- ಈ ವಿವರಣೆಯು ಭಾರತದಲ್ಲಿ ಸ್ಥಿರ ಆಸ್ತಿಯ ಖರೀದಿ ಮತ್ತು ಮಾರಾಟ ಮತ್ತು ಆಸ್ತಿಯ ಸ್ವಾಧೀನದ ವಿವಿಧ ವಿಧಾನಗಳ ಬಗ್ಗೆ ತಿಳಿಸುತ್ತದೆ. ಇದು ಆಸ್ತಿ ವರ್ಗಾವಣೆ ಕಾಯಿದೆ, 1882 (“TP Act”) ಮೂಲಕ ನಿಯಂತ್ರಿಸಲ್ಪಡುತ್ತದೆ; ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ, 1999 (“FEMA”) ಮತ್ತು ವಿಷಯದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ FDI ಮಾಸ್ಟರ್ ಸುತ್ತೋಲೆ. ವಿವರಣೆಯು ಸ್ವತ್ತು ಮರು ಸ್ವಾಧೀನಪಡಿಸಿದ ಆಸ್ತಿಗಳ ಬಗ್ಗೆ ನಿರ್ದೇಶನ ನೀಡುವ ಗುರಿಯನ್ನು ಸಹಾ ಹೊಂದಿದೆ (ಆಸ್ತಿಯನ್ನು ಗೃಹ ಸಾಲ ಅಥವಾ ಅಡಮಾನಕ್ಕಾಗಿ ಮೇಲಾಧಾರವಾಗಿ ಇರಿಸಲಾಗಿತ್ತು ಆದರೆ ಮೂರು ಅಥವಾ ಹೆಚ್ಚಿನ ಸಮಾನ ಮಾಸಿಕ ಕಂತುಗಳನ್ನು (EMI ಗಳು) ಪಾವತಿಸದ ಕಾರಣ ಸಾಲದಾತರಿಂದ ಸ್ವಾಧೀನಪಡಿಸಿಕೊಳ್ಳಲಾಗಿತ್ತು), ಅದರ ಖರೀದಿ ಸೆಕ್ಯುರಿಟೈಸೇಶನ್ ಮತ್ತು ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಮತ್ತು ಎನ್ಫೋರ್ಸ್ಮೆಂಟ್ ಆಫ್ ಸೆಕ್ಯುರಿಟೀಸ್ ಇಂಟರೆಸ್ಟ್ ಆಕ್ಟ್, 2002 (“SARFAESI ಆಕ್ಟ್”) ನಿಂದ ನಿಯಂತ್ರಿಸಲ್ಪಡುತ್ತದೆ.
Theme: Using Your Property Effectively
ವಿವಿಧ ರೀತಿಯ ಸ್ಥಿರ ಆಸ್ತಿಗಳು ಯಾವುವು?
ಭಾರತೀಯ ಕಾನೂನುಗಳ ಅಡಿಯಲ್ಲಿ, ಸ್ಥಿರ ಆಸ್ತಿಯು ಭೂಮಿ, ಕಟ್ಟಡಗಳು, ಅನುವಂಶಿಕ ಭತ್ಯೆಗಳು, ಮಾರ್ಗಗಳ ಹಕ್ಕುಗಳು, ದೀಪಗಳು, ದೋಣಿಗಳು, ಮೀನುಗಾರಿಕೆ ಅಥವಾ ಭೂಮಿಯಿಂದ ಹೊರಹೊಮ್ಮುವ ಯಾವುದೇ ಇತರ ಪ್ರಯೋಜನಗಳು ಮತ್ತು ಭೂಮಿಗೆ ಅಂಟಿಕೊಂಡಿರುವ ವಸ್ತುಗಳು ಅಥವಾ ಶಾಶ್ವತವಾಗಿ ಜೋಡಿಸಲಾದ ಯಾವುದನ್ನಾದರೂ ಒಳಗೊಂಡಿರುತ್ತದೆ. ಆದರೆ ಭೂಮಿಯಲ್ಲಿ ನಿಂತಿರುವ ಮರ, ಬೆಳೆಯುತ್ತಿರುವ ಬೆಳೆಗಳು ಅಥವಾ ಹುಲ್ಲು ಅಲ್ಲ.((ನೋಂದಣಿ ಕಾಯಿದೆ, 1908 ರ ವಿಭಾಗ 2 (6))) ಭಾರತ ಸಂವಿಧಾನದ VII ಶೆಡ್ಯೂಲ್ ಅಡಿಯಲ್ಲಿ ಭೂಮಿ ರಾಜ್ಯದ ವಿಷಯವಾಗಿರುವುದರಿಂದ, ಸ್ಥಿರ ಆಸ್ತಿಯನ್ನು ನಿಯಂತ್ರಿಸುವ ಕಾನೂನುಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಸ್ಥಿರ ಆಸ್ತಿಯ ನೋಂದಣಿ ಏಕೆ ಮುಖ್ಯ?
