ಉದ್ಯೋಗ ಸ್ಥಳದಲ್ಲಿನ ಲೈಂಗಿಕ ಕಿರುಕುಳ ಬಾಧಿತರ ಮಾರ್ಗದರ್ಶಿ 

ಉದ್ಯೋಗ ಸ್ಥಳದಲ್ಲಿನ ಲೈಂಗಿಕ ಕಿರುಕುಳ ಬಾಧಿತರ ಮಾರ್ಗದರ್ಶಿ 

(Trigger warning)ಎಚ್ಚರಿಕೆ ಸೂಚನೆ: ಈ ಮಾರ್ಗದರ್ಶಿಯು ದೈಹಿಕ ಹಿಂಸೆ, ಲೈಂಗಿಕ ದೌರ್ಜನ್ಯ, ನಿಂದನೆ

ಮತ್ತು ಅವಾಚ್ಯಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಕೆಲವು ಓದುಗರಿಗೆ ಇದರಿಂದ ತೊಂದರೆಯಾಗಬಹುದು. 

ಈ ಮಾರ್ಗದರ್ಶಿ ನಿಮಗೆ ಹೇಗೆ ಸಹಾಯ ಮಾಡಬಹುದು?

ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ಎದುರಿಸಿದವರಿಗೆ ಅಂತಹ ಸಂದರ್ಭಗಳಲ್ಲಿ ಕಾನೂನು ಪ್ರಕ್ರಿಯೆಯನ್ನು ಜರುಗಿಸಲು ಈ ಮಾರ್ಗದರ್ಶಿ ಸಹಾಯ ಮಾಡುತ್ತದೆ.  ಲೈಂಗಿಕ ಕಿರುಕುಳ ಬಾಧಿತರಿಗೆ ಲಭ್ಯವಿರುವ ಪರಿಹಾರಗಳು ಅಥವಾ ರಕ್ಷಣೆಗಳು, ತನಿಖೆಯ ಕಾರ್ಯವಿಧಾನ, ಶಿಕ್ಷೆಗಳು ಇತ್ಯಾದಿಗಳನ್ನು ಒಳಗೊಂಡಂತೆ ಕಾನೂನು ಅಂಶಗಳನ್ನು ಮಾರ್ಗದರ್ಶಿ ಸ್ಪಷ್ಟಪಡಿಸುತ್ತದೆ.

ಲೈಂಗಿಕ ಕಿರುಕುಳದಿಂದ ಬಾಧಿತರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವುದು ಮತ್ತು ಕೆಲಸದ ಸ್ಥಳದಲ್ಲಿ ಸಹೋದ್ಯೋಗಿ, ಸಂದರ್ಶಕರು ಅಥವಾ ಬೇರೆಯವರಿಂದ ಲೈಂಗಿಕ ಕಿರುಕುಳವಾದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅನುವು ಮಾಡಿಕೊಡುವುದು ಮಾರ್ಗದರ್ಶಿಯ ಉದ್ದೇಶವಾಗಿದೆ.

ಈ ಮಾರ್ಗದರ್ಶಿಯಲ್ಲಿ ಚರ್ಚಿಸಲಾದ ಕಾನೂನುಗಳು ಯಾವುವು?

ಈ ಮಾರ್ಗದರ್ಶಿಯು ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳವನ್ನು ಚರ್ಚಿಸುತ್ತದೆ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013 (“POSH/ ಪೋಷ್ ಕಾಯಿದೆ”), ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ನಿಯಮಗಳು, 2013 (“POSH ನಿಯಮಗಳು”) ಮತ್ತು ಭಾರತೀಯ ದಂಡ ಸಂಹಿತೆ, 1860( IPC)/ಭಾರತೀಯ ನ್ಯಾಯ ಸಂಹಿತೆ,2023, (BNS)  ಅಡಿ ಲೈಂಗಿಕ ಕಿರುಕುಳ, ಹಿಂಬಾಲಿಸುವುದು ಮತ್ತು ವೋಯರಿಸಂ ಮುಂತಾದ ಅಪರಾಧಗಳನ್ನು ಅಪರಾಧೀಕರಿಸುತ್ತದೆ ಮತ್ತು ಪರ್ಯಾಯ ಕ್ರಿಮಿನಲ್ ದೂರು ಕಾರ್ಯವಿಧಾನಗಳನ್ನು ಒದಗಿಸುತ್ತದೆ.

ಮೊದಲ ಹಂತಗಳು ಮತ್ತು ಪ್ರಮುಖ ಮಾಹಿತಿ

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಎಂದರೇನು?

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವು ಯಾವುದೇ ಇಷ್ಟವಿಲ್ಲದ ಲೈಂಗಿಕ ಕ್ರಿಯೆಗೆ ಮುಂದಾಗುವಿಕೆ, ಲೈಂಗಿಕ ಅನುಕೂಲಕ್ಕಾಗಿ ವಿನಂತಿ ಅಥವಾ ಇತರ ರೀತಿಯ ಇಷ್ಟವಿಲ್ಲದ ಲೈಂಗಿಕ ನಡವಳಿಕೆಯಾಗಿದ್ದು ಅದು ನಿಮ್ಮನ್ನು ಮನ ನೊಯಿಸುವಂತಿರುತ್ತದೆ, ಅವಮಾನ ಅಥವಾ ಬೆದರಿಕೊಳ್ಳುವಂತೆ ಮಾಡುತ್ತದೆ.1

 ‘ಲೈಂಗಿಕ ಕಿರುಕುಳ’ ಇಷ್ಟವಿಲ್ಲದ ಲೈಂಗಿಕ ನಡವಳಿಕೆಯನ್ನು ಒಳಗೊಂಡಿರುತ್ತದೆ (ನೇರವಾಗಿ ಅಥವಾ ಸೂಚ್ಯವಾಗಿ) ಉದಾಹರಣೆಗೆ 2:

  1. ದೈಹಿಕ ಸ್ಪರ್ಶಗಳು ಮತ್ತು ಮುಂದುವರೆಯುವಿಕೆ  
  • ಬಲವಂತದ ಅಥವಾ ಅನಗತ್ಯ, ಬೇಡದ ದೈಹಿಕ ಸ್ಪರ್ಶ, ದೈಹಿಕ ಆಕ್ರಮಣ, ಅಥವಾ ಲೈಂಗಿಕ ಕಿರುಕುಳ
  • ಡೇಟ್ಸ್ ಗಾಗಿ  ಬಲವಂತದ ಮತ್ತು ಪುನರಾವರ್ತಿತ ಆಹ್ವಾನಗಳು
  • ಬಲವಂತದ ಅಥವಾ ಅನಪೇಕ್ಷಿತ ಚುಂಬನಗಳು ಅಥವಾ ಅಪ್ಪುಗೆಗಳು
  • ದೇಹದ ಯಾವುದೇ ಭಾಗದ ಅನಗತ್ಯ, ಅನಪೇಕ್ಷಿತ ಸ್ಪರ್ಶ
  • ಕಾರ್ಯಸ್ಥಳದಲ್ಲಿ ನಿಮ್ಮ ಚಲನೆಯನ್ನು ನಿಲ್ಲಿಸುವುದು ಅಥವಾ ನಿರ್ಬಂಧಿಸುವುದು
  • ತುಂಬಾ ಹತ್ತಿರದಲ್ಲಿ ಕುಳಿತುಕೊಳ್ಳುವುದು ಮತ್ತು ನಿಮಗೆ ಅನಾನುಕೂಲತೆಯನ್ನು ಉಂಟುಮಾಡುವುದು (ನೀವು ದೂರ ಹೋದರೆ ವ್ಯಕ್ತಿ ಮತ್ತೆ ನಿಮ್ಮ ಹತ್ತಿರ ಹೋಗುವರು).
  1. ಲೈಂಗಿಕ ಅನುಕೂಲಗಳು
  • ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ ಅಥವಾ ವಿನಂತಿ
  • ನಿಮ್ಮಿಂದ ಲೈಂಗಿಕ ಅನುಕೂಲಕ್ಕೆ ಪ್ರತಿಯಾಗಿ ಯಾವುದೇ ಅನುಕೂಲ ಅಥವಾ ಪ್ರಯೋಜನವನ್ನು ನೀಡುವುದು

ಗಮನಿಸಿ: ಲೈಂಗಿಕ ಅನುಕೂಲಗಳು ಎಂದರೆ ಅಶ್ಲೀಲ ಸಂಭಾಷಣೆಗಳು, ಅಶ್ಲೀಲ ಸಂವಹನಗಳಿಗಾಗಿ ವಿನಂತಿಗಳು,

ವಿಕೃತ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳುವುದು, ಇದೇ ರೀತಿಯ ಸಂಭಾಷಣೆಗಳಿಂದ ಮನರಂಜನೆ ಮಾಡುವುದು ಮತ್ತು ವ್ಯಕ್ತಿಯೊಂದಿಗೆ ವಾಸ್ತವವಾಗಿ ದೈಹಿಕವಾದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಆಗಿರಬಹುದು.

  1. ಲೈಂಗಿಕ ಲೇಪನದ ಟೀಕೆಗಳು
  • ನಿಮ್ಮ ದೇಹ ಅಥವಾ ಉಡುಗೆ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳು, ನಿಂದನೆಗಳು, ವಿಶೇಷಣಗಳು ಅಥವಾ ಲೈಂಗಿಕತೆ ಸೂಚಿಸುವ ಹಾಸ್ಯಗಳು
  • ಲೈಂಗಿಕ ಒಳಾರ್ಥಗಳೊಂದಿಗೆ ನಿಮ್ಮ ವೈಯಕ್ತಿಕ ಜೀವನದ ಟಿಪ್ಪಣಿಗಳು 
  • ನಿಮ್ಮ ದೈಹಿಕ ನೋಟ ಅಥವಾ ದೇಹದ ಆಕಾರದ ಬಗ್ಗೆ ಸೂಕ್ಷ್ಮವಾದ ಅಪಹಾಸ್ಯ ಅಥವಾ ಬಹಿರಂಗವಾಗಿ ನಿಂದಿಸುವುದು
  • ಲೈಂಗಿಕ ರೂಪಕಗಳು, ಅಶ್ಲೀಲ ಹಾಸ್ಯಗಳು, ಅಥವಾ ಮುಜುಗರವನ್ನು ಅಥವಾ ಸೋಜುಗವನ್ನು ಉಂಟುಮಾಡುವ ಅಥವಾ ಮಾಡಬಲ್ಲ ಹಾಸ್ಯಗಳು
  1. ಅಶ್ಲೀಲ ಚಿತ್ರ ಅಥವಾ ಇತರ ಲೈಂಗಿಕವಾಗಿ ಆಕ್ಷೇಪಾರ್ಹ ಅಥವಾ ಅವಹೇಳನಕಾರಿ ವಸ್ತುಗಳನ್ನು ತೋರಿಸುವುದು
  • ಲೈಂಗಿಕತೆ ಸೂಚಿಸುವ ವಸ್ತುಗಳು ಅಥವಾ ಚಿತ್ರಗಳು, ಕಾರ್ಟೂನ್‌ಗಳು, ಕ್ಯಾಲೆಂಡರ್‌ಗಳು ಅಥವಾ ಪೋಸ್ಟರ್‌ಗಳನ್ನು ಪ್ರದರ್ಶಿಸುವುದು
  • ನಗ್ನ ಚಿತ್ರಗಳು ಅಥವಾ ಅಶ್ಲೀಲ ಚಿತ್ರಗಳನ್ನು ಕಳುಹಿಸುವುದು
  • ನಿಮ್ಮ ಉಪಸ್ಥಿತಿಯಲ್ಲಿ ಯಾರಿಗಾದರೂ ಅಶ್ಲೀಲ ಚಿತ್ರಗಳು ಅಥವಾ ಅಶ್ಲೀಲ ಹಾಸ್ಯಗಳು ಅಥವಾ ಆಕ್ಷೇಪಾರ್ಹ ವಸ್ತುಗಳನ್ನು ತೋರಿಸುವುದು
  • ಕಂಪನಿ/ತಂಡ ವಾಟ್ಸಾಪ್ ಗುಂಪುಗಳಲ್ಲಿ ಅಥವಾ ವರ್ಚುವಲ್ ಸಭೆಗಳಲ್ಲಿ ಅಶ್ಲೀಲ ಚಿತ್ರಗಳು ಅಥವಾ ಜೋಕ್‌ಗಳು ಅಥವಾ ಆಕ್ಷೇಪಾರ್ಹ ವಸ್ತುಗಳನ್ನು ಹಂಚಿಕೊಳ್ಳುವುದು.
  1. ಯಾವುದೇ ಇತರ ಸ್ವಾಗತಾರ್ಹವಲ್ಲದ ದೈಹಿಕ, ಮೌಖಿಕ ಅಥವಾ ಲೈಂಗಿಕ ಸ್ವಭಾವದ ಮೌಖಿಕ ನಡವಳಿಕೆ3.
  • ಓರೆ ನೋಟ, ಶಿಳ್ಳೆ, ದಿಟ್ಟಿಸುವುದು ಮುಂತಾದ ಲೈಂಗಿಕ ಸನ್ನೆಗಳನ್ನು ಮಾಡುವುದು
  • ಲಿಂಗ-ಆಧಾರಿತ ಅವಮಾನಗಳು ಮತ್ತು/ಅಥವಾ ಲೈಂಗಿಕ ಟೀಕೆಗಳು
  • ಚುಡಾಯಿಸುವುದು
  • ದೈಹಿಕವಾಗಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸುವುದು
  • ನಿಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪುನರಾವರ್ತಿತ ಸ್ನೇಹ ವಿನಂತಿಗಳು
  • ಅಕಾಲದಲ್ಲಿ ಅಥವಾ ಕೆಲಸದ ಸಮಯವನ್ನು ಮೀರಿ ನಿಮಗೆ ನಿರಂತರವಾಗಿ ಕರೆ ಮಾಡುವುದು
  • ಸಭೆಗಳು, ಕಂಪನಿಯ ನಿಯಮಗಳಿಗೆ ಅಗತ್ಯವಿಲ್ಲದಿದ್ದರೂ ಸಹ ವರ್ಚುವಲ್‌ ನಲ್ಲಿ ಎಲ್ಲಾ ಸಮಯದಲ್ಲೂ ನಿಮ್ಮ ವೀಡಿಯೊ ಮೋಡ್ ಅನ್ನು ಆನ್ ಮಾಡಲು ಒತ್ತಾಯಿಸುವುದು
  • ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ನಿರಂತರ ಪ್ರಶ್ನೆಗಳು
  • ನಿಮ್ಮನ್ನು ‘ಸ್ವೀಟಿ’, ‘ಡಾರ್ಲಿಂಗ್’ ಅಥವಾ ‘ಹನಿ’ ಎಂದು ಕರೆಯುವುದು
  • ಯಾರಾದರೂ ತಮ್ಮ ಖಾಸಗಿ ಅಂಗವನ್ನು ನಿಮಗೆ ಬಹಿರಂಗವಾಗಿ ತೋರ್ಪಡಿಸುವುದು ಅಥವಾ ಪದೇ ಪದೇ  ನಿಮ್ಮ ದೇಹದ ಭಾಗಗಳನ್ನು  ದಿಟ್ಟಿಸುವುದು
  • ಹಾರ್ಡ್ ಕಾಪಿಯಲ್ಲಿ ಹಂಚಲಾದ ಲೈಂಗಿಕ ಸ್ವಭಾವದ ಲಿಖಿತ ಸಂವಹನಗಳು ಅಥವಾ ಕಂಪ್ಯೂಟರ್ ನೆಟ್ವರ್ಕ್ ಮೂಲಕ ವಿತರಿಸಲಾಗಿದ ಸೂಚ್ಯಗಳು ಅಥವಾ ಅಶ್ಲೀಲ ಪತ್ರಗಳು, ಟಿಪ್ಪಣಿಗಳು ಅಥವಾ ಆಮಂತ್ರಣಗಳು
  • ಲೈಂಗಿಕ ಸ್ವಭಾವದ ಪಠ್ಯ ಸಂದೇಶಗಳು ಅಥವಾ ಇಮೇಲ್‌ಗಳು.
  1. QUID PRO QUO

QUID PRO QUO (ಕ್ವಿಡ್ ಪ್ರೊ ಕೊ) ಎಂದೂ ಕರೆಯಲ್ಪಡುವ ಲೈಂಗಿಕ ಅನುಕೂಲಗಳಿಗೆ ಪ್ರತಿಯಾಗಿ ಉದ್ಯೋಗಿಗೆ ಪರೋಕ್ಷ ಅಥವಾ ನೇರ ಪ್ರಯೋಜನಗಳ ಭರವಸೆ ನೀಡುವುದು. QUID PRO QUO (ಅಕ್ಷರಶಃ ಅರ್ಥ “ಅದಕ್ಕಾಗಿ”) ಒಂದು ವಿನಿಮಯ ಪ್ರತಿಪಾದನೆಯಾಗಿದ್ದು ಅದು ಈ ಕೆಳಗಿನ ಒಂದು ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ಪ್ರತಿಫಲಿಸಬಹುದು:

  • ನೇಮಕ
  • ಸಂಬಳ ಅಥವಾ ಪರಿಹಾರದ ಪಾವತಿ
  • ಬಡ್ತಿ
  • ಕೆಲಸದಲ್ಲಿ ಉಳಿಸಿಕೊಳ್ಳುವ ನಿರ್ಧಾರ /ಧಾರಣ
  • ಸ್ಥಳಾಂತರ ಅಥವಾ ವರ್ಗಾವಣೆ
  • ಕೆಲಸದ ಹಂಚಿಕೆ, ಜವಾಬ್ದಾರಿ ಅಥವಾ ಕೆಲಸ

ಲೈಂಗಿಕ ಅನುಕೂಲತೆ ನೀಡದ/ ಡೇಟ್ ಗೆ ಹೋಗಲು ನಿರಾಕರಿಸಿದ ಕಾರಣಕ್ಕೆ ಉದ್ಯೋಗಕ್ಕೆ ಹಾನಿ ಮಾಡುವ ಪರೋಕ್ಷ ಅಥವಾ ನೇರ ಬೆದರಿಕೆಗಳು, ಇವುಗಳನ್ನು ಒಳಗೊಂಡಂತೆ:

  • ಬಡ್ತಿ ನಷ್ಟ
  • ಉದ್ಯೋಗ ನಷ್ಟ
  • ಋಣಾತ್ಮಕ ಕಾರ್ಯಕ್ಷಮತೆಯ ಮೌಲ್ಯಮಾಪನ
  • ಅನಪೇಕ್ಷಿತ ಕೆಲಸದ ಹಂಚಿಕೆ
  • ಸಮಾನ ಅವಕಾಶಗಳ ನಿರಾಕರಣೆ
  1. ಪ್ರತಿಕೂಲ ಕೆಲಸದ ಪರಿಸರ

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವು ಒಂದೇ ಒಂದು ಸನ್ನಿವೇಶ, ಅನುಭವ ಅಥವಾ ಘಟನೆಗೆ ಸೀಮಿತವಾಗಿಲ್ಲ. ಮಹಿಳೆಯ ಕೆಲಸದ ಅನುಭವದ ಸಂಪೂರ್ಣ ಅನುಭವವನ್ನು ಅಲ್ಪಾವಧಿಯ/ದೀರ್ಘಕಾಲದಲ್ಲಿ ಲಿಂಗದ ನಿರ್ದಿಷ್ಟ ವ್ಯಕ್ತಿಯಾದ ಅವಳಿಗೆ ಪ್ರತಿಕೂಲವಾದ ವಾತಾವರಣವಾಗಿ ರಚಿಸಬಹುದು. ಇದು ಕೆಲಸದಲ್ಲಿ ಹಸ್ತಕ್ಷೇಪದ ರೂಪದಲ್ಲಿ ಪ್ರತಿಫಲಿಸಬಹುದು ಅಥವಾ ಬೆದರಿಸುವ, ಆಕ್ರಮಣಕಾರಿ ಅಥವಾ ಪ್ರತಿಕೂಲವಾದ ಕೆಲಸದ ವಾತಾವರಣವನ್ನು ಸೃಷ್ಟಿಸುತ್ತದೆ:

  • ಲೈಂಗಿಕ ಲೇಪನದ ಟೀಕೆಗಳು ಸೇರಿದಂತೆ ಅಶ್ಲೀಲ, ಅನಗತ್ಯ ಕ್ರಿಯೆಗಳು, ದಿಟ್ಟಿಸುವುದು, ಬಲವಂತದ ದೈಹಿಕ ಸಂಪರ್ಕ
  • ಅಶ್ಲೀಲತೆಯನ್ನು ಪ್ರದರ್ಶಿಸುವುದು
  • ಲಿಂಗ ಆಧಾರಿತ ಅವಮಾನಗಳು ಅಥವಾ ಲೈಂಗಿಕ ಟೀಕೆಗಳು
  • ಲಿಂಗದ ಆಧಾರದಮೇಲೆ ವ್ಯಕ್ತಿಯನ್ನು ಯೋಜನೆಗಳಲ್ಲಿ ಅಥವಾ ಸಭೆಗಳಲ್ಲಿ ಸೇರಿಸದಿರುವುದು
  • ಲಿಂಗದ ಕಾರಣಕ್ಕಾಗಿ ಸಭೆಗಳು ಅಥವಾ ಕೆಲಸಗಳಲ್ಲಿ ಯಾರೊಬ್ಬರ ಉಪಸ್ಥಿತಿಯನ್ನು ಒಪ್ಪಿಕೊಳ್ಳಲು ನಿರಾಕರಿಸುವುದು
  • ಸಭೆಗಳ ಸಮಯದಲ್ಲಿ ಲೈಂಗಿಕ ಟಿಪ್ಪಣಿಗಳು.
  1. ನೌಕರರ ಆರೋಗ್ಯ ಅಥವಾ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಅವಮಾನಕರ ವರ್ತನೆ, ಉದಾಹರಣೆಗೆ 4:
  • ದೈಹಿಕ ಬಂಧನ ಅಥವಾ ಖಾಸಗಿತನವನ್ನು ಉಲ್ಲಂಘಿಸುವ ನಡವಳಿಕೆ
  • ಪುರುಷ ಸಹೋದ್ಯೋಗಿಯೊಂದಿಗೆ ಅಹಿತಕರ ಮತ್ತು ಅನುಚಿತ ರೀತಿಯಲ್ಲಿ ಜೊತೆಗಿರುವ ಪರಿಸ್ಥಿತಿ ನಿರ್ಮಾಣವಾಗುವಂತೆ ಮಹಿಳೆಯನ್ನು ಒತ್ತಾಯಿಸುವ ಕೆಲಸದ ವಾತಾವರಣವನ್ನು ರಚಿಸುವುದು
  • ಮಹಿಳೆಯ ಖಾಸಗಿ ಮತ್ತು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಗಾಸಿಪ್ ಮಾಡುವುದು.

‘ಕೆಲಸದ ಸ್ಥಳ’ ಎಂದರೇನು?

ಲೈಂಗಿಕ ಕಿರುಕುಳವು ‘ಕೆಲಸದ ಸ್ಥಳ’ದಲ್ಲಿ ಸಂಭವಿಸಿರಬೇಕು ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ, ಕೆಫೆಟೇರಿಯಾದಲ್ಲಿ, ಯಾವುದೇ ಸಾಮಾನ್ಯ ಕೊಠಡಿಗಳಲ್ಲಿ, ಇತ್ಯಾದಿಗಳಲ್ಲಿ ಸಂಭವಿಸಿರಬಹುದು. ಇದು ‘ವಿಸ್ತೃತ ಕೆಲಸದ ಸ್ಥಳ’ವನ್ನು ಸಹ ಒಳಗೊಂಡಿರುತ್ತದೆ, ಅಂದರೆ ನೀವು ಕೆಲಸಕ್ಕಾಗಿ ಅಥವಾ ನಿಮ್ಮ ಉದ್ಯೋಗದ ಸಮಯದಲ್ಲಿ ಭೇಟಿ ನೀಡುವ ಯಾವುದೇ ಸ್ಥಳ. ಉದಾಹರಣೆಗೆ, ಕೆಲಸದ ಸ್ಥಳ, ಬಾಹ್ಯ ಕಾನ್ಫರೆನ್ಸ್ ಮಾರ್ಗಗಳು ಇತ್ಯಾದಿಗಳಿಗೆ ಪ್ರಯಾಣಿಸಲು ನಿಮ್ಮ ಉದ್ಯೋಗದಾತರು ಒದಗಿಸಿದ ಸಾರಿಗೆಯಲ್ಲಿ ನೀವು ಲೈಂಗಿಕ ಕಿರುಕುಳವನ್ನು ಎದುರಿಸಿದರೆ ನೀವು ದೂರು ನೀಡಬಹುದು.

  1. ಪ್ರಾಥಮಿಕ ಕಾರ್ಯಸ್ಥಳ

ನೀವು ಸೇರಿದಂತೆ ಎಲ್ಲರೂ ಭೇಟಿ ನೀಡುವ ಅಥವಾ ಕೆಲಸಕ್ಕೆ ಹಾಜರಾಗುವ ಸ್ಥಳವೆಂದು ಗುರುತಿಸಬಹುದು,

ಇವುಗಳು ವರ್ಚುವಲ್, ರಿಮೋಟ್ ಅಥವಾ ಭೌತಿಕ ಕೆಲಸದ ಸ್ಥಳಗಳಾಗಿರಬಹುದು.

  1. ವಿಸ್ತೃತ ಕಾರ್ಯಸ್ಥಳ

ಇವುಗಳು ನೀವು ಭೇಟಿ ನೀಡಿದ ಸ್ಥಳಗಳಾಗಿವೆ ಅಥವಾ ನಿಮ್ಮ ಕೆಲಸದ ಅವಶ್ಯಕತೆಗಾಗಿ ನೀವು ಇರುವ ಸ್ಥಳಗಳಾಗಿವೆ. ವಿಸ್ತೃತ ಕೆಲಸದ ಸ್ಥಳಗಳ ಉದಾಹರಣೆಯೆಂದರೆ ಕೆಲಸದಿಂದ ಮತ್ತು ಕೆಲಸದ ಕಾರಣಗಳಿಗಾಗಿ ಹೋಗಿ ಬರುವ ಸ್ಥಳಗಳು, ಅದಕ್ಕಾಗಿ ಆಯೋಜಿತವಾದ ಸಾರಿಗೆ ವ್ಯವಸ್ಥೆಯೂ ಸೇರಿದಂತೆ, ಸಮ್ಮೇಳನಗಳು, ಕಾರ್ಯಕ್ರಮಗಳು, ಕಾಫಿ ಹೌಸ್‌ಗಳು, ಹೋಟೆಲ್‌ಗಳು, ಗ್ರಾಹಕರ ಸ್ಥಳಗಳು ಮುಂತಾದವು.  

  1. ವರ್ಚುವಲ್ ಕಾರ್ಯಸ್ಥಳ

ನಿಮ್ಮ ಕೆಲಸದ ಕಾರ್ಯಗಳನ್ನ ತಲುಪಿಸುವ ಉದ್ದೇಶಕ್ಕಾಗಿ ಬಳಸಲಾಗುವ ಎಲ್ಲಾ ವೇದಿಕೆಗಳು ಮತ್ತು ಸಂವಹನ ವಿಧಾನಗಳನ್ನು. ವರ್ಚುವಲ್ ಕೆಲಸದ ಸ್ಥಳಗಳ ಉದಾಹರಣೆಗಳೆಂದರೆ ಇಮೇಲ್‌ಗಳು, ಫೋನ್ ಕರೆಗಳು, ವಾಟ್ಸಾಪ್, ಸ್ಲಾಕ್, ವೀಡಿಯೊ ಸಭೆಗಳು, ಆಡಿಯೊ ಸಭೆಗಳು, ಆನ್‌ಲೈನ್ ಚರ್ಚಾಸ್ತಳ ಮತ್ತು ಹೆಚ್ಚಿನವು.

ಮನೆಯಿಂದ ಕೆಲಸ ಮಾಡುವುದರ ಬಗ್ಗೆ?

ಮನೆಯಿಂದ ಕೆಲಸ ಮಾಡುವುದನ್ನು ಕೆಲಸದ ಸ್ಥಳದ ವಿಸ್ತರಣೆ ಎಂದು ಪರಿಗಣಿಸಲಾಗುತ್ತದೆ5  ಮತ್ತು ನೀವು ದೂರದ ಸ್ಥಳದಿಂದ ಕೆಲಸ ಮಾಡುತ್ತಿದ್ದರೂ ಸಹ ಪೋಷ್/POSH ಕಾನೂನಿನ ಅಡಿಯಲ್ಲಿ ರಕ್ಷಣೆ ಪಡೆಯಬಹುದು.. ಕೆಲವು ರೀತಿಯ ಅನುಚಿತ ಆನ್‌ಲೈನ್ ನಡವಳಿಕೆಯು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಅಡಿಯಲ್ಲಿ ಅಪರಾಧಗಳಾಗಿರಬಹುದು, ಇದನ್ನು ಆನ್‌ಲೈನ್ ನಿಂದನೆ ಅಥವಾ ಆನ್‌ಲೈನ್ ಹಿಂಸೆ ಎಂದೂ ಕರೆಯಲಾಗುತ್ತದೆ. POSH ಕಾಯಿದೆಯ ಉದ್ದೇಶಗಳಿಗಾಗಿ ವರ್ಚುವಲ್ ಕೆಲಸದ ಸ್ಥಳಗಳು ಮತ್ತು ಮನೆಗಳು ಕೆಲಸದ ಸ್ಥಳಗಳಾಗಿವೆ ಎಂದು ಭಾರತದ ನ್ಯಾಯಾಲಯಗಳು ಸ್ಪಷ್ಟಪಡಿಸಿವೆ.

ಅನ್ಜೆಂಡರ್ ಬ್ಲಾಗ್‌ನಲ್ಲಿ ಇನ್ನಷ್ಟು ಓದಿ.

ಯಾವ ರೀತಿಯ ಸಂಸ್ಥೆಗಳು ಅಥವಾ ಕಾರ್ಯಸ್ಥಳಗಳಿಗೆ ಈ ಕಾನೂನು ಅನ್ವಯಿಸುತ್ತದೆ ?

ಫೋಷ್ ಕಾನೂನು ಭಾರತದ ಎಲ್ಲಾ ಕೆಲಸದ ಸ್ಥಳಗಳಿಗೆ – ಸಂಘಟಿತ ಮತ್ತು ಅಸಂಘಟಿತ ವಲಯಗಳಿಗೆ ಅನ್ವಯಿಸುತ್ತದೆ. ಸಾಮಾನ್ಯ ತಿಳುವಳಿಕೆಯು, ಕನಿಷ್ಟ ಸಂಖ್ಯೆಯ ಉದ್ಯೋಗಿಗಳಿರುವ ಕಾರ್ಯಸ್ಥಳಗಳಿಗೆ ಮಾತ್ರ ಈ ಕಾನೂನಿನ ಅನ್ವಯವಾಗುತ್ತದೆ ಎಂಬ ಗೊಂದಲವನ್ನುಂಟುಮಾಡುತ್ತದೆ. ಆದರೆ,   ಕೆಳಗೆ ನಮೂದಿಸಲಾದ ಸಂಸ್ಥೆಗಳಲ್ಲಿ ಎಷ್ಟೇ ಸಂಖ್ಯೆಯ ಉದ್ಯೋಗಿಗಳಿದ್ದರೂ,  ಈ ಕಾನೂನು ಅಂತಹ ಸಂಸ್ಥೆಗಳಿಗೆ ಅನ್ವಯಿಸುತ್ತದೆ ಮತ್ತು 10 ಅಥವಾ ಹೆಚ್ಚಿನ ಸದಸ್ಯರನ್ನೊಳಗೊಂಡ ಸಂಸ್ಥೆಳು ಆಂತರಿಕ ಸಮಿತಿಯನ್ನು ಹೊಂದುವುದು ಈ ಕಾನೂನಿನಡಿ  ಅವಶ್ಯಕ.

ಈ ಕಾನೂನುಗಳು ಕೆಳಕಂಡ ಸಂಸ್ಥೆಗಳಿಗೆ ಅನ್ವಯಿಸುತ್ತದೆ:

  • ಸರ್ಕಾರಿ ಅಂಗಗಳು ಅಥವಾ ಸಂಸ್ಥೆಗಳು
  • ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು
  • ಸರ್ಕಾರೇತರ ಸಂಸ್ಥೆಗಳು
  • ವಾಣಿಜ್ಯ, ವೃತ್ತಿಪರ, ಶೈಕ್ಷಣಿಕ, ಮನರಂಜನೆ, ಕೈಗಾರಿಕಾ, ಹಣಕಾಸು ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳು
  • ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು
  • ಶಿಕ್ಷಣ ಸಂಸ್ಥೆಗಳು
  • ಕ್ರೀಡಾ ಸಂಸ್ಥೆಗಳು ಮತ್ತು ಕ್ರೀಡಾಂಗಣಗಳು
  • ವಾಸಿಸುವ ಸ್ಥಳಗಳು ಅಥವಾ ಮನೆಗಳು.6

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಯಾರು ದೂರು ನೀಡಬಹುದು? 7

ದೂರುದಾರ ಮತ್ತು ಪ್ರತಿವಾದಿಯ ಲಿಂಗ:

ದೂರುದಾರರು ಮಹಿಳೆಯಾಗಿರಬೇಕು ಎಂದು ಕಾನೂನು ಹೇಳುತ್ತದೆ. ಅಲ್ಲದೆ, ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ, 2019 ರ ಪ್ರಕಾರ, ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಯು ತಮ್ಮನ್ನು ಮಹಿಳೆ ಎಂದು ಗುರುತಿಸಿಕೊಂಡರೆ, ಅವರು POSH ಕಾನೂನಿನ ಅಡಿಯಲ್ಲಿ ದೂರು ಸಲ್ಲಿಸಲು ಅರ್ಹರಾಗಿರುತ್ತಾರೆ. 

ಯಾವುದೇ ಲಿಂಗದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಬಹುದು.

ಕಲ್ಕತ್ತಾ ಹೈಕೋರ್ಟ್ ಒಂದು ಪ್ರಕರಣದಲ್ಲಿ, POSH ಕಾನೂನಿನಡಿಯಲ್ಲಿ ಸಲಿಂಗ ದೂರುಗಳನ್ನು ಅನುಮತಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಒಂದೇ ಲಿಂಗದ ಜನರು ಪರಸ್ಪರ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಬಹುದು ಎಂದು ನ್ಯಾಯಾಲಯ ಹೇಳಿದೆ. ನ್ಯಾಯ ಡೈಲಿ ಮತ್ತು ಅನ್ಜೆಂಡರ್ ಬ್ಲಾಗ್‌ನಲ್ಲಿ ಇನ್ನಷ್ಟು ಓದಿ.

ದೂರುದಾರ ಮತ್ತು ಪ್ರತಿವಾದಿಯ ಸಂಘ:

ಸಂಸ್ಥೆ ಅಥವಾ ಕೆಲಸದ ಸ್ಥಳದಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳು, ಸಂಸ್ಥೆಗೆ ಭೇಟಿ ನೀಡುವವರು ಮತ್ತು ಇಂಟರ್ನಿಗಳು ಸಹ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ದೂರು ನೀಡುವ ಹಕ್ಕನ್ನು ಹೊಂದಿರುತ್ತಾರೆ.

ಇವರುಗಳು POSH ದೂರುಗಳನ್ನು ಸಲ್ಲಿಸಬಹುದು:

  • ಗೃಹ ಕಾರ್ಮಿಕರು
  • ನಿಯಮಿತ ಉದ್ಯೋಗಿಗಳು
  • ತಾತ್ಕಾಲಿಕ ಉದ್ಯೋಗಿಗಳು
  • ನಿರ್ದಿಷ್ಟ ಉದ್ದೇಶಕ್ಕಾಗಿ ನೇಮಕಗೊಂಡ ನೌಕರರು
  • ದಿನಗೂಲಿ ನೌಕರರು
  • ಗುತ್ತಿಗೆ ನೌಕರರು
  • ಪ್ರೊಬೇಷನರಿ ಉದ್ಯೋಗಿಗಳು
  • ಏಜೆನ್ಸಿಯ ಉದ್ಯೋಗಿಗಳು
  • ತರಬೇತಿದಾರರು ಮತ್ತು ಅಪ್ರೆಂಟಿಸ್‌ಗಳು.

ಎಲ್ಲಾ ಉದ್ಯೋಗಿಗಳು, ಅವರು ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದರೆ ಅಥವಾ ಸ್ವ ಇಚ್ಛೆಯಿಂದಲಾದರೂ ಕೆಲಸ ಮಾಡುತ್ತಿರಬಹುದು, ಅವರೂ ಪೋಷ್/POSH ಕಾನೂನಿನ ಅಡಿಯಲ್ಲಿ ದೂರು ನೀಡುವ ಹಕ್ಕನ್ನು ಹೊಂದಿರುತ್ತಾರೆ 8. ಇದಲ್ಲದೆ, ಸಂಸ್ಥೆಗೆ ಭೇಟಿ ನೀಡುವ ಯಾವುದೇ ಮಹಿಳೆ ಅಂತಹ ಸಂಸ್ಥೆಯ ಉದ್ಯೋಗಿಗಳಿಂದ ಕಿರುಕುಳಕ್ಕೆ ಒಳಗಾಗಿದ್ದರೆ, ಅವರು ಆ ಸಂಸ್ಥೆಯ ಆಂತರಿಕ ಸಮಿತಿಗೆ ದೂರು ಸಲ್ಲಿಸಬಹುದು.

ದೂರು ಸಲ್ಲಿಸುವ ಪ್ರಕ್ರಿಯೆ

ಲೈಂಗಿಕ ಕಿರುಕುಳದ ವಿರುದ್ಧ ನೀವು ಹೇಗೆ ದೂರು ನೀಡಬಹುದು?

ಆಂತರಿಕ ಸಮಿತಿ (“IC”) ಅಥವಾ ಸ್ಥಳೀಯ ಸಮಿತಿ (“LC”) ಗೆ ದೂರು ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:

  • ನೀವು IC ಯೊಂದಿಗೆ ಲಿಖಿತವಾಗಿ ಲೈಂಗಿಕ ಕಿರುಕುಳದ ದೂರನ್ನು ಸಲ್ಲಿಸಬಹುದು. ನೀವು ದೂರಿನ ಆರು ಪ್ರತಿಗಳನ್ನು ಸಲ್ಲಿಸಬೇಕು. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಂಪನಿಗಳು ಇಮೇಲ್ ಮೂಲಕ ದೂರುಗಳನ್ನು ಸ್ವೀಕರಿಸುತ್ತಿವೆ ಅಥವಾ ಇಮೇಲ್‌ನಲ್ಲಿ ಕಳುಹಿಸಲಾದ ಲಿಖಿತ ದೂರಿನ ಸ್ಕ್ಯಾನ್ ಮಾಡಿದ ಪ್ರತಿಯನ್ನು ಸ್ವೀಕರಿಸುತ್ತಿವೆ.
  • ದೂರನ್ನು ಸಂಕ್ಷಿಪ್ತವಾಗಿ ಮಾಡಲು ಪ್ರಯತ್ನಿಸಿ ಮತ್ತು ಅದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ಸರಳ ಭಾಷೆಯಲ್ಲಿ ಬರೆಯಿರಿ.
  • ದೂರನ್ನು ಘಟನೆಯ ದಿನಾಂಕದಿಂದ ಮೂರು ತಿಂಗಳೊಳಗೆ ಸಲ್ಲಿಸಬೇಕು. ಸರಣಿ ಘಟನೆಗಳಿದ್ದರೆ, ಕೊನೆಯ ಘಟನೆಯ ದಿನಾಂಕದಿಂದ ಮೂರು ತಿಂಗಳೊಳಗೆ ಅದನ್ನು ಸಲ್ಲಿಸಬೇಕು.
  • ದೂರನ್ನು ಸಲ್ಲಿಸುವಲ್ಲಿ ವಿಳಂಬಕ್ಕೆ ಸಾಕಷ್ಟು ಕಾರಣವಿದ್ದರೆ, IC ಅಥವಾ LC ಹೆಚ್ಚುವರಿ ಮೂರು ತಿಂಗಳವರೆಗೆ ದೂರನ್ನು ಸಲ್ಲಿಸಲು ಸಮಯವನ್ನು ವಿಸ್ತರಿಸಬಹುದು, ನಂತರ ಲಿಖಿತವಾಗಿ ವಿಸ್ತರಣೆಯ ಕಾರಣಗಳನ್ನು ದಾಖಲಿಸಬಹುದು.
  • ಲಿಖಿತ ದೂರು ಮತ್ತು ಯಾವುದೇ ಪೋಷಕ ದಾಖಲೆಗಳನ್ನು ಸಾಕ್ಷಿಗಳ ಹೆಸರುಗಳು ಮತ್ತು ವಿಳಾಸಗಳೊಂದಿಗೆ IC ಅಥವಾ LC ಗೆ ಸಲ್ಲಿಸಿ. ನೀವು ಯಾವುದೇ ಫಾರ್ಮ್ಯಾಟ್‌ನಲ್ಲಿ ಸಾಧ್ಯವಾದಷ್ಟು ಡಾಕ್ಯುಮೆಂಟ್‌ಗಳನ್ನು ಸೇರಿಸಬಹುದು ಅಂದರೆ, ಸಂಬಂಧಿತ ಇಮೇಲ್‌ಗಳು, ಎಸ್. ಎಂ. ಎಸ್ / ವಾಟ್ಸಾಪ್ ಸಂದೇಶಗಳ ಸ್ಕ್ರೀನ್‌ಶಾಟ್‌ಗಳು, ಕರೆ ವಿವರಗಳು, ಛಾಯಾಚಿತ್ರಗಳು, ರೆಕಾರ್ಡಿಂಗ್‌ಗಳು ಇತ್ಯಾದಿಗಳನ್ನು ದೂರಿಗೆ ಸೇರಿಸಬಹುದು.

