ಉಯಿಲು ಮಾಡುವುದು

ನೀವು ನಿಮ್ಮ ಜೀವಿತಾವಧಿಯ ಯಾವುದೇ ಸಮಯದಲ್ಲಿಯೂ ಉಯಿಲು ಮಾಡಬಹುದು. ಅದಕ್ಕೆ :

ಸ್ವಸ್ಥ ಮಾನಸಿಕ ಆರೋಗ್ಯ ಹೊಂದಿರುವ ವ್ಯಕ್ತಿಯಾಗಿರಬೇಕು , ಮತ್ತು
18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು .
ಉಯಿಲು ಮಾಡುವ ವ್ಯಕ್ತಿಗೆ ತಾನು ಏನು ಮಾಡುತ್ತಿದ್ದೇನೆಂಬ ಅರಿವಿರಬೇಕು.

ದೃಷ್ಟಾಂತವಾಗಿ, ಮಾನಸಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಯು ತಾನು ಏನು ಮಾಡುತ್ತಿದ್ದಾನೆ ಎಂಬ ಅರಿವು ಇದ್ದಾಗ ಸಹ ವಿಲ್ ಮಾಡಬಹುದು. ಒಬ್ಬ ವ್ಯಕ್ತಿಯು ಮದ್ಯದ ಪ್ರಭಾವಕ್ಕೆ ಒಳಗಾಗಿದ್ದರೆ ಮತ್ತು ಅವರು ಏನು ಮಾಡುತ್ತಿದ್ದಾರೆಂದು ತಿಳಿದಿಲ್ಲದಿದ್ದರೆ, ಅವರು ಉಯಿಲು ಮಾಡಲು ಸಾಧ್ಯವಿಲ್ಲ.