- ಸ್ಥಿರ ಆಸ್ತಿಯ ವರ್ಗಾವಣೆಯನ್ನು ನೋಂದಾಯಿಸುವ ಉದ್ದೇಶವು ದಾಖಲೆಗೆ ಸಹಿ ಮಾಡುವುದನ್ನು ದಾಖಲಿಸುವುದಾಗಿದೆ. ನೋಂದಣಿಯ ನಂತರವೇ ಮಾಲೀಕತ್ವ ಮತ್ತು ವರ್ಗಾವಣೆ ಕಾನೂನುಬದ್ಧವಾಗುತ್ತದೆ, ಅಂದರೆ ಆಸ್ತಿಯ ಮಾಲೀಕತ್ವವನ್ನು ಉಪ-ನೋಂದಣಿದಾರರ ಮುಂದೆ ನೋಂದಾಯಿಸಿದ ನಂತರ ಮಾತ್ರ ಕಾನೂನಾತ್ಮಕವಾಗಿ ವರ್ಗಾಯಿಸಲ್ಪಡುತ್ತದೆ. ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕವನ್ನು ಪಾವತಿಸುವ ಮತ್ತೊಂದು ಗಮನಾರ್ಹ ಪ್ರಯೋಜನವೆಂದರೆ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ.
ಸ್ಥಿರ ಆಸ್ತಿಯ ವರ್ಗಾವಣೆಯನ್ನು ನೋಂದಾಯಿಸುವ ಪ್ರಕ್ರಿಯೆ ಏನು?
ಭಾರತದಲ್ಲಿ ಆಸ್ತಿ ಅಥವಾ ಭೂ ನೋಂದಣಿಯು ಇವುಗಳನ್ನು ಒಳಗೊಂಡಿರುತ್ತದೆ((ಸೆಕ್ಷನ್ 17,ನೋಂದಣಿ ಕಾಯಿದೆ,, 1908)):
- ಮುದ್ರಾಂಕ ಶುಲ್ಕವನ್ನು ಮತ್ತು ಮಾರಾಟ ಪತ್ರಕ್ಕಾಗಿ ನೋಂದಣಿ ಶುಲ್ಕ ಪಾವತಿಸುವುದು, ಮತ್ತು
- ಆಸ್ತಿ ಇರುವ ಪ್ರದೇಶದ ಉಪ-ನೋಂದಣಾಧಿಕಾರಿಯ ಬಳಿ, ಕಾನೂನುಬದ್ಧವಾಗಿ ದಾಖಲೆಗಳನ್ನು ದಾಖಲಿಸುವುದು. ನೋಂದಣಿ ಸಮಯದಲ್ಲಿ, ಮಾರಾಟಗಾರ ಮತ್ತು ಖರೀದಿದಾರರ ಅಧಿಕೃತ ಸಹಿದಾರರು, ಇಬ್ಬರು ಸಾಕ್ಷಿಗಳೊಂದಿಗೆ ಹಾಜರಿರಬೇಕು.