 

ದೈಹಿಕ ಅಸಮರ್ಥತೆ, ಮಾನಸಿಕ ಅಸಮರ್ಥತೆಯಿಂದ ದೂರು ನೀಡಲು ಸಾಧ್ಯವಾಗದಿದ್ದರೆ ಅಥವಾ ನಿಮ್ಮ ಮರಣದ ನಂತರವೂ ನಿಮ್ಮ ಪರವಾಗಿ ದೂರು ಸಲ್ಲಿಸಲು ಸ್ನೇಹಿತರು, ಸಂಬಂಧಿಕರು, ಸಹೋದ್ಯೋಗಿಗಳು, ಮನಶ್ಶಾಸ್ತ್ರಜ್ಞರು ಮತ್ತು ಮನೋವೈದ್ಯರು ಇತ್ಯಾದಿಗಳಿಗೆ ಕಾನೂನು ಅವಕಾಶ ನೀಡುತ್ತದೆ.

ದೂರಿನ ಸ್ವರೂಪಕ್ಕಾಗಿ ಮಾದರಿ ನಮೂನೆಗಳ ವಿಭಾಗದಿಂದ ಉಲ್ಲೇಖವನ್ನು ತೆಗೆದುಕೊಳ್ಳಿ. ದೂರು ಸಲ್ಲಿಸುವ ಸಮಯದಲ್ಲಿ ನೀವು ನೊಂದಿದ್ದರೂ ಮತ್ತು ಸಾಕಷ್ಟು ಭಾವನಾತ್ಮಕ ಆಘಾತಕ್ಕೆ ಒಳಗಾಗಿದ್ದರೂ, ನೀವು ಈ ಕೆಳಗಿನ ವಿವರಗಳನ್ನು ನಿರ್ದಿಷ್ಟವಾಗಿ ಸಾಧ್ಯವಾದಷ್ಟು ಒದಗಿಸುವುದು ಬಹಳ ಮುಖ್ಯ:

  • ಪ್ರತಿವಾದಿಯ ಹೆಸರು, ಅವರ ಕೆಲಸದ ಸ್ಥಳ ಮತ್ತು ಹುದ್ದೆ.
  • ಘಟನೆ/ಗಳ ವಿವರಗಳು (ಸಾಧ್ಯವಾದಷ್ಟು ವಿವರಣಾತ್ಮಕ). ಯಾವುದೇ ವಿವರವೂ ಅಪ್ರಸ್ತುತವಲ್ಲಾ.
  • ಪ್ರಸ್ತಾಪಿಸಲಾದ ಪ್ರತಿಯೊಂದು ಘಟನೆಯ ದಿನಾಂಕಗಳು.
  • ಘಟನೆಗಳು ಸಂಭವಿಸಿದ ಸ್ಥಳ.
  • ಆರೋಪಿಯನ್ನು ವರ್ಗಾವಣೆ ಮಾಡುವುದು, ಪರಿಹಾರ ಇತ್ಯಾದಿ ಸೇರಿದಂತೆ ಉದ್ಯೋಗದಾತರಿಂದ ನೀವು ಬಯಸುವ ಉಪಶಮನ, ಇತ್ಯಾದಿ. 

ಹಿಂದಿನ ವಿಭಾಗವು ಸರಿಯಾದ ದೂರನ್ನು ಸ್ವೀಕರಿಸಲು IC ಗೆ ಅಗತ್ಯವಾಗಿದೆ, ಜೊತೆಯಲ್ಲಿ ಈ ಕೆಳಗಿನ ವಿವರಗಳೊಂದಿಗೆ ಸಹ ನೀವು ದೂರನ್ನು ಬೆಂಬಲಿಸಬಹುದು:

  • ಘಟನೆ/ಘಟನೆಗಳು ಸಂಭವಿಸುವ ಸಮಯದಲ್ಲಿ ಹಾಜರಿದ್ದ ಸದಸ್ಯರು.
  • ಈ ಹಿಂದೆ ನೀವು ಘಟನೆಯನ್ನು ಪ್ರಸ್ತಾಪಿಸಿರುವ ಯಾವುದೇ ವ್ಯಕ್ತಿ.
  • ಸ್ಕ್ರೀನ್‌ಶಾಟ್‌ಗಳು, ಚಿತ್ರಗಳು, ಆಡಿಯೊಗಳು, ವೀಡಿಯೊಗಳು, ಫೋನ್ ದಾಖಲೆಗಳು ಅಥವಾ ನಿಮ್ಮ ದೂರಿಗೆ ಬೆಂಬಲವನ್ನು ಒದಗಿಸುವವು ಮತ್ಯಾವುವಾದರೂ.
  • ದೂರಿನ ಮಾಹಿತಿಗೆ ಪರೋಕ್ಷವಾಗಿಯಾದರೂ ಸಂಬಂಧಿಸಿದ ಯಾವುದೇ ಮಾಹಿತಿಬಾಧಿತರು ಮತ್ತು ಆರೋಪಿಗಳ ನಡುವಿನ ಕಾರ್ಯ ಸಂಬಂಧ ಅಂತಹದ್ದು ಯಾವುದಾದರೂ ಇದ್ದರೆ.(ಅಧೀನ, ಸಹೋದ್ಯೋಗಿ, ಅಥವಾ ಉನ್ನತ)

ಬಾಕಿ ಉಳಿದಿರುವ ವಿಚಾರಣೆಯ ಸಮಯದಲ್ಲಿ ಬಾಧಿತೆ ಯಾವ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಪಡೆಯಬಹುದು?

ಬಾಕಿಯಿರುವ ವಿಚಾರಣೆಯ ಸಮಯದಲ್ಲಿ, ಬಾಧಿತೆ ಉದ್ಯೋಗದಾತರಿಗೆ ಈ ಕೆಳಗಿನ ಕ್ರಮಗಳನ್ನು ಶಿಫಾರಸು ಮಾಡಲು IC ಅಥವಾ LC ಗೆ ಲಿಖಿತ ವಿನಂತಿಯನ್ನು ಮಾಡಬಹುದು10:

  • ಬಾಧಿತೆಯನ್ನು ಅಥವಾ ಆರೋಪಿಯನ್ನು ಬೇರೆ ಯಾವುದೇ ಕೆಲಸದ ಸ್ಥಳಕ್ಕೆ ವರ್ಗಾಯಿಸುವುದು.
  • ಬಾಧಿತೆಗೆ ಆಕೆಯ ನಿಯಮಿತ ರಜೆಯ ಅರ್ಹತೆಯ ಜೊತೆಗೆ ಮೂರು ತಿಂಗಳವರೆಗೆ ರಜೆ ನೀಡುವುದು
  • ಇತರೆ ಯಾವುದೇ ಪರಿಹಾರ ಕೋರಿಕೆ
  • ಬಾಧಿತೆಯ ಕೆಲಸದ ಕಾರ್ಯಕ್ಷಮತೆಯ ಬಗ್ಗೆ ವರದಿ ಮಾಡದಂತೆ ಅಥವಾ ಅವಳ ಕುರಿತು ಗೌಪ್ಯ ವರದಿಯನ್ನು ಬರೆಯುವುದನ್ನು ತಡೆಯುವಂತೆ ಆರೋಪಿಯನ್ನು ನಿರ್ಬಂಧಿಸುವುದು 

ನಾನು ಅನಾಮಧೇಯವಾಗಿ ದೂರು ದಾಖಲು ಮಾಡಬಹುದೇ? ನನಗಾಗಿ ಬೇರೆ ಯಾರಾದರೂ ದೂರು ದಾಖಲು ಮಾಡಬಹುದೇ?

ನೀವು ಅನಾಮಧೇಯ ದೂರನ್ನು ಸಲ್ಲಿಸಲು ಸಾಧ್ಯವಿಲ್ಲ. ಪ್ರತಿಕ್ರಿಯಿಸುವವರಿಗೆ ಸರಿಯಾದ ಪ್ರತಿಕ್ರಿಯೆಯನ್ನು ನೀಡಲು ನಿಮ್ಮ ಹೆಸರು ಮತ್ತು ಸಂಬಂಧಿತ ವಿವರಗಳನ್ನು ನೀವು ಬಹಿರಂಗಪಡಿಸಬೇಕು. ಅನ್ಜೆಂಡರ್ ಬ್ಲಾಗ್‌ನಲ್ಲಿ ಇನ್ನಷ್ಟು ಓದಿ. ಒಂದುವೇಳೆ ದೈಹಿಕ ಅಸಮರ್ಥತೆ, ಮಾನಸಿಕ ಅಸಮರ್ಥತೆ ಅಥವಾ ಒಂದುವೇಳೆ ನಿಮ್ಮ ಮರಣದ ನಂತರವೂ ದೂರು ನೀಡಲು ಸಾಧ್ಯವಾಗದಿದ್ದರೆ ನಿಮ್ಮ ಪರವಾಗಿ ದೂರು ಸಲ್ಲಿಸಲು ಸ್ನೇಹಿತರು, ಸಂಬಂಧಿಕರು, ಸಹೋದ್ಯೋಗಿಗಳು, ಮನಶ್ಶಾಸ್ತ್ರಜ್ಞರು ಮತ್ತು ಮನೋವೈದ್ಯರು ಇತ್ಯಾದಿಗಳಿಗೆ ಕಾನೂನು ಅವಕಾಶ ನೀಡುತ್ತದೆ.

ಫಿರ್ಯಾದು ವೇದಿಕೆಗಳು ಮತ್ತು ಅಧಿಕಾರಿಗಳು 

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ನೀವು ಯಾರಿಗೆ ದೂರು ನೀಡಬೇಕು?

ಹತ್ತು ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಯ ಪ್ರತಿಯೊಂದು ಕಚೇರಿ ಅಥವಾ ಶಾಖೆಯಲ್ಲಿ, ಪ್ರತಿ ಉದ್ಯೋಗದಾತನು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ದೂರುಗಳನ್ನು ಕೇಳಲು ಮತ್ತು ಪರಿಹರಿಸಲು ‘ಆಂತರಿಕ ಸಮಿತಿ’ (“IC”) ಅನ್ನು ಸ್ಥಾಪಿಸಬೇಕು.12 ಅಂತಹ ಕೆಲಸದ ಸ್ಥಳಗಳಲ್ಲಿ IC ಸ್ಥಾಪಿಸದಿದ್ದರೆ ಉದ್ಯೋಗದಾತರಿಗೆ ದಂಡ ವಿಧಿಸಲಾಗುತ್ತದೆ.13

ಆಂತರಿಕ ಸಮಿತಿಯ (IC) ಸದಸ್ಯರು ಯಾರು?14

ಇವರನ್ನು IC ಹೊಂದಿರಬೇಕು:

ಪ್ರಮುಖ ಅಧಿಕಾರಿಯಾಗಿ ಹಿರಿಯ ಮಟ್ಟದ ಮಹಿಳಾ ಉದ್ಯೋಗಿ.

ಆದಷ್ಟೂ ಮಹಿಳಾ ಕೇಂದ್ರಿತ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಥವಾ ಸಾಮಾಜಿಕ ಕೆಲಸ ಅಥವಾ ಕಾನೂನು ಜ್ಞಾನದಲ್ಲಿ ಅನುಭವವನ್ನು ಹೊಂದಿರುವ, ನೌಕರರಲ್ಲಿ ಇಬ್ಬರು ಸದಸ್ಯರು. 

ಮಹಿಳೆಯರಿಗಾಗಿ ಕೆಲಸ ಮಾಡುವ NGO ಅಥವಾ ಅಂತಹಾ ಸಂಘದ ಬಾಹ್ಯ ಸದಸ್ಯರು ಅಥವಾ ಲೈಂಗಿಕ ಕಿರುಕುಳ ಸಮಸ್ಯೆಗಳ ಬಗ್ಗೆ ಪರಿಚಿತರಾಗಿರುವ ಯಾರಾದರೂ.  

IC ಸದಸ್ಯರಲ್ಲಿ ಕನಿಷ್ಠ ಅರ್ಧದಷ್ಟು ಮಹಿಳೆಯರು ಇರಬೇಕು. ಸದಸ್ಯರು 3 ವರ್ಷಗಳವರೆಗೆ IC ಯಲ್ಲಿ ಉಳಿಯಬಹುದು.15 ದೂರಿನ ಪ್ರತಿ ವಿಚಾರಣೆಗೆ, ಪ್ರಮುಖ ಅಧಿಕಾರಿ ಸೇರಿದಂತೆ ICಯ ಕನಿಷ್ಠ 3 ಸದಸ್ಯರು ಹಾಜರಿರಬೇಕು.16

ಆಂತರಿಕ ಸಮಿತಿಯ ಪಾತ್ರವೇನು?

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ದೂರುಗಳನ್ನು IC ಪರಿಶೀಲಿಸುತ್ತದೆ ಮತ್ತು ಸತ್ಯಗಳು ಮತ್ತು ಪುರಾವೆಗಳನ್ನು ವಿಶ್ಲೇಷಿಸಿದ ನಂತರ ದೂರುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ . ಒಂದು IC ಸಿವಿಲ್ ನ್ಯಾಯಾಲಯದಂತೆಯೇ ಅಧಿಕಾರವನ್ನು ಹೊಂದಿದೆ, ಈ ಅಧಿಕಾರಗಳೆಂದರೆ :

  • ವ್ಯಕ್ತಿಗಳನ್ನು ಕರೆಸುವುದು ಅಥವಾ ಕರೆ ಮಾಡುವುದು ಮತ್ತು ಅವರ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು
  • ದೂರಿನಲ್ಲಿ ಭಾಗಿಯಾಗಿರುವವರನ್ನು ಪ್ರಮಾಣ ಮಾಡಿಸಿ ಪ್ರಶ್ನಿಸಲು
  • ದಾಖಲೆಗಳನ್ನು ಪ್ರಸ್ತುತ ಪಡಿಸುವಂತೆ ಕೇಳಲು17

ಸ್ಥಳೀಯ ಸಮಿತಿ ಎಂದರೇನು?

ಪ್ರತಿ ಜಿಲ್ಲೆಯಲ್ಲೂ ಸ್ಥಳೀಯ ಸಮಿತಿ (LC)18 ಇದೆ, ಇದು ಲೈಂಗಿಕ ಕಿರುಕುಳದ ದೂರುಗಳನ್ನು ಸ್ವೀಕರಿಸುತ್ತದೆ:

  • ಹತ್ತಕ್ಕಿಂತ ಕಡಿಮೆ ಕೆಲಸಗಾರರನ್ನು ಹೊಂದಿರುವ ಕಾರಣ IC ಅನ್ನು ಹೊಂದಿರದ ಸಂಸ್ಥೆಗಳಿಂದ; 

ಅಥವಾ

  • ದೂರು ಉದ್ಯೋಗದಾತರ ವಿರುದ್ಧವೇ ಆಗಿದ್ದರೆ.

LC ಇವರನ್ನು ಒಳಗೊಂಡಿರುತ್ತದೆ:

  • ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ಅಥವಾ ಮಹಿಳೆಯರಿಗಾಗಿ ಕೆಲಸ ಮಾಡುವ ಮಹಿಳಾ ಅಧ್ಯಕ್ಷೆ.
  • ಜಿಲ್ಲೆಯ ಬ್ಲಾಕ್, ತಾಲೂಕು, ತಹಸಿಲ್, ವಾರ್ಡ್ ಅಥವಾ ಪುರಸಭೆಯಲ್ಲಿ ಕೆಲಸ ಮಾಡುವ ಮಹಿಳಾ ಪ್ರತಿನಿಧಿ.
  • ಮಹಿಳಾ ಹಕ್ಕುಗಳಿಗಾಗಿ ಇರುವ NGO ಅಥವಾ ಸಂಘದಿಂದ ಇಬ್ಬರು ಸದಸ್ಯರು ಅಥವಾ ಲೈಂಗಿಕ ಕಿರುಕುಳ ಸಮಸ್ಯೆಗಳ ಬಗ್ಗೆ ಅರಿವು ಇರುವವರು (ಅದರಲ್ಲಿ ಕನಿಷ್ಠ ಒಬ್ಬರು ಮಹಿಳೆಯಾಗಿರಬೇಕು).
  • ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಅಧಿಕಾರಿ.

ಕನಿಷ್ಠ ಒಬ್ಬ LC ಸದಸ್ಯರು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರೆ ಹಿಂದುಳಿದ ವರ್ಗಗಳು ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯಾಗಿರಬೇಕು ಮತ್ತು ಕನಿಷ್ಠ ಒಬ್ಬ ಸದಸ್ಯರು ಕಾನೂನಿನ ಹಿನ್ನೆಲೆಯನ್ನು ಹೊಂದಿರಬೇಕು.

LC ಸಹ ಸಿವಿಲ್ ನ್ಯಾಯಾಲಯದಂತೆಯೇ ಅಧಿಕಾರವನ್ನು ಹೊಂದಿದೆ ಮತ್ತು ಅವರ ಅಧಿಕಾರಗಳು IC ಯಂತೆಯೇ ಇರುತ್ತವೆ.

IC  ಇಲ್ಲದ ಸಂಸ್ಥೆಗಳಿಗೆ ವ್ಯವಸ್ಥೆಗಳು ಯಾವುವು?

  1. ಸಂಸ್ಥೆಯು 10 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದ್ದರೆ, ಮತ್ತು ಇನ್ನೂ IC ಅನ್ನು ಸ್ಥಾಪಿಸದಿದ್ದರೆ, ಉದ್ಯೋಗದಾತರು/ಸಂಸ್ಥೆಯ ಮುಖ್ಯಸ್ಥರಿಗೆ ಪತ್ರವನ್ನು ಬರೆಯಿರಿ (ಮಾದರಿ ನಮೂನೆಗಳ ವಿಭಾಗದಲ್ಲಿ ಒಂದು ಸ್ವರೂಪವನ್ನು ನೀಡಲಾಗಿದೆ).
  2. ಸಂಸ್ಥೆಯು ಹಾಗೆ ಮಾಡಲು ನಿರಾಕರಿಸಿದರೆ, ಈ ಬಗ್ಗೆ ತಿಳಿಸಲು ಅದರ ಪ್ರತಿಯನ್ನು ಜಿಲ್ಲಾ ಅಧಿಕಾರಿಗೆ ಕಳುಹಿಸಿ (ಮಾದರಿ ನಮೂನೆಗಳ ವಿಭಾಗದಲ್ಲಿ ಒಂದು ಸ್ವರೂಪವನ್ನು ನೀಡಲಾಗಿದೆ).
  3. ಪರ್ಯಾಯವಾಗಿ, ನೀವು She-box ಪೋರ್ಟಲ್‌ ನಲ್ಲಿ ನಿಮ್ಮ ದೂರನ್ನು ಸಲ್ಲಿಸಬಹುದು ಮತ್ತು ಪೋರ್ಟಲ್ ನಿಮ್ಮ ಉದ್ಯೋಗದಾತರನ್ನು ತಲುಪುತ್ತದೆ.
  4. ದೂರು ಸಲ್ಲಿಸಲು LC ಅನ್ನು ಸಂಪರ್ಕಿಸಿ. ಕಾರ್ಯಗತವಾಗಿ, ನೀವು ನಿಮ್ಮ ಉದ್ಯೋಗದಾತರನ್ನು ಸಂಪರ್ಕಿಸಬೇಕು ಮತ್ತು ನಿಮಗಾಗಿ LC ಅನ್ನು ಕಂಡುಕೊಳ್ಳುವುದು ಅವರ ಕರ್ತವ್ಯವಾಗಿದೆ (ಅವರು 10 ಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿದ್ದರೆ). 

ದೂರು ಸಲ್ಲಿಸಲು ಪರ್ಯಾಯ ಆಯ್ಕೆಗಳು ಯಾವುವು?

ನಿಮ್ಮ ಕಾರ್ಯಸ್ಥಳದಲ್ಲಿನ IC ಯ ಹೊರತಾಗಿ, ನೀವು ಈ ಕೆಳಗಿನ ಯಾವುದೇ ಅಧಿಕಾರಿಗಳೊಂದಿಗೆ ಲೈಂಗಿಕ ಕಿರುಕುಳದ ದೂರನ್ನು ಸಲ್ಲಿಸಬಹುದು:

ಪೊಲೀಸ್:

ಲೈಂಗಿಕ ಕಿರುಕುಳವು POSH ಕಾನೂನನ್ನು ಮಾತ್ರವಲ್ಲದೆ ಭಾರತೀಯ ದಂಡ ಸಂಹಿತೆ, 1860 (IPC)(ಭಾರತೀಯ ನ್ಯಾಯ ಸಂಹಿತೆ, 2023)ಅನ್ನು ಸಹ ಉಲ್ಲಂಘಿಸುತ್ತದೆ, ಇದು ಮಹಿಳೆಯ ಸಭ್ಯತೆಯನ್ನು ಅಪಮಾನಿಸುತ್ತದೆ, 19 ಪುರುಷನಿಂದ ಲೈಂಗಿಕ ಕಿರುಕುಳ, 20 ವಿವಸ್ತ್ರಗೊಳ್ಳುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಮಾಡುವುದು, 21 ವೋಯರಿಸಂ, 22 ಹಿಂಬಾಲಿಸುವುದು, 23 ಮತ್ತು ಮಹಿಳೆಯ ಸಭ್ಯತೆಯನ್ನು ಅವಮಾನಿಸುವುದು.24 ಲೈಂಗಿಕ ಅಪರಾಧಗಳ ಕುರಿತು ನ್ಯಾಯಾ ವಿವರಣೆಯಲ್ಲಿ ಇನ್ನಷ್ಟು ಓದಿ.

ಮಹಿಳೆಯರಿಗಾಗಿ ರಾಷ್ಟ್ರೀಯ ಆಯೋಗ ಮತ್ತು ಮಹಿಳೆಯರಿಗಾಗಿ ರಾಜ್ಯ ಆಯೋಗಗಳು:

ದೂರುಗಳನ್ನು ಆನ್‌ಲೈನ್‌ನಲ್ಲಿ, ಅಂಚೆ ಮೂಲಕ ಮತ್ತು ರಾಷ್ಟ್ರೀಯ ಅಥವಾ ರಾಜ್ಯ ಮಹಿಳಾ ಆಯೋಗಗಳಿಗೆ ವೈಯಕ್ತಿಕವಾಗಿ ಸಲ್ಲಿಸಬಹುದು. ಇನ್ನಷ್ಟು ಓದಲು ಸಂಪನ್ಮೂಲಗಳ ವಿಭಾಗಕ್ಕೆ ಹೋಗಿ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ “SHe-Box” (WCD):

“SHe-Box” ಎಂಬುದು ಭಾರತೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ (“WCD”) ಆನ್‌ಲೈನ್ ದೂರು ವೇದಿಕೆಯಾಗಿದೆ. SHe-Box ಮಹಿಳಾ ಉದ್ಯೋಗಿಗಳು ಅಥವಾ ಸಂದರ್ಶಕರಿಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ದೂರುಗಳನ್ನು ನೀಡಲು ಅನುಮತಿಸುತ್ತದೆ. ಇದು ಖಾಸಗಿ ವಲಯ ಮತ್ತು ಸಾರ್ವಜನಿಕ ವಲಯ ಎರಡಕ್ಕೂ ಲಭ್ಯವಿರುವ ವೇದಿಕೆಯಾಗಿದೆ. ಇದು ಲೈಂಗಿಕ ಕಿರುಕುಳದ ದೂರುಗಳ ತ್ವರಿತ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ದೂರಿನ ಮೌಲ್ಯಮಾಪನದ ಆಧಾರದ ಮೇಲೆ SHe-Box ಗೆ ಅಧಿಕೃತವಾಗಿ ದೂರನ್ನು ಸಲ್ಲಿಸಿದರೆ, WCD ನೌಕರನ IC ಅಥವಾ LC ಗೆ ದೂರನ್ನು ನಿರ್ದೇಶಿಸುತ್ತದೆ. WCD ಯು IC/LC ನಡೆಸುವ ವಿಚಾರಣೆಯ ಪ್ರಗತಿಯನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ ಮತ್ತು ದೂರನ್ನು ಪ್ರಗತಿಯಲ್ಲಿರಿಸುತ್ತದೆ. ಈ ವೇದಿಕೆಯಲ್ಲಿ ನೀಡಿದ ಯಾವುದೇ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುತ್ತದೆ.

ನಾನು ಒಂದಕ್ಕಿಂತ ಹೆಚ್ಚು ದೂರುಗಳನ್ನು ಸಲ್ಲಿಸಬಹುದೇ?

ಹೌದು, ನೀವು SHe-box, ಮಹಿಳಾ ಆಯೋಗ, IC ಮತ್ತು ಪೋಲಿಸರಿಗೆ ಸಮಾನಾಂತರವಾಗಿ ದೂರುಗಳನ್ನು ಸಲ್ಲಿಸಬಹುದು. ಒಮ್ಮೆ ನೀವು ಮಹಿಳಾ ಆಯೋಗ ಅಥವಾ SHe-box ಅನ್ನು ತಲುಪಿದರೆ, ಅವರು IC/LC ಅಧಿಕೃತ ತನಿಖೆಯನ್ನು ಪ್ರಾರಂಭಿಸುವುದನ್ನು ಖಚಿತಪಡಿಸಿಕೊಳ್ಳಲು ಗಮನಹರಿಸುತ್ತಾರೆ, ಆದರೆ ಪೊಲೀಸ್ ಕಾರ್ಯವಿಧಾನವು ಸಮಾನಾಂತರ ಪ್ರಕ್ರಿಯೆಯಾಗಿದೆ ಮತ್ತು ಪರಸ್ಪರ ಪ್ರತ್ಯೇಕವಾಗಿಲ್ಲ.

ಪರಿಹಾರ ಪ್ರಕ್ರಿಯೆ

ಆಂತರಿಕ ಸಮಿತಿಯು ದೂರನ್ನು ಹೇಗೆ ನೋಡಿಕೊಳ್ಳುತ್ತದೆ?

IC ಅಥವಾ LC ದೂರು25 ಸಲ್ಲಿಸಿದ ತೊಂಬತ್ತು ದಿನಗಳ ಒಳಗಾಗಿ ಲೈಂಗಿಕ ಕಿರುಕುಳದ ಪ್ರತಿ ದೂರಿನ ವಿಚಾರಣೆಯನ್ನು ಪೂರ್ಣಗೊಳಿಸಬೇಕು. ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಅವರು ಕಂಡುಕೊಂಡ  ವರದಿಯನ್ನು ಸಿದ್ಧಪಡಿಸಬೇಕು. ಲೈಂಗಿಕ ಕಿರುಕುಳ ಸಾಬೀತಾದರೆ, ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಉದ್ಯೋಗದಾತರಿಗೆ IC ಶಿಫಾರಸು ಮಾಡಬಹುದು.

ಆಂತರಿಕ ಸಮಿತಿಯು ನಿಮ್ಮ ದೂರಿನ ಬಗ್ಗೆ ತನಿಖೆ ನಡೆಸುವಲ್ಲಿ ನಿಮ್ಮ ಹಕ್ಕುಗಳೇನು?

  1. ಮಾಹಿತಿಯ ಹಕ್ಕು:

ನೀವು ದೂರು ಸಲ್ಲಿಸಿದಾಗ ಅಥವಾ ಯಾವುದೇ ಸಮಯದಲ್ಲಿ ನೀವು ಸ್ಪಷ್ಟತೆ ಬಯಸಿದಾಗ ಕಾಲಮಿತಿಯೊಳಗೆ ವಿವರಗಳೊಂದಿಗೆ ತನಿಖೆಯ ಕಾರ್ಯವಿಧಾನದ ಬಗ್ಗೆ IC ನಿಮಗೆ ತಿಳುವಳಿಕೆ ನೀಡಬೇಕು, ತನಿಕೆಯ ವಿಧಾನ ಸೇರಿದಂತೆ ತನಿಕೆಯ ಬಗ್ಗೆ, ತನಿಕೆಯ ಎಲ್ಲಾ ಹಂತಗಳಲ್ಲಿ ಗೌಪ್ಯತೆ ಕಾಪಾಡುವುದು ಎಲ್ಲಾ ಪಕ್ಷಗಳ ಜವಾಬ್ದಾರಿ

  1. ಗೌಪ್ಯತೆಯ ಹಕ್ಕು:

ದೂರಿನ ಭಾಗವಾಗಿ ಮತ್ತು ತನಿಖೆಯ ಸಮಯದಲ್ಲಿ ನೀವು ಅವರೊಂದಿಗೆ ಹಂಚಿಕೊಳ್ಳುತ್ತಿರುವ ಎಲ್ಲಾ ಮಾಹಿತಿಯನ್ನು ತನಿಖೆಯ ಉದ್ದೇಶಕ್ಕಾಗಿ ಗೌಪ್ಯವಾಗಿಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು IC ಬದ್ಧವಾಗಿದೆ. ಕೆಲವು ಮಾಹಿತಿಯನ್ನು ತಿಳಿದುಕೊಳ್ಳಬೇಕಾದ IC ಸದಸ್ಯರು, ಪ್ರತಿವಾದಿಗಳು, ಸಾಕ್ಷಿಗಳು ಮತ್ತು ಅಧಿಕಾರಿಗಳು ಮಾತ್ರ ಅದನ್ನು ತಿಳಿದುಕೊಳ್ಳಬಹುದಾಗಿದೆ. ಹೆಚ್ಚುವರಿಯಾಗಿ, ಗೌಪ್ಯತೆಯನ್ನು ಕಾಪಾಡಿಕೊಳ್ಳಲು IC ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ನಿಮ್ಮನ್ನು ಒಳಗೊಂಡಂತೆ ಎಲ್ಲಾ ಪಕ್ಷಗಳನ್ನು ಗೌಪ್ಯತೆಯ ಕ್ರಮಕ್ಕೆ ಸಹಿ ಹಾಕುವುದು ಇತ್ಯಾದಿಗಳನ್ನು ಒಳಗೊಂಡಿರಬಹುದು.

  1. ಪಾರದರ್ಶಕತೆಯ ಹಕ್ಕು:

IC, ತನಿಖಾ ಪ್ರಕ್ರಿಯೆಯ ಭಾಗವಾಗಿ, ಎರಡೂ ಪಕ್ಷಗಳು ತಮ್ಮ ದೂರು/ಪ್ರತ್ಯಾರೋಪವನ್ನು ಸಮರ್ಥಿಸಿಕೊಳ್ಳಲು ಸಮಾನ ಅವಕಾಶವನ್ನು ಒದಗಿಸುವ ಸಲುವಾಗಿ ನಿಮ್ಮೊಂದಿಗೆ ಹಾಗೂ ಪ್ರತಿವಾದಿಯೊಂದಿಗೆ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳಬೇಕು.

  1. ನ್ಯಾಯದ ಹಕ್ಕು:

ಯಾವುದೇ ರೀತಿಯ ಪಕ್ಷಪಾತ ಮತ್ತು ತಪ್ಪೆಣಿಕೆ ಇಲ್ಲದ ತನಿಖೆಯ ಪ್ರಾರಂಭದಿಂದ ಮುಕ್ತಾಯದವರೆಗೆ ನೀವು ಮತ್ತು ಪ್ರತಿವಾದಿ ಇಬ್ಬರಿಗೂ ನ್ಯಾಯಯುತ ಮತ್ತು ನ್ಯಾಯ ಸಮ್ಮತ ಉಪಚಾರವನ್ನು ಒದಗಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು IC ಬದ್ಧವಾಗಿದೆ. ಇವುಗಳನ್ನು ‘ಸಹಜ ನ್ಯಾಯದ ತತ್ವಗಳು’ ಎಂದು ಕರೆಯಲಾಗುತ್ತದೆ. ಅನ್ಜೆಂಡರ್ ಬ್ಲಾಗ್‌ನಲ್ಲಿ ಇನ್ನಷ್ಟು ಓದಿ.

  1. ಸಂಧಾನದ ಹಕ್ಕು:

ತನಿಖಾ ಕಾರ್ಯವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ನಿಮ್ಮ ಹಕ್ಕಿನ ಭಾಗವಾಗಿ, ನಿಮ್ಮ ಮತ್ತು ಪ್ರತಿವಾದಿಯ ನಡುವಿನ ವಿಷಯಗಳನ್ನು ರಾಜಿ ಮಾಡಿಕೊಳ್ಳುವ ಹಕ್ಕನ್ನು IC ನಿಮಗೆ ತಿಳಿಸಬೇಕು. ಆದಾಗ್ಯೂ, ಹಣವು ಅಂತಹ ಸಂಧಾನದ ಭಾಗವಾಗಿರಲು ಸಾಧ್ಯವಿಲ್ಲ.

  1. ಪ್ರತೀಕಾರವಿರದ ಪರಿಸರದ ಹಕ್ಕು:

ನಿಮ್ಮ ದೂರಿನ ಕಾರಣದಿಂದಾಗಿ ನೀವು ಎದುರಿಸಬೇಕಾದ ಯಾವುದೇ ಪ್ರತೀಕಾರ/ಬಲಿಯಾಗವ ಆಪತ್ತು ನಿವಾರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಖಚಿತಪಡಿಸಿಕೊಳ್ಳಲು IC ಬದ್ಧವಾಗಿದೆ.

  1. ಪೊಲೀಸರಿಗೆ ದೂರು ಸಲ್ಲಿಸುವ ಹಕ್ಕು:

ಯಾವುದೇ ನಿರ್ದಿಷ್ಟ ಸಮಯದಲ್ಲಿ, ನೀವು ಪೊಲೀಸರಿಗೆ ದೂರನ್ನು ಸಲ್ಲಿಸಲು ಬಯಸಿದರೆ, IC ನಿಮಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಬೇಕಾಗುತ್ತದೆ.

  1. ಮಧ್ಯಂತರ ಪರಿಹಾರದ ಹಕ್ಕು:

ನೀವು ದೂರು ಸಲ್ಲಿಸುವ ಸಮಯ ಮತ್ತು ದಿನದಿಂದ ಪ್ರಾರಂಭವಾಗಿ, ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ,

ಮಧ್ಯಂತರ ಪರಿಹಾರವಾಗಿ ನೀವು ಹೊಂದಿರುವ ಸಂಭಾವ್ಯ ಆಯ್ಕೆಗಳ ಕುರಿತು IC ನಿಮಗೆ ತಿಳುವಳಿಕೆ ನೀಡಬಹುದು ಮತ್ತು ನೀಡಬೇಕು ಮತ್ತು ಅವುಗಳನ್ನು ನಿಮಗೆ ವಿಸ್ತರಿಸಬೇಕು.

ದೂರನ್ನು ಪರಿಹರಿಸುವ ಕಾಲಮಿತಿಗಳು ಯಾವುವು?

ದೂರುಗಳನ್ನು ಪರಿಹರಿಸುವ ಕಾಲಮಿತಿಗಳನ್ನು ಕೆಳಗೆ ನೀಡಲಾಗಿದೆ26:

  • IC ಅಥವಾ LC ದೂರನ್ನು ಸ್ವೀಕರಿಸಿದಾಗ, ಅದು ದೂರಿನ ಒಂದು ಪ್ರತಿಯನ್ನು ಆರೋಪಿಗೆ ಏಳು ಕೆಲಸದ ದಿನಗಳಲ್ಲಿ ಕಳುಹಿಸಬೇಕು.
  • ಆರೋಪಿಯು ಹತ್ತು ಕೆಲಸದ ದಿನಗಳೊಳಗೆ ಪೋಷಕ ದಾಖಲೆಗಳು ಮತ್ತು ಸಾಕ್ಷಿಗಳ ಹೆಸರು ಮತ್ತು ವಿಳಾಸಗಳ ಪಟ್ಟಿಯೊಂದಿಗೆ ದೂರಿಗೆ ಉತ್ತರಿಸಬೇಕು.
  • ದೂರು ಸ್ವೀಕರಿಸಿದ ತೊಂಬತ್ತು ದಿನಗಳಲ್ಲಿ IC ಅಥವಾ LC ಯ ವಿಚಾರಣೆಯನ್ನು ಪೂರ್ಣಗೊಳಿಸಬೇಕು.
  • IC ಅಥವಾ LC ವಿಚಾರಣೆಯನ್ನು ಪೂರ್ಣಗೊಳಿಸಿದ ಹತ್ತು ದಿನಗಳಲ್ಲಿ ವಿಚಾರಣೆಯ ವರದಿಯನ್ನು ಮಾಡಬೇಕು. • ಉದ್ಯೋಗದಾತ ವಿಚಾರಣೆಯ ವರದಿಯನ್ನು ಪಡೆದ ಅರವತ್ತು ದಿನಗಳೊಳಗೆ IC ಯ ಅಥವಾ LC ನ ಶಿಫಾರಸುಗಳ ಮೇಲೆ ಕಾರ್ಯನಿರ್ವಹಿಸಬೇಕು.
  • IC ಯ ಅಥವಾ LC ಯ ನಿರ್ಧಾರದಿಂದ ತೃಪ್ತರಾಗದ ಯಾರಾದರೂ ತೊಂಬತ್ತು ದಿನಗಳಲ್ಲಿ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು.

ಪ್ರಕರಣವನ್ನು ಇತ್ಯರ್ಥಗೊಳಿಸಬಹುದೇ ಅಥವಾ ರಾಜಿ ಮಾಡಿಕೊಳ್ಳಬಹುದೇ?

ಹೌದು, ಕೆಲಸದ ಸ್ಥಳಗಳಲ್ಲಿ ಮಾಡಿದ IC ಅಥವಾ LC ದೂರುಗಳಲ್ಲಿ ಪ್ರಕರಣದ ರಾಜಿ ಅಥವಾ ಇತ್ಯರ್ಥವು ಸಂಭವಿಸಬಹುದು. ದೂರುಗಳು ಅಧಿಕೃತ ವಿಚಾರಣೆಯಾಗಿ ಉಲ್ಬಣಗೊಳ್ಳುವ ಮೊದಲು ದೂರುಗಳನ್ನು ಪರಿಹರಿಸುವ ಅನೌಪಚಾರಿಕ ವಿಧಾನವೆಂದರೆ ರಾಜಿ.27

ಪರಿಹಾರ ವಿಧಗಳು ಮತ್ತು ಶಿಕ್ಷೆಗಳು 

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ನೀಡುವುದಕ್ಕಾಗಿ ಶಿಕ್ಷೆಗಳು ಯಾವುವು? 

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ತಪ್ಪಿತಸ್ಥ ವ್ಯಕ್ತಿಯನ್ನು ಸಂಸ್ಥೆಯ ಸೇವಾ ನಿಯಮಗಳು ಮತ್ತು ಇತರ ಶಿಸ್ತಿನ ಕ್ರಮಗಳ ಪ್ರಕಾರ (ಯಾವುದೇ ಸೇವಾ ನಿಯಮಗಳಿಲ್ಲದಿದ್ದರೆ) ಶಿಕ್ಷಿಸಬಹುದು: 28

ಬಾಧಿತರಿಗೆ ಬರವಣಿಗೆಯಲ್ಲಿ ಕ್ಷಮೆ ಕೋರುವುದು

ವೇತನ ಹೆಚ್ಚಳ ಅಥವಾ ವೇತನ ಬಡ್ತಿಯನ್ನು ತಡೆಹಿಡಿಯುವುದು

ಕೌನ್ಸೆಲಿಂಗ್ ಸೆಷನ್ನಿಗೆ ಒಳಪಡಿಸುವುದು

ಸಮುದಾಯ ಸೇವೆಗೆ ತೊಡಗಿಸುವುದು

ಸೇವೆಯಿಂದ ವಜಾ ಗೊಳಿಸುವುದು 

ಎಚ್ಚರಿಕೆಗಳು, ವಾಗ್ದಂಡನೆಗಳು, ಖಂಡನೆ

ಆರೋಪಿಯ ವೇತನದಿಂದ ಬಾಧಿತರಿಗೆ ಪಾವತಿಸಬೇಕಾದ ಪರಿಹಾರವನ್ನು ಕಡಿತಗೊಳಿಸುವುದು

ಬಡ್ತಿ ತಡೆಹಿಡಿಯುವುದು

ಬಾಧಿತರಿಗೆ ಪರಿಹಾರ.

ಆಪಾದನೆ/ಆಪಾದನೆಗಳ ಪಟ್ಟಿಗೆ ನಿರ್ಧರಿಸಲಾದ ಪರಿಣಾಮಗಳು ಮತ್ತು ಶಿಕ್ಷೆಯ ಪ್ರಮಾಣವು ವಿವಿಧ ಅಂಶಗಳ ಮೇಲೆ ಬದಲಾಗುತ್ತದೆ. ಅಪರಾಧಿಗಳ ಅಧಿಕಾರ/ಜೇಷ್ಟತೆ, ಅವಧಿ, ಆವರ್ತನ, ಅಪರಾಧದ ಮಟ್ಟ, ವರ್ಗಕ್ಕೆ ಸಂಬಂಧಿಸಿದ ಅಂಶಗಳನ್ನು IC ಗಳು ಪರಿಗಣಿಸುವ ಅಗತ್ಯವಿದೆ ಮತ್ತು ಸ್ವತಂತ್ರ ತನಿಖಾ ನಿರ್ಧಾರದ ಕೊನೆಯಲ್ಲಿ ಮಾತ್ರ, ಅಪರಾಧಿಗೆ ಯಾವುದೇ ಪೂರ್ವ ಎಚ್ಚರಿಕೆಗಳನ್ನು ನೀಡಿರುವುದು ಸಹ ಸಂಯೋಜಿಸಬಹುದು.

ಪರಿಹಾರದ ಮೊತ್ತವನ್ನು ಹೇಗೆ ನಿರ್ಧರಿಸಲಾಗುತ್ತದೆ? 

ಆರೋಪಿಯು ಪಾವತಿಸಬೇಕಾದ ಪರಿಹಾರವನ್ನು IC ಅಥವಾ LC ಇದರ ಆಧಾರದ ಮೇಲೆ ನಿರ್ಧರಿಸುತ್ತದೆ:

  • ಬಾಧಿತರಿಗೆ ಉಂಟಾಗುವ ಮಾನಸಿಕ ಆಘಾತ, ನೋವು, ಸಂಕಟ ಮತ್ತು ಭಾವನಾತ್ಮಕ ಯಾತನೆ
  • ಲೈಂಗಿಕ ಕಿರುಕುಳದ ಘಟನೆಯಿಂದಾಗಿ ವೃತ್ತಿ ಅವಕಾಶದಲ್ಲಿ ನಷ್ಟ
  • ದೈಹಿಕ/ಮನೋವೈದ್ಯಕೀಯ ಚಿಕಿತ್ಸೆಗಾಗಿ ಬಾಧಿತರು ಮಾಡಿದ ವೈದ್ಯಕೀಯ ವೆಚ್ಚಗಳು
  • ಆರೋಪಿಯ ಆದಾಯ ಮತ್ತು ಆರ್ಥಿಕ ಸ್ಥಿತಿ
  • ಆರೋಪಿಯು ಪರಿಹಾರವನ್ನು ಒಂದು ದೊಡ್ಡ ಮೊತ್ತ ಅಥವಾ ಕಂತುಗಳಲ್ಲಿ ಪಾವತಿಸಬಹುದೇ.29

ನಾನು ಸಾಕ್ಷ್ಯವಿಲ್ಲದೆ ದೂರು ಸಲ್ಲಿಸಬಹುದೇ?

ಅಶ್ಲೀಲ ಸಂದೇಶಗಳು ಮತ್ತು ವಿವರಗಳನ್ನು ತಮ್ಮ ಫೋನ್, ಮೇಲ್‌ಬಾಕ್ಸ್‌ಗಳು ಅಥವಾ ಸಂದೇಶ ವಿಂಡೋಗಳಿಂದ ಅಳಿಸುವುದು ಮಹಿಳೆಯ ಪ್ರಚಲಿತ ಪ್ರತಿಕ್ರಿಯೆಯಾಗಿದೆ. ಮಹಿಳೆ ದೂರು ಸಲ್ಲಿಸಲು ನಿರ್ಧರಿಸಿದಾಗ ಪ್ರಜ್ಞಾಪೂರ್ವಕವಾಗಿ ಅಲ್ಲದೆ ಮಾಡುವ ಈ ಸಾಮಾನ್ಯ ತಪ್ಪಿನಿಂದ ಆಕೆಯ ದೂರಿನ ವಿಷಯವನ್ನು ರುಜುವಾತುಪಡಿಸುವ ಸಾಕ್ಷ್ಯ/ಗಳನ್ನು ಸಂಗ್ರಹಿಸುವುದು ಆಕೆಗೆ ಕಷ್ಟವಾಗುತ್ತದೆ.

ನೀವು ಕೆಲವು ಪುರಾವೆಗಳನ್ನು ಹೊಂದಿಲ್ಲದಿದ್ದರೂ, ಅಧಿಕಾರದಲ್ಲಿರುವ ಯಾರಾದರೂ ಅಥವಾ ಅವರ ಜ್ಞಾನದಿಂದಾಗಿ ಅವುಗಳನ್ನು ಮರು ಸಂಪಾದಿಸಬಹುದು ಎಂದು ನೀವು ನಂಬುವುದಾದರೆ, ದಯವಿಟ್ಟು ನಿಮ್ಮ ದೂರನ್ನು ಸಲ್ಲಿಸುವ ಸಮಯದಲ್ಲಿ IC ಗೆ ತಿಳಿಸಿ. ಆ ಪುರಾವೆಗಳನ್ನು ಮರು ಸಂಪಾದಿಸುವುದನ್ನು ಖಚಿತಪಡಿಸಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. 

ಮಹಿಳೆಯರು ಸಾಮಾನ್ಯವಾಗಿ ಸಾಕ್ಷ್ಯ/ಗಳು ಮತ್ತು ಸಾಕ್ಷಿಗಳ ಕೊರತೆ ಅಥವಾ ಅನುಪಸ್ಥಿತಿಯ ಬಗ್ಗೆ ಚಿಂತಿಸುತ್ತಾರೆ ಮತ್ತು ಆ ಕಾರಣಕ್ಕಾಗಿ  ದೂರು ದಾಖಲಿಸುವುದರಿಂದ ದೂರವಿರುತ್ತಾರೆ. ಪುರಾವೆ/ಗಳು ಮತ್ತು ಸಾಕ್ಷಿ/ಗಳ ಕೊರತೆ ಇದ್ದರೆ ನಿಮ್ಮ ದೂರು ಸುಳ್ಳು ಅಥವಾ ಯಾವುದೇ ಅರ್ಹತೆ ಇಲ್ಲ ಎಂದು ಅರ್ಥವಲ್ಲ. ದಯವಿಟ್ಟು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ನೀವು ಆಪಾದಿಸಿದ ಘಟನೆಗಳು ಸಂಭವಿಸಿವೆ ಎಂದಾದರೆ, ಸತ್ಯವಂತರಾಗಿರಿ ಮತ್ತು ಎಲ್ಲವನ್ನೂ IC ಗೆ ವಿವರವಾಗಿ ತಿಳಿಸಿ.

ಸಂಪನ್ಮೂಲಗಳು

ಸಂಪರ್ಕ ಮಾಹಿತಿ 

SHe-Box ಅಪ್ಲಿಕೇಶನ್

shebox.wcd.gov.in/

ಮಹಿಳಾ ದೂರು ವ್ಯವಸ್ಥೆಗಾಗಿ ರಾಷ್ಟ್ರೀಯ/ರಾಜ್ಯ ಆಯೋಗ:

1091 ಗೆ ಕರೆ ಮಾಡಿ: 1091 ಗೆ ಕರೆ ಮಾಡಿ ಮತ್ತು ಅಪರಾಧವನ್ನು ವಿವರವಾಗಿ ವಿವರಿಸಿ. ನಿಮ್ಮ ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ನೀಡಿ. ಬಾಧಿತರಿಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳೊಂದಿಗೆ ಸಹಾಯ ಮಾಡಲು ನೀಡಿದ ವಿಳಾಸಕ್ಕೆ ಪೊಲೀಸ್ ಘಟಕವನ್ನು ಕಳುಹಿಸಲಾಗುತ್ತದೆ.

ಆನ್‌ಲೈನ್: ರಾಷ್ಟ್ರೀಯ ಮಹಿಳಾ ಆಯೋಗವು ದೂರುಗಳ ನೋಂದಣಿ ಮತ್ತು ಮೇಲ್ವಿಚಾರಣ ವ್ಯವಸ್ಥೆ ಎಂದು ಕರೆಯಲ್ಪಡುವ ಆನ್‌ಲೈನ್ ದೂರು ವ್ಯವಸ್ಥೆಯನ್ನು ಹೊಂದಿದೆ, ಅಲ್ಲಿ ಬಾಧಿತರು ವಿವರಗಳನ್ನು ಭರ್ತಿ ಮಾಡಬಹುದು ಮತ್ತು ಅಧಿಕೃತ ದೂರನ್ನು ಸಲ್ಲಿಸಬಹುದು. ಕೆಳಗಿನ ಮಾಹಿತಿಯನ್ನು ನೀಡಬೇಕು:

  • ದೂರುದಾರರ ವಿವರಗಳು (ದೂರು ದಾಖಲಿಸುತ್ತಿರುವ ವ್ಯಕ್ತಿ)
  • ಬಾಧಿತರ ವಿವರಗಳು (ಹಿಂಸಾಚಾರವನ್ನು ಎದುರಿಸಿದ ಮಹಿಳೆ)
  • ಆರೋಪಿಯ ವಿವರಗಳು.
  • ಘಟನೆಯ ವಿವರಗಳು, ದಿನಾಂಕ ಮತ್ತು ಸಮಯ ಮತ್ತು ಘಟನೆಯ ಸ್ಥಳದಂತಹ ವಿವರಗಳು.

ಇಮೇಲ್: ನೀವು ಆಪಾದಿತ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯ ವಿವರಣೆಯಂತಹ ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ವಿವರಗಳು, ಅಥವಾ ಘಟನೆಯ ವಿವರಣೆಯೊಂದಿಗೆ, complaintcell-ncw@nic.in ಗೆ ಇಮೇಲ್ ಕಳುಹಿಸುವ ಮೂಲಕ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಬಹುದು.

ಪೋಸ್ಟ್/ ಪತ್ರ/ ಸಂದೇಶವಾಹಕ: ನೀವು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆಯಬಹುದು, ಈ ವಿಳಾಸಕ್ಕೆ: ರಾಷ್ಟ್ರೀಯ ಮಹಿಳಾ ಆಯೋಗ, ಪ್ಲಾಟ್-21, ಜಸೋಲಾ ಸಾಂಸ್ಥಿಕ ಪ್ರದೇಶ, ನವದೆಹಲಿ- 110025

ಪರಿಶೀಲನಾಪಟ್ಟಿಗಳು

  1. ಲಿಖಿತ ದೂರಿನ ಕರಡು.
  2. ಘಟನೆಯ ಹಿಂದಿನ ಮತ್ತು ನಂತರದ ಸಂದರ್ಭಗಳ ಜೊತೆಗೆ ಘಟನೆ(ಗಳ) ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿ.
  3. ದೂರುದಾರರು ಮತ್ತು ಆರೋಪಿಗಳ ನಡುವೆ (ಅಧೀನ, ಸಹೋದ್ಯೋಗಿ ಅಥವಾ ಮೇಲಧಿಕಾರಿ) ಹೆಸರು, ಹುದ್ದೆ, ವರದಿ ರಚನೆ ಸೇರಿದಂತೆ ಆರೋಪಿಗಳ ವಿವರಗಳನ್ನು ನಮೂದಿಸಿ.
  4. ದೂರಿನ ಆರು ಪ್ರತಿಗಳನ್ನು ಮಾಡಿ.
  5. ದೂರಿನೊಂದಿಗೆ ಯಾವುದೇ ಪೋಷಕ ದಾಖಲೆಗಳನ್ನು ಸಲ್ಲಿಸಿ.
  6. ನಿಮ್ಮ ದೂರನ್ನು ಬೆಂಬಲಿಸುವ ಯಾವುದೇ ಸಾಕ್ಷಿಗಳ ಹೆಸರುಗಳು ಮತ್ತು ವಿಳಾಸಗಳನ್ನು ಸಲ್ಲಿಸಿ.
  7. ನೀವು ಕೋರಿದ ಪರಿಹಾರವನ್ನು ಉಲ್ಲೇಖಿಸಿ.
  8. ಲೈಂಗಿಕ ಕಿರುಕುಳದ ಮೂರು ತಿಂಗಳೊಳಗೆ ನಿಮ್ಮ ದೂರನ್ನು IC ಗೆ ಸಲ್ಲಿಸಿ. ವಿಳಂಬವಾದರೆ, ಲಿಖಿತ ಕಾರಣಗಳನ್ನು ನೀಡಿದ ನಂತರ IC ನಿಮ್ಮ ಪ್ರಕರಣವನ್ನು ಆಲಿಸಬಹುದು.
  9. IC ದೂರಿನ ತನಿಖೆ ನಡೆಸುತ್ತಿರುವಾಗ ಅಗತ್ಯವಿರುವ ಯಾವುದೇ ಮಧ್ಯಂತರ ಕ್ರಮಗಳಿಗಾಗಿ ವಿನಂತಿಗಳನ್ನು ಸಲ್ಲಿಸಿ.

ಮಾದರಿ ರೂಪಗಳು

ದೂರು ಸಲ್ಲಿಸುವ ಸ್ವರೂಪ

  1. ದೂರು ಸಲ್ಲಿಕೆ ದಿನಾಂಕ
  2. ದೂರುದಾರರ ಹೆಸರು
  3. ಹುದ್ದೆ
  4. ಕಾರ್ಯ/ಇಲಾಖೆ
  5. ಪ್ರತಿವಾದಿಯ ಹೆಸರು
  6. ಹುದ್ದೆ
  7. ಕಾರ್ಯ/ಇಲಾಖೆ
  8. ಕಂಪನಿಯ ಹೆಸರು (ಪ್ರತಿವಾದಿಯು ಇತರ ಕೆಲಸದ ಸ್ಥಳದಿಂದ ಬಂದ ಸಂದರ್ಭಗಳಲ್ಲಿ)
  9. ಘಟನೆಯ ದಿನಾಂಕ (ಘಟನೆಯು ಹಲವು ಬಾರಿ ಪುನರಾವರ್ತಿತವಾಗಿದ್ದರೆ, ದಯವಿಟ್ಟು ಇತ್ತೀಚಿನ ದಿನಾಂಕವನ್ನು ನಮೂದಿಸಿ)
  10. ದೂರಿನ/ಘಟನೆಯ ವಿವರಗಳು (ದಯವಿಟ್ಟು ಅಗತ್ಯವಿರುವಷ್ಟು ವಿವರವಾಗಿ ಬರೆಯಿರಿ)
  11. ನಿಮ್ಮ ಕಡೆಯಿಂದ ನೀವು ಒದಗಿಸಲು ಬಯಸುವ ಸಾಕ್ಷಿಗಳ ಹೆಸರು/ಗಳು (ದಯವಿಟ್ಟು ಗಮನಿಸಿ, ನಿಮ್ಮ ದೂರಿಗೆ ಬೆಂಬಲವನ್ನು ಒದಗಿಸುವವರು ಕಂಪನಿಯ ಸದಸ್ಯರಾಗಿರುತ್ತಾರೆ ಮತ್ತು ವಿಚಾರಣೆಯ ಸಮಯದಲ್ಲಿ IC ಯಿಂದ ಇವರನ್ನು ಕರೆಯಲಾಗುವುದು.) ನಿಮ್ಮ ಕಡೆಯಿಂದ ನೀವು ಸಾಕ್ಷಿ(ಗಳನ್ನು) ಒದಗಿಸಿದರೆ ಅದರ ವಿಚಾರಣೆ ನಡೆಸಲು ಇದು IC ಗೆ ಸಹಾಯ ಮಾಡುತ್ತದೆ. ಇದನ್ನು ಮತ್ತಷ್ಟು ಅರ್ಥಮಾಡಿಕೊಳ್ಳಲು ಯಾವುದೇ IC ಸದಸ್ಯರೊಂದಿಗೆ ಮಾತನಾಡಲು ಹಿಂಜರಿಯಬೇಡಿ. ಸಾಧ್ಯವಾದಷ್ಟು, ನೀವು ಅವರ ಪೂರ್ಣ ಹೆಸರು/ಗಳು, ಪದನಾಮ, ಕಾರ್ಯ ಮತ್ತು ಅವರು ಇತರ ಕೆಲಸದ ಭಾಗವಾಗಿದ್ದರೆ ಅವರ ಕೆಲಸದ ಸ್ಥಳವನ್ನು ಮತ್ತು ಸಾಕ್ಷಿಯಾಗಿ ಉಲ್ಲೇಖಿಸುವ ಉದ್ದೇಶವನ್ನು ಒದಗಿಸಿ)
  12. ನಿಮ್ಮ ದೂರನ್ನು ಬೆಂಬಲಿಸಲು ನೀವು ಹೊಂದಿರುವ ಅಥವಾ ಪ್ರಸ್ತುತಪಡಿಸಲು ಬಯಸುವ ಯಾವುದೇ ಪುರಾವೆಗಳನ್ನು (ಎಸ್. ಎಂ,ಎಸ್ , ವಾಟ್ಸಾಪ್ ಸಂದೇಶಗಳು, ವೀಡಿಯೊ, ಆಡಿಯೋ, ಇಮೇಲ್, ಅಥವಾ ಯಾವುದೇ ಇತರ ಸ್ವರೂಪ ಅಥವಾ ಫಾರ್ಮ್‌ನಲ್ಲಿ) ನಮೂದಿಸಿ. (ಯಾವುದೇ ಪುರಾವೆಗಳ ಅನುಪಸ್ಥಿತಿಯು ನಿಮ್ಮ ದೂರನ್ನು ಅಮಾನ್ಯಗೊಳಿಸುವುದಿಲ್ಲ ಎಂದು ದಯವಿಟ್ಟು ಖಚಿತವಾಗಿರಿ. ಆದಾಗ್ಯೂ, ನೀವು IC ಯೊಂದಿಗೆ ಹಂಚಿಕೊಳ್ಳುವ ಅಥವಾ ಅವರಿಗೆ ಮಾರ್ಗದರ್ಶನ ನೀಡುವ ಯಾವುದೇ ಪುರಾವೆಯು ನೀವು ತಂದ ದೂರನ್ನು ನಿರ್ಣಯಿಸಲು ಸಹಾಯಕವಾಗುತ್ತದೆ.)
  13. ನಿಮ್ಮ ದೂರನ್ನು ಬೆಂಬಲಿಸಲು ನೀವು IC ಗಮನಕ್ಕೆ ತರಲು ಬಯಸುವ ಯಾವುದೇ ಇತರ ಮಾಹಿತಿ.
  14. ದೂರುದಾರರ ಹೆಸರು ಮತ್ತು ಸಹಿ (ICಗೆ ದೂರಿನ ಹಾರ್ಡ್ ಪ್ರತಿಗಳನ್ನು ಸಲ್ಲಿಸುವಾಗ ಅನ್ವಯಿಸುತ್ತದೆ)

 

ಅನುಬಂಧ – ಇಮೇಲ್ ದೂರುಗಳ ಕರಡು

ಕಚೇರಿಗೆ ಕಳಿಸಲು ಆಂತರಿಕ  ಮೇಲ್ ಕರಡು

ಕಂಪನಿಯು IC ಅನ್ನು ಹೊಂದಿರಬೇಕಿದ್ದು ಆದರೆ ಹೊಂದಿಲ್ಲದಿರುವ ಸಂದರ್ಭಗಳಲ್ಲಿ ಬಳಸಲು 

(10 ಅಥವಾ ಹೆಚ್ಚಿನ ಸದಸ್ಯರ ಕಂಪನಿಗೆ)

ಆತ್ಮೀಯರೇ, <ಅಧಿಕಾರದ ಹೆಸರು, ತಾತ್ತ್ವಿಕವಾಗಿ, ಪ್ರಚಾರಕರು>,

(ಒಂದು ವೇಳೆ ಇದ್ದರೆ, ಕಾನೂನು ಮುಖ್ಯಸ್ಥರು ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥರಿಗೆ cc ಅನ್ನು ಗುರುತಿಸಿ)

ನಾನು ಈ ಸಂಸ್ಥೆಯೊಂದಿಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ದೂರು ಸಲ್ಲಿಸಬೇಕಾಗಿದೆ ಎಂದು ನಿಮಗೆ ತಿಳಿಸಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ, ಪರಿಹಾರ) ಕಾಯಿದೆ, 2013 ರ ಅಡಿಯಲ್ಲಿ, ನಾನು ಈ ಸಂಸ್ಥೆಯ ಆಂತರಿಕ ಸಮಿತಿಗೆ ಈ ದೂರನ್ನು ಸಲ್ಲಿಸಬೇಕು. ಆದರೆ, ಇಲ್ಲಿನ ಆಂತರಿಕ ಸದಸ್ಯರೊಂದಿಗೆ ವಿಚಾರಣೆ ನಡೆಸಿದಾಗ ಅಂತಹ ಯಾವುದೇ ಸಮಿತಿ ರಚನೆಯಾಗಿಲ್ಲ ಎಂದು ಹೇಳಿದ್ದರು. ಅಲ್ಲದೆ, ನಾನು ಈ ವಿಷಯದ ಬಗ್ಗೆ ಹೆಚ್ಚು ತಿಳುವಳಿಕೆ ಪಡೆದಂತೆ, ಈ ಕಾನೂನಿನ ಇತರ ಅಂಶಗಳನ್ನು ಸಹ ಇಲ್ಲಿ ಅಳವಡಿಸಲಾಗಿಲ್ಲ.

ಈ ಕಾನೂನಿನ ಮಾರ್ಗಸೂಚಿಗಳನ್ನು ಈಗಿನಿಂದಲೇ ಕಾರ್ಯಗತಗೊಳಿಸಬೇಕೆಂದು ನಾನು ಬಲವಾಗಿ ಶಿಫಾರಸ್ಸು ಮಾಡುತ್ತೇನೆ ಮತ್ತು ಅವುಗಳಿಗೆ ಬದ್ಧವಾಗಿ ಒಂದು ಸಮಿತಿಯನ್ನು ರಚಿಸಬೇಕಿದೆ. ಈ ಸಂಸ್ಥೆಯ ನೊಂದ ಮಹಿಳಾ ಉದ್ಯೋಗಿಯಾಗಿ, ನಿಮ್ಮಿಂದ ನ್ಯಾಯಯುತ ಮತ್ತು ನ್ಯಾಯೋಚಿತ ಪರಿಹಾರವನ್ನು ಪಡೆಯುವುದು ನನ್ನ ಹಕ್ಕು.

ಈ ಕುರಿತು ನಿಮ್ಮಿಂದ ಆದಷ್ಟು ಬೇಗ ಉತ್ತರ ಪಡೆಯಲು ನಾನು ಎದುರು ನೋಡುತ್ತಿದ್ದೇನೆ. ಆಂತರಿಕ ಸಮಿತಿಯ ಅನುಪಸ್ಥಿತಿಯಲ್ಲಿ ನನ್ನ ಬಳಿ ಲಭ್ಯವಿರುವ ಇತರ ಆಯ್ಕೆಗಳೆಂದರೆ ರಾಜ್ಯ ಮಹಿಳಾ ಆಯೋಗ, ಆನ್‌ಲೈನ್ ಸರ್ಕಾರಿ ಪೋರ್ಟಲ್ ಮತ್ತು ಕಾನೂನು ನೆರವು.

ನಿಮ್ಮ ತ್ವರಿತ ಪ್ರತಿಕ್ರಿಯೆಯನ್ನು ನಾನು ಶ್ಲಾಘಿಸುತ್ತೇನೆ ಮತ್ತು ಮುಂದಿನ ಪ್ರಕ್ರಿಯೆಯನ್ನು ಶೀಘ್ರವಾಗಿ ಪ್ರಾರಂಭಿಸಲಾಗುವುದು ಎಂದು ನಿರೀಕ್ಷಿಸುತ್ತೇನೆ.

ವಂದನೆಗಳು,

<ನಿಮ್ಮ ಹೆಸರು>

 

ಜಿಲ್ಲೆ/ರಾಜ್ಯಕ್ಕೆ ಮೇಲ್ ಕರಡು

ಕಂಪನಿಯು IC ಅನ್ನು ಹೊಂದಿರಬೇಕಿದ್ದು ಆದರೆ ಹೊಂದಿರದ ಸಂದರ್ಭಗಳಲ್ಲಿ ಬಳಸಲು (10 ಅಥವಾ ಹೆಚ್ಚಿನ ಸದಸ್ಯರ ಕಂಪನಿಗೆ)

<ಪ್ರಾಥಮಿಕವಾಗಿ ಜಿಲ್ಲಾ ಅಧಿಕಾರಿ/ರಾಜ್ಯ ಮಹಿಳಾ ಆಯೋಗಕ್ಕೆ>,

ನಾನು <ನಗರ>, <ರಾಜ್ಯ> ನಿವಾಸಿಯಾಗಿದ್ದೇನೆ ಮತ್ತು <ಸಂಸ್ಥೆ>ಯಲ್ಲಿ ಉದ್ಯೋಗಿಯಾಗಿದ್ದೇನೆ. ನನ್ನ ಸಂಸ್ಥೆಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ದೂರು ಸಲ್ಲಿಸಬೇಕಾಗಿದೆ ಎಂದು ನಿಮಗೆ ತಿಳಿಸಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಆದಾಗ್ಯೂ, ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ, ಪರಿಹಾರ) ಕಾಯಿದೆ, 2013 ರಲ್ಲಿ ಮಾರ್ಗದರ್ಶಿ ಸೂತ್ರಗಳ ಹೊರತಾಗಿಯೂ, ಈ ಸಂಸ್ಥೆಯು ಸಮಿತಿಯನ್ನು ರಚಿಸಿಲ್ಲ.

ನಾನು ಈ ಹಿಂದೆಯೇ ಅವರಿಗೆ ಪತ್ರ ಬರೆದಿದ್ದೆ ಮತ್ತು ಅವರು ಯಾವುದೇ ಪ್ರತಿಕ್ರಿಯೆ ಅಥವಾ ಕ್ರಮವನ್ನು ಪ್ರಾರಂಭಿಸದಿದ್ದಾಗ, ನಾನು ಈ ಪತ್ರವನ್ನು ನಿಮಗೆ ಕಳುಹಿಸುತ್ತಿದ್ದೇನೆ.

ಈ ವಿಷಯದಲ್ಲಿ ತ್ವರಿತ ಸಹಾಯ ಮತ್ತು ಮಾರ್ಗದರ್ಶನವನ್ನು ನಾನು ಪ್ರಶಂಸಿಸುತ್ತೇನೆ. ಕಂಪನಿಯ ವಿವರಗಳು ಕೆಳಕಂಡಂತಿವೆ:

ಕಂಪನಿಯ ಹೆಸರು:

ಸ್ಥಳ:

ಪ್ರಚಾರಕರ/ಉದ್ಯೋಗದಾತರ ಹೆಸರು:

ಪ್ರಚಾರ/ಉದ್ಯೋಗದಾತರ ಇಮೇಲ್ ವಿಳಾಸ/ಪೋಸ್ಟಲ್ ವಿಳಾಸ:

ಸಂಪರ್ಕ ಸಂಖ್ಯೆ:

ಆದಷ್ಟು ಬೇಗ ನಿಮ್ಮಿಂದ ಉತ್ತರ ಎದುರು ನೋಡುತ್ತಿದ್ದೇನೆ.

ವಂದನೆಗಳು,

 

ಹೆಸರು

ವಿಳಾಸ

ಸಂಪರ್ಕ ಸಂಖ್ಯೆ

ಮಾಹಿತಿಯ ಮೂಲಗಳು

ಶಾಸನ:

ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013.

ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ನಿಯಮಗಳು, 2013.

ಭಾರತೀಯ ದಂಡ ಸಂಹಿತೆ, 1860/ BNS 2023

ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯಿದೆ, 2013.

ಸಂಪನ್ಮೂಲಗಳು:

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಕುರಿತು ನ್ಯಾಯಾ ಅವರ ವಿವರಣೆ

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಕುರಿತು ಅನ್ಜೆಂಡರ್‌ನ ವಿವರಣೆ

ಕೈಪಿಡಿ:

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಕುರಿತು ಕೈಪಿಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ, ಇಲ್ಲಿ ಲಭ್ಯವಿದೆ.

ಶಬ್ದಾರ್ಥಗಳು

  • ಸಂಧಾನ: ತಮ್ಮ ನಡುವಿನ ಸಮಸ್ಯೆಯನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಲು ಪಕ್ಷಗಳ ನಡುವಿನ ಪರಸ್ಪರ ಒಪ್ಪಂದ.
  • ಮಧ್ಯಂತರ ಕ್ರಮ: ಬಾಧಿತರಿಗೆ ಸ್ವಲ್ಪ ಪರಿಹಾರವನ್ನು ಒದಗಿಸಲು IC ಯಿಂದ ವಿಚಾರಣೆ ಬಾಕಿ ಇರುವಾಗ (90 ದಿನಗಳ ಅವಧಿ) ತೆಗೆದುಕೊಂಡ ಕ್ರಮಗಳು. 
  • ಎಕ್ಸ್-ಪಾರ್ಟೆ ನಿರ್ಧಾರ: ಒಂದು ಪಕ್ಷದ ಅನುಪಸ್ಥಿತಿಯಲ್ಲಿ ತೆಗೆದುಕೊಂಡ ನಿರ್ಧಾರ.
  • ಸಾಕ್ಷಿ: ಒಂದು ನಿರ್ದಿಷ್ಟ ಘಟನೆ ಸಂಭವಿಸುವ ಸಮಯದಲ್ಲಿ ಉಪಸ್ಥಿತರಿರುವ ಅಥವಾ ಹೇಳಲಾದ ಘಟನೆಯ ಬಗ್ಗೆ ರಹಸ್ಯ ಮಾಹಿತಿ ತಿಳಿದಿರುವ ಯಾವುದೇ ವ್ಯಕ್ತಿ.
  • ಪಾಟೀ ಸವಾಲು : ಸವಾಲಿನ ವಿಚಾರಣೆಯೊಂದಿಗೆ ವ್ಯಕ್ತಿಯ ಹೇಳಿಕೆ, ಸತ್ಯ ಮತ್ತು ನಿರೂಪಣೆಯನ್ನು ಪ್ರಶ್ನಿಸುವ ಪ್ರಕ್ರಿಯೆ
  • ಗೌಪ್ಯತೆ: ನಿರ್ದಿಷ್ಟ ಪ್ರಕರಣದ ತನಿಖೆಯಲ್ಲಿ ತೊಡಗಿರುವ ಎಲ್ಲಾ ವ್ಯಕ್ತಿಗಳಿಗೆ ಅವರ ಗುರುತು, ಪ್ರಕರಣ/ಆಪಾದನೆಗಳ ವಿಷಯ ಮತ್ತು ತನಿಖೆಯ ಫಲಗಳಿಗೆ ಒದಗಿಸಲಾದ ಕಾನೂನಿನ ಅಡಿಯಲ್ಲಿ ಕಡ್ಡಾಯ ರಕ್ಷಣೆ.
  • ವಿಚಾರಣಾ ವರದಿ: ಒಂದು ನಿರ್ದಿಷ್ಟ ದೂರಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಅವಲೋಕನಗಳು, ಸಭೆಗಳ ನಿಮಿಷಗಳು, ತೀರ್ಮಾನಗಳು, ಸಂಶೋಧನೆಗಳು ಮತ್ತು ಶಿಫಾರಸುಗಳೊಂದಿಗೆ ಸಂಕ್ಷಿಪ್ತಗೊಳಿಸುವ ಅಂತಿಮ ದಾಖಲೆ.
  • ಬಾಧಿತ: ಒಬ್ಬ ವ್ಯಕ್ತಿ, ಸಿಸ್-ಮಹಿಳೆ, ಅಥವಾ ಕೆಲಸದ ಸ್ಥಳದಲ್ಲಿ ಲೈಂಗಿಕ ದುರ್ವರ್ತನೆಯನ್ನು ಅನುಭವಿಸಿದ ಮಹಿಳೆ ಎಂದು ಗುರುತಿಸುವ ವ್ಯಕ್ತಿ.
  • ದೂರುದಾರ: ಸಿಸ್-ಮಹಿಳೆ, ಅಥವಾ ಒಬ್ಬ ಮಹಿಳೆ ಎಂದು ಗುರುತಿಸುವ ವ್ಯಕ್ತಿ, ಕೆಲಸದ ಸ್ಥಳದಲ್ಲಿ ಲೈಂಗಿಕ ದುರುಪಯೋಗವನ್ನು ಅನುಭವಿಸಿದ ಮತ್ತು IC ಗೆ ಅಧಿಕೃತ ದೂರನ್ನು ಸಲ್ಲಿಸಿದ  ಒಬ್ಬ ವ್ಯಕ್ತಿ.
  • ಪ್ರತಿಸ್ಪಂದಕರು: ಲಿಂಗವನ್ನು ಲೆಕ್ಕಿಸದೆ, ಅವರ ವಿರುದ್ಧ ಲೈಂಗಿಕ ದುರ್ನಡತೆಯ ದೂರನ್ನು ದಾಖಲಿಸಲಾಗಿರುವ ಒಬ್ಬ ವ್ಯಕ್ತಿ. 

 

ಅಂತಿಮ ಟಿಪ್ಪಣಿಗಳು

1 ವಿಶಾಕ ವಿರುದ್ಧ ರಾಜಸ್ಥಾನ ರಾಜ್ಯ, 1997 6 SCC 241.

2 ವಿಭಾಗ 2(n), ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013; ವಿಶಾಕ ವಿರುದ್ಧ ರಾಜಸ್ಥಾನ ರಾಜ್ಯ, 1997 6 SCC 241.

3 ವಿಭಾಗ 2(n), ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013

4 ಸೆಕ್ಷನ್ 3(2), ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013.

5 ಸಂಜೀವ್ ಮಿಶ್ರಾ v. ಬ್ಯಾಂಕ್ ಆಫ್ ಬರೋಡಾ & ಆರ್ಸ್., RHC, S.B. ಸಿವಿಲ್ ರಿಟ್ ಅರ್ಜಿ ಸಂಖ್ಯೆ.150/2021

6 ವಿಭಾಗ 2(o), ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013.

7 ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ, ನ್ಯಾಯ, https://nyaaya.org/work-and-employment/victims-ofsexual-harassment-at-the-workplace/ ನಲ್ಲಿ ಲಭ್ಯವಿದೆ

8 ಸೆಕ್ಷನ್ 2(ಎಫ್), ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013

9 ಸೆಕ್ಷನ್ 9, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013.

10 ಸೆಕ್ಷನ್ 12, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013; ನಿಯಮ 8, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ನಿಯಮಗಳು, 2013.

11 ನಿಯಮ 6, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ನಿಯಮಗಳು, 2013.

12 ಸೆಕ್ಷನ್ 4, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013.

13 ಗ್ಲೋಬಲ್ ಹೆಲ್ತ್ ಪ್ರೈವೇಟ್ ಲಿಮಿಟೆಡ್ & ಶ್ರೀ ಅರವಿಂದರ್ ಬಗ್ಗ ವಿರುದ್ಧ ಸ್ಥಳೀಯ ದೂರುಗಳ ಸಮಿತಿ, 2017 ರ ಜಿಲ್ಲಾ ಪಂಚಾಯತ್ ರಿಟ್ ಅರ್ಜಿ ಸಂಖ್ಯೆ.22314.

14 ನಿಯಮ 4, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ನಿಯಮಗಳು, 2013.

15 ಸೆಕ್ಷನ್ 4, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013.

16 ನಿಯಮ 7(7), ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ನಿಯಮಗಳು, 2013.

17 ಸೆಕ್ಷನ್ 11(3), ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013.

18 ಅಧ್ಯಾಯ III, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013.

19 ಸೆಕ್ಷನ್ 354, ಭಾರತೀಯ ದಂಡ ಸಂಹಿತೆ, 1860/ಸೆಕ್ಷನ್ 74, ಭಾರತೀಯ ನ್ಯಾಯ ಸಂಹಿತೆ,2023, (BNS)

20 ಸೆಕ್ಷನ್ 354 ಎ, ಭಾರತೀಯ ದಂಡ ಸಂಹಿತೆ, 1860/ಸೆಕ್ಷನ್ 75, ಭಾರತೀಯ ನ್ಯಾಯ ಸಂಹಿತೆ,2023, (BNS)

21 ಸೆಕ್ಷನ್ 354 ಬಿ, ಭಾರತೀಯ ದಂಡ ಸಂಹಿತೆ, 1860/ಸೆಕ್ಷನ್ 76, ಭಾರತೀಯ ನ್ಯಾಯ ಸಂಹಿತೆ,2023, (BNS)

22 ಸೆಕ್ಷನ್ 354 ಸಿ, ಭಾರತೀಯ ದಂಡ ಸಂಹಿತೆ, 1860/ಸೆಕ್ಷನ್ 77, ಭಾರತೀಯ ನ್ಯಾಯ ಸಂಹಿತೆ,2023, (BNS)

23 ವಿಭಾಗ 354 D, ಭಾರತೀಯ ದಂಡ ಸಂಹಿತೆ, 1860/ಸೆಕ್ಷನ್ 78, ಭಾರತೀಯ ನ್ಯಾಯ ಸಂಹಿತೆ,2023, (BNS)

24 ಸೆಕ್ಷನ್ 509, ಭಾರತೀಯ ದಂಡ ಸಂಹಿತೆ, 1860/ಸೆಕ್ಷನ್ 79, ಭಾರತೀಯ ನ್ಯಾಯ ಸಂಹಿತೆ,2023, (BNS)

25 ಸೆಕ್ಷನ್ 9, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013.

26 ನಿಯಮ 7, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ನಿಯಮಗಳು, 2013.

27 ಸೆಕ್ಷನ್ 10, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013.

28 ನಿಯಮ 9, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ನಿಯಮಗಳು, 2013.

29 ಸೆಕ್ಷನ್ 15, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013.

ಧನ್ಯವಾದ! ಈ ಮಾರ್ಗದರ್ಶಿಯನ್ನು ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು, ಉದ್ಯೋಗಿಗಳು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ. ಪ್ರಶ್ನೆಗಳು ಅಥವಾ ಟಿಪ್ಪಣಿಗಳಿಗಾಗಿ, contact@nyaaya.in ಮತ್ತು contact@ungender.in ಅನ್ನು ಸಂಪರ್ಕಿಸಿ

www.ungender.in 

www.kannada.nyaaya.org 

ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸುವ ಮಾರ್ಗದರ್ಶಿ

ಈ  ಮಾರ್ಗದರ್ಶಿಯು ನಿಮಗೆ ಹೇಗೆ ಸಹಾಯ ಮಾಡಬಹುದು?

ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸುವ ನ್ಯಾಯ ಮಾರ್ಗದರ್ಶಿಯು ಭಾರತದಲ್ಲಿನ ಕಾನೂನು ಸೇವೆಗಳ ಪ್ರಾಧಿಕಾರಗಳಿಂದ ಕಾನೂನು ಸೇವೆಗಳನ್ನು ಉಚಿತವಾಗಿ ಹೇಗೆ ಪಡೆಯುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಾಗರಿಕರಿಗೆ ಸಹಾಯ ಮಾಡುತ್ತದೆ. ಕಾನೂನು ನೆರವು ಕೋರಲು ಅರ್ಹತೆಯ ಮಾನದಂಡಗಳ ಜೊತೆಗೆ ಕಾನೂನು ಸಹಾಯಕ್ಕಾಗಿ ಆನ್ಲೈನ್ ​​ಮತ್ತು ಆಫ್ಲೈನ್ ಅರ್ಜಿಯ ಮಾಹಿತಿಯನ್ನು ಇದು ಒಳಗೊಂಡಿದೆ. ಆರ್ಥಿಕ ಅಥವಾ ಇತರ ಮಿತಿಗಳ ಕಾರಣದಿಂದ ಯಾವುದೇ ನಾಗರಿಕರಿಗೆ ನ್ಯಾಯವನ್ನು ಪಡೆಯುವ ಅವಕಾಶಗಳನ್ನು ನಿರಾಕರಿಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕಾನೂನು ಸಹಾಯಕ್ಕಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ನಾಗರಿಕರು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.

ಈ  ಮಾರ್ಗದರ್ಶಿಯಲ್ಲಿ ಚರ್ಚಿಸಲಾದ ಕಾನೂನುಗಳು ಯಾವುವು?

ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸುವ ನ್ಯಾಯ ಮಾರ್ಗದರ್ಶಿಯು   ಭಾರತದ ಸಂವಿಧಾನ , 1950, ಅಪರಾಧ ಪ್ರಕ್ರಿಯಾ ಸಂಹಿತೆ, 1973, ಸಿವಿಲ್ ಪ್ರಕ್ರಿಯಾ ಸಂಹಿತೆ, 1908, ಮತ್ತು ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ ಮತ್ತು 1987 ರಲ್ಲಿ ವಿವರಿಸಿರುವ ಕಾನೂನು ನೆರವು ಕುರಿತ ಕಾನೂನನ್ನು ಚರ್ಚಿಸುತ್ತದೆ.

ಅರ್ಜಿ ಸಲ್ಲಿಸುವ ಮೊದಲು ನೆನಪಿಡಬೇಕಾದ ವಿಷಯಗಳು

ಉಚಿತ ಕಾನೂನು ನೆರವು ಇವುಗಳನ್ನು ಒಳಗೊಂಡಿದೆ:

  1. ನ್ಯಾಯಾಲಯ ಅಥವಾ ಇತರ ಕಾನೂನು ಪ್ರಕ್ರಿಯೆಗಳಲ್ಲಿ ನಿಮ್ಮನ್ನು ಪ್ರತಿನಿಧಿಸಲು ವಕೀಲರು.
  2. ಕಾನೂನು ಸೇವೆಗಳ ಪ್ರಾಧಿಕಾರದ ಪ್ರಕ್ರಿಯೆ ಶುಲ್ಕಗಳು, ಸಾಕ್ಷಿಗಳ ವೆಚ್ಚಗಳು ಮತ್ತು ಯಾವುದೇ ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಅಥವಾ ಇತರ ಎಲ್ಲಾ ಶುಲ್ಕಗಳು.
  3. ಕಾನೂನು ಪ್ರಕ್ರಿಯೆಗಳ ಮನವಿಗಳನ್ನು,ಮೇಲ್ಮನವಿ ಪತ್ರ,  ದಾಖಲೆಗಳ ಮುದ್ರಣ ಮತ್ತು ಅನುವಾದ ಸೇರಿದಂತೆ ಕಾಗದ ಪತ್ರ, ಪುಸ್ತಕಗಳನ್ನು ಸಿದ್ಧಪಡಿಸುವುದು.
  4. ಕಾನೂನು ದಾಖಲೆಗಳ ಕರಡು ರಚನೆ ಇತ್ಯಾದಿ.
  5. ಕಾನೂನು ಪ್ರಕ್ರಿಯೆಗಳಲ್ಲಿ ತೀರ್ಪುಗಳು, ಆದೇಶಗಳು, ಸಾಕ್ಷ್ಯದ ಟಿಪ್ಪಣಿಗಳು ಮತ್ತು ಇತರ ದಾಖಲೆಗಳ ಪ್ರಮಾಣೀಕೃತ ಪ್ರತಿಗಳನ್ನು ಪೂರೈಸುವುದು.
  6. ಭಾರತದ ಕಾನೂನುಗಳು ಮತ್ತು ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ ನೆರವು ಮತ್ತು ಸಲಹೆಗಳನ್ನು ನೀಡುವುದು.

ಕಾನೂನು ನೆರವು ಎಂದರೇನು?

ಉಚಿತ ಕಾನೂನು ನೆರವು ಎಂದರೆ ಯಾವುದೇ  ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಯಾವುದೇ ಪ್ರಕರಣ ಅಥವಾ ಕಾನೂನು ಪ್ರಕ್ರಿಯೆಗಾಗಿ ವಕೀಲರ ಸೇವೆಯನ್ನು ಪಡೆಯಲು ಸಾಧ್ಯವಾಗದ ಬಡ ಮತ್ತು ಬಡತನ ರೇಖೆಯ ಅಂಚಿನಲ್ಲಿರುವ ಗುಂಪುಗಳಿಗೆ ನಾಗರಿಕ ಮತ್ತು ಅಪರಾಧ ವಿಷಯಗಳಲ್ಲಿ ಉಚಿತ ಕಾನೂನು ಸೇವೆಗಳನ್ನು ಒದಗಿಸುವುದು.ಈ ಸೇವೆಗಳ ನೇತೃತ್ವವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ವಹಿಸುತ್ತದೆ ಮತ್ತು ಈ ಸೇವೆಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ, 1987 ಅನ್ವಯಿಸುತ್ತದೆ.

ಕಾನೂನು ಸಹಾಯಕ್ಕಾಗಿ ಯಾರು ಅರ್ಜಿ ಸಲ್ಲಿಸಬಹುದು?

