ಸಾಮಾನ್ಯವಾಗಿ “ಕೋರ್ಟು ವಿವಾಹ” ಎಂದು ಕರೆಯಲ್ಪಡುವ ನಾಗರಿಕ ವಿವಾಹಗಳು ದಂಪತಿಗಳ ಧರ್ಮವನ್ನು ಪರಿಗಣಿಸುವುದಿಲ್ಲ. ಹೀಗಾಗಿ ವಿವಾಹವು “ವಿಶೇಷ ವಿವಾಹ ಕಾಯ್ದೆ” ಅಡಿ ಜರುಗುತ್ತದೆ.ಈ ಕಾನೂನಿನ ಅಡಿಯಲ್ಲಿ ವಿವಾಹವಾಗಲು ನೀವು ಮತ್ತು ನಿಮ್ಮಜೊತೆಗಾರ/ಜೊತೆಗಾರ್ತಿ ವಿಧಿಬದ್ಧವಾಗಿ ವಿವಾಹವಾಗಲು ಅರ್ಹರೇ ಎಂದು ತಿಳಿದುಕೊಳ್ಳಬೇಕು. ಉದಾಹರಣೆಗೆ, ವಿವಾಹವಾಗಲು ನೀವು ನಿರ್ದಿಷ್ಟ ವಯೋಮಾನದವಾಗಿರತಕ್ಕದ್ದು ಹಾಗೂ ಜೀವಂತವಿರುವ ಮತ್ತು ನೀವು ವಿಚ್ಛೇದನ ನೀಡದಿರುವ ಪತಿ/ಪತ್ನಿಯನ್ನು ನೀವು ಹೊಂದಿರಬಾರದು.
Theme: Inter-Religious Marriage
ವಿಧಿಸಮ್ಮತ ಅಂತರ್ಧರ್ಮೀಯ ವಿವಾಹದ ಷರತ್ತುಗಳು
- ಉಭಯ ಪಕ್ಷಗಾರರು ಜೀವಂತವಾಗಿರುವ ಗಂಡ/ಹೆಂಡತಿಯನ್ನು ಹೊಂದಿರಬಾರದು.
- ಯಾವುದೇ ಪಕ್ಷಗಾರರು:
ಚಿತ್ತವಿಭ್ರಮಣೆಯ ಕಾರಣದಿಂದ ವಿವಾಹಕ್ಕೆ ವಿಧಿಬದ್ಧ ಒಪ್ಪಿಗೆ ಕೊಡಲು ಅಸಮರ್ಥರಾಗಿರಬಾರದು. - ವಿಧಿಬದ್ಧ ಒಪ್ಪಿಗೆ ಕೊಡಲು ಸಮರ್ಥರಿದ್ದರೂ ಸಹ, ವಿವಾಹ ಮಾಡಿಕೊಳ್ಳಲು ಅಥವಾ ಸಂತಾನೋತ್ಪತ್ತಿ ಮಾಡಲು ಅಸಮರ್ಥರನ್ನಾಗಿ ಮಾಡಿರುವಂತಹ ಮಾನಸಿಕ ವ್ಯಾಧಿಯಿಂದ ನರಳುತ್ತಿರಕೂಡದು.
- ಪದೇಪದೇ ಬುದ್ಧಿಭ್ರಮಣೆ ಅಥವಾ ಅಪಸ್ಮಾರದ ಆಘಾತಕ್ಕೆ ತುತ್ತಾಗಿರಬಾರದು.
- ಪುರುಷರು ಕನಿಷ್ಟ 21 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು ಮತ್ತು ಸ್ತ್ರೀಯರು ಕನಿಷ್ಟ 18 ವರ್ಷ ವಯೋಮಾನದವರಾಗಿರಬೇಕು.
- ಉಭಯ ಪಕ್ಷಗಾರರು ನಿಷಿದ್ಧ ತಲೆಮಾರುಗಳಿಗೆ ಸೇರಿದವರಾಗಿರಬಾರದು.
