ನಿಮ್ಮ ಗಂಡನಿಗೆ ನಿಮಿರು ದೌರ್ಬಲ್ಯವಿದ್ದಲ್ಲಿ, ಅಥವಾ ಅವರಿಗೆ ಈ ಸಮಸ್ಯೆಯಿದೆ ಎಂದು ನಿಮಗೆ ಮದುವೆಯಾದಾಗಿನಿಂದಲೂ ಕೂಡ ಗೊತ್ತಿದ್ದಲ್ಲಿ, ಮುಸ್ಲಿಂ ಕಾನೂನಿನಡಿ ನೀವು ವಿಚ್ಛೇದನ ಪಡೆಯಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಗಂಡ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬಹುದು:
- ಅವರ ನಿಮಿರು ದೌರ್ಬಲ್ಯವನ್ನು ಕೋರ್ಟಿನ ಮುಂದೆ ಒಪ್ಪಿಕೊಳ್ಳುವುದು
- ನಿಮಿರು ದೌರ್ಬಲ್ಯದ ಆರೋಪವನ್ನು ನಿರಾಕರಿಸಿ, ಅವರಿಗೆ ಯಾವುದೇ ತರಹದ ದೈಹಿಕ ಶಕ್ತಿಹೀನತೆ ಇಲ್ಲ ಎಂದು ವಾದಿಸುವುದು
- ವೈದ್ಯಕೀಯವಾಗಿ ಅವರ ಸಮಸ್ಯೆಯನ್ನು ಗುಣಪಡಿಸಲು ಒಂದು ವರ್ಷದ ಸಮಯವನ್ನು ಕೋರ್ಟಿಗೆ ಅರ್ಜಿ ಸಲ್ಲಿಸಿ ಪಡೆಯಬಹುದು. ಒಂದು ವರ್ಷದ ನಂತರ ಅವರ ನಿಮಿರು ದೌರ್ಬಲ್ಯ ವಾಸಿಯಾಗಿದ್ದಲ್ಲಿ, ನಿಮಗೆ ವಿಚ್ಛೇದನ ಸಿಗುವುದಿಲ್ಲ.