  1. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯ.
  2. ಮಾನವ ಕಳ್ಳಸಾಗಾಣಿಕೆಗೆ ಬಲಿಯಾದ ವ್ಯಕ್ತಿ ಅಥವಾ ಬೇಗಾರ್ 7.
  3. ಮಹಿಳೆ ಅಥವಾ ಮಗು.
  4. ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿ ಅಥವಾ ಅಂಗವೈಕಲ್ಯ ಹೊಂದಿರುವ ವ್ಯಕ್ತಿ.
  5. ಸಾಮೂಹಿಕ ವಿಪತ್ತು, ಜನಾಂಗೀಯ ಹಿಂಸಾಚಾರ, ಜಾತಿ ದೌರ್ಜನ್ಯ, ಪ್ರವಾಹ, ಅನಾವೃಷ್ಟಿ, ಭೂಕಂಪ ಅಥವಾ ಕೈಗಾರಿಕಾ ದುರಂತಕ್ಕೆ ಬಲಿಯಾದ ವ್ಯಕ್ತಿ.
  6. ಕೈಗಾರಿಕಾ ಕೆಲಸಗಾರ 
  7. ಬಂಧಿತರು, ರಕ್ಷಣಾ ಮಂದಿರಗಳು , ಬಾಲ ಮಂದಿರಗಳು ಅಥವಾ ಮನೋವೈದ್ಯಕೀಯ ಆಸ್ಪತ್ರೆ ಅಥವಾ ಮನೋವೈದ್ಯಕೀಯ ನರ್ಸಿಂಗ್ ಹೋಮ್‌ನ ಪಾಲನೆಯಲ್ಲಿರುವವರು. 

ಕಾನೂನು ನೆರವು ಪಡೆಯುವ ಜನರ ಆದಾಯದ ಮಿತಿಗಳು ಯಾವುವು?

ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸುವ ಯಾವುದೇ ವ್ಯಕ್ತಿ ಅವರು ವಾಸಿಸುವ ರಾಜ್ಯದಲ್ಲಿ ನಿಗದಿಪಡಿಸಲಾದ ನಿರ್ದಿಷ್ಟ ಆದಾಯದ ಮಿತಿಗಿಂತ ಕಡಿಮೆ ಆದಾಯ ಗಳಿಸಿದರೆ ಮಾತ್ರ ಕಾನೂನು ನೆರವು ಪಡೆಯಲು ಅರ್ಹರಾಗಿರುತ್ತಾರೆ. ರಾಜ್ಯಗಳ ಆದಾಯದ ಮಿತಿಗಳನ್ನು ಕೆಳಗೆ ನೀಡಲಾಗಿದೆ:

States/Union Territories Income Ceiling Limit (Per Annum)
1.      Andhra Pradesh Rs. 3,00,000/-
2.      Arunachal Pradesh Rs. 1,00,000/-
3.      Assam Rs. 3, 00, 000/-
4.      Bihar Rs. 1,50,000/-
5.      Chhattisgarh Rs. 1,50,000/-
6.      Goa Rs.3,00,000/-
7.      Gujarat Rs.1,00,000/-
8.      Haryana Rs. 3,00,000/-
9.      Himachal Pradesh Rs. 3,00,000/-
10.    Jammu & Kashmir Rs. 3,00,000/-
11.    Jharkhand Rs. 3,00,000/-
12.    Karnataka Rs. 3,00,000/-
13.    Kerala Rs. 300,000/-
14.    Madhya Pradesh Rs. 2,00,000/-
15.    Maharashtra Rs. 3,00,000/-
16.    Manipur Rs. 3,00,000/-
17.    Meghalaya Rs. 3,00,000/-
18.    Mizoram Rs. 25,000/-
19.    Nagaland Rs. 1,00,000/-
20.    Odisha Rs.3,00,000/-
21.    Punjab Rs. 3,00,000/-
22.    Rajasthan Rs. 3,00,000/-
23.    Sikkim Rs. 3,00,000/-
24.    Telangana Rs.3,00,000/-
25.    Tamil Nadu Rs. 3,00,000/-
26.    Tripura Rs. 1,50,000/-
27. Uttar Pradesh Rs. 3,00,000/-
28. Uttarakhand Rs. 3,00,000/-
29. West Bengal Rs. 1,00,000/-
30. Andaman & Nicobar Islands Rs.3,00,000/-
31. Chandigarh UT Rs. 3,00,000/-
32. Dadra  & Nagar Haveli UT Rs. 15,000/-
33. Daman & Diu Rs. 1,00,000/-
34. Delhi Rs.3,00,000/-
35. Ladakh Rs. 1,00,000/-
36. Lakshadweep Rs. 3,00,000/-
 37.   Puducherry Rs. 1,00,000/-

ನೀವು ಎಲ್ಲಿ ಕಾನೂನು ನೆರವು ಪಡೆಯಬಹುದು?

ಕಾನೂನು ಸಹಾಯಕ್ಕಾಗಿ ನೀವು ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು:

  1. ಆ ತಾಲೂಕಿನ ನ್ಯಾಯಾಲಯದ ಆವರಣದಲ್ಲಿ ಇರುವ ತಾಲೂಕು ಕಾನೂನು ಸೇವಾ ಸಮಿತಿ.
  2. ಜಿಲ್ಲಾ ಕೇಂದ್ರ ಕಛೇರಿಯಲ್ಲಿರುವ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA).
  3. ಸಂಬಂಧಿತ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (SLSA) (ಪ್ರಕರಣಗಳಿಗಾಗಿ, ರಾಜ್ಯ ಮಟ್ಟದಲ್ಲಿ ನಿರ್ವಹಿಸುವ ಸಮಿತಿಗಳು).
  4. ಸಂಬಂಧಪಟ್ಟ ಉಚ್ಚ ನ್ಯಾಯಾಲಯದ ಆವರಣದಲ್ಲಿರುವ ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿ.
  5. ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮುಂದೆ ಬರುವ ಪ್ರಕರಣಗಳಿಗೆ ಸರ್ವೋಚ್ಚ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿ.ಪ್ರತಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA),  ಕಾನೂನು ಸೇವೆಗಳ ಸಮಿತಿ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ( SLSA) ಒಂದು ಮುಂಭಾಗದ ಕಛೇರಿಯನ್ನು ಹೊಂದಿದೆ ಅಲ್ಲಿ ಅರ್ಜಿಯನ್ನು ಸ್ಥಳಾಂತರಿಸಬಹುದು. ಮುಂಭಾಗದ ಕಛೇರಿಯು ಕಾನೂನು ಸೇವೆಗಳ ಪ್ರಾಧಿಕಾರದ ಒಂದು ಕೋಣೆಯಾಗಿದ್ದು, ಅಲ್ಲಿ ಕಾನೂನು ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಯಾವುವು?

ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು, ನಿಮಗೆ ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ:

  • ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಇತ್ಯಾದಿಗಳಂತಹ ಗುರುತಿನ ದಾಖಲೆಗಳು.
  • ಕಾನೂನು ಸಹಾಯಕ್ಕಾಗಿ ನಿಮ್ಮ ಅರ್ಹತೆಯನ್ನು ಸಾಬೀತುಪಡಿಸುವ ಶಪಥಪತ್ರ. ಉದಾಹರಣೆಗೆ, ಅವರ ಆದಾಯವು ನಿರ್ದಿಷ್ಟಪಡಿಸಿದ ಮಟ್ಟಕ್ಕಿಂತ ಕಡಿಮೆ ಇರುವ ಕಾರಣ ಅವರು ಅರ್ಹರು ಎಂದು ಅವರು ಹೇಳಿಕೊಳ್ಳುತ್ತಿದ್ದರೆ, ಅವರು ತಮ್ಮ ಆದಾಯದ ಅಫಿಡವಿಟ್/ಶಪಥಪತ್ರವನ್ನು ದಾಖಲೆಯಾಗಿ ನೀಡಬೇಕು.
ಮೇಲಿನ ದಾಖಲೆಗಳ ಜೊತೆಗೆ, ನಿಮ್ಮ ರಾಜ್ಯದಲ್ಲಿ ಕೆಲವು ಹೆಚ್ಚುವರಿ ದಾಖಲೆಗಳು ಬೇಕಾಗಬಹುದು. ಅಗತ್ಯವಿರುವ ದಾಖಲೆಗಳ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು ಹತ್ತಿರದ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ.

ಅರ್ಜಿಯನ್ನು ಹೇಗೆ ಸಲ್ಲಿಸುವುದು

ಸ್ವತಃ ಮತ್ತು ಆನ್‌ಲೈನ್ನಲ್ಲಿ :

ನೀವು ಎರಡು ರೀತಿಯಲ್ಲಿ ಕಾನೂನು ಸಹಾಯಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು: ಸ್ವತಃ ಮತ್ತು ಆನ್‌ಲೈನ್ನಲ್ಲಿ.

ನೀವು ಸ್ವತಃ ಕಾನೂನು ನೆರವು ಅರ್ಜಿಯನ್ನು ಹೇಗೆ ಸಲ್ಲಿಸಬಹುದು?

ಸ್ವತಃ ಅರ್ಜಿಯನ್ನು ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:

• ನಿಮ್ಮ ಜಿಲ್ಲೆಯ ಹತ್ತಿರದ ಕಾನೂನು ಸೇವಾ ಪ್ರಾಧಿಕಾರದ ಮುಂಭಾಗದ ಕಛೇರಿಗೆ ಹೋಗಿ.

• ನಿಮ್ಮ ರಾಜ್ಯದ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಲು ನೀವು ಬಯಸಿದರೆ ಕಛೇರಿ ಸಮಯದಲ್ಲಿ ಅವರ ಮುಂಭಾಗದ ಕಚೇರಿಗೆ ಹೋಗಿ.

• ಕಾನೂನು ಸೇವಾ ಪ್ರಾಧಿಕಾರದಲ್ಲಿ ಲಭ್ಯವಿರುವ ಸಿದ್ಧ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

• ನೀವು ಸರಳವಾದ ಕಾಗದದ ಮೇಲೆ ಲಿಖಿತವಾಗಿ ಅರ್ಜಿಯನ್ನು ಸಹ ಬರೆಯಬಹುದು, ಆ ಅರ್ಜಿಯು ಒಳಗೊಳ್ಳಬೇಕಾದ ಅಗತ್ಯ ವಿವರಗಳೆಂದರೆ, ಅವರ ಹೆಸರು, ಲಿಂಗ, ವಸತಿ ವಿಳಾಸ, ಉದ್ಯೋಗ ಸ್ಥಿತಿ, ರಾಷ್ಟ್ರೀಯತೆ, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಆಗಿದ್ದರೆ (ಪ್ರಮಾಣಪತ್ರದ ರೂಪದಲ್ಲಿ ಬೆಂಬಲದ ಪುರಾವೆಯೊಂದಿಗೆ), ತಿಂಗಳಿಗೆ ಆದಾಯ (ಶಪಥಪತ್ರದೊಂದಿಗೆ), ಕಾನೂನು ನೆರವು ಅಗತ್ಯವಿರುವ ಪ್ರಕರಣ ಮತ್ತು ಕಾನೂನು ನೆರವು ಪಡೆಯಲು ಕಾರಣ.

• ನೀವು ಭರ್ತಿ ಮಾಡಿದ ಅರ್ಜಿಯನ್ನು ಖುದ್ದು ಕಚೇರಿಯಲ್ಲಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.

• ಒಬ್ಬ ಪ್ಯಾರಾಲೀಗಲ್ (ಕಾನೂನು ಸಹಾಯಕ )ಸ್ವಯಂಸೇವಕ ಅಥವಾ ಪ್ರಾಧಿಕಾರದ ಅಧಿಕಾರಿಯು ನಿಮಗೆ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳು, ಸ್ಪಷ್ಟೀಕರಣ ಅಥವಾ ಅಗತ್ಯವಿರುವ ಇತರ ದಾಖಲೆಗಳ ಕುರಿತು ಮಾರ್ಗದರ್ಶನ ನೀಡುತ್ತಾರೆ.

ನೀವು ಆನ್‌ಲೈನ್ ಕಾನೂನು ನೆರವು ಅರ್ಜಿಯನ್ನು ಹೇಗೆ ಸಲ್ಲಿಸುತ್ತೀರಿ?

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

1. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಸೇವೆಗಳ ನಿರ್ವಹಣಾ ವ್ಯವಸ್ಥೆಗೆ ಹೋಗಿ, ಅಗತ್ಯವಿದ್ದರೆ ಕನ್ನಡ /ಇಂಗ್ಲಿಷ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ವೆಬ್ಸೈಟ್ನ ಭಾಷೆಯನ್ನು ಬದಲಾಯಿಸಿ. 15.

2. ಕಾನೂನು ಸೇವೆಗಳಿಗಾಗಿ ‘ಕಾನೂನು ನೆರವು ಅರ್ಜಿ ’/ ‘ಅಪ್ಲೈ ಲೀಗಲ್ ಏಡ್ (Apply Legal Aid)’ ಮೇಲೆ ಕ್ಲಿಕ್ ಮಾಡಿ.

3. ಅರ್ಜಿಯ ಮೇಲಿನ ಎಡಭಾಗದಲ್ಲಿರುವ ಕನ್ನಡ /ಇಂಗ್ಲಿಷ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್‌ನ ಭಾಷೆಯನ್ನು ಬದಲಾಯಿಸಿ. .

4. ನೀವು ಅರ್ಜಿ ಸಲ್ಲಿಸಲು ಯೋಜಿಸಿರುವ ಕಾನೂನು ಸೇವಾ ಪ್ರಾಧಿಕಾರವನ್ನು ಆಯ್ಕೆಮಾಡಿ.

5. ನೀವು ಅರ್ಜಿಯನ್ನು ಸಲ್ಲಿಸಲು ಬಯಸುವ ರಾಜ್ಯ, ಜಿಲ್ಲೆ ಅಥವಾ ತಾಲ್ಲೂಕನ್ನು ಆಯ್ಕೆಮಾಡಿ.

6. ಕಾನೂನು ಸಮಸ್ಯೆಯ ಸ್ವರೂಪವನ್ನು ಭರ್ತಿ ಮಾಡಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ, ನಿವೃತ್ತಿ ಬಾಕಿಗಳು ಆದಾಯ/ಭೂಮಿ/ತೆರಿಗೆ, ಸಾಮಾಜಿಕ ಅನಿಷ್ಟಗಳು ಇತ್ಯಾದಿಗಳನ್ನು ಒಳಗೊಂಡಂತೆ ಡ್ರಾಪ್‌ ಡೌನ್‌ನಲ್ಲಿ ನೀಡಲಾದ ಆಯ್ಕೆಗಳನ್ನು ಆರಿಸಿ.

7. ನೀವು ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸುತ್ತಿರುವ ಸಮಸ್ಯೆಯ ಸಾರಾಂಶವನ್ನು ಭರ್ತಿ ಮಾಡಿ.

8. ಹೆಸರು, ಲಿಂಗ, ಪ್ರಕರಣ, ಜಾತಿ ಪ್ರಮಾಣಪತ್ರ, ವಾರ್ಷಿಕ ಆದಾಯ ಮುಂತಾದ ವೈಯಕ್ತಿಕ ವಿವರಗಳನ್ನು ಸೇರಿಸಿ.

9. ಮೊಕದ್ದಮೆ ಪ್ರಕಾರ, ನ್ಯಾಯಾಲಯದ ಪ್ರಕಾರ, ಮೊಕದ್ದಮೆ ಸಂಖ್ಯೆ. ಇತ್ಯಾದಿಯಾಗಿ ಯಾವುದೇ ಹಿಂದಿನ ಪ್ರಕರಣಗಳಿಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಿ

10. ನೀವು ಹೆಚ್ಚುವರಿ ಮಾಹಿತಿಯನ್ನು ಅಥವಾ ಪ್ರಕರಣಹೊಂದಿದ್ದರೆ ದಾಖಲೆಗಳನ್ನು ಲಗತ್ತಿಸಿ ಮತ್ತು ಕ್ಲಿಕ್ ಮಾಡಿ ಸಲ್ಲಿಸಿ

11. ನಂತರದ ದಿನಗಳಲ್ಲಿ ಅಪ್ಲಿಕೇಶನ್ ಅನ್ನು ಟ್ರಾಕ್ ಮಾಡಲು ನೀವು ಬಳಸಬಹುದಾದ ಡೈರಿ ಸಂಖ್ಯೆಯನ್ನು ಪಡೆದುಕೊಳ್ಳಿ.

ಅರ್ಜಿಯನ್ನು ಇಮೇಲ್ ಮೂಲಕ ಸಲ್ಲಿಸಬಹುದೆ?

ಹೌದು. ನೀವು nalsa-dla@nic.in ನಲ್ಲಿ ರಾಷ್ಟ್ತ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ(NALSA)  ಇಮೇಲ್ ಮೂಲಕ ಅರ್ಜಿಯನ್ನು ಕಳುಹಿಸಬಹುದು. ಇಮೇಲ್‌ನಲ್ಲಿ ಅಗತ್ಯ ವಿವರಗಳನ್ನು ನಮೂದಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ – ಹೆಸರು, ಲಿಂಗ, ವಸತಿ ವಿಳಾಸ, ಉದ್ಯೋಗದ ಸ್ಥಿತಿ, ರಾಷ್ಟ್ರೀಯತೆ, SC/ST (ಪ್ರಮಾಣಪತ್ರದ ರೂಪದಲ್ಲಿ ದಾಖಲೆಯೊಂದಿಗೆ), ತಿಂಗಳ ಆದಾಯ (ಶಪಥಪತ್ರದೊಂದಿಗೆ), ಕಾನೂನು ಸಹಾಯದ ಅಗತ್ಯವಿದೆ, ಕಾನೂನು ನೆರವು ಪಡೆಯಲು ಕಾರಣ, ಇತ್ಯಾದಿ.

ಕಾನೂನು ನೆರವು ಅರ್ಜಿಯನ್ನು ಹೇಗೆ ಪ್ರಕ್ರಿಯೆಗೊಳಿಸಲಾಗುತ್ತದೆ?

ಒಮ್ಮೆ ನೀವು ಅರ್ಜಿಯನ್ನು ಸಲ್ಲಿಸಿದರೆ, ಕಾನೂನು ಸೇವಾ ಪ್ರಾಧಿಕಾರವು:

  • ಮುಂದಿನ ಹಂತಗಳನ್ನು ನಿರ್ಧರಿಸಲು ಅರ್ಜಿಯನ್ನು ಪರೀಕ್ಷಿಸಿ
  • ಅರ್ಜಿಯನ್ನು ಸ್ವೀಕರಿಸಿದ 7 ದಿನಗಳಲ್ಲಿ, ಅರ್ಜಿಯನ್ನು ಸ್ವೀಕರಿಸಲಾಗುವುದು ಅಥವಾ ತಿರಸ್ಕರಿಸಲಾಗುವುದು
  • ನಿಮ್ಮ ವಸತಿ ವಿಳಾಸ ಅಥವಾ ಇಮೇಲ್ ವಿಳಾಸದ ಮೂಲಕ ತಿಳಿಸಲಾಗುವುದು ಅಥವಾ ನೀವು ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದ್ದರೆ, ಅರ್ಜಿಯ ಸ್ಥಿತಿಯನ್ನು ನವೀಕರಿಸುವರು, ಆಗ ನೀವು ಡೈರಿ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
  • ಅರ್ಜಿಯನ್ನು ಸ್ವೀಕರಿಸಿದರೆ, ನಿಯೋಜಿಸಲಾದ ವಕೀಲರ ಬಗ್ಗೆ ನಿಮಗೆ ಮಾಹಿತಿ ನೀಡುತ್ತದೆ.
  • ವಕೀಲರಿಗೆ ಮತ್ತು ಅರ್ಜಿದಾರರಿಗೆ ನೇಮಕಾತಿ ಪತ್ರವನ್ನು (ವಕಲತ್ನಾಮ) ನೀಡಿ.

ಕಾನೂನು ನೆರವು ನಿರಾಕರಣೆ ಮತ್ತು ಹಿಂತೆಗೆದುಕೊಳ್ಳುವಿಕೆ:

ಕಾನೂನು ಸಹಾಯವನ್ನು ನಿರಾಕರಿಸಬಹುದೇ ಅಥವಾ ನಂತರ ಹಿಂಪಡೆಯಬಹುದೇ?

ಕಾನೂನು ಸಹಾಯವನ್ನು ಎರಡು ಹಂತಗಳಲ್ಲಿ ನಿರಾಕರಿಸಬಹುದು – ಅರ್ಜಿ ಸಲ್ಲಿಸುವ ಮೊದಲು ಆರಂಭಿಕ ಹಂತದಲ್ಲಿ ಅಂದರೆ ಅರ್ಜಿಯನ್ನು ಸ್ವೀಕರಿಸುವ ಮುನ್ನ ಮತ್ತು ಅರ್ಜಿಯನ್ನು ಸ್ವೀಕರಿಸಿದ ನಂತರ  ಕಾನೂನು ನೆರವು ಒದಗಿಸಿದ ನಂತರದ ಹಂತದಲ್ಲಿ.

ಈ ಕಾರಣಕ್ಕಾಗಿ ಅರ್ಜಿದಾರರಾಗಿದ್ದರೆ ಕಾನೂನು ಸಹಾಯವನ್ನು ನಿರಾಕರಿಸಬಹುದು ಅಥವಾ ಹಿಂಪಡೆಯಬಹುದು:

• ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಅನರ್ಹವಾಗಿದ್ದರೆ.

• ಆದಯವು ರಾಜ್ಯಗಳು ನೀಡಿದ ಆದಾಯ ಮಿತಿಗಿಂತ ಹೆಚ್ಚಾಗಿದ್ದರೆ .

• ತಪ್ಪು ನಿರೂಪಣೆ ಅಥವಾ ವಂಚನೆಯಿಂದ ಕಾನೂನು ಸೇವೆಗಳನ್ನು ಪಡೆಯುತ್ತಿದ್ದರೆ.

• ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಅಥವಾ ಕಾನೂನು ಸೇವೆಗಳ ವಕೀಲರೊಂದಿಗೆ ಸಹಕರಿಸದಿದ್ದರೆ.

• ಕಾನೂನು ಸೇವೆಗಳ ಪ್ರಾಧಿಕಾರದಿಂದ ವಕೀಲರನ್ನು  ನಿಯೋಜಿಸಲಾಗಿದ್ದರೂ  ಪ್ರಕರಣಕ್ಕೆ ಖಾಸಗಿಯಾಗಿ ಮತ್ತೊಬ್ಬ ವಕೀಲರನ್ನು ತೊಡಗಿಸಿಕೊಂಡರೆ.

• ಅರ್ಜಿದಾರರ ಸಾವು ಸಂಭವಿಸಿದರೆ. ಹಕ್ಕುಗಳು ಅಥವಾ ಹೊಣೆಗಾರಿಕೆಯು ಉಳಿದಿರುವ ಸಿವಿಲ್ ಪ್ರಕರಣಗಳನ್ನು ಹೊರತುಪಡಿಸಿ.

• ಕಾನೂನು ಅಥವಾ ಕಾನೂನು ಸೇವೆಗಳ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ.

ನೀವು ಮೇಲ್ಮನವಿಯನ್ನು ಹೇಗೆ ಸಲ್ಲಿಸುತ್ತೀರಿ?

ಕಾನೂನು ಸೇವೆಗಳ ಅರ್ಜಿಯನ್ನು ಸದಸ್ಯ-ಕಾರ್ಯದರ್ಶಿ ಅಥವಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಪರಿಶೀಲಿಸುತ್ತಾರೆ.

ಕೈಗೊಂಡ ನಿರ್ಧಾರದಿಂದ ನೀವು ಬಾಧಿತರಾಗಿದ್ದರೆ, ಕಾರ್ಯಾಧ್ಯಕ್ಷರು ಅಥವಾ ಕಾನೂನು ಸೇವಾ ಪ್ರಾಧಿಕಾರದ  ಅಧ್ಯಕ್ಷರಿಗೆ ಮೇಲ್ಮನವಿ ಸಲ್ಲಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ಮತ್ತು ಮೇಲ್ಮನವಿಯಿಂದ ಬರುವ ನಿರ್ಧಾರವು ಅಂತಿಮವಾಗಿರುತ್ತದೆ.

ವಕೀಲರು ಅಥವಾ ಕಾನೂನು ಸೇವೆಗಳ ಪ್ರಾಧಿಕಾರದ ವಿರುದ್ಧದೂರು ನೀಡುವುದು:

ನೀವು ಎಲ್ಲಿ ದೂರು ದಾಖಲಿಸಬಹದು?

ಅವರು ಅರ್ಜಿ ಸಲ್ಲಿಸಿದ ಪ್ರಾಧಿಕಾರಕ್ಕಿಂತ ಮೇಲಿನ ಪ್ರಾಧಿಕಾರಕ್ಕೆ ನೀವು ದೂರು ಸಲ್ಲಿಸಬಹುದು, ಈ ಕೆಳಗಿನ ಕ್ರಮದಲ್ಲಿ:

National Legal Services Authority

                          ↑

State Legal Services Authority

                          ↑

District Legal Services Authority

                          ↑

Taluk Legal Services Authority

ನಿಯೋಜಿಸಲಾದ ವಕೀಲರ ನಡವಳಿಕೆಯ ಬಗ್ಗೆ ನೀವು ಹೇಗೆ ದೂರು ಸಲ್ಲಿಸಬಹದು?

ನಿಯೋಜಿಸಲಾದ ವಕೀಲರ ನಡವಳಿಕೆಯಿಂದ ನೀವು ಅತೃಪ್ತರಾಗಿದ್ದರೆ, ನೀವು ನಿಯೋಜಿಸಿದ ಪ್ರಾಧಿಕಾರಕ್ಕೆ ಔಪಚಾರಿಕ ದೂರನ್ನು ಸಲ್ಲಿಸಬಹದು.

1. ಸರಳವಾದ ಕಾಗದದ ಅರ್ಜಿಯನ್ನು ಬರೆಯುವುದು, ಅದನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸುವುದು

2. ಸೂಕ್ತ ಪ್ರಾಧಿಕಾರ ಅಥವಾ NALSA ಗೆ ಇಮೇಲ್ ಬರೆಯುವುದು (nalsa-dla@nic.in ನಲ್ಲಿ)

3. NALSA ವೆಬ್‌ಸೈಟ್ ಅಥವಾ ಅಧಿಕಾರದ ಸಂಬಂಧಿತ ವೆಬ್‌ಸೈಟ್‌ನಲ್ಲಿ “ಕುಂದುಕೊರತೆ ಪರಿಹಾರ” ಆಯ್ಕೆಯನ್ನು ಪ್ರವೇಶಿಸುವುದು. ವಕೀಲರೊಂದಿಗೆ ನೀವು ಎದುರಿಸುತ್ತಿರುವ ಸಮಸ್ಯೆಯನ್ನು ದೂರಿನಲ್ಲಿ ವಿವರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸಂಪನ್ಮೂಲಗಳು:

ಪರಿಶೀಲನಾ ಪಟ್ಟಿ:

1.ಅರ್ಜಿದಾರರು ಉಚಿತ ಕಾನೂನು ಸಹಾಯಕ್ಕೆ ಅರ್ಹರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಿ.

2. ಅರ್ಜಿದಾರರು ಕಾನೂನು ನೆರವು ಪಡೆಯಲು ಅಗತ್ಯವಿರುವ ಎಲ್ಲಾ ಸಂಬಂಧಿತ ದಾಖಲೆಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ.

3. ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾದ ಮೋಡ್ ಅನ್ನು ನಿರ್ಧರಿಸಿ.

4. ಆಫ್‌ಲೈನ್ ಮೋಡ್ ಅನ್ನು ಆರಿಸಿದರೆ ಹತ್ತಿರದ ಕಾನೂನು ಸೇವೆಗಳ ಪ್ರಾಧಿಕಾರವನ್ನು ಭೇಟಿ ಮಾಡಿ .

5. ಕಾನೂನು ನೆರವು ಅರ್ಜಿ ನಮೂನೆ ಪಡೆಯಲು,ಕಾನೂನು ಸಲಹೆ ಪಡೆಯಲು, ಪ್ರಕರಣದ ಸ್ಥಿತಿಯನ್ನು ತಿಳಿಯಲು ಮತ್ತು ಯಾವುದೇ ಮುಂದಿನ ಕಾನೂನು ನೆರವು ಪಡೆಯಲು ಸಂಬಂಧಪಟ್ಟ ಕಾನೂನು ಸೇವೆಗಳ ಪ್ರಾಧಿಕಾರದ ಮುಂಭಾಗದ ಕಛೇರಿಯನ್ನು ಸಂಪರ್ಕಿಸಿ.

ಮಾಹಿತಿಯ ಮೂಲಗಳು:

1.ಉಚಿತ ಕಾನೂನು ನೆರವು / ಅರ್ಜಿಯ ವಿಧಾನ, ರಾಷ್ಟ್ರೀಯ ಕಾನೂನು ಸೇವೆಗಳನ್ನು ಕ್ಲೈಮ್ ಮಾಡುವುದು

ಪ್ರಾಧಿಕಾರ, https://nalsa.gov.in/services/legal-aid/claiming-free-legal-aid ನಲ್ಲಿ ಲಭ್ಯವಿದೆ

ಅಪ್ಲಿಕೇಶನ್-ವಿಧಾನ

2. ಪ್ರಾರಂಭಿಕ ಮಾರ್ಗದರ್ಶಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, https://nalsa ನಲ್ಲಿ ಲಭ್ಯವಿದೆ.

gov.in/lsams/pdf/NALSA-Getting_Started_Guide_0.1.pdf

3. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ವೆಬ್‌ಸೈಟ್‌ಗಳು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ,

https://nalsa.gov.in/home ನಲ್ಲಿ ಲಭ್ಯವಿದೆ

4. ಮುಂಭಾಗದ ಕಚೇರಿ ಮಾರ್ಗಸೂಚಿಗಳು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, https://nalsa ನಲ್ಲಿ ಲಭ್ಯವಿದೆ.

gov.in/acts-rules/guidelines/front-office-guidelines

5. ಕಾನೂನು ನೆರವು, ನ್ಯಾಯ, https://nyaaya.org/topic/legal-aid/ ನಲ್ಲಿ ಲಭ್ಯವಿದೆ

6. FAQ ಗಳು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, https://nalsa.gov.in/faqs ನಲ್ಲಿ ಲಭ್ಯವಿದೆ

7. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಉಚಿತ ಮತ್ತು ಸಮರ್ಥ ಕಾನೂನು ಸೇವೆಗಳು)

ನಿಯಮಗಳು, 2010 https://nalsa.gov.in/acts-rules/regulations/national ನಲ್ಲಿ ಲಭ್ಯವಿದೆ

ಕಾನೂನು-ಸೇವೆಗಳು-ಅಧಿಕಾರ-ಮುಕ್ತ-ಮತ್ತು-ಸಮರ್ಥ-ಕಾನೂನು-ಸೇವೆಗಳು-ನಿಯಮಗಳು-2010

ಪದಕೋಶ:

ಫ್ರಂಟ್ ಆಫೀಸ್(ಮುಂಭಾಗದ ಕಛೇರಿ): ಫ್ರಂಟ್ ಆಫೀಸ್ ಎಂದರೆ ಕಾನೂನು ಸೇವೆಗಳ ಸಂಸ್ಥೆಯಲ್ಲಿ ಕಾನೂನು ಸೇವೆಗಳು ಲಭ್ಯವಿರುವ ಕೊಠಡಿ. ಮುಂಭಾಗದ ಕಛೇರಿಯಲ್ಲಿ ನಿಯೋಜಿತ ರೀಟೈನರ್ ವಕೀಲರು, ಪ್ಯಾರಾ ಲೀಗಲ್ ಸ್ವಯಂಸೇವಕರು (PLVs) ಮತ್ತು ಪ್ಯಾನಲ್ ವಕೀಲರು. ಒಬ್ಬ ವ್ಯಕ್ತಿಯು ಮುಂಭಾಗದ ಕಛೇರಿಯಿಂದ ಕಾನೂನು ಸಲಹೆಯನ್ನು ಪಡೆಯಬಹುದು. ಫ್ರಂಟ್ ಆಫೀಸ್ ಅರ್ಜಿಯನ್ನು ರಚಿಸುವುದು, ಮೇಲ್ಮನವಿ ರಚಿಸುವುದು, ಪ್ರತ್ಯುತ್ತರಗಳು ಇತ್ಯಾದಿ ಕರಡುಗಳನ್ನು ರಚಿಸುತ್ತದೆ,ಇದು ಕಾನೂನು ನೆರವು ಅರ್ಜಿಗಳ ದಾಖಲೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (NALSA) ವೆಬ್‌ಸೈಟ್‌ನಲ್ಲಿ ಕಾನೂನು ನೆರವು ಅರ್ಜಿಗಳನ್ನು ಅಪ್‌ಲೋಡ್ ಮಾಡುತ್ತದೆ, ಇದು ಅರ್ಜಿದಾರರಿಗೆ ಅವರ ವಿಷಯಕ್ಕಾಗಿ ಗುರುತಿಸಲಾದ ಪ್ಯಾನಲ್ ವಕೀಲರ ವಿವರಗಳ ಬಗ್ಗೆ ಅಪ್‌ಡೇಟ್ ಮಾಡುತ್ತದೆ ಮತ್ತು ಅವರ ಪ್ರಕರಣಗಳ ಸ್ಥಿತಿಯ ಕುರಿತು ಮಾಹಿತಿಯನ್ನು ನಿಯಮಿತವಾಗಿ ನವೀಕರಿಸುತ್ತದೆ.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ: ಸಮಾಜದ ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲು ಮತ್ತು ವಿವಾದಗಳ ಸೌಹಾರ್ದಯುತ ಇತ್ಯರ್ಥಕ್ಕಾಗಿ ಲೋಕ ಅದಾಲತ್‌ಗಳನ್ನು ಆಯೋಜಿಸಲು ಕಾನೂನು ಸೇವಾ ಪ್ರಾಧಿಕಾರಗಳ ಕಾಯಿದೆ, 1987 ರ ಅಡಿಯಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವನ್ನು (NALSA) ರಚಿಸಲಾಗಿದೆ.
ರಾಜ್ಯ ಕಾನೂನು ಸೇವಾ ಪ್ರಾಧಿಕಾರ: ಪ್ರತಿ ರಾಜ್ಯದಲ್ಲಿ ನ ನೀತಿಗಳು ಮತ್ತು ನಿರ್ದೇಶನಗಳನ್ನು ಜಾರಿಗೆ ತರಲು ಮತ್ತು ಜನರಿಗೆ ಉಚಿತ ಕಾನೂನು ಸೇವೆಗಳನ್ನು ನೀಡಲು ಮತ್ತು ರಾಜ್ಯದಲ್ಲಿ ಲೋಕ ಅದಾಲತ್‌ಗಳನ್ನು ನಡೆಸಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರವನ್ನು ರಚಿಸಲಾಗಿದೆ.
ಬೇಗಾರ್: ಇದು ಬಲವಂತದ ದುಡಿಮೆಯ ಒಂದು ಪ್ರಕಾರ, ಯಾವುದೇ ಸಂಭಾವನೆ ಇಲ್ಲದ ಅನೈಚ್ಛಿಕ ಕೆಲಸ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಬ್ಬ ವ್ಯಕ್ತಿಯು ಯಾವುದೇ ಸಂಭಾವನೆ ಇಲ್ಲದೆ, ತನ್ನ ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡಲು ಒತ್ತಾಯಿಸಲ್ಪಡುವುದು  ಎಂದು ಹೇಳಬಹುದು.
ಕೆಲಸಗಾರ: ಯಾವುದೇ ಕೈಗೆಲಸ, ಕೌಶಲ್ಯರಹಿತ, ನುರಿತ, ತಾಂತ್ರಿಕ, ಕಾರ್ಯಾಚರಣೆ, ಕ್ಲೆರಿಕಲ್ ಅಥವಾ ಮೇಲ್ವಿಚಾರಣಾ ಕೆಲಸವನ್ನು ಮಾಡಲು ಯಾವುದೇ ಉದ್ಯಮದಲ್ಲಿ ಉದ್ಯೋಗದಲ್ಲಿರುವ ಯಾವುದೇ ವ್ಯಕ್ತಿ.

 

ಭಾರತದಲ್ಲಿ ತೃತೀಯ ಲಿಂಗಿ ವ್ಯಕ್ತಿಗಳ ಹಕ್ಕುಗಳ ಮಾರ್ಗದರ್ಶಿ

ಭಾರತದಲ್ಲಿ ತೃತೀಯ ಲಿಂಗಿ ವ್ಯಕ್ತಿಗಳ ಹಕ್ಕುಗಳ ಮಾರ್ಗದರ್ಶಿ

ಮಾರ್ಗದರ್ಶಿಯಲ್ಲಿ ಯಾವ್ಯಾವ ಕಾನೂನುಗಳನ್ನು ಚರ್ಚಿಸಲಾಗಿದೆ?

ಈ ಮಾರ್ಗದರ್ಶಿಯು ಭಾರತದ ಸಂವಿಧಾನದಲ್ಲಿನ ಸಾಮಾನ್ಯ ನಿಬಂಧನೆಗಳು, ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ, 2019 ಮತ್ತು ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ನಿಯಮಗಳು, 2020 ಅನ್ನು ಚರ್ಚಿಸುತ್ತದೆ.

ಕಾನೂನನ್ನು ಏಕೆ ಜಾರಿಗೆ ತರಲಾಯಿತು?

ಸಾಮಾಜಿಕ ಅಂಗೀಕಾರದ ಕೊರತೆಯಿಂದಾಗಿ ತೃತೀಯ ಲಿಂಗಿ ವ್ಯಕ್ತಿಗಳನ್ನು ಸಮಾಜದ ಸಮಾನ ಭಾಗವಾಗಿ ಪರಿಗಣಿಸಲಾಗುವುದಿಲ್ಲ. ತೃತೀಯ ಲಿಂಗಿಯರನ್ನು ಸಾಮಾನ್ಯವಾಗಿ ಪರಿತ್ಯಜಿಸಲಾಗುತ್ತದೆ ಮತ್ತು ಅವರಿಗೆ ಜೀವನ ಸಾಗಿಸಲು  ವಿರಳ ಅವಕಾಶಗಳಿರುತ್ತವೆ. ತೃತೀಯ ಲಿಂಗಿ ವ್ಯಕ್ತಿಗಳನ್ನು ಹೊಂದಿರುವುದು ಅವಮಾನಕರವೆಂದು, ಏಕೆಂದರೆ ಅದು ಕುಟುಂಬಕ್ಕೆ ಅವಮಾನ ತರುತ್ತದೆ ಎಂದು ಪೋಷಕರು ಭಾವಿಸುತ್ತಾರೆ. ಇನ್ನೊಂದು ಸಮಸ್ಯೆ ಎಂದರೆ ಮದುವೆ. ಈ ಕಾಯಿದೆಯು ಮೇಲಿನ ಸಮಸ್ಯೆಗಳನ್ನು ಮತ್ತು ಹೆಚ್ಚಿನದನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಕಾನೂನಿನ ಉದ್ದೇಶವೇನು?

ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ, 2019 (“ಕಾನೂನು”) ಅನ್ನು ಭಾರತದಲ್ಲಿ ತೃತೀಯ ಲಿಂಗಿ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ಕಲ್ಯಾಣಕ್ಕಾಗಿ ರಚಿಸಲಾಗಿದೆ ಮತ್ತು ರೂಪಿಸಲಾಗಿದೆ.  ಈ ಕಾನೂನು ಇಡೀ ಭಾರತಕ್ಕೆ ಅನ್ವಯಿಸುತ್ತದೆ.

ತೃತೀಯ ಲಿಂಗಿ ವ್ಯಕ್ತಿಗಳು ಯಾರು?

ಕಾನೂನಿನ ಪ್ರಕಾರ, ತೃತೀಯ ಲಿಂಗಿ ವ್ಯಕ್ತಿ ಎಂದರೆ, ಹುಟ್ಟಿದ ಸಮಯದಲ್ಲಿ ಆ ವ್ಯಕ್ತಿಗೆ ನಿಯೋಜಿಸಲಾದ ಲಿಂಗದೊಂದಿಗೆ ಅವರ ಲಿಂಗವು ಹೊಂದಿಕೆಯಾಗದ ವ್ಯಕ್ತಿ, ಮತ್ತು ಇವುಗಳನ್ನು ಒಳಗೊಂಡಿರುತ್ತದೆ:

ತೃತೀಯ ಲಿಂಗಿ ಪುರುಷ

ತೃತೀಯ ಲಿಂಗಿ ಮಹಿಳೆ

ಅಂತರ್ಲಿಂಗ ವ್ಯತ್ಯಾಸಗಳನ್ನು ಹೊಂದಿರುವ ವ್ಯಕ್ತಿ

  • ಲಿಂಗ-ಕ್ವೀರ್ ವ್ಯಕ್ತಿಗಳು
  • ಕಿನ್ನರ್, ಹಿಜ್ರಾ, ಅರವಾಣಿ ಮತ್ತು ಜೋಗ್ತಾ ಮುಂತಾದ ಸಾಮಾಜಿಕ-ಸಾಂಸ್ಕೃತಿಕ ಗುರುತುಗಳನ್ನು ಹೊಂದಿರುವ ವ್ಯಕ್ತಿಗಳು

ಭಾರತದ ಕಾನೂನಿನಲ್ಲಿ ತೃತೀಯ ಲಿಂಗಿ ವ್ಯಕ್ತಿಯ ಸ್ಥಾನಮಾನಏನು?

ಭಾರತದಲ್ಲಿ, ತೃತೀಯ ಲಿಂಗಿ ವ್ಯಕ್ತಿಗಳನ್ನು ಕಾನೂನುಬದ್ಧವಾಗಿ ‘ಮೂರನೇ ಲಿಂಗ’ ಅಥವಾ ‘ಇತರ’ ಲಿಂಗ ಎಂದು ಗುರುತಿಸಲಾಗಿದೆ.

