ದ್ವಿಚಕ್ರ ವಾಹನದಲ್ಲಿ ಮೂರು ಮಂದಿ ಸವಾರಿ ಮಾಡುವುದು

ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ನೀವು ಈ ಕೆಳಕಂಡ ಷರತ್ತುಗಳಿಗೆ ಬದ್ಧರಾಗಿರತಕ್ಕದ್ದು:
 ಮೋಟಾರ್ ಸೈಕಲ್ ಚಲಿಸುವವರೂ ಸೇರಿದಂತೆ ಕೇವಲ ಇಬ್ಬರು ಮಾತ್ರ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡತಕ್ಕದ್ದು.
 ಎರಡನೇ ವ್ಯಕ್ತಿಯು ಮೋಟಾರ್ ಸೈಕಲ್ಲಿಗೆ ಬಿಗಿಯಾಗಿ ಅಳವಡಿಸಲಾಗಿರುವ ಸೂಕ್ತ ಸೀಟಿನ ಮೇಲೆ ಕುಳಿತಿರತಕ್ಕದ್ದು.

ಈ ಮೇಲ್ಕಂಡ ಎರಡು ಷರತ್ತುಗಳನ್ನು ನೀವು ಉಲ್ಲಂಘಿಸಿದಲ್ಲಿ,
 ನೀವು ಕನಿಷ್ಟ ರೂ. 1,000/- ಜುಲ್ಮಾನೆ ತೆರಬೇಕಾಗುವುದು. ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ಮೊತ್ತವನ್ನು ಜುಲ್ಮಾನೆಯಾಗಿ ನಿಗದಿಪಡಿಸಿರಬಹುದು.
 ಮೂರು ತಿಂಗಳ ಅವಧಿಗೆ ನೀವು ಚಾಲನಾ ಪರವಾನಗಿ ಹೊಂದದಂತೆ ನಿಮ್ಮನ್ನು ಅನರ್ಹಗೊಳಿಸಬಹುದು.

ರಾಜ್ಯ ಜುಲ್ಮಾನೆಯ ಮೊತ್ತ (ರೂ.ಗಳಲ್ಲಿ)
ದೆಹಲಿ 1,000/-
ಕರ್ನಾಟಕ 500/-

ಪೋಲೀಸ್ ಅಧಿಕಾರಿಯು ನಿಮ್ಮ ಎಫ್ಐ ಆರ್ ದಾಖಲಿಸಲು ನಿರಾಕರಿಸಿದರೆ, ಯಾರಿಗೆ ದೂರನ್ನು ನೀಡಬೇಕು?

ಪೋಲೀಸ್ ಅಧಿಕಾರಿಯು ನಿಮ್ಮ ಎಫ್ಐಆರ್ ದಾಖಲಿಸಲು ನಿರಾಕರಿಸಿದಲ್ಲಿ, ನೀವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬಹುದು.

 ಪೋಲೀಸ್ ಅಧಿಕಾರಿಯು ನಿಮ್ಮ ದೂರನ್ನು ಸ್ವೀಕರಿಸಲು ನಿರಾಕರಿಸಿದಲ್ಲಿ, ನೀವು ದೂರನ್ನು ಲಿಖಿತ ರೂಪದಲ್ಲಿ ಪೋಲೀಸ್ ಸೂಪರಿಂಟೆಂಡೆಂಟ್ (ಎಸ್ಪಿ) ರವರಿಗೆ ಕಳುಹಿಸಬಹುದು. ಎಸ್ ಪಿ ರವರು ನಿಮ್ಮ ಪ್ರಕರಣದಲ್ಲಿ ಹುರುಳಿದೆ ಎಂದು ಪರಿಗಣಿಸಿದಲ್ಲಿ ಅವರು ಪ್ರಕರಣದ ತನಿಖೆಗೆ ಪೋಲೀಸ್ ಅಧಿಕಾರಿಯೊಬ್ಬರನ್ನು ನೇಮಿಸಬಹುದು.

 ಪೋಲೀಸ್ ಠಾಣೆಗೆ ಹೋಗುವ ಮುನ್ನ ವಕೀಲರೊಬ್ಬರ ಸಹಾಯ ಪಡೆಯಿರಿ. ವಕೀಲರು ನಿಮ್ಮ ಪರವಾಗಿ ಪ್ರಕರಣ ಮುಂದುವರೆಸುವುದರಿಂದ ಈ ಕ್ರಮ ನಿಮಗೆ ಉಪಯುಕ್ತ. ಮೇಲಾಗಿ ವಕೀಲರೊಡನೆ ಠಾಣೆಗೆ ಹೋದಾಗ ಪೋಲೀಸ್ ಅಧಿಕಾರಿಗಳಿಂದ ಶೋಷಣೆಗೆ ಒಳಗಾಗುವ ಸಾಧ್ಯತೆ ಕಡಿಮೆ.

