ಸಾಂವಿಧಾನಿಕ ಪರಿಹಾರಗಳು

ಈ ವಿವರಣೆಯು ಲಭ್ಯವಿರುವ ವಿವಿಧ ಸಾಂವಿಧಾನಿಕ ಪರಿಹಾರಗಳು ಅವುಗಳ ಅರ್ಥ ಮತ್ತು ಪ್ರಾಮುಖ್ಯತೆ, ಪರಿಹಾರಕ್ಕಾಗಿ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಪರಿಹಾರಕ್ಕಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಕುರಿತು ಚರ್ಚಿಸುತ್ತದೆ. ಇದು ಪ್ರಮುಖವಾಗಿ ಸಂವಿಧಾನದ ಪರಿಹಾರಗಳನ್ನು ಒದಗಿಸುವ 1950 ರ ಭಾರತದ ಸಂವಿಧಾನದ 32 ಮತ್ತು 226 ನೇ ವಿಧಿಗಳಲ್ಲಿ ರೂಪಿಸಲಾದ ಕಾನೂನಿನೊಂದಿಗೆ ವ್ಯವಹರಿಸುತ್ತದೆ.

ಸಾಂವಿಧಾನಿಕ ಪರಿಹಾರಗಳು ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಬೆಂಬಲಿಸುತ್ತದೆ  ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ  ಜನರು ನೇರವಾಗಿ ಸುಪ್ರೀಂ ಕೋರ್ಟ್ ಅಥವಾ ಭಾರತದ ವಿವಿಧ ಹೈಕೋರ್ಟ್‌ಗಳಿಂದ ಪರಿಹಾರವನ್ನು ಪಡೆಯಬಹುದು ಎಂದು ಖಚಿತಪಡಿಸುತ್ತದೆ.

ರಿಟ್ ಅರ್ಜಿಗಳನ್ನು ಸಲ್ಲಿಸಲು ಪಾವತಿ

ಸರ್ವೋಚ್ಚ ನ್ಯಾಯಾಲಯ

ಹೇಬಿಯಸ್ ಕಾರ್ಪಸ್ ಹೊರತುಪಡಿಸಿ ರಿಟ್ ಅರ್ಜಿಗಳಿಗೆ ನ್ಯಾಯಾಲಯದ ಶುಲ್ಕ ರೂ. 500.1 ಆದಾಗ್ಯೂ, ಕ್ರಿಮಿನಲ್ ಮೊಕದ್ದಮೆಯಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದರೆ, ಅದಕ್ಕೆ ಯಾವುದೇ ನ್ಯಾಯಾಲಯ ಶುಲ್ಕ ಅಗತ್ಯವಿಲ್ಲ.1

ಉಚ್ಚ ನ್ಯಾಯಾಲಯ

ವಿವಿಧ ಉಚ್ಚ ನ್ಯಾಯಾಲಯಗಳಿಗೆ ನ್ಯಾಯಾಲಯ ಶುಲ್ಕ ಬದಲಾಗುತ್ತದೆ. ಪ್ರತ್ಯೇಕ ಉಚ್ಚ ನ್ಯಾಯಾಲಯಗಳಿಗೆ ನ್ಯಾಯಾಲಯ ಶುಲ್ಕದ ಮಾಹಿತಿಯನ್ನು ಸಂಬಂಧಪಟ್ಟ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಕಾಣಬಹುದು.

ಉಚ್ಚ ನ್ಯಾಯಾಲಯ ನ್ಯಾಯಾಲಯದ ಶುಲ್ಕ
ದೆಹಲಿ 2 ರೂ. 100 ( ಹೇಬಿಯಸ್ ಕಾರ್ಪಸ್ ಅರ್ಜಿಗೆ ಶುಲ್ಕ ರೂ. 250 )
ಆಂಧ್ರ ಪ್ರದೇಶ 3 ರೂ. 100 (ಹೇಬಿಯಸ್ ಕಾರ್ಪಸ್ ಅರ್ಜಿಗೆ ಶುಲ್ಕ ರೂ. 2 ).
ಗುವಾಹಟಿ 4  ರೂ. 50
ಪಂಜಾಬ್ ಮತ್ತು ಹರಿಯಾಣ 5  ರೂ. 50
ಪಾಟ್ನಾ 6 ರೂ. 1,000
ಕಲ್ಕತ್ತಾ 7 ರೂ. 100 (ಯಾವುದೇ ಶುಲ್ಕವಿಲ್ಲದ ಹೇಬಿಯಸ್ ಕಾರ್ಪಸ್ ಅರ್ಜಿಗೆ ಯಾವುದೇ ಶುಲ್ಕವಿಲ್ಲ ಹೊರತುಪಡಿಸಿ).
ಬಾಂಬೆ 8  ರೂ. 250
ಚೆನ್ನೈ 9 ರೂ. 200 (ಹೇಬಿಯಸ್ ಕಾರ್ಪಸ್ ಅರ್ಜಿಗೆ ಶುಲ್ಕ ರೂ. 10 ).
ಛತ್ತೀಸ್‌ಗಢ 10 ರೂ. 100
ಅಲಹಾಬಾದ್ 11 ರೂ. 100
ಕರ್ನಾಟಕ 12 ರೂ. 100 (ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೊರತುಪಡಿಸಿ).
ಜಮ್ಮು ಮತ್ತು ಕಾಶ್ಮೀರ
ಒರಿಸ್ಸಾ13 ರೂ. 50
ರಾಜಸ್ಥಾನ 14 ರೂ. 25 (ಹೇಬಿಯಸ್ ಕಾರ್ಪಸ್ ಅರ್ಜಿಗೆ ಶುಲ್ಕ  ರೂ. 2 )
ಮಧ್ಯ ಪ್ರದೇಶ 15 ರೂ. 100
ಕೇರಳ16 ರೂ. 25 (ಹೇಬಿಯಸ್ ಕಾರ್ಪಸ್ ಅರ್ಜಿಗೆ ಶುಲ್ಕ ರೂ. 2).
ಗುಜರಾತ್ 17 ರೂ. 50
ಹಿಮಾಚಲ ಪ್ರದೇಶ 18 ರೂ. 50 (ಹೇಬಿಯಸ್ ಕಾರ್ಪಸ್ ಅರ್ಜಿಗೆ ಶುಲ್ಕ ರೂ. 2.65 ).
ಸಿಕ್ಕಿಂ 19 ರೂ. 250 (ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೊರತುಪಡಿಸಿ).
ಉತ್ತರಾಖಂಡ 13 ರೂ. 50
ಜಾರ್ಖಂಡ್ 13 ರೂ. 50
ತ್ರಿಪುರಾ13  ರೂ. 50
ಮಣಿಪುರ 13 ರೂ. 50
ಮೇಘಾಲಯ 20 ರೂ. 95
ತೆಲಂಗಾಣ 21 ರೂ. 100 (ಹೇಬಿಯಸ್ ಕಾರ್ಪಸ್ ಅರ್ಜಿಗೆ ಶುಲ್ಕ ರೂ. 2 ).

 

ಆನ್‌ಲೈನ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುವುದು ಹೇಗೆ?

1. ಇಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್‌ಗೆ ಹೋಗಿ.
2. ಹೋಮ್ ಮೆನುವಿನ ಕೆಳಗೆ ಇ-ಫೈಲಿಂಗ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
3. ಪುಟದ ಬಲಭಾಗದ ಮೂಲೆಯಲ್ಲಿ, ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದರೆ ‘ಹೊಸ ನೋಂದಣಿ/ ನ್ಯೂ ರಿಜಿಸ್ಟ್ರೇಷನ್(New Registration)’ ಮೇಲೆ ಕ್ಲಿಕ್ ಮಾಡಿ. ನೋಂದಣಿಯನ್ನು ಈಗಾಗಲೇ ಮಾಡಿದ್ದರೆ, ಹಂತ 7 ಸಂಖ್ಯೆಗೆ ಮುಂದುವರಿಯಿರಿ..
4. ‘ಬಳಕೆದಾರರ ಪ್ರಕಾರ/ಯೂಸರ್ ಟೈಪ್(User Type)’ ಎಂದು ಕೇಳಿದಾಗ, ‘ಅರ್ಜಿದಾರರು ಖುದ್ದಾಗಿ/ ಪೆಟಿಶನರ್ ಇನ್ ಪರ್ಸನ್(Petitioner in Person)’ ಅನ್ನು ಆಯ್ಕೆ ಮಾಡಿ, ಆಗ ಒಂದು ಅರ್ಜಿಯು ತೆರೆದುಕೊಳ್ಳುವುದು.
5. ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಪುಟದ ಕೊನೆಯಲ್ಲಿ ‘ನೊಂದಣಿ/ ಸೈನ್ ಅಪ್(Sign Up)’ ಬಟನ್ ಕ್ಲಿಕ್ ಮಾಡಿ.
6. ನೋಂದಣಿಯನ್ನು ಪೂರ್ಣಗೊಳಿಸಿದ ನಂತರ, ಇಲ್ಲಿ ‘ಇ-ಫೈಲಿಂಗ್(E-filing)’ ಪುಟಕ್ಕೆ ಹಿಂತಿರುಗಿ.
7. ‘ಲಾಗಿನ್(Login)’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
9. ಲಾಗಿನ್ ಆದ ನಂತರ, ಒಂದು ಮೆನು ಕಾಣಿಸಿಕೊಳ್ಳುತ್ತದೆ. ‘ಹೊಸ/ ನ್ಯೂ ಇಫೈಲಿಂಗ್(New E-filing)’ ಮೇಲೆ ಕ್ಲಿಕ್ ಮಾಡಿ.
10. ಕೆಳಗಿನ ಪುಟವನ್ನು ಪ್ರದರ್ಶಿಸಲಾಗುತ್ತದೆ. ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ಅರ್ಜಿಯು ಕೆಳ ನ್ಯಾಯಾಲಯದ ಯಾವುದೇ ನಿರ್ಧಾರಕ್ಕೆ ವಿರುದ್ಧವಾಗಿದ್ದರೆ, ನಂತರ ‘ಕೆಳ ನ್ಯಾಯಾಲಯ/ ಲೋಅರ್ ಕೋರ್ಟ್(Lower Court)’ ಬಟನ್ ಕ್ಲಿಕ್ ಮಾಡಿ. ಅಂತೆಯೇ, ಪ್ರತಿ ವರ್ಗದ ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ.
11. ಅರ್ಜಿಯೊಂದಿಗೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬೇಕಾದರೆ, ‘ಇತರೆ ದಾಖಲೆಯೊಂದಿಗೆ ಅರ್ಜಿ/ ಪೆಟಿಶನ್ ವಿಥ್ ಅದರ ಡಾಕ್ಯುಮೆಂಟ್( Petition with Other Document)’ ಕ್ಲಿಕ್ ಮಾಡಿ.

12. ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಮತ್ತು ಪಾವತಿ ಪೂರ್ಣಗೊಂಡ ನಂತರ, ಅರ್ಜಿಯ ಸಂಖ್ಯೆಯನ್ನು ನೀಡಲಾಗುತ್ತದೆ.

 

ರಿಟ್ ಅರ್ಜಿಯನ್ನು ಆಫ್‌ಲೈನ್‌ನಲ್ಲಿ ಸಲ್ಲಿಸುವುದು ಹೇಗೆ?

ರಿಟ್ ಅರ್ಜಿ ಸಲ್ಲಿಸಲು ನಮೂನೆಯನ್ನು ಪಡೆದುಕೊಳ್ಳಿ

ತಮ್ಮ ಮೂಲಭೂತ ಹಕ್ಕನ್ನು ರಕ್ಷಿಸಲು ಬಯಸುವ ವ್ಯಕ್ತಿಯು ಸೂಕ್ತ ನ್ಯಾಯಾಲಯದಲ್ಲಿ ಅಂದರೆ ಸರ್ವೋಚ್ಚ ನ್ಯಾಯಾಲಯ ಅಥವಾ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ನಿರ್ದಿಷ್ಟ ನ್ಯಾಯಾಲಯವು ನೀಡಿರುವ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಸರ್ವೋಚ್ಚ ನ್ಯಾಯಾಲಯದ ರಿಟ್ ಅರ್ಜಿಯ ನಿಗದಿತ ಸ್ವರೂಪವನ್ನು ಇಲ್ಲಿ ಕಾಣಬಹುದು. ಉಚ್ಚ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ, ಪ್ರತಿ ಹೈಕೋರ್ಟ್‌ನಿಂದ ಸೂಚಿಸಲಾದ ವಿವಿಧ ನಮೂನೆಗಳನ್ನು ಸಂಬಂಧಿಸಿದ ಹೈಕೋರ್ಟ್‌ನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪಡೆಯಸಬಹುದು.

ಅರ್ಜಿಯ ಕರಡು

ಸೂಕ್ತ ನ್ಯಾಯಾಲಯಕ್ಕೆ ನಿಗದಿತ ನಮೂನೆಯನ್ನು ಪಡೆದ ನಂತರ, ಈ ಕೆಳಗಿನ ಮಾಹಿತಿಯನ್ನು ಅರ್ಜಿ 1 ರಲ್ಲಿ ನಮೂದಿಸಬೇಕು:

  • ಅರ್ಜಿಯನ್ನು ಸಲ್ಲಿಸುವ ವ್ಯಕ್ತಿಯ ಹೆಸರು ಮತ್ತು ವಿವರ.
  • ಅರ್ಜಿಯನ್ನು ಯಾರ ವಿರುದ್ಧ ಸಲ್ಲಿಸುತ್ತಿದ್ದೀರ , ಅಂತಹ ವ್ಯಕ್ತಿ/ಸಂಸ್ಥೆಯ ಹೆಸರು ಮತ್ತು ವಿವರ.
  • ನೊಂದ ವ್ಯಕ್ತಿಗೆ ಉಲ್ಲಂಘನೆಯಾದ ಮೂಲಭೂತ ಹಕ್ಕು
  • ನೊಂದ ವ್ಯಕ್ತಿ ಕೇಳುವ ಪರಿಹಾರ.
  • ಪರಿಹಾರವನ್ನು ಕೇಳುವ ಕಾರಣಗಳು.
  • (ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುತ್ತಿದ್ದರೆ) ಈ ವಿಷಯದ ಮೇಲೆ  ಈಗಾಗಲೇ ಯಾವುದೇ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆಯೇ ಮತ್ತು ಹೌದು ಎಂದಾದರೆ, ಉಚ್ಚ ನ್ಯಾಯಾಲಯದಿಂದ ಜಾರಿಗೊಳಿಸಿದ ಆದೇಶದ ವಿವರ.
  • ನಿಮಗೆ ಅನ್ವಯಿಸಿದರೆ ದಾಖಲೆಗಳನ್ನು ಲಗತ್ತಿಸಿ.1
  • ಅರ್ಜಿಯು ಕೆಳ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದ್ದರೆ, ಅಂತಹ ಆದೇಶದ ಮೂಲ ಅಥವಾ ಪ್ರಮಾಣೀಕೃತ ಪ್ರತಿಯನ್ನು ಅರ್ಜಿಗೆ ಲಗತ್ತಿಸಬೇಕು.
  • ಅರ್ಜಿ ಸಲ್ಲಿಸಲು ಕಾರಣವಾದ ಸತ್ಯಾಂಶಗಳ ಅಫಿಡವಿಟ್.
  • ಯಾವುದೇ ಇತರ ಅಗತ್ಯ ದಾಖಲೆಗಳು.

ಯಾವುದೇ ದಾಖಲೆಯು ಅರ್ಜಿದಾರರ ಭೌತಿಕ ಸ್ವಾಧೀನದಲ್ಲಿಲ್ಲದಿದ್ದರೆ, ಅಂತಹ ದಾಖಲೆಗಳ ಪಟ್ಟಿಯನ್ನು ಅರ್ಜಿಗೆ ಲಗತ್ತಿಸಬೇಕು.

ಮನವಿ ಸಲ್ಲಿಸಿ

ಅರ್ಜಿಯನ್ನು ಸಂಪೂರ್ಣವಾಗಿ ರಚಿಸಿದ ನಂತರ, ಅರ್ಜಿದಾರರ ಆದ್ಯತೆಯ ಪ್ರಕಾರ ಅದನ್ನು ಸುಪ್ರೀಂ ಕೋರ್ಟ್ 2 ಅಥವಾ ಸಂಬಂಧಪಟ್ಟ ಹೈಕೋರ್ಟ್ 3 ರ ಫೈಲಿಂಗ್ ಕೌಂಟರ್‌ನಲ್ಲಿ ಸಲ್ಲಿಸಬೇಕು.