ಅವರು ಯಾವುದೇ ಪುರುಷ ಅಥವಾ ಮಹಿಳೆಯ ಸ್ಥಾನಮಾನವನ್ನೇ ಹೊಂದಿದ್ದಾರೆ.  ಅವರು ಭಾರತದ ಸಂವಿಧಾನದ ಅಡಿಯಲ್ಲಿ ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುವ ಹಕ್ಕನ್ನು ಒಳಗೊಂಡಂತೆ ಅದೇ ಹಕ್ಕುಗಳನ್ನು ಹೊಂದಿದ್ದಾರೆ.  2014 ರಲ್ಲಿ ಸರ್ವೋಚ್ಚ  ನ್ಯಾಯಾಲಯವು   NALSA ವಿರುದ್ದ ಯೂನಿಯನ್ ಆಫ್ ಇಂಡಿಯಾ & ಇತರರು (2014)  ಪ್ರಕರಣದ ತನ್ನ ಮಹತ್ವದ ತೀರ್ಪಿನಲ್ಲಿ ಭಾರತದಲ್ಲಿ ‘ಟ್ರಾನ್ಸ್ಜೆಂಡರ್’ ಅನ್ನು ‘ತೃತೀಯ ಲಿಂಗ’ ಎಂದು ಅಧಿಕೃತವಾಗಿ ಘೋಷಿಸಿತು.

ಎಲ್ಲಾ ತೃತೀಯ ಲಿಂಗಿ ವ್ಯಕ್ತಿಗಳು ಆರ್ಟಿಕಲ್ 14 (ಸಮಾನತೆ), ಆರ್ಟಿಕಲ್ 15 (ತಾರತಮ್ಯ ರಹಿತ), ಆರ್ಟಿಕಲ್ 16 (ಸಾರ್ವಜನಿಕ ಉದ್ಯೋಗದಲ್ಲಿ ಸಮಾನ ಅವಕಾಶ), ಆರ್ಟಿಕಲ್ 19(1)(a) (ವಾಕ್ ಸ್ವಾತಂತ್ರ್ಯದ ಹಕ್ಕು) ಮತ್ತು ಭಾರತೀಯ ಸಂವಿಧಾನದ 21 ನೇ ವಿಧಿ (ಜೀವಿಸುವ ಹಕ್ಕು) ಅಡಿಯಲ್ಲಿ ಮೂಲಭೂತ ಹಕ್ಕುಗಳಿಗೆ ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. 2020 ರಲ್ಲಿ, ಭಾರತದ ಸಂಸತ್ತು,’ತೃತೀಯ ಲಿಂಗ’ ಅನ್ನು ಅಧಿಕೃತ ಲಿಂಗ ಎಂದು ಕಾನೂನುಬದ್ಧವಾಗಿ ಗುರುತಿಸಿದೆ.

ತೃತೀಯ ಲಿಂಗಿ ವ್ಯಕ್ತಿಯ ಲಿಂಗ ಗುರುತಿಸುವಿಕೆ

ಲಿಂಗ ಗುರುತಿಸುವಿಕೆ ಎಂದರೇನು?

‘ಲಿಂಗ ಗುರುತಿಸುವಿಕೆ’ ಎನ್ನುವುದು ವ್ಯಕ್ತಿಯು ಆಂತರಿಕವಾಗಿ ತಾನು ಯಾವ ನಿರ್ದಿಷ್ಟ ಲಿಂಗದ ವ್ಯಕ್ತಿ ಎಂದು ಗ್ರಹಿಸಿಕೊಳ್ಳುವುದಾಗಿದೆ.  ಒಬ್ಬ ವ್ಯಕ್ತಿಯು ತನ್ನ ದೇಹದ ಆಂತರಿಕ ಮತ್ತು ವೈಯಕ್ತಿಕ ಅನುಭವ, ದೈಹಿಕ ನೋಟ, ಮಾತು, ನಡವಳಿಕೆ ಇತ್ಯಾದಿಗಳನ್ನು ಅರ್ಥಮಾಡಿಕೊಂಡಾಗ ಈ ಆಯ್ಕೆಯನ್ನು ಮಾಡಲಾಗುತ್ತದೆ. ಒಬ್ಬ ವ್ಯಕ್ತಿಯು ಜನನದ ಸಮಯದಲ್ಲಿ ಅವರಿಗೆ ನಿಗದಿಪಡಿಸಿದ ಲಿಂಗದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳದಿದ್ದರೆ, ಆ ವ್ಯಕ್ತಿಯು ತನ್ನನ್ನು ಮತ್ತೊಂದು ಲಿಂಗದಿಂದ ಗುರುತಿಸಿಕೊಳ್ಳಬಹುದು.

ನಿಮ್ಮ ಲಿಂಗ ಗುರುತನ್ನು ಬದಲಾಯಿಸಲು ವೈದ್ಯಕೀಯ ಆಯ್ಕೆಗಳು ಯಾವುವು?

ನಿಮ್ಮ ಲಿಂಗ ಗುರುತನ್ನು ಗುರುತಿಸುವ, ಸ್ವೀಕರಿಸುವ ಮತ್ತು ವ್ಯಕ್ತಪಡಿಸುವ ಪ್ರಕ್ರಿಯೆಯನ್ನು ಪರಿವರ್ತನೆ ಎಂದು ಕರೆಯಲಾಗುತ್ತದೆ.  ಕೆಳಗಿನ ವೈದ್ಯಕೀಯ ಆಯ್ಕೆಗಳ ಮೂಲಕ ಇದನ್ನು ಸಾಧಿಸಬಹುದು:

  • ಹಾರ್ಮೋನ್ ಚಿಕಿತ್ಸೆ: ಇದು ಔಷಧಿಯ ಒಂದು ರೂಪವಾಗಿದ್ದು, ಇದು ವ್ಯಕ್ತಿಯ ಲೈಂಗಿಕ ಗುಣಲಕ್ಷಣಗಳನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಲಿಂಗ ಉತ್ತೇಜಕ ಚಿಕಿತ್ಸೆ ( ಜೆಂಡರ್ ಅಫರ್ಮೇಟಿವ್ ಥೆರಪಿ GAT): ಇದು ಸ್ವತಃ ಗುರುತಿಸಲಾದ ಲಿಂಗದೊಡನೆ ಹೊಂದಿಕೊಳ್ಳುವಂತೆ

ವ್ಯಕ್ತಿಯ ನೋಟವನ್ನು ಬದಲಿಸುವ ಗುರಿಯನ್ನು ಹೊಂದಿದೆ, ಹಾಗು ಇದು ಮಾನಸಿಕ ಸಮಾಲೋಚನೆಯಿಂದ ಹಿಡಿದು ಲಿಂಗ ಮಾರ್ಪಡುವಿಕೆಗೆ ಶಸ್ತ್ರಚಿಕಿತ್ಸೆಗಳವರೆಗಿನ ಕಾರ್ಯವಿಧಾನಗಳ ರೀತಿಗಳಾಗಿವೆ.  ಉದಾಹರಣೆಗೆ, ರೀಟಾ ಹುಟ್ಟಿನಿಂದಲೇ ಹೆಣ್ಣು ಎಂದು ಗುರುತಿಸಲಾಗಿದೆ, ಆದರೆ ಬೆಳೆಯುತ್ತಿರುವಾಗ, ತಮ್ಮನ್ನು ಪುರುಷ ಎಂದು ಗುರುತಿಸಿಕೊಳ್ಳುತ್ತಾರೆ ಮತ್ತು ಸ್ತನ ತೆಗೆಯುವ ಶಸ್ತ್ರಚಿಕಿತ್ಸೆಯ ಮೂಲಕ ತಮ್ಮ ನೋಟವನ್ನು ಪುರುಷ ಲಿಂಗವಾಗಿಸಲು GAT ಗೆ ಒಳಗಾಗಬಹುದು.

  • ತಿದ್ದುಪಡಿ ಶಸ್ತ್ರಚಿಕಿತ್ಸೆ/ ಲಿಂಗಾಂತರಿ ಶಸ್ತ್ರಚಿಕಿತ್ಸೆ: ಈ ವಿಧಾನಗಳು ಲೈಂಗಿಕ ಗುಣಲಕ್ಷಣಗಳು ಮತ್ತು ಜನನಾಂಗಗಳನ್ನು ಅಸಂಗತವಾಗಿರುವಾಗ, ಅಂದರೆ ಪುರುಷ ಮತ್ತು ಸ್ತ್ರೀ ಜನನಾಂಗಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವಿಲ್ಲದಿದ್ದಾಗ ಅದನ್ನು ಮಾರ್ಪಡಿಸುತ್ತವೆ.  ಉದಾಹರಣೆಗೆ, ನಕುಲ್ ಎಂಬ ಮಗು ಗಂಡು ಮತ್ತು ಹೆಣ್ಣಿನ ಜನನಾಂಗಗಳೆರಡನ್ನೂ ಹೊಂದಿದ್ದು, ಅವನು ತನ್ನ ಲಿಂಗವು ಪುರುಷ ಎಂದು ಸ್ವಯಂ-ಗುರುತಿಸುತ್ತಾನೆ ಮತ್ತು ಭಾವಿಸುತ್ತಾನೆ ಮತ್ತು ಪುರುಷ ಲಿಂಗಕ್ಕೆ ಹೆಚ್ಚು ಹೊಂದಿಕೊಳ್ಳಲು ನಿರ್ಧರಿಸಿ ತಿದ್ದುಪಡಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾನೆ.

 

 

ಒಬ್ಬ ವ್ಯಕ್ತಿಯು ತನ್ನ ಲಿಂಗ ಗುರುತನ್ನು ಆಯ್ಕೆ ಮಾಡಲು ಯಾವುದೇ ದೈಹಿಕ ಬದಲಾವಣೆ/ವೈದ್ಯಕೀಯ ಪ್ರಕ್ರಿಯೆಗೆ ಒಳಗಾಗುವುದು ಕಡ್ಡಾಯವಲ್ಲ.  ಭಾರತದಲ್ಲಿನ ಕಾನೂನುಗಳು ವ್ಯಕ್ತಿಯ ಭಾವನೆಗಳ ಆಧಾರದ ಮೇಲೆ ಅವರ ಲಿಂಗ ಗುರುತನ್ನು ಆಯ್ಕೆ ಮಾಡುವ ದೈಹಿಕ ಹಕ್ಕನ್ನು ಗುರುತಿಸುತ್ತವೆ.  ವ್ಯಕ್ತಿಯ ದೈಹಿಕ ಗುಣಲಕ್ಷಣಗಳು ಅವರು ಆಯ್ಕೆ ಮಾಡಿದ ಲಿಂಗ ಗುರುತಿನ ಮೇಲೆ ಪರಿಣಾಮ ಬೀರುವುದಿಲ್ಲ.

 

 

ಒಬ್ಬ ವ್ಯಕ್ತಿಗೆ ತಮ್ಮ ಲಿಂಗ ಗುರುತನ್ನು ಆಯ್ಕೆ ಮಾಡಲು ಕಾನೂನು ಅನುಮತಿ ನೀಡುತ್ತದೆಯೇ?

ಹೌದು!  ಒಬ್ಬ ವ್ಯಕ್ತಿಗೆ ತನ್ನ ಲಿಂಗ ಗುರುತನ್ನು ಆಯ್ಕೆ ಮಾಡಲು ಕಾನೂನು ಅನುಮತಿ ನೀಡುತ್ತದೆ.ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು.(2014) ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯವು ತೃತೀಯ ಲಿಂಗಿ ಸಮುದಾಯದ ಹಕ್ಕುಗಳನ್ನು “ಮೂರನೇ ಲಿಂಗ” ಎಂದು ಗುರುತಿಸಿದೆ.  ತೃತೀಯಲಿಂಗಿಗಳ ಹಕ್ಕುಗಳ ರಕ್ಷಣೆಗಾಗಿ ಸಮಾಜ ಕಲ್ಯಾಣ ಯೋಜನೆಗಳು ಮತ್ತು ಇತರ ಅಗತ್ಯ ನಿಬಂಧನೆಗಳನ್ನು ರೂಪಿಸಲು ಮತ್ತು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕೇಳಲಾಯಿತು.

ಪ್ರಕರಣದ ಅಧ್ಯಯನ: ಅಂಜಲಿ ಗುರು ಸಂಜನಾ ಜಾನ್ ವಿರುದ್ಧ ಮಹಾರಾಷ್ಟ್ರ ಮತ್ತು ಇತರರು ಪ್ರಕರಣದಲ್ಲಿ.  (2021), ಬಾಂಬೆ ಉಚ್ಚ ನ್ಯಾಯಾಲಯವು ಗ್ರಾಮ ಪಂಚಾಯತ್ ಚುನಾವಣೆಗೆ, ಅರ್ಜಿದಾರರು ತೃತೀಯ ಲಿಂಗಿಯಾಗಿದ್ದು ತನ್ನನ್ನು ಮಹಿಳೆ ಎಂದು ಗುರುತಿಸಿಕೊಂಡರು ಮತ್ತು ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ಆಕೆಯ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯವು ಅರ್ಜಿದಾರರಿಗೆ ತನ್ನ ಲಿಂಗವನ್ನು ಸ್ವಯಂ ಗುರುತಿಸುವ ಹಕ್ಕಿದೆ ಎಂದಿದೆ.

ಗಮನಿಸಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೃತೀಯಲಿಂಗಿಗಳನ್ನು “ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗದ ನಾಗರಿಕರು” ಎಂದು ಗುರುತಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು, ಅವರು ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಮೀಸಲಾತಿಗೆ ಅರ್ಹರಾಗಿದ್ದಾರೆ.  ಎಲ್ಲಾ ದಾಖಲೆಗಳಲ್ಲಿ “ಮೂರನೇ ಲಿಂಗ” ದ ಕಾನೂನು ಮಾನ್ಯತೆಗಾಗಿ ನಿಬಂಧನೆಗಳನ್ನು ಮಾಡಲು ಸರ್ಕಾರವು ಕರ್ತವ್ಯವನ್ನು ಹೊಂದಿದೆ.

 

ನೀವು ಅಧಿಕೃತವಾಗಿ ವ್ಯಕ್ತಿಯ ಲಿಂಗ ಗುರುತನ್ನು ದಾಖಲಿಸಬಹುದೇ?

ತೃತೀಯ ಲಿಂಗಿ ವ್ಯಕ್ತಿಗಳ ಕಾನೂನು ನಿಮ್ಮ ಲಿಂಗವನ್ನು ತೃತೀಯ ಲಿಂಗಿ ವ್ಯಕ್ತಿಯಾಗಿ ಅಧಿಕೃತವಾಗಿ ಹೇಗೆ ದಾಖಲಿಸಬಹುದು ಎಂಬುದನ್ನು ವಿವರಿಸುತ್ತದೆ:

ಹಂತ 1– ತೃತೀಯ ಲಿಂಗಿ ವ್ಯಕ್ತಿಯಾಗಿ ಗುರುತಿನ ಪ್ರಮಾಣಪತ್ರವನ್ನು ನೀಡಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸಿ.  ಅಪ್ರಾಪ್ತ ವಯಸ್ಕರಿಗೆ, ಅರ್ಜಿಯನ್ನು ಮಗುವಿನ ಪೋಷಕರು ಅಥವಾ ಕಾನೂನು ಪಾಲಕರು ಮಾಡಬೇಕು.  ಪೋಷಕರು/ಕಾನೂನು ಪಾಲಕರು ಅರ್ಜಿಯನ್ನು ಸಲ್ಲಿಸದಿದ್ದರೆ, ವ್ಯಕ್ತಿಯು ಪ್ರೌಢಾವಸ್ತೆಗೆ ಬಂದ ನಂತರ (ಅಂದರೆ, ಅವರು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್

ಸಿನವರಾದಾಗ ) ಅರ್ಜಿ ಸಲ್ಲಿಸಬಹುದು.  ಪ್ರತಿ ಜಿಲ್ಲೆಗೆ ಕಾರ್ಯವಿಧಾನವು ವಿಭಿನ್ನವಾಗಿರಬಹುದು, ಆದ್ದರಿಂದ ನಿರ್ದಿಷ್ಟ ಅವಶ್ಯಕತೆಗಳಿಗಾಗಿ ನಿಮ್ಮ ಜಿಲ್ಲೆಯ ನಡಾವಳಿಯನ್ನು ತಿಳಿಯಲು ಸಲಹೆ ನೀಡಲಾಗುತ್ತದೆ.

ಹಂತ 2– ಜಿಲ್ಲಾ ಮ್ಯಾಜಿಸ್ಟ್ರೇಟ್ ಸಲ್ಲಿಸಿದ ಅರ್ಜಿಯ ಪ್ರಕಾರ ಗುರುತಿನ ಪ್ರಮಾಣಪತ್ರವನ್ನು ನೀಡುತ್ತಾರೆ.

ಹಂತ 3- ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಿಂದ ನಿರ್ವಹಿಸಲ್ಪಡುವ ಅಧಿಕೃತ ದಾಖಲೆಗಳಲ್ಲಿ ತೃತೀಯ ಲಿಂಗಿ ವ್ಯಕ್ತಿಯ ಲಿಂಗವನ್ನು ದಾಖಲಿಸಲಾಗುತ್ತದೆ.

ಹಂತ 4– ಗುರುತಿನ ಚೀಟಿಯನ್ನು ನೀಡಿದ ನಂತರ ವೈದ್ಯಕೀಯ ಹಸ್ತಕ್ಷೇಪ ಅಥವಾ ಅವರ ಲಿಂಗವನ್ನು ದೃಢೀಕರಿಸುವ ಯಾವುದೇ ರೀತಿಯ ವಿಧಾನಕ್ಕೆ ಒಳಗಾಗಿದ್ದರೆ, ಹೊಸ ಲಿಂಗವನ್ನು ತೃತೀಯ ಲಿಂಗಿ ವ್ಯಕ್ತಿಯು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ವೈದ್ಯಕೀಯ ಅಧೀಕ್ಷಕರು ಅಥವಾ ಮುಖ್ಯ ವೈದ್ಯಕೀಯ ಅಧಿಕಾರಿಯಿಂದ ಪಡೆದ ಪ್ರಮಾಣ ಪತ್ರದೊಂದಿಗೆ ತಿಳಿಸ ಬೇಕಾಗುತ್ತದೆ.

ಹಂತ 5– ಜಿಲ್ಲಾ ಮ್ಯಾಜಿಸ್ಟ್ರೇಟ್ ಪರಿಷ್ಕೃತ ಪ್ರಮಾಣಪತ್ರವನ್ನು ನೀಡುತ್ತಾರೆ.

ಅರ್ಜಿ ನಮೂನೆಯ ಉದಾಹರಣೆ ಮತ್ತು ಶಪಥ ಪತ್ರವನ್ನು ಕೆಳಗಿನ ಮಾದರಿ ನಮೂನೆಗಳ ವಿಭಾಗದಲ್ಲಿ ನೀಡಲಾಗಿದೆ.

ಗುರುತಿನ ಚೀಟಿಯನ್ನು ನೀಡಲು ಅಗತ್ಯವಿರುವ ದಾಖಲೆಗಳು ಯಾವುವು?

ನಿಮಗೆ ನೀಡಲಾದ ಗುರುತಿನ ಚೀಟಿಯನ್ನು ಪಡೆಯಲು ನೀವು ಬಳಸಬಹುದಾದ ಕೆಲವು ದಾಖಲೆಗಳನ್ನು ಕೆಳಗೆ ನೀಡಲಾಗಿದೆ:

ಕ್ರಮ ಸಂಖ್ಯೆ        ಅಧಿಕೃತ ದಾಖಲೆಯ ಹೆಸರು
1. ಜನನ ಪ್ರಮಾಣಪತ್ರ
2. ಜಾತಿ/ಪಂಗಡದ ಪ್ರಮಾಣಪತ್ರ
3. 10 ನೇ ತರಗತಿ (ಮಾಧ್ಯಮಿಕ ಶಾಲೆ) ಪ್ರಮಾಣಪತ್ರ ಅಥವಾ 12 ನೇ ತರಗತಿ (ಹಿರಿಯ ಮಾಧ್ಯಮಿಕ ಶಾಲೆ) ಪ್ರಮಾಣಪತ್ರ ಅಥವಾ SSLC
4. ಚುನಾವಣೆ (ಫೋಟೋ) ಗುರುತಿನ ಚೀಟಿ
5. ಆಧಾರ್ ಕಾರ್ಡ್
6. ಶಾಶ್ವತ ಖಾತೆ ಸಂಖ್ಯೆ (PAN)
7. ಚಾಲನಾ ಪರವಾನಗಿ
8. ಬಿಪಿಎಲ್ ಪಡಿತರ ಚೀಟಿ
9. ಭಾವಚಿತ್ರದೊಂದಿಗೆ ಪೋಸ್ಟ್ ಆಫೀಸ್ ಬ್ಯಾಂಕ್/ಬ್ಯಾಂಕ್ ಪಾಸ್‌ಬುಕ್
10. ಪಾಸ್ಪೋರ್ಟ್
11. ಕಿಸಾನ್ ಪಾಸ್ ಬುಕ್
12. ಮದುವೆ ಪ್ರಮಾಣಪತ್ರ
13. ವಿದ್ಯುತ್/ನೀರು/ಅನಿಲ ಸಂಪರ್ಕದ ಬಿಲ್

 

ಗಮನಿಸಿ: ಇದು ದಾಖಲೆಗಳ ತಾತ್ಕಾಲಿಕ ಪಟ್ಟಿಯಾಗಿದೆ.  ನೀವು ಇವುಗಳನ್ನು ಮರುದೃಢೀಕರಿಸಬಹುದು ಮತ್ತು ನಿಮ್ಮ ಹತ್ತಿರದ ಸ್ಥಳೀಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಹೆಚ್ಚಿನ ಆಯ್ಕೆಗಳನ್ನು ಕೇಳಬಹುದು.

ಒಬ್ಬ ವ್ಯಕ್ತಿಯು ತನ್ನ ಲಿಂಗ ಗುರುತನ್ನು ತೃತೀಯ ಲಿಂಗದ ವ್ಯಕ್ತಿ ಎಂದು ಅಧಿಕೃತವಾಗಿ ದಾಖಲಿಸಿದ ನಂತರ ಏನಾಗುತ್ತದೆ?

ಒಬ್ಬ ವ್ಯಕ್ತಿಯು ತನ್ನ ಲಿಂಗ ಗುರುತನ್ನು ಅಧಿಕೃತವಾಗಿ ದಾಖಲಿಸಿದ ನಂತರ, ಅವರು ತೃತೀಯಲಿಂಗದ ವ್ಯಕ್ತಿಯಾಗಿ ಅಧಿಕೃತ ಗುರುತಿನ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.  ಪ್ರಮಾಣಪತ್ರವು ತೃತೀಯ ಲಿಂಗದ ವ್ಯಕ್ತಿಯಾದ ಅವರ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.  ಹೇಳಲಾದ ವ್ಯಕ್ತಿಯ ಲಿಂಗವನ್ನು ಎಲ್ಲಾ ಅಧಿಕೃತ ದಾಖಲೆಗಳಲ್ಲಿ ತೃತೀಯಲಿಂಗಿ’ ಅಥವಾ ‘ಥರ್ಡ್ ಜೆಂಡರ್’ ಎಂದು ದಾಖಲಿಸಲಾಗುತ್ತದೆ.

ಪ್ರಕರಣದ ಅಧ್ಯಯನ: ಕೇರಳದ ತೃತೀಯ ಲಿಂಗಿ ಸಮುದಾಯಕ್ಕೆ ಆಹಾರ ಪಡಿತರ ವಿತರಣೆ, ಔಷಧಗಳು ಮತ್ತು ವೈದ್ಯಕೀಯ ಚಿಕಿತ್ಸೆಗೆ ಪ್ರವೇಶಕ್ಕಾಗಿ ರಾಜ್ಯ ಸರ್ಕಾರ ಕ್ರಮಗಳನ್ನು ಕೋರಿ ರಿಟ್ ಅರ್ಜಿ ಸಲ್ಲಿಸಲಾಯಿತು.  ಕಬೀರ್ ಸಿ ಅಲಿಯಾಸ್ ಅನೀರಾ ಕಬೀರ್ ವಿರುದ್ಧ ಕೇರಳ ರಾಜ್ಯ (2020) ಪ್ರಕರಣದಲ್ಲಿ ನ್ಯಾಯಾಲಯವು ಲಿಂಗ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ತೃತೀಯ ಲಿಂಗಿ ವ್ಯಕ್ತಿಗಳಿಗೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ.

ತೃತೀಯ ಲಿಂಗಿ ವ್ಯಕ್ತಿಗಳನ್ನು ರಕ್ಷಿಸುವ ಕಾನೂನುಗಳು

ಭಾರತೀಯ ಸಂವಿಧಾನವು ತೃತೀಯ ಲಿಂಗಿ ವ್ಯಕ್ತಿಗಳನ್ನು ರಕ್ಷಿಸುತ್ತದೆಯೇ?

ಹೌದು.  ತೃತೀಯ ಲಿಂಗಿಯರ ಹಕ್ಕುಗಳನ್ನು ರಕ್ಷಿಸುವ ಸಂವಿಧಾನದ ಕೆಲವು ಪ್ರಮುಖ ನಿಬಂಧನೆಗಳು ಇಂತಿವೆ:

  • ಸಮಾನತೆಯ ಹಕ್ಕು (ಲೇಖನ 14) : ಕಾನೂನಿನ ಮುಂದೆ ಯಾವುದೇ “ವ್ಯಕ್ತಿಯ” ಸಮಾನತೆ ಅಥವಾ ಕಾನೂನಿನ ಸಮಾನ ರಕ್ಷಣೆಯನ್ನು ಯಾರೂ ನಿರಾಕರಿಸುವಂತಿಲ್ಲ.  “ವ್ಯಕ್ತಿ” ಎಂಬ ಪದವನ್ನು ಬಳಸುವುದರಿಂದ ಲಿಂಗ ಅಥವಾ ಲಿಂಗ ಗುರುತಿನ ಆಧಾರದ ಮೇಲೆ ಯಾವುದೇ ತಾರತಮ್ಯವನ್ನು ಮಾಡಲಾಗುವುದಿಲ್ಲ ಎಂದು ಹೇಳುತ್ತದೆ.

ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಉದ್ಯೋಗದ ಸಮಯದಲ್ಲಿ ‘ತೃತೀಯ ಲಿಂಗಿ ವ್ಯಕ್ತಿಗಳನ್ನು’ ಪಕ್ಷಪಾತದಿಂದ ನೆಡೆಸಿಕೊಳ್ಳುವಂತಿಲ್ಲ.  ಅವರು ಸಮಾನ ಆರೋಗ್ಯ ಸೇವೆಗಳ ಹಕ್ಕನ್ನು ಹೊಂದಿದ್ದಾರೆ ಮತ್ತು ಸಾರ್ವಜನಿಕ ಆಸ್ತಿಯನ್ನು ಬಳಸುವ ಹಕ್ಕನ್ನು ಹಾಗು ದೇಶದಲ್ಲಿ ಮುಕ್ತವಾಗಿ ಚಲಿಸುವ ಹಕ್ಕನ್ನು ಕೂಡಾ ಹೊಂದಿದ್ದಾರೆ.

  • ಲಿಂಗ ಸೇರಿದಂತೆ ವಿವಿಧ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವುದು (ಆರ್ಟಿಕಲ್ 15) : ಜನಾಂಗ, ಧರ್ಮ, ಜಾತಿ ಅಥವಾ ಲಿಂಗ ಇವುಗಳಲ್ಲಿ ಯಾವುದಾದರೂ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯವನ್ನು ನಿಷೇಧಿಸುತ್ತದೆ.  ತೃತೀಯ ಲಿಂಗಿ ವ್ಯಕ್ತಿಗಳ ತಾರತಮ್ಯ ಅಥವಾ ಪಕ್ಷಪಾತದ ನಡವಳಿಕೆ ಅವರ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಇದು ಸೂಚಿಸುತ್ತದೆ.  Mx ಆಲಿಯಾ SK ವಿರುದ್ಧ. ದಿ ಸ್ಟೇಟ್ ಆಫ್ ವೆಸ್ಟ್ ಬೆಂಗಾಲ್ ಮತ್ತು ಇತರರು ಪ್ರಕರಣದಲ್ಲಿ (2019), ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಪಡೆಯಲು ತೃತೀಯ ಲಿಂಗಿ ವ್ಯಕ್ತಿಗಳಿಗೆ ಹಕ್ಕಿದೆ ಎಂದು ನ್ಯಾಯಾಲಯ ಹೇಳಿದೆ.  ಈ ತೀರ್ಪು ಮುಖ್ಯವಾದುದು ಏಕೆಂದರೆ ಸಾರ್ವಜನಿಕ ವಿಶ್ವವಿದ್ಯಾಲಯದ ಅರ್ಜಿಗಳು ಮತ್ತು ಪ್ರವೇಶ ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿಲ್ಲದಿದ್ದರೂ ಅಂಥಹಾ ಪ್ರಕ್ರಿಯೆಯಲ್ಲಿ ತೃತೀಯ ಲಿಂಗಿ ವ್ಯಕ್ತಿಗಳನ್ನು ಸೇರಿಸಲು ವಿಶೇಷ ಸವಲಭ್ಯ ಮತ್ತು ಹೊಂದಾಣಿಕೆಗಳನ್ನು ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ನ್ಯಾಯಾಲಯಗಳ ಪಾತ್ರವನ್ನು ಇದು ಸೂಚಿಸುತ್ತದೆ.
  • ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ (ಆರ್ಟಿಕಲ್ 19) : ಈ ಹಕ್ಕು ಪ್ರತಿಯೊಬ್ಬ ನಾಗರಿಕನಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ.  ಇದು ನಿಮ್ಮ ಲಿಂಗ ಗುರುತನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಒಳಗೊಂಡಿದೆ.
  • ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು (ಆರ್ಟಿಕಲ್ 21): ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯೊಂದಿಗೆ ವ್ಯವಹರಿಸುವ 21 ನೇ ವಿಧಿಯು, ಕಾನೂನಿನ ಕಾರ್ಯವಿಧಾನದ ಪ್ರಕಾರ ಹೊರತುಪಡಿಸಿ, ಯಾವುದೇ ವ್ಯಕ್ತಿ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು ಎಂದು ಹೇಳುತ್ತದೆ.  ತೃತಿಯ ಲಿಂಗಿ ವ್ಯಕ್ತಿ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿದೆ ಎಂದು ಈ ಹಕ್ಕು ಹೇಳುತ್ತದೆ.  ಭಾರತದ ಪ್ರಜೆಯಾಗಿರುವ ತೃತೀಯ ಲಿಂಗಿ ವ್ಯಕ್ತಿ ತಮ್ಮ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಸಂಪೂರ್ಣ ಹಕ್ಕನ್ನು ಹೊಂದಿರತಕ್ಕದ್ದು.

ನಂಗೈ ವಿರುದ್ಧ ಪೊಲೀಸ್ ಸೂಪರಿಂಟೆಂಡೆಂಟ್ (2014) ಪ್ರಕರಣದಲ್ಲಿ, ಲಿಂಗದ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ವ್ಯಕ್ತಿಯನ್ನು ಒತ್ತಾಯಿಸುವುದು ಆರ್ಟಿಕಲ್ 21 ಅನ್ನು ಉಲ್ಲಂಘಿಸುತ್ತದೆ ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ಗುರುತಿಸಿದೆ. ಇದು ಅವರ ಸ್ವಂತ ಲಿಂಗವನ್ನು ಸ್ವಯಂ ಗುರುತಿಸುವ ವ್ಯಕ್ತಿಯ ಹಕ್ಕನ್ನು ಎತ್ತಿಹಿಡಿದಿದೆ.

ತೃತೀಯ ಲಿಂಗಿ ವ್ಯಕ್ತಿಗಳಿಗೆ ಯಾವುದೇ ಮೀಸಲಾತಿ ಇದೆಯೇ?

ಹೌದು, ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ನಿಯಮಗಳು, 2020 ರ ಅಡಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಂಬ ಮೀಸಲಾತಿಯ ಉದ್ದೇಶಗಳಿಗಾಗಿ ಅವರನ್ನು ‘ಇತರ ಹಿಂದುಳಿದ ವರ್ಗಗಳು’ ಎಂದು ವರ್ಗೀಕರಿಸಬಹುದು.

ಭಾರತದಲ್ಲಿ ತೃತೀಯ ಲಿಂಗಿ ವ್ಯಕ್ತಿಯ ಹಕ್ಕುಗಳನ್ನು ಇತರ ಯಾವ ಕಾನೂನುಗಳು ರಕ್ಷಿಸುತ್ತವೆ?

  • ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ, 2019 ಮತ್ತು ನಿಯಮಗಳು: ಈ ಕಾಯಿದೆಯನ್ನು 2020 ರಲ್ಲಿ ಅಂಗೀಕರಿಸಲಾಗಿದೆ ಮತ್ತು ಇದು ತೃತೀಯ ಲಿಂಗಿ ಜನರಿಗೆ ಹಲವಾರು ಹಕ್ಕುಗಳನ್ನು ಒದಗಿಸುತ್ತದೆ. ನಿಯಮಗಳು ಕಾಯಿದೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ.
  • SC/ST (ದೌರ್ಜನ್ಯ ತಡೆ) ಕಾಯಿದೆ, 1989: ಒಬ್ಬ ವ್ಯಕ್ತಿಯು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದವರಾಗಿದ್ದರೆ, ಈ ಕಾನೂನು ಆ ವ್ಯಕ್ತಿಯನ್ನು ಯಾವುದೇ ರೀತಿಯ ಜಾತಿ/ಪಂಗಡ ಆಧಾರಿತ ತಾರತಮ್ಯದಿಂದ ರಕ್ಷಿಸುತ್ತದೆ.

Mx. ಸುಮನಾ ಪ್ರಮಾಣಿಕ್ ವಿರುದ್ಧ  ಯೂನಿಯನ್ ಆಫ್ ಇಂಡಿಯಾ (2020) ಪ್ರಕರಣದಲ್ಲಿ, ನ್ಯಾಯಾಲಯವು  ತೃತೀಯ ಲಿಂಗಿ ಸಮುದಾಯಕ್ಕೆ ಮೀಸಲಾತಿಗಳ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿತು, ಜೊತೆಯಲ್ಲಿ ಅವರಿಗೆ ಪರೀಕ್ಷೆಗಳಲ್ಲಿ ವಯಸ್ಸಿನ ಸಡಿಲಿಕೆಗಳು ಮತ್ತು ಶುಲ್ಕದ ರಿಯಾಯಿತಿಗಳು ಸಾರಿವೆ. ಮೀಸಲಾತಿಗಾಗಿ ಈ ನಿಬಂಧನೆಗಳನ್ನು ಎಲ್ಲೆಲ್ಲಿ ಮಾಡಲಾಗಿದೆಯೋ, ಸರ್ಕಾರವು ಅದನ್ನು ಜಾರಿಗೊಳಿಸಬೇಕು.

  • NALSA ತೀರ್ಪು: ಮಹತ್ವದ ತೀರ್ಪಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು. 2014 ರಲ್ಲಿ, ಸುಪ್ರೀಂ ಕೋರ್ಟ್ ತೃತೀಯ ಲಿಂಗಿ ಸಮುದಾಯದ ಹಕ್ಕುಗಳನ್ನು “ಮೂರನೇ ಲಿಂಗ” ಎಂದು ಗುರುತಿಸಿತು. ಈ ಪ್ರಕರಣವು ತಮ್ಮ ಲಿಂಗ ಗುರುತನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿರುವ ತೃತೀಯ ಲಿಂಗಿ ವ್ಯಕ್ತಿಗಳಿಗೆ, ತಮ್ಮ ಜೀವನವನ್ನು ಘನತೆಯಿಂದ ಬದುಕಲು ದಾರಿ ಮಾಡಿಕೊಟ್ಟಿತು.

ಜಿ. ನಾಗಲಕ್ಷ್ಮಿ ವಿರುದ್ಧ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (2014) ಪ್ರಕರಣದಲ್ಲಿ, ಮದ್ರಾಸ್ ಉಚ್ಚ ನ್ಯಾಯಾಲಯ ಯಾವುದೇ ವಿಶೇಷ ಕಾನೂನಿನ ಅನುಪಸ್ಥಿತಿಯಲ್ಲಿ,ಯಾವುದೇ ವ್ಯಕ್ತಿಗೆ ತಮ್ಮ ಲೈಂಗಿಕ ಅಥವಾ ಲಿಂಗ ಗುರುತನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ ಎಂದಿದೆ ಮತ್ತು ಅರ್ಜಿದಾರರ ಸ್ವಂತ ಲಿಂಗವನ್ನು ಆಯ್ಕೆ ಮಾಡುವ ಹಕ್ಕನ್ನು ಎತ್ತಿಹಿಡಿಯುತ್ತದೆ.

  • ಪುಟ್ಟಸ್ವಾಮಿ ಪ್ರಕರಣ: ಗೌಪ್ಯತೆಯ ಹಕ್ಕಿಗೆ ಸಂಬಂಧಿಸಿದಂತೆ ಪುಟ್ಟಸ್ವಾಮಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ (2017) ಎಂಬ ಮಹತ್ವದ ತೀರ್ಪಿನಲ್ಲಿ, ಜೀವಿಸುವ ಹಕ್ಕು, ಸಮಾನತೆ ಮತ್ತು ಮೂಲಭೂತ ಸ್ವಾತಂತ್ರ್ಯಗಳಲ್ಲಿ ಅಂತರ್ಗತವಾಗಿರುವ ಖಾಸಗಿತನದ ಸಾಂವಿಧಾನಿಕ ಹಕ್ಕು ಇದೆ ಎಂದು ಸರ್ವೋಚ್ಚ ನ್ಯಾಯಾಲಯವು ಗಮನಿಸಿದೆ.  ಇದು ಒಬ್ಬರ ಆಯ್ಕೆಯ ವಯಕ್ತಿಕ ಸಂಬಂಧಗಳನ್ನು ಹೊಂದುವ ಹಕ್ಕನ್ನು ಮತ್ತು ಲೈಂಗಿಕ ದೃಷ್ಟಿಕೋನ ಮತ್ತು ಲಿಂಗ ಗುರುತಿನ ಹಕ್ಕನ್ನು ಒಳಗೊಂಡಿದೆ.
  • IPC ಯ ಸೆಕ್ಷನ್ 377 ರ ನಿರಪರಾಧೀಕರಣ: ನವತೇಜ್ ಸಿಂಗ್ ಜೋಹರ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ(2016) ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಭಾರತದಲ್ಲಿ LGBTQ+ ಜನರು ಭಾರತದ ಸಂವಿಧಾನದಿಂದ ರಕ್ಷಿಸಲ್ಪಟ್ಟ ಸ್ವಾತಂತ್ರ್ಯಗಳನ್ನು ಒಳಗೊಂಡಂತೆ ಎಲ್ಲಾ ಸಾಂವಿಧಾನಿಕ ಹಕ್ಕುಗಳಿಗೆ ಅರ್ಹರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
  • ಭಾರತೀಯ ದಂಡ ಸಂಹಿತೆ, 1860: ತೃತೀಯ ಲಿಂಗಿ ವ್ಯಕ್ತಿ ಮಾಡಿದ ಯಾವುದೇ ಅಪರಾಧವನ್ನು ಭಾರತೀಯ ದಂಡ ಸಂಹಿತೆಯ ಅಥವಾ ಹೊಸ ಕ್ರಿಮಿನಲ್ ಕಾನೂನಿನಡಿ ಭಾರತೀಯ ನ್ಯಾಯ ಸಂಹಿತೆಯ ನಿಬಂಧನೆಗಳ ಪ್ರಕಾರ ಶಿಕ್ಷಿಸಲಾಗುತ್ತದೆ.  ಶ್ರೀಮತಿ X ವಿರುದ್ಧ ಉತ್ತರಾಖಂಡ್ ರಾಜ್ಯ (2019) ಪ್ರಕರಣವು NALSA ತೀರ್ಪನ್ನು ದೃಢೀಕರಿಸಿದೆ ಮತ್ತು ಒಬ್ಬರ ಲಿಂಗವನ್ನು ಸ್ವಯಂ-ಗುರುತಿಸುವಿಕೆಯ ಹಕ್ಕನ್ನು ನಿರಾಕರಿಸುವುದು ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ನಿರಾಕರಿಸುತ್ತದೆ ಎಂದು ಹೇಳಿದೆ.  ಅಪರಾಧ ಕಾನೂನಿನ ಸಂದರ್ಭದಲ್ಲಿಯೂ ಸಹ ವ್ಯಕ್ತಿಯ “ಮನಸ್ಸಿನ” ಆಧಾರದ ಮೇಲೆ ಸ್ವಯಂ-ನಿರ್ಣಯದ ಹಕ್ಕನ್ನು ದೃಢಪಡಿಸಿದ ಮೊದಲ ಪ್ರಕರಣಗಳಲ್ಲಿ ಒಂದಾಗಿರುವುದರಿಂದ ಇದು ವಿಶೇಷವಾಗಿ ಗಮನಾರ್ಹವಾಗಿದೆ.

ಅನೇಕ ಜನರು ತಮ್ಮ ಲೈಂಗಿಕ ದೃಷ್ಟಿಕೋನ ಅಥವಾ ಗುರುತಿನ ಕಾರಣದಿಂದಾಗಿ ದೈಹಿಕ, ಲೈಂಗಿಕ, ಮಾನಸಿಕ ಅಥವಾ ಭಾವನಾತ್ಮಕ ಹಿಂಸೆಯಂತಹ ವಿವಿಧ ರೂಪಗಳಲ್ಲಿ ಹಿಂಸೆಯನ್ನು ಎದುರಿಸುತ್ತಾರೆ.  ಈ ಹಿಂಸಾಚಾರವನ್ನು ಗುರುತಿಸುವುದು ಮತ್ತು ಸಹಾಯ ಕೋರುವುದು ಅಥವಾ ಹಿಂಸಾಚಾರವನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ.