ವಿವಾಹವಿಧಿಯನ್ನು ಶಾಸ್ತ್ರಬದ್ಧವಾಗಿ ನೆರವೇರಿಸಲು ಯಾವುದೇ ಬುಡಕಟ್ಟು, ಸಮುದಾಯ, ಗುಂಪು ಅಥವಾ ಕುಟುಂಬಕ್ಕೆ ಸೇರಿದ ವ್ಯಕ್ತಿಗಳಿಗೆ ವಿಶಿಷ್ಟವಾದ ಸಂಪ್ರದಾಯವಿದ್ದಲ್ಲಿ, ರಾಜ್ಯ ಸರ್ಕಾರವು ಅದಕ್ಕೆ ಸಂಬಂಧಿಸಿದಂತೆ ಸೂಕ್ತ ನಿಯಮಾವಳಿಗಳನ್ನು ರೂಪಿಸತಕ್ಕದ್ದು. ಆದರೆ,
- ಅಂತಹ ಸಂಪ್ರದಾಯಗಳನ್ನು ಸಮುದಾಯದ ಸದಸ್ಯರು ದೀರ್ಘಕಾಲದಿಂದ ನಿರಂತರವಾಗಿ ಆಚರಿಸುತ್ತಿದ್ದಲ್ಲಿ;
- ಸಂಪ್ರದಾಯಗಳು ಅಥವಾ ನೀತಿ-ನಿಯಮಾವಳಿಗಳು ಸಾರ್ವಜನಿಕ ನೀತಿಗೆ ವಿರುದ್ಧವಾಗಿರದಿದ್ದಲ್ಲಿ;
- ಸಂಪ್ರದಾಯಗಳು ಅಥವಾ ನೀತಿ-ನಿಯಮಾವಳಿಗಳು ಕೇವಲ ಕುಟುಂಬಕ್ಕೆ ಅನ್ವಯವಾಗುತ್ತಿದ್ದು, ಕುಟುಂಬವು ಆ ಆಚರಣೆಗಳನ್ನು ಪರಿಪಾಲಿಸುತ್ತಿದ್ದಲ್ಲಿ.
— ರಾಜ್ಯ ಸರ್ಕಾರವು ಅಂತಹ ನಿಯಮಾವಳಿಗಳನ್ನು ಪ್ರಕಟಿಸುವ ಅಗತ್ಯವಿಲ್ಲ.
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಶಾಸ್ತ್ರಬದ್ಧವಾಗಿ ನೆರವೇರಿದ ಪ್ರಕರಣಗಳಲ್ಲಿ, ಉಭಯ ಪಕ್ಷಗಾರರು ಭಾರತೀಯ ನಾಗರಿಕರಾಗಿರಬೇಕು ಮತ್ತು ಈ ಕಾನೂನು ಜಾರಿಯಲ್ಲಿರುವ ಪ್ರದೇಶಗಳಲ್ಲಿ ವಾಸಮಾಡುತ್ತಿಬೇಕು.
ಈ ಕಾನೂನಿನ ಅಡಿಯಲ್ಲಿ ಅಂತರ-ಧರ್ಮೀಯ ವಿವಾಹಗಳನ್ನು ನೋಂದಾಯಿಸುವ ಪ್ರಕ್ರಿಯೆ
ವಿಶೇಷ ವಿವಾಹಗಳನ್ನು ನೋಂದಾಯಿಸುವ ಪ್ರಕ್ರಿಯೆ ಹೀಗಿದೆ:-
ಈ ಕಾನೂನಿನ ಅಡಿಯಲ್ಲಿ ವಿವಾಹವನ್ನು ನೆರವೇರಿಸಬೇಕಿದ್ದಲ್ಲಿ, ವಿವಾಹ ಮಾಡಿಕೊಳ್ಳುವ ಉಭಯ ಪಕ್ಷಗಾರರು ಸಂಬಂಧಿಸಿದ ಜಿಲ್ಲೆಯ ವಿವಾಹ ಅಧಿಕಾರಿಗೆ ಲಿಖಿತ ರೂಪದಲ್ಲಿ ನೋಟೀಸ್ ನೀಡತಕ್ಕದ್ದು. ಹೀಗೆ ನೋಟೀಸು ನೀಡುವ ಪಕ್ಷಗಾರರಲ್ಲಿ ಕನಿಷ್ಟ ಒಬ್ಬರಾದರೂ ನೋಟೀಸಿನ ದಿನಾಂಕದಿಂದ ಕನಿಷ್ಟ 30 ದಿನಗಳ ಹಿಂದೆ ಅಂತಹ ಜಿಲ್ಲೆಯಲ್ಲಿ ವಾಸಮಾಡಿರತಕ್ಕದ್ದು.
ವಿವಾಹ ಅಧಿಕಾರಿಯು ಅಂತಹ ಎಲ್ಲ ನೋಟೀಸುಗಳನ್ನು ಕಛೇರಿಯ ದಾಖಲೆಯಲ್ಲಿ ಸಂಗ್ರಹಿಸಿಡುತ್ತಾರೆ ಮತ್ತು ಅಂತಹ ನೋಟೀಸುಗಳ ದೃಢೀಕೃತ ಪ್ರತಿಯೊಂದನ್ನು “ವಿವಾಹ ನೋಟೀಸ್ ಪುಸ್ತಕ” ದಲ್ಲಿಡಲಾಗುತ್ತದೆ.. ಈ ಪುಸ್ತಕವನ್ನು ಯಾವುದೇ ವ್ಯಕ್ತಿಯು ಯುಕ್ತ ಸಮಯದಲ್ಲಿ ಉಚಿತವಾಗಿ ಪರೀಕ್ಷಿಸಲು ಅವಕಾಶವಿದೆ.
ವಿವಾಹ ಅಧಿಕಾರಿಯು ಅಂತಹ ನೋಟೀಸಿನ ಪ್ರತಿಯನ್ನು ತನ್ನ ಕಛೇರಿಯಲ್ಲಿ ಸಾರ್ವಜನಿಕರ ಗಮನ ಸೆಳೆಯುವ ಸ್ಥಳದಲ್ಲಿ ಪ್ರಕಟಿಸುತ್ತಾರೆ. ವಿವಾಹ ಮಾಡಿಕೊಳ್ಳುತ್ತಿರುವ ಉಭಯ ಪಕ್ಷಗಾರರ ಪೈಕಿ ಯಾರೂ ಕೂಡ ವಿವಾಹ ಅಧಿಕಾರಿ ಕಛೇರಿಯ ಜಿಲ್ಲೆಯಲ್ಲಿ ಶಾಶ್ವತವಾಗಿ ವಾಸವಾಗಿಲ್ಲದ ಪ್ರಕರಣಗಳಲ್ಲಿ, ಪಕ್ಷಗಾರರು ಯಾವ ಜಿಲ್ಲೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೋ ಆ ಜಿಲ್ಲೆಯ ವಿವಾಹ ಅಧಿಕಾರಿಗೂ ಸಹ ವಿವಾಹದ ನೋಟಿಸಿನ ಪ್ರತಿಯೊಂದನ್ನುಕಳುಹಿಸುತ್ತಾರೆ. ಆ ಅಧಿಕಾರಿಯು ನೋಟೀಸನ್ನು
ತನ್ನ ಕಛೇರಿಯಲ್ಲಿ ಸಾರ್ವಜನಿಕರ ಗಮನ ಸೆಳೆಯುವ ಸ್ಥಳದಲ್ಲಿ ಪ್ರಕಟಿಸುತ್ತಾರೆ.
ವಿವಾಹ ನೆರವೇರುವುದಕ್ಕೆ ಮುನ್ನ ವಿವಾಹ ಅಧಿಕಾರಿಗಳ ಸಮ್ಮುಖದಲ್ಲಿ ಮೂವರು ಸಾಕ್ಷಿಗಳು ಘೋಷಣಾ ಪತ್ರವೊಂದಕ್ಕೆ ರುಜು ಮಾಡತಕ್ಕದ್ದು. ವಿವಾಹ ಅಧಿಕಾರಿಗಳೂ ಕೂಡ ಈ ಘೋಷಣಾ ಪತ್ರಕ್ಕೆ ಸಹಿಹಾಕುತ್ತಾರೆ. ಈ ಘೋಷಣೆಯ ನಮೂನೆಯನ್ನು ಈ ಕಾನೂನಿನ ಮೂರನೇ ಅನುಬಂಧದಲ್ಲಿ ನೀಡಲಾಗಿದೆ.
