ಮತಾಂತರ

ನಿಮ್ಮ ಸಂಗಾತಿ ಬೇರೆ ಧರ್ಮಕ್ಕೆ ಮತಾಂತರಿಸಿದಾಗ ಹಿಂದೂ ಧರ್ಮದಿಂದ ಮತಾಂತರ:

ಮತಾಂತರ:

ನಿಮ್ಮ ಸಂಗಾತಿ ಹಿಂದೂ ಧರ್ಮವನ್ನು ತ್ಯಜಿಸಿ ಬೇರೆ ಧರ್ಮಕ್ಕೆ ಮತಾಂತರಿಸಿದ್ದಾಗ ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಕರಣ ಹೂಡುವುದು: ಗಮನಿಸಬೇಕಾದ ವಿಷಯವೇನೆಂದರೆ, ನಿಮ್ಮ ಸಂಗಾತಿ ಬೇರೆ ಧರ್ಮಕ್ಕೆ ಮತಾಂತರಿಸಿದ್ದಾರೆ ಎಂದ ಮಾತ್ರಕ್ಕೆ ನಿಮ್ಮ ಮದುವೆ ಅಂತ್ಯಗೊಳ್ಳದು. ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಮ್ಮ ಸಂಗಾತಿ ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದರೂ ಸಹ ವಿಚ್ಛೇದನದ ಪ್ರಕರಣವು ಹಿಂದೂ ವಿವಾಹ ಕಾನೂನಿನಡಿ ಜರುಗುತ್ತದೆ. ಏಕೆಂದರೆ, ನಿಮ್ಮಿಬ್ಬರ ಮದುವೆ ಹಿಂದೂ ಕಾನೂನಿನಡಿ ನೆರವೇರಿತ್ತು.

ವಿಚ್ಛೇದನದ ಅರ್ಜಿ ಸಲ್ಲಿಸುವು ಮುನ್ನ ಪುನರ್ವಿವಾಹ:

ನ್ಯಾಯಾಲಯವು ವಿಚ್ಛೇದನದ ಅಂತಿಮ ತೀರ್ಪು ನೀಡುವ ತನಕ ನಿಮ್ಮ ಮದುವೆ ಅಸ್ತಿತ್ವದಲ್ಲಿರುತ್ತದೆ. ನಿಮ್ಮ ಸಂಗಾತಿ ಇದರ ಮುನ್ನ ಪುನರ್ವಿವಾಹವಾಗುವಂತಿಲ್ಲ. ಒಂದು ವೇಳೆ ಅವರು ಪುನರ್ವಿವಾಹವಾದರೂ ಅದು ಕಾನೂನಿನಡಿ ಅಮಾನ್ಯವಾಗಿರುತ್ತದೆ.

ಶಿಕ್ಷೆ:

ಒಂದು ವೇಳೆ ವಿಚ್ಛೇದನದ ಮುನ್ನ ನಿಮ್ಮ ಸಂಗಾತಿ ಪುನರ್ವಿವಾಹವಾದರೆ ನೀವು ಅವರನ್ನು ದ್ವಿಪತ್ನಿತ್ವ/ದ್ವಿಪತಿತ್ವದ ಅಪರಾಧದಡಿ ಗರಿಷ್ಟ ೭ ವರ್ಷಗಳ ಸೆರೆಮನೆ ವಾಸ ಮತ್ತು ದಂಡದಿಂದ ಶಿಕ್ಷಿಸಬೇಕೆಂದು ಕೋರ್ಟಿನಲ್ಲಿ ಮನವಿ ಸಲ್ಲಿಸಬಹುದು.

ಕ್ರೂರ ವರ್ತನೆ ಮತ್ತು ಮುಸ್ಲಿಂ ವಿವಾಹ ಕಾನೂನು

ಕ್ರೂರ ವರ್ತನೆಗೆ ಸಂಬಂಧಪಟ್ಟ ನಿಬಂಧನೆಗಳು ಮುಸ್ಲಿಂ ಕಾನೂನಿನಲ್ಲಿವೆ. ನಿಮ್ಮ ಯಾವುದೇ ವರ್ತನೆ ಅಥವಾ ನಡವಳಿಕೆ ನಿಮ್ಮ ಸಂಗಾತಿಯ ಮನದಲ್ಲಿ ಕಿರುಕುಳವನ್ನುಂಟು ಮಾಡಿದರೆ, ಅದನ್ನು ಕ್ರೌರ್ಯ ಎನ್ನುತ್ತಾರೆ. ಮುಸ್ಲಿಂ ಕಾನೂನಿನ ಪ್ರಕಾರ ನಿಮ್ಮ ಗಂಡ ನಿಮ್ಮ ಜೊತೆ ಕೆಳಗಿನಂತೆ ವರ್ತಿಸಿದರೆ ಅದು ಕ್ರೌರ್ಯವಾಗುತ್ತದೆ:

  • ನಿಮ್ಮ ಮೇಲೆ ದಾಳಿ ಮಾಡಿದರೆ, ಅಥವಾ ಶಾರೀಕವಾಗಿ ಹಿಂಸಿಸಿದರೆ
  • ಪರ ಸ್ತ್ರೀಯರ ಜೊತೆ ಲೈಂಗಿಕ ಸಂಭೋಗ ಮಾಡಿದರೆ
  • ನಿಮ್ಮನ್ನು ಅನೈತಿಕ ಜೀವನ ನಡೆಸುವಂತೆ ಒತ್ತಾಯಿಸಿದರೆ
  • ನಿಮ್ಮ ಆಸ್ತಿಯನ್ನು ವಿಲೇವಾರಿ ಮಾಡಿ, ಅದರ ಮೇಲೆ ನಿಮ್ಮ ಕಾನೂನುಬದ್ಧ ಹಕ್ಕುಗಳನ್ನು ಪ್ರಯೋಗಿಸಲಾರದಂತೆ ಮಾಡಿದರೆ
  • ನಿಮ್ಮ ಧರ್ಮವನ್ನು ಆಚರಿಸಲಾರದಂತೆ ಮಾಡಿದರೆ
  • ನಿಮ್ಮ ಗಂಡನಿಗೆ ಒಬ್ಬರಿಗಿಂತ ಹೆಚ್ಚು ಹೆಂಡತಿಯರು ಇದ್ದರೆ, ನಿಮ್ಮನ್ನು ಅವರೆಲ್ಲರ ಸರಿಸಮನಾಗಿ ಕಾಣದಿದ್ದರೆ.

ಹಿಂದೂ ವಿವಾಹ ಕಾಯಿದೆಯಡಿ ವಿಚ್ಛೇದನದ ಪುರಾವೆ

ನ್ಯಾಯಾಲಯವು ಅಂತಿಮವಾಗಿ ನೀಡುವ ವಿಚ್ಛೇದನದ ತೀರ್ಪು ನಿಮ್ಮ ವಿಚ್ಛೇದನಕ್ಕೆ ಪುರಾವೆಯಾಗಿದೆ. ಇದು ಒಂದು ಆದೇಶದ ರೂಪದಲ್ಲಿದ್ದು, ಈ ದಾಖಲೆಯು ನಿಮ್ಮ ವಿಚ್ಛೇದನವನ್ನು ಕಾನೂನಾತ್ಮಕವಾಗಿ ಜಾರಿಗೊಳಿಸುತ್ತದೆ.

ಕೆಳಕಂಡ ಈ ಎರಡು ಸಂದರ್ಭಗಳು ಸಂಭವಿಸಿದ್ದಾಗ ವಿಚ್ಛೇದನದ ತೀರ್ಪು ಅಂತಿಮವಾಗುತ್ತದೆ:

  • ವಿಚ್ಛೇದನದ ಅಂತಿಮ ತೀರ್ಪಿನ ವಿರುದ್ಧ, ೯೦ ದಿನಗಳೊಳಗೆ, ತೀರ್ಪಿನಿಂದ ಅತೃಪ್ತರಾದ ನೀವು/ನಿಮ್ಮ ಸಂಗಾತಿಯು ಉನ್ನತ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು, ಈ ಮನವಿಯು ವಜಾಗೊಂಡಿದೆ.
  • ವಿಚ್ಛೇದನದ ತೀರ್ಪಿನ ವಿರುದ್ಧ ಮನವಿ ಮಾಡುವ ಹಕ್ಕು ಇಲ್ಲವೇ ಇಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ವಕೀಲರನ್ನು ವಿಚಾರಿಸಿ.