  • ದಂಡ ಪ್ರಕ್ರಿಯಾ ಸಂಹಿತೆ, 1973(ಅಥವಾ ಹೊಸ ಕ್ರಿಮಿನಲ್ ಕಾನೂನಿನಡಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ,2023): ತೃತೀಯ ಲಿಂಗಿ ವ್ಯಕ್ತಿಯೊಬ್ಬರು ಬಂಧನಗಳು, ಜಾಮೀನು, ಸಮನ್ಸ್, ತನಿಖೆ ಇತ್ಯಾದಿಗಳ ಅದೇ ಅಪರಾಧ ಕಾರ್ಯವಿಧಾನದ ಕಾನೂನಿಗೆ ಒಳಪಟ್ಟಿರುತ್ತಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗವು ಭಾರತದ ವಾರ್ಷಿಕ ಜೈಲು ಅಂಕಿಅಂಶಗಳ  ವರದಿಯನ್ನು ಪ್ರಕಟಿಸುತ್ತದೆ, ಇದು ಕೈದಿಗಳ ಸಂಯೋಜನೆಯನ್ನು ಒಳಗೊಂಡಿದೆ.  ಕರಣ್ ತ್ರಿಪಾಠಿ ವಿರುದ್ಧ NSRB, DWRP (ಕ್ರಿಮಿನಲ್) ನಂ. 9596 ರ (2020), ದೆಹಲಿ ಉಚ್ಚ ನ್ಯಾಯಾಲಯ ಈಗ NSRB ಯು PSI-2020 ರಿಂದ ಕೈದಿಗಳ ಲಿಂಗ ವರ್ಗೀಕರಣದಲ್ಲಿ ತೃತೀಯ ಲಿಂಗಿ ಅನ್ನು ಸೇರಿಸಲು ಉದ್ದೇಶಿಸಿದೆ ಎಂದು ಹೇಳಿದೆ.

ತೃತೀಯ ಲಿಂಗಿ ವ್ಯಕ್ತಿಗಳ ಹಕ್ಕುಗಳ ಉಲ್ಲಂಘನೆಯಾದರೆ ಏನು ಮಾಡಬಹುದು?

ಕುಂದುಕೊರತೆಗಳನ್ನು ಪರಿಹರಿಸಲು ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ, 2019 ರ ಅಡಿಯಲ್ಲಿ ತೃತೀಯ ಲಿಂಗಿ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಮಂಡಳಿಯನ್ನು ಸ್ಥಾಪಿಸಲಾಗಿದೆ.

ಇದಲ್ಲದೆ, 32 ಅಥವಾ 226 ನೇ ವಿಧಿಯ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಅಥವಾ ಉಚ್ಚ ನ್ಯಾಯಾಲಯಗಳನ್ನು ಸಂಪರ್ಕಿಸುವ ಮೂಲಕ ತೃತೀಯ ಲಿಂಗಿ ವ್ಯಕ್ತಿಗಳ ಭಾಗ III ಹಕ್ಕುಗಳ ಉಲ್ಲಂಘನೆಯನ್ನು ನಿವಾರಿಸಬಹುದು. ಜೊತೆಗೆ, ವಿವಿಧ ಕಾನೂನುಗಳ ಅಡಿಯಲ್ಲಿ ಖಾತರಿಪಡಿಸಲಾದ ಇತರ ಹಕ್ಕುಗಳನ್ನು ಆರ್ಟಿಕಲ್ 226 ರ ಮೂಲಕ ರಕ್ಷಿಸಲಾಗಿದೆ.

ಇದಲ್ಲದೆ, ‘ತೃತೀಯ ಲಿಂಗಿ ವ್ಯಕ್ತಿಗಳ’ ಹಕ್ಕುಗಳ ಉಲ್ಲಂಘನೆಯು ಮಾನವ ಹಕ್ಕುಗಳ ದುರುಪಯೋಗವಾಗುತ್ತದೆ.ಸಂತ್ರಸ್ತರು ರಾಜ್ಯ ಮತ್ತು ರಾಷ್ಟ್ರೀಯ ಮಾನವ ಹಕ್ಕು ಆಯೋಗಗಳನ್ನು ಸಂಪರ್ಕಿಸಬಹುದು.

ತೃತೀಯ ಲಿಂಗಿ ವ್ಯಕ್ತಿಗಳ ವಿರುದ್ಧ ತಾರತಮ್ಯದ ದೂರುಗಳನ್ನು ಸಲ್ಲಿಸುವ ವಿಧಾನ ಯಾವುದು?

ಸಾರ್ವಜನಿಕ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದ ಅವಧಿಯಲ್ಲಿ ತಾರತಮ್ಯವನ್ನು ಎದುರಿಸುತ್ತಿರುವವರು, 2019ರ ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ, 2019[1] ಅಡಿಯಲ್ಲಿ ಸ್ಥಾಪಿಸಲಾದ ಗೊತ್ತುಪಡಿಸಿದ ದೂರು ಅಧಿಕಾರಿಯನ್ನು ಸಂಪರ್ಕಿಸಿ.

ನ್ಯಾಷನಲ್ ಟ್ರಾನ್ಸಜಂಡರ್ ಕೌನ್ಸಿಲ್ (ರಾಷ್ಟ್ರೀಯ ತೃತೀಯ ಲಿಂಗಿ ಪರಿಷತ್ತುಗೆ ) ದೂರು ಸಲ್ಲಿಸಲು, ರಾಷ್ಟ್ರೀಯ ತೃತೀಯ ಲಿಂಗಿ ವ್ಯಕ್ತಿಗಳ ಪೋರ್ಟಲ್‌ ನಲ್ಲಿ ಆನ್‌ಲೈನ್ ಖಾತೆಯನ್ನು ರಚಿಸಿ (https://transgender.dosje.gov.in/).  ಯಶಸ್ವಿ ನೋಂದಣಿಯಲ್ಲಿ, ನಿಮ್ಮ ಡ್ಯಾಶ್‌ ಬೋರ್ಡ್‌ನಲ್ಲಿರುವ ‘ಕುಂದುಕೊರತೆ ಟ್ಯಾಬ್’ ಮೇಲೆ ಕ್ಲಿಕ್ ಮಾಡಿ.  ಅದಕ್ಕಾಗಿ ವಿವರವಾದ ಮಾರ್ಗಸೂಚಿಗಳನ್ನು ಇಲ್ಲಿ ಕಾಣಬಹುದು – (https://transgender.dosje.gov.in/docs/Manual.pdf)

 ನಾನು ನೇರವಾಗಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದರೆ, ನಾನು ಕಾನೂನು ನೆರವನ್ನು ಹೇಗೆ ಪಡೆಯಬಹುದು?

ಕಾನೂನು ನೆರವು ಪಡೆಯಲು ನಿಮ್ಮ ಹತ್ತಿರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ನೀವು ಸಂಪರ್ಕಿಸಬಹುದು.  ನಿಮ್ಮ ವಾರ್ಷಿಕ ಆದಾಯವು ಪ್ರತಿ ರಾಜ್ಯಕ್ಕೆ ಸೂಚಿಸಲಾದ ಗರಿಷ್ಠ ಮಿತಿಗಿಂತ ಕಡಿಮೆಯಿದ್ದರೆ, ನೀವು ಈ ಸೇವೆಗಳನ್ನು ಉಚಿತವಾಗಿ ಪಡೆಯಬಹುದು.

ತೃತೀಯ ಲಿಂಗಿ ಕಾನೂನಿನ ಅಡಿಯಲ್ಲಿ ಪ್ರಾಧಿಕಾರಗಳು

ತೃತೀಯ ಲಿಂಗಿ ವ್ಯಕ್ತಿಗಳ ರಾಷ್ಟ್ರೀಯ ಮಂಡಳಿ (NCTP) ಎಂದರೇನು?

ತೃತೀಯ ಲಿಂಗಿ ವ್ಯಕ್ತಿಗಳ ರಾಷ್ಟ್ರೀಯ ಮಂಡಳಿಯು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ 21 ಆಗಸ್ಟ್ 2020 ರಂದು ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾಗಿದೆ.  ಇದು ತೃತೀಯ ಲಿಂಗಿ, ಇಂಟರ್ಸೆಕ್ಸ್ ವ್ಯಕ್ತಿಗಳು ಮತ್ತು ಡೈವರ್ಸ್ ವ್ಯಕ್ತಿಗಳು GIESC (ಲಿಂಗ ಗುರುತಿಸುವಿಕೆ/ಅಭಿವ್ಯಕ್ತಿ ಮತ್ತು ಲಿಂಗ ಗುಣಲಕ್ಷಣಗಳು) ಗುರುತುಗಳನ್ನು ಹೊಂದಿರುವ ಜನರ ಮೇಲೆ ಪರಿಣಾಮ ಬೀರುವ ಎಲ್ಲಾ ನೀತಿ ವಿಷಯಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡುತ್ತದೆ. ಕೌನ್ಸಿಲ್ ಒಳಗೊಂಡಿದೆ-

  • ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕೇಂದ್ರ ಉಸ್ತುವಾರಿ ಸಚಿವರು, ಅಧ್ಯಕ್ಷರು, ಪದನಿಮಿತ್ತ;
  • ರಾಜ್ಯದ ಸಚಿವರು, ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಉಸ್ತುವಾರಿ, ಉಪಾಧ್ಯಕ್ಷರು, ಪದನಿಮಿತ್ತ;
  • ವಿವಿಧ ಕ್ಷೇತ್ರಗಳ ವಿವಿಧ ಪ್ರತಿನಿಧಿಗಳು.

ಪರಿಷತ್ತನ್ನು 2020 ರ ಆಗಸ್ಟ್ 21 ರಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ದೆಹಲಿಯಲ್ಲಿ ತನ್ನ ಪ್ರಧಾನ ಕಛೇರಿಯೊಂದಿಗೆ ರಚಿಸಲಾಯಿತು. ಮಂಡಳಿಯು ಶ್ರೀ. ಥಾವರ್ ಚಂದ್ ಗೆಹ್ಲೋಟ್ ಅವರ ನೇತೃತ್ವದಲ್ಲಿದೆ. ಇದರ ಪ್ರಾದೇಶಿಕ ಸದಸ್ಯರು ಲಕ್ಷ್ಮೀ ನಾರಾಯಣ ತ್ರಿಪಾಠಿ, ಗೋಪಿ ಶಂಕರ್ ಮದುವಾರಿ, ಜೈನಾಬ್ ಪಿ ರಿಫಾಯಿ, ಶಯಮಚಂದ್ ಕೊಕ್ಕಿಟ್‌ ಬಾಂಬ್ ಮತ್ತು ಮೀರಾ ಪರಿದಾ. ಪರಿಣಿತ ಸದಸ್ಯರು ರೇಷ್ಮಾ ಪ್ರಸಾದ್, ಆರ್ಯನ್ ಪಾಷಾ, ವಿಹಾನ್ ಪೀತಾಂಬರ್ ಮತ್ತು ಸಿ.ಗಣೇಶ್ದಾಸ್.

ತೃತೀಯ ಲಿಂಗಿ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಮಂಡಳಿಯ ಪಾತ್ರವೇನು?

ತೃತೀಯ ಲಿಂಗಿ ವ್ಯಕ್ತಿಗಳ ರಾಷ್ಟ್ರೀಯ ಮಂಡಳಿಯ ಪಾತ್ರವು ಇವುಗಳನ್ನು ಒಳಗೊಂಡಿದೆ:

  • ತೃತೀಯ ಲಿಂಗಿ ವ್ಯಕ್ತಿಗಳ ಕುಂದುಕೊರತೆಗಳ ಪರಿಹಾರ.
  • ತೃತೀಯ ಲಿಂಗಿ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಾಡಿದ ನೀತಿಗಳ ಪರಿಣಾಮವನ್ನು ಸಲಹೆ ಮಾಡುವುದು, ಮೇಲ್ವಿಚಾರಣೆ ಮಾಡುವುದು ಮತ್ತು ಮೌಲ್ಯಮಾಪನ ಮಾಡುವುದು.
  • ತೃತೀಯ ಲಿಂಗಿ ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯಗಳೊಂದಿಗೆ ವ್ಯವಹರಿಸುತ್ತಿರುವ ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಕೆಲಸವನ್ನು ಮೇಲ್ವಿಚಾರಣೆ ಮಾಡುವುದು.

ತೃತೀಯ ಲಿಂಗಿ ವ್ಯಕ್ತಿಯ ವೈಯಕ್ತಿಕ ಹಕ್ಕುಗಳು

ತೃತೀಯ ಲಿಂಗಿ ವ್ಯಕ್ತಿಯನ್ನು ಅವರ ಕುಟುಂಬದಿಂದ ಎದುರಿಸುತ್ತಿರುವ ನಿಂದನೆಯಿಂದ ಕಾನೂನು ರಕ್ಷಿಸುತ್ತದೆಯೇ?

  • ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆಯ ಸೆಕ್ಷನ್ 18 – ಆರು ತಿಂಗಳಿಗಿಂತ ಕಡಿಮೆಯಿಲ್ಲದ ಆದರೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಮತ್ತು ದಂಡದೊಂದಿಗೆ ಜೈಲು ಶಿಕ್ಷೆಯನ್ನು ವಿಧಿಸುವ ಮೂಲಕ ಈ ಕಾನೂನು ಎಲ್ಲಾ ತೃತೀಯ ಲಿಂಗಿ ವ್ಯಕ್ತಿಗಳನ್ನು ದೈಹಿಕ, ಮೌಖಿಕ, ಭಾವನಾತ್ಮಕ, ಲೈಂಗಿಕ, ಮಾನಸಿಕ ಮತ್ತು ಆರ್ಥಿಕ ನಿಂದನೆಯಂತಹ ಯಾವುದೇ ರೀತಿಯ ನಿಂದನೆಯ ವಿರುದ್ಧ ರಕ್ಷಿಸುತ್ತದೆ. ದುರದೃಷ್ಟವಶಾತ್, ಮೇಲಿನ ಯಾವುದೇ ರೀತಿಯ ನಿಂದನೆಯ ವಿರುದ್ಧ ದೂರು ನೀಡಲು ಯಾವುದೇ ಪ್ರತ್ಯೇಕ ಕಾರ್ಯವಿಧಾನವನ್ನು ಸೂಚಿಸುವುದಿಲ್ಲ.

ಕೌಟುಂಬಿಕ ದೌರ್ಜನ್ಯ ಕಾಯಿದೆ, 2005 – ಕೌಟುಂಬಿಕ ಹಿಂಸಾಚಾರ ಕಾಯಿದೆಯು ತೃತೀಯ ಲಿಂಗಿ ಮಹಿಳೆಯರು ಸೇರಿದಂತೆ ಎಲ್ಲಾ ಮಹಿಳೆಯರನ್ನು (ಅವರ ಗುರುತಿನ ಪ್ರಮಾಣಪತ್ರವನ್ನು ಲೆಕ್ಕಿಸದೆ) ಯಾವುದೇ ಕುಟುಂಬದ ಸದಸ್ಯರಿಂದ ಯಾವುದೇ ರೀತಿಯ ನಿಂದನೆಯ ವಿರುದ್ಧ ರಕ್ಷಿಸುತ್ತದೆ. ಕೌಟುಂಬಿಕ ಹಿಂಸಾಚಾರದ ಕುರಿತು ನ್ಯಾಯಾ ವಿವರಣೆಯಲ್ಲಿ ನೀವು ಇನ್ನಷ್ಟು ಓದಬಹುದು.

 ತೃತೀಯ ಲಿಂಗಿ ವ್ಯಕ್ತಿಯ ಕುಟುಂಬವು ಅವರ ಲಿಂಗ ಗುರುತಿನ ಕಾರಣದಿಂದ ಅವರ ನಿವಾಸದಿಂದ ಹೊರಹೋಗುವಂತೆ ಕೇಳಿದರೆ ಏನು ಮಾಡಬಹುದು?

ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆಯ ಪ್ರಕಾರ, ಯಾವುದೇ ಕುಟುಂಬವು ಮಗುವಿನ ವಿರುದ್ಧ ತಾರತಮ್ಯ ಮಾಡುವುದು ಅಥವಾ ಮಗುವನ್ನು ಮನೆಯಿಂದ ಹೊರಗೆ ಹೋಗುವಂತೆ ಹೇಳುವುದು ಕಾನೂನುಬಾಹಿರವಾಗಿದೆ. ಎಲ್ಲಾ ತೃತೀಯ ಲಿಂಗಿಗಳಿಗೆ ಹಕ್ಕಿದೆ:

  • ಅವರ ಕುಟುಂಬದ ಮನೆಯಲ್ಲಿ ವಾಸಿಸಲು
  • ಯಾವುದೇ ತಾರತಮ್ಯವಿಲ್ಲದೆ ಅವರ ಕುಟುಂಬದ ಮನೆಯಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳಲು.

ಯಾವುದೇ ಪೋಷಕರು ಅಥವಾ ತಕ್ಷಣದ ಕುಟುಂಬದ ಸದಸ್ಯರು ತೃತೀಯ ಲಿಂಗಿ ವ್ಯಕ್ತಿಯನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಸಕ್ಷಮ ನ್ಯಾಯಾಲಯವು ಆದೇಶದ ಮೂಲಕ ಅಂತಹ ವ್ಯಕ್ತಿಯನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಲು ನಿರ್ದೇಶಿಸುತ್ತದೆ. (ಕಾಯ್ದೆಯ ಸೆಕ್ಷನ್ 12(3))

ತೃತೀಯ ಲಿಂಗಿ ವ್ಯಕ್ತಿಯನ್ನು ಯಾರಾದರೂ ತಮ್ಮ ಮನೆ ಅಥವಾ ಸಮುದಾಯದಿಂದ ಹೊರಹೋಗುವಂತೆ ಕೇಳಬಹುದೇ?

ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆಯು ಯಾರಾದರೂ ತಮ್ಮ ಕುಟುಂಬದಿಂದ ತೃತೀಯಲಿಂಗಿ ವ್ಯಕ್ತಿಯನ್ನು ಬೇರ್ಪಡಿಸುವುದು ಅಥವಾ ಅವರ ಮನೆ, ಗ್ರಾಮ ಅಥವಾ ಸಮುದಾಯದಿಂದ ಹೊರಹೋಗುವಂತೆ ಹೇಳುವುದನ್ನು ಕಾನೂನುಬಾಹಿರಗೊಳಿಸುತ್ತದೆ. ಯಾರಾದರೂ ಈ ಅಪರಾಧವನ್ನು ಮಾಡಲು ಪ್ರಯತ್ನಿಸಿದರೆ, ಅವರಿಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ತೃತೀಯ ಲಿಂಗಿಯಾಗಿ ನಾನು ಉಳಿಯಲು ಕಾನೂನುಬದ್ಧವಾಗಿ ಸುರಕ್ಷಿತ ಸ್ಥಳಗಳನ್ನು ಹೊಂದಿದ್ದೇನೆಯೇ?

ಹೌದು, ತೃತೀಯ ಲಿಂಗಿವ್ಯಕ್ತಿಗಳು ತಮ್ಮ ಸ್ವಂತ ಮನೆಯಲ್ಲಿ ‘ವಾಸಿಸುವ ಹಕ್ಕನ್ನು’ ಆನಂದಿಸುತ್ತಿದ್ದರೆ, ಮನೆ ಇಲ್ಲದವರಿಗೆ ಸಹಾಯ ಮಾಡಲು ಸರ್ಕಾರ ‘ಗರಿಮಾ ಗೃಹ’ಗಳನ್ನು ಸ್ಥಾಪಿಸಿದೆ.

ಗರಿಮಾ ಗೃಹಗಳಲ್ಲಿ ವಾಸಿಸಲು ಯಾವುದೇ ಷರತ್ತುಗಳನ್ನು ಪೂರೈಸಬೇಕೇ? (ಗಮನಿಸಿ: ಇದು ರಾಜ್ಯದಲ್ಲಿ ಗರಿಮಾ ಗೃಹಗಳು ಇದ್ದರೆ ಅನ್ವಯಿಸುತ್ತದೆ)

ಕೆಳಗಿನ ಷರತ್ತುಗಳನ್ನು ಪೂರೈಸಬೇಕು:

  • ತೃತೀಯ ಲಿಂಗಿ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಪೋರ್ಟಲ್ ಮೂಲಕ ನೀಡಲಾದ ಪ್ರಮಾಣಪತ್ರವನ್ನು ಹೊಂದಿರಬೇಕು. ಮತ್ತು ಬಡತನ ರೇಖೆಯ ಕೆಳಗಿನವರಿಗೆ ಆಧ್ಯತೆ
  • ಪರಿತ್ಯಜಿಸಲ್ಪಟ್ಟ, 18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು
  • ಲೈಂಗಿಕ ಕೆಲಸ ಮತ್ತು ಭಿಕ್ಷಾಟನೆಯಲ್ಲಿ ತೊಡಗದವರು
  • ನಿರುದ್ಯೋಗಿಗಳು ಮತ್ತು ಉತ್ಪಾದಕ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಲ್ಲದವರು

ತೃತೀಯ ಲಿಂಗಿ ವ್ಯಕ್ತಿಗಳಿಗಾಗಿ ಇರುವ ರಾಷ್ಟ್ರೀಯ ಪೋರ್ಟಲ್ನಲ್ಲಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು, ರಾಷ್ಟ್ರೀಯ ತೃತೀಯ ಲಿಂಗಿ ಪೋರ್ಟಲ್‌ನಲ್ಲಿ ಆನ್‌ಲೈನ್ ಖಾತೆಯನ್ನು ರಚಿಸಿ (https://transgender.dosje.gov.in/). ಯಶಸ್ವಿ ನೋಂದಣಿಯಲ್ಲಿ, ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿರುವ ‘ಆನ್‌ಲೈನ್‌ನಲ್ಲಿ ಅನ್ವಯಿಸು’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಆನ್‌ಲೈನ್ ಫಾರ್ಮ್‌ನಲ್ಲಿ ವೈಯಕ್ತಿಕ ವಿವರಗಳು ಮತ್ತು ಇತರ ವಿವರಗಳನ್ನು ಭರ್ತಿ ಮಾಡಿ. ಲಿಂಗವನ್ನು ಘೋಷಿಸುವ ಅಫಿಡವಿಟ್ ಅನ್ನು ಅಪ್‌ಲೋಡ್ ಮಾಡಿ. ಈ ಪೋರ್ಟಲ್ ಭೌತಿಕ ಇಂಟರ್ಫೇಸ್ ಇಲ್ಲದೆಯೇ ಗುರುತಿನ ಚೀಟಿಯನ್ನು ಪಡೆಯಲು ತೃತೀಯ ಲಿಂಗಿ ವ್ಯಕ್ತಿಗೆ ಸಹಾಯ ಮಾಡುತ್ತದೆ. ಅದಕ್ಕಾಗಿ ವಿವರವಾದ ಮಾರ್ಗಸೂಚಿಗಳನ್ನು ಇಲ್ಲಿ ಕಾಣಬಹುದು – (https://transgender.dosje.gov.in/docs/Manual.pdf)

ಮದುವೆ ಮತ್ತು ವಿಚ್ಛೇದನ

ಭಾರತದಲ್ಲಿ ತೃತೀಯ ಲಿಂಗಿ ವ್ಯಕ್ತಿ ಮದುವೆಯಾಗಬಹುದೇ? ಹಾಗಿದ್ದಲ್ಲಿ, ಯಾವ ಕಾನೂನಿನ ಅಡಿಯಲ್ಲಿ?

ತೃತೀಯ ಲಿಂಗಿ ವ್ಯಕ್ತಿಯೊಬ್ಬರು ಭಾರತದಲ್ಲಿ ವೈಯಕ್ತಿಕ ಧಾರ್ಮಿಕ ಕಾನೂನುಗಳ ಅಡಿಯಲ್ಲಿ (ಉದಾಹರಣೆಗೆ ಹಿಂದೂ ವಿವಾಹ ಕಾಯಿದೆ ಅಥವಾ ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆ) ಅಥವಾ ವಿಶೇಷ ವಿವಾಹ ಕಾಯಿದೆ, 1954 ರ ಅಡಿಯಲ್ಲಿ ಮದುವೆಯಾಗಬಹುದು. ಅರುಣ್ ಕುಮಾರ್ ವಿರುದ್ಧ ಇನ್ಸ್ಪೆಕ್ಟರ್ ಜನರಲ್ (ಮದ್ರಾಸ್) (2019) ), ಹಿಂದೂ ಧರ್ಮವನ್ನು ಪ್ರತಿಪಾದಿಸುವ ಪುರುಷ ಮತ್ತು ತೃತೀಯ ಲಿಂಗಿ ಮಹಿಳೆಯರ ನಡುವಿನ ವಿವಾಹವನ್ನು ಕಾನೂನಿನ ದೃಷ್ಟಿಯಲ್ಲಿ ಮಾನ್ಯ ವಿವಾಹವೆಂದು ಪರಿಗಣಿಸಲಾಗಿದೆ ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ಗಮನಿಸಿದೆ.

ಪ್ರಕರಣದ ಅಧ್ಯಯನ: ಚಿನ್ಮಯ್ಜೀ ಜೆನಾ ವರ್ಸಸ್ ಸ್ಟೇಟ್ ಆಫ್ ಒಡಿಶಾ (2020) ಪ್ರಕರಣದಲ್ಲಿ, ಒಡಿಶಾ ಉಚ್ಚ ನ್ಯಾಯಾಲಯ ಭಾರತದಲ್ಲಿ ಮೊದಲ ನ್ಯಾಯಾಂಗ ತೀರ್ಪನ್ನು ನೀಡಿತು. ಅವರ ಆಯ್ಕೆಯ ಸಂಗಾತಿಯೊಂದಿಗೆ, ಪಾಲುದಾರರ “ಲಿಂಗ” ವನ್ನು ಲೆಕ್ಕಿಸದೆ. ಅದು ಲಿವ್-ಇನ್ ಸಂಬಂಧಕ್ಕೆ ಪ್ರವೇಶಿಸುವ ತೃತೀಯ ಲಿಂಗಿ ವ್ಯಕ್ತಿಗಳ ಹಕ್ಕನ್ನು ಸ್ಪಷ್ಟವಾಗಿ ಗುರುತಿಸುತ್ತದೆ.

 ತೃತೀಯ ಲಿಂಗಿ ವ್ಯಕ್ತಿಯೊಬ್ಬರು ತಮ್ಮ ಸಂಗಾತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದೇ?

ಅವರು ಕಾನೂನುಬದ್ಧವಾಗಿ ವಿವಾಹಿತರಾಗಿದ್ದರೆ, ಅವರು ಆರಂಭದಲ್ಲಿ ಮದುವೆಯಾದ ಕಾನೂನಿನ ಅಡಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.  ಲಿವ್-ಇನ್ ಸಂಬಂಧಗಳ ಸಂದರ್ಭದಲ್ಲಿ, ವಿಚ್ಛೇದನ ಪಡೆಯಲು ಯಾವುದೇ ಕಾನೂನು ಅವಶ್ಯಕತೆ ಇರುವುದಿಲ್ಲ.

ತಮ್ಮ ಸಂಗಾತಿಯಿಂದ/ಲಿವ್-ಇನ್ ಸಂಗಾತಿಯಿಂದ ನಿಂದನೆ/ಕಿರುಕುಳ ಎದುರಿಸುತ್ತಿರುವ ತೃತೀಯ ಲಿಂಗಿ ಮಹಿಳೆಗೆ ಕಾನೂನು ರಕ್ಷಣೆಗಳು ಯಾವುವು?

ಯಾವುದೇ ವ್ಯಕ್ತಿ ತಮ್ಮನ್ನು ತೃತೀಯ ಲಿಂಗಿ ಮಹಿಳೆ ಎಂದು ಗುರುತಿಸಿಕೊಳ್ಳುತ್ತಾರೆ ಮತ್ತು ಅವರು ಭಾವನಾತ್ಮಕ, ಆರ್ಥಿಕ ಅಥವಾ ಲೈಂಗಿಕ ದೌರ್ಜನ್ಯದಂತಹ ಯಾವುದೇ ರೀತಿಯ ನಿಂದನೆಯನ್ನು ಎದುರಿಸುತ್ತಿದ್ದರೆ, ಕೌಟುಂಬಿಕ ಹಿಂಸಾಚಾರ ಕಾಯಿದೆಯಡಿ ರಕ್ಷಣೆಗೆ ಅರ್ಹರಾಗಿರುತ್ತಾರೆ.  ಈ ಕಾನೂನಿನ ಅಡಿಯಲ್ಲಿ ರಕ್ಷಣೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಲಿವ್-ಇನ್ ಸಂಬಂಧಗಳ ಕುರಿತು ನ್ಯಾಯಾ ವಿವರಣೆಯನ್ನು ಓದಿ.

ಲೈಂಗಿಕ ಕಿರುಕುಳದ ವಿರುದ್ಧ ರಕ್ಷಣೆ

ಲೈಂಗಿಕ ಕಿರುಕುಳದಿಂದ ತೃತೀಯ ಲಿಂಗಿ ವ್ಯಕ್ತಿಗಳನ್ನು ಕಾನೂನು ರಕ್ಷಿಸುತ್ತದೆಯೇ?

  • ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ – ಈ ಕಾಯಿದೆಯ ಸೆಕ್ಷನ್ 18 ರ ಅಡಿಯಲ್ಲಿ, ಯಾವುದೇ ವ್ಯಕ್ತಿ ಯಾವುದೇ ತೃತೀಯ ಲಿಂಗಿ ವ್ಯಕ್ತಿಯನ್ನು ಲೈಂಗಿಕವಾಗಿ ನಿಂದಿಸುವುದು ಕಾನೂನುಬಾಹಿರವಾಗಿದೆ.
  • ಭಾರತೀಯ ದಂಡ ಸಂಹಿತೆ – ಎಲ್ಲಾ ತೃತೀಯ ಲಿಂಗಿ ಮಹಿಳೆಯರು ಲೈಂಗಿಕ ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವ ಭಾರತೀಯ ದಂಡ ಸಂಹಿತೆಯ ಎಲ್ಲಾ ವಿಭಾಗಗಳ ಅಡಿಯಲ್ಲಿ ರಕ್ಷಣೆ ಪಡೆಯಬಹುದು.  ಅನಾಮಿಕಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ(2020) ಪ್ರಕರಣದಲ್ಲಿ ದೆಹಲಿಯ ಉಚ್ಚ ನ್ಯಾಯಾಲಯ ಇದನ್ನು ಉಲ್ಲೇಖಿಸಿದೆ.
  • ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ – ಯಾವುದೇ ತೃತೀಯ ಲಿಂಗಿ ವ್ಯಕ್ತಿ ತಮ್ಮ ಶಾಲೆ/ಕಾಲೇಜಿನಲ್ಲಿ ಲೈಂಗಿಕ ಕಿರುಕುಳವನ್ನು ಎದುರಿಸಿದರೆ, ಅದನ್ನು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಎಂದು ಪರಿಗಣಿಸಲಾಗುತ್ತದೆ.  ಯಾವುದೇ ತೃತೀಯ ಲಿಂಗಿ ವಿದ್ಯಾರ್ಥಿಯು ಆಯಾ ಶಾಲೆ/ವಿಶ್ವವಿದ್ಯಾಲಯದ ಆಂತರಿಕ ದೂರುಗಳ ಸಮಿತಿಗೆ ದೂರು ಸಲ್ಲಿಸಲು ಅರ್ಹರಾಗಿರುತ್ತಾರೆ.

ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ತೃತೀಯ ಲಿಂಗಿ ವ್ಯಕ್ತಿಯ ಹಕ್ಕುಗಳ ರಕ್ಷಣೆಗಾಗಿ POSH ಕಾಯಿದೆಯು ಯಾವುದಾದರೂ ಕಾರ್ಯವಿಧಾನವನ್ನು ಒದಗಿಸುತ್ತದೆಯೇ?

POSH ಕಾಯಿದೆಯ ಅಡಿಯಲ್ಲಿರುವ ಅವಶ್ಯಕತೆಗಳಿಗೆ ಅನುಗುಣವಾಗಿ, (ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013), ದೂರುದಾರರ ವಿವರವನ್ನು ಗೌಪ್ಯವಾಗಿರಿಸುವುದರೊಂದಿಗೆ, ಸಂಸ್ಥೆಗಳು ಕಿರುಕುಳದ ದೂರುಗಳನ್ನು ನಿರ್ವಹಿಸಲು ತೃತೀಯ ಲಿಂಗಿ ವ್ಯಕ್ತಿಗಳಿಗೆ ಸಾಕಷ್ಟು ದೂರು ಪರಿಹಾರ ಕಾರ್ಯವಿಧಾನಗಳನ್ನು ಒದಗಿಸಬೇಕಾಗುತ್ತದೆ.

ತೃತೀಯ ಲಿಂಗಿ ವ್ಯಕ್ತಿಯ ಸಾರ್ವಜನಿಕ ಮತ್ತು ರಾಜಕೀಯ ಹಕ್ಕುಗಳು

ತೃತೀಯ ಲಿಂಗಿ ವ್ಯಕ್ತಿಗಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ಕೆಲಸದ ಸ್ಥಳಗಳು ಅಥವಾ ಸಂಸ್ಥೆಗಳ ಕರ್ತವ್ಯಗಳು ಯಾವುವು?

ಉದ್ಯೋಗದಾತರು ತೃತೀಯ ಲಿಂಗಿ ವ್ಯಕ್ತಿಯ ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ತಾರತಮ್ಯ ಮಾಡುವಂತಿಲ್ಲ. ಎಲ್ಲಾ ಸಂಸ್ಥೆಗಳು ತೃತೀಯ ಲಿಂಗಿ ಕಾನೂನಿನ ನಿಬಂಧನೆಗಳನ್ನು ಅನುಸರಿಸಬೇಕು. ಈ ಕಾಯಿದೆಯ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ಎದುರಿಸಲು ಒಬ್ಬ ವ್ಯಕ್ತಿಯನ್ನು ದೂರು ಅಧಿಕಾರಿಯಾಗಿ ನೇಮಿಸುವ ಕರ್ತವ್ಯವನ್ನು ಅವರು ಹೊಂದಿರುತ್ತಾರೆ.

ತೃತೀಯ ಲಿಂಗಿ ವ್ಯಕ್ತಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸುವ ಹಕ್ಕು ಇದೆಯೇ?

ಹೌದು, ಎಲ್ಲಾ ತೃತೀಯ ಲಿಂಗಿ ವ್ಯಕ್ತಿಗಳು ಸಾರ್ವಜನಿಕರ ಸಾಮಾನ್ಯ ಬಳಕೆಗಾಗಿ ಉದ್ದೇಶಿಸಲಾದ ಎಲ್ಲಾ ರೀತಿಯ ಸಾರ್ವಜನಿಕ ಸ್ಥಳಗಳು ಮತ್ತು ಸಾರಿಗೆಗಳನ್ನು ಬಳಸುವ ಹಕ್ಕನ್ನು ಹೊಂದಿರುತ್ತಾರೆ. ತೃತೀಯ ಲಿಂಗಿ ವ್ಯಕ್ತಿಗಳು (ಹಕ್ಕುಗಳ ರಕ್ಷಣೆ) ಕಾಯಿದೆಯು ಯಾವುದೇ ವ್ಯಕ್ತಿಗೆ ತೃತೀಯ ಲಿಂಗಿ ವ್ಯಕ್ತಿಯಿಂದ ಸಾರ್ವಜನಿಕ ಸಾರಿಗೆ ಅಥವಾ ಸ್ಥಳದ ಬಳಕೆಯನ್ನು ನಿಷೇಧಿಸುವುದನ್ನು ಕಾನೂನುಬಾಹಿರಗೊಳಿಸುತ್ತದೆ.

ತೃತೀಯ ಲಿಂಗಿ ವ್ಯಕ್ತಿ ಮತ ಚಲಾಯಿಸಬಹುದೇ?

ಹೌದು, ಯಾವುದೇ ಇತರ ಲಿಂಗದ ವ್ಯಕ್ತಿಯಂತೆ, ಪ್ರಮುಖವಾಗಿ (18 ವರ್ಷಕ್ಕಿಂತ ಮೇಲ್ಪಟ್ಟ) ಒಬ್ಬ ತೃತೀಯ ಲಿಂಗಿ ವ್ಯಕ್ತಿ ಕೂಡ ಭಾರತದಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರ ನೋಂದಣಿ ನಮೂನೆಯು ಲಿಂಗ ವರ್ಗದ ಅಡಿಯಲ್ಲಿ ‘ಇತರ’ ಆಯ್ಕೆಯನ್ನು ಸಹ ಹೊಂದಿದೆ. ಮತದಾನದ ಹಕ್ಕಿನ ಜೊತೆಗೆ, ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆಯು ಯಾವುದೇ ಸಾರ್ವಜನಿಕ ಕಚೇರಿಯಲ್ಲಿ ಹುದ್ದೆ ಹೊಂದುವಲ್ಲಿ ಯಾವುದೇ ತಾರತಮ್ಯ ಇರಬಾರದು, ಅಂದರೆ ತೃತೀಯ ಲಿಂಗಿ ವ್ಯಕ್ತಿ ಚುನಾವಣೆಯಲ್ಲಿಯೂ ಸ್ಪರ್ಧಿಸಬಹುದು.

ಸಂಪನ್ಮೂಲಗಳು

ಸಂಪರ್ಕ ಮಾಹಿತಿ

ಐ- ಕಾಲ್ (iCALL) ಸಹಾಯವಾಣಿ : 9152987821 

ಇದು ಮಾನಸಿಕ ಆರೋಗ್ಯ ಮತ್ತು ಮಾನಸಿಕ ಸಾಮಾಜಿಕ ಸಮಸ್ಯೆಗಳ ಕುರಿತು ಸಲಹೆ ನೀಡುತ್ತದೆ.  ಸಹಾಯವಾಣಿಯು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಕಾರ್ಯನಿರ್ವಹಿಸುತ್ತದೆ.  ಇದು ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಅಸ್ಸಾಮಿ, ಬೆಂಗಾಲಿ, ಪಂಜಾಬಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಹಾಯವಾಣಿ ಸೇವೆಯನ್ನು ನೀಡುತ್ತದೆ.

ನಾಜ್ ದೋಸ್ತ್ (NAZ DOST) ಸಹಾಯವಾಣಿ : +91 8800329176 / +91 (011) 47504630. ಇದು ಸೋಮವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಲಭ್ಯವಿದೆ.  NGO ನಾಜ್ ಫೌಂಡೇಶನ್‌ನ ಈ ಫೋನ್ ಮತ್ತು WhatsApp ಸಹಾಯವಾಣಿಯು LGBTQ ಸಮುದಾಯಕ್ಕೆ ಮಾನಸಿಕ ಆರೋಗ್ಯ, ಕಾನೂನು ಮತ್ತು ಲೈಂಗಿಕ ಸಂಬಂಧಿತ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.

ಟೆಕ್ – ಸಖಿ [TechSakhi(techsakhi.in) ]:080 4568 5001 ಎಂಬುದು ಪಾಯಿಂಟ್ ಆಫ್ ವ್ಯೂ ನಡೆಸುವ ಸಹಾಯವಾಣಿಯಾಗಿದೆ.  ಇದು ಮಹಿಳೆಯರು ಮತ್ತು LGBT ಸಮುದಾಯಕ್ಕೆ ಅಂತರ್ಜಾಲದಲ್ಲಿ ಸುರಕ್ಷಿತವಾಗಿರಲು ಮತ್ತು ಆನ್‌ಲೈನ್ ಅಪರಾಧಗಳಿಂದ ಅವರನ್ನು ರಕ್ಷಿಸಲು ಸಹಾಯ ಮಾಡುತ್ತದೆ.  ಇದು ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ಹಿಂದಿ, ಬೆಂಗಾಲಿ ಮತ್ತು  ಮರಾಠಿ ಭಾಷೆಗಳಲ್ಲಿ ಲಭ್ಯವಿದೆ. ತಮಿಳು ಭಾಷೆಯಲ್ಲಿ ಸೇವೆ ಪಡೆಯಲು 0224833974 ನಂಬರ್ ಗೆ ಕರೆಮಾಡಬಹುದು.

ಉಲ್ಲೇಖಗಳು

  • ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ, 2019.
  • ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ನಿಯಮಗಳು, 2020.
  • NALSA v. ಯೂನಿಯನ್ ಆಫ್ ಇಂಡಿಯಾ – AIR 2014 SC 1863.
  • ಪುಟ್ಟಸ್ವಾಮಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ – (2017) 10 SCC 1.
  • ನವತೇಜ್ ಸಿಂಗ್ ಜೋಹರ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ – ರಿಟ್ ಅರ್ಜಿ (ಅಪರಾಧ) 2016 ರ ಸಂಖ್ಯೆ 27.
  • ಅರುಣ್ ಕುಮಾರ್ ವಿರುದ್ಧ ಇನ್ಸ್ಪೆಕ್ಟರ್ ಜನರಲ್ (ಮದ್ರಾಸ್) – ಡಬ್ಲ್ಯೂ.ಪಿ. (MD) ನಂ. 2019 ರ 4125 ಮತ್ತು W.M.P. (MD) ನಂ. 2019 ರ 3220.
  • ಜಿ ನಾಗಲಕ್ಷ್ಮಿ ವಿರುದ್ಧ ಪೊಲೀಸ್ ಮಹಾನಿರ್ದೇಶಕ ((2014) 7 MLJ 452) ಮದ್ರಾಸ್ ಉಚ್ಚ ನ್ಯಾಯಾಲಯ.
  • ನಂಗೈ ವಿರುದ್ಧ ಪೊಲೀಸ್ ಸೂಪರಿಂಟೆಂಡೆಂಟ್ – (2014) 4 MLJ 12 (ಮದ್ರಾಸ್ ಉಚ್ಚ ನ್ಯಾಯಾಲಯ).
  • ಅಂಜಲಿ ಗುರು ಸಂಜನಾ ಜಾನ್ ವಿರುದ್ಧ ಮಹಾರಾಷ್ಟ್ರ ಮತ್ತು ಇತರರು. (ರಿಟ್ ಅರ್ಜಿ ಸ್ಟ್ಯಾಂಪ್ ಸಂಖ್ಯೆ 104) – ಬಾಂಬೆ ಉಚ್ಚ ನ್ಯಾಯಾಲಯ.
  • ಶ್ರೀಮತಿ X ವಿರುದ್ಧ ಉತ್ತರಾಖಂಡ ರಾಜ್ಯ – ರಿಟ್ ಅರ್ಜಿ (ಅಪರಾಧ) 2019 ರ ಸಂಖ್ಯೆ 28 – ಉತ್ತರಾಖಂಡ ಉಚ್ಚ ನ್ಯಾಯಾಲಯ.
  • Mx ಸುಮನಾ ಪ್ರಮಾಣಿಕ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ – ರಿಟ್ ಅರ್ಜಿಯ ಮೇಲ್ಮನವಿ ಸಂಖ್ಯೆ 9187 ಆಫ್ 2020 – ಕಲ್ಕತ್ತಾ ಉಚ್ಚ ನ್ಯಾಯಾಲಯ.
  • ಕರಣ್ ತ್ರಿಪಾಠಿ ವಿರುದ್ಧ NCRB – ರಿಟ್ ಅರ್ಜಿ (ಕ್ರಿಮಿನಲ್) ಸಂಖ್ಯೆ 9596 ಆಫ್ 2020 – ದೆಹಲಿ ಉಚ್ಚ ನ್ಯಾಯಾಲಯ.
  • ಚಿನ್ಮಯೀ ಜೆನಾ ವಿರುದ್ಧ ಒಡಿಶಾ & ಇತರರು. – 2020 ರ ರಿಟ್ ಅರ್ಜಿ ಸಂಖ್ಯೆ 57 – ಒರಿಸ್ಸಾ ಉಚ್ಚ ನ್ಯಾಯಾಲಯ.
  • ಕಬೀರ್ ಸಿ ಅಲಿಯಾಸ್ ಅನೀರಾ ಕಬೀರ್ ವಿರುದ್ಧ ಕೇರಳ ರಾಜ್ಯ – WP(C).NO.9890 OF 2020(S) – ಕೇರಳ ಉಚ್ಚ ನ್ಯಾಯಾಲಯ.
  • Mx ಅಲಿಯಾ SK ವಿರುದ್ಧ ಪಶ್ಚಿಮ ಬಂಗಾಳ ಮತ್ತು ಇತರರು. – ಡಬ್ಲ್ಯೂ.ಪಿ. NOS. 21587 (W) 2019 – ಕಲ್ಕತ್ತಾ ಉಚ್ಚ ನ್ಯಾಯಾಲಯ.