ವಿವಾಹ ನೆರವೇರಿದ ನಂತರ ವಿವಾಹ ಅಧಿಕಾರಿಯು ವಿವಾಹ ಪ್ರಮಾಣಪತ್ರ ಪುಸ್ತಕದಲ್ಲಿ ಪ್ರಮಾಣಪತ್ರವೊಂದನ್ನು ನಮೂದಿಸುತ್ತಾರೆ. ಈ ಪ್ರಮಾಣಪತ್ರಕ್ಕೆ ವಿವಾಹ ಮಾಡಿಕೊಳ್ಳುತ್ತಿರುವ ಉಭಯ ಪಕ್ಷಗಾರರು ಮತ್ತು ಮೇಲ್ಕಂಡ ಮೂವರು ಸಾಕ್ಷಿಗಳು ಸಹ ರುಜುಮಾಡುತ್ತಾರೆ. ಶಾಸನಬದ್ಧವಾಗಿ ವಿವಾಹವು ಜರುಗಿದೆ ಮತ್ತು ಸಾಕ್ಷಿಗಳ ಸಹಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಸಮರ್ಪಕ ನಿಯಮಗಳನ್ನು ಪಾಲಿಸಲಾಗಿದೆ ಎಂಬುದಕ್ಕೆ ಈ ಪ್ರಮಾಣಪತ್ರವು ಪ್ರಶ್ನಾತೀತ ಸಾಕ್ಷ್ಯಾಧಾರ.
ತಮ್ಮ ವಿವಾಹವನ್ನು ನೋಂದಣಿ ಮಾಡಬೇಕೆಂದು ವಿವಾಹ ಮಾಡಿಕೊಳ್ಳುತ್ತಿರುವ ಉಭಯ ಪಕ್ಷಗಾರರು ಸಹಿ ಮಾಡಿರುವ ಅರ್ಜಿಯನ್ನು ಸ್ವೀಕರಿಸಿದನಂತರ, ವಿವಾಹ ಅಧಿಕಾರಿಯು ಸಾರ್ವಜನಿಕ ಪ್ರಕಟಣೆಯನ್ನು ನೀಡಿ, ಆಕ್ಷೇಪಣೆ ಸಲ್ಲಿಸಲು ಮೂವತ್ತು ದಿನಗಳ ಗಡುವು ನೀಡಿ, ಆ ಸಮಯದಲ್ಲಿ ಯಾವುದಾದರೂ ಆಕ್ಷೇಪಣೆಗಳು ಬಂದಲ್ಲಿ ಅವುಗಳನ್ನು ಪರಿಗಣಿಸುತ್ತಾರೆ.
ಸೆಕ್ಷನ್ 15ರ ಎಲ್ಲ ಷರತ್ತುಗಳನ್ನು ಪಾಲಿಸಲಾಗಿದೆ ಎಂದು ಈ ಅಧಿಕಾರಿಗೆ ಮನವರಿಕೆಯಾದ ನಂತರ, ವಿವಾಹ ಪ್ರಮಾಣಪತ್ರ ಪುಸ್ತಕದಲ್ಲಿ ಅವರು ಪ್ರಮಾಣಪತ್ರವನ್ನು ನಮೂದಿಸುತ್ತಾರೆ. ಈ ಪ್ರಮಾಣಪತ್ರಕ್ಕೆ ವಿವಾಹ ಮಾಡಿಕೊಳ್ಳುತ್ತಿರುವ ಉಭಯ ಪಕ್ಷಗಾರರು ಮತ್ತು ಮೇಲ್ಕಂಡ ಮೂವರು ಸಾಕ್ಷಿಗಳು ರುಜುಮಾಡುತ್ತಾರೆ.