 ಹತ್ತಿರ ಇರುವ ಮತ್ತಾವುದೇ ಪೋಲೀಸ್ ಠಾಣೆಗೆ ಎಫ್ಐಆರ್ ಸಲ್ಲಿಸಲು ತೆರಳಿ. ಯಾವುದೇ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ ಸಂದರ್ಭದಲ್ಲಿ ಪೋಲೀಸ್ ಅಧಿಕಾರಿಗಳು ಕಡ್ಡಾಯವಾಗಿ ದೂರುದಾರ ನೀಡುವ ಮಾಹಿತಿಯನ್ನು ದಾಖಲಿಸಿಕೊಂಡು ಯಾವ ಪೋಲೀಸ್ ಠಾಣೆಯ ಸರಹದ್ದಿನಲ್ಲಿ ಅಪರಾಧ ಜರುಗಿದೆಯೋ ಆ ಠಾಣೆಗೆ ವರ್ಗಾಯಿಸತಕ್ಕದ್ದು. ಈ ವ್ಯವಸ್ಥೆಗೆ “ಶೂನ್ಯ ಎಫ್ಐಆರ್” ಎಂದು ಹೆಸರು.

 ನಿಮ್ಮ ಪರವಾಗಿ ಎಫ್ಐಆರ್ ಸಲ್ಲಿಸುವಂತೆ ಬೇರೆ ಯಾರನ್ನಾದರೂ ವಿನಂತಿಸಿಕೊಳ್ಳಿ. ನೀವು ಎದುರಿಸಿರುವ ಹಿಂಸೆ/ಕಿರುಕುಳಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಂತಹ ವ್ಯಕ್ತಿಗೆ ನೀಡಿರಿ.

 ಪೋಲೀಸ್ ಠಾಣೆಯಲ್ಲಿ ನಿಮ್ಮ ದೂರನ್ನು ಸ್ವೀಕರಿಸದಿದ್ದ ಪಕ್ಷದಲ್ಲಿ ನೀವು ನೇರವಾಗಿ ಜಿಲ್ಲಾ ನ್ಯಾಯಾಧೀಶರು/ನ್ಯಾಯಿಕ ದಂಡಾಧಿಕಾರಿಗಳ ಮುಂದೆ “ಖಾಸಗಿ ದೂರು” ಸಲ್ಲಿಸಬಹುದಾಗಿದೆ. ಆದರೆ ಹೀಗೆ ಮಾಡುವ ಮುನ್ನ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ನೀವು ಪ್ರಯತ್ನ ಮಾಡಿರತಕ್ಕದ್ದು.

 ದೂರು ಸಲ್ಲಿಸಲು ಲಭ್ಯವಿರುವ ಇನ್ನಿತರ ವೇದಿಕೆಗಳಾದ – ರಾಜ್ಯ/ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿ. ಈ ಆಯೋಗಗಳು ನೀವು ಪೋಲೀಸ್ ಅಧಿಕಾರಿಗಳಿಂದ ಪರಿಹಾರ ಪಡೆಯಲು ನಿಮಗೆ ಮಾರ್ಗದರ್ಶನ ನೀಡುವುದಲ್ಲದೆ, ನೀವು ಆರೋಪಿಸಿರುವ ಕಿರುಕುಳ/ದೌರ್ಜನ್ಯದ ಕುರಿತಾಗಿಯೂ ಸ್ವತ: ತನಿಖೆ ಮಾಡುತ್ತವೆ.

ವಾಹನ ಚಾಲನೆ ಮಾಡುವಾಗ ಮೊಬೈಲ್ ಪೋನ್ ಬಳಕೆ

ಯಾವುದೇ ಮೋಟಾರು ವಾಹನವನ್ನು ಚಾಲನೆ ಮಾಡುವಾಗ ನೀವು ಮೊಬೈಲ್ ಫೋನ್ ಬಳಸುವಂತಿಲ್ಲ. ಹಾಗೆ ಮಾಡುವುದು ವಾಹನದ ಚಾಲಕ ಮತ್ತು ಸಾರ್ವಜನಿಕರಿಗೆ ಅಪಾಯಕಾರಿ. ಈ ಕೃತ್ಯವನ್ನು ಅಪಾಯಕಾರವಾಗಿ ವಾಹನ ಚಾಲನೆ ಎಂದು ಪರಿಗಣಿಸಿ, ನಿಮಗೆ ಈ ಕೆಳಕಂಡ ಶಿಕ್ಷೆಯನ್ನು ನೀಡಬಹುದು:

 ಮೊದಲ ಬಾರಿ (ಮೊದಲ ಬಾರಿಯ ಅಪರಾಧ): ಆರು ತಿಂಗಳಿನಿಂದ ಒಂದು ವರ್ಷ ಅವಧಿಯವರೆಗಿನ ಜೈಲು ವಾಸ ಅಥವಾ ರೂ.1,000/- ದಿಂದ ರೂ 5,000/-ದ ವರೆಗೆ ಜುಲ್ಮಾನೆ ಅಥವಾ ಎರಡೂ ಶಿಕ್ಷೆಗಳು. ಜುಲ್ಮಾನೆಯ ಮೊತ್ತ ಪ್ರತಿ ರಾಜ್ಯದಲ್ಲಿ ಬೇರೆಯಾಗಿರಬಹುದು.

 ಪುನರಾವರ್ತಿತ ಅಪರಾಧ: ಮೊದಲ ಬಾರಿ ಅಪರಾಧವನ್ನು ಎಸಗಿದ ಮೂರು ವರ್ಷಗಳ ಅವಧಿಯೊಳಗೆ ಪುನ: ಅದೇ ಅಪರಾಧವನ್ನು ಎಸಗಿದಲ್ಲಿ, ನಿಮಗೆ ಎರಡು ವರ್ಷಗಳವರೆಗಿನ ಕಾರಾವಾಸ ಅಥವಾ ರೂ.10,000 ದಂಡ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಲಾಗುವುದು. ಜುಲ್ಮಾನೆಯ ಮೊತ್ತ ಪ್ರತಿ ರಾಜ್ಯದಲ್ಲಿ ಬೇರೆಯಾಗಿರಬಹುದು.

ಎರಡು ರಾಜ್ಯಗಳಲ್ಲಿ ಜುಲ್ಮಾನೆಯ ಮೊತ್ತ ಈ ಕೆಳಕಂಡಂತಿದೆ.

ರಾಜ್ಯ ಅಪರಾಧದ ಪುನರಾವರ್ತನೆ ಜುಲ್ಮಾನೆಯ ಮೊತ್ತ (ರೂ.ಗಳಲ್ಲಿ)
ದೆಹಲಿ ಮೊದಲನೇ ಅಪರಾಧ 1,000-5,000
ಪುನರಾವರ್ತಿತ ಅಪರಾಧ 10,000
ಕರ್ನಾಟಕ ಮೊದಲನೇ ಅಪರಾಧ ದ್ವಿಚಕ್ರ/ತ್ರಿಚಕ್ರ ವಾಹನ: 1,500

ಲಘು ಮೋಟಾರು ವಾಹನ: 3,000

ಇತರೆ ವಾಹನಗಳು: 5,000

ಯಾವುದೇ ಪುನರಾವರ್ತಿತ

ಅಪರಾಧ

10,000

ಡ್ರೈವಿಂಗ್ ಮಾಡುವಾಗ ಹೆಲ್ಮೆಟ್ ಧರಿಸಿಲ್ಲ

ಎರಡು ಚಕ್ರವರ್ತಿ ಮೋಟಾರ್ಸೈಕಲ್ ಓಡಿಸುವ ಯಾರಾದರೂ ಹೆಲ್ಮೆಟ್ ಅಥವಾ ರಕ್ಷಣಾತ್ಮಕ ಹೆಡ್ಜರ್ ಧರಿಸಬೇಕಾಗುತ್ತದೆ. ಇದಲ್ಲದೆ, ದ್ವಿಚಕ್ರ ಮೋಟಾರ್ಸೈಕಲ್ ಸವಾರಿ ಮಾಡುವ 4 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯು ಸಹ ಹೆಲ್ಮೆಟ್ ಧರಿಸಬೇಕು.