ಆಶಿಶ್ ಕುಮಾರ್ ಮಿಶ್ರಾ ವಿರುದ್ಧ ಭಾರತ ಸರ್ಕಾರ್ – MANU/UP/0332/2015 – ಅಲಹಾಬಾದ್ ಉಚ್ಚ ನ್ಯಾಯಾಲಯ.

  • ಅನಾಮಿಕಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ, W.P.(C) 4356/2020, ದೆಹಲಿ ಉಚ್ಚ ನ್ಯಾಯಾಲಯ.
  • https://blog.ipleaders.in/legal-rights-of-transgender-india/
  • https://www.lexology.com/library/detail.aspx?g=b49d9488-c484-4d00-882c-2c386a041a07
  • https://www.mondaq.com/india/discrimination-disability-sexual-harassment/905918/transgender-rights-the-third-gender39-and-transforming-the-workplace-in-india
  • https://www.mondaq.com/india/employee-rights-labour-relations/851520/analysis-transgender-persons-protection-of-the-rights-bill-2019

ಪದಕೋಶ :

  • ತೃತೀಯ ಲಿಂಗಿ ಪುರುಷ : ಮಹಿಳೆಯಿಂದ ಪುರುಷನಾಗಿ ಬದಲಾವಣೆ ಹೊಂದಿದ ತೃತೀಯ ಲಿಂಗಿ ವ್ಯಕ್ತಿ
  • ತೃತೀಯ ಲಿಂಗಿ ಮಹಿಳೆ : ಪುರುಷನಿಂದ ಮಹಿಳೆಯಾಗಿ ಬದಲಾವಣೆ ಹೊಂದಿದ ತೃತೀಯ ಲಿಂಗಿ ವ್ಯಕ್ತಿ
  • ಅಂತರ-ಲಿಂಗ ವ್ಯತ್ಯಾಸಗಳನ್ನು ಹೊಂದಿರುವ ವ್ಯಕ್ತಿ: ‘ಇಂಟರ್‌ಸೆಕ್ಸ್ ವ್ಯತ್ಯಾಸಗಳೊಂದಿಗೆ’ ಜನಿಸಿದ ಜನರು ಸ್ತ್ರೀ ಅಥವಾ ಪುರುಷ ದೇಹದ ವಿಶಿಷ್ಟ ವ್ಯಾಖ್ಯಾನಕ್ಕೆ ಹೊಂದಿಕೆಯಾಗದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಅಂತರ-ಲಿಂಗ ವ್ಯತ್ಯಾಸವು ದೈಹಿಕ, ಹಾರ್ಮೋನ್ ಅಥವಾ ಕ್ರೋಮೋಸೋಮ್-ಸಂಬಂಧಿತವಾಗಿರಬಹುದು.
  • ಲಿಂಗ-ಕ್ವೀರ್ ವ್ಯಕ್ತಿಗಳು: ದ್ವಿಮಾನ ವಲ್ಲದ ಅಥವಾ ಲಿಂಗ-ಕ್ವೀರ್ ಎಂಬುದು ಪುರುಷ ಅಥವಾ ಹೆಣ್ಣು ಅಲ್ಲದ ಲಿಂಗ ಗುರುತಿಸುವಿಕೆಗಳಿಗೆ ಒಂದು ಸಮೂಹ ಪದವಾಗಿದೆ—ಲಿಂಗ ದ್ವಿಮಾನದಿಂದ ಹೊರಗಿರುವ ಗುರುತುಗಳು.
  • ಲಿಂಗ ಉತ್ತೇಜಕ ಹಾರ್ಮೋನ್ ಥೆರಪಿ: ಲಿಂಗ ಉತ್ತೇಜಕ ಹಾರ್ಮೋನ್ ಚಿಕಿತ್ಸೆಯು ಒಬ್ಬ ವ್ಯಕ್ತಿಯು ಅವರ ಲಿಂಗ ಗುರುತನ್ನು ಹೊಂದುವ ಬಾಹ್ಯ ಗುಣಲಕ್ಷಣಗಳನ್ನು ಪಡೆಯಲು ಸಹಾಯ ಮಾಡಲು ಸೂಚಿಸಲಾದ ಔಷಧವಾಗಿದೆ.

 

 

ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ವೈದ್ಯಕೀಯ-ಕಾನೂನಿನ ಕಾರ್ಯವಿಧಾನದ ಮಾರ್ಗದರ್ಶಿ

ಈ ಮಾರ್ಗದರ್ಶಿ ನಿಮಗೆ ಹೇಗೆ ಸಹಾಯ ಮಾಡಬಹುದು?

‘ನ್ಯಾಯ’ದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ  ವೈದ್ಯಕೀಯ-ಕಾನೂನಿನ ಪರೀಕ್ಷಣದ ಮಾರ್ಗದರ್ಶಿಯು  ಸಂತ್ರಸ್ತರಿಗೆ ಪ್ರಕ್ರಿಯೆಯ ಸಾರಾಂಶ ಮತ್ತು ವ್ಯಕ್ತಿಯೊಬ್ಬರು ಲೈಂಗಿಕ ದೌರ್ಜನ್ಯಕ್ಕೊಳಗಾದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳ ಬಗ್ಗೆ ತಿಳಿಸುವ ಮೂಲಕ ಸಹಾಯ ಮಾಡುತ್ತದೆ. 

ಡಿಎನ್‌ಎ ಸೇರಿದಂತೆ ಸಂಭವನೀಯ ಪುರಾವೆಗಳನ್ನು ಸಂರಕ್ಷಿಸಲು ಮತ್ತು ಪ್ರಮುಖ ವೈದ್ಯಕೀಯ ಗಮನವನ್ನು ಪಡೆಯಲು  ಸಂತ್ರಸ್ತರು ಅನುಭವಿಸುವ ವಿಧಿವಿಜ್ಞಾನ ವೈದ್ಯಕೀಯ ಪರೀಕ್ಷೆಗಳ ವಿಧಾನವನ್ನು ಅರ್ಥಮಾಡಿಕೊಳ್ಳಲು ಈ ಮಾರ್ಗದರ್ಶಿ ಸಹಾಯ ಮಾಡುತ್ತದೆ.  ಇದು  ಸಂತ್ರಸ್ತರಿಗೆ ಇರುವ ಹಕ್ಕುಗಳ ಅವಲೋಕನವನ್ನು ನೀಡುತ್ತದೆ ಮತ್ತು ವಿವಿಧ ತಪ್ಪು ಅಭಿಪ್ರಾಯಗಳನ್ನೂ ಹೊರಹಾಕುತ್ತದೆ. ಲೈಂಗಿಕ ದೌರ್ಜನ್ಯವನ್ನು ಎದುರಿಸುವಾಗ, ಆರೋಗ್ಯ ಕಾರ್ಯಕರ್ತರು ದ್ವಿಪಾತ್ರವನ್ನು ನಿರ್ವಹಿಸುತ್ತಾರೆ – ಒಂದು, ವೈದ್ಯಕೀಯ ಚಿಕಿತ್ಸೆ ಮತ್ತು ಮಾನಸಿಕ ಆಸರೆಯನ್ನು ಒದಗಿಸುವುದು ಮತ್ತು ಎರಡು, ಪುರಾವೆಗಳನ್ನು ಸಂಗ್ರಹಿಸುವುದು ಮತ್ತು ಸಾಕ್ಷ್ಯದ ಉತ್ತಮ ಗುಣಮಟ್ಟದ ದಾಖಲಾತಿಯನ್ನು ಖಚಿತಪಡಿಸಿಕೊಳ್ಳುವುದು. 2014 ರಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಲೈಂಗಿಕ ದೌರ್ಜನ್ಯದ  ಸಂತ್ರಸ್ತರಿಗೆ ವೈದ್ಯಕೀಯ-ಕಾನೂನಿನ ಆರೈಕೆಗಾಗಿ ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳನ್ನು ಹಾಕಿತು.

ಮಾರ್ಗದರ್ಶಿಯಲ್ಲಿ ಚರ್ಚಿಸಲಾದ ಕಾನೂನುಗಳು ಯಾವುವು? 

ಈ ಮಾರ್ಗದರ್ಶಿಯು 2014 ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವ್ಯೆದ್ಯಕೀಯ-ಕಾನೂನಿನ ಮಾರ್ಗಸೂಚಿಗಳ ಕಾನೂನು ಅಂಶಗಳನ್ನು ಚರ್ಚಿಸುತ್ತದೆ. ಈ ಮಾರ್ಗಸೂಚಿಗಳು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯಿದೆ, 2013, ಭಾರತೀಯ ದಂಡ ಸಂಹಿತೆ, 1860 ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO), 2012,  ಕ್ರಿಮಿನಲ್ ಪ್ರೊಸೀಜರ್ ಕೋಡ್, 1973  ಭಾರತೀಯ ನ್ಯಾಯ ಸಂಹಿತೆ ,2023 ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023ರ ಅಡಿಯಲ್ಲಿ ವಿವರಿಸಿರುವ ವಿವಿಧ ಅವಶ್ಯಕತೆಗಳನ್ನು ಆಧರಿಸಿದೆ.

ಮೊದಲ  ಹೆಜ್ಜೆಗಳು – ವೈದ್ಯಕೀಯ ನೆರವು ಮತ್ತು ಪರೀಕ್ಷೆ 

ಸಂತ್ರಸ್ತರ ಹೇಳಿಕೆಯನ್ನು ದೃಢೀಕರಿಸುವಲ್ಲಿ ವೈದ್ಯಕೀಯ ಪರೀಕ್ಷೆಗಳು ಪ್ರಮುಖ ಪಾತ್ರವಹಿಸುತ್ತವೆ, ಅದಕ್ಕಾಗಿಯೇ ನೋಂದಾಯಿತ ವೈದ್ಯಕೀಯ ವೈದ್ಯರಿಂದ ಸಾಧ್ಯವಾದಷ್ಟು ಬೇಗ ನಿಮ್ಮನ್ನು ಪರೀಕ್ಷಿಸಿಕೊಳ್ಳುವುದು ಮುಖ್ಯ. 

ಸಾಧ್ಯವಾದರೆ ವೈದ್ಯಕೀಯ ಪರೀಕ್ಷೆಗೆ ಮುನ್ನ ಹಲ್ಲುಜ್ಜುವುದು, ಸ್ನಾನ ಮಾಡುವುದು, ಮೂತ್ರ ವಿಸರ್ಜನೆ ಮಾಡುವುದು, ಮಲವಿಸರ್ಜನೆ ಮಾಡುವುದು, ಬಟ್ಟೆ ಬದಲಾಯಿಸುವುದು, ಕೂದಲು ಬಾಚುವುದು, ಬಾಯಿ ತೊಳೆಯುವುದು ಅಥವಾ ಜನನಾಂಗದ ಪ್ರದೇಶವನ್ನು ಸ್ವಚ್ಛಗೊಳಿಸುವುದನ್ನು ತಪ್ಪಿಸಿ. ಇದು ಪುರಾವೆಗಳ ಸಂಗ್ರಹಕ್ಕೆ ಸಹಾಯ ಮಾಡಬಹುದು. 

ಪರೀಕ್ಷೆಯ ಸಮಯದಲ್ಲಿ ಸಂತ್ರಸ್ತರ  ಜೊತೆಯಲ್ಲಿ ಯಾರಾದರೂ ಹೋಗಬಹುದು. ಸಂಬಂಧಿಕರು/  ಸ್ನೇಹಿತರಲ್ಲಿ ಒಬ್ಬರು ಅಥವಾ  ಅವರ ಆಯ್ಕೆಯ ವ್ಯಕ್ತಿ, ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ  ಸಂತ್ರಸ್ತರ ಜೊತೆ ಹೋಗಬಹುದು. ಆ ಸ್ಥಳದಲ್ಲಿ ಅವರಿಗೆ ಆಸರೆಗಾಗಿ ತರಬೇತಿ ಪಡೆದ ವೃತ್ತಿಪರರನ್ನು ಸಹ ಒದಗಿಸಬಹುದು.

ವೈದ್ಯಕೀಯ ಪರೀಕ್ಷೆ: 

ಅವಲೋಕನ

ವೈದ್ಯಕೀಯ ಪರೀಕ್ಷೆಯ ಉದ್ದೇಶಗಳೇನು?

ವೈದ್ಯಕೀಯ ಪರೀಕ್ಷೆಯು ಎರಡು ಉದ್ದೇಶಗಳನ್ನು ಹೊಂದಿದೆ.

  1. ಮೊದಲನೆಯದು ವೈದ್ಯಕೀಯ ಆರೈಕೆಯನ್ನು ನೀಡುವುದು, ಇದು ಯಾವುದೇ ಲೈಂಗಿಕ ಆರೋಗ್ಯದ ಅಗತ್ಯತೆಗಳನ್ನು  ಉದಾ: ಗರ್ಭಧಾರಣೆ ಅಥವಾ STI ಗಳನ್ನು ಪರೀಕ್ಷಿಸುವ ಮೂಲಕ, ಪ್ರಿಸ್ಕ್ರಿಪ್ಷನ್‌ಗಳನ್ನು ಒದಗಿಸುವುದನ್ನು   ಅರ್ಥೈಸಬಲ್ಲದು. 
  2. ಎರಡನೆಯದು ನ್ಯಾಯಸ್ಥಾನಕ (ವೈದ್ಯಕೀಯ ಫೋರೆನ್ಸಿಕ್), ಅಂದರೆ ವೈದ್ಯರು ತಮ್ಮ ವೈದ್ಯಕೀಯ ಕೌಶಲ್ಯಗಳನ್ನು ಬಳಸಿ ಪೊಲೀಸ್ ತನಿಖೆಗೆ ಸಹಾಯ ಮಾಡುತ್ತಾರೆ, ಡಿಎನ್‌ಎ ಸ್ವ್ಯಾಬ್‌ಗಳನ್ನು ತೆಗೆದುಕೊಳ್ಳುವುದು, ಗಾಯಗಳನ್ನು ಗುರುತಿಸುವುದು ಮತ್ತು ಫೋಟೋ ತಗೆಯುವುದು, ಸಂತ್ರಸ್ತರ ಭಾವನಾತ್ಮಕ ಸ್ಥಿತಿಯನ್ನು ವಿವರಿಸುವುದು, ದೇಹದಲ್ಲಿ ವಿದೇಶಿ ವಸ್ತುಗಳನ್ನು ಕಂಡುಹಿಡಿಯುವುದು ಮತ್ತು ವಿಷಶಾಸ್ತ್ರ ಪರೀಕ್ಷೆಗಳನ್ನು ನಡೆಸುವುದು.

ವೈದ್ಯಕೀಯ ಪರೀಕ್ಷೆಗೆ 2-4 ಗಂಟೆ ತೆಗೆದುಕೊಳ್ಳಬಹುದು. 

ಯಾವ ಸಂದರ್ಭಗಳಲ್ಲಿ  ಸಂತ್ರಸ್ತರು  ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ? 

 ಸಂತ್ರಸ್ತರು ಮೂರು ಸಂದರ್ಭಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬಹುದು:

  1. ಸಂತ್ರಸ್ತರು  ದೌರ್ಜನ್ಯದ ಪರಿಣಾಮಗಳಿಗೆ ಚಿಕಿತ್ಸೆಗಾಗಿ ಆಸ್ಪತ್ರೆ/ಕ್ಲಿನಿಕ್ ಅನ್ನು ಸಂಪರ್ಕಿಸಿದಾಗ.
  2. ಪೋಲೀಸ್ ದೂರಿನ ನಂತರ ಪೋಲೀಸ್ ಅಪ್ಪಣೆ/ಕೋರಿಕೆ ಇದ್ದಾಗ; ಅಥವಾ
  3. ನ್ಯಾಯಾಲಯದ ನಿರ್ದೇಶನದ ನಂತರ ಅಥವಾ ನ್ಯಾಯಾಲಯದ ಆದೇಶದ ಮೇರೆಗೆ.

ವೈದ್ಯಕೀಯ ಪರೀಕ್ಷೆಗೆ FIR (ಎಫ್ಐಆರ್) ಕಡ್ಡಾಯವೇ? 

ವೈದ್ಯಕೀಯ ಪರೀಕ್ಷೆಗೆ FIR ಕಡ್ಡಾಯವಲ್ಲ. ಇದಲ್ಲದೆ, ಸಂತ್ರಸ್ತರು ದೂರು ಸಲ್ಲಿಸದಿರಲು ಆಯ್ಕೆ ಮಾಡಬಹುದು. ಆದಷ್ಟು ಬೇಗ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಸೂಕ್ತ. ವೈದ್ಯಕೀಯ ವೃತ್ತಿಪರರು  ಸಂತ್ರಸ್ತರಿಗೆ ದೌರ್ಜನ್ಯದ ವಿರುದ್ಧ ದೂರು ಸಲ್ಲಿಸುವ ಹಕ್ಕನ್ನು ಸಹ ತಿಳಿಸುತ್ತಾರೆ. ಸಂತ್ರಸ್ತರು ದೂರು ಸಲ್ಲಿಸಲು ಬಯಸದಿದ್ದರೆ, ವೈದ್ಯಕೀಯ ಸಿಬ್ಬಂದಿ ಸಂತ್ರಸ್ತರ  ತಿಳುವಳಿಕೆಯುಳ್ಳ ನಿರಾಕರಣೆಯನ್ನು ದಾಖಲಿಸಬೇಕು. ಆದಾಗ್ಯೂ, ಘಟನೆಯ ಬಗ್ಗೆ ಪೊಲೀಸರಿಗೆ ವರದಿ ಮಾಡಲು ಅವರು ಕರ್ತವ್ಯ ಬದ್ಧರಾಗಿದ್ದಾರೆ. 

ವೈದ್ಯಕೀಯ ಪರೀಕ್ಷೆಯನ್ನು ಯಾರು ನಡೆಸುತ್ತಾರೆ? 

ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ನೋಂದಾಯಿತ ವೈದ್ಯರು ಪರೀಕ್ಷೆಯನ್ನು ನಡೆಸಬಹುದು. ಪರೀಕ್ಷೆಯ ಪ್ರತಿ ಹಂತಕ್ಕೂ ಸಂತ್ರಸ್ತರ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕು. ಸಂತ್ರಸ್ತರು ಅದಕ್ಕೆ ಒಪ್ಪಿಗೆ ನೀಡದಿದ್ದರೆ ವೈದ್ಯರು ನಿರ್ದಿಷ್ಟ ಹಂತವನ್ನು ಬಿಟ್ಟುಬಿಡಬೇಕು. ಮಹಿಳಾ ವೈದ್ಯರು ಪರೀಕ್ಷೆಯನ್ನು ನಡೆಸುವುದು ಎಂದು ಸಲಹೆ ನೀಡಲಾಗಿದೆ. ಮಹಿಳಾ ವೈದ್ಯರು ಲಭ್ಯವಿಲ್ಲದಿದ್ದರೆ, ಸಂತ್ರಸ್ತರ ಒಪ್ಪಿಗೆಯೊಂದಿಗೆ ಪುರುಷ ವೈದ್ಯರು ಪರೀಕ್ಷೆಯನ್ನು ನಡೆಸಬಹುದು. ಸಂತ್ರಸ್ತರು ಪುರುಷ ವೈದ್ಯರು ಪರೀಕ್ಷೆಯನ್ನು ನಡೆಸಲು ಆಯ್ಕೆ ಮಾಡಬಹುದು.

ವೈದ್ಯಕೀಯ ಪರೀಕ್ಷೆ ಉಚಿತವೇ? 

ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರು ತಮ್ಮ ಬಳಿಗೆ ಬಂದು ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸುವವರಿಗೆ ಪ್ರಥಮ ಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕಾಗುತ್ತದೆ. 

ನೆನಪಿರಲಿ….

ಸಂತ್ರಸ್ತರು  ಪರೀಕ್ಷೆಯನ್ನು ಯಾವುದೇ ಸಮಯದಲ್ಲಿ ನಿಲ್ಲಿಸಲು, ವಿರಾಮಗೊಳಿಸಲು ಅಥವಾ ಹೆಜ್ಜೆಯನ್ನು ಬಿಟ್ಟುಬಿಡಲು ಆಯ್ಕೆ ಮಾಡಬಹುದು

ವೈದ್ಯಕೀಯ ಪರೀಕ್ಷೆ 

ವಿಧಾನ 

ವೈದ್ಯಕೀಯ ಪರೀಕ್ಷೆಯ ವಿಧಾನ ಏನು?

  1. ತಕ್ಷಣದ ಆರೈಕೆಯ ಅಗತ್ಯವಿರುವ ಯಾವುದೇ ಗಾಯಗಳಿಗೆ ಚಿಕಿತ್ಸೆ ನೀಡುವ ಮೂಲಕ ಪರೀಕ್ಷೆಯು ಪ್ರಾರಂಭವಾಗುತ್ತದೆ.
  2. ನಂತರ, ಸಂತ್ರಸ್ತರ  ವೈದ್ಯಕೀಯ ಇತಿಹಾಸವನ್ನು ವೈದ್ಯರು ತಿಳಿದುಕೊಳ್ಳುತ್ತಾರೆ.
  3. ಅವರ ದೇಹ ಅಥವಾ ಬಟ್ಟೆಯ ಮೇಲೆ ಸಾಕ್ಷ್ಯವನ್ನು ತೋರಿಸುವಂತಹ ಸ್ಥಳಗಳನ್ನು ಗುರುತಿಸುವುದು ಸೇರಿದಂತೆ ಏನಾಯಿತು ಎಂಬುದರ ವಿವರಗಳನ್ನು ಸಂಗ್ರಹಿಸಲಾಗುತ್ತದೆ.
  4. ಮುಂದೆ, ವೈದ್ಯಕೀಯ ವೃತ್ತಿಪರರು ತಲೆಯಿಂದ ಕಾಲ್ಬೆರಳು ತನಕ ಪರೀಕ್ಷೆಯನ್ನು ನೀಡಬಹುದು, ಇದು ಬಾಯಿ, ಯೋನಿ ಮತ್ತು ಗುದದ್ವಾರದ ಆಂತರಿಕ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.
  5. ಸಂತ್ರಸ್ತರಿಂದ ಸಾಕ್ಷ್ಯಕ್ಕಾಗಿ ರಕ್ತ, ಮೂತ್ರ, ದೇಹ ಮತ್ತು ಕೂದಲಿನ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ.
  6. ಗಾಯಗಳನ್ನು ದಾಖಲಿಸಲು ಆರೋಗ್ಯ ಆರೈಕೆ ಪೂರೈಕೆದಾರರು ಸಂತ್ರಸ್ತರ  ದೇಹದ ಛಾಯಾಚಿತ್ರಗಳನ್ನು ಸಹ ತೆಗೆದುಕೊಳ್ಳಬಹುದು. 
  7. ಅಗತ್ಯವಿದ್ದರೆ ಸಂತ್ರಸ್ತರಿಗೆ  STI ತಡೆಗಟ್ಟುವಿಕೆ ಚಿಕಿತ್ಸೆ ಅಥವಾ ತುರ್ತು ಗರ್ಭನಿರೋಧಕವನ್ನು ಒದಗಿಸಲಾಗುತ್ತದೆ.
  8. ಹೆಚ್ಚುವರಿಯಾಗಿ, ಸಂತ್ರಸ್ತರಿಗೆ  ಬಲವಂತವಾಗಿ ಮಾದಕ ದ್ರವ್ಯ ನೀಡಿರುವ ಸಂದರ್ಭಗಳಲ್ಲಿ, ಆರೋಗ್ಯ ಆರೈಕೆ ಪೂರೈಕೆದಾರರು ಔಷಧ-ಸೌಕರ್ಯ(ಮಾದಕ ದ್ರವ್ಯ) ಕಿಟ್ ಅನ್ನು ನಡೆಸಬಹುದು, ಇದು ಪರೀಕ್ಷೆಗಾಗಿ ರಕ್ತ ಮತ್ತು ಮೂತ್ರದ ಮಾದರಿಗಳನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ. 
  9. ಸಂತ್ರಸ್ತರು ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳು (STI), HIV, ಹೆಪಟೈಟಿಸ್ ಬಿ ಪರೀಕ್ಷೆಗೆ ಒಳಗಾಗುತ್ತಾರೆ. 

ಯಾವ ವೈದ್ಯಕೀಯ ಇತಿಹಾಸವನ್ನು ಸಂಗ್ರಹಿಸಲಾಗುತ್ತದೆ? 

ದೌರ್ಜನ್ಯದ ನಂತರ, ವೈದ್ಯರು ಸಂತ್ರಸ್ತರ ಕೆಳಕಂಡ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಾರೆ:

  1. ಬಟ್ಟೆ ಬದಲಾಯಿಸುವುದು, ಬಟ್ಟೆ ಶುಚಿಗೊಳಿಸುವುದು
  2. ಸ್ನಾನ / ತಲೆ ಸ್ನಾನ
  3. ಜನನಾಂಗಗಳನ್ನು ತೊಳೆಯುವುದು, ಋತುಚಕ್ರ, ಮೂತ್ರ ವಿಸರ್ಜನೆ, ಮಲವಿಸರ್ಜನೆ
  4. ಬಾಯಿ ತೊಳೆಯುವುದು, ಕುಡಿಯುವುದು, ತಿನ್ನುವುದು
  5. ವ್ಯಾಕ್ಸಿನೇಷನ್, ಇತ್ತೀಚಿನ ಲೈಂಗಿಕ ಚಟುವಟಿಕೆ

ಈ ಮಾಹಿತಿಯು ಸಂತ್ರಸ್ತರಿಂದ ಸಂಗ್ರಹಿಸಿದ ಸಾಕ್ಷ್ಯದ ಮೇಲೆ ಪ್ರಭಾವ ಬೀರುತ್ತದೆ.

ಆದಾಗ್ಯೂ, ಲೈಂಗಿಕ ಜೊತೆಗಾರರ ಸಂಖ್ಯೆ ಅಥವಾ ಹಿಂದಿನ ಲೈಂಗಿಕ ಅನುಭವಗಳ ಕುರಿತಾದ ಮಾಹಿತಿಯು ಯಾವುದೇ ರೀತಿಯಲ್ಲಿ ದೌರ್ಜನ್ಯಕ್ಕೆ ಸಂಬಂಧಿಸದ ಹೊರತು ಅಗತ್ಯವಿಲ್ಲ.

ಎರಡು-ಬೆರಳಿನ ಪರೀಕ್ಷೆಯು ಕಾನೂನುಬದ್ಧವಾಗಿದೆಯೇ?

ಎರಡು ಬೆರಳಿನ ಪರೀಕ್ಷೆಯನ್ನು PV (ಪರ್ ವೆಜೈನಲ್) ಪರೀಕ್ಷೆ ಅಥವಾ ‘ಕನ್ಯತ್ವ ಪರೀಕ್ಷೆ’ ಎಂದೂ ಕರೆಯುತ್ತಾರೆ, ಪರೀಕ್ಷಿಸುವ ವೈದ್ಯರು ಮಹಿಳೆಯ ಯೋನಿಯೊಳಗೆ ಅವರ ಎರಡು ಬೆರಳುಗಳು ಒಳಗಿಟ್ಟು ಕನ್ಯಾಪೊರೆ ಇರುವಿಕೆ ಅಥವಾ ಅನುಪಸ್ಥಿತಿಯನ್ನು ಮತ್ತು ಅತ್ಯಾಚಾರದಿಂದ ಸಂತ್ರಸ್ತರ  ಯೋನಿಯ ಸಡಿಲತೆ ಪರಿಶೀಲಿಸುವ ಅಭ್ಯಾಸವಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದ ವ್ಯೆದ್ಯಕೀಯಕಾನೂನಿನ ಮಾರ್ಗಸೂಚಿಗಳ ಪ್ರಕಾರ ವೈದ್ಯರು ಭಾರತದಲ್ಲಿ ಎರಡು ಬೆರಳು ಪರೀಕ್ಷೆಯನ್ನು ಕೈಗೊಳ್ಳುವಂತಿಲ್ಲ.

ಇದು ಸಂತ್ರಸ್ತರ ಗಾಯಗಳು ಮತ್ತು ಸೋಂಕನ್ನು ಪರೀಕ್ಷಿಸಲು ವಿಸ್ತರಿಸಿದ ವೈದ್ಯಕೀಯ ಚಿಕಿತ್ಸೆಯ ಭಾಗವಾದ ಯೋನಿಯ ಆಂತರಿಕ ಪರೀಕ್ಷೆಗಿಂತ ಭಿನ್ನವಾಗಿದೆ.   

ವೈದ್ಯಕೀಯ ಪರೀಕ್ಷೆ 

ವಿಧಿವಿಜ್ಞಾನ ಸಾಕ್ಷ್ಯ 

ವಿಧಿವಿಜ್ಞಾನ ಸಾಕ್ಷ್ಯವನ್ನು ಹೇಗೆ ಸಂಗ್ರಹಿಸಲಾಗುತ್ತದೆ?

  1. ವೀರ್ಯ, ಲಾಲಾರಸ, ಕೂದಲು ಮತ್ತು ಬೆರಳಿನ ಉಗುರಿನ ತುಣುಕುಗಳನ್ನು ಡಿಎನ್‌ಎಗಾಗಿ ಅಧ್ಯಯನ ಮಾಡಲಾಗುತ್ತದೆ.ಇವು ಶಂಕಿತರನ್ನು ಗುರುತಿಸಬಹುದು ಮತ್ತು ಅವರನ್ನು ಸಂತ್ರಸ್ತರಿಗೆ ಅಥವಾ ಅಪರಾಧದ ಸ್ಥಳಕ್ಕೆ ಲಿಂಕ್ ಮಾಡಬಹುದು.
  2. ಆಂತರಿಕ ಮತ್ತು ಬಾಹ್ಯ ಗಾಯಗಳ ಪರೀಕ್ಷೆಯೂ ನಡೆಯುತ್ತದೆ. ಗಾಯಗಳು ದೌರ್ಜನ್ಯಕಾರರ ಬಲ ಅಥವಾ ಹಿಂಸೆಯ ಬಳಕೆಯನ್ನು ಮತ್ತು ಸಂತ್ರಸ್ತರ  ಪ್ರತಿರೋಧವನ್ನು ಸೂಚಿಸಬಹುದು.
  3. ರಕ್ತ ಮತ್ತು ಮೂತ್ರವು ಸಂತ್ರಸ್ತರು ಮದ್ಯ ಅಥವಾ ಮಾದಕ ವಸ್ತು ಪ್ರಭಾವದ ಅಡಿಯಲ್ಲಿದ್ದರೆ ಮತ್ತು ಆ ಕಾರಣದಿಂದ ಒಪ್ಪಿಗೆ ನೀಡಲು ಸಾಧ್ಯವಾಗಲಿಲ್ಲ ಎಂಬುದನ್ನು ತೋರಿಸುತ್ತದೆ.
  4. ಬಟ್ಟೆಯ ನಾರುಗಳು, ಪರ್ಣಾಲಂಕಾರ ಮತ್ತು ಮಣ್ಣಿನಂತಹ ವಿದೇಶಿ ವಸ್ತುಗಳು ಆರೋಪಿಯನ್ನು ಅಪರಾಧಕ್ಕೆ ಸಂಬಂಧಿಸಬಹುದು. ನಡೆದ ಘಟನೆಗಳ ಆವೃತ್ತಿಯನ್ನು ಬೆಂಬಲಿಸಲು ಮತ್ತು ದೃಢೀಕರಿಸಲು ಸಾಧ್ಯವಾದಷ್ಟು ಪುರಾವೆಗಳನ್ನು ಸಂಗ್ರಹಿಸಲು ಇದನ್ನು ಮಾಡಲಾಗುತ್ತದೆ. 

ಸಂಗ್ರಹಿಸಿದ ಪುರಾವೆಗಳನ್ನು/ ಸಾಕ್ಷ್ಯವನ್ನು ಕಲುಷಿತಗೊಳಿಸಲಾಗುವುದಿಲ್ಲ ಅಥವಾ ಹಾಳುಮಾಡಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಶುದ್ಧವಾದ ತೇವವಿಲ್ಲದ ನಿರ್ಮಲಗೊಳಿಸಿದ ಪ್ಯಾಕ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಸ್ಟಿಕ್ಕರ್‌ನಿಂದ ಮುಚ್ಚಲಾಗುತ್ತದೆ.

ಸಂತ್ರಸ್ತರು  ಸಾಕ್ಷ್ಯ ಸ್ವಚ್ಛಗೊಳಿಸಿದರೆ ಏನಾಗುತ್ತದ ? 

ಸಂತ್ರಸ್ತರು  ಸ್ನಾನ ಮಾಡಿದರೂ ಅಥವಾ ತಮ್ಮನ್ನ ಸ್ವಚ್ಛಗೊಳಿಸಿದರೂ ವೈದ್ಯಕೀಯ ಪರೀಕ್ಷೆಗಳು  ಸಾಧ್ಯವಾಗಿರುತ್ತದೆ. ಆದಾಗ್ಯೂ, ಸಾಧ್ಯವಾದರೆ, ಸ್ನಾನ ಮಾಡುವುದು, ಕೂದಲನ್ನು ಬಾಚಿಕೊಳ್ಳುವುದು, ಹಲ್ಲುಜ್ಜುವುದು, ಬಾಯಿ ತೊಳೆಯುವುದು, ಮೂತ್ರ ವಿಸರ್ಜನೆ, ಮಲವಿಸರ್ಜನೆ, ಬಟ್ಟೆ ಬದಲಾಯಿಸುವುದು ಮತ್ತು ಜನನಾಂಗದ ಸ್ಥಳ ಅಥವಾ ದೌರ್ಜನ್ಯದ ಇತರ ಸ್ಥಳಗಳನ್ನು ಸ್ವಚ್ಛಗೊಳಿಸುವದು ಮಾಡದಿರಿ, ಇದು ಸಾಕ್ಷ್ಯವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. 72 ಗಂಟೆಗಳ (3 ದಿನಗಳು) ನಂತರ ಸಾಕ್ಷ್ಯವನ್ನು ಕಂಡುಹಿಡಿಯುವ ಸಾಧ್ಯತೆಯು ಕಡಿಮೆಯಾಗುತ್ತದೆ. ಸಮಯ ಕಳೆದಿರುವುದರ ಬಗ್ಗೆ ಅಸ್ಪಷ್ಟತೆ ಇರುವ ಸಂದರ್ಭದಲ್ಲಿ ಸಾಮಾನ್ಯವಾಗಿ ಸಾಕ್ಷ್ಯವನ್ನು 96 ಗಂಟೆಗಳವರೆಗೆ ಸಂಗ್ರಹಿಸಲಾಗುತ್ತದೆ. 

ವಿಧಿವಿಜ್ಞಾನ ಸಾಕ್ಷ್ಯಗಳಿಲ್ಲದ ಪ್ರಕರಣಗಳಲ್ಲಿ ಏನಾಗುತ್ತದೆ? 

ವೈದ್ಯಕೀಯ ಪರೀಕ್ಷೆಯಿಂದ ಒಪ್ಪಿಗೆಯ ಉಪಸ್ಥಿತಿ ಅಥವಾ ಅನುಪಸ್ಥಿತಿಯನ್ನು ಖಚಿತಪಡಿಸಲು ಸಾಧ್ಯವಿಲ್ಲ. ಅದು ಸಂತ್ರಸ್ತರು  ಮಾತ್ರ ನಿಜವಾಗಿಯೂ ಹೇಳಬಲ್ಲರು. ಒಂದು ಕೃತ್ಯವು ಅತ್ಯಾಚಾರವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವಲ್ಲಿ, ಒಪ್ಪಿಗೆಯು ಪ್ರಮುಖ ಅಂಶವಾಗಿದೆ. ಯಾವುದೇ ಸಾಕ್ಷ್ಯಗಳು ಕಂಡುಬಂದಿಲ್ಲವಾದರೆ, ಅಪರಾಧ ನಡೆದಿಲ್ಲ ಎಂದು ಅರ್ಥವಲ್ಲ. ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸುತ್ತಾರೆ. 

ವಿಧಿವಿಜ್ಞಾನ ಸಾಕ್ಷ್ಯದ ಏಕೈಕ ರೂಪ ವೀರ್ಯವೇ? 

ಈಗಲೂ ವೀರ್ಯವನ್ನು ಕಂಡುಹಿಡಿಯುವುದು ಯಾವುದೇ ಪರೀಕ್ಷೆಯ ಪ್ರಾಥಮಿಕ ಕೇಂದ್ರವಾಗಿದ್ದರೂ, ಡಿಎನ್‌ಎ ತಂತ್ರಜ್ಞಾನದಲ್ಲಿನ ಪ್ರಗತಿಯ ಕಾರಣದಿಂದ ಇತರ ಆನುವಂಶಿಕ ಪುರಾವೆಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಬಳಸಲಾಗುತ್ತದೆ. 

ದಾಳಿಕಾರ ಮುಟ್ಟಿದ, ಕಚ್ಚಿದ ಅಥವಾ ಮುತ್ತು ಕೊಟ್ಟಿದ ಶರೀರದ ಸ್ಥಳಗಳ ಹೀರೊತ್ತಿಗೆ ಮಾದರಿಗಳು, ಸಂತ್ರಸ್ತರ  ಉಗುರುಗಳಲ್ಲಿ ಡಿಎನ್ಎ ಇರುವ ಸಾಧ್ಯತೆ ಇದ್ದಲ್ಲಿ ಅವುಗಳ ಕತ್ತರಿಸಿದ ಭಾಗಗಳು, ಮತ್ತು ನೆತ್ತಿಯ ಮತ್ತು ಪ್ಯುಬಿಕ್ ಕೂದಲಿನ ಸಂಗ್ರಹಣೆಯು ಎಲ್ಲಾ ಸಂಭಾವ್ಯ ಸಾಕ್ಷ್ಯಾಧಾರಗಳ ಮೂಲಗಳು ಆಗಿರುತ್ತವೆ. ಇವು ಒಬ್ಬ ಅತ್ಯಾಚಾರಿಯನ್ನು ಗುರುತಿಸಲು ಮತ್ತು ಶಿಕ್ಷೆಗೆ ಗುರಿಪಡಿಸಲು ಸಹಾಯ ಮಾಡುತ್ತವೆ. 

ಕಾನೂನು ಪ್ರಕ್ರಿಯೆ 

ಆರೋಗ್ಯ ಆರೈಕೆ ಪೂರೈಕೆದಾರರ ಹತ್ತಿರ 

ಸಂತ್ರಸ್ತರನ್ನು ನೋಡಿಕೊಳ್ಳುವ ಆರೋಗ್ಯ ವೃತ್ತಿಪರರ ಕರ್ತವ್ಯಗಳು ಯಾವುವು?

ಸಂತ್ರಸ್ತರು  ವೈದ್ಯಕೀಯ ಅಥವಾ ಇತರ ರೀತಿಯ ಆಸರೆಗಾಗಿ ಆಸ್ಪತ್ರೆಗಳು/ಚಿಕಿತ್ಸಾಲಯಗಳಿಗೆ ಬಂದಾಗ ಆರೋಗ್ಯ ವೃತ್ತಿಪರರು (ವೈದ್ಯರು, ದಾದಿಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿ) ಈ ಕೆಳಗಿನ ಕರ್ತವ್ಯಗಳನ್ನು ಹೊಂದಿರುತ್ತಾರೆ:

  1. ಸಂತ್ರಸ್ತರಿಗೆ  ಸರಳ ಮತ್ತು ಅರ್ಥವಾಗುವ ಭಾಷೆಯಲ್ಲಿ ವಿವಿಧ ಕಾರ್ಯವಿಧಾನಗಳು ಮತ್ತು ಅವುಗಳ ಕ್ರಮಗಳ ತಾರ್ಕಿಕತೆಯನ್ನು ವಿವರಿಸುವುದು.
  2. ಮಕ್ಕಳು, ಅಂಗವಿಕಲ ವ್ಯಕ್ತಿಗಳು, LGBTI ವ್ಯಕ್ತಿಗಳು, ಲೈಂಗಿಕ ಕಾರ್ಯಕರ್ತರು ಅಥವಾ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳಂತಹ ಅಂಚಿನಲ್ಲಿರುವ ಗುಂಪುಗಳಿಂದ ಸಂತ್ರಸ್ರರೊಂದಿಗೆ ವ್ಯವಹರಿಸುವಾಗ ವಿಶೇಷ ಹೆಜ್ಜೆಗಳನ್ನು ಅನುಸರಿಸುವುದು.
  3. ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಸಂತ್ರಸ್ತರಿಗೆ ಅವರು ಸಂಪೂರ್ಣ ಇತಿಹಾಸವನ್ನು ಆರೋಗ್ಯ ವೃತ್ತಿಪರರಿಗೆ ಭಯವಿಲ್ಲದೆ ಬಹಿರಂಗಪಡಿಸಬೇಕು ಎಂದು ವಿವರಿಸುವುದು. ಈ ಹಂತದಲ್ಲಿ, ಅಸ್ತಿತ್ವದಲ್ಲಿರುವ ಯಾವುದೇ ವೈದ್ಯಕೀಯ ಇತಿಹಾಸ ಅಥವಾ ಮಾಹಿತಿಯನ್ನು ಮರೆಮಾಡದಂತೆ ಸಂತ್ರಸ್ತರನ್ನು ಪ್ರೋತ್ಸಾಹಿಸಲಾಗುತ್ತದೆ.
  4. ಜನನಾಂಗದ ಪರೀಕ್ಷೆಯು ಅಹಿತಕರವಾಗಿರಬಹುದು ಆದರೆ ಕಾನೂನು ಉದ್ದೇಶಗಳಿಗಾಗಿ ಅವಶ್ಯಕವಾಗಿದೆ ಎಂದು ಸಂತ್ರಸ್ತರಿಗೆ  ವಿವರಿಸುವುದು.
  5. ಕ್ಷ-ಕಿರಣಗಳಂತಹ ಹೆಚ್ಚುವರಿ ಕಾರ್ಯವಿಧಾನಗಳನ್ನು ಕೈಗೊಳ್ಳುವ ಅಗತ್ಯತೆಯ ಬಗ್ಗೆ ಸಂತ್ರಸ್ತರಿಗೆ ತಿಳಿಸಿ, ಈ ಕಾರಣದಿಂದ ಅವರು ವೈದ್ಯಕೀಯ ಸೌಲಭ್ಯದಲ್ಲಿರುವ ಇತರ ವಿಭಾಗಗಳಿಗೆ ಭೇಟಿ ನೀಡಬೇಕಾಗಬಹುದು ಎಂದು ತಿಳಿಸುವುದು. 

