ಶೋಷಣೆಯನ್ನು ತಡೆಯುವುದು

ಅಂತರ್ಜಾಲದ ಹಲವಾರು ಮಾಧ್ಯಮಗಳಾದ ಸಾಮಾಜಿಕ ಜಾಲತಾಣ, ಚಾಟ್, ಇತ್ಯಾದಿಗಳಲ್ಲಿ ಬಳಕೆದಾರರು ಶೋಷಣೆ ಅಥವಾ ದೌರ್ಜನ್ಯಕ್ಕೊಳಗಾಗುತ್ತಾರೆ. ಅಂತಹ ಸನ್ನಿವೇಶದಲ್ಲಿ ಮೊದಲ ಹೆಜ್ಚೆಯಾಗಿ, ಅಂತಹ ಮಾಧ್ಯಮವು ಶೋಷಣೆಯ ವಿರುದ್ಧ ಹೊಂದಿರುವ ನೀತಿ ನಿಯಮಾವಳಿಗಳನ್ನು ಗಮನಿಸಿ ಮತ್ತು ಆ ಮಾಧ್ಯಮವು ಶೋಷಣೆಯನ್ನು ತಡೆಗಟ್ಟಲು ನೀಡಿರುವ ಸಲಹೆಗಳನ್ನು ಪರಿಗಣಿಸಿರಿ. ಫೇಸ್ ಬುಕ್, ಫೇಸ್ ಬುಕ್ ಮೆಸೆಂಜರ್, ಟ್ವಿಟರ್, ಇನ್ಸ್ಟಾಗ್ರಾಂ, ಸ್ನಾಪ್ ಚಾಟ್, ರೆಡ್ಡಿಟ್, ಯುಟ್ಯೂಬ್, ವಾಟ್ಸಾಪ್, ಮತ್ತು ನಿಮ್ಮ ಮೊಬೈಲಿನಲ್ಲಿ ಬರುವ ಮೇಸೇಜುಗಳಿಂದ ಆಗುವ ಶೋಷಣೆಗೆ ಪ್ರತಿಯಾಗಿ ನೀವು ತೆಗೆದುಕೊಳ್ಳಬಹುದಾದ ಕ್ರಮಗಳನ್ನು (ಬ್ಲಾಕ್ ಮಾಡುವುದು ಮತ್ತು ವರದಿ ಮಾಡುವುದು) ನಾವು ಪಟ್ಟಿ ಮಾಡಿದ್ದೇವೆ.

ಸದರಿ ಮಾಧ್ಯಮದ ಅಡ್ಮಿನಿಸ್ಟ್ರೇಟರ್ ಗಳು ನಿಮ್ಮ ದೂರಿಗೆ ಸಮಂಜಸವಾಗಿ ಸ್ಪಂದಿಸದಿದ್ದಲ್ಲಿ ಅಥವಾ ಅವರ ಪ್ರತಿಕ್ರಿಯೆ ನಿಮಗೆ ತೃಪ್ತಿಯಾಗದಿದ್ದಲ್ಲಿ, ನೀವು ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಅಥವಾ ಸೈಬರ್ ಸೆಲ್ ನಲ್ಲಿ ಕ್ರಿಮಿನಲ್ ದೂರನ್ನು ದಾಖಲಿಸಬಹುದು. ನೀವು ಅಂತರ್ಜಾಲ ಮಾಧ್ಯಮದ ಅಡ್ಮಿನಿಸ್ಟ್ರೇಟರ್ ಗಳನ್ನು ಸಂಪರ್ಕಿಸಲೇ ಬೇಕೆಂದು ನಿಯಮವೇನೂ ಇಲ್ಲ. ನೀವು ನೇರವಾಗಿ ಪೋಲೀಸ್ ಠಾಣೆ ಅಥವಾ ಸೈಬರ್ ಸೆಲ್ ನಲ್ಲಿ ದೂರನ್ನು ದಾಖಲಿಸಬಹುದು. ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲು ನೀವು ಪೋಲೀಸ್ ಠಾಣೆಗೆ ತೆರಳಿದಾಗ, ಪೋಲೀಸ್ ಸಿಬ್ಬಂದಿ ನೀವು ನೀಡುವ ಮಾಹಿತಿಯನ್ನು ಬರೆದುಕೊಳ್ಳತಕ್ಕದ್ದು. ಕಾನೂನಿನ ಹಲವಾರು ಉಪಬಂಧಗಳು ಅಂತರ್ಜಾಲ ಶೋಷಣೆ ಮತ್ತು ದೌರ್ಜನ್ಯವನ್ನು ಅಪರಾಧ ಎಂದು ಘೋಷಿಸಿವೆ. ಇಂತಹ ಅಪರಾಧಗಳಿಗೆ ಗಂಡು ಅಥವಾ ಹೆಣ್ಣು ಯಾರೇ ತುತ್ತಾಗಬಹುದು.

ಅಂತರ್ಜಾಲ ಶೋಷಣೆ ಕುರಿತು ದೂರು ನೀಡುವುದು

ಪೋಲೀಸ್ ಠಾಣೆಯನ್ನು ಸಂಪರ್ಕಿಸುವುದು
ಅಂತರ್ಜಾಲದಲ್ಲಿ ನೀವು ಶೋಷಣೆಯಿಂದ ಪೀಡಿತರಾಗಿರುವುದರನ್ನು ಕುರಿತು ಪೋಲೀಸ್ ಠಾಣೆಗೆ ದೂರು ನೀಡಲು ತೆರಳಿದಾಗ ಪೋಲೀಸರು ನಿಮಗೆ ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಿಸುವಂತೆ ತಿಳಿಸುತ್ತಾರೆ. ಘಟನೆ ಬಗ್ಗೆ ನಿಮಗೆ ತಿಳಿದಿರುವ ಎಲ್ಲ ಮಾಹಿತಿಯನ್ನು ಮತ್ತು ನೀವು ಶೋಷಣೆಗೆ ಗುರಿಯಾಗಿರುವುದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಪೋಲೀಸರಿಗೆ ನೀವು ಚಾಚೂತಪ್ಪದೆ ತಿಳಿಸತಕ್ಕದ್ದು.

 

ಸೈಬರ್ ಸೆಲ್
ಎಲ್ಲ ರಾಜ್ಯಗಳಲ್ಲಿ ಸೈಬರ್ ಸೆಲ್ ಸ್ಥಾಪಿಸಲಾಗಿದ್ದು ಕೆಲವು ಪೋಲೀಸ್ ಠಾಣೆಗಳಲ್ಲಿ ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ವಿಶೇಷ ದಳ ರಚಿಸಲಾಗಿರುತ್ತದೆ. ಅಂತರ್ಜಾಲದಲ್ಲಿ ನಿಮ್ಮನ್ನು ಯಾರಾದರೂ ಹಿಂಬಾಲಿಸುತ್ತಿದ್ದಲ್ಲಿ ಅಥವಾ ಹ್ಯಾಕಿಂಗ್ ಇತ್ಯಾದಿಗಳಿಗೆ ಸಂಬಂಧಿಸಿದ ದೂರುಗಳ ಸಂದರ್ಭದಲ್ಲಿ ನೀವು ಈ ವಿಶೇಷ ದಳದಿಂದ ಸಹಾಯ ಪಡೆಯಬಹುದಾಗಿರುತ್ತದೆ. ಸೈಬರ್ ಸೆಲ್ ನ ಜಾಲತಾಣದ ಮೂಲಕ ನೇರವಾಗಿ ದೂರನ್ನು ಸಲ್ಲಿಸುವ ಸೌಲಭ್ಯವನ್ನು ಹಲವಾರು ರಾಜ್ಯಗಳಲ್ಲಿ ಕಲ್ಪಿಸಲಾಗಿದೆ. ಉದಾಹರಣೆಗೆ, ದೆಹಲಿಯಲ್ಲಿ ನೀವು ಜಾಲತಾಣದ ಮೂಲಕ ಈ ಸಂಪರ್ಕ ಕೊಂಡಿಯಿಂದ ಸೈಬರ್ ಸೆಲ್ ಗೆ ದೂರು ಸಲ್ಲಿಸಬಹುದಾಗಿದೆ.

ಸೈಬರ್ ಅಪರಾಧ ಕುರಿತು ದೂರು ನೀಡಲು ನಿಮಗೆ ಎರಡು ಆಯ್ಕಗಳಿವೆ:
 ನಿಮ್ಮ ರಾಜ್ಯದ ಸೈಬರ್ ಸೆಲ್ ನ ಜಾಲತಾಣದಲ್ಲಿ ನೇರವಾಗಿ ದೂರು ಸಲ್ಲಿಸಿರಿ ಅಥವಾ
 ಸನಿಹದ ಪೋಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್ಐಆರ್) ಸಲ್ಲಿಸಿದಲ್ಲಿ, ಅದನ್ನು ಸೈಬರ್ ಸೆಲ್ ಗೆ ವರ್ಗಾಯಿಸಲಾಗುತ್ತದೆ.

 

ದೂರು ಸಲ್ಲಿಸುವ ಜಾಲತಾಣಗಳು:
ಆನ್ ಲೈನ್ ಅಪರಾಧ ವರದಿ ಮಾಡಲಾಗುವ ಜಾಲತಾಣ:
ಕೇಂದ್ರ ಗೃಹಖಾತೆಯ ಅಂತರ್ಜಾಲ ಅಪರಾಧ ವರದಿ ಜಾಲತಾಣದ https://cybercrime.gov.in/ ಮೂಲಕವೂ ನೀವು ದೂರನ್ನು ಸಲ್ಲಿಸಬಹುದಾಗಿದೆ. ದೂರು ದಾಖಲಿಸುವ ಸಲುವಾಗಿ ಈ ಜಾಲತಾಣದಲ್ಲಿ ನಿಮ್ಮನ್ನು ನಿರ್ದಿಷ್ಟ ರಾಜ್ಯದ ಜಾಲತಾಣಕ್ಕೆ ಪುನರ್ನಿರ್ದೇಶನ ಮಾಡಲಾಗುತ್ತದೆ. “ನಾಗರಿಕ ಸೇವೆಗಳು (Services for Citizen) ಎಂಬ ವಿಭಾಗದಲ್ಲಿ ನಿಮ್ಮ ದೂರನ್ನು ದಾಖಲಿಸಿ ನಂತರ “ಸೈಬರ್ ಕ್ರೈಂ ವರದಿ” (Report a Cyber Crime) ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿರಿ. ಇಲ್ಲಿ ನೀವು ಅಪರಾಧಿಯ ಮಾಹಿತಿ, ಘಟನೆಯ ವಿವರ ಹಾಗೂ ಅದಕ್ಕೆ ಸಂಬಂಧಿಸಿದ ಸ್ಕ್ರೀನ್ ಶಾಟ್ ಮತ್ತಿತರ ಸಾಕ್ಷ್ಯಾಧಾರಗಳನ್ನು ಒದಗಿಸಬಹುದು. ದೂರನ್ನು ನೀವು ಅನಾಮಧೇಯರಾಗಿ ಅಥವಾ ನಿಮ್ಮ ಗುರ್ತಿನೊಂದಿಗೆ ದಾಖಲಿಸಬಹುದಾಗಿದೆ. ನಿಮ್ಮ ದೂರಿನ ಕುರಿತು ತನಿಖೆಯ ಪ್ರಗತಿಯನ್ನು ಕೂಡ ಈ ಜಾಲತಾಣದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಸೈಬರ್ ಅಪರಾಧ ವರದಿ ಮಾಡುವ ಜಾಲತಾಣ:
ನೀವು ದೂರನ್ನು ನೇರವಾಗಿ ಸೈಬರ್ ಅಪರಾಧ ವರದಿ ಮಾಡುವ https://cybercrime.gov.in/ ಜಾಲತಾಣದಲ್ಲಿಯೂ ದಾಖಲಿಸಬಹುದಾಗಿದೆ. ಇಲ್ಲಿಯೂ ಕೂಡ ದೂರನ್ನು ಅನಾಮಧೇಯವಾಗಿ ಸಲ್ಲಿಸಲು ಅವಕಾಶವಿದೆ. ಇಲ್ಲಿ ಹಲವಾರು ರೀತಿಯ ಸೈಬರ್ ಅಪರಾಧಗಳ ಕುರಿತು ದೂರು ದಾಖಲಿಸಬಹುದಾಗಿದೆ. ನಿಮ್ಮ ದೂರಿನ ಕುರಿತು ತನಿಖೆಯ ಪ್ರಗತಿಯನ್ನು ತಿಳಿಯಲು ನೀವು
ಖಾತೆಯೊಂದನ್ನು ಪ್ರಾರಂಭಿಸಿ, ಲಾಗ್ ಇನ್ ಮಾಡಬೇಕಾಗುತ್ತದೆ.

ಸೈಬರ್ ಸುರಕ್ಷತೆ

ನಾವು ದಿನನಿತ್ಯ ಬಳಸುವ ಆನ್ ಲೈನ್ ಮಾಧ್ಯಮಗಳಲ್ಲಿ ಶೋಷಣೆಯಿಂದ ಮುಕ್ತರಾಗಲು ಮತ್ತು ಈ ಮಾಧ್ಯಮಗಳನ್ನು ಸುರಕ್ಷಿತವಾಗಿ ಬಳಸಲು ಕೆಲವು ಸಲಹೆಗಳನ್ನು ಈ ಕೆಳಕಂಡ ಲಿಂಕ್ ಗಳಿಂದ ಪಡೆಯಬಹುದಾಗಿದೆ:

  • ಮಕ್ಕಳಿಗಾಗಿ ಸೈಬರ್ ಸುರಕ್ಷತೆ
  • ಮಹಿಳೆಯರಿಗಾಗಿ ಸೈಬರ್ ಸುರಕ್ಷತೆ
  • ಹಿರಿಯ ನಾಗರಿಕರಿಗಾಗಿ ಸೈಬರ್ ಸುರಕ್ಷತೆ
  • ಪೋಷಕರಿಗೆ ಸೈಬರ್ ಸುರಕ್ಷತೆ
  • ವಾಣಿಜ್ಯೋದ್ಯಮಿಗಳಿಗೆ ಸೈಬರ್ ಸುರಕ್ಷತೆ
  • ಸಾಮಾಜಿಕ ಮಾಧ್ಯಮದಲ್ಲಿ ಸುರಕ್ಷತೆಗಾಗಿ ಸಲಹೆಗಳು
  • ಸಾಮಾಜಿಕ ಮಾಧ್ಯಮದಲ್ಲಿ ವಾಣಿಜ್ಯೋದ್ಯಮಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳು
  • ಬ್ಯಾಂಕ್ ಸೇವೆಗಳನ್ನು ಬಳಸುವವರಿಗಾಗಿ ಸೈಬರ್ ಸುರಕ್ಷತೆ ಸಲಹೆಗಳು

ಸಾಮಾಜಿಕ ಮಾಧ್ಯಮದಲ್ಲಿ ನಿಂದನೆಕೋರರನ್ನು ಬ್ಲಾಕ್ ಮಾಡುವುದು

ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಎಂದು ಕರೆಯಲಾಗುವ ನಮ್ಮ ಮೊಬೈಲ್ ಪೋನುಗಳಲ್ಲಿ ಮತ್ತು ಲ್ಯಾಪ್ ಟಾಪ್ ಗಳಲ್ಲಿ ಸಾಮಾನ್ಯವಾಗಿ ಬಳಸುವ ಎಲ್ಲ ಅಪ್ಲಿಕೇಶನ್ ಗಳು ನಿಂದನೆಕೋರರನ್ನು ಬ್ಲಾಕ್ ಮಾಡುವ ಆಯ್ಕೆ ಹೊಂದಿರುತ್ತವೆ. ಈ ಕೆಳಕಂಡ ಸಾಮಾಜಿಕ ಮಾಧ್ಯಮಗಳಲ್ಲಿ:-  ಫೇಸ್ ಬುಕ್  ಸ್ನಾಪ್ ಚಾಟ್  ಇನ್ಸ್ಟಾಗ್ರಾಂ  ರೆಡ್ಡಿಟ್  ಯುಟ್ಯೂಬ್  ವಾಟ್ಸಾಪ್ ಬ್ಲಾಕ್ ಮಾಡುವ ಆಯ್ಕೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಂದನೆಕೋರರನ್ನು ತಡೆಗಟ್ಟಬಹುದು.