ಈ ತಲೆಗೆರ್ ಎರಡು ವೈಶಿಷ್ಟ್ಯಗಳನ್ನು ಹೊಂದಿರಬೇಕು:

  • ಅಪಘಾತದ ಸಂದರ್ಭದಲ್ಲಿ ಗಾಯದಿಂದ ಸ್ವಲ್ಪ ಮಟ್ಟಿಗೆ ರಕ್ಷಣೆ ನೀಡುತ್ತದೆ ಎಂದು ಸಮಂಜಸವಾಗಿ ನಿರೀಕ್ಷಿಸಬಹುದು.
  • ಇದನ್ನು ಧರಿಕರ ತಲೆಗೆ ಸುರಕ್ಷಿತವಾಗಿ ಜೋಡಿಸಲಾಗುತ್ತದೆ.

ಮರದ ಮತ್ತು ಮಹಿಳೆಯರನ್ನು ಧರಿಸಿರುವ ಸಿಖ್ ಜನರು ಮಾತ್ರ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಾಗಿಲ್ಲ. ಆದಾಗ್ಯೂ, ಈ ವಿನಾಯಿತಿ ರಾಜ್ಯಗಳಾದ್ಯಂತ ಬದಲಾಗುತ್ತದೆ.

ಚಾಲನೆ ಮಾಡುವಾಗ ನೀವು ಹೆಲ್ಮೆಟ್ ಧರಿಸದಿದ್ದರೆ, ನಿಮಗೆ ಕನಿಷ್ಠ ರೂ. 1,000 ಮತ್ತು ನಿಮ್ಮ ಪರವಾನಗಿಯನ್ನು 3 ತಿಂಗಳವರೆಗೆ ಹಿಡಿದಿಡಲು ನಿಮ್ಮನ್ನು ಅನರ್ಹಗೊಳಿಸಲಾಗುತ್ತದೆ. ಅನ್ವಯವಾಗುವ ದಂಡ ಮೊತ್ತವು ರಾಜ್ಯಗಳಾದ್ಯಂತ ಬದಲಾಗಬಹುದು.

ಎರಡು ರಾಜ್ಯಗಳಿಗೆ ದಂಡದ ಮೊತ್ತ ಕೆಳಗೆ ನೀಡಲಾಗಿದೆ:

ರಾಜ್ಯ ಜುಲ್ಮಾನೆಯ ಮೊತ್ತ (ರೂ.)
ದೆಹಲಿ 1,000
ಕರ್ನಾಟಕ 500

ಹಾರ್ನ್ ಇಲ್ಲದೆ ವಾಹನವನ್ನು ಪಡೆದುಕೊಳ್ಳುವುದು

ನಿಮ್ಮ ವಾಹನವನ್ನು ವಿದ್ಯುತ್ ಹಾರ್ನ್ನೊಂದಿಗೆ ಕಡ್ಡಾಯವಾಗಿ ಅಳವಡಿಸಬೇಕು, ಅದು ವಾಹನವನ್ನು ಸಮೀಪಿಸುತ್ತಿದೆ ಎಂದು ಸಾಕಷ್ಟು ಮತ್ತು ಆಡಿಬಲ್ ಎಚ್ಚರಿಕೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ನೀವು ಹರಿದ ಮೋಟಾರು ವಾಹನವನ್ನು ಹೊಂದಿದ್ದರೆ, ನಿಮಗೆ ಕನಿಷ್ಠ ರೂ. ಮೊದಲ ಅಪರಾಧಕ್ಕೆ 500, ಮತ್ತು ರೂ. ನಂತರದ ಪ್ರತಿಯೊಂದು ಅಪರಾಧಕ್ಕೂ 1,500 ರೂ. ಅನ್ವಯವಾಗುವ ದಂಡದ ಮೊತ್ತವು ರಾಜ್ಯಗಳಾದ್ಯಂತ ಬದಲಾಗಬಹುದು.

