ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳನ್ನು ಕೆಲಸಕ್ಕಿಟ್ಟುಕೊಂಡಾಗ ಪಾಲಿಸಬೇಕಾದ ನಿಯಮಗಳು (ಅವರು ಕೌಟುಂಬಿಕ ಉದ್ಯಮ ಅಥವಾ ಸರ್ಕಾರದ ಬಂಡವಾಳ/ಮಾನ್ಯತೆ ಪಡೆದ ಶಾಲೆಗಳಲ್ಲಿ ಕೆಲಸ ಮಾಡುವುದನ್ನು ಹೊರತುಪಡಿಸಿ):
ಒಂದು ದಿನದಲ್ಲಿ ಒಬ್ಬ ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗೆ:
- ನಿರಂತರವಾಗಿ ಕೇವಲ ೩ ಗಂಟೆಗಳ ಕಾಲ ಕೆಲಸ ಮಾತ್ರ ಮಾಡಿಸಬಹುದು
- ೧ ಗಂಟೆಯ ವಿರಾಮದ ಹಕ್ಕಿದೆ
- ೬ ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ (ಅವರ ವಿರಾಮ ಮತ್ತು ಕೆಲಸಕ್ಕೆ ಕಾಯುವ ಅವಧಿಯನ್ನು ಸೇರಿದಂತೆ)
- ಸಂಜೆ ೭ ಗಂಟೆಯಿಂದ ಬೆಳಿಗ್ಗೆ ೮ ಗಂಟೆಯವರೆಗೆ ಕೆಲಸ ಕೊಡುವಂತಿಲ್ಲ
- ಸಾಮಾನ್ಯ ಕೆಲಸದ ಗಂಟೆಗಳಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿಸುವಂತಿಲ್ಲ.
- ಒಬ್ಬರಿಗಿಂತ ಹೆಚ್ಚು ಉದ್ಯೋಗದಾತರ ಕೆಳಗೆ ಕೆಲಸ ಮಾಡಿಸುವಂತಿಲ್ಲ
ಇದಾಗ್ಯೂ, ಪ್ರತಿ ವಾರ ಒಂದು ದಿನ ವಾರದ ರಜೆ ಕೊಡತಕ್ಕದ್ದು!
ಈ ದಿನವನ್ನು ಕೆಲಸದ ಸ್ಥಳದಲ್ಲಿ ಸೂಚನೆಯ ಮೂಲಕ ಉದ್ಯೋಗದಾತರು ನಿರ್ದಿಷ್ಟಪಡಿಸಬೇಕು. ಈ ನಿರ್ದಿಷ್ಟಪಡಿಸಿದ ರಾಜಾ ದಿನವನ್ನು ಉದ್ಯೋಗದಾತರು ಪ್ರತಿ ೩ ತಿಂಗಳಿಗೊಮ್ಮೆ ಕೇವಲ ಒಮ್ಮೆ ಬದಲಿಸಬಹುದು.
ಉದ್ಯೋಗದಾತರಾಗಿ ನೀವು ಕೆಲಸದ ಗಂಟೆಗಳು ಮತ್ತು ದಿನಗಳ ಸಂಬಂಧಿತ ಕಾನೂನನ್ನು ಉಲ್ಲಂಘಿಸಿದರೆ ಗರಿಷ್ಟ ೧ ತಿಂಗಳ ಸೆರೆಮನೆ ವಾಸ ಮತ್ತು/ಅಥವಾ ೧೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸಲಾಗುವುದು.