ಕೌಟುಂಬಿಕ ಉದ್ಯೋಗಸ್ಥರು ಮತ್ತು ಬಾಲ ಕಲಾವಿದರನ್ನು ಹೊರತುಪಡಿಸಿ, ಇನ್ನಿತರ ಕೆಲಸಕ್ಕೆ ೧೪ ವರ್ಷಗಳ ಕೆಳಗಿನ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ತಂದೆ-ತಾಯಂದಿರಿಗೆ ದಂಡ ವಿಧಿಸಲಾಗುವುದು. ಕಾನೂನಿನ ವಿರುದ್ಧವಾಗಿ ಕಿಶೋರಾವಸ್ಥೆಯಲ್ಲಿನ ವ್ಯಕ್ತಿಗಳನ್ನು ಕೆಲಸ ಮಾಡಿಸಿದರೆ, ಅವರ ತಂದೆ-ತಾಯಂದಿರಿಗೆ ಶಿಕ್ಷೆ ವಿಧಿಸಲಾಗುವುದು.
- ಅವರು ಮೊದಲ ಬಾರಿ ಅಪರಾಧವನ್ನು ಮಾಡಿದರೆ ಅವರಿಗೆ ದಂಡ ವಿಧಿಸಲಾಗುವುದಿಲ್ಲ.
- ನಿಷೇಧಿತ ಉದ್ಯೋಗಗಳಲ್ಲಿ ಕಿಶೋರಾವಸ್ಥೆಯಲ್ಲಿನ ವ್ಯಕ್ತಿಗಳನ್ನು ಇದಾಗ್ಯೂ ಕೆಲಸಕ್ಕೆ ಕಳಿಸಿದರೆ ಅವರ ಮೇಲೆ ೧೦೦೦೦ ರೂಪಾಯಿಗಳ ದಂಡ ವಿಧಿಸಲಾಗುವುದು.