ಎರಡು ರಾಜ್ಯಗಳಿಗೆ ದಂಡದ ಮೊತ್ತ ಕೆಳಗೆ ನೀಡಲಾಗಿದೆ:

ರಾಜ್ಯ ಅಪರಾಧದ ಪುನರಾವರ್ತನೆ

ಜುಲ್ಮಾನೆಯ ಮೊತ್ತ

(ರೂ.ಗಳಲ್ಲಿ)

ದೆಹಲಿ ಮೊದಲನೇ ಅಪರಾಧ 500
ಪುನರಾವರ್ತಿತ ಅಪರಾಧ 1,500
ಕರ್ನಾಟಕ ಮೊದಲನೇ ಅಪರಾಧ 500
ಪುನರಾವರ್ತಿತ ಅಪರಾಧ 1,500

ಟ್ರಾಫಿಕ್ ಸಿಗ್ನಲ್ ಗಳು ಮತ್ತು ಚಿಹ್ನೆಗಳನ್ನು ಪಾಲಿಸದಿರುವುದು

ಟ್ರಾಫಿಕ್ ಸಿಗ್ನಲ್ ಗಳು

ವಾಹನವನ್ನು ಚಾಲನೆ ಮಾಡಲು ಅನುಮತಿ ಇದೆ ಅಥವಾ ಇಲ್ಲ ಎಂಬುದನ್ನು ಸೂಚಿಸುವ ಉದ್ದೇಶಕ್ಕಾಗಿ ರಸ್ತೆ ಬದಿಯಲ್ಲಿ ಸ್ಥಾಪಿಸಲಾಗಿರುವ ಉಪಕರಣವನ್ನು, ಕಾನೂನಿನ ಪರಿಭಾಷೆಯಲ್ಲಿ ಟ್ರಾಫಿಕ್ ಲೈಟ್, ಟ್ರಾಫಿಕ್ ಸಿಗ್ನಲ್ ಅಥವಾ ಸ್ಟಾಪ್ ಲೈಟ್ ಎಂದು ಕರೆಯಲಾಗುತ್ತದೆ. ವಿಶ್ವದ ಎಲ್ಲೆಡೆ ಮಾನ್ಯವಾಗಿರುವ ಬಣ್ಣಗಳ ಸಂಕೇತದಲ್ಲಿ ಟ್ರಾಫಿಕ್ ಸಿಗ್ನಲ್ ಗಳು ಮಾಹಿತಿ ನೀಡುತ್ತವೆ.

 ಕೆಂಪು ದೀಪ: ವಾಹನವನ್ನು ನಿಲ್ಲಿಸಿರಿ
 ಹಳದಿ ದೀಪ: ವಾಹನದ ವೇಗವನ್ನು ಕಡಿಮೆ ಮಾಡಿರಿ/ವಾಹನ ಚಾಲನೆ ಮಾಡಲು ಸನ್ನದ್ಧರಾಗಿರಿ
 ಹಸಿರು ದೀಪ: ವಾಹನವನ್ನು ಚಲಾಯಿಸಿ.

ಟ್ರಾಫಿಕ್ ಸಿಗ್ನಲ್ ಗಳನ್ನು ಪಾಲನೆ ಮಾಡುವುದು ಮೋಟಾರು ವಾಹನವನ್ನು ಚಾಲನೆ ಮಾಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯ. ಟ್ರಾಫಿಕ್ ಸಿಗ್ನಲ್ ಗಳನ್ನು ನೀವು ಉಲ್ಲಂಘಿಸಿದಲ್ಲಿ ನಿಮಗೆ ದಂಡ ವಿಧಿಸಲಾಗುತ್ತದೆ. ಉದಾಹರಣೆಗೆ, ಕೂಡುರಸ್ತೆಯೊಂದರಲ್ಲಿ ಟ್ರಾಫಿಕ್ ಸಿಗ್ನಲ್ ಕೆಂಪು ದೀಪ ಇದ್ದರೂ ಸಹ ನೀವು ನಿಮ್ಮ ವಾಹನವನ್ನು ಚಲಾಯಿಸಲು ಪ್ರಾರಂಭಿಸಿದಲ್ಲಿ ಅಥವಾ ನಿಮ್ಮ ವಾಹನವನ್ನು ನಿಲ್ಲಿಸದಿದ್ದ ಪಕ್ಷದಲ್ಲಿ, ನಿಮಗೆ ದಂಡ ವಿಧಿಸಲಾಗುತ್ತದೆ.

ನೀವು ತೆತ್ತಬೇಕಾಗಿರುವ ಜುಲ್ಮಾನೆಯ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರುತ್ತದೆ. ಆದರೂ ಸಹ ನೀವು ಕನಿಷ್ಟ ರೂ.500 ರಿಂದ ರೂ.1,000 ದ ವರೆಗೆ ಜುಲ್ಮಾನೆ ತೆರಬೇಕಾಗುವುದು.

ಎರಡು ರಾಜ್ಯಗಳಲ್ಲಿ ವಿಧಿಸಲಾಗುವ ಜುಲ್ಮಾನೆಯ ಮೊತ್ತವನ್ನು ಈ ಕೆಳಗೆ ನೀಡಲಾಗಿದೆ.

ರಾಜ್ಯ ಜುಲ್ಮಾನೆಯ ಮೊತ್ತ (ರೂ.)
ದೆಹಲಿ 500-1,000
ಕರ್ನಾಟಕ 500-1,000

ಟ್ರಾಫಿಕ್ ಚಿಹ್ನೆಗಳು ಮತ್ತು ನಿರ್ದೇಶನಗಳು

ಟ್ರಾಫಿಕ್ ಚಿಹ್ನೆಗಳನ್ನು, ವಾಹನ ಚಾಲನೆಯ ನಿಬಂಧನೆಗಳನ್ನು ಮತ್ತು ಟ್ರಾಫಿಕ್ ಅಥವಾ ಪೋಲೀಸ್ ಅಧಿಕಾರಿಗಳು ನೀಡುವ ನಿರ್ದೇಶನಗಳನ್ನು ಪಾಲಿಸುವುದು ಮೋಟಾರು ವಾಹನವನ್ನು ಚಾಲನೆ ಮಾಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ.

ಟ್ರಾಫಿಕ್ ಚಿಹ್ನೆಗಳನ್ನು, ವಾಹನ ಚಾಲನೆಯ ನಿಬಂಧನೆಗಳನ್ನು ಅಥವಾ ಟ್ರಾಫಿಕ್ ಅಧಿಕಾರಿಯು ನೀಡಿದ ನಿರ್ದೇಶನಗಳನ್ನು ಉಲ್ಲಂಘಿಸಿದಲ್ಲಿ, ನೀವು ಜುಲ್ಮಾನೆ ತೆರಬೇಕಾಗುತ್ತದೆ. ಉದಾಹರಣೆಗೆ, ಯು-ಟರ್ನ್ ನಿರ್ಭಂಧಿಸಿರುವ ಕೂಡುರಸ್ತೆಯಲ್ಲಿ ನೀವು ಯು-ಟರ್ನ್ ಮಾಡಿದಲ್ಲಿ, ನಿಮಗೆ ಜುಲ್ಮಾನೆ ವಿಧಿಸಬಹುದು.

ಟ್ರಾಫಿಕ್ ಚಿಹ್ನೆಗಳ ಸಂಪೂರ್ಣ ಪಟ್ಟಿ ಮತ್ತು ಅವುಗಳ ವಿವರಣೆಯನ್ನು ಮೋಟಾರು ವಾಹನ ಕಾಯ್ದೆ, 1988 ರ ಮೊದಲನೇ ಪರಿಚ್ಛೇದದಲ್ಲಿ ನೀಡಲಾಗಿದೆ. ಈ ಮಾಹಿತಿಯನ್ನು ಇಲ್ಲಿ ಕ್ಲಿಕ್ ಮಾಡುವುದರ ಮೂಲಕ ಪಡೆಯಬಹುದಾಗಿದೆ.

ನೀವು ತೆರಬೇಕಾಗುವ ಜುಲ್ಮಾನೆಯ ಮೊತ್ತ ಪ್ರತಿ ರಾಜ್ಯದಲ್ಲೂ ಬೇರೆಯಾಗಿರಬಹುದು. ಆದರೆ. ಮೊದಲನೆಯ ಬಾರಿಯ ಅಪರಾಧಕ್ಕಾಗಿ ನೀವು ಕನಿಷ್ಟ ರೂ.500/- ದಂಡ ತೆರಬೇಕಾಗುವುದು ಮತ್ತು ನಂತರದ ಪುನರಾವರ್ತಿತ ಅಪರಾಧಗಳಿಗೆ ರೂ. 1,500/- ಜುಲ್ಮಾನೆ ತೆರಬೇಕಾಗುತ್ತದೆ. ಪ್ರತಿ ರಾಜ್ಯವೂ ಪ್ರತ್ಯೇಕ ಜುಲ್ಮಾನೆಯ ಮೊತ್ತವನ್ನು ನಿಗದಿಪಡಿಸಿರಬಹುದು.

ಎರಡು ರಾಜ್ಯಗಳಲ್ಲಿ ವಿಧಿಸುವ ಜುಲ್ಮಾನೆಯ ಮೊತ್ತವನ್ನು ಕೆಳಗೆ ನೀಡಲಾಗಿದೆ.

