲೈನ್ ಬ್ಯಾಂಕ್ ವಂಚನೆಯಿಂದ ಸುರಕ್ಷಿತವಾಗಿರಲು ಗ್ರಾಹಕರು ಹೊಂದಿರುವ ಹಕ್ಕು

ಆನ್ ಲೈನ್ ಬ್ಯಾಂಕ್ ವಂಚನೆಯಿಂದ ರಕ್ಷಿಸಿಕೊಳ್ಳಲು ಯಾವುದೇ ಬ್ಯಾಂಕಿನ ಗ್ರಾಹಕರು ಈ ಕೆಳಕಂಡ ಹಕ್ಕುಗಳನ್ನು ಹೊಂದಿರುತ್ತಾರೆ.

  • ನಿಮ್ಮ ಬ್ಯಾಂಕ್ ಖಾತೆ ಮೂಲಕ ಜರುಗುವ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಎಸ್ಎಂಎಸ್ ಪಡೆಯಲು ಮತ್ತು ಈ ಉದ್ದೇಶಕ್ಕಾಗಿ ರಿಜಿಸ್ಟರ್ ಮಾಡಿಕೊಳ್ಳುವ ಹಕ್ಕು.

 

  • ನಿಮ್ಮ ಬ್ಯಾಂಕ್ ಖಾತೆ ಮೂಲಕ ಜರುಗುವ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಇ-ಮೇಲ್ ಅಲರ್ಟ್ ಪಡೆಯಲು ಮತ್ತು ಈ ಉದ್ದೇಶಕ್ಕಾಗಿ ರಿಜಿಸ್ಟರ್ ಮಾಡಿಕೊಳ್ಳುವ ಹಕ್ಕು.