ಆಸ್ತಿ ಇರುವ ಪ್ರದೇಶವನ್ನು ಅವಲಂಬಿಸಿ ಮುದ್ರಾಂಕ ಶುಲ್ಕವು ಬದಲಾಗುತ್ತದೆ. ಉದಾಹರಣೆಗೆ: ಮುಂಬೈನಲ್ಲಿ, ಮುದ್ರಾಂಕ ಶುಲ್ಕವು ಒಟ್ಟು ಆಸ್ತಿ ಮೌಲ್ಯದ 5% ಆಗಿದೆ, ಇದರಲ್ಲಿ 1% ಮೆಟ್ರೋ ಸೆಸ್1. ಕರ್ನಾಟಕದಲ್ಲಿ ಮುದ್ರಾಂಕ ಶುಲ್ಕದ ಬಗ್ಗೆ ತಿಳಿಯಲು ಇಲ್ಲಿ ಓದಿ . ಸಾಮಾನ್ಯವಾಗಿ, ಮಾರಾಟಗಾರನು ಸ್ಥಿರ ಆಸ್ತಿಯ ವರ್ಗಾವಣೆಯ ನೋಂದಣಿಗೆ ಜವಾಬ್ದಾರನಾಗಿರುತ್ತಾನೆ ಮತ್ತು ಮುದ್ರಾಂಕ ಶುಲ್ಕದ ಪಾವತಿಗೆ ಖರೀದಿದಾರನು ಜವಾಬ್ದಾರನಾಗಿರುತ್ತಾನೆ.
ಇಂದು, ಹೆಚ್ಚಿನ ರಾಜ್ಯಗಳು ಆಸ್ತಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕದ ಪಾವತಿಗಾಗಿ ತಮ್ಮದೇ ಆದ ವೆಬ್ ಪೋರ್ಟಲ್ಗಳನ್ನು ಹೊಂದಿವೆ. ಆದಾಗ್ಯೂ, ಆನ್ಲೈನ್ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಖರೀದಿದಾರರು ದಾಖಲೆಗಳೊಂದಿಗೆ ಉಪ-ರಿಜಿಸ್ಟ್ರಾರ್ ಕಚೇರಿಗೆ ಭೌತಿಕವಾಗಿ ಭೇಟಿ ನೀಡುವ ಅಗತ್ಯವಿದೆ. ಅಲ್ಲದೆ, ಜನ ಸ್ನೇಹಿ ಮತ್ತು ಈ ಪೋರ್ಟಲ್ಗಳಿಂದ ಒಬ್ಬರು ಪಡೆಯಬಹುದಾದ ಸೇವೆಗಳ ಸಂಖ್ಯೆಯು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಉದಾಹರಣೆಗೆ: ದೆಹಲಿ ಸರ್ಕಾರವು ಅನೇಕ ಪೋರ್ಟಲ್ಗಳನ್ನು ಹೊಂದಿದ್ದು, ಒಬ್ಬ ವ್ಯಕ್ತಿಯು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೋಗಬೇಕಾಗುತ್ತದೆ, ಆದರೆ ಶೀಘ್ರದಲ್ಲೇ ಏಕ ಗವಾಕ್ಷಿ ಪೋರ್ಟಲ್ ಅನ್ನು ಪರಿಚಯಿಸುವ ಯೋಜನೆ ಇದೆ2.
ಮಹಿಳೆಯ ಹೆಸರಿನಲ್ಲಿ ಸ್ಥಿರ ಆಸ್ತಿಯನ್ನು ನೋಂದಾಯಿಸುವುದು ಹೆಚ್ಚು ಪ್ರಯೋಜನಕಾರಿಯೇ?
ಹೌದು, ಸ್ಥಿರಾಸ್ತಿಯನ್ನು ಮಹಿಳೆಯ ಹೆಸರಿನಲ್ಲಿ ನೋಂದಾಯಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ, ಏಕೆಂದರೆ ಅನೇಕ ರಾಜ್ಯಗಳು ಮತ್ತು ಬ್ಯಾಂಕುಗಳು ಆಸ್ತಿಯನ್ನು ಖರೀದಿಸುವ ಮಹಿಳೆಯರಿಗೆ ಆರ್ಥಿಕ ಪ್ರಯೋಜನಗಳನ್ನು ಪರಿಚಯಿಸಿವೆ. ಪರಿಣಾಮವಾಗಿ, ಮಹಿಳೆಯ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