ರಾಜ್ಯ ಅಪರಾಧ ಅಪರಾಧದ ಪುನರಾವರ್ತನೆ ಜುಲ್ಮಾನೆಯ ಮೊತ್ತ (ರೂ.)
ದೆಹಲಿ ಟ್ರಾಫಿಕ್ ಚಿಹ್ನೆಗಳ

ಉಲ್ಲಂಘನೆ

ಮೊದಲ ಬಾರಿ 500
ಪುನರಾವರ್ತಿತ ಅಪರಾಧ 1,500
ಕರ್ನಾಟಕ ಟ್ರಾಫಿಕ್ ಚಿಹ್ನೆಗಳ

ಉಲ್ಲಂಘನೆ

ಮೊದಲ ಬಾರಿ 500
ಪುನರಾವರ್ತಿತ ಅಪರಾಧ 1,000

ವೇಗಮಿತಿಯನ್ನು ಉಲ್ಲಂಘಿಸುವುದು

ಯಾವುದೇ ರಸ್ತೆಯಲ್ಲಿ ವಾಹನ ಚಾಲನೆ ಮಾಡಲು ನಿಗದಿಪಡಿಸಿರುವ ವೇಗಮಿತಿಯನ್ನು ಉಲ್ಲಂಘಿಸುವುದು ಅಪರಾಧವಾಗುತ್ತದೆ. ಸಾಮಾನ್ಯವಾಗಿ ರಸ್ತೆ ಮತ್ತು ಬೀದಿಗಳಿಗೆ ನಿಗದಿಪಡಿಸಿರುವ ಗರಿಷ್ಟ ವೇಗಮಿತಿಯನ್ನು ಸೂಚಿಸುವ ಚಿಹ್ನೆಯನ್ನು ಹೊಂದಿರುವ ಫಲಕವನ್ನು ಆಯಾ ರಸ್ತೆ ಮತ್ತು ಬೀದಿಗಳಲ್ಲಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಪ್ರದರ್ಶಿಸಲಾಗಿರುತ್ತದೆ. ಉದಾಹರಣೆಗೆ, ಶಾಲಾ ವಲಯದಲ್ಲಿ ವೇಗಮಿತಿ ಘಂಟೆಗೆ 25 ಕಿ.ಮೀ ಇದ್ದು, ನೀವು 60 ಕಿ.ಮೀ ವೇಗದಲ್ಲಿ ವಾಹನ ಚಾಲನೆ ಮಾಡಿದಲ್ಲಿ ನೀವು ಅತಿವೇಗದ ಚಾಲನೆಗಾಗಿ ಶಿಕ್ಷಾರ್ಹರಾಗುತ್ತೀರಿ.

ವಿವಿಧ ಮಾದರಿಯ ಮೋಟಾರು ವಾಹನಗಳು ವೇಗಮಿತಿಯನ್ನು ಉಲ್ಲಂಘಿಸಿದಲ್ಲಿ ವಿಧಿಸುವ ಕನಿಷ್ಟ ದಂಡನೆಯನ್ನು ಈ ಕೆಳಗೆ ನೀಡಲಾಗಿದೆ.
 ಲಘು ಮೋಟಾರು ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿದ ಅಪರಾಧಕ್ಕಾಗಿ, ರೂ.1,000/- ದಿಂದ ರೂ.2,000/- ವರೆಗೆ ಜುಲ್ಮಾನೆ ವಿಧಿಸಬಹುದಾಗಿದೆ. ಪುನರಾವರ್ತಿತ ಅಪರಾಧಕ್ಕಾಗಿ ನಿಮ್ಮ ಚಾಲನಾ ಪರವಾನಗಿಯನ್ನು ಮಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.
 ಮಧ್ಯಮ ಗಾತ್ರದ ಸರಕು ಸಾಗಣೆ ಮೋಟಾರು ವಾಹನ, ಪ್ರಯಾಣಿಕ ವಾಹನ, ಭಾರೀ ಗಾತ್ರದ ಸರಕು ಸಾಗಣೆ ಅಥವಾ ಪ್ರಯಾಣಿಕ ವಾಹನವನ್ನು ಅತಿವೇಗದಿಂದ ಚಾಲನೆ ಮಾಡಿದಲ್ಲಿ, ರೂ.2,000/- ದಿಂದ ರೂ.4,000/- ವರೆಗೆ ಜುಲ್ಮಾನೆ ವಿಧಿಸಬಹುದಾಗಿದೆ. ಪುನರಾವರ್ತಿತ ಅಪರಾಧಕ್ಕಾಗಿ ನಿಮ್ಮ ಚಾಲನಾ ಪರವಾನಗಿಯನ್ನು ಮಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.

ಜುಲ್ಮಾನೆಯ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಬಹುದು. ಎರಡು ರಾಜ್ಯಗಳಲ್ಲಿ ಜುಲ್ಮಾನೆಯ ಮೊತ್ತವನ್ನು ಈ ಕೆಳಗೆ ನೀಡಲಾಗಿದೆ.

ರಾಜ್ಯ ವಾಹನದ ಮಾದರಿ ಜುಲ್ಮಾನೆಯ ಮೊತ್ತ (ರೂ.)
ದೆಹಲಿ ಲಘು ಮೋಟಾರು ವಾಹನ 1,000-2,000
ಮಧ್ಯಮ/ಭಾರೀ ಗಾತ್ರದ ವಾಹನ 2,000-4,000
ಕರ್ನಾಟಕ ದ್ವಿಚಕ್ರ/ತ್ರಿಚಕ್ರ ಮತ್ತು ಲಘು ಮೋಟಾರು ವಾಹನಗಳು 1,000
ಮಧ್ಯಮ/ಭಾರೀ ಗಾತ್ರದ ವಾಹನ 2,000

 

ಭಾರತದಲ್ಲಿ ವಿವಿಧ ಮಾದರಿಯ ವಾಹನಗಳಿಗೆ ವಿವಿಧ ವರ್ಗದ ರಸ್ತೆಗಳಲ್ಲಿ ನಿಗದಿಪಡಿಸಿರುವ ವೇಗಮಿತಿ ಈ ಕೆಳಕಂಡಂತಿದೆ.

ಭಾರತದ ರಸ್ತೆಗಳಲ್ಲಿ ಗರಿಷ್ಟ ವೇಗಮಿತಿ (ಪ್ರತಿ ಘಂಟೆಗೆ, ಕಿಲೋಮೀಟರ್ ಗಳಲ್ಲಿ)

 

ಮೋಟಾರು ವಾಹನದ ಮಾದರಿ ಪ್ರವೇಶ ನಿಯಂತ್ರಣ ನ್ನು ಹೊಂದಿರುವ ಎಕ್ಸ್ ಪ್ರೆಸ್ ವೇ ನಾಲ್ಕು ಅಥವಾ ಹೆಚ್ಚಿನ ಪಥಗಳನ್ನು ಹೊಂದಿರುವ ಕ್ಯಾರೇಜ್ ವೇ (ಮೀಡಿಯನ್ / ಸ್ಟ್ರಿಪ್ /ಡಿವೈಡರ್ ಗಳನ್ನು ಹೊಂದಿರುವ ರಸ್ತೆ ಮುನಿಸಿಪಲ್ ವ್ಯಾಪ್ತಿಯಲ್ಲ ರುವ ರಸ್ತೆಗಳು ಇತರ ರಸ್ತೆಗಳು
ಚಾಲಕನ ಸೀಟನ್ನು ಹೊರತು ಪಡಿಸಿ ಗರಿಷ್ಟ 8 ಸೀಟುಗಳನ್ನು ಹೊಂದಿರುವ ಮೋಟಾರು ವಾಹನಗಳು. 120 100 70 70
ಚಾಲಕನ ಸೀಟು ಹೊರತು ಪಡಿಸಿ, ಒಂಭತ್ತು ಅಥವಾ ಹೆಚ್ಚಿನ ಸೀಟುಗಳನ್ನು ಹೊಂದಿರುವ ಮೋಟಾರು ವಾಹನಗಳು. 100 90 60 60
ಸರಕು ಸಾಗಾಣಿಕೆಗಾಗಿ ಬಳಸುವ ಮೋಟಾರು ವಾಹನಗಳು. 80 80 60 60
ಮೋಟಾರು ಸೈಕಲ್ ಗಳು 80 (ಎಕ್ಸ್ ಪ್ರೆಸ್ ವೇ ನಲ್ಲಿ ಚಾಲನೆ ಮಾಡಲು ಅನುಮತಿ ನೀಡಿದಲ್ಲಿ) 80 60 60
ನಾಲ್ಕು ಚಕ್ರದ ವಾಹನಗಳು 60 50 50
ಮೂರು ಚಕ್ರದ ವಾಹನಗಳು 50 50 50