ಬಾಲ ಕಾರ್ಮಿಕ ಪದ್ಧತಿ ಆಚರಣೆಯಲ್ಲಿಲ್ಲ ಮತ್ತು ಕಾನೂನಿನ ನಿಬಂಧನೆಗಳ ಪಾಲನೆ ಆಗುತ್ತಿದೆ ಎಂಬುದನ್ನು ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ಈ ಕರ್ತವ್ಯಗಳನ್ನು ಸಾಕಾರಗೊಳಿಸುವುದಕ್ಕಾಗಿ, ಸರ್ಕಾರ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ:
- ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವುದು
- ಅರಿವು ಮೂಡಿಸುವುದಕ್ಕಾಗಿ ಮಾಧ್ಯಮ ವರ್ಗದ ಉಪಯೋಗ ಮಾಡುವುದು
- ಬಾಲ ಕಾರ್ಮಿಕ ಪದ್ಧತಿಯ ಬಗ್ಗೆ ವರದಿ ನೀಡುವುದನ್ನು ಪ್ರೋತ್ಸಾಹ ಮಾಡುವುದು
- ಬಾಲ ಕಾರ್ಮಿಕ ಪದ್ಧತಿಯ ಕಾನೂನನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು
- ಶಾಲಾ ಪಠ್ಯಕ್ರಮಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ಕಾನೂನನ್ನು ಅಳವಡಿಸುವುದು
- ಬಾಲ ಕಾರ್ಮಿಕ ಪದ್ಧತಿ ಕಾನೂನು ಮತ್ತು ಅದರ ಉಪಯುಕ್ತತೆಯ ಬಗ್ಗೆ ಪೊಲೀಸ್, ನ್ಯಾಯಿಕ ಸೇವಾ ಅಕಾಡೆಮಿಗಳು, ಶಿಕ್ಷಕರು, ಮತ್ತು ಕೇಂದ್ರೀಯ ಕಾರ್ಮಿಕ ಸೇವೆ – ಇವರಿಗೆ ತರಬೇತಿ ನೀಡುವುದು