ಉದ್ಯೋಗದಾತರಾಗಿ ನೀವು ಕೆಳಗಿನ ವಿವರಗಳುಳ್ಳ ದಾಖಲಾ ಪುಸ್ತಕವನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕಾಗಿರುತ್ತದೆ:
ದಾಖಲಾ ಪುಸ್ತಕವನ್ನು ಇಟ್ಟುಕೊಳ್ಳುವುದು:
- ನಿಮ್ಮ ಕೆಲಸದ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳ ಹೆಸರು ಮತ್ತು ಜನ್ಮ ದಿನ
- ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳ ಕೆಲಸದ ಗಂಟೆಗಳು ಮತ್ತು ಅವಧಿ
- ವಿರಾಮದ ಮಧ್ಯಂತರಗಳು ೪. ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳ ಕೆಲಸದ ಪ್ರಕಾರಗಳು
ಕೆಲಸದ ಪರಿಸ್ಥಿತಿಗಳು:
ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಯನ್ನು ಕೆಲಸಕ್ಕಿಟ್ಟುಕೊಂಡಿದ್ದಾಗ ಅವರ ಕೆಲಸದ ಗಂಟೆಗಳು ಹಾಗು ದಿನಗಳು, ಮತ್ತು ಆರೋಗ್ಯ ಮತ್ತು ಸುರಕ್ಷತೆಯ ಹೊಣೆ ಉದ್ಯೋಗದಾತರದ್ದು. ಹೀಗೆ, ಅವರನ್ನು ನ್ಯಾಯಯುತವಾಗಿ, ಮತ್ತು ಮಾನವೀಯವಾಗಿ ನೋಡಿಕೊಳ್ಳುವುದು ಉದ್ಯೋಗದಾತರ ಜವಾಬ್ದಾರಿ.
ಪರಿಶೀಲನಾಧಿಕಾರಿಗಳಿಗೆ ಸೂಚನೆ ನೀಡುವುದು:
ನೀವು ಉದ್ಯೋಗದಾತರಾಗಿ ಬಾಲ ಕಾರ್ಮಿಕರನ್ನು ಕೆಲಸಕ್ಕಿಟ್ಟುಕೊಂಡಿದ್ದರೆ, ಪರಿಶೀಲನಾಧಿಕಾರಿಗಳಿಗೆ ಸೂಚನೆ ಕಳುಹಿಸಬೇಕಾಗುತ್ತದೆ. ಆ ಕಿಶೋರಾವಸ್ಥೆಯಲ್ಲಿನ ವ್ಯಕ್ತಿಯನ್ನು ಕೆಲಸಕ್ಕೆ ನೇಮಿಸಿದ ೩೦ ದಿನಗಳ ಒಳಗೆ ಈ ಸೂಚನೆಯನ್ನು ಕಳುಹಿಸಬೇಕು. ಈ ಸೂಚನೆಯಲ್ಲಿ ಕೆಳಗಿನ ವಿವರಗಳಿರಬೇಕು:
- ಸಂಸ್ಥೆಯ ಹೆಸರು ಮತ್ತು ವಿಳಾಸ
- ಉದ್ಯೋಗದಾತರ ಹೆಸರು
- ಕೆಲಸದ ಪ್ರಕಾರಗಳು
- ಸಂಸ್ಥೆ ಮಾಡುವ ಕೆಲಸ
ಉದ್ಯೋಗದಾತರಾಗಿ ನೀವು ನಿಮ್ಮ ಕರ್ತವ್ಯಗಳನ್ನು ಪಾಲಿಸದಿದ್ದರೆ, ಒಂದು ತಿಂಗಳ ಗರಿಷ್ಟ ಸೆರೆಮನೆ ವಾಸ ಮತ್ತು/ಅಥವಾ ೧೦೦೦೦ ರೂಪಾಯಿಗಳ ಗರಿಷ್ಟ ಜುಲ್ಮಾನೆಯ ದಂಡ ನಿಮ್ಮ ಮೇಲೆ ವಿಧಿಸಲಾಗುವುದು.