ಆಸ್ಪತ್ರೆಗಳ ಕರ್ತವ್ಯಗಳೇನು? 

ಪ್ರತಿ ಆಸ್ಪತ್ರೆಯು ಲೈಂಗಿಕ ದೌರ್ಜನ್ಯದ ಪ್ರಕರಣಗಳ ನಿರ್ವಹಣೆಗಾಗಿ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನವನ್ನು (SOP) ಹೊಂದಿರಬೇಕು: 

    1. ಮಹಿಳಾ ವೈದ್ಯರ ಅನುಪಸ್ಥಿತಿಯ ಕಾರಣದಿಂದ ಪರೀಕ್ಷೆಯನ್ನು ನಿರಾಕರಿಸಬಾರದು ಅಥವಾ ವಿಳಂಬ ಮಾಡಬಾರದು. ಪುರುಷ ವೈದ್ಯರು ಪರೀಕ್ಷಿಸುತ್ತಿದ್ದರೆ, ಅಲ್ಲಿ ಮಹಿಳಾ ಅಟೆಂಡರ್ ಉಪಸ್ಥಿತಿಯಲ್ಲಿ ಇರಬೇಕು. ಅಪ್ರಾಪ್ತ ವಯಸ್ಕರಿಗೆ/ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಅವನ/ಅವಳ ಪೋಷಕರು/ಪಾಲಕರು/ಸಂತ್ರಸ್ತರು  ನಂಬುವಂತಹ ಯಾವುದೇ ವ್ಯಕ್ತಿ ಹಾಜರಿರಬಹುದು.
    2. ಮಂಗಳಮುಖಿ/ಇಂಟರ್ಸೆಕ್ಸ್ ವ್ಯಕ್ತಿಯ ಸಂದರ್ಭದಲ್ಲಿ, ಸಂತ್ರಸ್ತರು  ಮಹಿಳಾ ವೈದ್ಯರಿಂದ ಪರೀಕ್ಷಿಸಲು ಬಯಸುತ್ತಾರೆಯೇ ಅಥವಾ ಮಹಿಳಾ ಅಟೆಂಡೆಂಟ್ ಸಮ್ಮುಖದಲ್ಲಿ ಪುರುಷ ವೈದ್ಯರಿಂದ ಪರೀಕ್ಷಿಸಲು ಬಯಸುತ್ತಾರೆಯೇ ಎಂದು ಆಯ್ಕೆ ಮಾಡಿಕೊಳ್ಳಬಹುದು.
    3. ಸಂತ್ರಸ್ತರೊಂದಿಗೆ ಸಮಾಲೋಚನೆಯ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಪರೀಕ್ಷಾ ಕೊಠಡಿಯಲ್ಲಿ ಇರುವಂತಿಲ್ಲ. ಸಂತ್ರಸ್ತರು ವಿನಂತಿಸಿದರೆ, ಆಕೆಯ ಸಂಬಂಧಿ ಪರೀಕ್ಷೆಯ ಸಮಯದಲ್ಲಿ ಉಪಸ್ಥಿತರಿರಬಹುದು.
    4. ಪರೀಕ್ಷೆ ನಡೆಸಲು ಮತ್ತು ಸಾಕ್ಷ್ಯ ಸಂಗ್ರಹಿಸಲು ವಿಳಂಬ ಮಾಡಬಾರದು.
    5. ಚಿಕಿತ್ಸೆ ಮತ್ತು ಅಗತ್ಯ ವೈದ್ಯಕೀಯ ತನಿಖೆಗಳನ್ನು ಒದಗಿಸುವುದು ಪರೀಕ್ಷಿಸುವ ವೈದ್ಯರ ಪ್ರಧಾನ ಜವಾಬ್ದಾರಿಯಾಗಿರುತ್ತದೆ. ಚಿಕಿತ್ಸೆ ನೀಡಲು ದಾಖಲಾತಿ, ಸಾಕ್ಷ್ಯ ಸಂಗ್ರಹ ಅಥವಾ ಪೊಲೀಸ್ ದೂರು ದಾಖಲಿಸುವುದು ಕಡ್ಡಾಯವಲ್ಲ.
    6. ಲೈಂಗಿಕ ಹಿಂಸಾಚಾರದಿಂದ ಸಂತ್ರಸ್ತರ  ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ  ಗೌಪ್ಯ ಕೋಣೆಯಲ್ಲಿ ಇತಿಹಾಸ ತೆಗೆದುಕೊಳ್ಳುವುದು ಮತ್ತು ಪರೀಕ್ಷೆಯನ್ನು ಸಂಪೂರ್ಣ ಗೌಪ್ಯವಾಗಿ ನಡೆಸಬೇಕು.
    7. ಪರೀಕ್ಷೆಯು ಪೂರ್ಣಗೊಂಡ ನಂತರ ಸಂತ್ರಸ್ತರ  ಸ್ವಂತ ಬಟ್ಟೆಗಳನ್ನು ಸಾಕ್ಷಿಯಾಗಿ ತೆಗೆದುಕೊಂಡಿದ್ದರೆ ಆಸ್ಪತ್ರೆಯಿಂದ ನೀಡಿದ ಪ್ರಸಾಧನ ಸಾಮಗ್ರಿ ಮತ್ತು ಬಟ್ಟೆಗಳನ್ನು ಬಳಸಿ ಶುಭ್ರಗೊಳಿಸಿಕೊಳ್ಳಲು ಅನುಮತಿ ನೀಡಬೇಕು. ಯಾವುದೇ ಶುಲ್ಕವಿಲ್ಲದೆ ಅಂತಹ ಬಟ್ಟೆಗಳನ್ನು ನೀಡಲು ಆಸ್ಪತ್ರೆಯು ಬದ್ಧವಾಗಿದೆ.
    8. ಸಂತ್ರಸ್ತರಿಗೆ  ವೀಕ್ಷಣೆ ಅಥವಾ ಚಿಕಿತ್ಸೆಗಾಗಿ ಒಳಾಂಗಣದಲ್ಲಿ ಉಳಿಯುವ ಅಗತ್ಯವಿಲ್ಲದಿದ್ದರೆ, ದಾಖಲಾತಿ ಅನಗತ್ಯವಾಗಿರುತ್ತದೆ

 

ನೆನಪಿರಲಿ…

ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರು ಎಲ್ಲಾ ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯತ್ತಕ್ಕದ್ದು. ಸಂತ್ರಸ್ತರು  ಎಲ್ಲಾ ದಾಖಲೆಗಳ ನಕಲನ್ನು ಉಚಿತವಾಗಿ ಪಡೆಯಬಹುದು (ವೈದ್ಯಕೀಯ-ಕಾನೂನಿನ ಪರೀಕ್ಷೆ ಮತ್ತು ಚಿಕಿತ್ಸೆ ಸೇರಿದಂತೆ). 

ಸಂತ್ರಸ್ತರು ಮೊದಲು ಪೊಲೀಸರಿಗೆ ಹೋಗದೆ ಆಸ್ಪತ್ರೆಗೆ ವರದಿ ಮಾಡಿದಾಗ ಮಾರ್ಗಸೂಚಿಗಳು. 

ಅಂತಹ ಸಂದರ್ಭಗಳಲ್ಲಿ ಆರೋಗ್ಯ ವೃತ್ತಿಪರರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಮಾರ್ಗಸೂಚಿಗಳನ್ನು ಕೆಳಗೆ ನೀಡಲಾಗಿದೆ:

  1. ಸಂತ್ರಸ್ತರು ಪೊಲೀಸರಿಲ್ಲದೆ ಆಸ್ಪತ್ರೆಗೆ ಬಂದಿದ್ದರೆ, ಸಂತ್ರಸ್ತ ರು/ಪೋಷಕರು/ಪಾಲಕರ (ವಯಸ್ಸಿಗೆ ಅನುಗುಣವಾಗಿ) ಒಪ್ಪಿಗೆಯೊಂದಿಗೆ ಚಿಕಿತ್ಸೆ ನೀಡಲು ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲು ಆಸ್ಪತ್ರೆಯು ಬದ್ಧವಾಗಿದೆ
  2. ಪೊಲೀಸರು ಬಂದರೂ ಬಾರದಿದ್ದರೂ ಆಸ್ಪತ್ರೆಯವರು ತಡಮಾಡದೆ ತಕ್ಷಣ ಸಂತ್ರಸ್ತರಿಗೆ  ಚಿಕಿತ್ಸೆ ನೀಡಬೇಕು. ವೈದ್ಯಕೀಯ ಸಾಕ್ಷ್ಯಗಳ ಸಂಗ್ರಹವು ಸಾಧ್ಯವಾದಷ್ಟು ಬೇಗ ನಡೆಯಬೇಕು.
  3. ಒಬ್ಬ ವ್ಯಕ್ತಿಯು ಎಫ್‌ಐಆರ್ ಇಲ್ಲದೆ ಸ್ವಂತವಾಗಿ ಬಂದಿದ್ದರೆ, ಅವರು ದೂರು ಸಲ್ಲಿಸಲು ಬಯಸಬಹುದು ಅಥವಾ ಬಯಸದೇ ಇರಬಹುದು ಆದರೆ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಅಂತಹ ಸಂದರ್ಭಗಳಲ್ಲಿಯೂಸಹ ವೈದ್ಯರು ಕಾನೂನಿನ ಪ್ರಕಾರ ಪೊಲೀಸರಿಗೆ ತಿಳಿಸಲು ಬದ್ಧರಾಗಿರುತ್ತಾರೆ.
  4. ನ್ಯಾಯಾಲಯ ಅಥವಾ ಪೊಲೀಸರು ಸಂತ್ರಸ್ತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಒತ್ತಾಯಿಸಲು ಸಾಧ್ಯವಿಲ್ಲ. ಜೀವಕ್ಕೆ ಅಪಾಯವಿರುವ ಸಂದರ್ಭಗಳಲ್ಲಿ ಮಾತ್ರ ವೈದ್ಯರು IPC ಯ ಸೆಕ್ಷನ್ 92 (BNS ಸೆಕ್ಷನ್ 30)ರ ಪ್ರಕಾರ ಒಪ್ಪಿಗೆಯಿಲ್ಲದೆ ಚಿಕಿತ್ಸೆಯನ್ನು ಪ್ರಾರಂಭಿಸಬಹುದು.
  5. ಸಂತ್ರಸ್ತರು  ಪೊಲೀಸ್ ಪ್ರಕರಣವನ್ನು ಮುಂದುವರಿಸಲು ಬಯಸದಿದ್ದರೆ, ವ್ಯೆದ್ಯಕೀಯ-ಕಾನೂನಿನ ಪ್ರಕರಣವನ್ನು (MLC) ದಾಖಲಿಸಲಾಗುತ್ತದೆ. ಎಫ್‌ಐಆರ್ ದಾಖಲಿಸಲು ನಿರಾಕರಿಸುವ ಸಂತ್ರಸ್ತರ  ಹಕ್ಕಿನ ಬಗ್ಗೆ ಪೊಲೀಸರು ಅಥವಾ ವೈದ್ಯಕೀಯ ವೃತ್ತಿಪರರು ಸಂತ್ರಸ್ತರಿಗೆ  ತಿಳಿಸಬೇಕು. ಅಂತಹ ಸಂದರ್ಭಗಳಲ್ಲಿ ತಿಳುವಳಿಕೆಯುಳ್ಳ ನಿರಾಕರಣೆಯನ್ನು ದಾಖಲಿಸಬೇಕು.
  6. ಪೊಲೀಸರು ವೈದ್ಯಕೀಯ-ಕಾನೂನಿನ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು ಮತ್ತು ದೂರು ದಾಖಲಿಸಬಹುದಾದ ಪೊಲೀಸ್ ಠಾಣೆಯ ವಿವರಗಳೊಂದಿಗೆ ಸಂತ್ರಸ್ತರಿಗೆ  ಪ್ರಕರಣದ ಸಂಖ್ಯೆಯನ್ನು ಒದಗಿಸಬೇಕು. ಸಂತ್ರಸ್ತರು ಪೊಲೀಸ್ ಅಪ್ಪಣೆ/ಕೋರಿಕೆ ಮಾಡಿರುವುದನ್ನು ಹೊಂದಿದ್ದರೆ ಅಥವಾ ನಂತರ ದೂರು ನೀಡಲು ಬಯಸಿದರೆ ಈ ವೈದ್ಯಕೀಯ-ಕಾನೂನಿನ ಪ್ರಕರಣ ಸಂಖ್ಯೆ ಉಪಯುಕ್ತವಾಗಿರುತ್ತದೆ.
  7. ಎಲ್ಲಾ ಮೂರು ಸಂದರ್ಭಗಳಲ್ಲಿ, ಪರೀಕ್ಷೆ ಮತ್ತು ಸಾಕ್ಷ್ಯ ಸಂಗ್ರಹಣೆಗಾಗಿ ತಿಳುವಳಿಕೆಯುಳ್ಳ ಒಪ್ಪಿಗೆ/ನಿರಾಕರಣೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಕೆಳಗಿನ ಉದ್ದೇಶಗಳಿಗಾಗಿ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕು: ಪರೀಕ್ಷೆ, ನೈದಾನಿಕ ಮತ್ತು ವಿಧಿವಿಜ್ಞಾನದ ಪರೀಕ್ಷೆಗಾಗಿ ಮಾದರಿ ಸಂಗ್ರಹಣೆ, ಚಿಕಿತ್ಸೆ ಮತ್ತು ಪೋಲೀಸ್ ಸೂಚನೆ. ಒಪ್ಪಿಗೆಯ ನಮೂನೆಯಲ್ಲಿ ಸಂತ್ರಸ್ತರು , ಒಬ್ಬ/ಒಬ್ಬಳು ಸಾಕ್ಷಿ ಮತ್ತು ಪರೀಕ್ಷಿಸುವ ವೈದ್ಯರು ಸಹಿ ಮಾಡಬೇಕು.

ಸಂತ್ರಸ್ತರ  ಹಕ್ಕುಗಳು ಮತ್ತು ಆರೈಕೆದಾರರ ಕರ್ತವ್ಯಗಳು

ಸಂತ್ರಸ್ತರ ವಿರುದ್ಧ ಮಾಡಿದ ಲೈಂಗಿಕ ಅಪರಾಧಗಳ ತನಿಖೆ ಮತ್ತು ವಿಚಾರಣೆಯ ಸಮಯದಲ್ಲಿ ಸಂತ್ರಸ್ತರ ಹಕ್ಕುಗಳು ಮತ್ತು ಆರೈಕೆದಾರರ ಕರ್ತವ್ಯಗಳನ್ನು ಕೆಳಗೆ ನೀಡಲಾಗಿದೆ: 

1. ಸಂತ್ರಸ್ತರ ಗೌಪ್ಯತೆಯ ಹಕ್ಕು

ಅತ್ಯಾಚಾರ ಸಂತ್ರಸ್ತರ ಹೆಸರನ್ನು ಯಾವುದೇ ವ್ಯಕ್ತಿ ಬಹಿರಂಗಪಡಿಸುವಂತಿಲ್ಲ. ಯಾರಾದರೂ ಹೆಸರನ್ನು ಬಹಿರಂಗಪಡಿಸಿದರೆ, ಶಿಕ್ಷೆಯು ಎರಡು ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ದಂಡದೊಂದಿಗೆ ಇರುತ್ತದೆ. ಇದಲ್ಲದೆ, ಎಲ್ಲಾ ಅತ್ಯಾಚಾರ ಸಂತ್ರಸ್ತರಿಗೆ ಇನ್‌ಕ್ಯಾಮೆರಾ ವಿಚಾರಣೆ ಇರಬೇಕು. ಉದಾಹರಣೆಗೆ, ಸಂತ್ರಸ್ತರ ಹೆಸರನ್ನು ಮಾಧ್ಯಮವು ಬಿಡುಗಡೆ ಮಾಡುವಂತಿಲ್ಲ. ( ಕಲಂ 228 A IPC ಮತ್ತು ಕಲಂ327(2) CrPC ಹೊಸ ಕ್ರಿಮಿನಲ್ ಕಾನೂನಿನಡಿ ಕಲಂ 72 BNS ಮತ್ತು ಕಲಂ 366(2) BNSS)

2. ಉಚಿತ ವೈದ್ಯಕೀಯ ಚಿಕಿತ್ಸೆಯ ಹಕ್ಕು/ ವೈದ್ಯಕೀಯ ಸಂಸ್ಥೆಗಳ ಕರ್ತವ್ಯ

ಲೈಂಗಿಕ ದೌರ್ಜನ್ಯದ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸುವ ಕರ್ತವ್ಯದ ಜೊತೆಗೆ, ಈ ಕಾನೂನು ಸಂತ್ರಸ್ತರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡಲು ಸಾರ್ವಜನಿಕ ಅಥವಾ ಖಾಸಗಿ ಎರಡೂ ವೈದ್ಯಕೀಯ ಸಂಸ್ಥೆಗಳ ಮೇಲೆ ಹೊಣೆಗಾರಿಕೆಯನ್ನು  ನಿಗದಿಪಡಿಸುತ್ತದೆ. ಮೇಲಿನ ನಿಬಂಧನೆಯನ್ನು ಅನುಸರಿಸಲು ವಿಫಲವಾಗುವುದು ಶಿಕ್ಷಾರ್ಹ ಅಪರಾಧವಾಗಿದೆ.(ಕಲಂ 357C CrPC ಮತ್ತು ಕಲಂ 166B IPC ಅಥವಾ ಹೊಸ ಕ್ರೀಮಿನಲ್ ಕಾನೂನಿನಡಿ ಕಲಂ 397 BNSS ಮತ್ತು ಕಲಂ 200 BNS )

3. ಮಹಿಳಾ ವೈದ್ಯರಿಂದ ಪರೀಕ್ಷೆಯ ಹಕ್ಕು

ನೋಂದಾಯಿತ ಮಹಿಳಾ ವೈದ್ಯಕೀಯ ವೈದ್ಯರು ಮಾತ್ರ ಸಂತ್ರಸ್ತ ಮಹಿಳೆಯ ಪರೀಕ್ಷೆಯನ್ನು ನಡೆಸಬೇಕು. ಯಾವುದೇ ಮಹಿಳಾ ವೈದ್ಯರು ಲಭ್ಯವಿಲ್ಲದಿದ್ದರೆ ಮತ್ತು ಸಂತ್ರಸ್ತರು ಒಪ್ಪಿಗೆ ನೀಡಿದರೆ ಪುರುಷ ನೋಂದಾಯಿತ ವೈದ್ಯರ ಪರೀಕ್ಷೆಗೆ ಒಪ್ಪಿಗೆ ನೀಡಬಹುದು. [ಕಲಂ 53A[5] CrPC ಅಥವಾ ಹೊಸ ಕ್ರೀಮಿನಲ್ ಕಾನೂನಿನಡಿ ಕಲಂ 52(5) BNSS]

4. ಅಪರಾಧಿಯ ವಿವರವಾದ ಪರೀಕ್ಷೆಯ ಹಕ್ಕು

ಕಾನೂನುಬದ್ಧವಾಗಿ, ಆರೋಪಿಗೆ ಯಾವುದೇ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ನಡೆಸಲ್ಪಡುವ ಆಸ್ಪತ್ರೆಯಲ್ಲಿ ಉದ್ಯೋಗ ಹೊಂದಿರುವ ನೋಂದಾಯಿತ ವೈದ್ಯರಿಂದ ವಿವರವಾದ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಆದೇಶಿಸಬಹುದು. ಸಂತ್ರಸ್ತರ  ಕಥೆಯನ್ನು ದೃಢೀಕರಿಸುವ ಇತರ ಭೌತಿಕ ಸಾಕ್ಷ್ಯಗಳನ್ನು ಸಂಗ್ರಹಿಸಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. (ಕಲಂ 53A CrPC ಅಥವಾ ಹೊಸ ಕ್ರೀಮಿನಲ್ ಕಾನೂನಿನಡಿ ಕಲಂ 52 BNSS)

5. ವೇಗದ ವಿಚಾರಣೆಯ ಹಕ್ಕು

ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿಯು ಮಾಹಿತಿಯನ್ನು ದಾಖಲಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ತನಿಖೆಯನ್ನು ಪ್ರಾರಂಭಿಸಬೇಕು ಮತ್ತು ಕೊನೆಗೊಳಿಸಬೇಕು. ಇದಕ್ಕಾಗಿ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. (ಕಲಂ 173(1A) CrPC, ಅಥವಾ ಹೊಸ ಕ್ರೀಮಿನಲ್ ಕಾನೂನಿನಡಿ ಕಲಂ 193(2) BNSS)

6. ಸಾರ್ವಜನಿಕ ಸೇವಕನ ಕರ್ತವ್ಯ

ಈ ಕಾನೂನು ಸಾರ್ವಜನಿಕ ಸೇವಕನು ಅಂತಹ ಅಪರಾಧಗಳ ಯಾವುದೇ ಮಾಹಿತಿಯನ್ನು ದಾಖಲಿಸಲು ವಿಫಲರಾಗುವುದನ್ನು ಶಿಕ್ಷಾರ್ಹ ಅಪರಾಧವೆಂದು ಖಚಿತಪಡಿಸುತ್ತದೆ, ತಪ್ಪಿತಸ್ಥರಿಗೆ ಕಠಿಣ ಸೆರೆವಾಸ ಮತ್ತು ದಂಡ ಎರಡನ್ನೂ ವಿಧಿಸುತ್ತದೆ. (ಕಲಂ 166A IPC ಅಥವಾ  ಹೊಸದಾಗಿ  ಕಲಂ 199 BNS ಮತ್ತು  ಕಲಂ 154 (1) CrPC ಅಥವಾ ಹೊಸ ಕ್ರೀಮಿನಲ್ ಕಾನೂನಿನಡಿ ಕಲಂ 173(1) BNSS )

7. ಒಪ್ಪಿಗೆಯ ಅನುಪಸ್ಥಿತಿಯನ್ನು ಊಹಿಸಲು ನ್ಯಾಯಾಲಯದ ಕರ್ತವ್ಯ 

ಅತ್ಯಾಚಾರದ ಯಾವುದೇ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಸಂತ್ರಸ್ತರ  ಒಪ್ಪಿಗೆಯ ಅನುಪಸ್ಥಿತಿಯನ್ನು ಊಹಿಸುತ್ತದೆ. (ಕಲಂ 114-A, ಭಾರತೀಯ ಸಾಕ್ಷಿ ಕಾಯಿದೆ ಅಥವಾ ಹೊಸ ಕ್ರಿಮಿನಲ್ ಕಾನೂನಿನಡಿ ಕಲಂ 120 BSA)

ಸಂಪನ್ಮೂಲಗಳು :

ಸಹಾಯವಾಣಿಗಳು:

ಮಹಿಳಾ ಸಹಾಯವಾಣಿ – 1091

ಮಹಿಳಾ ಸಹಾಯವಾಣಿಯು ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಿಂಸೆಯಿಂದ ಪೀಡಿತ ಮಹಿಳೆಯರಿಗೆ 24/7 ತಕ್ಷಣದ ಮತ್ತು ತುರ್ತು ಉತ್ತರವನ್ನು ನೀಡುತ್ತದೆ. ಅವರು ದೂರುಗಳನ್ನು ಸಲ್ಲಿಸಲು ಸಹಾಯ ಮಾಡುತ್ತಾರೆ. ಅವರು ಸಂತ್ರಸ್ತರ ನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಯ ಕಡೆಗೆ ಮಾರ್ಗದರ್ಶನ ಮಾಡಬಹುದು.

ಪೊಲೀಸ್ – 100

ತುರ್ತು ಸಂದರ್ಭದಲ್ಲಿ ಪೊಲೀಸರು ಆಗಮಿಸುತ್ತಾರೆ.

ಪರಿಶೀಲನಾಪಟ್ಟಿ:

  1. ಸಂಪೂರ್ಣ ವೈದ್ಯಕೀಯ ವರದಿಯ ಪ್ರತಿಯನ್ನು ಉಚಿತವಾಗಿ ತೆಗೆದುಕೊಳ್ಳಿರಿ.
  2. ಎಫ್‌ಐಆರ್ ಪ್ರತಿಯನ್ನು ಉಚಿತವಾಗಿ ತೆಗೆದುಕೊಳ್ಳಿರಿ.
  3. ನೀವು ವೈದ್ಯಕೀಯ ಪರೀಕ್ಷೆಗೆ ಹೋಗುವಾಗ ಬದಲಾವಣೆಯ ಬಟ್ಟೆಯನ್ನು ತೆಗೆದುಕೊಂಡು ಹೋಗಿ.
  4. ಸಾಧ್ಯವಾದರೆ, ಪರೀಕ್ಷೆಯ ಮೊದಲು ಹಲ್ಲುಜ್ಜುವುದು, ಸ್ನಾನ ಮಾಡುವುದು, ಮೂತ್ರ ವಿಸರ್ಜನೆ, ಮಲವಿಸರ್ಜನೆ, ಬಟ್ಟೆ ಬದಲಾಯಿಸುವುದು, ಕೂದಲು ಬಾಚುವುದು, ಬಾಯಿ ತೊಳೆಯುವುದು ಅಥವಾ ಜನನಾಂಗದ ಸ್ಥಳವನ್ನು ಸ್ವಚ್ಛಗೊಳಿಸುವುದನ್ನು ತಪ್ಪಿಸಿ.
  5. ಪರೀಕ್ಷೆಗೆ ಎಫ್‌ಐಆರ್‌ ದಾಖಲಿಸುವುದು ಕಡ್ಡಾಯವಲ್ಲ.
  6. ವಿಧಿವಿಜ್ಞಾನದ ಸಾಕ್ಷ್ಯವನ್ನು ಸಂರಕ್ಷಿಸಲು ಪರೀಕ್ಷೆಯನ್ನು ಉಚಿತವಾಗಿ ಮತ್ತು ಸಾಧ್ಯವಾದಷ್ಟು ಬೇಗ ನಡೆಸಲಾಗುತ್ತದೆ.
  7. ಸಂತ್ರಸ್ತರು  ಬಯಸಿದಲ್ಲಿ ಪ್ರಕ್ರಿಯೆಯ ಯಾವುದೇ ಭಾಗವನ್ನು ಬಿಟ್ಟುಬಿಡಬಹುದು, ಕಾರ್ಯವಿಧಾನದ ಎಲ್ಲಾ ಅಂಶಗಳು ಸಂತ್ರಸ್ತರ  ಒಪ್ಪಿಗೆಯೊಂದಿಗೆ ನಡೆಯಬೇಕು.
  8. ಸಂತ್ರಸ್ತರು  ಭಾವನಾತ್ಮಕ ಆಸರೆಗಾಗಿ ವೈದ್ಯಕೀಯ ಪರೀಕ್ಷೆಗೆ ತಮ್ಮೊಂದಿಗೆ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗಬಹುದು.
  9. ಸಂತ್ರಸ್ತರು  ಒಪ್ಪಿಗೆ ನೀಡಿದರೆ ಮಾತ್ರ ಮಹಿಳಾ ವೈದ್ಯರ ಹೊರತು ಬೇರೊಬ್ಬರು ಪರೀಕ್ಷೆ ಮಾಡಬಹುದು
  10.  ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ರೋಗಗಳಿಗೆ ವೈದ್ಯಕೀಯ ಪರೀಕ್ಷೆಗಳಿಗೆ ವಿನಂತಿಸಿ

ಮಾಹಿತಿಯ ಮೂಲಗಳು :

 ಮಾರ್ಗಸೂಚಿಗಳು

ಶಾಸನಗಳು 

ಅಪರಾಧ ಕಾನೂನು ತಿದ್ದುಪಡಿ ಕಾಯಿದೆ, 2013

ಅಪರಾಧ ಪ್ರಕ್ರಿಯಾ ಸಂಹಿತೆ, 1973 

ಭಾರತೀಯ ದಂಡ ಸಂಹಿತೆ, 1860 

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ(POCSO), 2012

ಭಾರತೀಯ ನ್ಯಾಯ ಸಂಹಿತೆ, 2023

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023

ಭಾರತೀಯ ಸಕ್ಷ್ಯ ಅಧಿನಿಯಮ, 2023

ಮಾದರಿ ಫಾರ್ಮ್‌ಗಳು

ಪರೀಕ್ಷೆಯನ್ನು ನಡೆಸುವ ವೈದ್ಯಕೀಯ ಸಿಬ್ಬಂದಿಯಿಂದ ಭರ್ತಿ ಮಾಡಬೇಕಾದ ಫಾರ್ಮ್.

ಪದಕೋಶ

ವಿಧಿವಿಜ್ಞಾನ ಸಾಕ್ಷ್ಯ – ವಿಧಿವಿಜ್ಞಾನ ಸಾಕ್ಷ್ಯಗಳು ಬ್ಯಾಲಿಸ್ಟಿಕ್ಸ್, ರಕ್ತ ಪರೀಕ್ಷೆ ಮತ್ತು ಡಿಎನ್ಎ ಪರೀಕ್ಷೆಯಂತಹ ವೈಜ್ಞಾನಿಕ ವಿಧಾನಗಳಿಂದ ಪಡೆದ ಮತ್ತು ನ್ಯಾಯಾಲಯದಲ್ಲಿ ಬಳಸಲಾಗುವ ಸಾಕ್ಷ್ಯವಾಗಿದೆ. ವಿಧಿವಿಜ್ಞಾನ ಸಾಕ್ಷ್ಯವು ಶಂಕಿತರ ಅಪರಾಧ ಅಥವಾ ನಿರ್ದೋಷತೆಯನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ.
ಜನನಾಂಗಗಳ ಪರೀಕ್ಷೆ – ವೈದ್ಯರಿಂದ ಜನನಾಂಗದ ದೃಶ್ಯ ಮತ್ತು ಕೈಯಿಂದ ಪರೀಕ್ಷೆ. ಯೋನಿ ಗೋಡೆ ಮತ್ತು ಗರ್ಭಕಂಠದ ಮೇಲೆ ಡಿಎನ್ಎ ಪರೀಕ್ಷಿಸಲು ಕುಹರವರ್ಧಕವನ್ನು  (ಸ್ಪೆಕ್ಯುಲಮ್) ಅನ್ನು ಬಳಸಬಹುದು. ವೈದ್ಯರು “ಬೈಮ್ಯಾನುಯಲ್” ಪರೀಕ್ಷೆಯನ್ನು ಮಾಡುತ್ತಾರೆ, ಅಂದರೆ ಅವನು ಅಥವಾ ಅವಳು ಆಂತರಿಕ ಸಂತಾನೋತ್ಪತ್ತಿ ಅಂಗಗಳನ್ನು ಪರೀಕ್ಷಿಸಲು ತನ್ನ ಕೈಗಳನ್ನು ಬಳಸುತ್ತಾರೆ. ಪರೀಕ್ಷಕರ ಕೈಗಳಿಗೆ ಬೈಮ್ಯಾನುಯಲ್ ಪರೀಕ್ಷೆಗೆ ಕೈಗವಸು ಹಾಕಲಾಗುತ್ತದೆ ಮತ್ತು ಅವುಗಳ ಮೇಲೆ ಲೂಬ್ರಿಕೇಟಿಂಗ್ ಜೆಲ್ಲಿಯನ್ನು ಹಾಕಿರಬಹುದು, ಇದರಿಂದಾಗಿ ಅವರು ತಣ್ಣಗಾಗಿರುತ್ತವೆ.

ಡಿಎನ್ಎ – ಮಾನವರಲ್ಲಿ ಮತ್ತು ಬಹುತೇಕ ಎಲ್ಲಾ ಇತರ ಜೀವಿಗಳಲ್ಲಿ ಆನುವಂಶಿಕ ವಸ್ತು. ವ್ಯಕ್ತಿಯ ದೇಹದಲ್ಲಿನ ಪ್ರತಿಯೊಂದು ಜೀವಕೋಶವೂ ಒಂದೇ ಡಿಎನ್‌ಎಯನ್ನು ಹೊಂದಿರುತ್ತದೆ. ವ್ಯಕ್ತಿಗಳನ್ನು ಗುರುತಿಸಲು ಮತ್ತು ಅವರನ್ನು ಅಪರಾಧಗಳಿಗೆ ಸಂಬಂಧಿಸಲು ಇದನ್ನು ಬಳಸಲಾಗುತ್ತದೆ. 

STI (ಎಸ್ . ಟಿ . ಐ) – ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಪರಾವಲಂಬಿಗಳಿಂದ ಉಂಟಾಗುವ ಲೈಂಗಿಕ ಸಂಪರ್ಕದ ಮೂಲಕ ಹರಡುವ ಸೋಂಕು. ಈ ಸೋಂಕುಗಳು ಸಾಮಾನ್ಯವಾಗಿ ಯೋನಿ ಸಂಭೋಗದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತವೆ. ಗುದ ಸಂಭೋಗ, ಮೌಖಿಕ ಸಂಭೋಗ ಅಥವಾ ಚರ್ಮದಿಂದ ಚರ್ಮದ ಸಂಪರ್ಕದ ಮೂಲಕವೂ ಅವುಗಳನ್ನು ರವಾನಿಸಬಹುದು. ವೈರಸ್‌ಗಳಿಂದ ಉಂಟಾಗುವ STIಗಳಲ್ಲಿ ಹೆಪಟೈಟಿಸ್ ಬಿ, ಹರ್ಪಿಸ್, ಎಚ್‌ಐವಿ ಮತ್ತು ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್‌ಪಿವಿ) ಸೇರಿವೆ. 

ವೈದ್ಯಕೀಯ-ಕಾನೂನಿನ ಪ್ರಕರಣ – ವೈದ್ಯಕೀಯ-ಕಾನೂನಿನ ಪ್ರಕರಣ ಎಂಬುದು ಗಾಯ ಅಥವಾ ಅನಾರೋಗ್ಯದ ಪ್ರಕರಣವನ್ನು ಸೂಚಿಸುತ್ತದೆ, ಇದು ದೇಶದ ಕಾನೂನಿನ ಪ್ರಕಾರ ಪ್ರಕರಣಕ್ಕೆ ಕ್ರಿಮಿನಲ್ ಜವಾಬ್ದಾರಿಯನ್ನು ಸ್ಥಾಪಿಸಲು ಮತ್ತು ಸರಿಪಡಿಸಲು ಕಾನೂನು ಜಾರಿ ಸಂಸ್ಥೆಗಳ ತನಿಖೆಯನ್ನು ಸೂಚಿಸುತ್ತದೆ.
ಎಫ್ಐಆರ್ – ಪ್ರಥಮ ಮಾಹಿತಿ ವರದಿಯನ್ನು ಸೂಚಿಸುತ್ತದೆ. ಇದು ಕಾಗ್ನಿಜಬಲ್ ಅಪರಾಧದ ಸಂತ್ರಸ್ತ ಅಥವಾ ಅವನ/ಅವಳ ಪರವಾಗಿ ಯಾರಾದರೂ ಪೊಲೀಸರಿಗೆ ನೀಡಿದ ದೂರು. ಇದು ಕಾಗ್ನಿಜಬಲ್ ಅಪರಾಧ ಮಾಡಿದ ಬಗ್ಗೆ ಮಾಹಿತಿಯನ್ನು ಸ್ವೀಕರಿಸಿದಾಗ ಪೊಲೀಸರು ಸಿದ್ಧಪಡಿಸುವ ಲಿಖಿತ ದಾಖಲೆಯಾಗಿದೆ. 

ಒಪ್ಪಿಗೆ – ಒಬ್ಬ ವ್ಯಕ್ತಿಯು ಇನ್ನೊಬ್ಬರ ಪ್ರಸ್ತಾಪ ಅಥವಾ ಆಸೆಗಳನ್ನು ಸ್ವಯಂಪ್ರೇರಣೆಯಿಂದ ಒಪ್ಪಿಕೊಳ್ಳುವುದು.

ಎರಡು – ಬೆರಳಿನ ಪರೀಕ್ಷೆ – ಯೋನಿ ಸಡಿಲತೆ ಮತ್ತು ಇತ್ತೀಚಿನ ಲೈಂಗಿಕ ಸಂಭೋಗದ ಮಟ್ಟವನ್ನು ಪರೀಕ್ಷಿಸಲು ವೈದ್ಯರು ಬೆರಳನ್ನು ಸ್ತ್ರೀಯ ಯೋನಿಯೊಳಗೆ ಸೇರಿಸುವ ಮೂಲಕ ಪರೀಕ್ಷೆಯನ್ನು ಮಾಡುತ್ತಾರೆ. ಈ ಪರೀಕ್ಷೆಯು ಕಾನೂನುಬಾಹಿರವಾಗಿದೆ.

 

ಅಂತರ-ಧಾರ್ಮಿಕ ವಿವಾಹಗಳ ನೋಂದಣಿ ಕುರಿತು ನ್ಯಾಯಾ ಮಾರ್ಗದರ್ಶಿ

ಮಾರ್ಗದರ್ಶಿ ನಿಮಗೆ ಹೇಗೆ ಸಹಾಯ ಮಾಡುತ್ತದೆ?

ಅಂತರಧಾರ್ಮಿಕ ವಿವಾಹಗಳ ಕುರಿತಾದ ನ್ಯಾಯ ಮಾರ್ಗದರ್ಶಿ ನೀವು ಅಂತರ್ಧಾರ್ಮಿಕ ನಾಗರಿಕ ವಿವಾಹಕ್ಕೆ ಪ್ರವೇಶಿಸಲು ಬಯಸಿದರೆ ಒಳಗೊಂಡಿರುವ ಪ್ರಕ್ರಿಯೆಯನ್ನು ವಿವರಿಸುತ್ತದೆ. 1954 ವಿಶೇಷ ವಿವಾಹ ಕಾಯ್ದೆಯಡಿ ಬೇರೆ ಬೇರೆ ಧರ್ಮಕ್ಕೆ ಸೇರಿದ ಇಬ್ಬರು ಬೇರೆ ಧರ್ಮಕ್ಕೆ ಮತಾಂತರಗೊಳ್ಳದೆ ಮದುವೆಯಾಗಬಹುದು. ಮಾರ್ಗದರ್ಶಿ ಅಂತರ್ಧಾರ್ಮಿಕ (ವಿಶೇಷ) ವಿವಾಹಕ್ಕೆ ಸಂಬಂಧಿಸಿದ ಕಾನೂನು ಮತ್ತು ಕಾರ್ಯವಿಧಾನದ ಅಂಶಗಳನ್ನು (ವಿವಾಹದ ಸೂಚನೆ ನೀಡುವುದು, ಮದುವೆಯನ್ನು ನಿರ್ವಹಿಸುವುದು, ವಿವಾಹ ಪ್ರಮಾಣಪತ್ರವನ್ನು ಪಡೆಯುವುದು, ಇತ್ಯಾದಿ) ಸಂಕ್ಷಿಪ್ತವಾಗಿ ವಿವರಿಸುತ್ತದೆ.

 

ಮಾರ್ಗದರ್ಶಿಯಲ್ಲಿ ಚರ್ಚಿಸಲಾಗುತ್ತಿರುವ ಕಾನೂನುಗಳು ಯಾವುವು?

ಅಂತರಧಾರ್ಮಿಕ ವಿವಾಹಗಳ ಕುರಿತಾದ ನ್ಯಾಯ ಮಾರ್ಗದರ್ಶಿ 1954 ವಿಶೇಷ ವಿವಾಹ ಕಾಯ್ದೆಯ ಬಗ್ಗೆ ವಿವರಿಸುತ್ತದೆ. ಈ ಮಾರ್ಗದರ್ಶಿ ವಿಶೇಷ ವಿವಾಹ ಕಾಯ್ದೆಯ ಆಧಾರದ ಮೇಲೆ ಸಾಮಾನ್ಯ ಕಾನೂನನ್ನು ಮಾತ್ರ ಒಳಗೊಂಡಿದೆ, ನಿಮ್ಮ ಪರಿಸ್ಥಿತಿಗೆ ಸೂಕ್ತವಾದ ಹೆಚ್ಚು ವಿವರವಾದ ಮಾಹಿತಿಗಾಗಿ ನೀವು ರಾಜ್ಯನಿರ್ದಿಷ್ಟ ವಿಶೇಷ ವಿವಾಹ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲೇಖಿಸಬೇಕಾಗಬಹುದು

 

ವಿವರವಾದ ಪ್ರಕ್ರಿಯೆಗಾಗಿ ಮಾರ್ಗದರ್ಶಿಯನ್ನು ಡೌನ್‌ಲೋಡ್ ಮಾಡಿ.