ಮತದಾನ ಕೇಂದ್ರ (polling station) ವನ್ನು ನೀವು ಹೇಗೆ ಕಂಡುಹಿಡಿಯುತ್ತೀರಿ?

ಕೊನೆಯ ಅಪ್ಡೇಟ್ Apr 1, 2024

ಮತ ಚಲಾಯಿಸಲು ನಿಮ್ಮ ಮತದಾನ ಕೇಂದ್ರವನ್ನು ಕಂಡುಹಿಡಿಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಮತದಾನ ಕೇಂದ್ರ
ನೀವು ಮತದಾರರ ಗುರುತಿನ ಚೀಟಿ ಹೊಂದಿರುವ ನೋಂದಾಯಿತ ಮತದಾರರಾಗಿದ್ದರೆ, ನಿಮ್ಮ ಕ್ಷೇತ್ರದ ಮತದಾನದ ದಿನದಂದು ನೀವು ಮತದಾನ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.

ಮತದಾನದ ಪ್ರದೇಶದ ಮತದಾರರು ಮತ ಚಲಾಯಿಸುವ ಕಟ್ಟಡ ಅಥವಾ ಸಭಾಂಗಣದಲ್ಲಿ ಮತದಾನ ಕೇಂದ್ರವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ಮತದಾನ ಕೇಂದ್ರಗಳನ್ನು ಶಾಲೆಗಳು, ಸರ್ಕಾರಿ ಕಟ್ಟಡಗಳು ಮುಂತಾದ ಶಾಶ್ವತ ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತದೆ, ಆದರೆ ಸ್ಥಳಾವಕಾಶ ಲಭ್ಯವಿಲ್ಲದಿದ್ದರೆ ಅವುಗಳನ್ನು ಖಾಸಗಿ ಕಟ್ಟಡಗಳು ಅಥವಾ ಮತದಾನ ಪ್ರದೇಶದ ಹೊರಗಿನ ಕಟ್ಟಡಗಳಲ್ಲಿ ಸ್ಥಾಪಿಸಬಹುದು.

ನಿಮ್ಮ ಮತದಾನ ಕೇಂದ್ರವನ್ನು ಹುಡುಕುವುದು
ರಾಷ್ಟ್ರೀಯ ಮತದಾರರ ಸೇವೆಗಳ ಪೋರ್ಟಲ್‌ (NVSP) ಗೆ ಭೇಟಿ ನೀಡುವ ಮೂಲಕ ನಿಮ್ಮ ಮತಗಟ್ಟೆ ಎಲ್ಲಿದೆ ಎಂಬುದನ್ನು ನೀವು ಕಂಡುಹಿಡಿಯಬಹುದು.

ಮತದಾನ ಕೇಂದ್ರವು ಸಾಮಾನ್ಯವಾಗಿ ನಿಮ್ಮ ವಾಸಸ್ಥಳದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುತ್ತದೆ. ಗುಡ್ಡಗಾಡು ಪ್ರದೇಶಗಳಲ್ಲಿ ಅಥವಾ ಅರಣ್ಯ ಪ್ರದೇಶಗಳಲ್ಲಿ ಮಾತ್ರ ಇದನ್ನು ಮತ್ತಷ್ಟು ದೂರದಲ್ಲಿ ಸ್ಥಾಪಿಸಬಹುದು.

 

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.