- ಕಡಿಮೆ ಸ್ಟ್ಯಾಂಪ್ ಡ್ಯೂಟಿ ದರಗಳು: ದೆಹಲಿ,((ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯವಿದೆ: http://fs.delhigovt.nic.in/wps/wcm/connect/doit_revenue/Revenue/Home/Services/Property+Registration)), ಹರಿಯಾಣ((((ಮುದ್ರಾಂಕ ಶುಲ್ಕವನ್ನು ಮಾಲೀಕರ ಲಿಂಗವನ್ನು ನಮೂದಿಸುವ ಮೂಲಕ https://jamabandi.nic.in/StampDuty ನಲ್ಲಿ ಲೆಕ್ಕ ಹಾಕಬಹುದು. ಮಹಿಳೆಯರಿಗೆ ಮುದ್ರಾಂಕ ಶುಲ್ಕವು ಆಸ್ತಿಯ ಒಟ್ಟು ಮೌಲ್ಯದ 5% ಮತ್ತು ಪುರುಷರಿಗೆ 7%)), ರಾಜಸ್ಥಾನ(( https://igrs.rajasthan.gov.in/writereaddata/Portal/Images/fees_new.pdf) ನಲ್ಲಿ ವಿವರವಾದ ಮಾಹಿತಿ ಲಭ್ಯವಿದೆ) ಮತ್ತು ಉತ್ತರಾಖಂಡ ದಂತಹ ರಾಜ್ಯಗಳಲ್ಲಿ,((ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯವಿದೆ: https://registration.uk.gov.in/files/Stamps_and_Registration_-_Stamp_Fees__Regn_Fess.pdf )) ಒಬ್ಬ ಪುರುಷ ಖರೀದಿದಾರರಿಗೆ ಹೋಲಿಸಿದರೆ ಮಹಿಳಾ ಖರೀದಿದಾರರಿಗೆ ಅಥವಾ ಜಂಟಿ ಖರೀದಿದಾರರಿಗೆ ಕಡಿಮೆ ಮುದ್ರಾಂಕ ಶುಲ್ಕವನ್ನು ವಿಧಿಸಲಾಗುತ್ತದೆ.
- ಕಡಿಮೆಯಾದ ಗೃಹ ಸಾಲದ ದರಗಳು: ಅನೇಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಮಹಿಳಾ ಖರೀದಿದಾರರಿಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತವೆ. ನಿಶ್ಚಿತಗಳನ್ನು ಬ್ಯಾಂಕುಗಳ ಅಧಿಕೃತ ವೆಬ್-ಸೈಟ್ಗಳಲ್ಲಿ ಕಾಣಬಹುದು.
- ತೆರಿಗೆ ವಿನಾಯಿತಿಗಳು: ಮಹಿಳಾ ಮನೆಮಾಲೀಕರು ಗೃಹ ಸಾಲಗಳಿಗೆ ಪಾವತಿಸುವ ಬಡ್ಡಿಯ ಮೇಲೆ ತೆರಿಗೆ ಕಡಿತಕ್ಕೆ ಅರ್ಹರಾಗಿರುತ್ತಾರೆ. ಮಹಿಳೆಯರು ಇತರ ತೆರಿಗೆ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.(( ಮಹಿಳಾ ಮನೆ ಖರೀದಿದಾರರಿಗೆ ಲಭ್ಯವಿರುವ ಪ್ರಯೋಜನಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯವಿದೆ: https://blog.ipleaders.in/benefits-women-home-buyers-india/))
ಹುಟ್ಟಲಿರುವ ವ್ಯಕ್ತಿಗೆ ನಾನು ಆಸ್ತಿಯನ್ನು ಹೇಗೆ ವರ್ಗಾಯಿಸಬಹುದು?
- ಹುಟ್ಟಲಿರುವ ವ್ಯಕ್ತಿಗೆ ಆಸ್ತಿಯನ್ನು ವರ್ಗಾಯಿಸಲು, ನೀವು ಮೊದಲು ಆಸ್ತಿಯನ್ನು ಜೀವಂತ ವ್ಯಕ್ತಿಗೆ ವರ್ಗಾಯಿಸಬೇಕು, ಇದನ್ನು ಸಾಮಾನ್ಯವಾಗಿ ಹುಟ್ಟಲಿರುವ ವ್ಯಕ್ತಿಯು ಅಸ್ತಿತ್ವಕ್ಕೆ ಬರುವವರೆಗೆ, ಟ್ರಸ್ಟ್ ರಚನೆಯ ಮೂಲಕ ಮಾಡಲಾಗುತ್ತದೆ. ಇದು ಹುಟ್ಟಲಿರುವ ವ್ಯಕ್ತಿಯ ಪರವಾಗಿ ಪಟ್ಟಭದ್ರ ಹಿತಾಸಕ್ತಿಗಳನ್ನು ಸೃಷ್ಟಿಸುತ್ತದೆ.(((ವಿಭಾಗ 13,ಆಸ್ತಿ ವರ್ಗಾವಣೆ ಕಾಯಿದೆ, 1882 .)) ಉದಾಹರಣೆಗೆ, A ಮಗುವಿನೊಂದಿಗೆ ಗರ್ಭಿಣಿಯಾಗಿದ್ದರೆ, ಮಗುವಿನ ಹಿತಾಸಕ್ತಿಯಲ್ಲಿ ಟ್ರಸ್ಟ್ ಅನ್ನು ರಚಿಸಬಹುದು ಮತ್ತು ಈ ಟ್ರಸ್ಟ್ ಮಗುವಿನ ಜನನದವರೆಗೂ ಆಸ್ತಿಯನ್ನು ಹೊಂದಿರುತ್ತದೆ. ಮಗು ಜನಿಸುವವರೆಗೂ ಟ್ರಸ್ಟಿಯು ಮುಖ್ಯವಾಗಿ ಹುಟ್ಟಲಿರುವ ಮಗುವಿನ ಪ್ರಾಕ್ಸಿಯಾಗಿ ಕಾರ್ಯನಿರ್ವಹಿಸುತ್ತಾರೆ. ಸರಳವಾಗಿ ಹೇಳುವುದಾದರೆ, ಆಸ್ತಿಯು ವರ್ಗಾಯಿಸಲ್ಪಡಬೇಕಾದ ವ್ಯಕ್ತಿಯ ಜನನದವರೆಗೂ ಯಾರಲ್ಲಿಯಾದರೂ ಸುರಕ್ಷಿತವಾಗಿ ಇರುತ್ತದೆ. ಕೇವಲ ಆ ಸಮಯದವರೆಗೆ ಆಸ್ತಿಯನ್ನು ಟ್ರಸ್ಟ್ ಹೊಂದಿರುತ್ತದೆ.
ಸ್ಥಿರ ಆಸ್ತಿಯನ್ನು ಉಡುಗೊರೆಯಾಗಿ ನೀಡುವುದು ಆಸ್ತಿಯ ಮಾರಾಟ ಅಥವಾ ಖರೀದಿಗಿಂತ ಹೇಗೆ ಭಿನ್ನವಾಗಿದೆ?
ಉಡುಗೊರೆ ಎಂದರೆ ಚರ ಅಥವಾ ಸ್ಥಿರ ಆಸ್ತಿಯನ್ನು ಪರಿಗಣನೆಯಿಲ್ಲದೆ, ಅಂದರೆ ಹಣವಿಲ್ಲದೆ ವರ್ಗಾಯಿಸುವುದು. ಅಂತಹ ಆಸ್ತಿಯನ್ನು ಸ್ವೀಕರಿಸುವಾಗ ಯಾವುದೇ ಪಾವತಿ ಮಾಡದೆಯೇ ಸ್ಥಿರ ಆಸ್ತಿಯ ವರ್ಗಾವಣೆಯು ಸಂಭವಿಸಿದಾಗ, ಅದನ್ನು ಉಡುಗೊರೆಯಾಗಿ ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಆಸ್ತಿಯನ್ನು ನೀಡುವ ಮತ್ತು ಸ್ವೀಕರಿಸುವ ಪಕ್ಷಗಳನ್ನು ದಾನಿಗಳು ಮತ್ತು ದಾನಪಡೆದವ ಎಂದು ಕರೆಯಲಾಗುತ್ತದೆ. ಸ್ಥಿರ ಆಸ್ತಿಯ ಉಡುಗೊರೆ ಕಾನೂನಿನ ಅಡಿಯಲ್ಲಿ ಮಾನ್ಯವಾಗಬೇಕಾದರೆ, ವರ್ಗಾವಣೆಯು ಹೀಗಿರಬೇಕು:
- ಕನೂನಾತ್ಮಕವಾಗಿ ನೋಂದಾಯಿತ ದಸ್ತಾವೇಜಿನ ಮೂಲಕ ದಾನಿಯಿಂದ ಅಥವಾ ಅವರ ಪರವಾಗಿ ಪಡೆದ ಸಹಿ
- ಕನಿಷ್ಠ ಇಬ್ಬರು ಸಾಕ್ಷಿಗಳಿಂದ ದೃಢೀಕರಿಸಲ್ಪಡಬೇಕು1.
ಹಿಂತೆಗೆದುಕೊಳ್ಳುವಿಕೆಯು ಕೆಲವು ಷರತ್ತುಗಳಲ್ಲಿ ಸಂಭವಿಸುತ್ತದೆ ಎಂದು ದಾನಿ ಮತ್ತು ದಾನ ಪಡೆದವರು ಮುಂಚಿತವಾಗಿಯೇ ಒಪ್ಪಿಕೊಂಡಿರದ ಹೊರತು, ಕಾನೂನು ಪ್ರಕ್ರಿಯೆಯ ಪ್ರಕಾರ ಅದನ್ನು ಸಹಿ ಮಾಡಿ ಮತ್ತು ನೋಂದಾಯಿಸಿದ ನಂತರ, ಉಡುಗೊರೆ ಪತ್ರವನ್ನು ರದ್ದುಗೊಳಿಸಲಾಗುವುದಿಲ್ಲ ಅಥವಾ ಹಿಂಪಡೆಯಲಾಗುವುದಿಲ್ಲ.
- TP ಕಾಯಿದೆಯ ವಿಭಾಗ 123. [↩]
ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಸಂಬಂಧಿಸಿದ ಸಮಸ್ಯೆಯಿದ್ದರೆ ನೀವು ಯಾರಿಗೆ ದೂರು ನೀಡುತ್ತೀರಿ?
ಮಾಲೀಕತ್ವದ ಮೇಲಿನ ಹಕ್ಕು, ಭೂಸ್ವಾಧೀನದ ಮೇಲಿನ ವ್ಯಾಜ್ಯ, ರಿಯಲ್ ಎಸ್ಟೇಟ್ ವ್ಯವಹಾರಗಳ ಮೇಲಿನ ಭಿನ್ನಾಭಿಪ್ರಾಯ / ವಿವಾದಗಳು, ಆಸ್ತಿಯ ಉತ್ತರಾಧಿಕಾರದ ಮೇಲಿನ ಸಂಘರ್ಷ ಮತ್ತು ಬಾಡಿಗೆ ಆಸ್ತಿಯ ದುರುಪಯೋಗ ಸೇರಿದಂತೆ ವಿವಿಧ ಕಾರಣಗಳಿಗಾಗಿ ನೀವು ಭೂಮಿ ಮತ್ತು ಆಸ್ತಿಯ ಮೇಲಿನ ವಿವಾದಗಳನ್ನು ಬಗೆಹರಿಸಲು ನ್ಯಾಯಾಲಯವನ್ನು ಸಂಪರ್ಕಿಸಬಹುದು. ವಿವಾದವು ಉದ್ಭವಿಸುವ ನಿರ್ದಿಷ್ಟ ಸಂದರ್ಭಗಳ ಆಧಾರದ ಮೇಲೆ ವ್ಯಕ್ತಿಯು ಈ ಸಮಸ್ಯೆಗಳಿಗೆ ಹೇಗೆ ಪರಿಹಾರವನ್ನು ಪಡೆಯಬಹುದು ಎಂಬುದನ್ನು ವಿವರಿಸುವ ವಿಭಿನ್ನ ಕಾನೂನುಗಳು ಮತ್ತು ಕಾರ್ಯವಿಧಾನಗಳಿವೆ. ಅಂತಹ ಸಮಸ್ಯೆಗಳನ್ನು ಭೂ ವಿವಾದಗಳಲ್ಲಿ ಪರಿಣತಿ ಹೊಂದಿರುವ ವಕೀಲರ ಮೂಲಕ ಉತ್ತಮವಾಗಿ ವ್ಯವಹರಿಸಲಾಗುತ್ತದೆ. ಆದಾಗ್ಯೂ, ನಿಮ್ಮ ಆಸ್ತಿಯು ನ್ಯಾಯಾಲಯದ ವಿವಾದದಲ್ಲಿ ಸಿಲುಕಿಕೊಂಡಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮುಂಚಿತವಾಗಿ ನಿಮ್ಮ ಕೂಲಂಕುಷ ಪರಿಶೀಲನೆಗೆ ಒಳಪಡಿಸುವುದು ಉತ್ತಮವಾಗಿದೆ. ದಯವಿಟ್ಟು ವಕೀಲರೊಂದಿಗೆ ಮಾತನಾಡಿ ಅಥವಾ ಆಸ್ಕ್ ನ್ಯಾಯ ಸಹಾಯವಾಣಿ ಮೂಲಕ ನಮಗೆ ಯಾವುದೇ ಪ್ರಶ್ನೆಗಳನ್ನು ಕೇಳಿ.
ನಾನು ಮನೆ ಅಥವಾ ಭೂಮಿಯನ್ನು ಮಾರಾಟ ಮಾಡುವಾಗ ನಾನು ಏನು ಪರಿಗಣಿಸಬೇಕು?
ನೀವು ಆಸ್ತಿಯನ್ನು ಮಾರಾಟ ಮಾಡಲು ಯೋಜಿಸುತ್ತಿದ್ದರೆ, ಮಾರಾಟದ ಸಮಯದಲ್ಲಿ ನೀವು ಪರಿಗಣಿಸಬೇಕಾದ ಅತ್ಯಂತ ನಿರ್ಣಾಯಕ ಅಂಶವೆಂದರೆ ವಹಿವಾಟನ್ನು ನೋಂದಾಯಿಸುವ ಪ್ರಕ್ರಿಯೆ.
- ಮಾರಾಟವನ್ನು ನೋಂದಾಯಿಸುವುದು
-
- ವಹಿವಾಟು ಅಥವಾ ಮಾರಾಟವನ್ನು ನೋಂದಾಯಿಸುವುದು ಎರಡೂ ಪಕ್ಷಗಳಿಗೆ ಪ್ರಯೋಜನಕಾರಿಯಾಗಿದೆ ಏಕೆಂದರೆ ಮಾರಾಟಗಾರರಿಂದ ಖರೀದಿದಾರರಿಗೆ ಆಸ್ತಿಯ ವರ್ಗಾವಣೆಯನ್ನು ಸರ್ಕಾರವು ಗುರುತಿಸುತ್ತದೆ ಎಂದರ್ಥ. ಭಾರತದಲ್ಲಿ, ಎಲ್ಲಾ ವ್ಯಕ್ತಿಗಳು1 ವಹಿವಾಟಿನ ವೆಚ್ಚ ರೂ.100 ಮೀರಿದರೆ, ಸ್ಥಿರ ಆಸ್ತಿಯ ಮಾರಾಟವನ್ನು ನೋಂದಾಯಿಸಿಕೊಳ್ಳಲೇ ಬೇಕು. ಭೂಮಿ ಅಥವಾ ಮನೆಯ ಬೆಲೆ ಹೆಚ್ಚು ಹೆಚ್ಚಿರುವುದರಿಂದ, ಅಂತಹ ಆಸ್ತಿಯ ಮಾರಾಟವನ್ನು ನೋಂದಾಯಿಸಬೇಕು ಎಂದು ಇದು ಪರಿಣಾಮಕಾರಿಯಾಗಿ ಸೂಚಿಸುತ್ತದೆ. ಇದಲ್ಲದೆ, ಸ್ಥಿರ ಆಸ್ತಿಯ ಉಡುಗೊರೆಯನ್ನು ಒಳಗೊಂಡಿರುವ ಎಲ್ಲಾ ವಹಿವಾಟುಗಳು, ಹಾಗೆಯೇ 12 ತಿಂಗಳುಗಳಿಗಿಂತ ಹೆಚ್ಚಿನ ಅವಧಿಗೆ ಗುತ್ತಿಗೆಯನ್ನು ಸಹ ನೋಂದಾಯಿಸಬೇಕಾಗುತ್ತದೆ.
- ಮಾಹಿತಿಯ ಬಹಿರಂಗಪಡಿಸುವಿಕೆ
- ಮಾರಾಟಗಾರರಾಗಿ, ವಹಿವಾಟನ್ನು ಸಂಪೂರ್ಣ ಪ್ರಾಮಾಣಿಕತೆಯೊಂದಿಗೆ ಮತ್ತು ಖರೀದಿದಾರರೊಂದಿಗೆ ಸಂಪೂರ್ಣ ಒಪ್ಪಂದದಲ್ಲಿ ಕೈಗೊಳ್ಳಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಭವಿಷ್ಯದಲ್ಲಿ ವಹಿವಾಟಿನ ಮೇಲೆ ಉದ್ಭವಿಸುವ ಯಾವುದೇ ಸಂಘರ್ಷ ಅಥವಾ ವಿವಾದ ಇರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇದು ಅವಶ್ಯಕವಾಗಿದೆ. ನೀವು ಮಾರಾಟ ಮಾಡಲು ಬಯಸುವ ಭೂಮಿ ಅಥವಾ ಮನೆಯಲ್ಲಿ ಖರೀದಿದಾರರು ಆಸಕ್ತಿಯನ್ನು ತೋರಿಸಿದಾಗ, ಮಾರಾಟಗಾರರಾಗಿ ನೀವು ಹೀಗೆ ಮಾಡಬೇಕು:
- ಆಸ್ತಿಯಲ್ಲಿ ನಿಮಗೆ ತಿಳಿದಿರುವ ಆದರೆ ಖರೀದಿದಾರರಿಗೆ ತಿಳಿದಿಲ್ಲದ ಮತ್ತು ಖರೀದಿದಾರರು ಸಾಮಾನ್ಯವಾಗಿ ಕಂಡುಹಿಡಿಯಲು ಸಾಧ್ಯವಾಗದ ಯಾವುದೇ ವಸ್ತು ದೋಷವನ್ನು, ನೀವು ಖರೀದಿದಾರರಿಗೆ ಬಹಿರಂಗಪಡಿಸಿ.
ಆಸ್ತಿಗೆ ಸಂಬಂಧಿಸಿದ ಹಕ್ಕು ಪತ್ರ ಮತ್ತು ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರೀಕ್ಷೆಗಾಗಿ ಖರೀದಿದಾರರಿಗೆ ಲಭ್ಯವಾಗುವಂತೆ ಮಾಡಿ.
- ನೋಂದಣಿ ಕಾಯಿದೆ, 1908. [↩]
ಯಾರು ಆಸ್ತಿಯನ್ನು ಮಾರಾಟ ಮಾಡಬಹುದು?
ಕಾನೂನಿನ ಅಡಿಯಲ್ಲಿ, ಒಪ್ಪಂದಕ್ಕೆ ಮುಂದಾಗಲು ಸಮರ್ಥರಾಗಿರುವ ಯಾವುದೇ ವ್ಯಕ್ತಿಯು, 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮತ್ತು ಸ್ವಸ್ಥ ಮನಸ್ಸಿನವರು, ಸ್ಥಿರ ಆಸ್ತಿಯನ್ನು ಮಾರಾಟ ಮಾಡಬಹುದು.((ಆಸ್ತಿ ವರ್ಗಾವಣೆ ಕಾಯಿದೆ, 1882 ರ ವಿಭಾಗ 7.)) ಭಾರತದಲ್ಲಿ (NRI)ಅನಿವಾಸಿ ಭಾರತೀಯರು ಮತ್ತು (IPO)ಭಾರತೀಯ ಮೂಲದ ವ್ಯಕ್ತಿಗಳಿಂದ ಆಸ್ತಿ ಮಾರಾಟಕ್ಕೆ ನಿರ್ದಿಷ್ಟ ನಿಯಮಗಳಿವೆ. ಆದಾಗ್ಯೂ, ಆಸ್ತಿಯ ಮಾರಾಟವು ಕಾನೂನುಬದ್ಧವಾಗಿರಲು, ವಿವಿಧ ಅಂಶಗಳು ಪರಿಗಣನೆಗೆ ಬರುತ್ತವೆ, ಅವುಗಳೆಂದರೆ:
- ನೀವು ಮಾರಾಟ ಮಾಡುವ ಹಕ್ಕನ್ನು ಹೊಂದಿದ್ದೀರಾ, ಅಂದರೆ, ನೀವು ಮಾಲೀಕರೆ ಎಂದು ನೋಡುವುದು.
- ಆಸ್ತಿಯನ್ನು ಮಾರಾಟ ಮಾಡಲು ನಿಮಗೆ ಅಧಿಕಾರವಿದೆಯೇ. ಉದಾಹರಣೆಗೆ, ನೀವು ಪವರ್ ಆಫ್ ಅಟಾರ್ನಿ ಹೊಂದಿದ್ದೀರಾ ಅಥವಾ ಮಾರಾಟ ಮಾಡಲು ಮಾಲೀಕರಿಂದ ಅಧಿಕಾರ ಪಡೆದಿದ್ದೀರಾ ಎಂದು ನೋಡುವುದು.