
ಹಿರಿಯ ನಾಗರೀಕರು
- Legal Explainers (8)
ಮಕ್ಕಳು ತಂದೆ-ತಾಯಂದಿರನ್ನು ನೋಡಿಕೊಳ್ಳುವುದು
ಭಾರತೀಯ ಕಾನೂನಿನ ಪ್ರಕಾರ ಎಲ್ಲ ವ್ಯಕ್ತಿಗಳು ತಮ್ಮ ತಂದೆ-ತಾಯಂದಿರನ್ನು ನೋಡಿಕೊಳ್ಳಬೇಕು ಮತ್ತು ಅವರ ಆಸರೆಯಾಗಬೇಕು ಎಂದಿದೆ.


ಹಿರಿಯ ನಾಗರಿಕರನ್ನು ತ್ಯಜಿಸಿದರೆ ಅಥವಾ ನಿರ್ಲಕ್ಷಿಸಿದರೆ ಶಿಕ್ಷೆ
ನೀವು ಒಬ್ಬ ಹಿರಿಯ ನಾಗರಿಕರನ್ನು ಯಾವುದೇ ಜಾಗದಲ್ಲಿ ಅವರನ್ನು ತ್ಯಜಿಸುವುದಕ್ಕಾಗಲಿ ಅಥವಾ ಅವರ ಕಾಳಜಿ ತೆಗೆದುಕೊಳ್ಳಬಾರದು ಎಂಬ ಉದ್ದೇಶದಿಂದ ಬಿಟ್ಟು ಹೋದಲ್ಲಿ, ನಿಮಗೆ ೩ ತಿಂಗಳ ಸೆರೆಮನೆ ವಾಸ ಮತ್ತು/ಅಥವಾ ೫೦೦೦ ರೂಪಾಯಿಗಳ ದಂಡ ವಿಧಿಸಲಾಗುವುದು.


ಜೀವನಾಂಶದ ಮೊತ್ತ
ತಂದೆ-ತಾಯಿಗೆ ಕೊಡಬೇಕಾದ ಜೀವನಾಂಶದ ಮೊತ್ತ ಎಲ್ಲರಿಗೂ ಸಮನಾಗಿರುವಂತೆ ಕಾನೂನು ನಿಗದಿಪಡಿಸಿಲ್ಲ. ಆಯಾ ಪ್ರಕರಣಗಳ ಸಂದರ್ಭಾನುಸಾರ ಈ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಈ ಕೆಳಗಿನ ಅಂಶಗಳ ಮೇಲೆ ನ್ಯಾಯಾಲಯವು ಜೀವನಾಂಶದ ಮೊತ್ತವನ್ನು ನಿಗದಿಪಡಿಸುತ್ತದೆ:


ಹಿಂದೂ ಕಾನೂನಿನಡಿ ಜೀವನಾಂಶ
ಹಿಂದೂ ದತ್ತು ಮತ್ತು ಜೀವನಾಂಶ ಕಾಯಿದೆಯಡಿ ಯಾವುದೇ ಹಿಂದೂ, ಬೌಧ್ಧ, ಜೈನ, ಅಥವಾ ಸಿಖ್ ಧರ್ಮಕ್ಕೆ ಸೇರಿದ, ವಯಸ್ಸಾದ/ಅಶಕ್ತ, ಜೈವಿಕ ಅಥವಾ ದತ್ತು ತಂದೆ-ತಾಯಂದಿರು, ಅವರ ಗಳಿಕೆ ಮತ್ತು ಆಸ್ತಿಯಿಂದ ಜೀವನ ನಡೆಸಲು ಅಸಾಧ್ಯವಾದಾಗ ತಮ್ಮ ವಯಸ್ಕ ಮಕ್ಕಳಿಂದ ಜೀವನಾಂಶ ಪಡೆಯಬಹುದು.


ದಂಡ ಪ್ರಕ್ರಿಯಾ ಸಂಹಿತೆಯಡಿ ಜೀವನಾಂಶ
ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ ೧೨೫ರ ಪ್ರಕಾರ ಸಾಕಾದಷ್ಟು ಸಂಪನ್ಮೂಲವಿರುವ ಯಾವುದೇ ವ್ಯಕ್ತಿಯು ತನ್ನ ಅವಲಂಬಿತ ತಂದೆ-ತಾಯಿಯನ್ನು ನಿರ್ಲಕ್ಷಿಸಿದರೆ, ಅಥವಾ ಅವರ ಪೋಷಣೆ ಮಾಡಲು ನಿರಾಕರಿಸಿದರೆ, ಪ್ರಥಮ ಶ್ರೇಣಿಯ ಹಿರಿಯ ನ್ಯಾಯಾಧೀಶರು ಅವರಿಗೆ ಜೀವನಾಂಶದ ರೂಪದಲ್ಲಿ ಮಾಸಿಕ ಭತ್ಯೆ ಕೊಡಬೇಕೆಂದು ಆದೇಶಿಸಬಹುದು.