ಮೊಬೈಲ್ ಪೋನ್ ಬಳಕೆದಾರರನ್ನು ಬ್ಲಾಕ್ ಮಾಡುವುದು

ಆಂಡ್ರಾಯ್ಡ್ ಪೋನುಗಳು:
ಕರೆಗಳನ್ನು ಬ್ಲಾಕ್ ಮಾಡುವುದು
ಆಂಡ್ರಾಯ್ಡ್ ಪೋನುಗಳಲ್ಲಿ ಕರೆಗಳನ್ನು ಬ್ಲಾಕ್ ಮಾಡಲು “ಕಾಲ್ ಹಿಸ್ಟರಿ” ಗೆ ಹೋಗಿ ಬ್ಲಾಕ್ ಮಾಡಲು ಇಚ್ಛಿಸುವ ಕಾಂಟಾಕ್ಟ್ (ಮೊಬೈಲ್ ಸಂಖ್ಯೆ) ಮೇಲೆ ಎರಡು ಸೆಕೆಂಡುಗಳ ಕಾಲ ಕ್ಲಿಕ್ ಮಾಡಿರಿ. “ಆಡ್ ಟು ಬ್ಲಾಕ್ ಲಿಸ್ಟ್” ಆಯ್ಕೆಯ ಮೇಲೆ ಟ್ಯಾಪ್ ಮಾಡಿರಿ. ಹೀಗೆ ಮಾಡಿದಾಗ ಆ ನಂಬರ್ ನಿಂದ ಬರುವ ಕರೆಗಳು ಬ್ಲಾಕ್ ಆಗುತ್ತವೆ.

ಟೆಕ್ಸ್ಟ್ ಮೆಸೇಜುಗಳನ್ನು ಬ್ಲಾಕ್ ಮಾಡುವುದು
ಆಂಡ್ರಾಯ್ಡ್ ಪೋನ್ ಗಳಲ್ಲಿ ಮೆಸೇಜುಗಳನ್ನು ಬ್ಲಾಕ್ ಮಾಡಲು “ಎಸ್ಎಂಎಸ್ ಲಿಸ್ಟ್” ಗೆ ಹೋಗಿ, ನೀವು ಬ್ಲಾಕ್ ಮಾಡಬೇಕೆಂದಿರುವ ಎಸ್ಎಂಎಸ್ ಮೇಲೆ 2-3 ಸೆಕೆಂಡುಗಳ ಕಾಲ ಕ್ಲಿಕ್ ಮಾಡಿರಿ. ಸ್ಕ್ರೀನಿನ ಬಲಭಾಗದ ಮೇಲ್ಗಡೆಯಲ್ಲಿ ಬ್ಲಾಕ್ ಮಾಡುವ ಆಯ್ಕೆ ಕಾಣಸಿಗುವುದು. ಹೀಗೆ ಮಾಡಿದಾಗ ಬ್ಲಾಕ್ ಮಾಡಿದ ಸಂಖ್ಯೆಯಿಂದ ನಿಮ್ಮ ಮೊಬೈಲ್ ಗೆ ಮೆಸೇಜುಗಳು ಬರುವುದು ಮುಂದುವರೆಯುತ್ತದೆ. ಆದರೆ ನಿಮಗೆ ನೋಟಿಫಿಕೇಶನ್ ಬರುವುದಿಲ್ಲ ಮತ್ತು ಅಂತಹ ಮೆಸೇಜುಗಳು ಆರ್ಕೈವ್ ಆಗುತ್ತವೆ.

ಆಪಲ್ ಐಪೋನುಗಳು:
ಐಒಎಸ್ ಸಹಾಯದೊಂದಿಗೆ ನೀವು ಕಾಂಟಾಕ್ಟ್ ಗಳನ್ನು ಮತ್ತು ಪೋನ್ ನಂಬರ್ ಗಳನ್ನು ಬ್ಲಾಕ್ ಮಾಡಬಹುದು. ಅಪರಿಚಿತರಿಂದ ಬರುವ ಐ-ಮೆಸೇಜುಗಳನ್ನು ಫಿಲ್ಟರ್ ಮಾಡಿ ಸ್ಪಾಮ್ ಅಥವಾ ಜಂಕ್ ಎಂದು ತೋರುವ ಮೆಸೇಜುಗಳನ್ನು ವರದಿ ಮಾಡಬಹುದು. ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.