ಅಂತರ್ಧರ್ಮೀಯ ವಿವಾಹವನ್ನು ನೆರವೇರಿಸುವುದು
ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಜರುಗುವ ವಿವಾಹಗಳಿಗೆ ಯಾವುದೇ ನಿರ್ದಿಷ್ಟ ವಿಧಿ-ವಿಧಾನಗಳ ಅಗತ್ಯವಿಲ್ಲ. ಆದರೆ, ಇಲ್ಲಿ ಎರಡು ಸಾಧ್ಯತೆಗಳಿವೆ:
ನೀವು ಮತ್ತು ನಿಮ್ಮ ಜೊತೆಗಾರ/ಜೊತೆಗಾರ್ತಿ ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ಇಚ್ಛಿಸದಿದ್ದಲ್ಲಿ: ಉಭಯ ಪಕ್ಷಗಾರರು ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸದೆ, ವಿವಾಹ ಅಧಿಕಾರಿಯ ಸಮ್ಮುಖದಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಬಹುದು. ವಿವಾಹ ಹೇಗೆ ನೆರವೇರಬೇಕೆಂಬುದನ್ನು ತೀರ್ಮಾನಿಸುವ ಹಕ್ಕು ನಿಮಗಿದೆಯಾದರೂ, ನೀವು ಮತ್ತು ನಿಮ್ಮ ಜೊತೆಗಾರ/ಜೊತೆಗಾರ್ತಿ ವಿವಾಹ ಅಧಿಕಾರಿ ಮತ್ತು ಮೂವರು ಸಾಕ್ಷಿಗಳ
ಸಮ್ಮುಖದಲ್ಲಿ ಈ ಕೆಳಕಂಡ ವಾಕ್ಯಗಳನ್ನು ಪರಸ್ಪರ ಹೇಳತಕ್ಕದ್ದು. “ನಾನು (ನಿಮ್ಮ ಹೆಸರು) ನಿಮ್ಮನ್ನು (ನಿಮ್ಮ ಜೊತೆಗಾರ/ಜೊತೆಗಾರ್ತಿಯ ಹೆಸರು) ನನ್ನ ಶಾಸನಬದ್ಧ ಗಂಡ/ಹೆಂಡತಿ ಎಂದು ಸ್ವೀಕರಿಸುತ್ತೇನೆ”.
ನೀವು ಮತ್ತು ನಿಮ್ಮ ಜೊತೆಗಾರ/ಜೊತೆಗಾರ್ತಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿವಾಹ ನೆರವೇರಬೇಕೆಂದು ಇಚ್ಛಿಸಿದಲ್ಲಿ: ನೀವು ಯಾವುದೇ ಧಾರ್ಮಿಕ ವಿಧಿವಿಧಾನವನ್ನು (ನಿಮ್ಮ ವೈಯುಕ್ತಿಕ ಕಾನೂನಿನ ಪ್ರಕಾರ) ನೆರವೇರಿಸಬಹುದು ಮತ್ತು ನಂತರ ನಿಮ್ಮ ವಿವಾಹವನ್ನು ವಿಶೇಷ ವಿವಾಹ ಕಾಯ್ದೆ ಅಡಿ ನೋಂದಾಯಿಸಬಹುದು. ಆದರೆ ಹೀಗೆ ಮಾಡಲು ನೀವು ಮತ್ತು ನಿಮ್ಮ
ಜೊತೆಗಾರ/ಜೊತೆಗಾರ್ತಿ ಮೇಲ್ಕಂಡಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ದಿನಾಂಕದಿಂದ ನಿಮ್ಮ ವಿವಾಹವನ್ನು ನೋಂದಾಯಿಸುವ ದಿನಾಂಕವರೆಗೆ ಪತಿ-ಪತ್ನಿಯರಂತೆ ವಾಸಮಾಡುತ್ತಿರಬೇಕು.
ಅಂತರ್ಧರ್ಮೀಯ ವಿವಾಹ ಕಾನೂನಿಗೆ ಸಂಬಂಧಿಸಿದಂತೆ “ವಿವಾ ಹಅಧಿಕಾರಿ” ಯ ಸ್ಥಾನಮಾನ
ರಾಜ್ಯ ಸರ್ಕಾರವು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಣೆ ಹೊರಡಿಸುವುದರ ಮೂಲಕ ವಿವಾಹ ಅಧಿಕಾರಿಯನ್ನುನೇಮಿಸುತ್ತದೆ. ಸಂಬಂಧಿಸಿದ ಅರ್ಜಿದಾರರಿಗೆ ವಿವಾಹ ಪ್ರಮಾಣಪತ್ರವನ್ನು ನೀಡುವುದು ವಿವಾಹ ಅಧಿಕಾರಿಯ ಪ್ರಮುಖ ಕರ್ತವ್ಯ.